ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ

ತಿರುವಾಯ್ಮೊೞಿ

paramapadhanathan

ಶ್ರೀ ಮಣವಾಳ ಮಾಮುನಿಗಳು ವೈಕಾಶಿ ವಿಶಾಖದ ಶ್ರೇಷ್ಠತೆಯನ್ನು, ನಮ್ಮಾೞ್ವಾರರನ್ನು  ತಿರುವಾಯ್ಮೊೞಿಯನ್ನೂ, ಮತ್ತು ತಿರುಕ್ಕುರುಗೂರಿನ ಪ್ರಾಮುಖ್ಯತೆಯನ್ನೂ ತಮ್ಮ ಉಪದೇಶ ರತ್ನಮಾಲೆಯ 15ನೇ ಪಾಸುರದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ.

ಉಣ್ಡೋ ವೈಕಾಶಿ ವಿಶಾಗತ್ತುಕ್ಕೊಪ್ಪೊರು ನಾಳ್
ಉಂಡೋ ಶಡಗೋಪರ್ಕೊಪ್ಪೊರುವರ್, ಉಂಡೋ,
ತಿರುವಾಯ್ಮೊೞಿಕ್ಕೊಪ್ಪು ತೆನ್ ಕುರುಗೈಕ್ಕುಂಡೋ
ಒರು ಪಾರ್ ತನಿಲ್ ಒಕ್ಕುಮೂರ್॥

ಸರ್ವೇಶ್ವರನಾದ ಶ್ರೀಮನ್ನಾರಾಯಣರಿಗೆ   ಮಂಗಳಾಶಾಸನವನ್ನು ಮಾಡಿದ, ಅವರಿಗೂ ಅವರ ಐಶ್ವರ್ಯಕ್ಕೂ ಶ್ರೇಷ್ಠತೆಯನ್ನು ತಂದ ನಮ್ಮಾೞ್ವಾರವರ ಹುಟ್ಟುದಿನವಾದ ವೈಕಾಶಿ ವಿಶಾಖದ ದಿನಕ್ಕೆ ಸರಿಸಾಟಿಯುಂಟೇ?
ನಮ್ಮಾೞ್ವಾರ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಶ್ರೀ ಶಠಗೋಪರಿಗೆ ಸರಿಸಾಟಿಯುಂಟೇ?
(ಸ್ವತಃ ಸರ್ವೇಶ್ವರನು, ನಿತ್ಯಸೂರಿಗಳು, ಮುಕ್ತಾತ್ಮರು ಅಥವಾ ಈ ಭೂಮಿಯಲ್ಲಿ ಬಾಳುವ ಯಾರೂ ನಮ್ಮಾೞ್ವಾರರಿಗೆ ಸರಿಸಾಟಿಯಿಲ್ಲ)
ಸಕಲ ವೇದಗಳ ಸಾರವನ್ನು ವಿಸ್ತಾರವಾಗಿ ವಿವರಣೆ ಮಾಡಿದ ತಿರುವಾಯ್ಮೊೞಿಗೆ ಎಣೆಯುಂಟೇ?
ನಮಗೆ ಆೞ್ವಾರರನ್ನು ಕೊಟ್ಟ ತಿರುಕ್ಕುರುಗೂರಿಗೆ ಯಾವುದಾದರೂ ಸ್ಥಳ ಸಮವುಂಟೇ?
[ಈ ದಿವ್ಯದೇಶದಲ್ಲಿ ಆದಿನಾಥ ಪೆರುಮಾಳ್ ಮತ್ತು ನಮ್ಮಾೞ್ವಾರಿಗೆ ಸಮನಾದ ಪ್ರಾಮುಖ್ಯತೆ ಕೊಟ್ಟಿರುತ್ತಾರೆ. ಈ ದಿವ್ಯದೇಶದಲ್ಲಿ ಎಂಪೆರುಮಾನರ ಸರ್ವಶ್ರೇಷ್ಠತೆ,ಅರ್ಚಾವತಾರದಲ್ಲಿ ಕಾಣಸಿಗುವುದು ಮತ್ತು ನಮ್ಮಾೞ್ವಾರರ ಹುಟ್ಟುಸ್ಥಳವಾಗಿದೆ.
ಎಂಪೆರುಮಾನಾರಾದ ಭಗವದ್ ಶ್ರೀ ರಾಮಾನುಜರ ಅವತಾರದ ೪೦೦೦ ವರ್ಷಗಳ ಹಿಂದೆಯೇ ಅವರ ದೈವಿಕ ವಿಗ್ರಹವನ್ನು ನಮ್ಮಾೞ್ವಾರ್ ಅವರು ಅನುಗ್ರಹಿಸಿ ಈ ಸ್ಥಳದಲ್ಲಿ ಅಸ್ತಿತ್ವಕ್ಕೆ ತಂದರು.
