ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಪಾಸುರ ೧೨
ಪುಷ್ಯ ಮಾಸದ (ತೈ ಮಾಸ) ಮಖಾ ನಕ್ಷತ್ರದಲ್ಲಿ ಅವತರಿಸಿದ ತಿರುಮೞಿಸೈ ಆೞ್ವಾರರ ಖ್ಯಾತಿಯನ್ನು ಈ ಲೋಕದ ಜನರು ತಿಳಿಯಲಿ ಎಂದು ದಯೆತೋರಿ ವಿವರಿಸುವರು.
ತೈಯ್ಯಿಲ್ ಮಗಂ ಇನ್ಱು ತಾರಣಿಯೀರ್ ಏಱಂ ಇಂದ
ತೈಯ್ಯಿಲ್ ಮಗತುಕ್ಕು ಚ್ಚಾಟ್ರುಗಿನ್ಱೇನ್-ತುಯ್ಯ ಮದಿ
ಪೆಟ್ರ ಮೞಿಸೈಪಿರಾನ್ ಪಿಱಂದ ನಾಳ್ ಎನ್ಱು
ನಟ್ರವರ್ಗಳ್ ಕೊಂಡಾಡುಂ ನಾಳ್
ಓ ಲೋಕದ ಜನಗಳೇ! ಪುಷ್ಯ ಮಾಸದ (ತೈ ಮಾಸ) ಮಖಾ ನಕ್ಷತ್ರವು ಅತಿ ಉನ್ನತ್ತವಾದದ್ದು.ಅದರ ವೈಶಿಷ್ಟ್ಯತೆಯನ್ನು ವಿವರಿಸುವೆ, ಕೇಳಿ.
ದೈವ ಙಾನ ಪಡೆದ ತಿರುಮೞಿಸೈ ಆೞ್ವಾರರು ಈ ದಿನದಂದು ಅವತರಿಸಿದರಿಂದ ಅಪಾರ ತಪಸ್ಸುಳ್ಳವರು ಈ ದಿನವನ್ನು ಕೊಂಡಾಡುವರು.
ನಿರ್ಮಲ ಙಾನವೆಂದರೆ ಆೞ್ವಾರರು ಪಡೆದ ದೋಷವಿಲ್ಲದ ಙಾನ ಹಾಗು ಭಕ್ತಿ ಮತ್ತು ಅವರು ಇತರ ದೇವತೆಗಳೊಡನೆ ತೊಡಗುವುದಿಲ್ಲ . ಆೞ್ವಾರಿಗೆ ತಿರುಕ್ಕುಡಂದೈ ಆರಾವಮುದನ್ ಎಂಪೆರುಮಾನರ ಬಳಿ ಇದ್ದ ನಿಕಟ ಸಂಬಂಧದಿಂದ ಇವರನ್ನು ತಿರುಮழிಸೈಪಿರಾನ್ ಎಂದು ಕರೆಯುವರು. (ಪಿರಾನ್ ಎಂಬ ಪದವು ಸಾಮಾನ್ಯವಾಗಿ ಎಂಪೆರುಮಾನರನ್ನು ಸೂಚಿಸುವುದು) ಹಾಗು ಆರಾಮುದನ್ ಎಂಬುವುದು ಆರಾವಮುದ ಆೞ್ವಾರ್ ಎಂದು ಕರೆಯುವರು. ಕಣಿಕಣ್ಣನ್ , ಪೆರುಂಬುಲಿಯೂರ್ ಅಡಿಗಳ್,ಎಂಪೆರುಮಾನಾರ್ ಮುಂತಾದವರು ಆಚಾರ್ಯ ವಿಚಾರಗಳಲ್ಲಿ ದೃಢವಾದ ತಪಸ್ಸುಳ್ಳವರು ಮತ್ತು ಶರಣಾಗತಿಯ ತಪಸ್ಸಿನಲ್ಲಿರುವವರನ್ನು ಮಹಾತಪಸ್ವಿ ಎನ್ನುವರು.
ಪಾಸುರ ೧೩
ಅದನಂತರ ಮಾಘ ಮಾಸದ ಪುನರ್ವಸು ನಕ್ಷತ್ರದಂದು ಅವತರಿಸಿದ ಕುಲಶೇಖರ ಆೞ್ವಾರರ ಕೀರ್ತಿ ಎಲ್ಲರಿಗೂ ಹೇಳುವರು.
ಮಾಸಿ ಪುನರ್ಪೂಸಂ ಕಾಣ್ಮಿನ್ ಇನ್ಱು ಮಣ್ಣುಲಗೀರ್
ತೇಸು ಇದ್ದಿವಸುತ್ತುಕ್ಕು ಏದೆನ್ನಿಲ್ -ಪೇಸುಗಿನ್ಱೇನ್
ಕೊಲ್ಲಿ ನಗರ್ ಕೋನ್ ಕುಲಶೇಖರನ್ ಪಿಱಪ್ಪಾಲ್
ನಲ್ಲವರ್ಗಳ್ ಕೊಂಡಾಡುಂ ನಾಳ್
ಓ ಲೋಕದ ಜನಗಳೇ! ಮಾಘ ಮಾಸದ ಪುನರ್ವಸು ನಕ್ಷತ್ರದ ಶ್ರೇಷ್ಠತೆಯನ್ನು ನಾನು ಹೇಳುವಂತೆ ಕೇಳಿ.ಚೇರದೇಶದ ಕೊಲ್ಲಿ ನಗರದ ನಾಯಕರಾದ ಕುಲಶೇಖರ ಪೆರುಮಾಳ್ ಅವತರಿಸಿದರಿಂದ ಈ ದಿನವನ್ನು ಉತ್ತಮರು ಕೊಂಡಾಡುವರು.ಉತ್ತಮರೆಂದರೆ ವೈಷ್ಣವ ತತ್ವ ಮಾರ್ಗವನ್ನು ಅನುಸರಿಸುವವರು, ಪರಮ ಶ್ರೇಷ್ಠ ವಾದವರು, ಉನ್ನತ ಙಾನ ಭಕ್ತಿ, ವೈರಾಗ್ಯವುಳ್ಳವರು . ಹೇಗೆಂದರೆ, ನಮ್ಮ ಪೂರ್ವಾಚಾರ್ಯರಂತೆ ಶುಭಲಕ್ಷಣಗಳೊಂದಿಗೆ ಪರಿಪೂರ್ಣತೆ ಹೊಂದಿರುವರು.
ಅಡಿಯೇನ್ ರಂಗನಾಯಕಿ ರಾಮಾನುಜದಾಸಿ
ಮೂಲ: https://divyaprabandham.koyil.org/index.php/2020/06/upadhesa-raththina-malai-12-13-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org