ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 91ರಿಂದ 100

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

ಪಾಸುರ-91
(
ತಾಳಡೈನ್ದೋರ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಮ್ಮ ಕೊನೆಯ ದಿನಾಂಕದ ವರೆಗೂ ಎಮ್ಪೆರುಮಾನಿನ ಸಹಿತ ಪರಮಪದಕ್ಕೆ ಹೊರಡಲು ಸಿದ್ಧವಾಗುವ ಪಾಸುರಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ

ತಾಳ್ ಅಡೈನ್ದೋರ್ ತನ್ಗಟ್ಕುತ್ ತಾನೇ ವೞಿತ್ ತುಣೈಯಾಮ್
ಕಾಳಮೇಗತ್ತೈಕ್ ಕದಿಯಾಕ್ಕಿ ಮೀಳುದಲಾಮ್
ಏದಮಿಲಾ ವಿಣ್ಣುಲಗಿಲ್ ಏಗ ಎಣ್ಣುಮ್ ಮಾಱನ್ ಎನಕ್
ಕೇದಮ್ ಉಳ್ಳದೆಲ್ಲಾಮ್ ಕೆಡುಮ್

ತನ್ನ ದಿವ್ಯ ಪಾದಗಳಲ್ಲಿ ಶರಣರಾದವರ ಚರಮ ಪ್ರಯಾಣಕ್ಕೆ ತಾನೆ ಸಹಚಾರಿಯಾಗಿರುವನು. ಕಾಲಮೇಘದಂತಿರುವ ಎಮ್ಪೆರುಮಾನನ್ನೇ ಮಾರ್ಗದಲ್ಲಿ ರಕ್ಷಕನಾಗಿ ಹೋಂದಿ (ಸಂಸಾರಕ್ಕೆ) ಹಿಂತಿರುಗುವ ದೋಷವಿಲ್ಲದಿರುವ ಪರಮಪದಕ್ಕೆ ತಮ್ಮ ಕೃಪೆಯಿಂದ ಆೞ್ವಾರ್ ಹೊರಡಲು ಇಛ್ಚಿಸಿದರೆಂದು ಚಿಂತಿಸುವ ಕಾಲದಲ್ಲೆ ದುಃಖವೆಂದು ಕರೆಯಲ್ಪಡುವವೆಲ್ಲವೂ ನಾಶವಾಗುವುದು.

ಪಾಸುರ-92
(
ಕೆಡುಮಿಡರ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಪರಮಪದದಲ್ಲಿ ಮಾಡುವ ಕೈಂಕರ್ಯವನ್ನು ತಿರುವನಂತಪುರದಲ್ಲಿ ಮಾಡಲು ಇಚ್ಛಿಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಕೆಡುಮಿಡರ್ ವೈಗುನ್ದತ್ತೈಕ್ ಕಿಟ್ಟಿನಾಪ್ಪೋಲೇ
ತಡಮುಡೈ ಅನನ್ದಪುರಮ್ ತನ್ನಿಲ್ ಪಡವರವಿಲ್
ಕಣ್ಡುಯಿಲ್ ಮಾಱ್ಕಾಟ್ಚೆಯ್ಯಕ್ ಕಾದಲಿತ್ತಾನ್ ಮಾಱನ್ ಉಯರ್
ವಿಣ್ಡನಿಲ್ ಉಳ್ಳೋರ್ ವಿಯಪ್ಪವೇ

ವೈಭವಯುಕ್ತವಾದ ಪರಮಪದಲ್ಲಿ ನಿವಾಸಿಸುವ ನಿತ್ಯ ಸೂರಿಗಳು ಆಶ್ಚರ್ಯಪಡುವಂತೆ ,ಆೞ್ವಾರ್ ಫಣಮಂಡಲವನ್ನು ಹೊಂದಿರುವ ಆದಿಶೇಷನೆಂಬ ಹಾಸಿಗೆಯಮೇಲೆ ವಿಸ್ತಾರವಾದ ತಿರುವನಂತಪುರದಲ್ಲಿ ಶಯನಿಸುತ್ತಿರುವ ಎಮ್ಪೆರುಮಾನಿಗೆ ,ಯಾವುದೇ ದುಃಖವಿಲ್ಲದ ಶ್ರೀವೈಕುಂಠವ್ವನ್ನು ಲಭಿಸಿ ಕೈಂಕರ್ಯದಲ್ಲಿ ನಿರತರಾದಂತೆ ,ಕೈಂಕರ್ಯವನ್ನು ಮಾಡಲು ಇಚ್ಛಿಸಿದರು.