ಇದೇ ದಿವ್ಯಕ್ಷೇತ್ರದಲ್ಲಿ ಶ್ರೀ ಭಗವದ್ ರಾಮಾನುಜರ ಮರುಜನ್ಮದಲ್ಲಿ ಶ್ರೀ ಮಣವಾಳ ಮಾಮುನಿ ಅವತರಿಸಿದ್ದರು. ಇಂತಹ ಒಂದು ಸುಪ್ರಸಿದ್ಧ ಕ್ಷೇತ್ರ ಮತ್ತೆಲ್ಲೂ ಕಾಣಸಿಗದು. ಈ ರೀತಿಯಲ್ಲಿ ಈ ಕ್ಷೇತ್ರವು ಎಂಪೆರುಮಾನರಿಗೆ, ಆೞ್ವಾರರಿಗೆ ಮತ್ತು ಆಚಾರ್‍ಯರಿಗೆ ಕೀರ್ತಿಯನ್ನು ತಂದುಕೊಟ್ಟು, ಮೂರುವಿಧದಲ್ಲಿ (ಮೂರು ಪಟ್ಟು) ಅದು ಶ್ರೇಷ್ಠವಾಗಿದೆ]
ನಮ್ಮಾೞ್ವಾರರು ಆೞ್ವಾರರಿಗೆಲ್ಲಾ ಮುಖ್ಯಸ್ಥರಾದವರು. ಅವರನ್ನು ಜ್ಞಾನ ಮತ್ತು ಭಕ್ತಿಯಲ್ಲಿ ಮೀರಿದವರೇ ಇಲ್ಲ. ಅವರು ನಾಲ್ಕು ದಿವ್ಯಪ್ರಬಂಧವನ್ನು ರಚಿಸಿದ್ದಾರೆ. ಅವುಗಳು ತಿರುವಿರುತ್ತಮ್, ತಿರುವಾಸಿರಿಯಮ್  ಪೆರಿಯ ತಿರುವಂದಾದಿ ಮತ್ತು ತಿರುವಾಯ್ಮೊೞಿ. ಈ ನಾಲ್ಕರಲ್ಲಿ ತಿರುವಾಯ್ಮೊೞಿಯನ್ನು ನಮ್ಮ ಪೂರ್ವಾಚಾರ್‍ಯರು ಹೆಚ್ಚು ಪ್ರಶಂಸಿಸಿದ್ದಾರೆ. ಈ ತಿರುವಾಯ್ಮೊೞಿಯು ಸಾಮವೇದಕ್ಕೆ ಸಮನಾಗಿ ಪೂರ್ವಾಚಾರ್‍ಯರಿಂದ ಪ್ರಶಂಸೆಗೆ ಒಳಪಟ್ಟು ಬಹಳವಾಗಿ ಆನಂದಿಸಲ್ಪಟ್ಟಿದೆ.
ಈ ತಿರುವಾಯ್ಮೊೞಿಯು, ದಿವ್ಯ ಮಹಾಮಂತ್ರವಾಗಿರುವ, ಮಂತ್ರರತ್ನವೆಂದೇ ಪ್ರಸಿದ್ಧವಾಗಿರುವ ದ್ವಯ ಮಹಾಮಂತ್ರದ ವಿಸ್ತಾರರೂಪ ವಿವರಣೆಯಾಗಿದೆ.
ಈ ಪ್ರಬಂಧಕ್ಕೆ ಅನೇಕ ವ್ಯಾಖ್ಯಾನಗಳಿವೆ. ಆ ವ್ಯಾಖ್ಯಾನಗಳ ಬಗ್ಗೆ ಶ್ರೀ ಮಣವಾಳ ಮಾಮುನಿಗಳು ಉಪದೇಶ ರತ್ನಮಾಲೆಯ 39ನೇ ಪಾಸುರದಲ್ಲಿ ಉಲ್ಲೇಖಿಸಿದ್ದಾರೆ.

ಪಿಳ್ಳಾನ್ ನಞ್ಜೀಯರ್ ಪೆರಿಯವಾಚ್ಚಾನ್ ಪಿಳ್ಳೈ
ತೆಳ್ಳಾರ್ ವಡಕುತ್ತಿರಿವೀದಿ ಪ್ಪಿಳ್ಳೈ
ಮಣವಾಳ ಯೋಗಿ ತಿರುವಾಯ್ಮೊೞಿಯೈ ಕ್ಕಾತ್ತ
ಗುಣವಾಳರ್ ಎನ್‍ಱು ನೆಞ್ಜೇ ಕೂಱು ॥

ಓ, ಹೃದಯವೇ! ಎಂಪೆರುಮಾನಾರರ ಮಗನಂತಿರುವ ತಿರುಕ್ಕುರುಗೂರ್ ಪಿರಾನ್ ಪಿಳ್ಳಾನ್, ಪರಾಶರ ಭಟ್ಟರ ಶಿಷ್ಯನಾದ ವೇದಾಂತಿ ನಂಜೀಯರ್, ವ್ಯಾಖ್ಯಾನ ಚಕ್ರವರ್ತಿ ಎಂದೇ ಪ್ರಸಿದ್ಧರಾಗಿರುವ ಪೆರಿಯವಾಚ್ಚಾನ್ ಪಿಳ್ಳೈ, ನಂಪಿಳ್ಳೈಅವರ ಶಿಷ್ಯರಾದ ಮತ್ತು ಸ್ಫುಟವಾಗಿ ಜ್ಞಾನವನ್ನು ಹೊಂದಿರುವ ವಡಕ್ಕು ತಿರುವೀದಿ ಪಿಳ್ಳೈ, ಪೆರಿಯವಾಚಾನ್ ಪಿಳ್ಳೈ ಅನುಗ್ರಹಿಸಿರುವ ವಾದಿ ಕೇಸರಿ ಅೞಗಿಯ ಮಣವಾಳ ಜೀಯರ್ ಇವರೆಲ್ಲಾ ನಮ್ಮಾೞ್ವಾರ್ ದಿವ್ಯನುಡಿಗಳಿಂದ ಆದ ತಿರುವಾಯ್ಮೊೞಿಗೆ ವ್ಯಾಖ್ಯಾನ ಬರೆದಿರುತ್ತಾರೆ. ನಮ್ಮ ಸಂಪ್ರದಾಯಕ್ಕೇ ಬೇರಿನಂತಿರುವ ದ್ವಯ ಮಹಾಮಂತ್ರದ ವಿಸ್ತಾರರೂಪ ವಿವರಣೆಯಾದ ತಿರುವಾಯ್ಮೊೞಿಗೆ ವ್ಯಾಖ್ಯಾನ  ಬರೆದಿರುತಾರೆ. ಈ ಶ್ರೇಷ್ಠವಾದ ವ್ಯಕ್ತಿತ್ವವನ್ನು ಹೊಂದಿರುವ ಪ್ರಸಿದ್ಧರು ತಿರುವಾಯ್ಮೊೞಿಯನ್ನು ಕಾಪಾಡಿದ್ದಾರೆ ಮತ್ತು ಪೋಷಿಸಿದ್ದಾರೆ. ಅವರೆಲ್ಲಾ ಬಹುಕಾಲ ಬಾಳಲಿ ಎಂದು ಮಣವಾಳ ಮಾಮುನಿಗಳು ಕೊಂಡಾಡಿದ್ದಾರೆ.
ಅದಕ್ಕೆ ಸೇರಿದಂತೆ , ಅೞಗಿಯ ಮಣವಾಳ ಪ್ಪೆರುಮಾಳ್ ನಾಯನಾರ್ ಆಚಾರ್‍ಯ ಹೃದಯದಲ್ಲಿ ನಮ್ಮಾೞ್ವಾರರ ಮತ್ತು ತಿರುವಾಯ್ಮೊೞಿಯ ವಿಶೇಷತೆಯನ್ನು   ಶ್ರೇಷ್ಠತೆಯನ್ನೂ 37ನೇ ಚೂರ್ಣಿಕೆಯಲ್ಲಿ ವಿವರಿಸಿದ್ದಾರೆ. ‘ಸಂಧಂಗಳ್ ಆಯಿರಮುಮ್ ಅಱಿಯ ಕಟ್ಟ್ರು ವಲ್ಲಾರಾನಾಲ್ ವೈಷ್ಣವ ಸಿದ್ಧಿ’. ಯಾರು ಈ ತಿರುವಾಯ್ಮೊೞಿಯನ್ನು ಪೂರಾ ಕಲಿತು ಆಚರಣೆಯಲ್ಲಿ ತರುತ್ತಾರೋ ಅವರೇ ನಿಜವಾದ ‘ಶ್ರೀ ವೈಷ್ಣವ’ ಎಂದು ಇದರ ಅರ್ಥ.
ಇದರಿಂದ , ನಾವು ಸಂಪೂರ್ಣರೀತಿಯಲ್ಲಿ ಶ್ರೀವೈಷ್ಣವರಾಗಬೇಕಾದರೆ , ತಿರುವಾಯ್ಮೊೞಿಯನ್ನು ಕಲಿಯಬೇಕಾಗುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ, ಎಲ್ಲವನ್ನೂ ಆಚಾರ್‍ಯರ ಮುಖಾಂತರ ಕಲಿಯಬೇಕು.
ಪೂರಾ ತಿರುವಾಯ್ಮೊೞಿಯನ್ನು ಒಂದೇ ದಿನದಲ್ಲಿ ಹೇಳುವುದು ಅಸಾಧ್ಯವೆನಿಸಿದರೆ, ಕೋಯಿಲ್ ತಿರುವಾಯ್ಮೊೞಿ – ಮುಖ್ಯವಾದ ಪದಿಗೆಗಳ ಸಂಗ್ರಹ – ಇದನ್ನಾದರೂ ನಮ್ಮ ಪೂರ್ವಾಚಾರ್ಯರು ಸಿದ್ಧಪಡಿಸಿದ ರೀತಿಯಲ್ಲಿ ಪಠಿಸಬೇಕು. ಸ್ವಲ್ಪ ಪದಿಗೆಗಳಲ್ಲಿ, ಆಯಾ ಪ್ರದೇಶಕ್ಕನುಸಾರವಾಗಿ ವ್ಯತ್ಯಾಸಗಳು ಕಂಡುಬರುತ್ತವೆ. ನಾವು ಬಹುತೇಕ ಪ್ರದೇಶಗಳಲ್ಲಿ ಸಾಮಾನ್ಯವಾಗಿರುವ ಪದಿಗೆಗಳನ್ನು ಕಂಡುಹಿಡಿದು ಅವುಗಳ ಸರಳ ವಿವರಣೆಯನ್ನು ನಮ್ಮ ಪೂರ್ವಾಚಾರ್‍ಯರ ವ್ಯಾಖ್ಯಾನದ ಸಹಾಯದಿಂದ ಮಾಡಿರುತ್ತೇವೆ.

ನಮ್ಮಾೞ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/05/koyil-thiruvaimozhi-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment