ಉಪದೇಶ ರತ್ನಮಾಲೈ- ಸರಳ ವಿವರಣೆ ೭ ರಿಂದ ೯ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೭

ಈ ಲೋಕಕ್ಕೆ ಪರಮ ಹಿತ ದಾಯಪಾಲಿಸಿದ ಅವರ ದೈವೀಕ ನಾಮಗಳು ದೃಡವಾಗಿ ಸ್ಥಾಪಿಸಿದ ರೀತಿಯನ್ನು ಅವರು ವಿವರಿಸಿದ್ದಾರೆ.

ಮಱಱಉಳ್ಳ ಆೞ್ವಾರ್ಗಳುಕ್ಕು ಮುನ್ನೇ ವಂದುದಿತ್ತು  
ನಱಱಮಿಳಾಳ್ ನೂಲ್ ಸೈದು ನಾಟ್ಟೈ ಉಯ್ತ್ತ – ಪೆಱಱಿಮೈಯೋರ್ 
ಎನ್ರು ಮುದಲ್ ಆೞ್ವಾರ್ಗಳ್ ಎನ್ನುಂ ಪೆಯರ್ ಇವರ್ಕ್ಕು
ನಿನ್ಱದು ಉಲಗತ್ತೇ ನಿಗೞ್ನ್ದು  
  

ಈ ಮೂವರು ಆೞ್ವಾರ್ಗಳು ಮಿಕ್ಕ ಆೞ್ವಾರ್ಗಳಿಗೆ  ಮುಂದಾಗಿ ಅವತರಿಸಿದ್ದು ಅವರ ಪ್ರಬಂದಗಳನ್ನು ತಮಿಳಿನಲ್ಲಿ ರಚಿಸಿ ಲೋಕವನ್ನು ಸರಿಪಡಿಸಿದರಿಂದ, ಮುದಲ್ ಆೞ್ವಾರ್ಗಳು  ಎಂಬ ಹೆಸರು ಇವರಿಗೆ ದೃಡವಾಗಿ ಸ್ಥಾಪಿಸಲಾಗಿದೆ .

ಪಾಸುರ  ೮

ಕಾಲಾನುಕ್ರಮ ಅವತಾರಾಗಳನ್ನು ಅನುಸರಿಸುವರೆಂದು ಹೇಳಿದ್ದರಿಂದ , ಆಶ್ವಯುಜ (ಐಪ್ಪಸಿ )ಮಾಸದ ನಂತರ, ಅವರು ಕಾರ್ತಿಕ ಮಾಸದಲ್ಲಿ ಅವತರಿಸಿದ ತಿರುಮಂಗೈ ಆೞ್ವಾರರ ಬಗ್ಗೆ ಕರುಣೆಯಿಂದ ಹೇಳಿದ್ದಾರೆ . ತಿರುಮಂಗೈ ಆೞ್ವಾರರ ಶ್ರೇಷ್ಟತೆಯನ್ನು ಎರಡು ಪಾಸುರಗಳಲ್ಲಿ ಅವರು ವಿವರಿಸಿದ್ದಾರೆ. ಮೊದಲನೆಯದಾಗಿ , ತಿರುಮಂಗೈ ಆೞ್ವಾರರು ಅವತರಿಸಿದ ದಿನದ ಶ್ರೇಷ್ಟತೆಯನ್ನು ಹೃದಯಪೂರ್ವಕರಾಗಿ ವಿವರಿಸುತ್ತಾರೆ.

ಪೇದೈ ನೆಂಜೇ ಇನ್ಱೈ  ಪರುಮೈ ಅಱಿಂದಿಲಯೋ 
ಏದು ಪೆರುಮೈ ಇನ್ಱೈಕ್ಕು  ಎನ್ಱು  ಎನ್ನಿಲ್ – ಓದುಗಿನ್ಱೇನ್ 
ವಾಯ್ತ ಪುಗೞ್ ಮಂಗೈಯರ್ ಕೋನ್ ಮಾನಿಲತ್ತಿಲ್ ವಂದುದಿತ್ತ  
ಕಾರತಿಗೈಯಿಲ್ ಕಾರತಿಗೈ ನಾಳ್ ಕಾಣ್

ಓ ! ಅರಿವಿಲ್ಲದ ಮನಸೇ ! ನಿನಗೆ ಈ ದಿನದ ಶ್ರೇಷ್ಟತೆ ತಿಳಿದಿದೆಯೇ ? ನಾನು ಹೇಳುತ್ತೇನೆ ,ಕೇಳು. ಇಂದು ಕಾರ್ತಿಕ ಮಾಸದ ಕೃತ್ತಿಕಾ ನಕ್ಷತ್ರ . ಈ ದಿನದಂದು ಅದ್ಭುತವಾದ ತಿರುಮಂಗೈ ಆೞ್ವಾರರು ಈ ಭೂಲೋಕದಲ್ಲಿ ಅವತರಿಸಿದರು .

ಪಾಸುರ ೯

ತಿರುಮಂಗೈ ಆೞ್ವಾರರಿಗೂ ಹಾಗೂ ನಮ್ಮಾೞ್ವಾರರ ನಡುವೆಯ ಅದ್ಭುತ ಸಂಪರ್ಕವನ್ನು ವಿವರಿಸಿದ್ದಾರೆ. ಈ ದಿನವನ್ನು ಕೊಂಡಾಡುವವರ ದೈವೀಕ ಪಾದಗಳನ್ನು   ಪ್ರಶಂಸಿಸಲು ಅವರ ಮನಸ್ಸಿಗೆ ಸೂಚಿಸುತ್ತಾರೆ.

ಮಾಱನ್ ಪಣಿತ್ತ ತಮಿಳ್ ಮಱೈಕ್ಕು ಮಂಗೈಯರ್ ಕೋನ್
ಆಱಂಗಮ್ ಕೂಱ  ಅವದರಿತ್ತ – ವೀಱುಡೈಯ
ಕಾರ್ತಿಗೈಯಿಲ್ ಕಾರ್ತಿಗೈ ನಾಳ್ ಇನ್ಱು  ಎನ್ಱು  ಕಾದಲಿಪ್ಪಾರ್
ವಾಯ್ತ ಮಲರ್ ತಾಳ್ಗಳ್ ನೆಂಜೇ ವಾೞ್ತ್ತು

ಓ  ಮನಸೇ! ನಾಲ್ಕು ವೇದಗಳಿಗೆ ಸಮನಾದ ನಾಲ್ಕು ಪ್ರಬಂದಗಳನ್ನು ಕರುಣಾಮಯಿ  ನಮ್ಮಾೞ್ವಾರರು ರಚಿಸಿದ್ದಾರೆ. ಈ ನಾಲ್ಕು ವೇದಗಳಿಗೆ ಆರು ಭಾಗಗಳಿರುವಂತೆ , ಕಾರ್ತಿಕ ಮಾಸದ ಕೃತ್ತಿಕಾ ನಕ್ಷತ್ರದ ಈ ಅದ್ಭುತವಾದ ದಿನದಂದು  ಅವತರಿಸಿದ ತಿರುಮಂಗೈ ಆೞ್ವಾರರು, ನಮ್ಮಾೞ್ವಾರರ ಪ್ರಬಂದಗಳಿಗೆ ಆರು ಭಾಗಗಳಂತೆ ಆರು ಪ್ರಬಂದಗಳನ್ನು ರಚಿಸಿರುವರು. ಈ ದಿನವನ್ನು ಬಹು ಇಷ್ಟಪಡುವವರ ದೈವೀಕ ಪಾದಗಳನ್ನು ಹೊಗಳು.

ಮೂಲ : http://divyaprabandham.koyil.org/index.php/2020/06/upadhesa-raththina-malai-7-9-simple/

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

 

Leave a Reply

Your email address will not be published. Required fields are marked *