ಪಾಸುರ-93
(
ವೇಯ್ಮರುತೋಳ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿನ ಇಚ್ಛೆಗೆ ವಿರುದ್ಧವಾಗಿ ಏಕೆ ಸಂಸಾರದಲ್ಲಿ ಇಟ್ಟರು ಎಂಬ ಸಂಶವನ್ನು ಸರ್ವೇಶ್ವರನು ದೂರ ಮಾಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ವೇಯ್ ಮರು ತೋಳ್ ಇನ್ದಿರೈ ಕೋನ್ ಮೇವುಗಿನ್ಱ ದೇಸತ್ತೈ
ತಾನ್ ಮರುವಾತ್ ತನ್ಮೈಯಿನಾಲ್ ತನ್ನೈ ಇನ್ನಮ್ ಬೂಮಿಯಿಲೇ
ವೈಕ್ಕುಮ್ ಎನಚ್ ಚನ್ಗಿತ್ತು ಮಾಲ್ ತೆಳಿವಿಕ್ಕತ್ ತೆಳಿನ್ದ
ತಕ್ಕ ಪುಗೞ್ ಮಾಱನ್ ಎನ್ಗಳ್ ಸಾರ್ವು

ಶ್ರೀಮಹಾಲಕ್ಷ್ಮಿಯ ನಾಥನಾದ ಬಿದಿರಿನಂತೆ ಹಾಗು ಶಕ್ತಿಹುತವಾದ ಭುಜಗಳನ್ನು ಹೊಂದಿರುವ ಶ್ರೀಮನ್ನಾರಾಯಣುನು ವಾಸಿಸುವ ಲೋಕವನ್ನು ಹೊಂದಲಾಗದೆ ಅನಗತ್ಯವಾಗಿ ಶಂಕಿಸಿ ,”ಎಮ್ಪೆರುಮಾನ್ ಇನ್ನೂ ಸಂಸಾರದಲ್ಲಿ ಇಡುವನೋ” ಎಂದು ಚಿಂತಿಸಲು, ಎಮ್ಪೆರುಮಾನಿಂದ ಸ್ಪಷ್ಟತೆ ಹೊಂದಿದರು. ಇಂತಹ ಕೀರ್ತಿಯನ್ನು ಹೊಂದಿರುವ ಆೞ್ವಾರ್ ನಮಗೆ ಶರಣ್ಯರು.

ಪಾಸುರ-94
(ಸಾರ್ವಾಗವೇ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಪೂರ್ವವೇ ಉಪದೇಶಿಸಿದ ಭಕ್ತಿ(ಯೋಗವು) ತನ್ನ ಪಕ್ವ ದಶೆಯನ್ನು ಹೊಂದುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಸಾರ್ವಾಗವೇ ಅಡಿಯಿಲ್ ತಾನುರೈತ್ತ ಪತ್ತಿದಾನ್
ಸೀರಾರ್ ಪಲತ್ತುಡನೇ ಸೇರ್ನ್ದದನೈಚ್ ಚೋರಾಮಲ್
ಕಣ್ಡುರೈತ್ತ ಮಾಱನ್ ಕೞಲಿಣೈಯೇ ನಾಡೋಱುಮ್
ಕಣ್ಡುಗಕ್ಕುಮ್ ಎನ್ನುಡೈಯ ಕಣ್
ತಮ್ಮ ಕೃಪೆಯಿಂದ ಪೂರ್ವವೇ “ವೀಡುಮಿನ್” (1.2) ತಿರುವಾಯ್ಮೊಳಿಯಲ್ಲಿ ಎಲ್ಲರಿಂದಲೂ ಉಪಾದೇಯವಾದ (ಅನುಶ್ಟೇಯವಾದ) ಹಾಗು ಉತ್ತಮವಾದ

