ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 1-10

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ಸ್ತೋತ್ರ ರತ್ನ

ಶ್ಲೋಕ 1 – ಮೊದಲ ಶ್ಲೋಕದಲ್ಲಿ ಆಳವಂದಾರ್ ಯತಾರ್ಥವಾದ ಧನವಾದ ಜ್ಞಾನ-ವೈರಾಗ್ಯಗಳಲ್ಲಿ ನಾಥಮುನಿಗಳ ಉತ್ಕರ್ಷವನ್ನು ನಮಸ್ಕರಿಸುತ್ತಾರೆ.
ನಮೋಚಿನ್ತ್ಯಾದ್ಭುದಾಕ್ಲಿಷ್ಟ ಜ್ಞಾನ ವೈರಾಗ್ಯರಾಶಯೇ |
ನಾಥಾಯ ಮುನಯೇಗಾಧಭಗವದ್ ಭಕ್ತಿಸಿನ್ದವೇ ||

ಅಡಿಯೇನ್, (ಮನಸ್ಸಿನ) ಆಲೋಚನೆಗೆ ಮೀರಿದ , ಅದ್ಭುತವಾದ ಜ್ಞಾನ ಹಾಗು ವೈರಾಗ್ಯವನ್ನು ಸುಲಭವಾಗಿ (ಭಗವದನುಗ್ರಹದಿಂದ) ಹೋಂದಿದ್ದವರು ಹಾಗು ಭಗವಂತನನ್ನೇ ಧ್ಯಾನಿಸುವವರು, ಹಾಗು ಭಗವದ್ಭಕ್ತಿಯ ಆರ್ಣವವಾಗಿರುವ ನಾಥಮುನಿಗಳಿಗೆ ನಮಸ್ಕರಿಸುತ್ತೇನೆ.

ಶ್ಲೋಕ 2 – ಈ ಶ್ಲೋಕದಲ್ಲಿ ಭಗವದವತಾರದ ಬಗ್ಗೆ ನಾಥಮುನಿಗಳ ಜ್ಞಾನದ ವೈಭವತಮತ್ವವನ್ನು ವಿವರಿಸಲ್ಪಡುತ್ತಿದೆ ಅಥವಾ “(ಹಿಂದಿನ ಶ್ಲೋಕದಲ್ಲಿ ವಿವರಿಸಲ್ಪಟ್ಟ) ಅವರ ಜ್ಞಾನಾದಿಗಳು ಅವರಲ್ಲಿ ನಿಲ್ಲದಲ್ಲದೆ ತಮ್ಮವರೆಗು (ಆಳವಂದಾರ್) ಬರುತ್ತಿದೆ” ಎಂಬ (ಅರ್ಥವನ್ನು) ವಿವರಿಸುತ್ತಿದೆ.
ತಸ್ಮೈ ನಮೋ ಮದುಜಿದಙ್ಘ್ರಿ ಸರೋಜ ತತ್ವ
ಜ್ಞಾನಾನುರಾಗ ಮಹಿಮಾತಿಶಯಾನ್ತಸೀಮ್ನೇ |
ನಾಥಾಯ ನಾಥಮುನಯೇತ್ರ ಪರತ್ರ ಚಾಪಿ
ನಿತ್ಯಮ್ ಯದೀಯ ಚರಣೌ ಶರಣಮ್ ಮದೀಯಮ್ ||

ಮಧುವನ್ನು ಸಂಹರಿಸಿದ ಎಮ್ಪೆರುಮಾನಿನ ಪಾದಕಮಮಲಗಳಲ್ಲಿ ಯಥಾರ್ಥ ಜ್ಞಾನ ಹಾಗು ಭಕ್ತಿಯ ಮಹಿಮೆಯ ಮಾಹಾತ್ಮ್ಯೆಯ ಅಂತವಾದವರಾದ ಶ್ರೀಮನ್ನಾಥಮುನಿಗಳ ದಿವ್ಯ ಚರಣಗಳೇ ನನಗೆ ಈ ಲೋಕದಲ್ಲು ಹಾಗು ಬೇರಿಯದಾದ (ಶ್ರೀವೈಕುಂಠದಲ್ಲಿ) ನನಗೆ ಎಂದಿಗೂ ಶರಣು.

