ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಪಾಸುರ ೧೬
ಪೆರಿಯಾೞ್ವಾರ್ ಇತರ ಆೞ್ವಾರರಿಗಿಂತ ಉನ್ನತರಾದವರೆಂದು ಅವರ ವೈಶಿಷ್ಟ್ಯವನ್ನು ಮಾಮುನಿಗಳು ಈ ಪಾಸುರದಿಂದ ಮುಂಬರುವ ಐದು ಪಾಸುರಗಳಲ್ಲಿ ತಿಳಿಸುವರು.
ಇನ್ಱೈ ಪೆರುಮೈ ಅಱಿಂದಿಲೈಯೋ ಏೞೈ ನೆಂಜೇ
ಇನ್ಱೈಕ್ಕು ಎನ್ ಏಱ್ಱಮ್ ಎನಿಲ್ ಉಱೈಕ್ಕೇನ್ -ನನ್ಱಿ ಪುನೈ
ಪಲ್ಲಾಂಡು ಪಾಡಿಯ ನಮ್ ಪಟ್ಟರ್ ಪಿರಾನ್ ವಂದು ಉದಿತ್ತ
ನಾಳ್ ಆನಿಯಿಲ್ ಸೋದಿ ನಾಳ್
ಮಿಕ್ಕ ಆೞ್ವಾರರ ದಿವ್ಯ ನಕ್ಷತ್ರಗಳಲ್ಲಿ ಅಕ್ಕರೆಯುಳ್ಳ ಓ ಮನಸೇ !ಜ್ಯೇಷ್ಟ ಮಾಸದ ಸ್ವಾತಿ ನಕ್ಷತ್ರದ ಖ್ಯಾತಿಯನ್ನು ತಿಳಿದಿರುವೆಯೇ?ಹೇಳುವೆ ಕೇಳು. ಈ ದಿನದಂದು ಪಟ್ಟರ್ ಪಿರಾನರು (ಪೆರಿಯಾೞ್ವಾರ್) ಮಂಗಳಾಶಾಸನದ( ಎಂಪೆರುಮಾನರಿಗೆ ಶುಭಕೋರುವುದು) ವಿಶೇಷ ಸಾರಾಂಶವುಳ್ಳ ತಿರುಪಲ್ಲಾಂಡು ಹಾಡಿ ದಯೆತೋರಿದವರು ಅವತರಿಸಿದ ದಿನ. ಆದ್ದರಿಂದ ಇದು ವಿಶೇಷ ದಿನ.
ಪಾಸುರ ೧೭
ಪೆರಿಯಾೞ್ವಾರರು ಅವತರಿಸಿದ ದಿನ ಆನಿ ಸ್ವಾತಿ (ಜ್ಯೇಷ್ಟ ಮಾಸದ ಸ್ವಾತಿ ನಕ್ಷತ್ರ )ಪದಗಳನ್ನು ಕೇಳಿ ಮನ ಉರುಗದ ಬಲ್ಲವರಿಗೆ ಸಮನಾದವರು ಯಾರೂ ಇಲ್ಲ ಎಂದು ಅವರ ಮನಸ್ಸಿಗೆ ಹೇಳುವರು.
ಮಾನಿಲತ್ತಿಲ್ ಮುನ್ ನಂ ಪೆರಿಯಾೞ್ವಾರ್ ವಂದುದಿತ್ತ
ಆನಿ ತನ್ನಿಲ್ ಸೋದಿ ಎನ್ಱಾಲ್ ಆದರಿಕ್ಕುಂ ಞಾನಿಯರ್ಕ್ಕು
ಒಪ್ಪೋರಿಲೈ ಇವ್ವುಲಗು ತನ್ನಿಲ್ ಎನ್ಱು ನೆಂಜೇ
ಎಪ್ಪೋದುಂ ಶಿಂದಿತ್ತಿರು.
ಓ ಮನಸೇ , ಹಲವಾರು ವರ್ಷಗಳ ಹಿಂದೆ ಈ ಲೋಕದಲ್ಲಿ ಪೆರಿಯಾೞ್ವಾರ್ ಅವತರಿಸಿದ ಈ ದಿನ ಆಣಿ ( ಜ್ಯೇಷ್ಟ ಮಾಸ) ಸ್ವಾತಿ ಎಂದು ಕೇಳಿದೊಡನೆ ಮನ ಕರಗುವ ಮಹನೀಯರಿಗೆ ಸಮನಾದವರಿಲ್ಲವೆಂದು ಸದಾ ಚಿಂತಿಸುತ್ತಿರು.
ಪಾಸುರ ೧೮
ಮಿಕ್ಕ ಆೞ್ವಾರ್ಗಳಿಗೂ ಈ ಆೞ್ವಾರ್ ಎಂಪೆರುಮಾನರಿಗೆ ಮಂಗಳಾಶಾಸನ ಮಾಡಿದ ರೀತಿಯಲ್ಲಿರುವ ಭಾರೀ ವ್ಯತ್ಯಾಸದಿಂದ ಇವರಿಗೆ ಪೆರಿಯಾೞ್ವಾರ್ (ಮಹನೀಯ ಅಳ್ವಾರ್) ಎಂಬ ದಿವ್ಯ ನಾಮ ಕರೆಯಲಾಗಿದೆ ಎಂದು ಮಾಮುನಿಗಳು ವರ್ಣಿಸುವರು.
ಮಂಗಳಾಶಾಸನತ್ತಿಲ್ ಮಱ್ಱುಳ್ಳ ಆೞ್ವಾರ್ಗಳ್
ತಂಗಳ್ ಆರ್ವತ್ತು ಅಳವು ದಾನ್ ಅನ್ಱಿ -ಪೊಂಗುಂ
ಪರಿವಾಲೇ ವಿಲ್ಲಿಪುತ್ತೂರ್ ಪ ಟ್ಟರ್ ಪಿರಾನ್ ಪೆಱ್ಱಾನ್
ಪೆರಿಯಾೞ್ವಾರ್ ಎನ್ನುಂ ಪೆಯರ್
ಎಂಪೆರುಮಾನರಿಗೆ ಮಂಗಳಾಶಾಸನ ಮಾಡಲು ಇತರ ಆೞ್ವಾರರಿಗಿಂತ ಹೆಚ್ಚು ತವಕವಿದ್ದರಿಂದ ಮತ್ತು ಎಂಪೆರುಮಾನರ ಮೇಲಿರುವ ಪರಮ ವಾತ್ಸಲ್ಯದಿಂದ , ಶ್ರೀವಿಲ್ಲಿಪುತ್ತೂರಿನಲ್ಲಿ ಅವತರಿಸಿದ ವಿಷ್ಣುಚಿತ್ತರಿಗೆ ಪೆರಿಯಾೞ್ವಾರ್ ಎಂಬ ಬಿರುದು ವ್ಯಾಪಕವಾಗಿದೆ. ಮಂಗಳಾಶಾಸನವೆಂಬುದು ಇತರರಿಗೆ ಶುಭಕೋರುವುದು.
ಹಿರಿಯರು ಕಿರಿಯರಿಗಾಗಿ ಮಂಗಳಾಶಾಸನ ನೀಡುವುದು ಸಹಜ. ಇಲ್ಲೊಂದು ಪ್ರಶ್ನೆ : ಕಿರಿಯರು ಹಿರಿಯರಿಗೆ ಮಂಗಳಾಶಾಸನ ಮಾಡಬಹುದೆ?ನಮ್ಮ ಪೂರ್ವಾಚಾರ್ಯರಾದ ಪಿಳ್ಳೈ ಲೋಕಾಚಾರ್ಯರು ಈ ವಿಚಾರವನ್ನು ಅವರ ಕೃತಿ ಶ್ರೀ ವಚನಭೂಷಣದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಎಂಪೆರುಮಾನರು ಎಲ್ಲದ್ದಕ್ಕಿಂತಲೂ ಅತಿ ಉನ್ನತವಾದವರು. ಆತ್ಮವು ಅತ್ಯಂತ ಸೂಕ್ಷ್ಮವಾದದ್ದು. ಹಾಗಾಗಿ ಆತ್ಮಗಳು ಎಂಪೆರುಮಾನರಿಗೆ ಮಂಗಳಾಶಾಸನ ಮಾಡುವುದು ಸರಿಯೇ ಎಂದು ಅವರು ಪ್ರಶ್ನಿಸಿ ಮತ್ತು “ಮಂಗಳಾಶಾಸನ ಮಾಡುವುದು ನಮ್ಮ ಮೂಲಭೂತ ಪ್ರಕೃತಿ ಸ್ವಭಾವ “ ಎಂದು ಉತ್ತರಿಸಿದ್ದಾರೆ. ವಿವೇಕ ಜ್ಞಾನದ ದೃಷ್ಟಿಕೋಣದಿಂದ ಎಂಪೆರುಮಾನರು ಉನ್ನತವಾದವರು. ಆದರೆ ಮಮತೆ ವಾತ್ಸಲ್ಯದ ದೃಷ್ಟಿಕೋಣದಲ್ಲಿ , ಎಂಪೆರುಮಾನರಿಗೆ ಹಾನಿಯಾಗುವುದೆಂಬ ಭೀತಿಯು ಎಂಪೆರುಮಾನರಿಗೆ ಭಕ್ತನ ಪರಮ ವಾತ್ಸಲ್ಯದ ಸ್ವರೂಪವಾಗಿರುತ್ತದೆ. ಈ ವಿಷಯವನ್ನು ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಪೆರಿಯಾೞ್ವಾರರು ತಿಳಿಸಿದ್ದಾರೆ.ಇದರಿಂದಲೇ ಇತರ ಆೞ್ವಾರರಿಗಿಂತ ಭಿನ್ನವಾಗಿದ್ದು ಇವರಿಗೆ ಪೆರಿಯಾೞ್ವಾರ್ ಎಂಬ ದಿವ್ಯ ನಾಮ ಪಡೆದರು.
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ: https://divyaprabandham.koyil.org/index.php/2020/06/upadhesa-raththina-malai-16-18-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org