ಪಾಸುರ-95
(ಕಣ್ಣನ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಭಗವದ್ ಭಕ್ತರು ಎಮ್ಪೆರುಮಾನಿನ ವಿಷಯದಲ್ಲಿ (ಭಕ್ತಿಯಿಂದ) ಮಾಡುವ ಕಾರ್ಯಗಳನ್ನು  ವಿವರಿಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಕಣ್ಣನ್ ಅಡಿ ಇಣೈಯಿಲ್ ಕಾದಲ್ ಉಱುವಾರ್ ಸೆಯಲೈತ್
ತಿಣ್ಣಮ್ ಉಱವೇ ಸುರುನ್ಗಚ್ ಚೆಪ್ಪಿಯೇ ಮಣ್ಣವರ್ಕ್ಕುತ್
ತಾನ್ ಉಪದೇಸಿಕ್ಕೈ ತಲೈಕ್ಕಟ್ಟಿನಾನ್ ಮಾಱನ್
ಆನ ಪುಗೞ್ ಸೇರ್ ತನ್ ಅರುಳ್
ತಮ್ಮ ಕೃಪೆಯಿಂದ ವೈಭವಯುಕ್ತರಾದ ಆೞ್ವಾರ್, ಭಕ್ತರು ಎಮ್ಪೆರುಮಾನಿನ ದಿವ್ಯ ಪಾದಗಳ ವಿಷಯದಲ್ಲಿ ಮಾಡುವ (ಭಗವದ್ ಪ್ರೀತಯ) ಕಾರ್ಯಗಳನ್ನು ಸಂಕ್ಷಿಪ್ತವಾಗಿ ಎಲ್ಲಾ ಆತ್ಮಗಳ(ಚೇತನರರ) ಹೃದಯದಲ್ಲೂ ಸ್ಥಿರಗೊಳಿಸಿ ತಮ್ಮ ಉಪದೇಶ ಕಾರ್ಯವನ್ನು ಪೂರ್ಣಗೋಳಿಸಿದರು.


ಪಾಸುರ-96
(
ಅರುಳಾಲ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರನ್ನು ಪರಮಪದಕ್ಕೇ ಕರೆದೊಯ್ಯಲು ಎಮ್ಪೆರುಮಾನ್ ಉತ್ಸುಕನಾಗಿ ಅದನ್ನು ಆೞ್ವಾರಿನ ಆಜ್ಞೆಯಂತೆ ಮಾಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಅರುಳಾಲ್ ಅಡಿಯಿಲ್ ಎಡುತ್ತ ಮಾಲ್ ಅನ್ಬಾಲ್
ಇರುಳಾರ್ನ್ದ ತಮ್ ಉಡಮ್ಬೈ ಇಚ್ಚಿತ್ತು ಇರುವಿಸುಮ್ಬಿಲ್
ಇತ್ತುಡನ್ ಕೊಣ್ಡು ಏಗ ಇವರ್ ಇಸೈವು ಪಾರ್ತ್ತೇ ಇರುನ್ದ
ಸುತ್ತಿ ಸೊಲ್ಲುಮ್ ಮಾಱನ್ ಸೆನ್ಜೊಲ್

ಸರ್ವೇಶ್ವರನು ತನ್ನ ನಿರ್ಹೇತುಕ (ಕಾರಣವಿಲ್ಲದ) ಕೃಪೆಯಿಂದ ಮೊದಲು ಆೞ್ವಾರನ್ನು ಸಂಸಾರದಿಂದ ಉದ್ಧರಿಸಿದನು; ಆೞ್ವಾರಿನ ದಿವ್ಯ ವಾಕ್ ,ಅಜ್ಞಾನಮಯವಾದ ಆೞ್ವಾರಿನ ಶರೀರವನ್ನು ಇಚ್ಛಿಸಿ ,ಅವರನ್ನು ಶರೀರದೊಂದಿಗೇ ಕರೆದೊಯ್ಯಲು ಅವರ ಅನುಮತಿಯನ್ನು ಕೇಳಿದ ಸರ್ವೇಶ್ವರನ ಶುದ್ಧತೆಯನ್ನು ಪ್ರಕಾಶಿಸುತ್ತದೆ.

ಪಾಸುರ-97
(ಸೆನ್ಜೊಲ್…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ , ಎಮ್ಪೆರುಮಾನ್ ಆೞ್ವಾರಿನ ಶರೀರವನ್ನು ಇಚ್ಛಿಸುವುದನ್ನು ಕಂಡು ಎಮ್ಪೆರುಮಾನಿಗೆ, “ವಿರೋಧಯಾದ ಈ ಶರೀರದಿಂದ ನನ್ನನ್ನು ಬಿಡುಗೊಳಿಸಿ” ಎಂದು ಹೇಳಿ ಎಂಪೆರುಮಾನನ್ನು ತನ್ನ ಇಚ್ಛೆಯನ್ನು ಬಿಡಲು ಹೇಳುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಸೆನ್ಜೊಱ್ಪರನ್ ತನದು ಸೀರಾರುಮ್ ಮೇನಿ ತನಿಲ್
ವನ್ಜಿತ್ತುಚ್ ಚೆಯ್ಗಿನ್ಱ ವಾನ್ಜೈದನಿನ್ ವಿನ್ಜುದಲೈಕ್
ಕಣ್ಡವನೈಕ್ ಕಾಱ್ಕಟ್ಟಿಕ್ ಕೈ ವಿಡುವಿತ್ತುಕ್ ಕೊಣ್
ಡತಿಣ್ಡಿಱಲ್ ಮಾಱನ್ ನಮ್ ತಿರು

ಅರ್ಜವಶಬ್ದಗಳಿಂದ ಭೂರಿತವಾದ ವೇದ ವೇದ್ಯನಾದ (ವೇದದಿಂದ ಅರಿಯಲ್ಪಡುವವನಾದ) ಪರಮಪುರುಷನು, ಜ್ಞಾನಾದಿ ಗುಣಗಳಿಂದ ಭರಿತವಾದ ಆೞ್ವಾರಿನ ದಿವ್ಯ ರೂಪದ ವಿಷಯದಲ್ಲಿ ಲೀಲಚೇಷ್ಟೆಚ್ಛೆ ಜನಿಸಿತು. ಇದನ್ನು ಕಂಡ ದೃಢವಾದ ಶಕ್ತಿಯ ಆೞ್ವಾರ್ ಎಮ್ಪೆರುಮಾನಿನ ದಿವ್ಯ ಪಾದಗಳನ್ನು ಹಿಡಿದು ಜೀವಿಸಿದರು. ಇಂತಹ ಆೞ್ವಾರೇ ನಮ್ಮ ನಿಧಿ.

ಪಾಸುರ-98
(
ತಿರುಮಾಲ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಬಲವಂತವಾಗಿ ಎಮ್ಪೆರುಮಾನನ್ನು ,”ಅನಾದಿಯಾದ ಕಾಲದಿಂದ ನನ್ನನ್ನು ಅಂಗೀಕರಿಸದ ನೀವು ನನನ್ನು ಈಗ ಏಕೆ ಅಂಗೀಕರಿಸುತ್ತಿರುವಿರಿ.” ,ಎಮ್ಪೆರುಮಾನಿನ ಬಳಿ ಏನು ಉತ್ತರವಿಲ್ಲಿದ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ತಿರುಮಾಲ್ ತಮ್ಪಾಲ್ ವಿರುಪ್ಪಮ್ ಸೆಯ್ಗಿನ್ಱ ನೇರ್ ಕಣ್ಡು
ಅರುಮಾಯತ್ತನ್ಱಗಲ್ವಿಪ್ಪಾನ್ ಎನ್ ಪೆರುಮಾಲ್ ನೀ
ಇನ್ಱೆನ್ಪಾಲ್ ಸೆಯ್ವಾನೆನ್ ಎನ್ನ ಇಡರುಟ್ರು ನಿನ್ಱಾನ್
ತುನ್ನು ಪುಗೞ್ ಮಾಱನೈತ್ ತಾನ್ ಸೂೞ್ನ್ದು

ತಮ್ಮ ವಿಷಯದಲ್ಲಿ ಶ್ರೀಮನ್ನಾರಾಯಣನ ಮಹತ್ತಾದ ಅಭಿಮಾನವನ್ನು ಕಂಡು ವೈಭವೋತ್ಕರ್ಷಯುಕ್ತರಾದ(ಉತ್ಕರ್ಷ=ಮಹತ್ತಾದ) ಆೞ್ವಾರ್ ,”ಓ ಎಮ್ಪೆರುಮಾನ್! ಅನಾದಿಯಾದ ಕಾಲದಿಂದ ನನ್ನನು ಸಂಸಾರದಲ್ಲಿಟ್ಟು (ದೂರ) ತಳ್ಳಲುಕಾರಣವೇನು ?ಈಗ ನನ್ನಲ್ಲಿ ಈ ಅಭಿಮಾನೋತ್ಕರ್ಷ ಏಕೆ ಇಡುವಿರಿ.” ಎಮ್ಪೆರುಮಾನಿನ ಬಳಿ ಉತ್ತರವಿಲ್ಲದೆ ವಿನಯವಾಗಿ, ಡುಃಖದಿಂದಿದ್ದರು.

ಪಾಸುರ-99
(
ಸೂೞ್ನ್ದು…) ಈ ಪಾಸುರದಲ್ಲಿ, ಎಮ್ಪೆರುಮಾನ್ ತೋರಿದ ಅರ್ಚಿರಾದಿ ಮಾರ್ಗದಲ್ಲಿ ದೊರಕಿದ ಸ್ವಾಗತವನ್ನು ಅನುಭವಿಸುವ ಪಾಸುರಗಳನ್ನು ಅನುಸರಿಸಿ ಮಾಮುನಿಗಳು ವಿವರಿಸುತಿದ್ದಾರೆ.
ಸೂೞ್ನ್ದು ನಿನ್ಱ ಮಾಲ್ ವಿಸುಮ್ಬಿಲ್ ತೊಲ್ಲೈ ವೞಿ ಕಾಟ್ಟ
ಆೞ್ನ್ದು ಅದನೈ ಮುಟ್ರುಮ್ ಅನುಬವಿತ್ತು ವಾೞ್ನ್ದನ್ಗು
ಅಡಿಯರುಡನೇ ಇರುನ್ದ್ ಆಟ್ರೈ ಉರೈ ಸೆಯ್ದಾನ್
ಮುಡಿ ಮಗಿೞ್ ಸೇರ್ ಜ್ಞಾನ ಮುನಿ

ಎಮ್ಪೆರುಮಾನ್ ಆೞ್ವಾರಿನ ಸುತ್ತಲ್ಲು ನಿಂತನು ಹಾಗು ಪುರಾತನವಾದ ಪರಮಪದಕ್ಕೆ ಹೋಗುವ ಅರ್ಚಿರಾದಿ ಮಾರ್ಗವನ್ನು ತೋರಿದರು, ವಕುಳ ಮಾಲೆಯಿಂದ ಅಲಂಕೃತವಾದ ಶಿರಸ್ಸನ್ನು ಹೊಂದಿರುವವರಾದ, ಜ್ಞಾನ ಮುನಿಗಳಾದ ಆೞ್ವಾರ್ ಆನಂದ ಸಾಗರದಲ್ಲಿ ಮುಳುಗಿ,ಅನುಭವಿಸುವ ವಾಸಿಸುವ ,ತಾವು ಗರುಡ ವಿಶ್ವಕ್ಸೇನಾದಿಗಳಂತಃ ಭಕ್ತರೊಂದಿಗೆ ನಿರ್ಭರರಾಗಿ ಸಂತುಷ್ಟರಾಗಿದ್ದ ರೀತಿಯನ್ನು ವಿವರಿಸುತಿದ್ದಾರೆ.

ಪಾಸುರ-100
(ಮುನಿಮಾಱನ್…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ (ಭಗವಂತನನ್ನು ಅಡೈಯುವ ಮುನ್ನವಿರುವ ದಶೆಯಾದ) ಪರಮಭಕ್ತಿಯ ಸಹಾಯದಿಂದ ಆೞ್ವಾರ್ ಪರಮಪ್ರಾಪ್ಯವನ್ನು ಹೊಂದುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಮುನಿ ಮಾಱನ್ ಮುನ್ಬುರೈ ಸೆಯ್ ಮುಟ್ರಿನ್ಬಮ್ ನೀನ್ಗಿ
ತನಿಯಾಗಿ ನಿನ್ಱು ತಳರ್ನ್ದು ನನಿಯಾಮ್
ಪರಮ ಪತ್ತಿಯಾಲ್ ನೈನ್ದು ಪನ್ಗಯತ್ತಾಳ್ ಕೋನೈ
ಒರುಮೈ ಉಟ್ರುಚ್ ಚೇರ್ನ್ದಾನ್ ಉಯರ್ನ್ದು

ಧ್ಯಾನಿಸುವವರಾದ ಆೞ್ವಾರ್, ಪೂರ್ವಾನುಭಾವ್ಯಗಳಾದ ಆನಂದದಿಂದ ದೂರಹೋಗಿ, ದುಃಖದಿಂದ ಅವರೊಬ್ಬರೆ ನಿಂತರು. ಪರಮ ಭಕ್ತಿಯಿಲ್ಲಿ ಪಕ್ವರಾದ ಆೞ್ವಾರ್ , ತಮ್ಮ ದಿವ್ಯ ಹೃದಯದಲ್ಲಿ ಶ್ರಿಯಃಪತಿಯ ಸಾಹಚರ್ಯದಿಂದ ನಿತ್ಯ ಸೂರಿಗಳ ವೈಭವವನ್ನು ಹೊಂದಿದವರು ಪ್ರತ್ಯಕ್ಷಸಾಕ್ಷಾತ್ಕಾರವನ್ನು (ತಮ್ಮ ಬಾಹ್ಯ ಚಕ್ಷುಸ್ಸಿನಿಂದ) ಅನುಭವಿಸಿ ದಿವ್ಯದಂಪತಿಗಳ ಅನ್ಯೋನ್ಯತೆಯನ್ನು ಸೇವೆಯನ್ನು ಹೊಂದಿದರು.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – https://divyaprabandham.koyil.org/index.php/2020/10/thiruvaimozhi-nurrandhadhi-91-100-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment