ತಿರುವಾಯ್ಮೊಮೊೞಿ – ಸರಳ ವಿವರಣೆ – 9.10 – ಮಾಲೈನಣ್ಣಿ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 8.10 – ನೆಡುಮಾಱ್ಕು


ಆಳ್ವಾರರು ಎಂಪೆರುಮಾನರಿಂದ ಅಗಲಿಸಲ್ಪಟ್ಟು ತುಂಬಾ ಸಂಕಟ ಮತ್ತು ಕಳವಳಗೊಂಡಿದ್ದರು. ಅಂತಹ ಆಳ್ವಾರರಿಗೆ ಸಮಾಧಾನ ಪಡಿಸಲು ಎಂಪೆರುಮಾನರು ತಮ್ಮ ದಿವ್ಯ ಅರ್ಚ್ಚಾ ರೂಪವನ್ನು ತಿರುಕಣ್ಣಪುರದಲ್ಲಿ ಸ್ಥಾಪನೆ ಮಾಡಿದ್ದರು. ಅಲ್ಲಿ ಎಂಪೆರುಮಾನರು ಎಲ್ಲರಿಗೂ ಸುಲಭವಾಗಿ ದರ್ಶನ ಕೊಡುತ್ತಿದ್ದರು ಮತ್ತು ಆಳ್ವಾರರಿಗೆ ಅವರ ಜೀವನ ಅವಧಿ ಮುಗಿದ ಮೇಲೆ ಎಂಪೆರುಮಾನರನ್ನು ಸಮೀಪಿಸುವ ಭಾಗ್ಯವನ್ನು ಖಾತರಿಯಾಗಿ ಹೇಳಿದ್ದರು. ಈ ಬಗ್ಗೆ ಯೋಚಿಸುವಾಗ ಆಳ್ವಾರರು ಈ ಪದಿಗೆಯಲ್ಲಿ ಸಂತೋಷವಾಗಿ ಹಾಡಿದ್ದಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಸಂಕ್ಷಿಪ್ತವಾಗಿ ಶರಣಾಗತಿಯನ್ನು ಈ ಪಾಸುರದಲ್ಲಿ ವಿವರಿಸಿದ್ದಾರೆ. “ ನಿಮ್ಮ ಎಲ್ಲಾ ದುಃಖಗಳನ್ನು ದೂರಮಾಡಲು ಕರುಣೆಯಿಂದ ತಿರುಕಣ್ಣಪುರದಲ್ಲಿ ನಿಂತಿರುವ ಎಂಪೆರುಮಾನರಿಗೆ ಶರಣಾಗತಿಯನ್ನು ಮಾಡಿ”.

ಮಾಲೈ ನಣ್ಣಿ ತ್ತೊೞುದೆೞುಮಿನೋ ವಿನೈಕೆಡ
ಕಾಲೈ ಮಾಲೈ ಕಮಲಮಲರಿಟ್ಟು ನೀರ್,
ವೇಲೈ ಮೋದುಮ್ ಮದಿಳ್ ಶೂೞ್ ತಿರುಕ್ಕಣ್ಣಪುರತ್ತು,
ಆಲಿನ್ಮೇಲಾಲ್ ಅಮರ್ನ್ದಾನ್ ಅಡಿಯಿಣೈಗಳೇ ॥


ಎಂಪೆರುಮಾನರು ವಟತಳಶಾಯಿಯಾಗಿ ಇಡೀ ವಿಶ್ವವನ್ನೇ ರಕ್ಷಿಸುತ್ತಿದ್ದಾರೆ. ಏರುತ್ತಿರುವ ಸಮುದ್ರದ ಅಲೆಗಳು ಅಪ್ಪಳಿಸುತ್ತಿರುವ ಕೋಟೆಯಿಂದ ಆವೃತ್ತವಾಗಿರುವ ತಿರುಕ್ಕಣ್ಣಪುರಮ್ ನಲ್ಲಿ ಅಗದಿತಗಟನಾ ಸಾಮರ್ಥ್ಯಮ್ ಹೊಂದಿರುವ ಎಂಪೆರುಮಾನರು ವಾಸವಾಗಿದ್ದಾರೆ. ಅಂತಹ ಎಂಪೆರುಮಾನರ ದಿವ್ಯ ಪಾದಗಳಿಗೆ ವಿಶಿಷ್ಟವಾದ ಕಮಲದ ಹೂಗಳಿಂದ, ಹಗಲು ರಾತ್ರಿಯೆಂದು ವ್ಯತ್ಯಾಸವಿಲ್ಲದೆ ಅರ್ಪಿಸುವವರ , ಆನಂದವನ್ನು ಹೊಂದಲು ಅಡ್ಡಿಯಾಗುವ ಸಂಕಟವು ಬಗೆಹರಿದು , ಅವರು ಮೇಲಕ್ಕೆ ಭಗವಂತನಿಂದ ಎತ್ತಲ್ಪಟ್ಟು ‘ಬದ್ಧಾಂಜಲಿಪುಟಾಃ’ ಎನ್ನುವಂತೆ ಅವನ ಸೇವೆಗೆ ಸರಿಸಾಟಿಯಾದ ಕಾರ್ಯದಲ್ಲಿ ಮುಳುಗುತ್ತಾರೆ.
ಆಲಿಲ್ ಮೇಲಾಲ್ – ಅಂದರೆ ಎಲೆಯ ಮೇಲ್ಭಾಗದಲ್ಲಿ , ಆಲ್ – ಎಂದರೆ ಇಲ್ಲಿ ಶಬ್ದ ಎಂದು ಮಾತ್ರ ಅರ್ಥ .

ಎರಡನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ಸಾಕಷ್ಟು ಸುರಕ್ಷಿತವಾದ ತಿರುಕಣ್ಣಪುರವನ್ನು ನೆನೆದು ಸಮಾಧಾನವನ್ನು ಹೊಂದು. ‘ ದಿವ್ಯ ಪಾದಗಳಿಗೆ ಎಂತಹ ಆಪತ್ತು, ವಿಪತ್ತು ಬರುವುದೋ ಏಕೆಂದರೆ , ಲೌಕಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವವರು ಆ ಪಾದಗಳಿಗೆ ಶರಣು ಹೊಂದುತ್ತಾರೆ’. ಬದಲಾಗಿ ಅಂತಹ ಪಾದಗಳಿಗೆ ಏನೂ ಚಿಂತೆಯ ಭಾರವಿಲ್ಲದೇ ಶರಣಾಗು.” ಎಂದು.

ಕಳ್ಳವಿೞುಮ್ ಮಲರಿಟ್ಟು ನೀರಿಱೈಞ್ಜುಮಿನ್,
ನಳ್ಳಿ ಶೇರುಮ್ ವಯಲ್ ಶೂೞ್ ಕಿಡಙ್ಗಿನ್ ಪುಡೈ,
ವೆಳ್ಳಿಯೇಯ್‍ನ್ದ ಮದಿಳ್ ಶೂೞ್ ತಿರುಕ್ಕಣ್ಣಪುರಮ್,
ಉಳ್ಳಿ, ನಾಳುಮ್ ತೊೞುದೆೞುಮಿನೋ ತೊಣ್ಡರೇ ॥


ನಿನಗೆ ಆನಂದಿಸಬೇಕೆಂದು ಆಸೆಯಿದ್ದರೆ, ಜೇನು ತುಂಬಿರುವ ಹೂಗಳಿಂದ ಭಗವಂತನನ್ನು ಪೂಜಿಸು. ತಿರುಕ್ಕಣ್ಣಪುರಮ್ ಸುತ್ತಲೂ ಭದ್ರವಾದ ಬೆಳ್ಳಿಯ ಬಣ್ಣದ ಕೋಟೆಯಿಂದ ಆವೃತ್ತವಾಗಿದೆ. ಆ ಕೋಟೆಯು ಮತ್ತೆ ಕಂದರಗಳಿಂದ ಆವೃತ್ತವಾಗಿದೆ. ಆ ಕಂದರಗಳು ಮತ್ತೆ ಹೆಣ್ಣು ವೃಶ್ಚಿಕಗಳಿಂದ ತುಂಬಿರುವ ಗದ್ದೆಗಳಿಂದ ಆವೃತ್ತವಾಗಿದೆ. ಅವನ ಅನುಭವ ಪಡೆಯುವುದರಿಂದ ಸಿಗುವ ಆನಂದವನ್ನು ವ್ಯಕ್ತಪಡಿಸಲು ಜೋರಾಗಿ ಶಬ್ದಗಳಿಂದ ಹಾಡಿ ಅವನನ್ನು ಪೂಜಿಸು.
ಇರೈಞ್ಜುಮಿನ್ – ಇದರೊಂದಿಗೆ ‘ಅಡಿ ಇಣೈ’ ನನ್ನೂ ಹಿಂದಿನ ಪಾಸುರದಿಂದ ಸೇರಿಸಿ ಹೇಳಬೇಕು. ಅಂದರೆ ಪರಮಪದ ಎಂದು ಅರ್ಥ.
ವೆಳ್ಳಿ ಏಯ್‍ನ್ದ – ಶುಕ್ರ ಗ್ರಹದವರೆಗೂ ಏರುವ ಎಂದು ಅರ್ಥ. ಅದು ಬೆಳ್ಳಿಯ ಬಣ್ಣದ ಕೋಟೆಯೂ ಆಗಿರಬಹುದು.

ಮೂರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಓಹ್! ಆಸೆಯುಳ್ಳವರೇ! ಅನನ್ಯಪ್ರಯೋಜನರಾಗಿ (ಕೈಂಕರ್‍ಯಕ್ಕೆ ಹೊರತಾಗಿ ಏನನ್ನೂ ಅಪೇಕ್ಷೆ ಪಡದೆ), ಆಧ್ಯಾತ್ಮದ ಮತ್ತು ಲೌಕಿಕ ವಿಷಯಗಳಿಗೆ ನಾಯಕನಾದ, ಮತ್ತು ಕರುಣೆಯಿಂದ ತಿರುಕ್ಕಣ್ಣಪುರದಲ್ಲಿ ನಿಂತಿರುವ ಎಂಪೆರುಮಾನರಿಗೆ ಶರಣಾಗತರಾಗಿ , ನಿಮ್ಮ ದುಃಖಗಳನ್ನು ದೂರಮಾಡಿಕೊಳ್ಳಿ. “

ತೊಣ್ಡರ್ ನುಮ್ ತಮ್ ತುಯರ್ ಪೋಗ ನೀರ್ ಏಕಮಾಯ್,
ವಿಣ್ಡು ವಾಡಾ ಮಲರಿಟ್ಟು ನೀರಿಱೈಞ್ಜುಮಿನ್,
ವಣ್ಡು ಪಾಡುಮ್ , ಪೊೞಿಲ್ ಶೂೞ್ ತಿರುಕ್ಕಣ್ಣಪುರತ್ತು,
ಅಣ್ಡ ವಾಣನ್, ಅಮರರ್ ಪೆರುಮಾನೈಯೇ ॥


ಎಂಪೆರುಮಾನರು ನಿತ್ಯಸೂರಿಗಳಿಂದ ದಿನವೂ ಆನಂದಿಸಲ್ಪಡುವವರು ಮತ್ತು ಅವರು ಪರಮಪದದಲ್ಲಿ ವಾಸವಾಗಿರುವರು. ಅವರು ಈಗ ಆನಂದದಿಂದ ಝೇಂಕರಿಸುವ ದುಂಬಿಗಳಿಂದ ತುಂಬಿರುವ ತೋಟಗಳಿಂದ ಆವೃತ್ತವಾದ ತಿರುಕ್ಕಣ್ಣಪುರದಲ್ಲಿ ವಾಸವಾಗಿರುವರು. ಓಹ್! ನೀವು ಎಲ್ಲಾ ಕೈಂಕರ್‍ಯ ಪರರಾಗಿರುವವರು, ಈಗ ತಾನೇ ಅರಳಬೇಕಾಗಿರುವ ಪುಷ್ಪಗಳಿಂದ ಪೂಜಿಸಿ , ಅವನನ್ನು ಆನಂದಿಸಲಾರದ ದುಃಖದಿಂದ ಪರಿಹಾರ ಹೊಂದಿ , ಎಲ್ಲರೂ ಒಂದೇ ಗುರಿಯನ್ನು ಹೊಂದಿ, ನಿಮ್ಮ ನಿಮ್ಮ ‘ಶೇಷತ್ವಮ್‍’ ಗೆ ಸರಿಹೊಂದುವಂತೆ ಅವನನ್ನು ಪೂಜಿಸಿ.

ನಾಲ್ಕನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ತಿರುಕ್ಕಣ್ಣಪುರದಲ್ಲಿರುವ ಎಂಪೆರುಮಾನರನ್ನು ನಪ್ಪಿನ್ನೈ ಪಿರಾಟ್ಟಿಯ ಪುರುಷಕಾರಮ್ (ಶಿಫಾರಸ್ಸು) ನಿಂದ ಸಮೀಪಿಸಿ.”
ಮಾನೈ ನೋಕ್ಕಿ ಮಡಪ್ಪಿನ್ನೈತನ್ ಕೇಳ್ವನೈ,
ತೇನೈ ವಾಡಾ ಮಲರಿಟ್ಟು ನೀರಿಱೈಞ್ಜುಮಿನ್,
ವಾನೈಯುನ್ದು ಮದಿಳ್ ಶೂೞ್ ತಿರುಕ್ಕಣ್ಣಪುರಮ್,
ತಾನ್ ನಯನ್ದ ಪೆರುಮಾನ್ ಶರಣಾಗುಮೇ ॥


ಎಂಪೆರುಮಾನರನ್ನು ಎಲ್ಲರೂ ಹೊಸ ಹೂವುಗಳಿಂದ ಪೂಜಿಸಿ, ಅವರು ನಪ್ಪಿನ್ನೈ ಪಿರಾಟ್ಟಿಯ ಪ್ರಿಯವಾದ ನಾಯಕರು. ಅವರು ಎಲ್ಲಾ ಗುಣಗಳಲ್ಲೂ ಪರಿಪೂರ್ಣರು. ಜಿಂಕೆಯನ್ನೂ ನಾಚಿಸುವಂತಹ ಕಣ್ಣುಗಳನ್ನು ಹೊಂದಿದ್ದಾರೆ. ಸರ್ವೇಶ್ವರನು ಆಶ್ರಯದಾತನು ನಿಮ್ಮ ಪೂಜೆಯನ್ನು ಯಾವಾಗಲೂ ಸ್ವೀಕರಿಸುವನು. ಬೃಹದಾಕಾರವಾಗಿರುವ ಆಕಾಶಕ್ಕೆ ಚಾಚಿಕೊಂಡ ಕೋಟೆಯಿಂದ ಆವೃತ್ತವಾಗಿರುವ ತಿರುಕ್ಕಣ್ಣಪುರದಲ್ಲಿ ಅವನು ತನ್ನ ಇಚ್ಛೆಯಿಂದಲೇ ನಿಂತಿದ್ದಾನೆ.
ಇಲ್ಲಿ ‘ತೇನೈ ವಾಡಾ ಮಲರ್’ ಎಂದರೆ ಯಾವಾಗಲೂ ಜೇನನ್ನು ಸೂಸುವ, ಬಾಡದ ಹೂವು ಎಂದು ಅರ್ಥ.

ಐದನೆಯ ಪಾಸುರಮ್ :
ಆಳ್ವಾರರು ಹೇಗೆ ಎಂಪೆರುಮಾನರು ಕರುಣೆಯಿಂದ ಭಕ್ತಿಯೋಗದಿಂದ ಶರಣಾಗತಿಯಾಗಲು ಆಗದಿರುವ ಭಕ್ತರಿಗೂ ಮುಕ್ತಿಯನ್ನು ಕೊಡುತ್ತಾರೆ ಮತ್ತು ಅವರಿಗೆ ತನ್ನ ದಿವ್ಯ ಪಾದಗಳನ್ನು ಉಪಾಯವಾಗಿ (ದಾರಿಯಾಗಿ) ಹಿಡಿದುಕೊಳ್ಳಲು ನೀಡುತ್ತಾರೆ ಎಂಬುದನ್ನು ಕರುಣೆಯಿಂದ ವಿವರಿಸಿದ್ದಾರೆ.
ಶರಣಮಾಗುಮ್ ತನತಾಳ್ ಅಡೈನ್ದಾರ್ಕ್ಕೆಲ್ಲಾಮ್,
ಮರಣಮಾನಾಲ್ ವೈಕುನ್ದಮ್ ಕೊಡುಕ್ಕುಮ್ ಪಿರಾನ್,
ಅರಣಮೈನ್ದ ಮದಿಳ್ ಶೂೞ್ ತಿರುಕ್ಕಣ್ಣಪುರ ,
ತ್ತರಣಿಯಾಳನ್ , ತನದನ್ಬರ್ಕ್ಕು ಅನ್ಬಾಗುಮೇ ॥


ತಮ್ಮ ಕೊನೆಯ ಕ್ಷಣಗಳಲ್ಲಿ ಅವನ ದಿವ್ಯ ಪಾದಗಳಿಗೆ ಪ್ರಪತ್ತಿ (ಶರಣಾಗತಿ) ಯನ್ನು ಮಾಡಿದವರಿಗೆ ಶ್ರೇಷ್ಠ ಆಶ್ರಯದಾತನಾಗಿ, ಅವರಿಗೆ ಉಪಾಯವೂ ತಾನೇ ಆಗಿ, ಪರಮಪದದ ವಾಸಸ್ಥಾನಕ್ಕೆ , ಎಲ್ಲಿಂದ ಮತ್ತೆ ಹಿಂದಿರುಗಿ ಬರಲು ಸಾಧ್ಯವಿಲ್ಲವೊ ಅಲ್ಲಿಗೆ ಕರೆದೊಯ್ಯುತ್ತಾನೆ. ಅಂತಹ ಎಂಪೆರುಮಾನರು ಭದ್ರವಾದ ಕೋಟೆಯಿಂದ ಸುರಕ್ಷಿತವಾದ ತಿರುಕ್ಕಣ್ಣಪುರದಲ್ಲಿ ಭೂಮಿಯನ್ನು ರಕ್ಷಿಸಲು ನಿಂತಿದ್ದಾರೆ. ಯಾರಿಗೆ ಅಂತಹ ಎಂಪೆರುಮಾನರ ದಿವ್ಯ ಪಾದಗಳ ಮೇಲೆ ಪ್ರೇಮವಿದೆಯೋ, ಅವರ ಬಗ್ಗೆಯೂ ಎಂಪೆರುಮಾನರು ಪ್ರೇಮದ ಚಿಹ್ನೆಯಾಗುತ್ತಾರೆ. ಅವರಿಗೆ ತಮ್ಮ ದಿವ್ಯ ಪಾದಗಳನ್ನೇ ಆಸರೆಯಾಗಿ, ಮಾಧ್ಯಮವಾಗಿ ನೀಡುತ್ತಾರೆ.
ಶರಣಮ್ ಆಗುಮ್ ತನತ್ತಾಳ್ – ದಿವ್ಯ ಪಾದಗಳು ತಾವೇ ಉಪಾಯವಾಗುವುದು (ಮಾಧ್ಯಮವಾಗುವುದು).
ತರಣಿಯಾಳನ್ – ಶ್ರೀ ಭೂಮಿ ಪಿರಾಟ್ಟಿಯ ಪ್ರಿಯನಾದ ಪತಿ.

ಆರನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ತಿರುಕ್ಕಣ್ಣಪುರದಲ್ಲಿರುವ ಎಂಪೆರುಮಾನರು ತಮ್ಮನ್ನು ಶರಣಾಗತಿಯಾದವರ ತೊಂದರೆಗಳನ್ನು ನಿವಾರಿಸಿ , ಅವರ ಬಗ್ಗೆ ಅಕ್ಕರೆಯನ್ನು ಹೊಂದುತ್ತಾರೆ.”
ಅನ್ಬನಾಗುಮ್ ತನತಾಳ್ ಅಡೈನ್ದಾರ್ಕ್ಕೆಲ್ಲಾಮ್,
ಶೆಮ್ಬೊನ್ ಆಗತ್ತು ಅವುಣನ್ ಉಡಲ್ ಕೀಣ್ಡವನ್,
ನನ್‍ಪೊನ್ ಏಯ್‍ನ್ದ ಮದಿಳ್ ಶೂೞ್ ತಿರುಕ್ಕಣ್ಣಪುರತ್ತು
ಅನ್ಬನ್, ನಾಳುಮ್ ತನಮೆಯ್ಯರ್ಕ್ಕು ಮೆಯ್ಯನೇ ॥


ಎಂಪೆರುಮಾನರು ತಮ್ಮ ದಿವ್ಯ ಪಾದಗಳನ್ನು ಶರಣಾದವರ ಮೇಲೆ ತಾವು ಅಮಿತ ವಾತ್ಸಲ್ಯಕಾರಕರಾಗಿ ಅಪ್ಪಟ ಚಿನ್ನದಿಂದ ಕಟ್ಟಿದ ಕೋಟೆಯಲ್ಲಿರುವ ತಿರುಕ್ಕಣ್ಣಪುರದಲ್ಲಿ ತಮ್ಮ ಇಚ್ಛಾನುಸಾರವಾಗಿ ವಾಸವಾಗಿದ್ದಾರೆ. ಅವರು ಪ್ರಯತ್ನವೇ ಮಾಡದೇ , ರಾಕ್ಷಸನಾದ ಕೆಂಪಾದ ಚಿನ್ನದಂತೆ ಬಣ್ಣವನ್ನು ಹೊಂದಿದ್ದ ಹಿರಣ್ಯನ ದೇಹವನ್ನು ಬಗೆದಿದ್ದಾರೆ. ಯಾರು ಎಂಪೆರುಮಾನರನ್ನೇ ಅಂತಿಮ ಗುರಿಯಾಗಿ ನೆನೆಯುತ್ತಾರೋ, ಅವರನ್ನು ಎಂಪೆರುಮಾನರು ತಮ್ಮ ಅಂತಿಮ ಗುರಿಯಾಗಿ ಪರಿಗಣಿಸುತ್ತಾರೆ.

ಏಳನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ಅನನ್ಯಪ್ರಯೋಜನರಿಗೆ (ಕೈಂಕರ್‍ಯವನ್ನು ಹೊರತು ಏನನ್ನೂ ಅಪೇಕ್ಷಿಸದವರಿಗೆ) ಎಂಪೆರುಮಾನರು ಸುಲಭವಾಗಿ ದೊರಕುತ್ತಾರೆ. ಆದರೆ ಪ್ರಯೋಜನಾಂತರಪರರಿಗೆ (ಬೇರೆ ಪ್ರಯೋಜನವನ್ನು ಅಪೇಕ್ಷಿಸುವವರಿಗೆ), ಅವರ ಆಸೆಗಳನ್ನು ಪೂರೈಸಿ, ಅವರಿಂದ ದೂರವೇ ಉಳಿದುಬಿಡುತ್ತಾರೆ.”

ಮೆಯ್ಯನಾಗುಮ್ ವಿರುಮ್ಬಿ ತ್ತೊೞುವಾರ್ಕ್ಕೆಲ್ಲಾಮ್,
ಪೊಯ್ಯನಾಗುಮ್ ಪುಱಮೇ ತೊೞುವಾರ್ಕ್ಕೆಲ್ಲಾಮ್,
ಶೆಯ್ಯಿಲ್ ವಾಳೈ ಉಗಳುಮ್ ತಿರುಕ್ಕಣ್ಣಪುರತ್ತು
ಐಯನ್, ಆಗತ್ತಣೈಪ್ಪಾರ್ಗಟ್ಕು ಅಣಿಯನೇ ॥


