ಉಪದೇಶ ರತ್ನಮಾಲೈ – ಸರಳ ವಿವರಣೆ – ೪೧ ರಿಂದ ೪೩ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೪೧

ಕರುಣಾಮಯಿ ತಿರುಕ್ಕುರುಗೈಪಿರಾನ್ ಪಿಳ್ಳಾನ್ ತಿರುವಾಯ್ಮೊಳಿಗೆ ನಿರ್ಮಿಸಿದ ಆರಾಯಿರಪ್ಪಡಿ ವ್ಯಾಖ್ಯಾನದ( 32 ಅಕ್ಷರಗಳು ಸೇರಿದರೆ ಒಂದು ಪಡಿ) ವೈಶಿಷ್ಟ್ಯತೆಯನ್ನು ಹೇಳುವರು.

ತೆಳ್ಳಾರುಂ ಜ್ಞಾನತ್ ತಿರುಕ್ಕುರುಗೈಪಿರಾನ್

ಪಿಳ್ಳಾನ್ ಎದಿರಾಸರ್ ಪೇರರುಳಾಲ್ -ಉಳ್ಳಾರುಂ

ಅನ್ಬುಡನೇ ಮಾಱನ್ ಮಱೈಪ್ ಪೊರುಳೈ ಅನ್ಱು ಉರೈತ್ತದು

ಇನ್ಬ ಮಿಗು ಆಱಾಯಿರಂ 

ಶ್ರೀಭಾಷ್ಯಕಾರರ್ ಎಂದು ಖ್ಯಾತಿಪಡೆದ ಯತಿರಾಜರು, ತಿರುಕ್ಕುರುಗೈಪಿರಾನ್ ಪಿಳ್ಳಾನ್‌ರನ್ನು ಅವರ ಜ್ಞಾನಪುತ್ರರೆಂದು( ಅವರ ಜ್ಞಾನದಿಂದ ಸಾಕುಮಗನಂತೆ) ಭಾವಿಸುತ್ತಿದ್ದರು.

ಯತಿರಾಜರ  ಅಪಾರ ಕರುಣೆಯಿಂದ ಹಾಗು ತಿರುವಾಯ್ಮೊಳಿಗೆ ಅವರ ಭಕ್ತಿಯಿಂದ ಮತ್ತು ಚೇತನಗಳಿಗೆ (ಭಾವನಾತ್ಮಕ ಅಸ್ತಿತ್ವಗಳು) ಅವರಿಗಿದ್ದ ಸಹಾನುಭೂತಿಯಿಂದ , ಪಿಳ್ಳಾನ್ ಅವರು ಎಂಪೆರುಮಾನಾರರ ಕಾಲಘಟ್ಟದಲ್ಲೇ ತಿರುವಾಯ್ಮೊಳಿಗೆ ವ್ಯಾಖ್ಯಾನ ಬರೆದರು, ಇದು ಅನುಯಾಯಿಗಳಿಗೆ ಬಹಳ ಸಂತೋಷ ಪಡಿಸಿತು. ಇದನ್ನು ಆರಾಯಿರಪ್ಪಡಿ ಎಂದು ಕರೆಯಲಾಯಿತು ಮತ್ತು ಇದು ಶ್ರೀ ವಿಷ್ಣು ಪುರಾಣದಷ್ಟು ವಿಸ್ತಾರವಾಗಿತ್ತು.

ಪಾಸುರ ೪೨

ಕರುಣಾಮಯಿ ನಂಜೀಯರ್ ಬರೆದ ಒಂಬದಿನಾಯಿರಪ್ಪಡಿಯ ವಿಶೇಷತೆ ಹೇಳುವರು.

ತಂ ಸೀರೈ ಜ್ಞಾನಿಯರ್ಗಳ್ ತಾಂ ಪುಗೞುಂ ವೇದಾಂತಿ

ನಂಜೀಯರ್ ತಾಂ ಬಟ್ಟರ್ ನಲ್ಲರುಳಾಲ್-ಎಂಜಾದ

ಆರ್ವಮುಡನ್ ಮಾಱನ್ ಮಱೈಪ್ ಪೊರುಳೈ ಆಯ್ನ್ದುರೈತ್ತದು

ಏರ್ ಒನ್ಬದಿನಾಯಿರಂ.

ನಂಜೀಯರನ್ನು ವೇದಾಂತಿ ಎಂದು ಶಾಸ್ತ್ರ ಬಲ್ಲವರು ತಳಿದಿದ್ದರು.ಏಕೆಂದರೆ ಅವರು ವೇದಾಂತಗಳಲ್ಲಿ(ಉಪನಿಷತ್ತುಗಳು) ನಿಪುಣರಾಗಿದ್ದರು.  ತಮ್ಮ ಆಚಾರ್ಯ ಬಟ್ಟರ್ ಕರುಣೆಯಿಂದ, ನಮ್ಮಾೞ್ವಾರರ ತಿರುವಾಯ್ಮೊಳಿಗೆ. ಅವರಿಗಿದ್ದ ಕಲ್ಮಷವಿಲ್ಲದ ಭಕ್ತಿಯಿಂದ, ಪರಿಶೀಲಿಸಿದ ವ್ಯಾಖ್ಯಾನವನ್ನು ಒನ್ಬದಿನಾಯಿರಪ್ಪಡಿ ಎಂದು ಕರೆಯಲಾಗಿದೆ.

ನಂಜೀಯರ್ ಭಟ್ಟರ್ ಅವರ ಭಾರಿ ಕರುಣೆಯಿಂದ ಸುಧಾರಣೆಯಾದರು ಮತ್ತು ಸಂಪ್ರದಾಯದ ಅರ್ಥಗಳನ್ನು ಭಟ್ಟರ್ ಅವರಿಂದಲೇ ಕಲಿತರು. ತಿರುವಾಯ್ಮೊಳಿಗಾಗಿ ನೂರು ಬಾರಿ ಕಾಲಕ್ಷೇಪಂ (ಪ್ರವಚನ) ನಡೆಸಿದ ಹಿರಿಮೆ ಅವರಿಗೆ ಇತ್ತು. ಈ ಒನ್ಬಧಿನಾಯಿರಪ್ಪಡಿ ಶ್ರೀ ಭಾಷ್ಯಂನ ಅಳತೆ ಇರುವುದು.

ಪಾಸುರ ೪೩

ಮುಂದೆ, ಅವರು ತಿರುವಾಯ್ಮೊಳಿಗಾಗಿ ಪೆರಿಯಾವಾಚ್ಚಾನ್ ಪಿಳ್ಳೈ ಅವರು ಕರುಣೆಯಿಂದ ಬರೆದ ಇರುಬತ್ತುನಾಲಾಯಿರಪ್ಪಡಿ ವ್ಯಾಖ್ಯಾನದ ಮಹಿಮೆಯನ್ನು ಕರುಣೆಯಿಂದ ಹೇಳುತ್ತಾರೆ.

ನಂಪಿಳ್ಳೈ ತಮ್ಮುಡೈಯ ನಲ್ಲರುಳಾಲ್ ಏವಿಯಿಡ

ಪಿನ್ ಪೆರಿಯವಾಚ್ಚಾನ್ ಪಿಳ್ಳೈ ಅದನಾಲ್- ಇನ್ಬ

ವರುಬತ್ತಿ ಮಾಱನ್ ಮಱೈಪ್ ಪೊರುಳೈಚ್ ಚೊನ್ನದು

ಇರುಬತ್ತು ನಾಲಾಯಿರಂ

ಲೋಕಾಚಾರ್ಯಾರ್ ಎಂದು ಆಚರಿಸಲ್ಪಡುವ ನಂಪಿಳ್ಳೈ, ಅವರ ಅಪಾರ ಕರುಣೆಯಿಂದ, ಅವರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಪೆರಿಯಾವಾಚ್ಚಾನ್ ಪಿಳ್ಳೈ ಅವರನ್ನು ತಿರುವಾಯ್ಮೊಳಿಗಾಗಿ ವ್ಯಾಖ್ಯಾನ ಬರೆಯಲು ವ್ಯಾಖ್ಯಾನ ಚಕ್ರವರ್ತಿ ಎಂದು ಕರೆಯುತ್ತಾರೆ . ಆ ಆಜ್ಞೆಯನ್ನು ಕಾರಣವೆಂದು ಪರಿಗಣಿಸಿ, ನಮ್ಮಾೞ್ವಾರ್, ಎಂಪೆರುಮಾನರ ಸಹಾನುಭೂತಿಯಿಂದ ಹುಟ್ಟಿದ ಭಕ್ತಿ ಹೊಂದಿದ್ದ ಪೆರಿಯವಾಚ್ಚಾನ್ ಪಿಳ್ಳೈ ಅವರು ಕರುಣೆಯಿಂದ ಬರೆದದ್ದು. ಇರುಬತ್ತು ನಾಲಾಯಿರಪ್ಪಡಿ.ಇದು ಶ್ರೀ ರಾಮಾಯಣದಂತೆ ಅಳತೆ ಹೊಂದಿರುವುದು. 

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://divyaprabandham.koyil.org/index.php/2020/06/upadhesa-raththina-malai-41-43-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment