ಉಪದೇಶ ರತ್ನಮಾಲೈ – ಸರಳ ವಿವರಣೆ ೧೦ ರಿಂದ ೧೧ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೧೦
ರೋಹಿಣಿ ನಕ್ಷತ್ರವು ಕೃತ್ತಿಕಾ ನಕ್ಷತ್ರದ ನಂತರ ಬರುವುದರಿಂದ , ಮಾಮುನಿಗಳು ಈ ಲೋಕದ ಜನರಿಗೆ ಕಾರ್ತಿಕ ಮಾಸದ ರೋಹಿಣಿ ನಕ್ಷತ್ರದಂದು ಅವತರಿಸಿದ ತಿರುಪಪ್ಪಾನಾೞ್ವಾರರ ಶ್ರೇಷ್ಠತೆಯನ್ನು ತಿಳಿಸುತ್ತಾರೆ.ರೋಹಿಣಿ ನಕ್ಷತ್ರದಲ್ಲಿ ಎಂಪೆರುಮಾನರು ಕಣ್ಣನಾಗಿ (ಕೃಷ್ಣ) ಅವತಾರಿಸಿದ್ದಾರೆ, ಆೞ್ವಾರರಲ್ಲಿ ತಿರುಪಪ್ಪಾನಾೞ್ವಾರರಾಗಿ,ಆಚಾರ್ಯರಲ್ಲಿ ತಿರುಕೋಟ್ಟಿಯೂರ್ ನಂಬಿಯಾಗಿ ಅವತರಿಸಿರುತ್ತಾರೆ.ಆದ್ದರಿಂದ ಈ ನಕ್ಷತ್ರಕ್ಕೆ ಮೂರರಷ್ಟು ಮಹತ್ವ ನೀಡಿ ಕಂಡಾಡುವರು.

ಕಾರ್ತಿಗೈಯಿಲ್ ರೋಹಿಣಿ ನಾಳ್ ಕಾಣ್ಮಿನ್ ಇನ್ಱು ಕಾಸಿಯಿನೀರ್
ವಾಯ್ತ್ತ ಪುಗೞ್ ಪಾಣರ್ ವಂದುದಿಪ್ಪಾಲ್ ಆತ್ತಿಯರ್ಗಳ್
ಅಂಬುಡನೆ ತಾನ್ ಅಮಲನಾದಿಪಿರಾನ್ ಕಱ್ಱದಱ್ಪಿನ್
ನಂಗುಡನೇ ಕೊಂಡಾಡುಂ ನಾಳ್

ಓ ಲೋಕದ ಮಕ್ಕಳೇ ! ನೋಡಿ ಇಂದು ಕಾರ್ತಿಕ ಮಾಸದ ರೋಹಿಣಿ ನಕ್ಷತ್ರದ ಮಹಾದಿನ . ಈ ದಿನದಂದು ಉನ್ನತವಾದ ಅದ್ಭುತವಾದ ತಿರುಪಪ್ಪಾನಾೞ್ವಾರರು ಅವತರಿಸಿದ ದಿನ. ವೇದಗಳನ್ನು ನಂಬಿ ಆದರಿಸುವವರು , ಈ ಆೞ್ವಾರರು ಅನುಗ್ರಹಿಸಿದ ಅಮಲನಾದಿಪಿರಾನ್ ಎಂಬ ಪ್ರಬಂದವನ್ನು ಕಲಿತು ,ಈ ಹತ್ತು ಪಾಸುರಗಳು ವೇದಗಳ ಸಾರಾಂಶ,ಸದಾ ಎಂಪೆರುಮಾನರನ್ನು ನೋಡುವುದು ಎಂದು ಸುಂದರವಾಗಿ ವಿವರಿಸುವುದೆಂದು ತಿಳಿದುಕೊಂಡಿರುತ್ತಾರೆ . ಅಂಥವರು ಈ ದಿನವನ್ನು ವಿಶೇಷವಾಗಿ ಕೊಂಡಾಡುವರು .

ಪಾಸುರ ೧೧
ಲೋಕದ ಜನರಿಗೆ ಮಾರ್ಗಶಿರ ಮಾಸದಲ್ಲಿ ಅವತರಿಸಿದ ವೇದಾರ್ಥಗಳನ್ನು ಅರಿತ ತೊಂಡರಡಿಪ್ಪೊಡಿ ಆೞ್ವಾರರ ಶ್ರೇಷ್ಟತೆಯನ್ನು ವೇದ ನಿಪುಣರು ಕೊಂಡಾಡುವುದರ ಬಗ್ಗೆ ವಿವರಿಸುತ್ತಾರೆ .
ಹನ್ನೆರಡು ಮಾಸಗಳಲ್ಲಿ ತಾನು ಮಾರ್ಗಶಿರ ಎಂದು ಎಂಪೆರುಮಾನರು ಶ್ರೀ ಗೀತೆ (ಭಗವದ್ಗೀತೆ)ಯಲ್ಲಿ ಹೇಳಿರುವುದೇ ಈ ಮಾಸದ ವೈಶಿಷ್ಟಯತೆ . ಅದಲ್ಲದೆ , ಈ ಮಾಸದಲ್ಲಲ್ಲವೇ ಆಂಡಾಳ್ ದಯೆತೋರಿ ತಿರುಪ್ಪಾವೈ ಹಾಡಿದ್ದು. ಮಾರ್ಗಶಿರ ಮಾಸದ ಜ್ಯೇಷ್ಟಾ ನಕ್ಷತ್ರಕ್ಕೆ ಮತ್ತೊಂದು ಖ್ಯಾತಿ ಇದೆ. ಅದು ಜಗದ್ಗುರು ಎಂಪೆರುಮಾನಾರ್ ಅವರ ಆಚಾರ್ಯರಾದ ಪೆರಿಯ ನಂಬಿಗಳು ಅವತರಿಸಿದ ನಕ್ಷತ್ರ.

ಮನ್ನಿಯಸೀರ್ ಮಾರ್ಗೞಿಯಿಲ್ ಕೇಟ್ಟೈ ಇನ್ಱು ಮಾನಿಲತ್ತೀರ್
ಎನ್ನಿದನುಕ್ಕು ಏಱಮ್ ಎನಿಲ್ ಉರೈಕ್ಕೇನ್ – ತುನ್ನು ಪುಗೞ್
ಮಾಮಱೈಯೊನ್ ತೊಂಡರಡಿಪ್ಪೊಡಿ ಆೞ್ವಾರ್ ಪಿಱಪ್ಪಾಲ್
ನಾನ್ಮಱೈಯೋರ್ ಕೊಂಡಾಡುಮ್ ನಾಳ್

ಓ ಜಗತ್ತಿನ ಮಕ್ಕಳೇ ! ವೈಶ್ಣವ ಮಾಸ ಎಂದು ಭಾವಿಸುವ ಮಾರ್ಗಶಿರ ಮಾಸದ ಜ್ಯೇಷ್ಟಾ ನಕ್ಷತ್ರದ ಮಹತ್ವವನ್ನು ಹೇಳುತ್ತೇನೆ . ಈ ದಿನದಂದು ಎಂಪೆರುಮಾನರ ಶಿಷ್ಯರ ದಾಸ್ಯ ಸೇವೆಯಲ್ಲಿದ್ದು , ಕೈಂಕರ್ಯವೇ ವೇದಗಳ ಪ್ರಮುಖ ಅರ್ಥವೆಂದು ತಿಳಿದ ತೊಂಡರಡಿಪ್ಪೊಡಿ ಆೞ್ವಾರ್ ಅವತರಿಸಿದ ದಿನವೆಂದು ಎಂಪೆರುಮಾನರಂತಹ ವೇದ ನಿಪುಣರು ಕೊಂಡಾಡುವ ದಿನ .

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-10-11-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment