ತಿರುಪ್ಪಲ್ಲಾಂಡು – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ

pallandu

ಮುದಲಾಯಿರಮ್

ಮಣವಾಳ ಮಾಮುನಿಗಳ್ ಅವರು, ಉಪದೇಶ ರತ್ತಿನಮಾಲೈಯ 19ನೆ ಪಾಶುರದಲ್ಲಿ ತಿರುಪ್ಪಲ್ಲಾಂಡಿನ ಶ್ರೇಷ್ಠತೆಯನ್ನು ಸುಂದರವಾಗಿ ಬಹಿರಂಗಪಡಿಸಿದ್ದಾರೆ.

“ಕೋದಿಲವಾಂ ಆಳ್ವಾರ್ಗಳ್ ಕೂರು ಕಲೈಕ್ಕೆಲ್ಲಾಮ್
ಆದಿ ತಿರುಪ್ಪಲ್ಲಾಂಡು ಆನದವುಮ್ -ವೇದತ್ತುಕ್ಕು
ಓಂ ಎನ್ನುಮ್ ಅದುಪೋಲ್ ಉಳ್ಳದುಕ್ಕೆಲ್ಲಾಮ್ ಶುರುಕ್ಕಾಯ್ ತ್ತಾನ್
ಮಂಗಲಂ ಆನದಾಲ್.”

ಮಣವಾಳ ಮಾಮುನಿಗಳ್ ಅವರ ಧೃಡವಾದ ಅಭಿಪ್ರಾಯವೇನೆಂದರೆ,
ಪ್ರವಣಂ ಹೇಗೆ ಎಲ್ಲಾ ವೇದಗಳಿಗೂ ಸರ್ವಶ್ರೇಷ್ಠವಾದದ್ದು ಹಾಗು ಸಾರವಾಗಿದ್ದೆಯೋ, ಹಾಗೆಯೇ ಆಳ್ವಾರುಗಳ ಅರುಳಿಚ್ಚೆಯ್ಯಲ್ಗಳಿಗೆ ( ಆಳ್ವಾರುಗಳ ದಿವ್ಯ ಪ್ರಬಂಧಗಳನ್ನು ಪಠಿಸುವುದಕ್ಕೆ ಅರುಳಿಚ್ಚೆಯ್ಯಲ್ ಎನ್ನುತ್ತಾರೆ)
ತಿರುಪಲ್ಲಾಂಡು ಸರ್ವಶ್ರೇಷ್ಠವಾದದ್ದು ಹಾಗು ಸಾರವಾಗಿದೆ.ಆದ್ದರಿಂದಲೇ, ಅರುಳಿಚ್ಚೆಯ್ಯಲ್ಗಳನ್ನು ಪಠಿಸಲು ಪ್ರಾರಂಭಿಸುವ ಮುನ್ನ ತಿರುಪಲ್ಲಾಂಡನ್ನು ಪಠಿಸುವುದು.

ಪೆರಿಯಾಳ್ವಾರ್ ಅವರು, ಪಾಂಡ್ಯ ರಾಜನ ಆಸ್ಥಾನದಲ್ಲಿ  ಶ್ರೀಮನ್ ನಾರಾಯಣನ ಪ್ರಾಭಲ್ಯವನ್ನು ಸ್ಥಾಪಿಸಿದಾಗ, ರಾಜ ಅವರನ್ನು ಆನೆಯ ಮೇಲೆ ಕೂರಿಸಿ, ಮೆರವಣಿಗೆ ನಡಿಸಿದನು. ಆಳ್ವಾರಿನ ಇಂತಹ ದೃಷ್ಯವನ್ನು ಕಾಣಲು, ಸಾಕ್ಷಾತ್  ಶ್ರೀಮನ್ ನಾರಾಯಣನು ತನ್ನ ದಿವ್ಯ ಪತ್ನಿಗಳೊಂದಿಗೆ ಗರುಡ ವಾಹನನ ಮೇಲೆ ಪ್ರತ್ಯಕ್ಷನಾದನು! ವೈಕುಂಠದಲ್ಲಿ ಸುಖವಾಗಿದ್ದ ಎಂಪೆರುಮಾನ್ ಹೀಗೆ ಸಂಸಾರಕ್ಕೆ ಇಳಿದಿದ್ದಾನಲ್ಲ ಎಂದು ಚಿಂತೆ ಗೊಂಡು, ಅವನ ಕ್ಷೇಮಕ್ಕಾಗಿ ಪೆರಿಯಾಳ್ವಾರ್ ತಿರುಪ್ಪಲ್ಲಾಂಡು ಸ್ತುತಿಸಿದರು!
ಪೆರಿಯಾಳ್ವಾರ್ ತಮ್ಮ ಅನನ್ಯ ಶ್ರೇಷ್ಠತೆಯಿಂದ, ತಾನು ಮಾತ್ರಕ್ಕೆ ಸ್ತುತಿಸುವುದಲ್ಲದೆ, ಸಂಸಾರಿಗಳು (ಭೌಕ್ತಿಕ ಕ್ಷೇತ್ರದ ನಿವಾಸಿಗಳು) ಕೂಡ ಎಂಪೆರುಮಾನನ್ನು ವೈಭವೀಕರಿಸಿ ತಿರುಪ್ಪಲ್ಲಾಂಡು ಸ್ತುತಿಸುವಂತೆ ಮಾಡಿದರು.

ಈ ಸರಳ ಅನುವಾದವನ್ನು ಪೆರಿಯವಾಚ್ಚಾನ್ ಪಿಳ್ಳೈ ಅವರ ತಿರುಪ್ಪಲ್ಲಾಂಡು ವ್ಯಾಖ್ಯಾನದ ಸಹಾಯದಿಂದ ನಡೆಸಲಾಗಿದೆ.

ತನಿಯನ್

ಗುರುಮುಖಮ್ ಅನದೀಥ್ಯ ಪ್ರಾಹ ವೇದಾನ್ ಅಶೇಶಾನ್
ನರಪತಿ ಪರಿಕ್ಲುಪ್ತಮ್ ಶುಲ್ಕಮಾಧಾತು ಕಾಮಃ
ಶ್ವಶುರಮ್ ಅಮರವಂಧ್ಯಮ್ ರಂಗನಾಥಸ್ಯ ಸಾಕ್ಷಾತ್
ದ್ವಿಜಕುಲತಿಲಕಂ ತಮ್ ವಿಷ್ಣು ಚಿತ್ತಂ ನಮಾಮೀ.

‘ವಿಟ್ಟು ಚಿತ್ತನ್’ ಎಂಬ ಹೆಸರುಗೊಂಡು ,ಗುರು ಮೂಲಕ ಕಲಿಯದೇ, ಆ ತಿರುಮಾಲಿನ(ಎಂಪೆರುಮಾನ್) ಅನುಗ್ರಹದಿಂದಲೇ ಸ್ಪಷ್ಠವಾದ ಜ್ನಾನ ಮತ್ತು ಭಕ್ತಿಯನ್ನು ಪಡೆದ ಪೆರಿಯಾಳ್ವಾರ್ ಅವರು, ಶ್ರೀವಿಲ್ಲಿಪ್ಪುತ್ತೂರಿನ ಎಂಪೆರುಮಾನಿನ ದಿವ್ಯ ದೇವಸ್ಥಾನದ ಸುಧಾರಣೆಗಾಗಿ, ಚಿನ್ನದ ನಾಣ್ಯಗಳ ಉಡುಗೊರೆಯನ್ನು ಗೆಲ್ಲಲು, ದಕ್ಷಿಣ ಮದುರೈಯ ರಾಜ, ಶ್ರೀವಲ್ಲಭ ದೇವನ್ ಅವರ ಆಸ್ಥಾನದ ಪಂಡಿತರ ಸಭೆಗೆ ಹೋಗಿ , ವೇದಗಳಿಂದ ಉಲ್ಲೇಖಿಸುವ ಮೂಲಕ ಎಂಪೆರುಮಾನಿನ ಪ್ರಬಲ್ಯವನ್ನು ಸ್ಥಾಪಿಸಿ, ಚಿನ್ನದ ನಾಣ್ಯಗಳನ್ನು ಗೆದ್ದರು.
ಮುಂದೆ ಅವರು ತನ್ನ ದಿವ್ಯ ಪುತ್ರಿಯಾದ ಆಂಡಾಳನ್ನು ಶ್ರೀ ರಂಗನಾಥನಿಗೆ ವಿವಾಹ ಮಾಡಿಕೊಟ್ಟರು. ಆದ್ದರಿಂದ, ಅವರು ಎಂಪೆರುಮಾನಿನ ಮಾವ ಎಂದು ನಿತ್ಯ ಸೂರಿಗಳಿಂದ ಪೂಜಿಸಲ್ಪಟ್ಟರು. ಅವರು ಬ್ರಾಹ್ಮಣರಲ್ಲಿ( ವೇದಗಳನ್ನು ಕಲಿತು, ಕಲಿಸುವವರು ಬ್ರಾಹ್ಮಣರು) ಅತ್ಯಂತ ಶ್ರೇಷ್ಠರು! ಅಂತಹ ಪೆರಿ ಆಳ್ವಾರಿಗೆ ನನ್ನ ನಮಸ್ಕಾರಗಳು.

ಮಿನ್ನಾರ್ ತಡಮದಿಳ್ ಶೂಳ್ ವಿಲ್ಲಿಪ್ಪುತ್ತೂರ್ ಎನ್ಡ್ರೊರು ಕಾಲ್.
ಶೊನ್ನಾರ್ ಕಳರ್ ಕಮಲಂ ಶೂಡಿನೋಮ್.
ಮುನ್ನಾಲ್ ಕಿಳಿ ಅರುತ್ತಾನ್ ಎನ್ಡ್ರುರೈತ್ತೋಮ್ ಕೀಳ್ ಮಯಿನಿಲ್ ಶೇರುಮ್
ವಳಿ ಅರುತ್ತೋಮ್ ನೆಂಜಮೇ ವಂದು.

“ಓ ! ಹೃದಯವೇ! ಆಭರಣಗಳಂತೆ, ಮಿಂಚಿನಂತೆ ನಮ್ಮ ತಲೆಗಳ ಮೇಲೆ ,ಹೊಳೆಯುವ ಬೃಹತ್ ಗೋಡೆಗಳಿಂದ ಸುತ್ತಲ್ಪಟ್ಟ ‘ಶ್ರೀವಿಲ್ಲಿಪ್ಪುತ್ತೂರ್’ಎಂಬ ಹೆಸರನ್ನು ಉಲ್ಲೇಖಿಸುವರ ಕಮಲ ಪಾದಗಳಿಗೆ ನಮ್ಮ ವಂದನೆಗಳು.”
ಪೆರಿಯಾಳ್ವಾರ್ ರಾಜನ ಆಸ್ಥಾನಕ್ಕೆ ಹೋಗಿ, ತನ್ನ ವಾದಗಳಿಂದ ಅಲ್ಲೇ ಇದ್ದ ಚಿನ್ನದ ನಿಧಿ ಕತ್ತರಿಸಿ ತನ್ನ ಕೈಗಳಿಗೆ ಬಂದು ಬೀಳುವಂತೆ ಮಾಡಿದ ಘಟನೆಯನ್ನು ನೆನೆಪಿಸಿಕೊಂಡು , ಅದರ ಬಗ್ಗೆ ಮಾತನಾಡುವುದರಿಂದ ನಾವು ನಮ್ಮನ್ನು ಕೆಳಮಟ್ಟದ ಸ್ಥಿತಿಯಿಂದ ಉಳಿಸಿಕೊಂಡೆವು.

ಪಾಂಡಿಯನ್ ಕೊಂಡಾಡ ಪಟ್ಟರ್ ಪಿರಾನ್ ವಂದಾನೆಂಡ್ರು
ಈಂಡಿಯ   ಶಂಖಂ ಎಡುತ್ತೂದ.
ವೇಂಡಿಯ ವೇದಂಗಳೋದಿ ವಿರೈಂದು ಕಿಳಿ ಅರುತ್ತಾನ್.
ಪಾದಂಗಳ್ ಯಾಮುಡಯ ಪತ್ತು.

ಪಾಂಡಿಯ ದೇಶದ ರಾಜ, ಶ್ರೀ ವಲ್ಲಭ ದೇವನ್ ಸಂತೋಷದಿಂದ “ಪಟ್ಟರ್ ಪಿರಾನ್ ಇಲ್ಲಿ ಸರ್ಫೋತ್ತ ಜೀವಿಯ ಪ್ರಾಭಲ್ಯವನ್ನು  ಸ್ಥಾಪಿಸಲು ಬಂದಿದ್ದಾರೆ!” “ ಎಂದು ಫೋಷಿಸಿದನು. ರಾಜನ ಆಸ್ಥಾನದ ಪ್ರಜೆಗಳು, ವಿಜಯದ ಸಂಕೇತವಾಗಿ ಶಂಖವನ್ನು ಊದಿದರು. ವೇದಗಳಿಂದ ಅಗತ್ಯವಾದ ಪುರಾವೆಗಳನ್ನು ಒದಗಿಸುವ ಮೂಲಕ, ಪೆರಿ ಅಳ್ವಾರ್ [ಭಟ್ಟರ್ ಪಿರಾನ್] ಅವರು ಶ್ರೀಮನ್ ನಾರಾಯಣನ ಪ್ರಾಭಲ್ಯವನ್ನು ಸ್ಥಾಪಿಸಿದರು. ಅಂತಹ ಪೆರಿಯಾಳ್ವಾರ್ಅವರ ದಿವ್ಯ ಪಾದಗಳು ನಮ್ಮ ಆಶ್ರಯ.

೧.ಪಾಶುರಮ್

ಪೆರಿ ಆಳ್ವಾರನ್ನು ನೋಡಲು, ಅತಿ ಸೌಂದರ್ಯ ಮತ್ತು ಕಲ್ಯಾಣ ಗುಣಗಳು ಹೊಂದಿರುವ ಸಾಕ್ಷಾತ್ ಶ್ರೀಮನ್ ನಾರಾಯಣ ಭೂಲೋಕಕ್ಕೆ ಇಳಿದು ಬಂದದನ್ನು ಕಂಡ ಪೆರಿಯಾಳ್ವಾರ್, ಎಂಪೆರುಮಾನಿಗೆ ಎಲ್ಲಿ ಜನರ ಕಣ್ಣು ದೃಷ್ಟಿ ಬಿದ್ದು ಅವನಿಗೆ ದುರಾದೃಷ್ಟವಾಗಿ ಬಿಡುತ್ತದೆಯೋ ಎಂದು ಹೆದರಿ, ಅವನು ಕಾಲ ಇರುವವರೆಗೂ ಹೀಗೆಯೇ ಸೌಖ್ಯವಾಗಿ ಇರಬೇಕೆಂದು ಎಂಪೆರುಮಾನನ್ನು ವೈಭವೀಕರಿಸುತ್ತಾ ತಿರುಪಲ್ಲಾಂಡಿನ ಮೊದಲನೆಯ ಪಾಶುರವನ್ನು ಹಾಡುತ್ತಾರೆ.

ಪಲ್ಲಾಂಡು ಪಲ್ಲಾಂಡು ಪಲ್ಲಾಯಿರತ್ತಾಂಡು
ಪಲಕೋಟಿ ನೂರಾಯಿರಮ್
ಮಲ್ಲಾಂಡ ತಿನ್ ತೋಳ್  ಮಣಿವಣ್ಣಾ!
ಉನ್ ಸೇವಡಿ ಸೆವ್ವಿ  ತಿರುಕ್ಕಾಪು

“ಕುಸ್ತಿಪಟುಗಳನ್ನು ನಿಯಂತ್ರಿಸಿ ಕೊಲ್ಲುವಂತಹ ಬಲವಾದ ದಿವ್ಯ  ಭುಜಗಳು ಮತ್ತು ಕೆಂಪು ರತ್ನ ವರ್ಣ ಹೊಂದಿರುವ ಓ ಎಂಪೆರುಮಾನ್! ನಿನ್ನ ಕೆಂಪು ದಿವ್ಯ  ಪಾದಗಳಿಗೆ ಕಾಲ ಇರುವವರೆಗೂ ರಕ್ಷಣೆ ಇರಲಿ!”

ಪೆರಿಯಾಳ್ವಾರ್ ಎಂಪೆರುಮಾನನ್ನು ಮಾನವರ ಸಮಯದ ಪ್ರಮಾಣದ ಮೂಲಕ, ನಂತರ ದೇವತೆಗಳ ಸಮಯದ ಪ್ರಮಾಣದ ಮೂಲಕ, ನಂತರ ಬ್ರಹ್ಮನ ಸಮಯದ ಪ್ರಮಾಣದ ಮೂಲಕ ಮತ್ತು ಅಂತಿಮವಾಗಿ, ಅನೇಕ ಬ್ರಹ್ಮರ ಸಮಯದ ಮೂಲಕ ವೈಭವೀಕರಿಸುತ್ತಾರೆ.

ಎರಡನೆಯ ಪಾಶುರದಲ್ಲಿ ಆಳ್ವಾರ್, ನಿತ್ಯವಿಭೂತಿ(ಪರಮಪದಂ) ಮತ್ತು ಲೀಲಾ ವಿಭೂತಿ(ಸಂಸಾರ)ಗಳಲ್ಲಿ ಎಂಪೆರುಮಾನಿನ ಉನ್ನತ ಸ್ಥಾನವನ್ನು ಹೊಗಳುತ್ತಾರೆ.

೨.ಅಡಿಯೋಮೋಡುಮ್ ನಿನ್ನೋಡುಮ್
ಪಿರಿವಿನ್ಡ್ರಿ ಆಯಿರಮ್ ಪಲ್ಲಾಂಡು.
ವಡಿವಾಯ್ ನಿನ್ನ್ ವಲ ಮಾರ್ಬಿನಿಲ್ ವಾಳ್ಗಿನ್ಡ್ರ ಮಂಗೈಯುಮ್ ಪಲ್ಲಾಂಡು.
ವಡಿವಾರ್ ಶೋದಿ ವಲತ್ತುರೈಯುಮ್
ಶುಡರಾಳಿಯುಮ್ ಪಲ್ಲಾಂಡು
ಪಡೈಪೋರ್ ಪುಕ್ಕು ಮುಳಂಗುಮ್
ಅಪ್ಪಾಂಚಜನ್ನಿಯಮುಮ್ ಪಲ್ಲಾಂಡೇ!

ಯಜಮಾನನಾದ ನೀನು ಮತ್ತು ನಿನ್ನ ಸೇವಕರಾದ ನಾವು, ನಮ್ಮಿಬ್ಬರ ಮಧ್ಯೆ ಇರುವ ಸಂಬಂಧವು ಶಾಶ್ವತವಾಗಿ ಉಳಿಯಲಿ!
ಆಭರಣಗಳನ್ನು ಧರಿಸಿಕೊಂಡು, ಸುಂದರವಾಗಿರುವ ಯುವತಿ ,ನಿನ್ನ ಹೃದಯದ ಬಲಗಡೆ ವಾಸಿಸುತ್ತಿರುವ ಪೆರಿಯ ಪಿರಾಟಿ ಮಹಾಲಕ್ಷ್ಮಿ ಅಲ್ಲಿ ಶಾಶ್ವತವಾಗಿರಲಿ!
ನಿನ್ನ ಬಲಗೈಯ್ಯಲ್ಲಿರುವ ಸುಂದರವಾದ ದಿವ್ಯ ಚಕ್ರವು ಶಾಶ್ವತವಾಗಿರಲಿ!
ನಿನ್ನ ಎಡಗೈಯಲ್ಲಿರುವ, ಜೋರಾಗಿ ಗರ್ಜಿಸಿ, ಯುದ್ಧ ಭೂಮಿಗಳಲ್ಲಿರುವ ಶತ್ರುಗಳ ಹೃದಯವನ್ನು ತುಂಡುಗಳಾಗಿ ಹರಿದು ಹಾಕುವ ಪಾಂಚಜನ್ಯವು ಶಾಶ್ವತವಾಗಿರಲಿ!
ಭಕ್ತರನ್ನು ಕೂರಿದಾಗ, ಪೆರಿಯಾಳ್ವಾರ್ ಸಂಸಾರದ ಬಗ್ಗೆ ಉಲ್ಲೇಖಿಸುತ್ತಾರೆ.
ಪೆರಿಯ ಪಿರಾಟಿ, ಪಾಂಚಜನ್ಯ ಮತ್ತು ಚಕ್ರವನ್ನು ಕೂರಿದಾಗ, ಪರಮಪದವನ್ನು ಉಲ್ಲೇಖಿಸುತ್ತಾರೆ.

ಮೂರನೆಯ ಪಾಶುರಮ್. ಈ ಪಾಶುರದಿಂದ ಪ್ರಾರಂಭಿಸಿ, ಮೂರು ಪಾಶುರಗಳಲ್ಲಿ ಪೆರಿಯಾಳ್ವಾರೊ ಮೂರು ತರದ ಜನರನ್ನು ಎಂಪೆರುಮಾನನ್ನು ಹೊಗಳಿ ಹಾಡಲು ಆಹ್ವಾನಿಸುತ್ತಾರೆ.
ಈ ಲೌಕಿಕ ಪ್ರಪಂಚದ ಸುಖ ಸಂತೋಷದ ಅನುಭವದಲ್ಲಿ ಆಸಕ್ತಿ ಇರುವವರು,
ಲೌಕಿಕ ಜೀವನದಲ್ಲಿ ವೈರಾಗ್ಯ ಹೊಂದಿ, ತನ್ನ ಆತ್ಮಾನುಭಾವದಲ್ಲಿ ಮಾತ್ರವೇ ಆಸಕ್ತಿ ಇರುವವರು(ಕೈವಲ್ಯಾರ್ಥಿ) ಮತ್ತು ಸಾಕ್ಷಾತ್ ಎಂಪೆರುಮಾನನಿಗೆ ಮಾತ್ರವೇ ಸೇವೆ ಮಾಡುವುದರಲ್ಲಿ ಆಸಕ್ತಿ ಇರುವವರು.
ಈ ಪಾಶುರದಲ್ಲಿ ಆಳ್ವಾರ್ ಎಂಪೆರುಮಾನಿನ ಸೇವೆ ಮಾಡಲು ಆಸಕ್ತಿ ಇರುವನರನ್ನು ಕರೆಯುತ್ತಾರೆ.

೩. ವಾಳಾಟ್ ಪಟ್ಟು ನಿನ್ಡ್ರೀರ್ ಉಳ್ಳೀರೇಲ್
ವಂದು ಮಣ್ಣುಮ್ ಮಣಮುಮ್ ಕೊಣ್ಮಿನ್.
ಕೂಳಾಟ್ ಪಟ್ಟು ನಿನ್ಡ್ರೀರ್ಗಳೈ ಎಂಗಳ್ ಕುಳುವಿನಿಲ್ ಪುಗುದಲೊಟ್ಟೋಮ್.
ಏಳಾಟ್ಕಾಲುಮ್ ಪಳಿಪ್ಪಿಲೋಮ್ ನಾಂಗಳ್ ಇರಾ ಕದರ್ ವಾಳ್.
ಇಲಂಗೈ ಪಾಳಾಳ್ ಆಗಪ್ ಪ್ಪಡೈ ಪೊರುದಾನುಕ್ಕು ಪಲ್ಲಾಂಡು ಕೂರುದುಮೇ

“ಸೇವೆಯ ಸಂಪತ್ತಿನ ಬಗ್ಗೆ ನಿಮಗೆ ಆಸಕ್ತಿ ಇದ್ದರೆ, ಬೇಗನೆ ಬನ್ನಿ, ಎಂಪೆರುಮಾನಿನ ಉತ್ಸವವನ್ನು (ಹಬ್ಬ) ಆಚರಿಸಲು ಮಣ್ಣನ್ನು ಅಗೆಯಿರಿ (ಅಂಕುರಾರ್ಪಣಮ್).
ಯಾವುದೇ ಸೇವೆಯನ್ನು ಮಾಡಲು ಅಪೇಕ್ಷಿಸಿರಿ. ಆಹಾರದ ಬಗ್ಗೆ ಮಾತ್ರ ಆಸಕ್ತಿ ಹೊಂದಿರುವವರು ನಮ್ಮೊಂದಿಗೆ ಸೇರಲು ನಾವು ಅನುಮತಿಸುವುದಿಲ್ಲ. ಅನೇಕ ತಲೆಮೊರೆಗಳಿಂದ, ನಾವು ಯಾವುದನ್ನೂ ಬಯಸಲಿಲ್ಲ ಮತ್ತು ದೋಷರಹಿತರಾಗಿದ್ದೇವೆ. ಲಂಕೆಯಲ್ಲಿ ವಾಸಿಸುತ್ತಿದ್ದ ರಾಕ್ಷಸರ ವಿರುದ್ಧ, ತನ್ನ ಬಿಲ್ಲನ್ನು ಪ್ರಯೋಗಿಸಿ ಯುದ್ಧ ಮಾಡಿದ ಆ ಎಂಪೆರುಮಾನನ್ನು ಪ್ರಶಂಸಿಸುತ್ತಿದ್ದೇವೆ! ನಮ್ಮೊಂದಿಗೆ ನೀವೂ ಸೇರಿ, ಅವನನ್ನು ಹೊಗಳಿ!

ನಾಲ್ಕನೆ ಪಾಶುರಮ್.
ಈ ಪಾಶುರದಲ್ಲಿ ಪೆರಿಯಾಳ್ವಾರ್ ಎಂಪೆರುಮಾನಿಗೆ ಸೇವೆ ಮಾಡುವವರನ್ನು ನೋಡಿ ತೃಪ್ತಿಗೊಳ್ಳದೆ, ಯಾರಿಗೆ ಈ ಜಗತ್ತಿನ ಸಂಪತ್ತನ್ನು ಅನುಭವಿಸುವುದರಲ್ಲಿ ಆಸಕ್ತಿ ಇದೆಯೋ, ಮತ್ತು ಯಾರಿಗೆ ತನ್ನ ಆತ್ಮವನ್ನು ಮಾತ್ರ ಅನುಭವಿಸುವುದರಲ್ಲಿ ಆಸಕ್ತಿ ಇದೆಯೋ, ಅವರಿಬ್ಬರೂ ಎಂಪೆರುಮಾನನ್ನು ವೈಭವೀಕರಿಸಲು ಸೇರಬೇಕೆಂದು ಪೆರಿಯಾಳ್ವಾರ್ಬಯಸುತ್ತಾರೆ. ಇವರಿಬ್ಬರಲ್ಲಿ,
ಜಗತ್ತಿನ ಸಂಪತ್ತನ್ನು ಅನುಭವಿಸುವುದರಲ್ಲಿ ಆಸಕ್ತಿ ಇರುವವರಿಗೆ ಎಂಪೆರುಮಾನಿಗೆ ಕೈಂಕರ್ಯ ಮಾಡುವುದರಲ್ಲಿ ಆಸಕ್ತಿ ಉಂಟಾಗುವ ಸಾಧ್ಯತೆ ಇದೆ. ಆದರೆ, ಕೈವಲ್ಯಾರ್ಥಿಗಳು ಕೈವಲ್ಯ ಮೋಕ್ಷವನ್ನು (ಆತ್ಮಾನುಭಾವ) ಪಡೆದುಬಿಟ್ಟರೆ, ಅವರು ಅದರಿಂದ ಹೊರಗೆ ಬಂದು ಎಂಪೆರುಮಾನನಿಗೆ ಸೇವೆ ಮಾಡಲು ಸಾಧ್ಯವಿಲ್ಲ . ಆದ್ದರಿಂದ ಪೆರಿಯಾಳ್ವಾರ್ ಕೈವಲ್ಯಾರ್ಥಿಗಳನ್ನು ಮೊದಲು ಕರೆಯುತ್ತಾರೆ.

೪.ಏಡು ನಿಲತ್ತಿಲ್ ಇಡುವದನ್ ಮುನ್ನಮ್ ವಂದು
ಎಂಗಳ್ ಕುಳಾಮ್ ಪುಗುಂದು.
ಕೂಡು ಮನಮ್ ಉಡೈಯೀರ್ಗಳ್ ವರಂಬೊಳಿ
ವಂದೊಲ್ಲೈ ಕೂಡುಮಿನೋ.
ನಾಡು ನಗರಮುಮ್ ನಂಗರಿಯ
ನಮೋ ನಾರಾಯಣಾಯ ಎನ್ಡ್ರು.
ಪಾಡು ಮನಮ್ ಉಡೈಪ್ ಪತ್ತರುಳ್ಳೇರ್
ವಂದು ವಲ್ಲಾಂಡು ಕೂರುಮಿನೇ.

ಸಾಮಾನ್ಯ ಗ್ರಾಮಸ್ಥರು ಮತ್ತು ಪಟ್ಟಣದಲ್ಲಿ ವಾಸಿಸುವ ಜ್ಞಾನವುಳ್ಳ ಜನರು ಎಂಪೆರುಮಾನನ ಬಗ್ಗೆ ಚನ್ನಾಗಿ ಅರಿಯುವಂತೆ ಮಾಡುವ, ಶ್ರೀಮನ್ ನಾರಾಯಣನನ್ನು ಹೊಗಳುವ ಎಂಟು ಉಚ್ಚಾರಾಂಶಗಳ ದಿವ್ಯ ಮಂತ್ರ , ಅಷ್ಟಾಕ್ಷರ ಮಂತ್ರವನ್ನು ಪಠಿಸಲು ಆಸಕ್ತಿ ಇದ್ದರೆ, ನಮ್ನನ್ನು ಸೇರಿ!

೫ .ಪಾಶುರಮ್. ಈ ಪಾಶುರದಲ್ಲಿ ಪೆರಿಯಾಳ್ವಾರ್, ಜಗತ್ತಿನ ಐಶ್ವರ್ಯದಲ್ಲಿ ಆಸೆ ಇರುವವರನ್ನು ಆಹ್ವಾನಿಸುತ್ತಾರೆ.

ಅಂಡಕುಲತ್ತುಕ್ ಅಧಿಪತಿಯಾಗಿ
ಅಶುರರ್ ಇರಾಕ್ಕದರೈ.
ಇಂಡೈಕ್ಕುಲತ್ತೈ ಎಡುತ್ತು ಕಳೈಂದ
ಇರುಡೇಕೇಶನ್ ತನಕ್ಕು.
ತೊಂಡಕ್ಕುಲತ್ತಿಲ್ ಉಳ್ಳೀರ್
ವಂದಡಿ ತೊಳುದು ಆಯರ ನಾಮಮ್ ಶೊಲ್ಲಿ.
ಪಂಡೈ ಕುಲತ್ತೈ ತವಿರ್ನದು
ಪಲ್ಲಾಂಡು ವಲ್ಲಾಯಿರತ್ತಾಂಡು ಎನ್ಮಿನೇ.

ರಾಕ್ಷಸರ ಕುಲಗಳ ನಿಯಂತ್ರಣಕ್ಕಾಗಿ,ಅವರನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿದ ಹೃಷಿಕೇಶನ ಸೇವೆ ಮಾಡುವ ಗುಂಪಿನಲ್ಲಿ ನೀವು ಇದ್ದೀರಿ. ನಮ್ಮ ಗುಂಪನ್ನು ಸೇರಿ ಎಂಪೆರುಮಾನಿನ ದಿವ್ಯ ಪಾದಗಳಿಗೆ ನಮಸ್ಕರಿಸಿ.
ಎಂಪೆರುಮಾನಿನ ಸಾವಿರ ನಾಮಗಳನ್ನು ಪೂರ್ಣ ಹೃದಯದಿಂದ ಪಠಿಸಿ. ವಿವಿಧ ಪ್ರಯೋಜನಗಳಿಗಾಗಿ ಅನುಗ್ರಹಿಸಲು ಎಂಪೆರುಮಾನಲ್ಲಿ ಬೇಡಿಕೊಂಡು, ನಂತರ ಅವನನ್ನು ಬಿಟ್ಟುಬಿಡುವಂತಹ ಈ ಜನ್ಮ ಚಕ್ರವನ್ನು ತೊಲಗಿಸಿ ಮತ್ತು ಅವನನ್ನು ಪದೇ ಪದೇ ವೈಭವೀಕರಿಸಿ.

೬.ಪಾಶುರಮ್: ಈ ಪಾಶುರದಲ್ಲಿ ಅಳ್ವಾರ್ ಮೂರು ಗುಂಪುಗಳಲ್ಲಿ ಪ್ರತಿಯೊಬ್ಬರನ್ನು ಈ ರೀತಿ ಆಹ್ವಾನಿಸಿದ ನಂತರ, ಪ್ರತಿ ಗುಂಪು ಬಂದು ಅವರೊಂದಿಗೆ ಸೇರುತ್ತದೆ. ಇವರಲ್ಲಿ, ಮೂರನೆ ಪಾಶುರದಲ್ಲಿ ( “ವಾಳಾಟ್ ಪಟ್ಟು ಪಾಶುರಮ)” ಕೂರಿದ ಗುಂಪು, ಎಂಪೆರುಮಾನಿಗೆ ಸೇವೆ ಸಾಧಿಸುವುದರಲ್ಲಿ ಅಪೇಕ್ಷೆ ಇರುವವರು, ತಮ್ಮ ಗುಣಗಳು ಮತ್ತು ಚಟುವಟಿಕೆಗಳನ್ನು ನಿರೂಪಿಸುತ್ತಾರೆ . ಅವರನ್ನು ಪೆರಿಯಾಳ್ವಾರ್ ಸ್ವೀಕರಿಸುತ್ತಾರೆ.

ಎಂದೈ ತಂದೈ ತಂದೈ ತಂದೈ ತಮ್ ಮೂತ್ತಪ್ಪನ್.
ಏಳ್ಪಡಿಕಾಲ್ ತೊಡಂಗಿ ವಂದು ವಳಿ ವಳಿ ಆಟ್ಚೈಗಿನ್ಡ್ರೋಮ್.
ತಿರುವೋಣತ್ತಿರುವಿಳವಿಲ್ ಅಂದಿಯಮ್ಪೋದಿಲ್ ಅರಿಯುರುವಾಗಿ
ಅರಿಯೈ ಅಳಿತ್ತವನೈ.
ಪಂದನೈ ತೀರಪ್ ಪಲ್ಲಾಂಡು ಪಲ್ಲಾಯಿರತ್ತಾಂಡು ಎನ್ಡ್ರು ಪಾಡುದುಮೇ.

ತನ್ನ ಶತ್ರುವಾದ ಹಿರಣ್ಯನನ್ನು ಸಂಹಾರ ಮಾಡಿದ, ಸಿಂಹದ ಮುಖ ಮಾನವನ ದೇಹದ ಸುಂದರವಾದ ರೂಪಗೊಂಡ ನರಸಿಂಹನಿಗೆ ಏಳು ತಲೆಮೊರೆಗಳಿಂದ, ನನ್ನ ತಂದೆ, ನಾನು, ನನ್ನ ತಂದೆಯ ತಂದೆ, ಅವರ ತಂದೆ ಮತ್ತು ಅವರ ತಂದೆ, ಇತರರು, ವೇದಗಳ ಪ್ರಕಾರ ಕೈಂಕರ್ಯಗಳನ್ನು ನಡೆಸಿ ಬರುತ್ತಿದ್ದೇವೆ. ಭಕ್ತರಿಗಾಗಿ ಉಪಕಾರ ಮಾಡುವ ಸಮಯ, ಅವನಿಗೆ ಬೇಸರವಾಗಿದ್ದರೆ, ನಾವು ಅವನನ್ನು ಹೊಗಳಿ, ವೈಭವೀಕರಿಸಿ, ಆ ಬೇಸರವನ್ನು ತೆಗೆಯೋಣ.

೭.ಪಾಶುರಮ್: ಈ ಪಾಶುರದಲ್ಲಿ ಪೆರಿಯಾಳ್ವಾರ್( “ಏಡು ನಿಲತ್ತಿಲ್” ಎನ್ನುವ ನಾಲ್ಕನೆ ಪಾಶುರದಲ್ಲಿ ಆತ್ಮಾನುಭಾವವನ್ನು ಬಯಸುವ) ಕೈವಲ್ಯಾರ್ಥಿಗಳನ್ನು ಸ್ವೀಕರಿಸುತ್ತಾರೆ. ಅವರು ತಮ್ಮ ಗುಣಗಳನ್ನು ನಿರೂಪಿಸುತ್ತಾರೆ.

ತೀಯಿಲ್ ಪೊಲಿಗಿನ್ಡ್ರ ಶೆನ್ಶುಡರಾಳಿ
ತಿಗಳ್ ತಿರುಚ್ಚಕ್ಕರತ್ತಿನ್
ಕೋಯಿಲ್ ಪೊರಿಯಾಲೆ ಒಟೃಂಡು ನಿನ್ಡ್ರು
ಕುಡಿಕುಡಿ ಆಟ್ಚೈಗಿನ್ಡ್ರೋಮ್.
ಮಾಯಪ್ ಪೊರುಪ್ಪಡೈ ವಾಣನೈ
ಆಯಿರಮ್ ತೋಳುಮ್ ಪೊಳಿ ಕುರುದಿ ಪಾಯ
ಶುಳಟ್ರಿಯ ಆಳಿ ವಲ್ಲಾನುಕ್ಕು ಪಲ್ಲಾಂಡು ಕೂರುದುಮೇ.

ಬೆಂಕಿಗಿಂತಲೂ ಆತ್ಯಂತ ಪ್ರಕಾಶಮಾನವಾದ ಕೆಂಪು ಮಿಶ್ರತ ವೈಭವ ಹೊಂದಿರುವ ದಿವ್ಯ ಚಕ್ರದ(ಚಕ್ರತ್ತಾಳ್ವಾರ್) ಚಿಹ್ನವನ್ನು ನಮ್ಮ ದೇಹದ ಮೇಲೆ ಗುರುತಾಗಿ ಧರಿಸಿಕೊಂಡಮೇಲೆ,ಇನ್ನು ಮುಂದೆ ಬರುವ ಕಾಲಕ್ಕೆ, ಭವಿಷ್ಯ ತಲೆಮೊರೆಗಳು ಕೂಡ ಸೇರಿದಂತೆ ಕೈಂಕರ್ಯಗಳನ್ನು ನಿರ್ವಹಿಸಲು ಬಂದಿದ್ದೇವೆ. ಚಕ್ರತ್ತಾಳ್ವಾರನ್ನು ಮೇಲಕ್ಕೆ ಹಿಡಿಡದುಕೊಂಡು , ಗಿರಕಿಸಿ ರಾಕ್ಷಸನಾದ ಬಾಣಾಸುರನ ಭುಜಗಳಿಂದ ರಕ್ತ ಪ್ರವಾಹವಾಗಿ ಹರಿಸಿದ ಎಂಪೆರುಮಾನನ್ನು ನಾವು ಹೊಗಳುತ್ತೇವೆ.

೮. ಪಾಶುರಮ್ : ಎಂಪೆರುಮಾನನ್ನು ವೈಭವೀಕರಿಸಿ ಹಾಡಲು ಒಪ್ಪಿಕೊಂಡು ಬಂದ ಐಶ್ವರ್ಯಾರ್ಥಿಗಳನ್ನು ( “ಆಂಡಕುಲತ್ತುಕ್ಕು” ಪಾಶುರದಲ್ಲಿ) ಪೆರಿಯಾಳ್ವಾರ್ ಉಲ್ಲೇಖಿಸುತ್ತಾರೆ.

ನೆಯ್ಯಿಡೈ ನಲ್ಲದೋರ್ ಶೋಱುಮ್ ನಿಯತಮುಮ್ ಅತ್ತಾಣಿಚ್ ಚೇವಗಮುಮ್ಕೈ
ಅಡೈಕ್ಕಾಯುಮ್ ಕೞುತ್ತುಕ್ಕುಪ್ ಪೂಣೊಡು ಕಾದುಕ್ಕುಕ್ ಕುಣ್ಡಲಮುಮ್
ಮೆಯ್ಯಿಡ ನಲ್ಲದೋರ್ ಸಾನ್ದಮುಮ್ ತನ್ದು ಎನ್ನೈ ವೆಳ್ಳುಯಿರ್ ಆಕ್ಕವಲ್ಲ
ಪೈಯುಡೈ ನಾಗಪ್ ಪಗೈಕ್ಕೊಡಿಯಾನುಕ್ಕುಪ್ ಪಲ್ಲಾಣ್ಡು ಕೂಱುವನೇ

“ದೇಹಕ್ಕೆ ಉತ್ತಮವಾದ ಅನನ್ಯ ಶ್ರೀಗಂಧ, ತಾಂಬೂಲ( ಅಡಿಕೆ, ವಿಳ್ಳೇದೆಲೆ ಮತ್ತು ನಿಂಬೆ ಹಣ್ಣಿನ ಮಿಶ್ರಣ) ತುಪ್ಪದ ಮಧ್ಯೆ ಗೌಪ್ಯ ಸೇವೆಯಲ್ಲಿ ಕಾಣಿಸುವ ಶುದ್ಧವಾದ, ರುಚಿಯಾದ ಪ್ರಸಾದವನ್ನು ನಮಗೆ ಕೊಡುವ ಎಂಪೆರುಮಾನನ್ನು ನಾವು ಪ್ರಶಂಸಿಸುತ್ತೇವೆ! ಕುತ್ತಿಗೆಗೆ ಆಭರಣ, ಕಿವಿಗಳಿಗೆ ಕುಂಡಲ, ನಮಗೆ ಒಳ್ಳೆಯ ಮನಸ್ಸನ್ನು ಕೊಡುವ ಸಾಮರ್ಥ್ಯವಿರುವ, ಧ್ವಜ ಹೊಂದಿರುವ, ಹೆಡೆಗಳಿರುವ ಹಾವುಗಳ ಶತ್ರುವಾದ ಗರುಡನನ್ನು ಹೊಂದಿರುವ ಆ ಎಂಪೆರುಮಾನನ್ನು ನಾವು ವೈಭವೀಕರಿಸುತ್ತೇವೆ” ಎಂದು ಐಶ್ವರ್ಯಾಥಿಗಳು ಹೇಳುತ್ತಾರೆ.

೯ .ಪಾಶುರಮ್: ಈ ಪಾಶುರದಲ್ಲಿ ಪೆರಿ ಆಳ್ವಾರ್, ಮೂರನೆ ಪಾಶುರದಲ್ಲಿ(ವಾಳಾಟ್ಪಟ್ಟು) ಆಹ್ವಾನಿಸಲ್ಪಟ್ಟು, ಆರನೆ ಪಾಶುರದಲ್ಲಿ( ಎಂದೈ ತಂದೈ) ಬಂದು ಸೇರಿಕೊಂಡ, ಎಂಪೆರುಮಾನನಿಗೆ ಸೇವೆ ಮಾಡಲು ಅಪೇಕ್ಷಿಸಿದ ಭಕ್ತರನ್ನು ಪ್ರಶಂಸಿಸುತ್ತಾರೆ.

ಉಡುತ್ತು ಕಳೈಂದ ನಿನ್ ಪೀದಗ ಆಡೈ ಉಡುತ್ತು ಕಲತ್ತದುಂಡು
ತೊಡುತ್ತ ತುಳಾಯ್ ಮಲರ್ ಶೂಡಿ ಕಳೈಂದನ
ಶೂಡುಮ್ ಇ ತ್ತೊಂಡರಗಳೋಮ್
ವಿಡುತ್ತ ದಿಶೈಕ್ ಕರುಮಮ್ ತಿರುತ್ತಿ
ತಿರುವೋಣ ತ್ತಿರುವಿಳವಿಲ್
ಪಡುತ್ತ ಪೈನ್ನಾಗಣೈಪ್ ಪಳ್ಳಿ ಕೊಂಡಾನುಕ್ಕು
ಪಲ್ಲಾಂಡು ಕೂರುದುಮೇ.

ನೀನು ನಿನ್ನ ದಿವ್ಯ ಸೊಂಟದಲ್ಲಿ ಧರಿಸಿಕೊಂಡು ತೆಗೆದ ದಿವ್ಯ ಉಡುಗೆಯನ್ನು ನಾವು ಉಟ್ಟುಕೊಂಡು, ನೀನು ಉಂಡ ಪ್ರಸಾದ ಅವಶೇಷವನ್ನು( ಎಂಪೆರುಮಾನನಿಗೆ ಮಾಡಿದ ನೈವೇದ್ಯ) ಮತ್ತು ನಿನ್ನ ಮೇಲೆ ಧರಿಸಿಕೊಂಡ ದಿವ್ಯ ತುಳಸಿಯನ್ನು ನಾವು ಧರಿಸಿ , ನಿನ್ನ ಸೇವಕರಾಗಿ ಇರುತ್ತೇವೆ. ಎಲ್ಲಾ ದಿಕ್ಕುಗಳಲ್ಲೂ ನೀನು ಸೂಚಿಸಿದ ಎಲ್ಲಾ ಕಾರ್ಯಗಳನ್ನೂ ನಿರ್ವಹಿಸುವ, ಚನ್ನಾಗಿ ವಿಸ್ತರಿಸಿದ ಹೆಡೆಗಳನ್ನು ಹೊಂದಿರುವ , ನಿನಗೆ ಹಾಸಿಕೆಯಾಗಿರುವ
ಆದಿಶೇಷನ ಮೇಲೆ ವಿರಮಿಸಿರುವ ಎಂಪೆರುಮಾನೇ, ನಿನ್ನ ತಿರುವೋಣದ ದಿನ ( ಎಂಪೆರುಮಾನಿನ ದಿವ್ಯ ನಕ್ಷತ್ರ ) ನಿನ್ನನ್ನು ಹೊಗಳಿ ಹಾಡುಗಳನ್ನು ನಾವು ಹಾಡುತ್ತೇವೆ.

೧೦.ಪಾಶುರಮ್: “ಏಡುನಿಲತ್ತಿಲ್” ಪಾಶುರದಲ್ಲಿ ಆಹ್ವಾನಿಸಿ, ತೀಯಿಲ್ ಪೊಲಿಗಿನ್ಡ್ರ ಪಾಶುರದಲ್ಲಿ ಎಂಪೆರುಮಾನನ್ನು ಹೊಗಳಲು ಬಂದ ಕೈವಲ್ಯಾರ್ಥಿಗಳೊಂದಿಗೆ ( ತಮ್ಮ ಆತ್ಮವನ್ನು ಅನುಭವಿಸಲು ಅಪೇಕ್ಷಿಸುವವರು ) ಪೆರಿಯಾಳ್ವಾರ್ ಸೇರುತ್ತಾರೆ.

ಎನ್ನಾಲ್ ಎಂಪೆರುಮಾನ್ ಉನ್ದನುಕ್ಕು ಅಡಿಯೋಮ್ ಎನ್ಡ್ರು ಎಳುತ್ತಪ್ಪಟ್ಟ ಅನ್ನಾಳೇ.
ಅಡಿಯೋಂಗಳ್ ಅಡಿಕ್ಕುಡಿಲ್
ವೀಡುಪ್ ಪೆಟ್ರು ಉಯ್ನದದು ಕಾಣ್.
ಶೆನ್ನಾಲ್ ತೋಟ್ರಿ ತಿರು ಮದುರೈಯುಳ್ ಶಿಲೈ ಕುನಿತ್ತು
ಐ್ನದಲೆಯ ಪೈನ್ನಾಗತ್ ತ್ತಲೈ ಪಾಯ್ನದವನೇ, ಉನ್ನೈಪ್ಪಲ್ಲಾಂಡು ಕೂರುದುಮೇ.

“ಓ ದೇವನೇ! ನಿನ್ನ ಸೇವಕರಾಗಿರುವೆವು ಎಂದು ನಿನಗೆ ನಾವು ಬರೆದುಕೊಟ್ಟ ದಿನವೇ ನಮ್ಮ ಕುಲದ ವಂಶಸ್ಥರು ಕೈವಲ್ಯದಿದ ಪರಿಹಾರ ಪಡೆದು ಉನ್ನತೀಕರಿಸಲ್ಪಟ್ಟರು! ಶುಭ ದಿನ ಅವತರಿಸಿದ ಎಂಪೆರುಮಾನೇ,
ಮದುರೈಯಲ್ಲಿ(ಉತ್ತರ) ಕಂಸನು ನಡೆಸಿದ ಉತ್ಸವದಲ್ಲಿ ಬಾಣವನ್ನು ಮುರಿದವನೇ, ಸರ್ಪ ಕಾಳಿಯನು ವಿಸ್ತರಿಸಿದ ಐದು ಹೆಡೆಗಳ ಮೇಲೆ ನೆಗೆದ ನಿನ್ನನ್ನು ನಾವೆಲ್ಲಾ ಸೇರಿ ವೈಭವೀಕರಿಸುತ್ತೇವೆ!

೧೧.ಪಾಶುರಮ್. “ಅಂಡಕ್ಕುಲತ್ತುಕ್ಕು” ಪಾಶುರದಲ್ಲಿ ಕರೆದು , “ನೈಯ್ಯಿಡೈ ನಲ್ಲದೋರ್” ಪಾಶುರದಲ್ಲಿ ಬಂದು ಸೇರಿಕೊಂಡ ಐಶ್ವರ್ಯಾರ್ಥಿಗಳೊಂದಿಗೆ ಪೆರಿಯಾಳ್ವಾರ್ ಎಂಪೆರುಮಾನನ್ನು ಪ್ರಶಂಸಿಸಲು ಸೇರುತ್ತಾರೆ.

ಅಲ್ವಳಕ್ ಒನ್ಡ್ರುಮ್ ಇಲ್ಲಾ
ಅಣಿಕೋಟ್ಟಿಯರ್ ಕೋನ್
ಅಭಿಮಾನತ್ತುಂಗನ್ ಶೆಲ್ವನೈ ಪೋಲ
ತಿರುಮಾಲೇ ನಾನುಮ್ ಉನಕ್ಕುಪ್ ಪಳವಡಿಯೇ.
ನಲ್ವಗೈಯಾಲ್ ನಮೋ ನಾರಾಯಣಾವೆಂಡ್ರು
ನಾಮಮ್ ಪಲ ಪರವಿ.
ಪಲ್ವಗೈಯಾಲುಮ್ ಪವಿತ್ತಿರನೇ ,ಉನ್ನೈಪ್ ಪಲ್ಲಾಂಡು ಕೂರುವನೇ.

ಓ ಮಹಾಲಕ್ಷ್ಮಿಯ ಪತಿಯೇ! ಅತ್ಯಂತ ಗೌರವದಿಂದಿದ್ದ, ದೋಷರಹಿತರಾದ, ತಿರುಕೋಟ್ಟಿಯೂರಿನ ಜನರಿಗೆ ನಾಯಕನಾದ ಸೆಲ್ವ ನಂಬಿಯಂತೆಯೇ ನಾನೂ ನಿನಗೆ ಮಾತ್ರವೇ ಬಹಳ ಕಾಲದಿಂದ ಸೇವಕನಾಗಿದ್ದೇನೆ.
ತನ್ನ ಮೂಲ ಸ್ವಭಾವ, ರೂಪ, ಗುಣಗಳು ಹಾಗು ಐಶ್ವರ್ಯದಿಂದ ನಮ್ಮನ್ನು ಶುದ್ಧ ಪಡಿಸುವನೇ, ನಿನ್ನ ಅಷ್ಟಾಕ್ಷರ (ಎಂಟು ಉಚ್ಚಾರಾಂಶಗಳ ಮಂತ್ರ)ಮಂತ್ರವನ್ನು ಧ್ಯಾನಿಸುತ್ತಾ, ನಿನ್ನ ಸಾವಿರ ನಾಮಗಳನ್ನು ಜಪಿಸುತ್ತೇನೆ.

೧೩.ಪಾಶುರಮ್ : ಈ ಪಾಶುರದಲ್ಲಿ ಪೆರಿಯಾಳ್ವಾರ್ ಪ್ರಭಂಧದ ಪ್ರಯೋಜನಗಳನ್ನು ಹೆಳುತ್ತಾರೆ. ಎಂಪೆರುಮಾನನ್ನು ಆಳವಾದ ಪ್ರೀತಿಯಿಂದ ವೈಭವೀಕರಿಸುವವರು, ಕಾಲ ಇರುವವರೆಗೂ ಅವನೊಂದಿಗೆ ಒಳಗೊಂಡಿರುತ್ತಾರೆ ಮತ್ತು ಅವನಿಗೆ ಮಂಗಳಾಶಾಸನ( ಎಂಪೆರುಮಾನನ್ನು ಪ್ರಶಂಸಿಸುವುದು) ಮಾಡುವ ಅದೃಷ್ಟವನ್ನು ಪಡೆಯುತ್ತಾರೆ ಎಂದು ಹೇಳುತ್ತಾ ಈ ಪ್ರಬಂಧವನ್ನು ಮುಗಿಸುತ್ತಾರೆ.

ಪಲ್ಲಾಂಡೆನ್ಡ್ರು ಪವಿತ್ತಿರನೈ ಪರಮೇಟ್ಟಿಯೈ
ಶಾರ್ಂಮ್ ಎನ್ನುಮ್ ವಿಲ್ಲಾಂಡಾನ್ ತನ್ನೈ
ವಿಲ್ಲಿಪುತ್ತೂರ್ ವಿಟ್ಟುಚಿತ್ತನ್ ವಿರುಮ್ಬಿಯ ಶೊಲ್
ನಲ್ ಆಂಡೆನ್ಡ್ರು ನವಿನ್ಡ್ರು ಉರೈಪ್ಪಾರ್
ನಮೋ ನಾರಾಯಣಾಯ ಎನ್ಡ್ರು
ಪಲ್ಲಾಂಡುಮ್ ಪರಮಾತ್ಮನೈ
ಚೂಳ್ನದು ಇರುನ್ದು ಏತ್ತುವರ್ ಪಲ್ಲಾಂಡೇ!

ಶ್ರೀವಿಲ್ಲಿಪುತ್ತೂರಲ್ಲಿ ಜನಿಸಿದ ವಿಟ್ಟುಚಿತ್ತನ್(ಪೆರಿಯಾಳ್ವಾರ್) , ಎಲ್ಲದಿಕ್ಕಿಂತಲೂ ಉತ್ತಮವಾದ ಪರಮಪದದಲ್ಲಿ ಸದಾ ವಾಸಿಸುವ, ತನ್ನ ಶಾರಂಗ ಧನುಷನ್ನು ಆಳುವ ಎಂಪೆರುಮಾನ್ ಎಂದೆಂದಿಗೂ ಶುಭಕರವಾಗಿರಲಿ ಎಂದು ಅಪೇಕ್ಷಿಸಿ, ಈ ಪ್ರಬಂಧವನ್ನು ರಚಿಸಿದರು. ಈ ಪ್ರಬಂಧ ವನ್ನು ಪಠಿಸಲು ಒಳ್ಳೆಯ ಕಾಲ ಬಂದಿದೆ ಎಂದು ಯೋಚಿಸುವವರು, ಕಾಲ ಇರುವವರೆಗೂ ಅವನ ಅಷ್ಟಾಕ್ಷರ ಮಂತ್ರವನ್ನು ಧ್ಯಾನಿಸುತ್ತಾ , ಪಲ್ಲಾಂಡು ಹಾಡುತ್ತಾ (ಎಂಪೆರುಮಾನ್ ಧೀರ್ಗ ಕಾಲ ಇರಲಿ) ಎಂದು ಶ್ರೀಮನ್ನಾರಾಯಣನನ್ನೇ ಪದೇ ಪದೇ ಸುತ್ತುತ್ತಿರುತ್ತಾರೆ.

ಅಡಿಯೇನ್ ರೂಪ ರಾಮಾನುಜ ದಾಸಿ
ಮೂಲ: http://divyaprabandham.koyil.org/index.php/2020/04/thiruppallandu-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment