ಉಪದೇಶ ರತ್ನಮಾಲೈ – ಸರಳ ವಿವರಣೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಇತರ ಪ್ರಬಂದಗಳು

ಪಿಳ್ಳೈ ಲೋಕಾಚಾರ್ಯರು ಮತ್ತು ಮಣವಾಳ ಮಾಮುನಿಗಳು ( ಶ್ರೀಪೆರುಂಬುದೂರು)

ಉಪದೇಶ ರತ್ನಮಾಲೈ ಪರಮ ಕಾರುಣಿಕರಾದ , ವಿಶಧವಾಕ್ ಶಿಖಾಮಣಿ (ಪ್ರಕಾಶಮಾನವಾದ ಮಾತುಗಳನ್ನು ಆಡುವವರು ಮತ್ತು ಕಿರೀಟದಲ್ಲಿರುವ ಆಭರಣದಂತೆ ಇರುವವರು ) ನಮ್ಮ ಮಣವಾಳ ಮಾಮುನಿಗಳು ರಚಿಸಿದ ಸುಂದರವಾದ ತಮಿಳು ಪ್ರಬಂಧವು.ಇದು ಪಿಳ್ಳೈ ಲೋಕಾಚಾರ್ಯರು( ನಮ್ಮ ಒಬ್ಬ ಪೂರ್ವಾಚಾರ್ಯರು ) ರಚಿಸಿದ ದೈವೀಕ ರಚನೆಯಾದ ಶ್ರೀ ವಚನ ಭೂಷಣದ ಸಾರಾಂಶವನ್ನು ವಿವರಿಸುವ ಕೃತಿ . ಶ್ರೀ ವಚನ ಭೂಷಣದ ಸಾರಾಂಶ, ಆಚಾರ್ಯ ಅಭಿಮಾನವೇ ಉದ್ಧಾರಕ ( ಆಚಾರ್ಯರು (ಗುರು) ತೋರುವ ವಾತ್ಸಲ್ಯಯವೇ ಶಿಷ್ಯರನ್ನು ಉನ್ನತಿಗೊಳಿಸುವುದು ). ಒಬ್ಬ ಶಿಷ್ಯನು ಆಚಾರ್ಯರ ಬಳಿಗೆ ಬಂದಾಗ ,ಅವರು ಅವನ ಮೇಲೆ ತೋರುವ ಕರುಣೆಯೇ ಅವನನ್ನು ಉನ್ನತಿಗೊಳಿಸುವುದು. ಇದನ್ನು ನಮ್ಮ ಪೂರ್ವಾಚಾರ್ಯರು ತೋರಿದ ಬಹು ಸರಳ ಹಾಗೂ ಅತ್ಯಂತ ಶ್ರೇಷ್ಠವಾದ ರೀತಿ ಎಂದು ಆಚರಿಸಲಾಗಿದೆ .
ಜೀವನಂ ಎಂಬ ಪದದ ಅರ್ಥ ಭೌತಿಕ ರೂಪವನ್ನು (ದೇಹವನ್ನು ) ಪೋಷಿಸಿ ರಕ್ಷಿಸುವ ಬಗ್ಗೆ ಸೂಚಿಸುತ್ತದೆ. ಉಜ್ಜೀವನಂ ಎಂಬುದು ಆತ್ಮದ ಮಾರ್ಗಕ್ಕೆ ಸೂಕ್ತವಾಗಿರುವುದು . ಆತ್ಮ ಸ್ವರೂಪಕ್ಕೆ ಸೂಕ್ತವಾದ ಅಂತಿಮ ಲಾಭವೆಂದರೆ ಪರಮಪದದಲ್ಲಿರುವ ಎಂಪೆರುಮಾನರನ್ನು (ಸರ್ವೋತ್ತಮವಾದ ಅಸ್ತಿತ್ವ )ಅಡೆದು, ಅವರನ್ನು ಅನುಚರಿಸುವರೊಂದಿಗೆ ಅವರಿಗೆ ಸೇವೆ ಸಲ್ಲಿಸುವುದು.
ಒಂದು ಗ್ರಂಥದ ಒಳ ಅರ್ಥಗಳನ್ನು ವಿವರಿಸುವಾಗ ,ಅದರ ಸಂಬಂಧಿತ ವಿಷಯಗಳನ್ನು ವಿವರಿಸುವುದು ಸಹಜ. ಅದೇ ರೀತಿ ಮಾಮುನಿಗಳು
೧ ) ಅವರ ಆಚಾರ್ಯರಿಗೆ (ತಿರುವಾಯ್ಮೊೞಿಪಿಳ್ಳೈ )ನಮಸ್ಕಾರಗಳನ್ನು ಅರ್ಪಿಸುತ್ತಾರೆ
೨ ) ಆೞ್ವಾರುಗಳ ಕಾಲಾನುಕ್ರಮ ಅವತಾರಗಳು ಮತ್ತು ಅವರು ಅವತರಿಸಿದ ಸ್ಥಳದ ಬಗ್ಗೆ ತಿಳಿಸುವರು
೩ ) ಆೞ್ವಾರುಗಳು ತೋರಿದ ಮಾರ್ಗದಲ್ಲಿ ಬಂದಂತಹ ಆಚಾರ್ಯರ ಪರಿಚಯ ನೀಡುತ್ತಾರೆ.
೪ ) ಜಗತ್ ಕಲ್ಯಾಣ್ಯಕ್ಕಾಗಿ ಆಚಾರ್ಯರ ನಡುವೆ ನಾಯಕರಾಗಿ ಅವತರಿಸಿದ ರಾಮಾನುಜರ ಮಹತ್ವವನ್ನು ವಿವರಿಸುವರು
೫ ) ನಂಪೆರುಮಾಳರು ( ಶ್ರೀರಂಗದಲ್ಲಿ ಉತ್ಸವ ಮೂರ್ತಿ ) ರಾಮಾನುಜರನ್ನು ಮೆಚ್ಚಿಕೊಂಡಾಡಬೇಕೆಂದು ಈ ಸಂಪ್ರದಾಯಕ್ಕೆ ( ಸಾಂಪ್ರದಾಯಿಕ ನಂಬಿಕೆಯ ವ್ಯವಸ್ತೆ) ಎಂಪೆರುಮಾನಾರ್ ದರ್ಶನಂ ಎಂದು ಹೆಸರಿಟ್ಟ ನಂಪೆರುಮಾಳರ ವೈಭವವನ್ನು ವಿವರಿಸುವರು
೬ ) ನಮ್ಮ ಸಂಪ್ರದಾಯದ ಆಧಾರವಾದ ತಿರುವಾಯ್ಮೊೞಿಯ( ಕರುಣಾಮಯಿ ನಮ್ಮಾೞ್ವಾರರು ರಚಿಸಿದ ದೈವೀಕ ರಚನೆ ) ವ್ಯಾಖ್ಯಾನಗಳ ಪಟ್ಟಿ ಮಾಡಿರುವರು
೭ ) ನಂಪಿಳ್ಳೈ (ನಮ್ಮ ಪೂರ್ವಾಚಾರ್ಯರಲ್ಲಿ ಒಬ್ಬರು) ವೈಭವವನ್ನು ತಿಳಿಸುವರು
೮ )ವಡಕ್ಕು ತಿರುವೀದಿಪಿಳ್ಳೈಯವರ ದೈವೀಕ ಮಗನಾದ ಪಿಳ್ಳೈ ಲೋಕಾಚಾರ್ಯರು ಕರುಣೆಯಿಂದ ರಚಿಸಿದ ಶ್ರೀ ವಚನಭೂಷಣ ದ ವೈಭವ ಹಾಗೂ ಅದನ್ನು ಅನುಸರಿಸಿದವರ ವೈಭವಗಳನ್ನು ವಿವರಿಸುವರು
೯) ಕಡೆಯದಾಗಿ, ಪ್ರತಿದಿನ ನಮ್ಮ ಪೂರ್ವಾಚಾರ್ಯರ ಜ್ಞಾನ ಮತ್ತು ಅನುಷ್ಟಾನಗಳನ್ನು ( ವೇದಗಳನ್ನು ಅನುಸರಿಸುವ ಚಟುವಟಿಕೆಗಳು )ಸ್ಮರಿಸಬೇಕು ಎಂದು ವಿವರಿಸುತ್ತಾ ಈ ರೀತಿ ಬದುಕುವವರು ಜಗತ್ ಕಲ್ಯಾಣಕ್ಕಾಗಿ ಅವತರಿಸಿದ ಮಹಾ ಯೋಗಿಯಾದ ಎಂಪೆರುಮಾನರ ಪರಮ ಕೃಪೆಗೆ ಅರ್ಹರಾಗುವರು ಎಂದು ವಿವರಿಸುತ್ತಾ ಈ ಪ್ರಬಂಧವನ್ನು ಪೂರ್ತಿಗೊಳಿಸುವರು .
ಈ ಪ್ರಬಂಧದ ಕೊನೆಯಲ್ಲಿ ಎರುಂಬಿಯಪ್ಪ (ಮಾಮುನಿಗಳ ಶಿಷ್ಯ) ರಚಿಸಿದ ಒಂದು ಪಾಸುರವನ್ನು ಮಿಕ್ಕ ಪಾಸುರಗಳೊಂದಿಗೆ ಪಠಿಸಲಾಗಿದೆ. ಈ ಪಾಸುರದಲ್ಲಿ , ಮಾಮುನಿಗಳ ದಿವ್ಯ ಪಾದ ಸಂಬಂಧ ಪಡೆದವರನ್ನು ಖಂಡಿತವಾಗಿ ಎಂಪೆರುಮಾನರು ಸ್ವೀಕರಿಸುವರು ,ಎಂದು ಎರುಂಬಿಯಪ್ಪ ಹೇಳುತ್ತಾರೆ.
ಪಿಳ್ಳೈ ಲೋಕಮ್ ಜೀಯರ್ ಅವರ ವ್ಯಾಖ್ಯಾನವನ್ನು ಅನುಸರಿಸಿ ಈ ಅದ್ಭುತವಾದ ಪ್ರಬಂದವನ್ನು ವಿವರಿಸಲು ಇದೊಂದು ಪ್ರಯತ್ನ.

ಮೂಲ : http://divyaprabandham.koyil.org/index.php/2020/06/upadhesa-raththina-malai-simple/

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Reply

Your email address will not be published. Required fields are marked *