ತಿರುವಾಯ್ಮೊೞಿ – ಸರಳ ವಿವರಣೆ – 5.7 – ನೋಟ್ರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 5.5 ಎಂಗನೇಯೋ


ಎಂಪೆರುಮಾನರು ಅವರನ್ನು ಕೆಲ ಕಾಲ ಮಾತ್ರವೇ ಸ್ಮರಿಸುವವರನ್ನೂ ಸಹ ರಕ್ಷಿಸುತ್ತಾರೆ. ಆೞ್ವಾರರು ಏತಕ್ಕಾಗಿ ತನ್ನನ್ನು ರಕ್ಷಿಸುತ್ತಿಲ್ಲವೆಂದು ಆಶ್ಚರ್‍ಯ ಪಡುತ್ತಾರೆ. ಆೞ್ವಾರರು ತಾವು ಯಾವುದೋ ಮಾಧ್ಯಮದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವುದಾಗಿ ಎಂಪೆರುಮಾನರು ಯೋಚಿಸಿದ್ದಾರೆಂದು ತಿಳಿದುಕೊಂಡು , ತಾನು ಎಂತಹ ಅಲ್ಪ ಜೀವಿಯೆಂದೂ , ತನಗೆ ಬೇರೆ ಯಾವುದೂ ಮಾರ್ಗವೂ ತಿಳಿದಿಲ್ಲವೆಂದೂ , ವಾನಮಾಮಲೈ ಎಂಪೆರುಮಾನರಿಗೆ ಶರಣಾಗತಿಯಾಗಿರುವುದಾಗಿಯೂ , ಈ ಪದಿಗೆಯಲ್ಲಿ ತಿಳಿಸುತ್ತಾರೆ.

ಪಾಸುರಮ್ – 1
ಆೞ್ವಾರರು ಎಂಪೆರುಮಾನರಿಗೆ ಹೇಳುತ್ತಾರೆ ನಿನ್ನನ್ನು ಹೊಂದಲು ನಾನು ಶಾಸ್ತ್ರದಲ್ಲಿ ಹೇಳಿರುವ ಎಲ್ಲಾ ರೀತಿಯ ಉಪಾಯಗಳಿಂದ ರಹಿತವಾಗಿ ಇದ್ದೇನೆಂದೂ , ನಿನ್ನ ವಿನಃ ನಾನು ಬದುಕಲಾರೆನೆಂದೂ . ನಾನು ನಿನ್ನ ನೋಟಕ್ಕೆ ಹೊರಗಾಗಿದ್ದೇನೆಯೇ? ನೀನು ನಿನ್ನ ಭಕ್ತರಿಗೆ ಅತ್ಯಂತ ಸನಿಹದಲ್ಲಿರುವೆ ಎಂದೂ ನೀನು ಅವರೆಲ್ಲರಿಗೂ ಸಹಾಯ ಮಾಡಲು ಕಾದಿರುವೆ ಎಂದೂ ಹೇಳುತ್ತಾರೆ.

ನೋಱ್ಱ ನೋಂಬಿಲೇನ್ ನುಣ್ ಅಱಿವಿಲೇನ್ ಆಗಿಲುಮ್ ಇನಿ ಉನ್ನೈವಿಟ್ಟು ಒನ್‍ಱುಮ್,
ಆಱ್ಱಕಿಱ್ಕಿನ್‍ಱಿಲೇನ್ ಅರವಿನಣೈ ಅಮ್ಮಾನೇ,
ಶೇಱ್ಱು ತ್ತಾಮರೈ ಶೆನ್ನೆಲೂಡು ಮಲರ್ ಶಿರೀವರಮಙ್ಗಲನಗರ್,
ವೀಱ್ಱಿರುನ್ದ ಎನ್ದಾಯ್ ಉನಕ್ಕು ಮಿಗೈಯಲ್ಲೇನ್ ಅಙ್ಗೇ ॥

ನಾನು ಕರ್ಮಯೋಗವನ್ನು ನಿನ್ನನ್ನು ಪಡೆಯಲು ಮಾಡಲಿಲ್ಲ . ನಾನು ಪ್ರಶಾಂತತೆಯುಳ್ಳ ತನ್ನ ಬಗ್ಗೆ ಮತ್ತು ಎಂಪೆರುಮಾನರ ಬಗ್ಗೆ ಇರುವ ಜ್ಞಾನವನ್ನೇ ಕೇಂದ್ರೀಕರಿಸುವ ಜ್ಞಾನಯೋಗವನ್ನೂ ಮಾಡಲಿಲ್ಲ. ಈ ಎರಡನ್ನು ಮಾಡಿದರೆ ದೊರಕುವ ಭಕ್ತಿಯೋಗಕ್ಕೂ ನಾನು ಅರ್ಹನಲ್ಲ. ನಿನ್ನ ಗುಣಗಳನ್ನು ಧ್ಯಾನಿಸಿದ ಮೇಲೆ ನಿನ್ನ ಬಿಟ್ಟು ಒಂದು ಕ್ಷಣವೂ ಬದುಕಲಾರೆ. ಅತ್ಯಂತ ಸುಂದರವಾದ ಕಮಲ ಹೂಗಳನ್ನು ಹೊಂದಿರುವ , ಕೆಸರಿನ ಜೊತೆಗೆ ಕಲೆಸಿಕೊಂಡಿರುವ ಭತ್ತದ ಗದ್ದೆಗಳನ್ನು ಹೊಂದಿರುವ , ಶ್ರೀ ವರಮಂಗಲ ನಗರದಲ್ಲಿ (ವಾನಮಾಮಲೈ/ ತೋಟಾದ್ರಿ ಮತ್ತು ನಾಂಗುನೇರಿ ಎಂದೂ ಹೆಸರಾಗಿರುವ ಪ್ರದೇಶದಲ್ಲಿ) ವಿಶಿಷ್ಟವಾಗಿ ಪ್ರತಿಷ್ಠಾನಗೊಂಡಿರುವ , ಭಕ್ತರನ್ನು ಪೊರೆಯಲು ಕಾತುರದಿಂದ ನಿಂತಿರುವ ಎಂಪೆರುಮಾನರೇ! ನಾನು ನಿನ್ನ ನೋಟಕ್ಕೆ ಹೊರತಾಗಿರುವೆನೇ? ಎಲ್ಲಾ ಜೀವಿಗಳ ರಕ್ಷಕನಾಗಿರುವ ನೀನು ನನ್ನನ್ನೂ ರಕ್ಷಿಸು ಎಂದು ಆೞ್ವಾರರು ಮೊರೆಯಿಡುತ್ತಾರೆ.

ಪಾಸುರಮ್ – 2
ಆೞ್ವಾರರು ಹೇಳುತ್ತಾರೆ. “ ನಿನ್ನ ದಿವ್ಯ ಪಾದಕಮಲವನ್ನು ಪಡೆಯಲು ತೊಂದರೆಗಳು ಉಂಟಾದರೆ , ನೀನೇ ಆ ತೊಂದರೆಗಳನ್ನು ನಿವಾರಿಸಿ, ನಿನ್ನ ತನ್ನದೇ ಆದ ಕರುಣೆಯಿಂದ ನನ್ನನ್ನು ರಕ್ಷಿಸು”.

ಅಙ್ಗುತ್ತೇನಲ್ಲೇನ್ ಇಙ್ಗುತ್ತೇನಲ್ಲೇನ್ ಉನ್ನೈ ಕ್ಕಾಣುಮ್ ಅವಾವಿಲ್ ವೀೞ್‍ನ್ದು , ನಾನ್
ಎಙ್ಗುತ್ತೇನುಮಲ್ಲೇನ್ ಇಲಙ್ಗೈ ಶೆತ್ತ ಅಮ್ಮಾನೇ
ತಿಙ್ಗಳ್ ಶೇರ್ ಮಣಿಮಾಡ ನೀಡು ಶಿರೀವರಮಙ್ಗಲನಹರ್ ಉಱೈ,
ಶಙ್ಗುಶಕ್ಕರತ್ತಾಯ್ ತಮಿಯೇನುಕ್ಕರುಳಾಯೇ॥

ನಾನು ನಿನ್ನ ಲೋಕವನ್ನು ಇನ್ನೂ ಪ್ರವೇಶಿಸಿಲ್ಲ , ನೀನೇ ನನಗೆ ಸಿದ್ಧವಾಗಿರುವ ಉಪಾಯ. ಈಗ ನಾನು ತಾಳ್ಮೆಯಿಂದ ನಾನಿರುವಲ್ಲಿಯೇ ಉಳಿದಿಲ್ಲ. ನಿನ್ನ ಪ್ರೇಮದಿಂದ ಬಂಧಿತನಾಗಿ ನಿನ್ನನ್ನು ಆನಂದಿಸಲು ನಾನು ಈ ಜಗತ್ತಿನ ಜನಗಳ ನಡುವೆಯೂ ಇಲ್ಲ. ನನ್ನ ಅತಿ ವಿಶಿಷ್ಟವಾದ ದೈವವೇ, ನಿನ್ನ ಭಕ್ತಳಾದ ಸೀತಾ ಪಿರಾಟ್ಟಿಯನ್ನು ಹೊಂದಲು ತೊಂದರೆಯಾಗಿರುವ ಲಂಕೆಯನ್ನು ನಾಶಪಡಿಸಿದೆ. ತನ್ನ ಭಕ್ತರಿಗೆ ಕಷ್ಟಗಳನ್ನು ಕೊಡುವ ವೈರಿಗಳನ್ನು ನಾಶಪಡಿಸಲೆಂದೇ ಇರುವ ಶಸ್ತ್ರಗಳು – ಅವು ನಿನ್ನ ಭಕ್ತರಿಗೆ ಆನಂದವನ್ನು ನೀಡುವವು. ಎತ್ತರವಾದ ಕಟ್ಟಡಗಳಿಂದ ಕೂಡಿದ , ಪಚ್ಚೆಯ ಬಣ್ಣದ ಮರಕತ ಮಣಿಗಳನ್ನು ಹೇರಳವಾಗಿ ಹೊಂದಿರುವ , ಚಂದ್ರನವರೆಗೂ ಹರಡಿಕೊಂಡಿರುವ ಶ್ರೀ ವರಮಂಗಲ ನಗರದಲ್ಲಿ ಅನಂತಾನಂತದವರೆಗೂ ನೆಲೆಸಿರುವ ನನ್ನ ಸ್ವಾಮಿಯೇ ! ನಿನ್ನನ್ನು ಬಿಟ್ಟು ಬೇರೆ ಯಾವ ಜೊತೆಗಾರನೂ ಇಲ್ಲದಿರುವ ನನ್ನನ್ನು ಕರುಣೆಯಿಂದ ಹರಸು. ಎಂದು ಆೞ್ವಾರರು ಬೇಡಿಕೊಳ್ಳುತ್ತಾರೆ.

ಪಾಸುರಮ್ – 3
ಆೞ್ವಾರರು ಹೇಳುತ್ತಾರೆ , “ ನಾನು ನಿನಗಾಗಿ ಏನನ್ನೂ ಮಾಡಲಿಲ್ಲ. ನೀನು ನನಗೆ ಮಾಡಿದ ಒಳಿತಿಗಾಗಿ ಮತ್ತು ನನ್ನನ್ನು ನಿನ್ನ ಸೇವಕನಾಗಿ ಒಪ್ಪಿಕೊಂಡಿರುವುದಕ್ಕೆ ಬದಲಾಗಿ ನಾನು ಏನೂ ಮಾಡಲು ಸಾಧ್ಯವಿಲ್ಲ .

ಕರುಳ ಪ್ಪುಟ್ಕೊಡಿ ಶಕ್ಕರಪ್ಪಡೈ ವಾನನಾಡ ಎನ್ ಕಾರ್ಮುಗಿಲ್‍ವಣ್ಣಾ
ಪೊರುಳಲ್ಲಾದ ಎನ್ನೈ ಪ್ಪೊರುಳಾಕ್ಕಿ ಅಡಿಮೈಕೊಣ್ಡಾಯ್
ತೆರುಳ್‍ಕೊಳ್ ನಾನ್ಮಱೈ ವಲ್ಲವರ್ ಪಲರ್ ವಾೞ್ ಶಿರೀವರಮಙ್ಗಲನಗರ್ಕು
ಅರುಳ್‍ಶೆಯ್ದಙ್ಗು ಇರುನ್ದಾಯ್ ಅಱಿಯೇನ್ ಒರುಕ್ಕೈಮ್ಮಾಱೇ॥

ಎಂಪೆರುಮಾನರು ಗರುಡಪಕ್ಷಿಯನ್ನು ಧ್ವಜವಾಗಿಯೂ , ದಿವ್ಯಚಕ್ರವನ್ನು ಅವರ ಆಯುಧವಾಗಿಯೂ ಮತ್ತು ಪರಮಪದವನ್ನು ತನ್ನ ರಾಜ್ಯವಾಗಿಯೂ ಹೊಂದಿದ್ದಾರೆ. ಅವರು ತನ್ನ ಕಪ್ಪುಬಣ್ಣದ ತಿರುಮೇನಿಯಿಂದ ನನಗೆ ಆಶೀರ್ವದಿಸುತ್ತಾರೆ. ಆ ರೂಪದಲ್ಲಿಯೇ ನನ್ನನ್ನು ಒಂದು ಅಸನ್ನೇವ (ಅಚಿತ್) ವಸ್ತುವಿನಿಂದ ನನ್ನ ನಿಜ ಸ್ವರೂಪವನ್ನು ಅರಿಯಲು ಪರಿವರ್ತನೆ ಮಾಡುತ್ತಾರೆ. ಅವರು ನನ್ನ ವಾಚಿಕ ಕೈಂಕರ್‍ಯವನ್ನು ಒಪ್ಪಿಕೊಂಡು ಸ್ವೀಕರಿಸುತ್ತಾರೆ. ಶ್ರೀವರಮಂಗಲ ನಗರದಲ್ಲಿ ವಾಸವಾಗಿರುವ ನಾಲ್ಕು ವೇದಗಳಲ್ಲಿ ಪಂಡಿತರಾಗಿರುವ ಶ್ರೇಷ್ಠವಾದ ಜ್ಞಾನವನ್ನು ಪಡೆದಿರುವ ಜನಗಳೇ! ನೀವು ಅಲ್ಲಿಂದ ನನಗೆ ಅಪಾರವಾದ ಕರುಣೆಯನ್ನು ತೋರಿಸಿದ್ದೀರಿ . ನನಗೆ ನೀವು ಮಾಡಿದ ಉಪಕಾರಕ್ಕೆ ಹೇಗೆ ಕೃತಙ್ಞತೆ ತೋರಿಸುವುದೆಂದು ನನಗೆ ತಿಳಿದಿಲ್ಲ ಎಂದು ಆೞ್ವಾರರು ಹೇಳುತ್ತಾರೆ.


ಪಾಸುರಮ್ – 4
ಆೞ್ವಾರರು ಹೇಳುತ್ತಾರೆ , “ನಿನ್ನನ್ನು ನಾನು ನನ್ನ ಆಸೆಯನ್ನೇ ಮಾರ್ಗವನ್ನಾಗಿ ಮಾಡಿಕೊಂಡು ಹೇಗೆ ಪಡೆಯಲಿ ?”

ಮಾಱುಶೇರ್ ಪಡೈ ನೂತ್ತುವರ್ ಮಙ್ಗ ಓರ್ ಐವರ್ಕು ಆಯ್ ಅನ್‍ಱು ಮಾಯ ಪ್ಪೋರ್‌ಪಣ್ಣಿ
ನೀಱುಶೆಯ್‍ದವೆನ್ದಾಯ್ ನಿಲಮ್ ಕೀಣ್ಡ ಅಮ್ಮಾನೇ
ತೇಱು ಞಾನತ್ತರ್ ವೇದವೇಳ್ವಿ ಅಱಾ ಚ್ಚಿರೀವರಮಙ್ಗಲನಗರ್
ಏಱಿ ವೀಱ್ಱಿರುನ್ದಾಯ್ ಉನ್ನೈ ಎಙ್ಗೆಯ್‍ದ ಕ್ಕೂವುವನೇ॥


ಶ್ರೇಷ್ಠನಾದ ಪೋಷಕನಾಗಿದ್ದುಕೊಂಡು ಮಹಾಭಾರತದ ಕಾಲದಲ್ಲಿ , ದುರ್‍ಯೋಧನ ಮುಂತಾದವರು ಪಾಂಡವರಿಗೆ ಅನೀತಿಯನ್ನು (ಅನ್ಯಾಯವನ್ನು) ಹಗೆತನದಿಂದ ಮಾಡಿದಾಗ , ನೀನು ಒಂದು ಯುದ್ಧವನ್ನೇ ಮಾಡಿಸಿ , ದೃಢ ನಿರ್ಧಾರದಿಂದ ಅಸಹಾಯಕ ಪಾಂಡವರಿಗೆ ಸಹಾಯ ಒದಗಿಸಿ, ದುರ್‍ಯೋಧನ ಮುಂತಾದವರನ್ನು ಧೂಳೀಪಟ ಮಾಡಿದೆ. ನೀನು ಜಗತ್ತಿಗೇ ಸ್ವಾಮಿಯಾಗಿ ಪ್ರಳಯದ ಕಾಲದಲ್ಲಿ ಭೂಮಿಯನ್ನು ಎತ್ತಿಹಿಡಿದು , ಅಪಾಯದಿಂದ ರಕ್ಷಿಸಿದೆ. ಶ್ರೀವರಮಂಗಲ ನಗರದಲ್ಲಿ ಪ್ರವೇಶಿಸಿ, ಕಲುಷಿತವಿಲ್ಲದ ಶ್ರೇಷ್ಠ ಜ್ಞಾನವನ್ನು ಹೊಂದಿರುವ ವೇದಗಳ ರೀತಿಯಲ್ಲಿ ಭಗವಂತನನ್ನೇ ಪೂಜಿಸುವ ಜ್ಞಾನಿಗಳಿಂದ ಪೂಜಿಸಲ್ಪಟ್ಟು ವಿಶಿಷ್ಟ ರೀತಿಯಲ್ಲಿ ಅಸ್ತಿತ್ವದಲ್ಲಿರುವ ಎಂಪೆರುಮಾನರೇ! (ನಿನ್ನ ಸಹಾಯವಿಲ್ಲದೇ) ನಾನು ನಿನ್ನನ್ನು ಕೂಗಿ ಕರೆದು ನಿನ್ನನ್ನು ಹೇಗೆ ಪಡೆಯಲಿ? ಎಂದು ಆೞ್ವಾರರು ಪ್ರಲಾಪಿಸುತ್ತಾರೆ.

ಪಾಸುರಮ್ – 5
ನಾನು ನಿನ್ನನ್ನು ನಿನ್ನ ಭಕ್ತರಿಗೆ ತೊಂದರೆಯುಂಟುಮಾಡುವ ವೈರಿಗಳನ್ನು ನಾಶಮಾಡುವ ಮತ್ತು ನಿನ್ನ ಭಕ್ತರಿಗೆ ಅಲ್ಲಿಂದ ಇಳಿದು ಬಂದು ಆನಂದವನ್ನು ಕೊಡುವ ಸ್ವರೂಪವಾಗಿ ನೋಡಿದ್ದೇನೆ. ಇಂತಹ ಗುಣಗಳುಳ್ಳ ನಿನ್ನನ್ನು ನನ್ನ ಸ್ವಪ್ರಯತ್ನದಿಂದ ಪಡೆದುಕೊಳ್ಳುವುದು ಸರಿಯೇ? ಸಾಧ್ಯವೇ? ಎಂದು ಆೞ್ವಾರರು ಎಂಪೆರುಮಾನರನ್ನು ಕೇಳುತ್ತಾರೆ.

ಎಯ್‍ದ ಕೂವುದಲ್ ಆವದೇ ಎನಕ್ಕು ? ಎವ್ವ ದೇವತ್ತುಳ್ ಆಯುಮಾಯ್ ನಿನ್‍ಱು
ಕೈದವಙ್ಗಳ್ ಶೆಯ್ಯುಮ್ ಕರುಮೇನಿ ಅಮ್ಮಾನೇ
ಶೆಯ್‍ದ ವೇಳ್ವಿಯರ್ ವೈಯತ್ತೇವರ್ ಅಱಾ ಚ್ಚಿರೀವರಮಙ್ಗಲನಗರ್
ಕೈತೊೞ ಇರುನ್ದಾಯ್ ಅದು ನಾನುಮ್ ಕಣ್ಡೇನೇ॥

ನಾನು ನನ್ನ ಆಸೆಯನ್ನೇ ಮಾರ್ಗವಾಗಿಟ್ಟುಕೊಂಡು ನಿನ್ನನ್ನು ಪಡೆಯಲು ಸರಿಯೇ? ಓಹ್! ನನ್ನ ಸ್ವಾಮಿಯೇ! ನೀನು ಬುದ್ಧನಂತೆ ರೂಪ ಧರಿಸಿ ಯಾವ ರೀತಿಯ ದೈತ್ಯರ ಗುಂಪಿನಲ್ಲೂ ನಿಲ್ಲಲು ಮತ್ತು ಅವರ ಜೊತೆ ಕಲೆಸಿಕೊಳ್ಳಲು ಸಾಧ್ಯವಿರುವ ಕಪ್ಪು ಬಣ್ಣದ ತಿರುಮೇನಿಯನ್ನು ಹೊಂದಿರುವವನೇ! ನೀನು ಕೃತಕೃತ್ಯಗಳಿಗೆಲ್ಲಾ (ವೇದದ ಪ್ರಕಾರ ನಡೆದುಕೊಳ್ಳುವವರು) ಮತ್ತು ನಿತ್ಯ ಸೂರಿಗಳಿಗೆಲ್ಲಾ ಒಡೆಯನಾದವನು . ನೀನು ಭೂಮಿಯಲ್ಲಿ ನಿರಂತರವಾಗಿ ಶ್ರೀವರಮಂಗಲ ದಿವ್ಯದೇಶದಲ್ಲಿ ನೆಲೆಸಿರುವವನು. ಎಲ್ಲರಿಂದಲೂ ಸೇವೆ ಸ್ವೀಕರಿಸುವವನು. ನಾನೂ ನಿನ್ನ ದಿವ್ಯರೂಪವನ್ನು ನೋಡಿದ್ದೇನೆ. ಆದ್ದರಿಂದ ನನ್ನ ತೊಂದರೆಗಳನ್ನು ನಿವಾರಿಸಿ, ನಾನು ನಿನ್ನನ್ನು ಆನಂದಿಸುವುದಕ್ಕೆ ನಿನ್ನದೇ ಹೊಣೆ ಎಂದು ಆೞ್ವಾರರು ಹೇಳುತ್ತಾರೆ.

ಪಾಸುರಮ್ – 6
ನಿನ್ನ ಭಕ್ತರಿಗೆ ನೀನು ಸಹಾಯ ಮಾಡುವುದರಿಂದ ನೀನು ಅತ್ಯಂತ ಪ್ರಜ್ವಲವಾಗಿ ಹೊಳೆಯುತ್ತಿರುವೆ. ನೀನು ನನ್ನಲ್ಲಿಗೆ ಕರುಣೆಯಿಂದ ಬರಬೇಕು, ನಾನು ನಿನ್ನನ್ನು ಆನಂದಿಸಲು ಮತ್ತು ಸೇವೆ ಮಾಡಲು ಎಂದು ಆೞ್ವಾರರು ಹೇಳುತ್ತಾರೆ.

ಏನಮಾಯ್ ನಿಲ ಕೀಣ್ಡ ಎನ್ನಪ್ಪನೇ ಕಣ್ಣಾ ಎನ್ಱುಮ್ ಎನ್ನೈ ಆಳುಡೈ
ವಾನನಾಯಕನೇ ಮಾಣಿಮಾಣಿಕ್ಕಚ್ಚುಡರೇ
ತೇನ ಮಾಮ್ಬೊೞಿಲ್ ತಣ್ ಶಿರೀವರಮಙ್ಗಲತ್ತವರ್ ಕೈತೊೞ ಉಱೈ
ವಾನಮಾಮಲೈಯೇ ಅಡಿಯೇನ್ ತೊೞ ವನ್ದರುಳೇ॥

ಎಂಪೆರುಮಾನರು ನನ್ನ ಪೋಷಕರು. ಅವರು ವರಾಹದ ರೂಪದಲ್ಲಿ ಭೂಮಿಯನ್ನು ಕೆಸರಿನಿಂದ ಅಗೆದು ತೆಗೆದರು. ಅವರು ಕೃಷ್ಣನಾಗಿ , ನನ್ನ ಸ್ವಾಮಿಯಾಗಿ , ನನ್ನ ಸೇವೆಯನ್ನು ಸ್ವೀಕರಿಸಿದರು. ನನ್ನನ್ನು ನಾನು ಉಳಿಸಿಕೊಳ್ಳಲು ಮಧುರವಾದ ತಮ್ಮ ಮಾತಿನಿಂದ ಪರಮಪದದಂತೆಯೇ ಆನಂದವನ್ನು ನೀಡಿದರು. ಅತ್ಯಂತ ಹೊಳೆಯುವ ಕೆಂಪು ರತ್ನದಂತೆ ತಿರುಮೇನಿಯನ್ನು ಹೊಂದಿದ್ದು , ಉತ್ತೇಜಕವಾದ , ಜೇನಿನಿಂದ ತುಂಬಿದ ಮಾವಿನ ತೋಪುಗಳಿಂದ ಕೂಡಿದ, ದಿವ್ಯದೇಶದ ಪ್ರಜೆಗಳಿಂದ ಸೇವಿಸಲ್ಪಟ್ಟ ಶ್ರೀವರಮಂಗಲ ನಗರದಲ್ಲಿ ಪ್ರತಿಷ್ಠಾಪನಗೊಂಡ , ದೃಢವಾದ ರೂಪವನ್ನು ಹೊಂದಿರುವ , ಅಮಿತವಾದ , ಅನಂತ ಎತ್ತರವಾದ ಪರ್ವತದಂತೆ ತಿರುಮೇನಿಯನ್ನು ಹೊಂದಿರುವ ಪರಮವ್ಯೋಮದಿಂದ ಆನಂದಿಸಲ್ಪಡುವ (ಶ್ರೀ ವೈಕುಂಠದಿಂದ) , ಎಂಪೆರುಮಾನರೇ! ಆ ನಿಮ್ಮ ಭಂಗಿಯಿಂದ ಎದ್ದು ನನ್ನ ಬಳಿಗೆ ಬಂದು ನನ್ನ ಸೇವೆಯನ್ನು ಸ್ವೀಕರಿಸಿ ಎಂದು ಆೞ್ವಾರರು ಬೇಡಿಕೊಳ್ಳುತ್ತಾರೆ.

ಪಾಸುರಮ್ – 7
ನನ್ನ ಉಳಿವಿಗೆ ಕಾರಣವಾಗಿರುವ ನೀನು ನನ್ನಿಂದ ದೂರವಾಗಬಾರದು ಮತ್ತು ನನ್ನ ಅಳಿವಿಗೆ ಕಾರಣವಾಗಬಾರದು ಎಂದು ಹೇಳುತ್ತಾರೆ.

ವಂದರುಳಿ ಎನ್ನೆಞ್ಜಿಡಮ್ ಕೊಣ್ಡ ವಾನವರ್ ಕೊೞುನ್ದೇ, ಉಲಗುಕ್ಕೋರ್
ಮುನ್ದೈತ್ತಾಯ್‍ತನ್ದೈಯೇ ಮುೞು ಏೞುಲಗುಮ್ ಉಣ್ಡಾಯ್
ಶೆನ್ದೊೞಿಲವರ್ ವೇದವೇಳ್ವಿ ಆಱಾ ಚ್ಚಿರೀವರಮಙ್ಗಲನಗರ್
ಅನ್ದಮಿಲ್ ಪುಗೞಾಯ್ ಅಡಿಯೇನೈ ಅಗತ್ತೇಲೇ॥

ಎಂಪೆರುಮಾನರು ಬಂದು ನನ್ನ ಹೃದಯದಲ್ಲಿ ನೆಲೆಗೊಂಡು ನನ್ನ ಉಳಿವಿಗೆ ಕಾಳಜಿ ವಹಿಸಿಕೊಂಡು, ಪರಮಪದದಲ್ಲಿ ವಾಸವಾಗಿರುವವರ ಉಳಿವಿಗೂ ಕಾರಣವಾಗಿದ್ದಾರೆ ಅವರು ಈ ಜಗತ್ತಿಗೆ ವಿಶಿಷ್ಟ ರೀತಿಯ ಮೂಲಸ್ವರೂಪದ ತಾಯಿಯೂ, ತಂದೆಯೂ ಆಗಿದ್ದಾರೆ. ಅವರು ಪ್ರಳಯ ಕಾಲದಲ್ಲಿ ಎಲ್ಲಾ ಲೋಕಗಳನ್ನೂ ಕುಡಿದು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಕಾಪಾಡಿದ್ದಾರೆ. ಅನಂತವಾದ ಕಲ್ಯಾಣ ಗುಣಗಳನ್ನು ಹೊಂದಿರುವ ವೇದಗಳ ಪ್ರಕಾರ ಪೂಜಿಸುವ ಎಂಪೆರುಮಾನರಿಗಾಗಿಯೇ ಅಸ್ತಿತ್ವದಲ್ಲಿರುವ , ಅವನಿಗಾಗಿಯೇ ಕೈಂಕರ್‍ಯಗಳನ್ನು ಸಲ್ಲಿಸುವ ಜ್ಞಾನಿಗಳಿಂದ ಪೂಜಿಸಲ್ಪಡುವ ಶ್ರೀವರಮಂಗಲದಲ್ಲಿ ನೆಲೆಸಿರುವ ಎಂಪೆರುಮಾನರೇ , ನನ್ನ ಸಂಗವನ್ನು ತೊರೆಯದಿರಿ ಎಂದು ಆೞ್ವಾರರು ಬೇಡಿಕೊಳ್ಳುತ್ತಾರೆ.

ಪಾಸುರಮ್ – 8
ಆೞ್ವಾರರನ್ನು ಎಂಪೆರುಮಾನರು ಕೇಳುತ್ತಾರೆ “ನಾನು ನಿನ್ನನ್ನು ಬಹಿಷ್ಕರಿಸಿದ್ದೇನೆಯೇ?” ಎಂದು , ಅದಕ್ಕೆ ಆೞ್ವಾರರು ಹೇಳುತ್ತಾರೆ “ಶಬ್ದ ಮುಂತಾದ ಲೌಕಿಕ ಆನಂದಗಳುಳ್ಳ ಈ ಸಂಸಾರದಲ್ಲಿ ನನ್ನನ್ನು ಇಟ್ಟಿದ್ದೀಯ. ಇದು ನನ್ನನ್ನು ಬಹಿಷ್ಕರಿಸಿದಂತಲ್ಲವೇ? “ಎಂದು.

ಅಗತ್ತ ನೀ ವೈತ್ತ ಮಾಯ ವಲ್ ಐಮ್ಬುಲನ್‍ಗಳಾಮವೈ ನನ್ಗು ಅಱಿನ್ದನ್ದನ್
ಅಗತ್ತಿ ಎನ್ನೈಯುಮ್ ನೀ ಅರುಮ್ ಶೇತ್ತಿಲ್ ವೀೞ್‍ತ್ತಿಕಣ್ಡಾಯ್,
ಪಗಲ್ ಕದಿರ್ ಮಣಿಮಾಡ ನೀಡು ಶಿರೀವರಮಙ್ಗೈ ವಾಣನೇ , ಎನ್‍ಱುಮ್
ಪುಗಱ್ಕು ಅರಿಯ ಎನ್ದಾಯ್ ಪುಳ್ಳಿನ್ ವಾಯ್ ಪಿಳನ್ದಾನೇ॥

ನಿನ್ನಿಂದ ಸೃಷ್ಟಿಸಲ್ಪಟ್ಟ ಮತ್ತು ಆಶ್ಚರ್‍ಯಕರ ಪ್ರವೃತ್ತಿಯನ್ನು ಹೊಂದಿರುವ ಸೋಲಿಸಲು ಸಾಧ್ಯವಾಗದ , ಒಂದಕ್ಕೊಂದು ಮಿಲನವಾಗದ ನಿನ್ನಿಂದ ದೂರವಾಗಲು ಪ್ರಯತ್ನಿಸಿದವರನ್ನು ಬಹಿಷ್ಕರಿಸುವ ಈ ಇಂದ್ರಿಯಗಳನ್ನು ನಾನು ನಿಜವಾಗಿ ಬಹು ಚೆನ್ನಾಗಿ ಅರ್ಥೈಸಿಕೊಂಡಿದ್ದೇನೆ. ನನ್ನನ್ನು ಏಳಲಾರದ ಕೆಸರಿನಲ್ಲಿ ತಳ್ಳಬೇಡ. ಓ! ಕೆಂಪುರತ್ನಗಳಿಂದ ಕೂಡಿದ ಮಿನುಗುವ ದೊಡ್ಡ ದೊಡ್ಡ ಬಂಗಲೆಗಳನ್ನು ಹೊಂದಿರುವ ಶ್ರೀವರಮಂಗಲ ದಿವ್ಯದೇಶದಲ್ಲಿ ವಾಸವಾಗಿರುವ ನನ್ನ ಸ್ವಾಮಿಯೇ! ಬಕಾಸುರನ ಕೊಕ್ಕನ್ನು ಮುರಿದು ಕೊಂದ ಪ್ರವೇಶಿಸಲು ಕಷ್ಟವಾಗಿರುವ ಎಂಪೆರುಮಾನರೇ! ನೀವು ಎಲ್ಲೆಲ್ಲಿಯೂ ಇದ್ದೀರಿ! ಆದರೆ ನನಗೆ ಸಹಾಯ ಮಾಡದೇ ನನ್ನನ್ನು ದೂರ ತಳ್ಳುತ್ತಿರುವಿರಿ! ಎಂದು ಆೞ್ವಾರರು ಮೊರೆಯಿಡುತ್ತಾರೆ.

ಪಾಸುರಮ್ – 9
ಆೞ್ವಾರರು ಹೇಳುತ್ತಾರೆ “ನೀನು ಬಹಳವಾಗಿ ಹೊಳೆಯುತ್ತಿದ್ದೀಯ! ನಿನ್ನ ವೈರಿಗಳನ್ನು ಕೊಂದು, ಕರುಣೆಯಿಂದ ನನ್ನನ್ನು ಮೇಲಕ್ಕೆತ್ತು “ ಎಂದು ಹೇಳುತ್ತಾರೆ.

ಪುಳ್ಳಿನ್ ವಾಯ್ ಪಿಳನ್ದಾಯ್! ಮರುದಿಡೈ ಪೋಯಿನಾಯ್! ಎರುದೇೞ್ ಅಡರ್ತ್ತ , ಎನ್
ಕಳ್ಳ ಮಾಯವನೇ! ಕರುಮಾಣಿಕ್ಕ ಚ್ಚುಡರೇ!
ತೆಳ್ಳಿಯಾರ್ ತಿರು ನಾನ್ಮರೈಗಳ್ ವಲ್ಲಾರ್ ಮಲಿ ತಣ್ ಶಿರೀವರ ಮಙ್ಗೈ
ಉಳ್, ಇರುನ್ದ ಎನ್ದಾಯ್! ಅರುಳಾಯ್ ಉಯ್ಯುಮಾಱು ಎನಕ್ಕೇ॥

ಎಂಪೆರುಮಾನರೇ! ನೀವು ಆಶ್ಚರ್‍ಯಕರವಾದ ಸ್ವರೂಪ. ಅತ್ಯಂತ ರಹಸ್ಯವಾದ ಸಂಗತಿಗಳನ್ನು ನೀವು ಬಕಾಸುರ ಮತ್ತು ಯಮಳನನ್ನು ಮತ್ತು ಏಳು ಎತ್ತುಗಳನ್ನು ಕೊಲ್ಲುವುದರ ಮೂಲಕ ಬಹಿರಂಗಪಡಿಸಿದ್ದೀರಿ. ಕಪ್ಪಾದ ರತ್ನದಂತಹ ಬಣ್ಣದಲ್ಲಿ ಝಗಮಗಿಸುವ ರೂಪವುಳ್ಳವರೇ! ಕರುಣೆಯಿಂದ ಪೋಷಕರಾದಂತಹ ಎಂಪೆರುಮಾನರ ರೂಪದಲ್ಲಿ ನಿಂತಿರುವವರೇ! ನಾನು ಆನಂದ ಹೊಂದಲು ಉತ್ತೇಜಕವಾದ ಶ್ರೀವರಮಂಗಲ ದಿವ್ಯದೇಶದಲ್ಲಿ ನಿಂತಿರುವವರೇ! ಅದು ನಾಲ್ಕು ವೇದಗಳ ಸಾರವನ್ನು ಅರ್ಥೈಸಿಕೊಂಡು ಪಂಡಿತರಾದಂತಹ ಜನಗಳಿಂದ ಕೂಡಿದೆ. ಅನೇಕ ಸಿರಿಗಳಿಂದ ಸಮೃದ್ಧಗೊಂಡು ಭಗವಂತನ ನಿಜ ಸ್ವರೂಪವನ್ನು ಪಡೆಯಲು ಸಮರ್ಥವಾಗಿದೆ. ನನಗೆ ಬೇರೆ ಯಾವುದೇ ಆಶ್ರಯವಿಲ್ಲ ಕರುಣೆಯಿಂದ ನನಗೆ ನಿನ್ನ ದಿವ್ಯ ಪಾದಕಮಲಗಳನ್ನು ತಲುಪುವ ಮಾರ್ಗವನ್ನು ದಯಪಾಲಿಸಿ, ನನ್ನನ್ನು ಮೇಲಕ್ಕೆತ್ತು ಎಂದು ಕಳಕಳಿಯಿಂದ ಪ್ರಾರ್ಥಿಸುತ್ತಾರೆ.

ಪಾಸುರಮ್ – 10
ಎಂಪೆರುಮಾನರು ಹೇಳುತ್ತಾರೆ “ನನ್ನ ದಿವ್ಯ ಪಾದವೇ ನನ್ನನ್ನು ತಲುಪುವ ಮಾರ್ಗ”, ಎಂದು. ಅದಕ್ಕೆ ಆೞ್ವಾರರು ಹೇಳುತ್ತಾರೆ, “ನಾನು ಈ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡಲು ಶಕ್ತನಲ್ಲ” ಎಂದು.

ಆಱೆನಕ್ಕು ನಿನ್ ಪಾದಮೇ ಶರಣಾಗ ತ್ತನ್ದೊಳಿನ್ದಾಯ್, ಉನಕ್ಕೋರ್ ಕೈ
ಮ್ಮಾಱು ನಾನ್ ಒನ್‍ಱು ಇಲೇನ್ ಎನದಾವಿಯುಮ್ ಉನದೇ
ಶೇಱು ಕೊಳ್ ಕರುಮ್ಬುಮ್ ಪೆರುಮ್ ಶೆನ್ನೆಲುಮ್ ಮಲಿ ತಣ್ ಶಿರೀವರ ಮಙ್ಗೈ
ನಾಱು ಪೂನ್ದಣ್‍ತುೞಾಯ್ ಮುಡಿಯಾಯ್! ದೆಯ್‍ವನಾಯಕನೇ॥

ನಿತ್ಯಸೂರಿಗಳಿಗೆಲ್ಲಾ ನಾಯಕನಾದ ಕಬ್ಬುಗಳಿಂದ ಮತ್ತು ಎತ್ತರದ ಭತ್ತದ ಕೆಸರು ತುಂಬಿದ ಗದ್ದೆಗಳಿಂದ ಭರಿತವಾದ ದಿವ್ಯದೇಶದಲ್ಲಿ ನೆಲೆಸಿರುವ ಸುಗಂಧಭರಿತವಾದ ತುಳಸಿಗಳಿಂದ ಅಲಂಕರಿಸಲ್ಪಟ್ಟ ದಿವ್ಯ ಕಿರೀಟವನ್ನು ಧರಿಸಿರುವ ಎಂಪೆರುಮಾನರೇ! ನೀವು ನನಗೆ ತಮ್ಮ ದಿವ್ಯಪಾದಗಳನ್ನು ದಯಪಾಲಿಸಿದ್ದೀರಿ. ಅವುಗಳು ಮಾತ್ರ ನನ್ನನ್ನು ನಿನ್ನಲ್ಲಿಗೆ ಕರೆದೊಯ್ಯಬಲ್ಲುದು. ಅವುಗಳೇ ಉಪಾಯಮ್ ಮತ್ತು ಆಶ್ರಯ. ನನ್ನ ಹತ್ತಿರ ನಿನಗೆ ಕೊಡಲು ಏನೂ ಇಲ್ಲ. ನನ್ನ ಆತ್ಮವು ನಿನ್ನದೇ! ಎಂದು ತಮ್ಮನ್ನು ತಾವು ಭಗವಂತನಿಗೆ ಅರ್ಪಿಸುತ್ತಾರೆ.

ಪಾಸುರಮ್ – 11
ಆೞ್ವಾರರು ಹೇಳುತ್ತಾರೆ “ ಯಾರು ಈ ಹತ್ತು ಪಾಸುರಗಳನ್ನು ಈ ಉದ್ದೇಶದಿಂದ ಆನಂದಗೊಂಡು ಪಠಿಸುತ್ತಾರೋ, ಅವರನ್ನು ಯಾವಾಗಲೂ ನಿತ್ಯಸೂರಿಗಳು ಆನಂದಿಸುತ್ತಾರೆ.

ದೆಯ್‍ವನಾಯಕನ್ ನಾರಣನ್ ತಿರಿವಿಕ್ಕಿರಮನ್ ಅಡಿಯಿಣೈಮಿಶೈ
ಕೊಯ್‍ಕೊಳ್ ಪೂಮ್ಬೊೞಿಲ್ ಶೂೞ್ ಕುರುಗೂರ್ ಚ್ಚಡಗೋಪನ್
ಶೆಯ್‌ದ ಆಯರತ್ತುಳ್ಳಿವೈ ತಣ್ ಶಿರೀವರಮಙ್ಗೈ ಮೇಯ ಪತ್ತುಡನ್
ವೈಗಲ್ ಪಾಡವಲ್ಲಾರ್ ವಾನೋರ್ಕ್ಕಾರಾವಮುದೇ॥

ಸರ್ವೇಶ್ವರನು ಎಲ್ಲಾ ನಿತ್ಯಸೂರಿಗಳಿಗೂ ನಾಯಕನಾದವನು. ಅಪರಿಮಿತವಾದ ಸಂಬಂಧದಿಂದ ತಾಯಿಯಂತೆ ಎಲ್ಲರನ್ನೂ ತಾಳಿಕೊಂಡವನು. ಅವನ ಕೆಳಗಿನ ವರ್ಗದವರನ್ನು ಅಳತೆ ಮಾಡಿ ಸ್ವೀಕರಿಸುತ್ತಾನೆ. ಅವರು ಒಡೆಯತನವನ್ನು (ನಾಯಕತ್ವವನ್ನು) ತೆಗೆದುಕೊಳ್ಳದಂತೆ ನೋಡಿಕೊಳ್ಳುತ್ತಾನೆ. ಸುತ್ತಲೂ ಸುಮಧುರ ಹೂಗಳಿಂದ ಆವರಿಸಲ್ಪಟ್ಟ ಆೞ್ವಾರ್ ತಿರುನಗರಿಯ ನಾಯಕರಾದ ನಮ್ಮಾೞ್ವಾರರು , ಕರುಣೆಯಿಂದ ಎಂಪೆರುಮಾನರ ದಿವ್ಯಪಾದಗಳಲ್ಲಿ ಈ ಹತ್ತು ಪಾಸುರಗಳನ್ನು ಒಟ್ಟು ಮೊತ್ತದ ಸಾವಿರ ಪಾಸುರದೊಳಗೆ ಹಾಡಿರುತ್ತಾರೆ. ಈ ಪಾಸುರಗಳು ಉತ್ತೇಜಕವಾದ ಶ್ರೀವರಮಂಗೈ ದಿವ್ಯದೇಶದ ಮೇಲೆ ಹಾಡಿರುವ ಪಾಸುರಗಳಾಗಿರುತ್ತವೆ. ಯಾರು ಈ ಹತ್ತು ಪಾಸುರಗಳನ್ನು, ಅದರ ಅರ್ಥಗಳನ್ನು ಒಪ್ಪಿಕೊಂಡು ಹಾಡುತ್ತಾರೋ, ಅವರು ಯಾವಾಗಲೂ ಎಂದಿಗೂ ಕಡಿಮೆಯಾಗದ ಅಮೃತದಂತೆ, ಪರಮಪದದಲ್ಲಿ ವಾಸಿಸುವವರಿಗೆ ಸತತ ಆನಂದವನ್ನು ಕೊಡುತ್ತಾರೆ.

ಮೂಲ : http://divyaprabandham.koyil.org/index.php/2020/05/thiruvaimozhi-5-7-simple/

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org







Leave a Comment