ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ
ಸರ್ವ ದೇಶ ದಶಾ ಕಾಲೇಷ್ವವ್ಯಾಹತ ಪರಾಕ್ರಮಾ |
ರಾಮಾನುಜಾರ್ಯ ದಿವ್ಯಾಜ್ಞಾ ವರ್ಧತಾಮ್ ಅಭಿವರ್ಧತಾಮ್ ||
ಭಗವದ್ ರಾಮಾನುಜರ ದಿವ್ಯ ಆಜ್ಞೆ (ವಿಷಿಶ್ಟಾದ್ವೈತ ಸಿಧ್ದಾಂತ ಹಾಗು ಶ್ರೀವೈಷ್ಣವ ಸಂಪ್ರದಾಯದ ತತ್ವಗಳ {ರೂಪದಲ್ಲಿರುವ}) ಯಾವುದೆ ಉಪದ್ರವ/ ತಡೆಗಳಿಲ್ಲಿದೆ ಎಲ್ಲಡೆಯೂ ಎಲ್ಲಾ ಕಾಲದಲ್ಲೂ ವರ್ದಿಸಲಿ. ಅವುಗಳು ವರ್ಧಿಸಲಿ
ರಾಮಾನುಜಾರ್ಯ ದಿವ್ಯಾಜ್ಞಾ ಪ್ರತಿವಾಸರಮುಜ್ಜ್ವಲಾ |
ದಿಗಂತವ್ಯಾಪಿನೀ ಭೂಯಾತ್ ಸಾಹಿ ಲೋಕ ಹಿತೈಷಿಣೀ ||
ಭಗವದ್ರಾಮಾನುಜರ ದಿವ್ಯ ಆಜ್ಞೇ ದೆದೀಪ್ಯಮಾನವಾಗಿ ಪ್ರತಿನಿತ್ಯವೂ ಪ್ರಕಾಶಿಸಲಿ. ಎಲ್ಲಾ ದಿಕ್ಕುಗಳಿಗು ಹರಡಿ ಹಿತವನ್ನು ಪ್ರಸಾದಿಸಲಿ.
ಶ್ರೀಮನ್! ಶ್ರೀರಂಗ ಶ್ರಿಯಮ್ ಅನುಪದ್ರವಾಮ್ ಅನುದಿನಮ್ ಸಂವರ್ಧಯ |
ಶ್ರೀಮನ್! ಶ್ರೀರಂಗ ಶ್ರಿಯಮ್ ಅನುಪದ್ರವಾಮ್ ಅನುದಿನಮ್ ಸಂವರ್ಧಯ ||
ಯಾವುದೆ ಉಪದ್ರವವಿಲ್ಲದೆ(ತೊಂದರೆಯಿಲ್ಲದೆ) ಶ್ರೀರಂಗಶ್ರೀ ವರ್ಧಿಸಲಿ. ಯಾವುದೆ ಉಪದ್ರವವಿಲ್ಲದೆ( ತೊಂದರೆಯಿಲ್ಲದೆ) ಶ್ರೀರಂಗಶ್ರೀ ವರ್ಧಿಸಲಿ.
ನಮಃ ಶ್ರೀಶೈಲನಾಥಾಯ ಕುನ್ತೀ ನಗರ ಜನ್ಮನೇ |
ಪ್ರಸಾದಲಬ್ಧ ಪರಮ ಪ್ರಾಪ್ಯ ಕೈಂಕರ್ಯ ಶಾಲಿನೇ ||
ಅಡಿಯೇನ್ ಕುಂತೀನಗರದಲ್ಲಿ ಅವತರಿಸಿ ,ಪರಮವಾದ (ಉತ್ಕೃಷ್ಠವಾದ) ಕೈಂಕರ್ಯವನ್ನು(ಆಚಾರ್ಯಾನುಗ್ರಹದಿಂದ ಹೋಂದಿದ) ಶ್ರೀಶೈಲನಾಥರಿಗೆ (ತಿರುಮಲೈ ಆೞ್ವಾರ್- ತಿರುವಾಯ್ಮೋೞಿ ಪಿಳ್ಳೈ) ಪ್ರಾರ್ಥಿಸುತ್ತೇನೆ
ಶ್ರೀಶೈಲೇಶ ದಯಾಪಾತ್ರಮ್ ಧೀಭಕ್ತ್ಯಾದಿ ಗುಣಾರ್ಣವಮ್ |
ಯತೀಂದ್ರ ಪ್ರವಣಮ್ ವಂದೇ ರಮ್ಯ ಜಾಮಾತರಮ್ ಮುನಿಮ್ ||
ಅಡಿಯೇನ್ ತಿರುಮಲೈ ಆೞ್ವಾರಿನ ದಯೆಗೆ ಪಾತ್ರರಾಗಿ, ಜ್ಞಾನ ಭಕ್ತ್ಯಾದಿ ಕಲ್ಯಾಣಗುಣಗಳ ಆರ್ಣವವಾಗಿರುವ (ಸಾಗರ) ಹಾಗು ಯತಿಂದ್ರರಲ್ಲಿ (ಶ್ರೀ ರಾಮಾನುಜರಲ್ಲಿ) ಪ್ರವಣರಾಗಿರುವ ಅೞಗಿಯ ಮಣವಾಳ ಮಾಮುನಿಗಳಿಗೆ ಪ್ರಾರ್ಥಿಸುತ್ತೇನೆ
[ರಮ್ಯ ಜಾಮಾತೃ ಯೋಗೀಂದ್ರ ಪಾದರೇಖಾ ಮಯಮ್ ಸದಾ |
ತದಾಯತ್ತಾತ್ಮ ಸತ್ತಾದಿಮ್ ರಾಮಾನುಜ ಮುನಿಮ್ ಭಜೇ ||
ಅಡಿಯೇನ್ ಮಾಮುನಿಗಳ ಪಾದಪದ್ಮಗಳ ಗುರುತುಗಳಂತೆ ಇದ್ದ, (ಮಾಮುನಿಗಳ ದಾಸನಾದ) ತಮ್ಮ ನಿಜ ಸ್ವರೂಪವನ್ನು ಸ್ಥಾಪಿಸಲು, (ಸತ್ತಾ ಸ್ಥಿತಿಗೂ) ಧಾರಣೆಗು, ಪ್ರವೃತ್ತ್ಯಾದಿಗಳಿಗೂ ಮಾಮುನಿಗಳನ್ನೆ ಆಲಂಭಿಸಿರುವ ವಾನಮಾಮಲೈ ಜೀಯರಿಗೆ ಪ್ರಾರ್ಥಿಸುತ್ತೇನೆ.
— ಶ್ರೀ ವಾನಮಾಮಲೈ ಮುಠದಲ್ಲಿ ಅನುಸಂದಿಸಲ್ಪಡುವದು]
ವಾೞಿ ತಿರುವಾಯ್ಮೊೞಿಪ್ ಪಿಳ್ಳೈ ಮಾದಹವಾಲ್
ವಾೞುಮ್ ಮಣಾವಾಳ ಮಾಮುನಿವನ್ ವಾೞಿಯವನ್
ಮಾಱನ್ ತಿರುವಾಯ್ಮೊೞಿಪ್ ಪೊರುಳೈ ಮಾನಿಲತ್ತೋರ್
ತೇಱುಮ್ ಪಡಿ ಉರೈಕ್ಕುಮ್ ಶೀರ್
ತಿರುವಾಯ್ಮೋೞಿ ಪಿಳ್ಳೈಯಿನ ದಯೆಯಿಂದ ಜೀವಿಸುವ ಮಣವಾಳ ಮಾಮುನಿಗಳು ಚಿರವಾಗಿರಲಿ! ವಿಶಾಲವಾದ ಭೂಮಿಯವಾಸಿಗಳೆಲ್ಲರು ಅರಿತು ಉಜ್ಜೀವಿಸುವಂತ ನಮ್ಮಾೞ್ವಾರಿನ ತಿರುವಾಯ್ಮೊೞಿಯ ಅರ್ಥಗಳನ್ನು ವಿವರಿಸುವ ಸುಂದರ ರೀತಿಯು (ಸುಂದರವಿಧವು) ಚಿರವಾಗಿರಲಿ!
ಶೆಯ್ಯ ತಾಮರೈತ್ ತಾಳಿಣೈ ವಾೞಿಯೇ
ಶೇಲೈ ವಾೞಿ ತಿರುನಾಬಿ ವಾೞಿಯೇ
ತುಯ್ಯ ಮಾರ್ಬುಮ್ ಪುರಿನೂಲುಮ್ ವಾೞಿಯೇ
ಸುನ್ದರತ್ ತಿರುತ್ತೋಳಿಣೈ ವಾೞಿಯೇ
ಕೈಯುಮೇನ್ದಿಯ ಮುಕ್ಕೋಲುಮ್ ವಾೞಿಯೇ
ಕರುಣೈ ಪೊಂಗಿಯ ಕಣ್ಣಿಣೈ ವಾೞಿಯೇ
ಪೊಯ್ಯಿಲಾದ ಮಣವಾಳ ಮಾಮುನಿ
ಪುಂದಿ ವಾೞಿ ಪುಗೞ್ ವಾೞಿ ವಾೞಿಯೇ
ಕೆಂದಾವರೆಯಂತಿರುವ ಮಾಮುನಿಗಳ ದಿವ್ಯ ಪಾದಗಳು ಚಿರವಾಗಿರಲಿ ! ಆವರು ಧರಿಸಿದ ಕಾಷಾಯ ವಸ್ತ್ರ ಹಾಗು ನಾಭಿಯು ಚಿರವಾಗಿರಲಿ ! ತಮ್ಮ ಶುದ್ಧ-ದಿವ್ಯ ವಕ್ಷಸ್ಸು ಹಾಗು ಯಜ್ಞೋಪವೀತವು ಚಿರವಾಗಿರಲಿ ! ಆವರ ದಿವ್ಯ ಭುಜಗಳು ಚಿರವಾಗಿರಲಿ ! ತಮ್ಮ ದಿವ್ಯ ಕರಗಳಲ್ಲಿ ಹೋಂದಿರುವ ತ್ರಿದಂಡವೂ ಚಿರವಾಗಿರಲಿ ! ಕರುಣೆಯನ್ನು ಹರಡುವ ಅವರ ದಿವ್ಯ ನೇತ್ರಗಳು ಚಿರವಾಗಿರಲಿ ! ಯಾವುದೆ ಅನ್ರುತವಿಲ್ಲ ಅವರ ನಿಜ ಜ್ಞಾನವು ಎಂದೂ ಚಿರವಾಗಿರಲಿ!
ಅಡಿಯಾರ್ಗಳ್ ವಾೞ ಅರಂಗ ನಗರ್ ವಾೞ
ಶಡಗೋಪನ್ ತಣ್ಡಮಿೞ್ ನೂಲ್ ವಾೞ – ಕಡಲ್ ಸೂೞಂದ
ಮನ್ನುಲಹಮ್ ವಾೞ ಮಣವಾಳ ಮಾಮುನಿಯೇ
ಇನ್ನುಮೊರು ನೂಱ್ಱಾಣ್ಡಿರುಮ್
ಭಗವಾನಿನ ಹಾಗು ಭಾಗವತರ ಭಕ್ತರು ಚಿರವಾಗಿರಲಿ ! ಶ್ರೀರಂಗ ಮಹಾನಗರವೂ ಚಿರವಾಗಿರಲಿ! ಸಮುದ್ರದಿಂದ ಪರಿವೃತ್ತವಾಗಿರುವ(ತನ್ನ ಸುತ್ತಲು ಸಮುದ್ರವನ್ನು ಹೊಂದಿರುವ) ದೃಡವಾದ ವಿಷ್ವವೂ ಚಿರವಾಗಿರಲಿ! ಓ ಮಣವಾಳ ಮಾಮುನಿಗಳೇ! ನೀವು ನಮ್ಮೋಂದಿಗೆಯೇ ಇದ್ದು ಅನುಗ್ರಹಿಸ ಬೇಕು.
ಮೂಲ : http://divyaprabandham.koyil.org/index.php/2020/07/sarrumurai-simple/
ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org