ಯಾರು ಎಂಪೆರುಮಾನರಿಗೆ ಅವನನ್ನೇ ಅಂತಿಮ ಗುರಿಯನ್ನಾಗಿ ತಿಳಿದು ಶರಣು ಹೊಂದುತ್ತಾರೋ, ಅವರಿಗೆ ಎಂಪೆರುಮಾನರು ಅಂತಿಮ ಗುರಿಯಾಗಿ ತಮ್ಮ ಹೊಳೆಯುವ ರೂಪವನ್ನು ತಾವೇ ಸ್ಥಾಪಿಸುತ್ತಾರೆ. ಅವರನ್ನು ಬಿಟ್ಟು ಬೇರೆ ಪ್ರಯೋಜನಗಳಿಗಾಗಿ ಶರಣಾಗತರಾಗುತ್ತಾರೋ, ಅವರಿಗೆ ಆ ವರಗಳನ್ನು ಕೊಟ್ಟು ತಮ್ಮನ್ನು ತಾವು ಅವರಿಂದ ಮರೆ ಮಾಚಿಕೊಳ್ಳುತ್ತಾರೆ. ತಮ್ಮ ಹೃದಯದಲ್ಲಿ ಯಾರು ಅವನನ್ನು ದಾರಿಯಾಗಿ ನೆನೆಯುತ್ತಾರೋ, ಅವರಿಗೆ ಮತ್ತು ಸ್ವಾಭಾವಿಕವಾಗಿ ತಮ್ಮೊಂದಿಗೆ ಸಂಬಂಧವನ್ನು ಹೊಂದಿರುವ ಎರಡೂ ಪಂಗಡದ ವ್ಯಕ್ತಿಗಳಿಗೆ ಅವರು ವಿಶೇಷವಾಗಿ ಸುಲಭವಾಗಿ ಸಿಗುವ , ವಾಳೈ ಮೀನುಗಳು ಸಹಜವಾಗಿ ವಾಸಿಸುವ ಗದ್ದೆಗಳನ್ನು ಹೊಂದಿರುವ, ತಿರುಕ್ಕಣ್ಣಪುರದಲ್ಲಿ ವಾಸವನ್ನು ಹೊಂದಿದ್ದಾರೆ.

ಎಂಟನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ ,”ಸರ್ವೇಶ್ವರನಲ್ಲಿ ಶರಣಾಗತನಾಗು. ಅವನು ನಿಮ್ಮ ಎಲ್ಲಾ ದುಃಖಗಳನ್ನೂ, ಅದಕ್ಕೆ ಮೂಲ ಕಾರಣವಾಗಿರುವ ಸಂಸಾರವನ್ನೂ ತೊಲಗಿಸುತ್ತಾನೆ.”
ಅಣಿಯನಾಗುಮ್ ತನತಾಳ್ ಅಡೈನ್ದಾರ್ಕ್ಕೆಲ್ಲಾಮ್,
ಪಿಣಿಯುಮ್ ಶಾರಾ ಪಿಱವಿ ಕೆಡುತ್ತಾಳುಮ್,
ಮಣಿ ಪೊನ್ ಏಯ್‍ನ್ದ ಮದಿಳ್ ಶೂೞ್ ತಿರುಕ್ಕಣ್ಣಪುರಮ್
ಪಣಿಮಿನ್, ನಾಳುಮ್ ಪರಮೇಟ್ಟಿತನ್ ಪಾದಮೇ ॥


ಯಾರು ಅಂತಿಮವಾದ ಆನಂದಭರಿತವಾದ ಎಂಪೆರುಮಾನರ ದಿವ್ಯ ಪಾದಗಳನ್ನು ಹೊಂದುವರೋ, ಅವರ ಸಾಮೀಪ್ಯದಲ್ಲಿ ಆನಂದಿಸುವನು. ಬೇರೆ ಪ್ರಯೋಜನಗಳು ಎಂದರೆ ನಮ್ಮಲ್ಲಿರುವ ಅನಾರೋಗ್ಯಗಳು ಮಾಯವಾಗುವುದು. ಅವನು ನಮ್ಮ ಜೊತೆ ಸಂಬಂಧಿಸಿರುವ ಹುಟ್ಟನ್ನು ನಿರ್ಮೂಲನೆ ಮಾಡುವನು. ಆದ್ದರಿಂದ ಮತ್ತೊಂದು ಜನ್ಮವನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಮತ್ತು ನಮ್ಮ ಸೇವೆಯನ್ನು ಸ್ವೀಕರಿಸುವನು. ಅಮೂಲ್ಯ ರತ್ನಗಳನ್ನು ಹೊಂದಿರುವ ಮತ್ತು ಚಿನ್ನದಿಂದಲೇ ಕಟ್ಟಿರುವ ಕೋಟೆಯಿಂದ ಸುತ್ತುವರೆಯಲ್ಪಟ್ಟ ತಿರುಕ್ಕಣ್ಣಪುರದಲ್ಲಿ ನಿಂತಿರುವ , ಎಂಪೆರುಮಾನರ ದಿವ್ಯ ಪಾದಗಳಿಗೆ ನಿರಂತರವಾಗಿ ಸೇವೆ ಸಲ್ಲಿಸು. ಅವರು ಪರಮಪದದಲ್ಲಿರುವ ಹಾಗೆಯೇ ಇಲ್ಲಿಯೂ ಇದ್ದಾರೆ. ಅವರ ದಿವ್ಯ ಪಾದಗಳನ್ನು ಆನಂದಿಸು.

ಒಂಬತ್ತನೆಯ ಪಾಸುರಮ್ :
ಆಳ್ವಾರರು ಆನಂದವನ್ನು ಹೊಂದಿ ಹೇಳುತ್ತಾರೆ, “ ನನಗೆ ಯಾರೂ ಆದೇಶವನ್ನು ಕೊಡದೆ, ನಾನು ಎಂಪೆರುಮಾನರಿಗೆ ಶರಣಾಗತಿಯಾದೆ ಮತ್ತು ಆನಂದವನ್ನು ಹೊಂದಿದೆ.”
ಪಾದಮ್ ನಾಳುಮ್ ಪಣಿಯ ತ್ತಣಿಯುಮ್ ಪಿಣಿ,
ಏದಮ್ ಶಾರಾ ಎನಕ್ಕೇಲ್ ಇನಿ ಎನ್‍ಕುಱೈ,
ವೇದನಾವರ್ ವಿರುಮ್ಬುಮ್ ತಿರುಕ್ಕಣ್ಣಪುರತ್ತು
ಆದಿಯಾನೈ, ಅಡೈನ್ದಾರ್ಕ್ಕು ಅಲ್ಲರ್ ಇಲ್ಲೈಯೇ ॥


ಅವನ ದಿವ್ಯ ಪಾದಗಳನ್ನು ಯಾವಾಗಲೂ ಆನಂದಿಸುತ್ತಿದ್ದರೆ, ಮೊದಲಿನ ದುಃಖಗಳೆಲ್ಲವೂ ದೂರವಾಗುವುದು. ನಂತರ ಸಂಕಟ ದುಃಖಗಳು ಬರುವುದೇ ಇಲ್ಲ. ಆದ್ದರಿಂದ ನನಗೆ ಯಾವ ಯೋಚನೆಯೂ ಇಲ್ಲ. ವೇದಗಳೇ ತಮ್ಮ ಜಿಹ್ವೆಗೆ ಚಿಹ್ನೆಯಾಗಿರುವ ಜನಗಳಿಂದ ಬಯಸಲ್ಪಡುವ ತಿರುಕ್ಕಣ್ಣಪುರದಲ್ಲಿ ವಾಸವಾಗಿರುವ , ಎಲ್ಲದಕ್ಕೂ ಮೂಲಕಾರಣವಾಗಿರುವ, ವೇದಗಳಲ್ಲಿ ಮಾತ್ರ ತಿಳಿಯಬಹುದಾದ ಎಂಪೆರುಮಾನರನ್ನು ಯಾರು ಪಡೆಯುತ್ತಾರೋ, ಅವರಿಗೆ ದುಃಖಗಳಿರುವುದಿಲ್ಲ.
ಪಿಣಿ ಮತ್ತು ಈದಮ್ ಎಂದರೆ ಪೂರ್ವಾಗಮ್ (ಶರಣಾಗತಿಯ ಮೊದಲು ಮಾಡಿದ ಪಾಪಗಳು) ಉತ್ತರಾಗಮ್ (ಶರಣಾಗತಿಯ ನಂತರ ಮಾಡಿದ ಪಾಪಗಳು.)

ಹತ್ತನೆಯ ಪಾಸುರಮ್:
ಆಳ್ವಾರರು ಪುನಃ ತಮಗಾದ ಪ್ರಯೋಜನವನ್ನು ಅತೀವ ಸಂತೋಷದಿಂದ ವಿವರಿಸುತ್ತಾರೆ, “ಯಾರಿಗಾದರೂ ಭಕ್ತಿ ಮತ್ತು ಪ್ರಪತ್ತಿಯನ್ನು ಮಾಡಲು ಸಾಧ್ಯವಾಗದಿದ್ದರೆ , ತಮ್ಮ ಎಲ್ಲಾ ದುಃಖಗಳನ್ನೂ ದೂರಮಾಡಿಕೊಳ್ಳಲು ‘ತಿರುಕ್ಕಣ್ಣಪುರಮ್’ ಎಂದರೆ ಸಾಕು. “
ಇಲ್ಲೈ ಅಲ್ಲಲ್ ಎನಕ್ಕೇಲ್ ಇನಿ ಎನ್‍ಕುಱೈ,
ಅಲ್ಲಿ ಮಾದರ್ ಅಮರುಮ್ ತಿರುಮಾರ್ಬಿನನ್,
ಕಲ್ಲಿಲೇಯ್‍ನ್ದ ಮದಿಳ್ ಶೂೞ್ ತಿರುಕ್ಕಣ್ಣಪುರಮ್
ಶೊಲ್ಲ , ನಾಳುಮ್ ತುಯರ್ ಪಾಡು ಶಾರಾವೇ ॥


ಎಲ್ಲಾ ಮಹಿಳೆಯರಿಗಿಂತ ಉತ್ತಮಳಾದ ಮಹಾಲಕ್ಷ್ಮಿಯು ಕಮಲವನ್ನು ತನ್ನ ವಾಸವನ್ನಾಗಿ ಮಾಡಿಕೊಂಡು, ಗಟ್ಟಿಯಾದ ಬಂಡೆಗಳಿಂದ ಕಟ್ಟಿದ ಕೋಟೆಯಿಂದ ಆವರಿಸಲ್ಪಟ್ಟ ತಿರುಕ್ಕಣ್ಣಪುರದಲ್ಲಿ ವಾಸವಾಗಿರುವ ಎಂಪೆರುಮಾನರ ದಿವ್ಯ ವಕ್ಷಸ್ಥಲದಲ್ಲಿ ನಿರಂತರವಾಗಿ ನೆಲೆಸಿದ್ದಾಳೆ. ಆದ್ದರಿಂದ ಯಾರಾದರೂ ‘ತಿರುಕ್ಕಣ್ಣಪುರಮ್’ ಎಂದು ಹೇಳಿದರೆ ಸಾಕು ಅವರ ದುಃಖಗಳೆಲ್ಲವೂ ದೂರವಾಗುತ್ತದೆ. ನನಗೆ ಆ ಆನಂದವನ್ನು ಕಳೆದುಕೊಳ್ಳುವ ದುಃಖದ ಯೋಚನೆಯಿಲ್ಲ. ಈಗ ಏನು ಚಿಂತೆ ನನಗೆ?

ಹನ್ನೊಂದನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ಯಾರು ತಮ್ಮ ತೊಂದರೆಗಳನ್ನು ನಿವಾರಿಸಬೇಕೆಂದು ಆಶಿಸುತ್ತಾರೋ, ಈ ಪದಿಗೆಯನ್ನು ಅವನ ಮೇಲಿನ ಪ್ರೇಮದಿಂದ ಹಾಡಿ ಮತ್ತು ಶರಣಾಗತಿಯನ್ನು ಹೊಂದಿ.”

ಪಾಡುಶಾರಾ ವಿನೈ ಪಟ್ಱಱ ವೇಣ್ಡುವೀರ್,
ಮಾಡನೀಡು ಕುರುಗೂರ್ ಚ್ಚಡಗೋಪನ್, ಶೊಲ್
ಪಾಡಲಾನ ತಮಿೞ್ ಆಯಿರತ್ತುಳ್ ಇಪ್ಪತ್ತುಮ್
ಪಾಡಿ ಆಡಿ , ಪಣಿಮಿನ್ ಅವನ್‍ ತಾಳ್‍ಗಳೇ॥


ಎತ್ತರದ ಅರಮನೆಗಳನ್ನು ಹೊಂದಿರುವ ಆಳ್ವಾರ್ ತಿರುನಗರಿಗೇ ನಾಯಕರಾದ ನಮ್ಮಾಳ್ವಾರರು ಕರುಣೆಯಿಂದ ಸಾವಿರ ಪಾಸುರಗಳನ್ನು ಹೇಳಿದ್ದಾರೆ. ನೀವು ಲೌಕಿಕ ದುಃಖಗಳನ್ನು ದೂರಮಾಡಿಕೊಳ್ಳಬೇಕೆಂದು ಆಶಿಸಿದ್ದರೆ, ಮತ್ತು ಅವುಗಳು ಮತ್ತೆ ನಿಮ್ಮ ಸಮೀಪಕ್ಕೆ ಬರಬಾರದೆಂದು ಬಯಸಿದರೆ, ಆನಂದದಿಂದ ಈ ಹತ್ತು ಪಾಸುರಗಳನ್ನು, ಸಂಗೀತದೊಂದಿಗೆ , ದ್ರಾವಿಡ ಭಾಷೆಯಾದ ತಮಿೞಿನಲ್ಲಿರುವ ಸಾವಿರ ಪಾಸುರದ ಜೊತೆಗೆ ಹಾಡಿ. ಪರಮಾನಂದದಿಂದ ನಲಿದಾಡಿ. ಸುಲಭವಾಗಿ ದಕ್ಕುವ ಸರ್ವೇಶ್ವರನ ದಿವ್ಯ ಪಾದಗಳಿಗೆ ಪೂಜಿಸಿ ಮತ್ತು ಅವುಗಳನ್ನು ಆನಂದಿಸಿ. ಭಗವಂತನನ್ನು ಈ ಪದಿಗೆಯಲ್ಲಿ ಆನಂದಿಸುವವರಿಗೆ, ಅವರ ಕಷ್ಟಗಳು ನಿಶ್ಶೇಷವಾಗಿ ನಿರ್ಮೂಲನವಾಗುತ್ತದೆ.

ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : https://divyaprabandham.koyil.org/index.php/2020/06/thiruvaimozhi-9-10-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org