ಶ್ಲೋಕ 3 – ದಾಹದಿಂಡ್ಗಿರುವವನು ಹೆಚ್ಚಿನ ಗಾತ್ರದಲ್ಲಿ ನೀರನ್ನು ಕುಡಿಯುತ್ತಿದ್ದರೂ ತೀರದಂತಹ ದಾಹಶಣ್ತೆ ಆಳವಂದಾರ್, “ಪುನಃಪುನಃ ನಾನು ಅವರ ದಾಸನು” ಎಂದು ಹೇಳುತಿದ್ದಾರೆ.
ಭೂಯೋ ನಮೋಪರಿಮಿತಾಚ್ಯುತ ಭಕ್ತಿ ತತ್ವ
ಜ್ಞಾನಾಮೃತಾಬ್ದಿ ಪರಿವಾಹ ಶುಬೈರ್ ವಚೋಪಿ: |
ಲೋಕೇವತೀರ್ಣ ಪರಮಾರ್ಥ ಸಮಗ್ರ ಭಕ್ತಿ
ಯೋಗಾಯ ನಾಥಮುನಯೇ ಯಮಿನಾಮ್ ವರಾಯ ||

ಅಪರಿಮಿತವಾದ ಭಗವದ್ಭಕ್ತಿಯು ಹಾಗು ತತ್ವಜ್ಞಾನದ ಸಾಗರದಿಂದ ಪ್ರವಹಸುತ್ತಿರುವ ಮಂಗಳ ಶ್ರೀಸೂಕ್ತಿಗಳ(ವಚನಗಳ) ರೂಪದಲ್ಲಿ ಅವತರಿಸಿದವರು, ಪರಮಪ್ರಪ್ಯರು, ಪೂರ್ಣರು, ಭಕ್ತಿಯೋಗವನ್ನು ಹೋಂದಿರುವವರು ಹಾಗು ಯೋಗಿಗಳಲ್ಲಿ ಶೇಷ್ಟರಾದ ನಾಥಮುನಿಗಳಿಗೆ ಪುನಃ ನಮಸ್ಕರಿಸುತ್ತೇನೆ.

ಶ್ಲೋಕ 4 – ಶ್ರೀವಿಷ್ಣು ಪುರಾಣವನ್ನು (ಕೊಡುಗೆಯಾಗಿ ಅನುಗ್ರಹಿಸಿದರಿಂದ) ಶ್ರೀ ಪರಾಶರ ಭಗವಾನನ್ನು ನಮಸ್ಕರಿಸುತ್ತಾರೆ.
ತತ್ವೇನ ಯಶ್ಚಿದಚೀದೀಶ್ವರ ತತ್ ಸ್ವಭಾವ
ಭೋಗಾಪವರ್ಗ ತದುಪಾಯಗತೀರುದಾರಃ |
ಸನ್ದರ್ಶಯನ್ ನಿರಮಿಮೀತ ಪುರಾಣರತ್ನಮ್
ತಸ್ಮೈ ನಮೋ ಮುನಿವರಾಯ ಪರಾಶರಾಯ ||

ವಿಶದವಾಗಿ (ಸ್ಪಷ್ಟವಾಗಿ) ಚಿತ್(ಚೇತನ/ಜ್ಞಾನವನ್ನು ಹೋಂದಿರುವ ದ್ರವ್ಯ), ಅಚಿತ್(ಅಚೇತನ/ ಜ್ಞಾನ ರಹಿತವಾದ ದ್ರವ್ಯ) ಹಾಗು ಈಶ್ವರನನ್ನು (ಭಗವಾನ್), ಅವುಗಳ ಸ್ವರೂಪವನ್ನು(ಯಾಥಾತ್ಮ್ಯವನ್ನು), (ಐಹಲೋಕಿಕ) ಭೋಗಗಳನ್ನು, ಮೋಕ್ಷವನ್ನು, ಐಹಲೋಕಿಕ ಭೋಗಗಳಿಗೆ ಹಾಗು ಮೋಕ್ಷಕ್ಕೆ ಸಾಧನೆಗಳನ್ನು ಜೀವಾತ್ಮನಿಂದ ಪ್ರಾಪ್ಯವನ್ನು ಯಥಾರ್ಥವಾಗಿ (ಸತ್ಯವಾಗಿ) ವಿವರಿಸುವಂತಃ ಪುರಾಣಗಳಲ್ಲಿ ರತ್ನವಾದ (ಉತ್ತಮವಾದಂತಃ) ಶ್ರೀವಿಷ್ಣು ಪುರಾಣವನ್ನು ಅನುಗ್ರಹಿಸಿದ ಉದಾರರಾದ ಋಷಿಶ್ರೇಷ್ಟರಾದ ಪರಾಶರ ಋಷಿಗೆ ನನ್ನ ನಮ್ಸಕಾರಗಳು.

ಶ್ರೀಃ
ಶ್ರೀಮತೇ ರಾಮಾನುಜಾಯ ನಮಃ

ಶ್ಲೋಕ-5 – ಆಳವಂದಾರ್ ನಮ್ಮಾೞ್ವಾರಿನ ದಿವ್ಯ ಪಾದಗಳಿಗೆ ಬಿದ್ದು ಅವರಲ್ಲಿ ಶರಣಾಗುತ್ತಾರೆ.
ಮಾತಾ ಪಿತಾ ಯುವತಯಸ್ ತನಯಾ ವಿಭೂತಿಃ
ಸರ್ವಮ್ ಯದೇವ ನಿಯಮೇನ ಮದನ್ವಯಾನಾಮ್ |
ಆದ್ಯಸ್ಯ ನಃ ಕುಲಪತೇರ್ ವಗುಳಾಭಿರಾಮಮ್
ಶ್ರೀಮತ್ ತದಙ್ಘ್ರಿಯುಗಳಮ್ ಪ್ರಣಮಾಮಿ ಮೂರ್ದ್ನಾ ||

ತಾಯಿ ,ತಂದೆ , ಯುವತಿ(ಪತ್ನಿ) ಪುತ್ರ, ಸಂಪತ್ತು ಹಾಗು (ಉಲ್ಲಿಖಿತವಲ್ಲದ) ಮತ್ತೆಲ್ಲವು (ನನಗೂ) ನನ್ನ ಸಂತತಿಗೂ ನಮ್ಮಾೞ್ವಾರಿನ ದಿವ್ಯ ಪಾದಗಳೇ. ನಮ್ಮ (ಶ್ರೀವೈಷ್ಣವ) ಕುಲದ ನಾಥರು ಶ್ರೀವೈಷ್ಣವಶ್ರೀ(ಕೈಂಕರ್ಯಶ್ರೀ)ಯುಕ್ತರು ವಕುಳಪುಷ್ಪಗಳಿಂದ ಅಲಂಕೃತರಾದ ಆೞ್ವಾರಿನ ದಿವ್ಯಪಾದಗಳಿಗೆ ಶಿರಸಾ ನಮಸ್ಕರಿಸುತ್ತೇನೆ.

ಶ್ಲೋಕ-6 – “ವೈಗುನ್ತನಾಗಪ್ ಪುಗೞ” (7.9.7.ತಿರುವಾಯ್ಮೊೞಿಯಲ್ಲಿ ಎಮ್ಪೆರುಮಾನ್ ಆೞ್ವಾರನ್ನು ಶ್ರೀವೈಕುಂಠನಾಥನಾಗಿ ಸ್ತುತಿಸುವಂತೆ ಮಾಡುತ್ತಿದ್ದಾನೆ) ಹೇಳಿದಂತೆ, ತನಗು(ಈಶ್ವರನಿಗೆ) ಸ್ತವಗಳು ಪ್ರಿಯವಾದರಿಂದ ಹಾಗು ಆಚಾರ್ಯರಿಗೂ ಭಗವದ್-ಸ್ತುತಿ ಪ್ರಿಯವಾದರಿಂದಲು, ಉಪಾಯ-ಉಪೇಯಗಳನ್ನು ವಿವರಿಸುತ್ತಾ ಸ್ತುತಿಸುವ ಇಚ್ಛೆಯಿಂದ ಅರಂಬಿಸುತ್ತಾರೆ.

ಯನ್ಮೂರ್ದ್ನಿ ಮೇ ಶ್ರುತಿಶಿರಸ್ಸು ಚ ಭಾತಿ ಯಸ್ಮಿನ್
ಅಸ್ಮನ್ ಮನೋರತಪದಸ್ ಸಕಲಸ್ಸಮೇತಿ |
ಸ್ತೋಶ್ಯಾಮಿ ನಃ ಕುಲದನಮ್ ಕುಲದೈವತಮ್ ತತ್
ಪಾದಾರವಿನ್ದಮ್ ಅರವಿನ್ದವಿಲೋಚನಸ್ಯ ||

ವೇದಾಂತದಲ್ಲೂ ನನ್ನ ಶಿರಸ್ಸಿನಲ್ಲು ಪ್ರಾಕಾಶಿಸುತ್ತಿರುವ ನಮ್ಮ ಕುಲಧನವು (ಅಲಂಬಿಸಲ್ತಕ್ಕದಾದ) ಕುಲದೇವತೆಯಾದ ಪುಣ್ಡರೀಕಾಕ್ಷನ ಯಾವ ದಿವ್ಯ ಪಾದಪಂಕಜಗಳಲ್ಲಿ ನಮ್ಮ ಪ್ರವಹಸುತ್ತಿರುವ ಭಕ್ತಿಯು ಸುಂದರವಾಗಿ ಸೇರುವುದೋ ಅಂತಃ ಶ್ರೀಪಾದಗಳನ್ನು ನಾನು ಸ್ತುತಿಸುವೆ.

ಶ್ಲೋಕ-7 ಅರ್ಜುನನು “ವಿಸ್ರುಜ್ಯ ಸಶರಮ್
ಚಾಪಮ್” (ಧನುಶನ್ನು ಬಾಣಗಳೊಂದಿಗೆ ಕೆಳಗೆ ಬಿಟ್ಟನು) ಶ್ರೀ ಭಗವದ್ಗೀತೇ 1.47ರಲ್ಲಿ ಹೇಳಿದಂತೆ ಹೊರಟ ಯುಧ್ದವನ್ನು ತ್ಯಜಿಸಿದಂತೆ ಆಳವಂದಾರ್ (ಸ್ತುತಿಸುವ) ವಿವರಿಸುತ್ತಾರೆ

ತತ್ವೇನ ಯಸ್ಯ ಮಹಿಮಾರ್ಣವಶೀಕರಾಣು:
ಶಕ್ಯೋ ನ ಮಾತುಮಪಿ ಶರ್ವಪಿತಾಮಹಾದ್ಯೈಃ |
ಕರ್ತುಮ್ ತದೀಯಮಹಿಮಸ್ತುತಿಮುದ್ಯತಾಯ
ಮಹ್ಯಮ್ ನಮೋ£ಸ್ತು ಕವಯೇ ನಿರಪತ್ರಪಾಯ ||

ಭಗವದ್ವೈಭವದ ಆರ್ಣವದಿಂದ ಶಿವ ಬ್ರಹ್ಮಾದಿಗಳಿಂದ ಅಣುಮಾತ್ರವೂ ಅರಿಯಲು ಅಸಾಧ್ಯವಾದ ಎಮ್ಪೆರುಮಾನಿನ ಮಹಿಮೆಯನ್ನು ನಿರ್ಲಜ್ಜನಾಗಿ ಕವಿಯೆಂದು ಕರೆದುಕೊಂಡು ಸ್ತುತಿಸಲು ಹೊರಟ ನನ್ನನು ನಾನೇ ( ಈ ಪರಿಹಾಸ್ಯ ಕಾರ್ಯಕ್ಕೆ) ನಮಸ್ಕರಿಸುತ್ತೇನೆ.

ಶ್ಲೋಕ 8 – ಅರ್ಜುನನನ್ನು ಈಶ್ವರನು “ಕರಿಶ್ಯೇ ವಚನಮ್ ತವ”(ನೀನು ಹೇಳಿದಂತೆ ಯುಧ್ದವನ್ನು ಮಾಡುತ್ತೇನೆ) ಶ್ರೀ ಭಗವದ್ಗೀತೇ 18.73 ಎಂದು ಹೇಳುವಂತೆ ಮಾಡಿದಂತೆ, ವಾಕ್ಕಿನ(ಬಾಯಿನ) ಪ್ರಯೋಜನವು ತನ್ನನ್ನು ಸ್ತುತಿಸುವುದೇ ಎಂದೂ , ಶ್ರೀವಿಷ್ಣುಸಹಸ್ರನಾಮದಲ್ಲಿ “ಸ್ತವ್ಯಃ ಸ್ತವಪ್ರಿಯಃ” (ಸ್ತುತಿಸಲು ತಕ್ಕವನು ಹಾಗು ಸ್ತುತಿಯಿಂದ ಪ್ರಿಯನಾಗುವವನು) ಎಂದು ಹೇಳಿದಂತೆ ಸ್ತುತಿಯು ನನಗೆ ಪ್ರಿಯವಾದದ್ದು ಎಂದು ಪ್ರೆರಿಸಲು, ಆಳವಂದಾರ್ ಸ್ತುತಿಸಲು ನಿಶ್ಚಯಿಸುತ್ತಾರೆ.
ಯದ್ವಾ ಶ್ರಮಾವದಿ ಯತಾಮತಿ ವಾಪ್ಯಶಕ್ತಃ
ಸ್ತೌಮ್ಯೇವಮೇವ ಕಲು ತೇ£ಪಿ ಸದಾ ಸ್ತುವಂತಃ |
ವೇದಾಶ್ಚತುರ್ಮುಖ ಮುಖಾಶ್ಚ ಮಹಾರ್ಣವಾನ್ತ:
ಕೋ ಮಜ್ಜತೋರಣುಕುಲಾಚಲಯೋರ್ವಿಶೇಷ: ||

ಭಗವದ್ವೈಭವದ ಆರ್ಣವದಿಂದ ಶಿವ ಬ್ರಹ್ಮಾದಿಗಳಿಂದ ಅಣುಮಾತ್ರವೂ ಅರಿಯಲು ಅಸಾಧ್ಯವಾದ ಎಮ್ಪೆರುಮಾನಿನ ಮಹಿಮೆಯನ್ನು ನಿರ್ಲಜ್ಜನಾಗಿ ಕವಿಯೆಂದು ಕರೆದುಕೊಂಡು ಸ್ತುತಿಸಲು ಹೊರಟ ನನ್ನನು ನಾನೆ ( ಈ ಪರಿಹಾಸ್ಯ ಕಾರ್ಯಕ್ಕೆ) ನಮಸ್ಕರಿಸುತ್ತೇನೆ

ಶ್ಲೋಕ 9 – ಈಗ ಆಳವಂದಾರ್ ಬ್ರಹ್ಮಾದಿಗಳಿಗಿಂತಲು ಸ್ತುತಿಸಲು ಅರ್ಹರೆಂದು ಹೇಳುತಿದ್ದಾರೆ.
ಕಿಞ್ಚೈಶ ಶಕ್ತ್ಯತಿಶಯೇನ ನ ತೇಧ್ನುಕಮ್ಪ್ಯಃ
ಸ್ತೋತಾಪಿ ತು ಸ್ತುತಿ ಕೃತೇನ ಪರಿಶ್ರಮೇಣ |
ತತ್ರ ಶ್ರಮಸ್ತು ಸುಲಭೋ ಮಮ ಮನ್ದಬುದ್ದೇಃ
ಇತ್ಯುದ್ಯಮೋಯಮುಚಿತೋ ಮಮ ಚಾಪ್ಜನೇತ್ರ ||

ಇದಲ್ಲದೆ, ನಾನು ನಿನ್ನನ್ನು ಸ್ತುತಿಸಲು ಶಕ್ತನೆಂಬ ವೈಭವದಿಂದ ನಿನ್ನ ಅನುಕಂಪವನ್ನು ವರ್ಷಿಸಲು ಅನ್ಹರ್ಹನು, ಸ್ತುತಿಸುವ ಕೃತ್ಯದಲ್ಲಿ ಪರಿಶ್ರಮದಿಂದ ನಿನ್ನ ಅನುಕಂಪಾವರ್ಷಕ್ಕೆ ತಕ್ಕವನು, ಇದರಲ್ಲಿ ನನ್ನ ಮಂದಬುಧ್ದಿಯಿಂದ ಸುಲಭವಾಗಿ ಶ್ರಮಗೋಳ್ಳುವ ನನಗೆ (ಸ್ತುತಿರೂಪದಲ್ಲಿಎಉವ) ಈ ಪ್ರಯತ್ನವು (ಬ್ರಹ್ಮಾದಿಗಳನ್ನು ಹೋಲಿಸಿದರೆ) ಉಚಿತವೇ (ಪ್ರಾಪ್ತವೇ) ಆಗಿದೆ.

ಶ್ಲೋಕ 10 – ಭಗವದ್ಸ್ತುತಿಯಿಂದ ಹಿಂಜೇರಿ, ಸ್ತುತಿಸಲು ನಿರ್ಣಯಿಸಿ, ಮುಂದಿನ ಐದುಶ್ಲೋಕಗಳಲ್ಲಿ ಶರಣ್ಯನಾಗಿಮಾಡುವ ಪರತ್ವವನ್ನು ವಿವರಿಸುತಿದ್ದಾರೆ. ಇದನ್ನು ತಮ್ಮ ಕೃಪೆಯಿಂದ ಕಾರಣವಾಕ್ಯಗಳಿಂದ ಭಗವದ್ಪರತ್ವವನ್ನು ವಿವರಿಸುತಿದ್ದಾರೆ.
ನಾವೇಕ್ಶಸೇ ಯದಿ ತತೋ ಭುವನಾನ್ಯಮೂನಿ
ನಾಲಮ್ ಪ್ರಭೋ ಭವಿತುಮೇವ ಕುತಃ ಪ್ರವೃಉತ್ತಿಃ |
ಏವಮ್ ನಿಸರ್ಗ ಸುಹೃಉದಿ ತ್ವಯಿ ಸರ್ವಜನ್ತೋಃ
ಸ್ವಾಮಿನ್ ನ ಚಿತ್ರಮ್ ಇದಮ್ ಆಶ್ರಿತ ವತ್ಸಲತ್ವಮ್ ||

ಓ ನಾಥನೇ! ಪ್ರಲಯದನಂತರ ನಿನ್ನ ದಯಾಕಟಾಕ್ಷದಿಂದ ಅನುಗ್ರಹಿಸದಿದ್ದರೆ ,ಈ ಲೋಕಗಳು ಶ್ರುಷ್ಟವಾಗದಿರುವುದು, (ಲೋಕಗಳೆ ಇಲ್ಲದಿದ್ದ್ಡಲ್ಲಿ) ಹಾವ ಪ್ರವೃತ್ತಿಯಾಗಲಿ ಹೇಗೆ ಸಾದ್ಯ. ಹೇ ಪ್ರಭೋ! ಎಲ್ಲರಿಗು ಸಹಜ ಸುಹೃತ್ತಾದ (ಮಿತ್ರನಾದ) ನಿನ್ನ ಈ ಆಶ್ರಿತವತ್ಸಲತ್ವವೆಂಬ ಗುಣವನ್ನು ಪ್ರಕಾಶಿಸುವುದರಲ್ಲಿ ಯಾವುದೆ ಆಶ್ಚರ್ಯವೂಯಿಲ್ಲ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – https://divyaprabandham.koyil.org/index.php/2020/10/sthothra-rathnam-slokams-1-10-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment