ಉಪದೇಶ ರತ್ನಮಾಲೈ – ಸರಳ ವಿವರಣೆ – ೧೪ ರಿಂದ ೧೫ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೧೪

  ವೈಶಾಖ ಮಾಸದ ವಿಶಾಖಾ ನಕ್ಷತ್ರದಂದು ಅವತರಿಸಿದ  , ವೇದಗಳ ಅರ್ಥಗಳನ್ನು ಸರಳ ತಮಿಳಿನಲ್ಲಿ ತಿಳಿಸಿದವರು,  ಮಿಕ್ಕ ಆೞ್ವಾರರು ಇವರ ಬಾಹುಗಳಂತಿರುವ ನಮ್ಮಾೞ್ವಾರರು ಈ ಸುದಿನದಂದು   ಅವತರಿಸಿದರೆಂದು ಮಾಮುನಿಗಳು ಆಚರಿಸುವರು .

ಏರಾರ್ ವೈಗಾಸಿ ವಿಸಾಗತ್ತಿನ್ ಏಱ್ಱತ್ತೈ

ಪಾರೋರ್ ಅಱಿಯ ಪಗರ್ಗಿನ್ರೇನ್ -ಸೀರಾರುಂ

ವೇದಂ ತಮಿಳ್ ಸೈದ ಮೈಯ್ಯನ್ ಎೞಿಲ್ ಕುರುಗೈ

ನಾದನ್ ಅವದರಿತ್ತ ನಾಳ್

ಲೋಕದ ಜನರು ಚೆನ್ನಾಗಿ ತಿಳಿಯಲು, ವಿಶೇಷವಾದ ವೈಶಾಖ ಮಾಸದ ವಿಶಾಖಾ ನಕ್ಷತ್ರದ ಖ್ಯಾತಿಯನ್ನು ಹೇಳುವೆನು.ಈ ದಿನದಂದು ಸತ್ಯವಾದವರು, ವೇದಗಳ ವಿಶೇಷ ಅರ್ಥಗಳನ್ನು ಸುಂದರ ತಮಿಳಿನಲ್ಲಿ ಸೂಕ್ತವಾಗಿ ರಚಿಸಿದ ನಮ್ಮಾೞ್ವಾರರ ಅವತರಿಸಿದ ದಿನ. ಸತ್ಯವಾದವರೆಂದರೆ ಅಸ್ತಿತ್ವವೊಂದನ್ನು ಅದು ಇರುವ ಹಾಗೆ ಪ್ರಾಮಾಣಿಕತೆಯಿಂದ ಹೇಳುವುದು.ವೇದಗಳ ವೈಶಿಷ್ಟ್ಯತೆಯೆಂದರೆ ಅಪೌರುಷೇಯತ್ವಂ( ಮನುಷ್ಯನಿಂದ ಬರೆಯದಿರುವಂತ) ಹೊಂದಿರುವುದು , ಸ್ವತಪ್ರಮಾಣತ್ವಂ( ಸ್ವತಃ ಆಧಾರವಾಗಿ, ಬೇರಾವುದೇ ಆಧಾರಗಳ ಅಗತ್ಯವಿಲ್ಲದ) . ವೇದಗಳ ಮತ್ತೊಂದು ವೈಶಿಷ್ಟ್ಯತೆಯೆಂದರೆ ಅವು ಕೇವಲ ಶ್ರೀ ಮನ್ನಾರಾಯಣನ ಸ್ವರೂಪ (ಮೂಲ ಪ್ರಕೃತಿ ),ರೂಪ ( ದೈವೀಕ ಸ್ಥಿತಿ),ಗುಣಗಳ(ಶುಭಲಕ್ಷಣ ) ಬಗ್ಗೆ ಹೇಳುವುದು.ನಾವೆಲ್ಲರು ಸ್ಪಷ್ಟ ವಾಗಿ ಅರ್ಥಮಾಡಿ ಕೊಳ್ಳಲು, ತಮಿಳಿನಲ್ಲಿ ಅರ್ಥಗಳನ್ನು ರಚಿಸುವುದೆಂದರೆ ಅವರು ದಯೆತೋರಿ ವೇದ ವೇದಾಂತಗಳ (ಉಪನಿಷತ್ತುಗಳು) ಒಳ ಅರ್ಥಗಳನ್ನು ಅವರ ನಾಲ್ಕು ರಚನೆಗಳಾದ

ತಿರುವೃತ್ತಂ (ರಿಗ್ ವೇದ), ತಿರುವಾಸಿರಿಯಂ(ಯಜುರ್ ವೇದ), ಪೆರಿಯ ತಿರುವಂದಾದಿ (ಅಥರ್ವಣ ವೇದ) ಮತ್ತು ತಿರುವಾಯ್ಮೊೞಿ (ಸಾಮ ವೇದ) ರಚಿಸುವುದು.

ಪಾಸುರ ೧೫

ಮಾಮುನಿಗಳು, ಆೞ್ವಾರರ ವೈಶಿಷ್ಟ್ಯತೆ, ಅವರು ಅವತರಿಸಿದ ದಿನ, ಅವರು ಕೃತಿಗಳನ್ನು ರಚಿಸಿದ ಸ್ಥಳ, ತಿರುವಾಯ್ಮೊೞಿ ಇವೆಲ್ಲವನ್ನು ಸಂತೋಷದಿಂದ ಅನುಭವಿಸುವುದನ್ನು ವಿವರಿಸುವರು.

ಉಣ್ಡೋ ವೈಗಾಸಿ ವಿಸಾಗತ್ತುಕ್ಕು ಒಪ್ಪು ಒರುನಾಳ್

ಉಣ್ಡೋ ಶಡಗೋಪ್ಪರ್ಕ್ಕು ಒಪ್ಪು ಒರುವರ್-ಉಣ್ಡೋ

ತಿರುವಾಯ್ಮೊೞಿಕ್ಕು ಒಪ್ಪು ತೆನ್ ಕುರುಗೈಕ್ಕು ಉಣ್ಡೋ

ಒರು ಪಾರ್ ತನಿಲ್ ಒಕ್ಕುಂ ಊರ್

ವೈಶಾಖ ಮಾಸದ ವಿಶಾಖಾ ನಕ್ಷತ್ರದಂದು ಅವತರಿಸಿದ, ಸರ್ವೇಶ್ವರ ಶ್ರೀಮನ್ನಾರಾಯಣನನ್ನು ಹಾಗು ಅವರ ಗುಣಗಳನ್ನು  ಸ್ತುತಿಸಿ ಅವು ವಿಶೇಷತೆ ನೀಡಿದ ನಮ್ಮಾಱ್ವಾರರು ಅವತರಿಸಿದ ದಿನಕ್ಕೆ ಬೇರಾವ ದಿನವೂ ಸರಿಸಮನಾಗುವುದೇ?(ಇಲ್ಲ) ನಮ್ಮಾೞ್ವಾರ್ ಎಂಬ ಶಠಗೋಪರ ವೈಶಿಷ್ಟ್ಯಕ್ಕೆ ಎಣೆಯಾದರು ಯಾರಿರುವರು?( ಸರ್ವೇಶ್ವರನು, ನಿತ್ಯರು, ಮುಕ್ತರು ಮತ್ತು ಈ ಜಗತ್ತಿನಲ್ಲಿರುವರು ಯಾರೂ ಇಲ್ಲ). ವೇದಾರ್ಥಗಳನ್ನು ಉತ್ಕೃಷ್ಟವಾಗಿ ವಿವರಿಸುವ ಪ್ರಬಂದವು ಯಾವುದಾದರೂ ಇದೆಯೇ?(ಇಲ್ಲ)

ನಮಗೆ ಅವರನ್ನು ಕೃಪೆ ಕೊಟ್ಟ ತಿರುಕ್ಕುರುಗೂರಂಥಹ ಸ್ಥಳಕ್ಕೆ ಎಣೆ ಬೇರಾವುದಾದರೂ ಇದೆಯೇ?( ಈ ಸ್ಥಳವು ಆದಿನಾಥ ಪೆರುಮಾಳ್ ಹಾಗು ನಮ್ಮಾೞ್ವಾರ್ ಇಬ್ಬರಿಗೂ ಸಮನಾದ ಕೀರ್ತಿ ಕೊಡುವುದು. ಈ ದೈವೀಕ  ಸ್ಥಳದಲ್ಲಿ ಅರ್ಚಾವತಾರದಲ್ಲಿರುವ (ವಿಗ್ರಹ ರೂಪ)ಎಂಪೆರುಮಾನರ ಶ್ರೇಷ್ಠತೆ ಉಜ್ವಲವಾಗಿರುವುದು) ಈ ಸ್ಥಳದಲ್ಲೆ ನಮ್ಮಾೞ್ವಾರರ ಅನುಗ್ರಹದಿಂದ , ಅವರ ಅವತಾರದ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಎಂಪೆರುಮಾನಾರ್ ಅವರ ದೈವೀಕ ವಿಗ್ರಹವು ಅವತರಿಸಿತು. ಎಂಪೆರುಮಾನಾರರ ಪುನರವತಾರವಾದ ಮಣವಾಳ ಮಾಮುನಿಗಳು ಅವತರಿಸಿದ ಪುಣ್ಯ ಕ್ಷೇತ್ರವಿದು.). ಎಂಪೆರುಮಾನ್, ಆೞ್ವಾರ್, ಆಚಾರ್ಯರ ವೈಶಿಷ್ಟ್ಯತೆ ಹೊಂದಿದ ಕಾರಣ ಇದು ಮೂರರಷ್ಟು ಕೊಂಡಾಡಲಾಗಿದೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : https://divyaprabandham.koyil.org/index.php/2020/06/upadhesa-raththina-malai-14-15-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment