ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಪಾಸುರ ೨೩
ಆಂಡಾಳ್ ಅವತರಿಸಿದ ದಿನ ತಿರುವಾಡಿಪ್ಪೂರಂ ( ಆಷಾಡ ಮಾಸದ ದಿವ್ಯವಾದ ಪುಬ್ಬಾ ನಕ್ಷತ್ರ ) ಎಣೆಯಿಲ್ಲದ್ದೆಂದು ಅದರ ಖ್ಯಾತಿ ಅವರ ಮನಸ್ಸಿಗೆ ಹೇಳುತ್ತಾರೆ
ಪೆರಿಯಾೞ್ವಾರ್ ಪೆಣ್ ಪಿಳ್ಳೈಯಾಯ್ ಆಂಡಾಳ್ ಪಿರಂದ
ತಿರುವಾಡಿಪ್ಪೂರತ್ತಿನ್ ಸೀರ್ಮೈ – ಒರು ನಾಳೈಕ್ಕು
ಉನ್ಡೊ ಮನಮೇ ಉಣರ್ನ್ದು ಪಾರ್ ಆಂಡಾಳುಕ್ಕು
ಉಂಡಾಗಿಲ್ ಒಪ್ಪು ಇದರ್ಕುಂ ಉಂಡು
ಓ ಮನಸೇ ವಿಚಾರಿಸಿ ನೋಡು ತಿರುವಾಡಿಪ್ಪೂರಂ ದಿನಕ್ಕೆ ಎಣೆಯಾದ ದಿನವಿರುವುದೇ , ಪೆರಿಯಾೞ್ವಾರರ ದಿವ್ಯ ಪುತ್ರಿಯಾಗಿ ಆಂಡಾಳ್ ಅವತರಿಸಿದ ದಿನ. ಆಂಡಾಳ್ ನಾಚ್ಚಿಯಾರ್ರಿಗೆ ಎಣೆಯಿದ್ದರೆ ಮಾತ್ರ ಅದು ಈ ದಿನಕ್ಕೆ ಸಮನಾಗುವುದು !
ಆಂಡಾಳ್ ನಾಚಚ್ಚಿಯಾರ್ ಭೂಮಿ ಪಿರಾಟ್ಟಿಯ ಪುನರವತಾರ ಆಗಿರುವರು.
ಈ ಲೋಕದ ಜನರ ಮೇಲಿರುವ ವಾತ್ಸಲ್ಯದಿಂದ ಎಂಪೆರುಮಾನರನ್ನು ಅಗಲಿ ಈ ಭುವಿಯಲ್ಲಿ ಅವತರಿಸಿದಳು. ಅದಲ್ಲದೆ ಆೞ್ವಾರ್ಗಳು ಅಲ್ಲಿಯವರೆಗೂ ಈ ಲೋಕದಲ್ಲಿ ಇದ್ದರು.ಎಂಪೆರುಮಾನರ ನಿರ್ಬಂಧರಹಿತ ಕರುಣೆಯಿಂದ ಅವರಿಗೆ ಕಲ್ಮಷವಿಲ್ಲದ ಙಾನ ಹಾಗು ಭಕ್ತಿಯಿಂದ ಎಂಪೆರುಮಾನರನ್ನು ಪರಿಪೂರ್ಣವಾಗಿ ಅನುಭವಿಸಿದರು. ಇತರರಿಗಾಗಿ ತನ್ನ ಮಹತ್ತಾದ ನೆಲೆಯನ್ನು ತ್ಯಜಿಸಿದ ಆಂಡಾಳಿಗೆ ಎಣೆಯಾದವರು ಯಾರೂ ಇಲ್ಲ. ಅಪ್ರತಿಮವಾದ ಆೞ್ವಾರ್ಗಳು ಆಂಡಾಳಿಗೆ ಎಣೆಯಿಲ್ಲವೆಂದರೆ ಬೇರಾರು ಎಣೆ? ಆದ್ದರಿಂದಲೇ ಆಕೆಯ ನಕ್ಷತ್ರ ಆಡಿ (ಆಷಾಡ) ಮಾಸದ ಪೂರ(ಪುಬ್ಬಾ) ನಕ್ಷತ್ರಕ್ಕೆ ಸರಿಸಮ ಯಾವುದೂ ಇಲ್ಲ.
ಪಾಸುರ ೨೪
ಆೞ್ವಾರುಗಳಲ್ಲಿ ಆಂಡಾಳಿನ ಶ್ರೇಷ್ಠತೆ ಆಚರಿಸಲು ಅವರ ಮನಸ್ಸಿಗೆ ಹೇಳುತ್ತಾರೆ.
ಅಂಜು ಕುಡಿಕ್ಕು ಒರು ಸಂದದಿಯಾಯ್ ಆೞ್ವಾರ್ಗಳ್
ತಂ ಸೆಯಲೈ ವಿಂಜಿ ನಿಱ್ಕುಂ ತನ್ಮೆಯಲಾಯ್ – ಪಿಂಜಾಯ್
ಪೞುತ್ತಾಳೇ ಆಂಡಾಳೈ ಪತ್ತಿಯುಡನ್ ನಾಳುಂ
ವೞುತ್ತಾಯ್ ಮನಮೇ ಮಗಿೞ್ನ್ದು
ಆೞ್ವಾರರ ಕುಲಕ್ಕೆ ಉತ್ತರಾಧಿಕಾರಿಯಾಗಿಯೇ ಆಂಡಾಳ್ ಅವತರಿಸಿದಳು. ಅಂಜು ಎಂಬ ಪದವು ಇಲ್ಲಿ ಐದು ಎಂದರ್ಥವಾಗಿಯೂ, ಅಂಜುವಿಕೆ ಎಂದು ಭಾವಿಸಬಹುದು.ಪಂಚ ಪಾಂಡವರ ( ಐದು ಪಾಂಡವರು ) ಏಕೈಕ ಉತ್ತರಾಧಿಕಾರಿಯಾಗಿದ್ದ ಪರೀಕ್ಷಿತ್ ರಾಜನಂತೆ , ಹತ್ತು ಆೞ್ವಾರ್ಗಳಿಗೆ ಆಂಡಾಳ್ ಏಕೈಕ ವಾರಸ್ಸು. ಇದು ಮೊದಲ ಅರ್ಥ. ಎಂಪೆರುಮಾನರಿಗೆ ಹಾನಿ ಉಂಟಾಗವುದೆಂದು ಸದಾ ಭೀತಿಯಲ್ಲಿರುವ ಆೞ್ವಾರರ ಕುಲಕ್ಕೆ ಆಕೆ ಏಕೈಕ ಉತ್ತರಾಧಿಕಾರಿ ಎಂಬುದು ಮತ್ತೊಂದು ಅರ್ಥ. ಪೆರಿಯಾೞ್ವಾರರು ಪರಿಪೂರ್ಣರಾಗಿ ಮಂಗಳಶಾಸನ ಮಾಡಿದ್ದಾರೆ. ಮಿಕ್ಕ ಆೞ್ವಾರ್ಗಳು ಅವರ ನಿಷ್ಠೆಯಲ್ಲಿ ಪರಮಭಕ್ತಿ (ಎಂಪೆರುಮಾನರನ್ನು ಅಡೆದರೆ ಮಾತ್ರ ಜೀವಿತವಾಗಿರುವುದು ) ಸ್ಥಿತಿಯಲ್ಲಿದ್ದರು. ಪೆರಿಯಾೞ್ವಾರರಂತೆ , ಮಿಕ್ಕ ಆೞ್ವಾರರಂತೆ ತನ್ನ ಭಕ್ತಿಯಲ್ಲಿ ಆಂಡಾಳ್ ಅಸಾಧಾರಣವಾಗಿ, ಎಂಪೆರುಮಾನರಿಗೆ ಮಂಗಳಾಸಾಸನ ಮಾಡಿದಳು. ಸಹಜವಾಗಿ ಗಿಡವು ಹೂವು ಅರಳಿಸಿ, ನಂತರ ಕಾಯಿ ಬಿಟ್ಟು , ಅದನಂತರ ಹಣ್ಣಾಗುವುದು ಎಂಬುದು ಪಿಂಜಾಯ್ ಪೞುತ್ತಾಳ್ ಎಂಬ ಪದಕ್ಕೆ ಅರ್ಥ . ಆಂಡಾಳ್ ತುಳಸಿ ಗಿಡದಂತೆ, ಭೂಮಿಯಿಂದ ಮೊಳಕೆಯಿಟ್ಟಾಗಲೇ ಸುಗಂಧ ಪರಿಮಳ ಬೀರುವುದಂತೆ ಆಕೆ ಪ್ರಾರಂಭದಿಂದಲೇ ಹಣ್ಣಾಗಿದ್ದಳು. ಅಂದರೆ ಹದಿ ಹರೆಯದ ವಯಸ್ಸಿನಿಂದಲೇ ಅವಳಿಗೆ ಎಂಪೆರುಮಾನರಲ್ಲಿ ಅಸಾಧಾರಣ ಭಕ್ತಿ ಇತ್ತು , ತಿರುಪ್ಪಾವೈ ರಚಿಸಿದಾಗ ಆಕೆಗೆ ಐದು ವಯಸ್ಸು. ನಾಚಚ್ಚಿಯಾರ್ ತಿರುಮೊೞಿ ರಚಿಸುತ್ತಾ ಆಕೆ ಎಂಪೆರುಮಾನರನ್ನು ಅಡೆಯುತ್ತಾ ಸೊರಗಿ, ಕರುಗಿದಳು. ಅಂತಹ ಆಂಡಾಳನ್ನು ಸದಾ ಆಚರಿಸು.
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ: https://divyaprabandham.koyil.org/index.php/2020/06/upadhesa-raththina-malai-23-24-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org