ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಪಾಸುರ ೩೪
ಇದುವರೆಗು ಆೞ್ವಾರ್ಗಳು ಅವತರಿಸಿದ ದಿವ್ಯ ನಕ್ಷತ್ರಗಳು ಮತ್ತು ಸ್ಥಳಗಳನ್ನು ಮಾಮುನಿಗಳು ಕರುಣೆಯಿಂದ ತಿಳಿಸಿದರು.ಮೂರನೆಯ ಪಾಸುರದಲ್ಲಿ ಅವರು ಪೂರ್ವಾಚಾರ್ಯರು ರಚಿಸಿದ ಸೂಕ್ತಿಗಳಿಗೆ ಹೀಗೆ ಮಂಗಳಾಶಾಸನ ಹಾಡಿದರು “ ತಾೞ್ವಾದುಮಿಲ್ ಕುರವರ್ ತಾಂ ವಾೞೀ- ಏೞ್ಪಾರುಂ ಉಯ್ಯ ಅವರ್ಗಳ್ ಉರೈತ್ತ ಅವೈಗಳ್ ತಾಂ ವಾೞೀ”.ಇನ್ನು ಮುಂಬರುವ ಪಾಸುರಗಳಲ್ಲಿ ಆೞ್ವಾರ್ಗಳ ರಚನೆಗಳಿಗೆ ನಮ್ಮ ಆಚಾರ್ಯರು (ಪೂರ್ವಾಚಾರ್ಯರು ) ನೀಡಿದ ವ್ಯಾಖ್ಯಾನಗಳ ಮಹತ್ವಗಳನ್ನು ತಿಳಿಸುವುದಂತೆ ಅವರು ದಯೆ ತೋರಿ ಸಂಕಲ್ಪಿಸಿರುತ್ತಾರೆ.
ಆೞ್ವಾರ್ಗಳ್ ಏಱ್ಱಂ ಅರುಳಿಚೆಯಲ್ ಏಱ್ಱಂ
ತಾೞ್ವಾದುಂ ಇನ್ಱಿ ಅವೈ ತಾಮ್ ವಳರ್ತೋರ್ ಏೞ್ಪಾರುಂ
ಉಯ್ಯ ಅವರ್ಗಳ್ ಸೈದ ವ್ಯಾಕ್ಕಿಯೈಗಳ್ ಉಳ್ಳದೆಲ್ಲಾಂ
ವೈಯ್ಯಂ ಅಱೈಪ್ ಪಗರ್ವೋಂ ವಾಯ್ನ್ದು.
ಈ ಲೋಕದ ಜನರು ತಿಳಿಯಲೆಂದು, ನಾವು , ಆೞ್ವಾರ್ಗಳ ಮಹತ್ವವನ್ನು ಮತ್ತು ಕೊರತೆಯಿಲ್ಲದ ಅರುಳಿಚೆಯಲ್ಗಳನ್ನು ಪೋಷಿಸಿ ತಮ್ಮಲ್ಲಿ ಯಾವುದೆ ಅಲ್ಪತೆಯಿಲ್ಲದ ಪೂರ್ವಾಚಾರ್ಯರ ವ್ಯಾಖ್ಯಾನಗಳನ್ನು ( ಭಾಷ್ಯ) ತಿಳಿಸುತ್ತೇವೆ.ಎಂಪೆರುಮಾನರು ಅನುಗ್ರಹಿಸಿದ ಕಲ್ಮಷವಿಲ್ಲದ ಜ್ಞಾನ ಮತ್ತು ಭಕ್ತಿಯು ಅವರ ವೈಶಿಷ್ಟ್ಯತೆಯಾಗಿರುವುದು.
ಅವರ ಅರುಳಿಚೆಯಲ್ಗಳ ವೈಶಿಷ್ಟ್ಯತೆಯೆಂದರೆ ವೇದಗಳ ಅರ್ಥವನ್ನು ಸರಳ ರೀತಿಯಲ್ಲಿ ತಿಳಿಸುವುದಲ್ಲದೆ ಎಂಪೆರುಮಾನರ ವಿಷಯಗಳನ್ನು ಹೊರತು ಬೇರಾವ ವಿಷಯವನ್ನು ಅವರು ಹೇಳುವುದಿಲ್ಲ.
ನಮ್ಮ ಪೂರ್ವಾಚಾರ್ಯರು ಜಗತ್ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು , ತಮಗಾಗಿ ಸಂಪತ್ತು ಗೌರವಗಳನ್ನು ಶೇಖರಿಸುವಂತಹ ಕೀಳೆಂದು ಭಾವಿಸುವ ಲೌಕಿಕ ವಿಷಯಗಳಲ್ಲಿ ಒಳಗೊಳ್ಳದೆ ಸದಾ ಎಂಪೆರುಮಾನರಿಗೆ ಸೇವೆ ಸಲ್ಲಿಸುತ್ತಾ ಅವರನ್ನು ಸ್ಮರಿಸುತ್ತಾ ಇದ್ದರು.
ಪಾಸುರ ೩೫
ಆೞ್ವಾರ್ಗಳ ಮತ್ತು ಅವರ ಅರುಳಿಚೆಯಲ್ಗಳ ವೈಶಿಷ್ಟ್ಯತೆಯನ್ನು ಅರಿಯದೆ ತಿರಸ್ಕರಿಸುವವರು ಅಲ್ಪರೆಂದು ಅವರ ಮನಸ್ಸಿಗೆ ಹೇಳುತ್ತಾರೆ.
ಆೞ್ವಾರ್ಗಳೆಯುಂ ಅರುಳಿಚೆಯಲ್ಗಳೆಯುಂ
ತಾೞ್ವಾ ನಿನೈಪ್ಪವರ್ದಾಂ ನರಗಿಲ್ -ವೀೞ್ವಾರ್ಗಳ್
ಎನ್ಱು ನಿನೈತ್ತು ನೆಂಜೇ ಎಪ್ಪೊೞುದುಂ ನೀ ಅವರ್ ಪಾಲ್
ಸೆನ್ಱಣುಗ ಕೂಸಿತ್ತಿರಿ
ಓ ಮನಸೇ!, ಆೞ್ವಾರ್ಗಳನ್ನು ಮತ್ತು ಅವರ ದಿವ್ಯ ರಚನೆಗಳ ವೈಶಿಷ್ಟ್ಯತೆಯನ್ನು ತಿಳಿಯದೆ ಕೆಲವರು ಅಲ್ಪವಾಗಿ ಭಾವಿಸುವರು. ಅಂತಹವರು ನರಕದಲ್ಲಿ ಬೀಳುವರು. ಇವರಿಂದ ದೂರವಿದ್ದು ಸ್ನೇಹ ಭಾವನೆಗಳಲ್ಲಿ ತೊಡಗದೆ ಇರಬೇಕು, ಏಕೆಂದರೆ ಅದು ನಮಗೆ ಕೇಡು ಬಗೆಯುವುದು.ಆೞ್ವಾರ್ಗಳು , ಎಂಪೆರುಮಾನರಿಗೆ ಬಹಳ ಪ್ರಿಯವಾದವರು, ಈ ಭೂಮಿಯಲ್ಲಿ ಅವತರಿಸಿ ,ಈ ಲೋಕದ ಜನರಿಗೆ ಸುಧಾರಿಸುವ ಮಾರ್ಗ ನೀಡಿದ್ದಾರೆ. ಅವರು ಜನಿಸಿದ ಕಾರಣದಿಂದಾಗಿ ಅಥವಾ ಅವರ ಕೃತಿಗಳು ತಮಿಳು ಭಾಷೆಯಲ್ಲಿರುವ ಕಾರಣಗಳಿಂದ ಅವರನ್ನು ಕೀಳಾಗಿ ಭಾವಿಸುವರನ್ನು ಎಂಪೆರುಮಾನರೆ ಕ್ಷಮಿಸುವುದಿಲ್ಲ; ಅವರನ್ನು ನರಕಕ್ಕೆ ತಳ್ಳುವರು.ಹೀಗಿರುವ ಪಕ್ಷದಲ್ಲಿ ಹೇಗೆ ನೀನು ಅವರೊಡನೆ ಇರುವೆ? ಹಾಗಾದರೆ ಅವರನ್ನು ಕಂಡರೆ ನೀನು ಜಿಗುಪ್ಸೆಯಿಂದ ದೂರವಿರು.
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ: https://divyaprabandham.koyil.org/index.php/2020/06/upadhesa-raththina-malai-34-35-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org