ಉಪದೇಶ ರತ್ನಮಾಲೈ – ಸರಳ ವಿವರಣೆ ೪ ರಿಂದ ೬ ನೇ ಪಾಸುರಗಳು

ಶ್ರೀಃ  ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

ಹಿಂದಿನ ಶೀರ್ಷಿಕೆ

ಪಾಸುರ ೪

ಆೞ್ವಾರ್ಗಳು   ಅವತರಿಸಿದ ಕಾಲಾನುಕ್ರಮವನ್ನು ಈ ಪಾಸುರದಲ್ಲಿ ಹೇಳಿದ್ದಾರೆ.

ಪೊಯ್ಗೆಯಾರ್ ಬೂದತ್ತಾರ್ ಪೇಯಾರ್ ಪುಗೞ್ ಮೞಿಸೈ

ಅಯ್ಯನ್  ಅರುಳ್ ಮಾರನ್ ಸೇರಲರ್ ಕೋನ್  – ತುಯ್ಯ ಭಟ್ಟ

ನಾದನ್ ಅನ್ಬರ್ ತಾಳ್ ತೂಳಿ ನರ್ಪಾಣನ್   ನರ್ಕಲಿಯನ್  

ಈದು  ಇವರ್ ತೋತ್ತು ಅಡೈವಾಮ್ ಇಂಗು  

ಆೞ್ವಾರ್ಗಳು ಅವತರಿಸಿದ ವ್ಯವಸ್ಥಿತ ಪಟ್ಟಿ-ಪೊಯ್ಗೈ ಆೞ್ವಾರ್ , ಬೂದತ್ತಾೞ್ವಾರ್, ಪೇಯಾೞ್ವಾರ್ , ಪ್ರಖ್ಯಾತಿಯಾದ ತಿರುಮೞಿಸೈ ಆೞ್ವಾರ್, ಪರಮ ಕಾರುಣಿಕರಾದ ನಮ್ಮಾೞ್ವಾರ್, ಚೇರ ಕುಲನಾಯಕರಾದ ಕುಲಶೇಖರ ಪೆರುಮಾಳ್, ಶುದ್ಧ ಮನಸುಳ್ಳ ಪೆರಿಯಾೞ್ವಾರ್, ತೊಂಡರಡಿಪ್ಪೊಡಿ  ಆೞ್ವಾರ್, ಮಂಗಳಭರಿತ ತಿರುಪ್ಪಾಣಾೞ್ವಾರ್,  ಶುಭಕರನಾದ ತಿರುಮಂಗೈ ಆೞ್ವಾರ್.

ಪಾಸುರ ೫

ಈ ಪಾಸುರದಲ್ಲಿ  ಆೞ್ವಾರ್ಗಳು ಅವತರಿಸಿದ ಮಾಸ ಹಾಗೂ ನಕ್ಷತ್ರಗಳ ಪಟ್ಟಿ ಮಾಡಿರುತ್ತಾರೆ.

ಅಂದಮಿೞ್ಆಲ್  ನರ್ಕಲೈಗಳ್  ಆಯ್ನ್ದು ಉರೈತ್ತ  ಆೞ್ವಾರ್ಗಳ್

ಇಂದ ಉಲಗಿಲ್ ಇರುಳ್ ನೀಂಗ – ವಂದು ಉದಿತ್ತ

ಮಾದಂಗಳ್ ನಾಳ್ಗಳ್ ತಮ್ಮೈ  ಮಣ್ಣುಲಗೋರ್ ತಾಂ ಆರಿಯ

ಈದು ಎನ್ ಱು  ಸೊಲ್ಲುವೋಂ ಯಾಮ್   

 ಈ ಲೋಕದಿಂದ ಆಜ್ಞಾನವೆಂಬ ಕತ್ತಲೆಯನ್ನು ತೊಲಗಿಸಲು ಆೞ್ವಾರ್ಗಳು ವೇದಗಳ ( ಪವಿತ್ರ ಕೃತಿಗಳ ) ಆಳವಾದ ಅರ್ಥಗಳನ್ನು ವಿಷ್ಲೇಶಿಸಿ, ಅವುಗಳನ್ನು ಭೋದಿಸಿರುತ್ತಾರೆ .ಲೋಕದ ಜನರು ತಿಳಿಯಲೆಂದು ಆೞ್ವಾರ್ಗಳು ಅವತರಿಸಿದ ಮಾಸ ಹಾಗೂ ದಿನಗಳನ್ನು ನಾವು ತಿಳಿಸುತ್ತೇವೆ.

ಪಾಸುರ  ೬

ಮುದಲಾೞ್ವಾರ್ ಎಂಬ ಮೊದಲನೆಯ ಮೂರು ಆೞ್ವಾರ್ಗಳ ಅವತಾರ ಮಹತ್ವವನ್ನು ಅವರು ವಿವರಿಸಿದ್ದಾರೆ.

ಐಪ್ಪಸಿಯಿಲ್ ಓಣಂ ಅವಿಟ್ಟಮ್ ಸದಯಂ ಇವೈ

ಒಪ್ಪಿಲವಾ ನಾಳ್ಗಲ್ ಉಲಗತ್ತೀರ್ – ಎಪ್ಪುವಿಯ

ಪೇಸು ಪುಗೞ್ ಪೊಯ್ಗೈಯಾರ್  ಬೂದತ್ತಾರ್ ಪೇಯಾೞ್ವಾರ್

ತೇಸುಡನೆ ತೋನ್ಱು ಸಿಱಪ್ಪಾಲ್     

ಓ ! ಈ ಲೋಕದ ಜನಗಳೆ ! ಆಶ್ವಯುಜ ಮಾಸದ  ( ಐಪ್ಪಸಿ  ಮಾಸ )  ಶ್ರವಣ (ತಿರುವೋಣಂ ), ಧನಿಷ್ಟ (ಅವಿಟ್ಟಮ್) ,ಸತಭಿಷ (ಸದಯಂ) ನಕ್ಷತ್ರಗಳು ವಿಷೇಶವಾದದ್ದು . ಅಂದು ಭವ್ಯವಾದ ಪೊಯ್ಗೈ ಆೞ್ವಾರ್ , ಬೂದತ್ತಾೞ್ವಾರ್, ಪೇಯಾೞ್ವಾರ್ ಅವತರಿಸಿದರು  . ಈ ಮೂರು  ಆೞ್ವಾರ್ಗಳನ್ನು ಎಲ್ಲರೂ ಕೊಂಡಾಡುತ್ತಾರೆ.

ಮೂಲ : http://divyaprabandham.koyil.org/index.php/2020/06/upadhesa-raththina-malai-4-6-simple/

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment