ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ
ತಿರುವಾಯ್ಮೊಳಿ 2.3.2 ರಲ್ಲಿ ಹೇಳಿರುವಂತೆ ಆಚಾರ್ಯರು ಈ ಒಂಬತ್ತು ವಿಧದ ಸಂಬಂಧಗಳನ್ನು ಸೂಚಿಸುವರು, “ಅರಿಯಾದನ ಅರಿವಿತ್ತ” (ಅನುಭವದ-ಅಜ್ಞಾನ ಹೊಂದಿರುವವರಿಗೆ ಅಂತಹ ಅನುಭವಗಳನ್ನು ಕಲಿಸಲಾಗುತ್ತದೆ), ಈ ಚೇತನವು ಅವುಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ಪೆರಿಯ ತಿರುಮೊಳಿ 8.9.3 ರಲ್ಲಿ ಹೇಳಿರುವಂತೆ ಆತ್ಮದ ನಿಜವಾದ ಸ್ವರೂಪವನ್ನು ಅರಿತುಕೊಳ್ಳುತ್ತದೆ.
“ಕಣ್ಣಪುರಂ ಒನ್ರುಡೈಯಾನುಕ್ಕು ಅಡಿಯೇನ್ ಒರುವರ್ಕ್ಕು ಉರಿಯೇನೋ” (ತಿರುಕ್ಕಣ್ಣಪುರದ ಸ್ವಾಮಿಯ ಸೇವಕನಾಗಿರುವ ನಾನು, ಬೇರೆ ಯಾರಿಗಾದರೂ ಸೇರುತ್ತೇನೆಯೇ?)
ತಿರುವಾಯ್ಮೊಳಿ 5.8.3 ರಲ್ಲಿ ಹೇಳಿರುವಂತೆ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಅಸಮರ್ಥತೆ, “ಎನ್ ನಾನ್ ಶೆಯ್ಗೇನ್ ಯಾರೇ ಕಳೈಗಣ್” ([ನನ್ನನ್ನು ರಕ್ಷಿಸಿಕೊಳ್ಳಲು] ನಾನು ಯಾವ ಚಟುವಟಿಕೆಯನ್ನು ಮಾಡಬೇಕು! ಬೇರೆ ಯಾರು ರಕ್ಷಕ!, ಮತ್ತು ತಿರುವಾಯ್ಮೊಳಿ 5.8.3 ರಲ್ಲಿ ಹೇಳಿರುವಂತೆ ಸಾಧಿಸಬೇಕಾದ ಗುರಿಯಲ್ಲಿ ದೃಢವಾದ ನಂಬಿಕೆ, “ಉನ್ನೈ ಅಲ್ಲಾಲ್ ಯಾವರಾಲುಮ್ ಒನ್ರುಮ್ ಕುರೈ ವೇನ್ಡೇನ್” (ನನ್ನ ಯಾವುದೇ ಆಸೆಗಳನ್ನು ಪೂರೈಸಲು ನಾನು ನಿನ್ನನ್ನು ಹೊರತುಪಡಿಸಿ ಬೇರೆ ಯಾರನ್ನೂ ಪ್ರಾರ್ಥಿಸುವುದಿಲ್ಲ)
ತಿರುವಾಯ್ಮೊಳಿ 9.3.7 ರಲ್ಲಿ ಹೇಳಿರುವಂತೆ ಗುರಿಯನ್ನು ತಲುಪುವ ಆತುರತೆ, “ಮಹಾ ವೈಗುಂಧಂ ಕಾಣ್ಬದರ್ಕು ಎನ್ ಮನಮ್ ಏಗಮ್ ಎಣ್ಣುಮ್” (ನನ್ನ ಹೃದಯವು ರಾತ್ರಿ ಹಗಲು ಎಂಬ ಭೇದವಿಲ್ಲದೆ ಏಕರೀತಿಯಾಗಿ ಶ್ರೀವೈಕುಂಠವನ್ನು ನೋಡಲು ಬಯಸಿದೆ).
ಪೆರಿಯ ತಿರುಮೊಳಿ 11.8.3 ರಲ್ಲಿ ಹೇಳಿರುವಂತೆ ಅಡೆತಡೆಗಳ ಭಯ, “ಪಾಂಬೋಡು ಒರು ಕುರೈಯಿಲೇ ಪಯಿಂರಾಪ್ಪೋಲ್” (ಒಂದೇ ಸೂರಿನಡಿ ಹಾವಿನೊಂದಿಗೆ ವಾಸವಿದ್ದಂತೆ).
ತಿರುವಾಯ್ಮೊಳಿ 8.10.3 ರಲ್ಲಿ ಹೇಳಿರುವಂತೆ ನಮಗೆ ಅಪೇಕ್ಷಣೀಯರಾದವರಿಗೆ ಗೌರವ, “ಅವನ್ ಅಡಿಯಾರ್ ಶೀಟ್ರು ಮಾ ಮನಿಶರಾಯ್ ಎನ್ನೈ ಆಣ್ದಾರ್ ಇಂಗೇ ತಿರಿಯಾ” (ಮನುಷ್ಯ ರೂಪವನ್ನು ಹೊಂದಿರುವುದರಿಂದ ಸಣ್ಣವರಂತೆ ತೋರುವ ಆದರೆ ಮಹಾನ್ ವ್ಯಕ್ತಿಗಳು, ನನ್ನನ್ನು ದಾಸನನ್ನಾಗಿ ಮಾಡಿದ ವಾಮನನ ಸೇವಕರು ಈ ಜಗತ್ತಿನಲ್ಲಿಯೇ ಪ್ರತ್ಯಕ್ಷವಾಗಿ ಉಳಿದುಕೊಂಡಿದ್ದಾರೆ).
ತಿರುವಾಯ್ಮೊಳಿ 10.6.10 ರಲ್ಲಿ ಹೇಳಿರುವಂತೆ ಉಪಕಾರಿಗಳಾಗಿರುವವರಿಗೆ ಕೃತಜ್ಞತೆ, “ಪೆರಿಯಾರ್ಕ್ಕು ಆಟ್ಪಟ್ಟಕ್ಕಾಲ್ ಪೆರಾದ ಪಯನ್ ಪೆರುಮಾರು” (ಸಾಧಿಸಲು ಕಷ್ಟಕರವಾದ ಮತ್ತು ಶ್ರೇಷ್ಠ ವ್ಯಕ್ತಿಗಳ ಸೇವಕರಾದಾಗ ಸಾಧಿಸುವ ಫಲಿತಾಂಶಗಳನ್ನು ಪಡೆಯಲು).
ತಿರುವಾಯ್ಮೊಳಿ 10.10.3 ರಲ್ಲಿ ಹೇಳಿರುವಂತೆ ನಮ್ಮನ್ನು ಪರಮಪದಕ್ಕೆ ತಲುಪಿಸುವವನ ಕಡೆಗೆ ದೃಢ ಸಮರ್ಪಣೆ, “ಆವಿಕ್ಕು ಓರ್ ಪಟ್ರುಕ್ಕೊಂಬು ನಿನ್ನಲಾಲ್ ಅರಿಗಿನ್ರಿಲೇನ್” (ನಿಮ್ಮನ್ನು ಹೊರತುಪಡಿಸಿ ನನ್ನ ಆತ್ಮಕ್ಕೆ ಉದಾತ್ತ ನೆಲೆಯಾಗಿರುವ ಯಾವುದೇ ಆಧಾರ ಸ್ತಂಭದ ಬಗ್ಗೆ ನನಗೆ ತಿಳಿದಿಲ್ಲ).
ಸಂಬಂಧದ ಜ್ಞಾನವು ಯಾರೊಬ್ಬರಿಗೂ, ಭಗವಾನನು ನೈಸರ್ಗಿಕವಾಗಿ ಮಾಲೀಕನೆಂದೂ ಮತ್ತು ಸ್ವಯಂ (ನಾವು) ಅವನ ನೈಸರ್ಗಿಕ ಸೇವಕ ಎಂದು ಅರಿತುಕೊಳ್ಳುಲು ಸಹಕಾರಿಯಾಗುತ್ತದೆ.
ಸಂಬಂಧದ ಬಗ್ಗೆ ಆಳವಾದ ಜ್ಞಾನವು ಭಗವಾನನೇ ನೈಸರ್ಗಿಕ ಆತ್ಮ ಮತ್ತು ಸ್ವಯಂ ಅವನ ನೈಸರ್ಗಿಕ ದೇಹ ಎಂದು ತಿಳಿಯಲು ಸಹಕಾರಿಯಾಗಿದೆ.
ಸಂಬಂಧದ ನೈಜ ಸ್ವರೂಪದ ಬಗ್ಗೆ ಜ್ಞಾನದಿಂದ, ಭಗವಾನನು ನೈಸರ್ಗಿಕ ಧರ್ಮಿ (ಗುಣಲಕ್ಷಣಗಳ ನಿವಾಸ) ಮತ್ತು ಸ್ವಯಂ ಅವನು ನೈಸರ್ಗಿಕ ಧರ್ಮ (ಗುಣಲಕ್ಷಣ) ಎಂದು ತಿಳಿಯುತ್ತದೆ.
ಸಂಬಂಧದ ನಿಜವಾದ ಸ್ವರೂಪದ ಬಗ್ಗೆ ಆಳವಾದ ಜ್ಞಾನದಿಂದ ಯಾವುದೇ [ಸ್ವತಂತ್ರ] ಸ್ವಯಂ ಇಲ್ಲ ಮತ್ತು ನಿಕಟವಾದ ಸಹಭಾಗಿತ್ವದಿಂದಾಗಿ ಭಗವಂತ ಮಾತ್ರ ಅಸ್ತಿತ್ವದಲ್ಲಿದೆ ಎಂದು ಅರಿತುಕೊಳ್ಳುತ್ತದೆ.
ಕೈಂಕರ್ಯದಲ್ಲಿ ತೊಡಗದೆ ಲೌಕಿಕ ಸುಖ ಮತ್ತು ದುಃಖಗಳಲ್ಲಿ ಭಯವನ್ನು ಒಳಗೊಂಡಿರುವ ದಾಸ್ಯದಲ್ಲಿ ಕರ್ತೃತ್ವವನ್ನು ತೊಡೆದುಹಾಕುವುದು ಮತ್ತು ದಾಸ್ಯದ ಕಾರಣದಿಂದ ಸದಾಚಾರವನ್ನು ಬಿಡದಿರುವುದು,
ಜ್ಞಾನವುಳ್ಳವನಾಗಿರುವುದರಲ್ಲಿ ಕರ್ತೃತ್ವವನ್ನು ತೊಡೆದುಹಾಕುವುದು, “ನಾನು ಜ್ಞಾನಿಯಾಗಿರುವುದರಿಂದ ಅವನು ನನ್ನನ್ನು ಸ್ವೀಕರಿಸಿದನು?” ಎಂದು ಯೋಚಿಸುವಂತೆ ಜ್ಞಾನದ ಬಗ್ಗೆ ಹೆಮ್ಮೆಪಡಬಾರದು. ಹೀಗೆ ಒಬ್ಬನು ನಿಷೇಧಿತ ಅಂಶಗಳನ್ನು ಬಿಟ್ಟುಬಿಡುತ್ತಾನೆ ಮತ್ತು ನಿಯಮಿತ ಅಂಶಗಳನ್ನು ಅನುಸರಿಸುತ್ತಾನೆ.
ಕಾರ್ಯಗಳು ಮತ್ತು ಸಂಯಮದಲ್ಲಿ ಕರ್ತೃತ್ವವನ್ನು ತೊಡೆದುಹಾಕಲು, “ನಿಷೇಧಿತ ಅಂಶಗಳನ್ನು ತ್ಯಜಿಸಲು ಮತ್ತು ಅವರು ನನ್ನನ್ನು ಒಪ್ಪಿಕೊಂಡರು ಎಂದು ನಾನು ನಿರ್ಧರಿಸಿದ ಕಾರ್ಯಗಳ ಅನ್ವೇಷಣೆಗೆ ಅಲ್ಲವೇ?” ಎಂಬ ಹೆಮ್ಮೆಯ ಆಲೋಚನೆ ಇಲ್ಲದಿರುವುದು.
ಭೋಗದಲ್ಲಿ ಕರ್ತೃತ್ವವನ್ನು ತೊಡೆದುಹಾಕುವುದು, ಅಲ್ಲಿ ಒಬ್ಬನು ತನ್ನ ಸೇವೆಯನ್ನು ಮಾಡುವಾಗ, ಅದು ಆತ್ಮಾನಂದಕ್ಕಾಗಿ ಎಂದು ಭಾವಿಸುವ ಬದಲು, ಭಗವಂತನ ಅಂಗವಾದ ಸ್ವಯಂ, ಅಂಗದ ಮಾಲೀಕರಾದ ಭಗವಂತನ ಸೇವಕ ಎಂದು ಭಾವಿಸುವುದು.
ಅಂತರಂಗ ಸಂಬಂಧಮ್ ಕಾಟ್ಟಿ – “ಪ್ರಾಪ್ತಂ ಲಕ್ಷ್ಮಿಪತೇರ್ದಾಸ್ಯಮ್ ಶಾಶ್ವತಂ ಪರಮಾತ್ಮನ:” (ಶ್ರೀಮಹಾಲಕ್ಷ್ಮಿಯ ಅಧಿಪತಿಯ ಕಡೆಗೆ ಶಾಶ್ವತವಾದ ದಾಸ್ಯವನ್ನು ಸಾಧಿಸಬೇಕು) -ಯಲ್ಲಿ ಹೇಳಿರುವಂತೆ ಅವನ ಸಂಬಂಧವು ಕೃತಕವಲ್ಲ.
ಹಾರೀತ ಸ್ಮೃತಿ:
“ದಾಸಭೂತಾ: ಸ್ವತ: ಸರ್ವೇ ಹಿ
ಆತ್ಮಾನ: ಪರಮಾತ್ಮನ: |
ನಾನ್ಯತಾ ಲಕ್ಷಣಂ ತೇಶಾಮ್ ಬಂಧೇ ಮೋಕ್ಷೇ ತಥೈವ ಚ ||”
(ಎಲ್ಲಾ ಆತ್ಮಗಳು ಸ್ವಾಭಾವಿಕವಾಗಿ ಪರಮಾತ್ಮಕ್ಕೆ ದಾಸರಾಗಿದ್ದಾರೆ. ಸಂಸಾರದಲ್ಲಿ ಮತ್ತು ಮೋಕ್ಷದಲ್ಲಿ ಬೇರೆ ಯಾವುದೇ ವ್ಯಾಖ್ಯಾನವಿಲ್ಲ)
ಮತ್ತು ಅರ್ಥಿ ಪ್ರಬಂಧಂ 45 –
“ನಾರಾಯಣನ್ ತಿರುಮಾಲ್ ನಾರಮ್ ನಾಮ್ ಎನ್ನುಮ್ ಮುರೈ ಆರಾಯಿಲ್ ನೆಂಜೇ ಅನಾದಿ ಅನ್ರೋ“
(ನಾರಾಯಣನು ಶ್ರೀ ಮಹಾಲಕ್ಷ್ಮಿಯ ದೈವೀಕ ಸಂಗಾತಿ ಮತ್ತು ನಾವು ಶಾಶ್ವತ ಆತ್ಮಗಳು – ಈ ಸಂಬಂಧವನ್ನು ವಿಶ್ಲೇಷಿಸಿದಾಗ, ಅದು ಶಾಶ್ವತವಾಗಿದೆ);
ಆದ್ದರಿಂದ ವಿಲಾಂಶೋಲೈ ಪಿಳ್ಳೈ ಅವರು “ಕಾಟ್ಟಿ” (ತೋರಿಸಲಾಗಿದೆ) ಎಂದು ಹೇಳುತ್ತಿದ್ದಾರೆ.
ಈಗಾಗಲೇ ಅಸ್ತಿತ್ವದಲ್ಲಿರುವುದನ್ನು ಮತ್ತು ಇತರರು ನೋಡುವುದನ್ನು ನಾವು ತೋರಿಸಬಹುದು. ಈ ಸಂಬಂಧವನ್ನು ಆಚಾರ್ಯರು ಹಿಂದೆ ಬಹಿರಂಗಪಡಿಸದ ಕಾರಣ, ಆತ್ಮವು ದೇಹಾಭಿಮಾನಿಯಾಗಿ ಉಳಿದುಕೊಂಡಿತು (ದೇಹವನ್ನು ಸ್ವಯಂ ಎಂದು ಪರಿಗಣಿಸಿ). ತಿರುವಾಯ್ಮೊಳಿ 2.9.9 ರಲ್ಲಿ ಹೇಳಿರುವಂತೆ ಬಹಳ ಕಾಲ “ಯಾನೇ ಎನ್ನೈ ಅರಿಯಾಗಿಲಾದೇ ಯಾನೇ ಎನ್ರನದೇ ಎನ್ರಿರುಂದೇನ್” (ನನಗೆ ಸಂಬಂಧಿಸಿದ ವಿಷಯಗಳಲ್ಲಿ ನನಗೆ ನಿಜವಾದ ಜ್ಞಾನವಿಲ್ಲದ ಕಾರಣ, ನಾನು ನನ್ನನ್ನು ಸ್ವತಂತ್ರ ಎಂದು ಪರಿಗಣಿಸಿದೆ ಮತ್ತು ನನ್ನನ್ನು ಹೊರತುಪಡಿಸಿ ಎಲ್ಲವನ್ನೂ ನನ್ನ ಆಸ್ತಿ ಎಂದು ಪರಿಗಣಿಸಿದೆ), ಲೆಕ್ಕವಿಲ್ಲದಷ್ಟು ಜನ್ಮಗಳನ್ನು ಪದೇ ಪದೇ ತೆಗೆದುಕೊಂಡೆನು, ಇತರ ದೇವತೆಗಳನ್ನು ಹೊಗಳಿದೆ ಮತ್ತು ನೃತ್ಯ ಮಾಡಿದೆ, ದಾರಿಯ ಬಗ್ಗೆ ದಿಗ್ಭ್ರಮೆಗೊಂಡಿದ್ದೆ, ತೈತ್ತಿರೀಯ ಉಪನಿಷತ್‌ನಲ್ಲಿ ಹೇಳಿರುವಂತೆ ಶಾಶ್ವತವಾಗಿ ಬಂಧಿತವಾದ ಆತ್ಮವು ಸಂಪೂರ್ಣವಾಗಿ ನಾಶವಾಯಿತು, “ಅಸನ್ನೇವ” (ಅಚಿತ್ (ಜ್ಞಾನವಿಲ್ಲದ ಪದಾರ್ಥ) ನಂತೆಯೇ), ಮತ್ತು ತಿರುವಾಯ್ಮೊಳಿ 5.7.3 “ಪೊರುಳ್ ಅಲ್ಲಾದ” (ಆತ್ಮ ಎಂದು ಕರೆಯಲು ಅರ್ಹನಲ್ಲದ ನಾನು);
ನಮಃ ದಲ್ಲಿ, ಎರಡು ಪದಗಳಿವೆ: ನ ಮತ್ತು ಮಃ, ಇದು “ಮಕಾರೇನಸ್ ಸ್ವತಂತ್ರಸ್ಯಾತ್” ನಲ್ಲಿ ಹೇಳಿದಂತೆ ಸ್ವಯಂನ ಸ್ವತಂತ್ರ ಪ್ರವೃತ್ತಿಯನ್ನು ಬಹಿರಂಗಪಡಿಸುತ್ತದೆ; ಇವೆಲ್ಲವನ್ನೂ ಪರಿಗಣಿಸಿ ವಿಲಾಂಶೋಲೈ ಪಿಳ್ಳೈ ಅವರು “ಅಂತರಂಗ ಸಂಬಂಧಮ್ ಕಾಟ್ಟಿ” ಎಂದು ಕರುಣೆಯಿಂದ ಹೇಳುತ್ತಿದ್ದಾರೆ.
ಮುಂದುವರೆಯುವುದು…
ಅಡಿಯೇನ್ ಯತಿರಾಜ ರಾಮಾನುಜ ದಾಸನ್
ಮೂಲ : https://divyaprabandham.koyil.org/index.php/2023/01/saptha-kadhai-pasuram-1-part-4/
ಸಂಗ್ರಹಣಾ ಸ್ಥಾನ https://divyaprabandham.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org