ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 81ರಿಂದ 90

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

ಪಾಸುರ-81 (ಕೊಣ್ಡ…) ಈ ಪಾಸುರದಲ್ಲಿ ಮಾಮುನಿಗಳು ಸೋಪಾದಿಕ ಬಂಧುಗಳನ್ನು(ಲೌಕಿಕ ಬಂಧುಗಳು) ಬಿಟ್ಟು ನಿರುಪಾದಿಕ ಬಂಧುವಾದ(ಸಹಜವಾದ ಬಂದುವಾದ) ಭಗವಂತನನ್ನು ಆಶ್ರಯಿಸಲು ಉಪದೇಶಿಸುತ್ತಿರುವ ಪಾಸುರಗಳ ಚ್ಛಯೆಯಲ್ಲಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.

ಕೊಣ್ಡ ಪೆಣ್ಡಿರ್ ತಾನ್ ಮುದಲಾಕ್ ಕೂಱುಮ್ ಉಟ್ರಾರ್ ಕನ್ಮತ್ತಾಲ್
ಅಣ್ಡಿನವರ್ ಎನ್ಱೇ ಅವರೈ ವಿಟ್ಟುತ್ ತೊಣ್ಡರುಡನ್
ಸೇರ್ಕ್ಕುಮ್ ತಿರುಮಾಲೈಚ್ ಚೇರುಮ್ ಎನ್ಱಾನ್ ಆರ್ಕ್ಕುಮ್ ಇದಮ್
ಪಾರ್ಕ್ಕುಮ್ ಪುಗೞ್ ಮಾಱನ್ ಪಣ್ಡು

ಅಜ್ಞರಿಗೂ ಹಿತವನ್ನೇ ಮಾಡಲು ಇಚ್ಛಿಸುವ ವೈಭವಯುಕ್ತರಾದ ಆೞ್ವಾರ್ ತಮ್ಮ ಕೃಪೆಯಿಂದ ಪೂರ್ವಕೃತ ಕರ್ಮದ ಕಾರಣ (ಬಂಧವಾಗಿ) ಇರುವ ಸ್ವೀಕರಿಸಲ್ಪಟ್ಟ ಭಾರ್ಯೆ ಮುಂತಾದವರನ್ನು ಬಿಟ್ಟು ,ತನ್ನನ್ನು ಆಶ್ರಯಿಸಿದವರಿಗೆ ತನ್ನ ಭಕ್ತರೊಂದಿಗೆ ಸೇರಿಸುವ ಶ್ರಿಃಯಪತಿಯನ್ನು ಸೇರಲು ಉಪದೇಶಿಸಿದರು.

ಪಾಸುರ-82 (ಪಣ್ಡೈ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಲ್ಲ ಬಂಧು ಕೃತ್ಯಗಳನ್ನು ಮಾಡಲು ಅಪೇಕ್ಷಿಸಿದ ಪಾಸುರಗಳ್ಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.

ಪಣ್ಡೈ ಉಱವಾನ ಪರನೈ ಪುಳಿನ್ಗುಡಿಕ್ಕೇ
ಕಣ್ಡು ಎನಕ್ಕು ಎಲ್ಲಾ ಉಱವಿನ್ ಕಾರಿಯಮುಮ್ ತಣ್ಡಱ ನೀ
ಸೆಯ್ದರುಳ್ ಎನ್ಱೇ ಇರನ್ದ ಸೀರ್ ಮಾಱನ್ ತಾಳ್ ಇಣೈಯೇ
ಉಯ್ ತುಣೈ ಎನ್ಱುಳ್ಳಮೇ ಓರ್

ಆೞ್ವಾರ್ ನಿತ್ಯವಾದ ಸಂಬಂಧವನ್ನು ಹೊಂದಿರುವ ತಿರುಪುಳ್ಳಿನ್ಗುಡಿಯಲ್ಲಿ ಪಿರಾಟ್ಟಿಯೊಂದಿಗೆ ಅತ್ಯಂತ ಕರುಣೆಯಿಂದ ಶಯನಿಸುತ್ತಿರುವ ಎಮ್ಪೆರುಮಾನನ್ನು ಆರಾಧಿಸಿ “ನೀವು ನನಗೆ ಎಲ್ಲಾ ಬಂಧುಗಳು ಮಾಡುವ ಕೈಂಕರ್ಯವನ್ನು ನಾನು ಬಿಡುವಿಲ್ಲದೆ ಮಾಡಬೇಕು ನನಗೆ ಅನುಗ್ರಹಿಸಬೇಕೆಂದು ಬೇಡಿಕೊಂಡರು” ಓ ಹೃದಯವೇ ಇಂತಹ ಶಠಗೋಪರ ದಿವ್ಯ ಪಾದಗಳನೇ ನಮ್ಮ ಉಜ್ಜೀವನಕ್ಕೆಸಹಾಯವೇದು ತಿಳಿ.

ಪಾಸುರ-83 (ಓರಾನೀರ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನಿನ ಸೌಲಭ್ಯದಲ್ಲಿ ಮುಳುಗಿರುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.

ಓರಾ ನೀರ್ ವೇಣ್ಡಿನವೈ ಉಳ್ಳದೆಲ್ಲಾಮ್ ಸೆಯ್ಗಿನ್ಱೇನ್
ನಾರಾಯಣನ್ ಅನ್ಱೋ ನಾನ್ ಎನ್ಱು ಪೇರುಱವೈಕ್
ಕಾಟ್ಟ ಅವನ್ ಸೀಲತ್ತಿಲ್ ಕಾಲ್ ತಾೞ್ನ್ದ ಮಾಱನ್ ಅರುಳ್
ಮಾಟ್ಟಿವಿಡುಮ್ ನಮ್ ಮನತ್ತುಮೈ

ಎಮ್ಪೆರುಮಾನ್, “ನೀವೇನು ವಿಶ್ಲೇಶಿಸಿ ಇಛ್ಚಿಸಿದಿರೊ ಅದನ್ನು ನಾನು ನೆರವೇರಿಸುವೆನು. ಸರ್ವಶಕ್ತನಾದ ನಾರಾಯಣನಲ್ಲನೋ ನಾನು?” ಎಂದು ಹೇಳಿ (ಆೞ್ವಾರೋಂದಿಗಿದ್ದ) ಎಲ್ಲಾ ಸಂಭಂಧಗಳನ್ನು ಪ್ರಕಾಶಿಸಿದನು.ಆೞ್ವಾರ್ ಇಂತಹ ಎಮ್ಪೆರುಮಾನಿನ ಶೀಲ ಗುಣದಲ್ಲಿ ಮಗ್ನರಾದರು. ಇಂತಹ ಆೞ್ವಾರಿನ ಕೃಪೆ ನಮ್ಮ ಹೃದಯದಲ್ಲಿರುವ ಅಜ್ಞಾನವನ್ನು ದೂರಮಾಡುವುದು.

ಪಾಸುರ-84
(ಮೈಯಾರ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ವಿಲಕ್ಷಣವಾದ ರೂಪವನ್ನು ಹೋಂದಿರುವ ಎಮ್ಪೆರುಮಾನನ್ನು ಕರೆಯುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ.
ಮೈಯಾರ್ ಕಣ್ ಮಾ ಮಾರ್ಬಿಲ್ ಮನ್ನುಮ್ ತಿರುಮಾಲೈ
ಕೈ ಆೞಿ ಸನ್ಗುಡನೇ ಕಾಣ ಎಣ್ಣಿ ಮೆಯ್ಯಾನ
ಕಾದಲುಡನ್ ಕೂಪ್ಪಿಟ್ಟುಕ್ ಕಣ್ಡುಗನ್ದ ಮಾಱನ್ ಪೇರ್
ಓದ ಉಯ್ಯುಮೇ ಇನ್ನುಯಿರ್

ಆೞ್ವಾರ್ ನಿಜವಾದ ಆಸೆಯಿಂದ, ಅಞ್ಜನದಿಂದ ಅಲಂಕ್ರುತವಾದ ನೇತ್ರಗಳನ್ನು ಹೋಂದಿರುವ ಪೆರಿಯ ಪಿರಾಟ್ಟಿಯಾರ್ ನ್ವಸಮಡು ಅ ದಿವ್ಯ ವಕ್ಷಸ್ಥಳವನ್ನು ಯೋಂದಿರುವ, ತಿರುವಾೞಿ (ದಿವ್ಯವಾದ ಸುದರ್ಶನ ಚಕ್ರವನ್ನು) ತಿರುಚ್ಚನ್ಗುಗಳಿಂದ (ದಿವ್ಯ ಶಂಖವನ್ನು) ಭರಿತವಾದ ಹಸ್ತಗಳನ್ನು ಹೋಂದಿರುವ ಶ್ರಿಯಃಪ್ಪತಿಯನ್ನು ದರ್ಶಿಸಲು ಇಛ್ಚಿಸಿದಿರು ;ಹಾಗೆಯೆ ಕಂಡರು. ಇಂತಹ ಆೞ್ವಾರಿನ ದಿಯನಾಮಗಳ ಪಟನದಿಂದ , ವಿಲಕ್ಷಣವಾದ ಆತ್ಮವು ಉಜ್ಜೀವಿಸುವುದು.

ಪಾಸುರ-85
(ಇನ್ನುಯಿರ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನನ್ನು ನೆನಪಿಸುವ ವಸ್ತುಗಳಿಂದ ಪೀಡಿಸಲ್ಪಟ್ಟಿರುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ.
ಉರುಗುಮಾಲ್ ಎನ್ ನೆನ್ಜಮ್ ಉನ್ ಸೆಯಲ್ಗಳ್ ಎಣ್ಣಿ
ಪೆರುಗುಮಾಲ್ ವೇಟ್ಕೈ ಎನಪ್ ಪೇಸಿ ಮರುವುಗಿನ್ಱ
ಇನ್ನಾಪ್ಪುಡನ್ ಅವನ್ ಸೀರೇಯ್ನ್ದುರೈತ್ತ ಮಾಱನ್ ಸೊಲ್
ಎನ್ ನಾಚ್ ಚೊಲ್ಲಾದಿರುಪ್ಪದು ಎನ್ಗು

ತನ್ನ ದಾರಕನಾದ ಸರ್ವೇಶ್ವರನು ,. ಈ ಸ್ಥಿತಿಯಲ್ಲಿ ತಮ್ಮ ಹೃಉದಯಲ್ಲಿ ಪ್ರಕಾಶಿಸಿದನ್ನು ಕಂಡು,°°° ತಮ್ಮ ಪುರುಶತ್ವವನ್ನು ಕಂಡು ನಾಯಿಕಾಭಾವನ್ನು ಹೋಂದಿದರು,°°° ಇಂತಹ ಆೞ್ವಾರನ್ನು ಧ್ಯಾನಿಸುವವರ ಹೃದಯವು ಕರಗುವುದು.

ಪಾಸುರ-86
(ಉರುಗುಮಾಲ್ …) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ದುಃಖದಿಂದ ಎಮ್ಪೆರುಮಾನಿನ ಕಲ್ಯಾಣ ಗುಣಗಳಬಗ್ಗೆ ಧ್ಯಾನಿಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ.

ಉರುಗುಮಾಲ್ ಎನ್ ನೆನ್ಜಮ್ ಉನ್ ಸೆಯಲ್ಗಳ್ ಎಣ್ಣಿ
ಪೆರುಗುಮಾಲ್ ವೇಟ್ಕೈ ಎನಪ್ ಪೇಸಿ ಮರುವುಗಿನ್Rಅ
ಇನ್ನಾಪ್ಪುಡನ್ ಅವನ್ ಸೀರೇಯ್ನ್ದುರೈತ್ತ ಮಾRಅನ್ ಸೊಲ್
ಎನ್ ನಾಚ್ ಚೊಲ್ಲಾದಿರುಪ್ಪದು ಎನ್ಗು

ಅೞ್ವಾರ್ ಸರ್ವೇಶ್ವರನನ್ನು,”ಎಂದು ನಾನು ನಿಮಗೆ ಸಕಲ ಕೈಂಕರ್ಯಗಳನ್ನು ಮಾಡುವೆ ? ” ಎಂದು ಕೇಳಿ ,ಸಹಜವಾದ ಭಕ್ತಿಯ ಕಾರಣ ,ಎಂಪೆರುಮಾನಿನ ಉತ್ತರಕ್ಕೂ ಕಾಯಲಾಗದಂತಹ ಅವರ ಅಸಹನೆಯ ಬಗ್ಗೆ ತಮ್ಮ ಕೃಪೆಯಿಂದ ಹೇಳಿ ಧುಃಖಪಟ್ಟರು. ನನ್ನ ಅಜ್ಞಾನಕ್ಕೆ ವಿರುದ್ಧವಾದ ಇಂತಹ ಆೞ್ವಾರಿನ ಕರುಣೆಯಿಂದ ನನ್ನ ಅಜ್ಞಾನ ದೂರವಾಗುವುದು.

ಪಾಸುರ-90
(ಮಾಲುಮದು…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಮ್ಮ # ಮೋಕ್ಷದ ದಿನಾಂಕವನ್ನು ಪಡೆದು, ಉಪದೇಶಿಸಿದ ಪಾಸುರಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.

ಮಾಲ್ ಉಮದು ವಾನ್ಜೈ ಮುಟ್ರುಮ್ ಮನ್ನುಮ್ ಉಡಮ್ಬಿನ್ ಮುಡಿವಿಲ್
ಸಾಲ ನಣ್ಣಿಚ್ ಚೆಯ್ವನ್ ಎನತ್ ತಾನ್ ಉಗನ್ದು
ಮೇಲವನೈಚ್
ಚೀರಾರ್ ಕಣಪುರತ್ತೇ ಸೇರುಮ್ ಎನುಮ್ ಸೀರ್ ಮಾಱನ್
ತಾರಾನೋ ನನ್ದಮಕ್ಕು ತಾಳ್

ಸರ್ವೇಶ್ವರನು ಆೞ್ವಾರಿಗೆ, “ನಾನು ನಿಮ್ಮ ಆಸೆಯನ್ನು ಆತ್ಮನೋಂದಿಗೆ ಇರುವ ಈ ಶರೀರದ ಅಂತದಲ್ಲಿ ಶ್ರದ್ಧೆಯಿಂದ ಪೂರೈಯಿಸುವೆ” ಎಂದು ಹೇಳಿದರು. ಜ್ಞಾನಾದಿ ಗುಣವಂತರಾದ ಆೞ್ವಾರ್, “ತಿರುಕ್ಕಣ್ಣಪುರಕ್ಕೆ ಹೋಗಿ ಪರಮಾತ್ಮನಿಗೆ ಶರಣಾಗಿ” ಎಂದು ಸಂತುಷ್ಠರಾಗಿ ಹೇಳಿದರು; ಈದ್ರುಶರಾದ ಆೞ್ವಾರ್ ನಮಗೆ ತಮ್ಮ ಪಾದಗಳನ್ನು ಅನುಗ್ರಹಿಸದೆ ಇರುವರೆ?

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-81-90-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment