ತಿರುವಾಯ್ ಮೊೞಿ- ಸರಳ ವಿವರಣೆ – 8.10 – ನೆಡುಮಾಱ್ಕು

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 7.4 – ಆೞಿಯೆೞ

emperumAnAr_ThirumEniyil_pUrvacharyargaL (Large)

ಆಳ್ವಾರರು ಈ ರೀತಿಯಾಗಿ ಗಮನಿಸುತ್ತಾರೆ : ಆತ್ಮದ ಸಹಜ ಸ್ವಭಾವಕ್ಕೆ ಪೂರಕವಾದುದು ಭಗವಂತನ ಭಕ್ತರಿಗೆ ಸೇವೆ ಮಾಡುವುದೇ ಆಗಿದೆ. ಅವರು ಇದನ್ನು ಗಮನಿಸುತ್ತಾರೆ ಮತ್ತು ಇತರರಿಗೂ ಈ ಪದಿಗೆಯಲ್ಲಿ ಸಲಹೆಯನ್ನು ಕೊಡುತ್ತಾರೆ. ಭಗವಂತನಿಗೆ ಸೇವೆ ಸಲ್ಲಿಸುವುದು ಮೊದಲನೆಯ ಹಂತವಾದರೆ, ಭಾಗವತರಿಗೆ ಸೇವೆ ಸಲ್ಲಿಸುವುದು ಅಂತಿಮ ಹಂತವಾಗಿದೆ. ಅದನ್ನು ಆಳ್ವಾರರು ಸ್ಪಷ್ಟವಾಗಿ ವರ್ಣಿಸಿದ್ದಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಅದ್ಭುತವಾದ ಮೂರು ಲೋಕಗಳನ್ನು ಆಳುವುದರ ಬದಲು ನಾನು ಭಾಗವತರಿಗೆ ಸೇವೆ ಮಾಡಲು ಬಯಸುತ್ತೇನೆ.”
ನೆಡುಮಾಱ್ಕು ಅಡಿಮೈ ಸೆಯ್ವೇನ್ ಪೋಲ್ ಅವನೈ ಕ್ಕರುದ ವಞ್ಜಿತ್ತು,
ತಡುಮಾಱ್ಱಱ್ಱ ತೀಕ್ಕದಿಗಳ್ ಮುಱ್ಱುಮ್ ತವಿರ್ನ್ದ ಶದಿರ್ ನಿನೈನ್ದಾಲ್,
ಕೊಡುಮಾವಿನೈಯೇನ್ ಅವನ್ ಅಡಿಯಾರ್ ಅಡಿಯೇ ಕೂಡುಮಿದುವಲ್ಲಾಲ್,
ವಿಡುಮಾಱೆನ್ಬದು ಎನ್ ಅನ್ದೋ ವಿಯನ್ ಮೂವುಲಗು ಪೆಱಿನುಮೇ ॥

“ನಾನು ಅನಂತವಾದ ಸರ್ವೇಶ್ವರನನ್ನು ಸೇವೆ ಮಾಡಲು ಯೋಚಿಸಿದೆ , ಅವನು ನನ್ನಲ್ಲಿಯೇ ಉಳಿದುಕೊಂಡು ನನ್ನಲ್ಲಿರುವ ಅಸ್ಥಿರತೆಯನ್ನು ಹೋಗಲಾಡಿಸಿ, ಕೆಟ್ಟ ರೀತಿಯ ದಾರಿಗಳು ನನ್ನನ್ನು ಬಿಟ್ಟು ಹೋಗುವಂತೆ ನೋಡಿಕೊಂಡನು. ಸೇವಕರಾದ ನಮಗೆ ಯಾವುದು ಸೂಕ್ತವೆಂದು ಯೋಚಿಸಿದರೆ, ಭಾಗವತರ ದಿವ್ಯ ಪಾದಗಳನ್ನು ಸೇರುವುದನ್ನು ಬಿಟ್ಟರೆ, ಮೂರು ಲೋಕದ ವಿಶಾಲವಾದ ಸಂಪತ್ತನ್ನು ಗಳಿಸುವುದೇ ಮಾರ್ಗವೆಂದು ಯಾರಾದರೂ ಹೇಳಿದರೂ, ಐಶ್ವರ್‍ಯಕ್ಕೂ ಮತ್ತು ತದೀಯ ಶೇಷತ್ವಕ್ಕೂ (ಭಕ್ತರಿಗೇ ಸೇವಕನಾಗುವುದು) ವ್ಯತ್ಯಾಸವನ್ನು ನೋಡಿದ ಪರಮಪಾಪಿಯಾದ ನಾನು ಭಾಗವತರ ದಿವ್ಯ ಪಾದಗಳನ್ನು ಬಿಟ್ಟು ಬಿಡುವೆನೇ? “ ಎಂದು ಹಾಡುತ್ತಾರೆ.

ಎರಡನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ “ ಐಶ್ವರ್‍ಯಮ್(ಲೌಕಿಕ ಸಂಪತ್ತು) ಮತ್ತು ಕೈವಲ್ಯಮ್ (ತನ್ನಲ್ಲಿ ತಾನೇ ಆನಂದಪಡುವುದು) ಇವುಗಳನ್ನು ಜೊತೆಯಾಗಿ ಪಡೆದರೂ, ಅವೆರಡೂ ಭಾಗವತ ಶೇಷತ್ವಕ್ಕೆ ( ಭಾಗವತರಿಗೆ ದಾಸನಾಗುವುದು) ಹೋಲಿಕೆ ಮಾಡಬಹುದೇ? ಈ ಗುರಿಯನ್ನು ನಾನು ತಲುಪಿದ್ದೇನೆ.”
ವಿಯನ್ ಮೂವುಲಗು ಪೆಱಿನುಮ್ ಪೋಯ್ ತ್ತಾನೇತಾನೇಯಾನಾಲುಮ್,
ಪುಯಲ್ ಮೇಗಮ್ ಪೋಲ್ ತಿರುಮೇನಿ ಅಮ್ಮಾನ್ ಪುನೈ ಪೂಙ್ಕೞಲ್ ಅಡಿಕ್ಕೀೞ್,
ಶಯಮೇ ಅಡಿಮೈ ತಲೈ ನಿನ್‍ಱಾರ್ ತಿರುತ್ತಾಳ್ ವಣಙ್ಗಿ, ಇಮ್ಮೈಯೇ
ಪಯನೇ ಇನ್ಬಮ್ ಯಾನ್ ಪೆಱ್ಱದು ಉಱುಮೋ ಪಾವಿಯೇನುಕ್ಕೇ॥

ಸರ್ವೇಶ್ವರನಿಗೆ ನೀರು ತುಂಬಿದ ಮೋಡಗಳ ರೀತಿಯಾದ ದಿವ್ಯ ರೂಪವಿದೆ. ಅವರ ದಿವ್ಯ ಪಾದಗಳು ಹೂವಿನಿಂದ ಮತ್ತು ವಿಜಯದ ಗೆಜ್ಜೆಗಳಿಂದ ಅಲಂಕೃತವಾಗಿದೆ. ಕೊನೆಯ ಹಂತವನ್ನು ತಲುಪಿದ ಭಾಗವತರು (ಎಂಪೆರುಮಾನರನ್ನೇ ಹಿಂಬಾಲಿಸುವವರು) ಅಂತಹ ದಿವ್ಯ ಪಾದಗಳಿಗೇ ಸೇವೆಯನ್ನು ಸಲ್ಲಿಸುವವರು ಏನೂ ಅಪೇಕ್ಷೆಯಿಲ್ಲದೆ. ನನಗೆ ಮೂರೂ ಲೋಕದ ಅಷ್ಟೂ ಸಂಪತ್ತು ಸಿಕ್ಕರೂ ಮತ್ತು ನಾನು ಅವುಗಳನ್ನು (ಐಶ್ವರ್‍ಯ ಮತ್ತು ಕೈವಲ್ಯಗಳನ್ನು) ಅನುಭವಿಸಿದರೂ, ನನ್ನಂತಹ ಪಾಪವನ್ನು ಮಾಡಿದವರು ಅಂತಹ ಭಾಗವತರಿಗೆ ನಮಸ್ಕಾರಗಳನ್ನು ಅರ್ಪಿಸಿದರೆ ಸೂಕ್ತವಾಗುವುದೇ?
ಇದರ ಅರ್ಥ : ಈ ಐಶ್ವರ್‍ಯ ಮತ್ತು ಕೈವಲ್ಯಗಳು ಭಾಗವತರಿಗೆ ಕೈಂಕರ್‍ಯವನ್ನು ಮಾಡುವ ಆನಂದಕ್ಕೆ ಎಣೆಯಾಗುವುದಿಲ್ಲ.

ಮೂರನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ “ ನಾನು ಭಗವತ್ ಪ್ರಾಪ್ತಿಯನ್ನು ಪಡೆದುಕೊಂಡರೂ (ಭಗವಂತನನ್ನು ಸೇರಿ ಅವನಿಗೆ ಸೇವೆ ಸಲ್ಲಿಸುವುದು) ಅದು ಐಶ್ವರ್‍ಯ ಮತ್ತು ಕೈವಲ್ಯಗಳಿಂದ ವ್ಯತ್ಯಾಸವಾದರೂ , ಭಾಗವತರನ್ನು ಈ ಲೋಕದಲ್ಲಿ ಸೇವೆ ಸಲ್ಲಿಸುವುದಕ್ಕೆ ಹೋಲಿಕೆಯಾಗದು,”
ಉಱುಮೋ ಪಾವಿಯೇನುಕ್ಕು ಇವ್ ಉಲಗುಮ್ ಮೂನ್‍ಱುಮ್ ಉಡನ್ ನಿಱೈಯ,
ಶಿಱು ಮಾಮೇನಿ ನಿಮಿರ್ತ್ತ ಎನ್ ಶೆನ್ದಾಮರೈಕ್ಕಣ್ ತಿರುಕ್ಕುಱಳನ್,
ನಱುಮಾವಿರೈ ನಾಣ್ಮಲರ್ ಅಡಿಕ್ಕೀಳ್ ಪುಗುದಲ್ ಅನ್‍ಱಿ ಅವನ್ ಅಡಿಯಾರ್,
ಶಿಱು ಮಾ ಮನಿಶರಾಯ್ ಎನ್ನೈ ಆಣ್ಡಾರ್ ಇಙ್ಗೇ ತಿರಿಯವೇ ॥

ಶ್ರೀ ವಾಮನರು ತಮ್ಮ ಪುಟ್ಟದಾದ , ಆಕರ್ಷಕ ವಿಶಿಷ್ಟವಾದ ರೂಪವನ್ನು ಒಂದೇ ಪ್ರಯತ್ನದಲ್ಲಿ ಮೂರು ಲೋಕಗಳಲ್ಲಿ ಬೆಳೆಸಿ, ತುಂಬಿಸಿದರು. ಅವರಿಗೆ ಆನಂದಮಯವಾದ ಕೆಂಪಾದ ತಾವರೆಯ ಹಾಗೆ ದಿವ್ಯ ಕಣ್ಣುಗಳಿವೆ. ಪಾಪಿಯಾದ ನನಗೆ ಅಂತಹ ವಾಮನರ ಸುಗಂಧಿತವಾದ, ಉತ್ಕೃಷ್ಟವಾದ, ಹೊಸದಾದ ಜೇನು ತುಂಬಿರುವ ಹೂವಿನ ಹಾಗಿರುವ ದಿವ್ಯ ಪಾದಗಳನ್ನು ಸೇರಲು ಯೋಗ್ಯವೇ? ಅಂತಹ ವಾಮನರ ಸೇವಕರಾದ ಭಾಗವತರು ಅವರು ಮನುಷ್ಯ ರೂಪದಲ್ಲಿ ನೋಡಲು ಚಿಕ್ಕದಾಗಿ ಕಾಣಬಹುದು, ಆದರೆ ಅವರದು ಬಹು ದೊಡ್ಡ ವ್ಯಕ್ತಿತ್ವ. ಅವರು ನನ್ನನ್ನು ತಮ್ಮ ದಾಸನನ್ನಾಗಿ ಮಾಡಿಕೊಂಡರು. ಅವರು ನನಗೆ ಈ ಭೂಮಿಯಲ್ಲಿ ಕಾಣಲು ಸಿಗುವರೇ?

ನಾಲ್ಕನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ “”ನನಗೆ ಇಲ್ಲಿಯೇ ಶ್ರೀವೈಷ್ಣವರನ್ನು ಆನಂದ ಪಡಿಸಲು ಎಂಪೆರುಮಾನರನ್ನು ಹಾಡಿ ಹೊಗಳಲು ಅವಕಾಶ ಸಿಕ್ಕರೆ, ನನ್ನ ಅಂತಿಮ ಗುರಿ ಇದೇ ಭೂಮಿಯಲ್ಲಿ ನಿರಂತರವಾಗಿ ಇರುವುದು . ಈ ಭೂಮಿಯು ಅಂತಹವರ ಚಲನದಿಂದಾಗಿ ನಿಜವಾಗಿಯೂ ಪ್ರಶಂಸೆಗೆ ಯೋಗ್ಯವಾಗಿದೆ.
ಇಙ್ಗೇ ತಿರುನ್ದೇಱ್ಕಿೞುಕ್ಕುತ್ತೆನ್ ಇರುಮಾ ನಿಲಮ್ ಮುನ್ ಉಣ್ಡುಮಿೞ್‍ನ್ದ
ಶೆಙ್ಗೋಲತ್ತ ಪವಳವಾಯ್ ಚ್ಚೆನ್ದಾಮರೈ ಕ್ಕಣ್ ಎನ್ನಮ್ಮಾನ್
ಪೊಙ್ಗೇೞ್ ಪುಗೞ್‍ಗಳ್ ವಾಯವಾಯ್ ಪ್ಪುಲನ್‍ಕೊಳ್ ವಡಿವೆನ್‍ಮನತ್ತದಾಯ್
ಅಙ್ಗೇಯ್ ಮಲರ್ಗಳ್ ಕೈಯವಾಯ್ ವೞಿಪಟ್ಟೋಡ ಅರುಳಿಲೇ ॥

ಎಂಪೆರುಮಾನರು ನನ್ನ ಸ್ವಾಮಿ. ಅವರು ಸುಂದರವಾದ , ಹವಳದಂತಹ ಕೆಂಪಾದ ದಿವ್ಯ ತುಟಿಗಳನ್ನು ಹೊಂದಿದ್ದಾರೆ. ಅವುಗಳು ಪ್ರಳಯ ಕಾಲದಲ್ಲಿ ಅಪಾಯದಲ್ಲಿರುವ ,ವಿಸ್ತಾರವಾಗುತ್ತಿರುವ , ಪ್ರಶಂಸೆಗೆ ಯೋಗ್ಯವಾದ ಭೂಮಂಡಲವನ್ನೇ ನುಂಗಿದರು ಮತ್ತು ಅದನ್ನು ಕಾಪಾಡಿ , ನಂತರ ಉಗಿದರು. ಅವರಿಗೆ ಕೆಂಪಾದ ತಾವರೆಯಂತಿರುವ ದಿವ್ಯ ಕಣ್ಣುಗಳಿವೆ. ಅವರ ಕಲ್ಯಾಣ ಗುಣಗಳನ್ನು ನನ್ನ ಮಾತಿನಲ್ಲಿ ಹೇಳಿ, ಅವರ ದಿವ್ಯ ರೂಪವನ್ನು ಮನದಲ್ಲಿ ತುಂಬಿಕೊಂಡು, ನನ್ನ ಎಲ್ಲಾ ಇಂದ್ರಿಯಗಳನ್ನು ಸೂರೆಗೊಂಡು , ಅವರಿಗಾಗಿ ಅವರ ಶ್ರೇಷ್ಠತೆಯನ್ನು ಮೆರೆಸಲು ಹೂಗಳನ್ನು ನನ್ನ ಕೈಗಳಲ್ಲಿ ಹಿಡಿದುಕೊಂಡ ನನ್ನನ್ನು ಅವರು ಆಶೀರ್ವದಿಸಿದರೆ ಯಾರಿಗೆ ಏನು ಕಷ್ಟವಾಗುತ್ತದೆ?

ಐದನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ “ ಒಂದು ವೇಳೆ ನಾನು ತಿರುನಾಡಿಗೆ (ಪರಮಪದಕ್ಕೆ) ಹೋದರೂ ಮತ್ತು ಪರಮ ಗುರಿಯಾದ ಎಂಪೆರುಮಾನರಿಗೆ ಸೇವೆ ಕೈಂಕರ್‍ಯಗಳನ್ನು ಮಾಡಿದರೂ ಮತ್ತು ಎಲ್ಲಾ ವೈಭವಗಳನ್ನೂ ಐಶ್ವರ್‍ಯಗಳನ್ನೂ ಹೊಂದಿದರೂ, ಅವುಗಳು ಈ ಸಂಸಾರದಲ್ಲಿ ಹುಟ್ಟಿ , ಶ್ರೀವೈಷ್ಣವರ ಸಂತೋಷಕ್ಕಾಗಿ ತಿರುವಾಯ್‍ಮೊೞಿಯನ್ನು ಹಾಡುವುದಕ್ಕೆ ಸಮನಾಗುವುದೇ?”
ವೞಿ ಪಟ್ಟೋಡ ಅರುಳ್ ಪೆಟ್ರು ಮಾಯನ್ ಕೋಲಮಲರ್ ಅಡಿಕ್ಕೀೞ್,
ಶುೞಿಪಟ್ಟೋಡುಮ್ ಶುಡರ್ ಚ್ಚೋದಿ ವೆಳ್ಳತ್ತು ಇನ್ಬುಟ್ಟ್ರಿರುನ್ದಾಲುಮ್ ,
ಇೞಿ ಪಟ್ಟೋಡುಮ್ ಉಡಲಿನಿಲ್ ಪಿಱನ್ದು ತನ್ ಶೀರ್ ಯಾನ್ ಕಟ್ರು
ಮೊೞಿಪಟ್ಟೋಡುಮ್ ಕವಿಯಮುದಮ್ ನುಗರ್ಚ್ಚಿ ಉಱುಮೋ ಮುೞುದುಮೇ ॥

ಸರ್ವೇಶ್ವರನಿಗೆ ಆಶ್ಚರ್‍ಯ ಪಡುವ ರೀತಿಯಲ್ಲಿ ಕಲ್ಯಾಣ ಗುಣಗಳು, ದಿವ್ಯ ರೂಪ, ಮತ್ತು ಐಶ್ವರ್‍ಯಗಳು ಇವೆ. ನಾನು ಅಂತಹ ಸರ್ವೇಶ್ವರನ ಕೃಪೆಯಿಂದ ಅಲ್ಲಿ ಸೇರಿ, ಅತ್ಯಂತ ಪ್ರಭೆಯನ್ನು ಹೊಂದಿರುವ , ಸತತವಾಗಿ ಸುತ್ತುತ್ತಿರುವ ಪರಮಪದಕ್ಕೆ ಅವನ ಕರುಣೆಯಿಂದ ಅವನ ದಿವ್ಯ ಪಾದಗಳನ್ನು ಸೇರಿ, ಅತ್ಯಂತ ಆನಂದದಿಂದ ಅವನ ಕೈಂಕರ್‍ಯವನ್ನು ಮಾಡಿದರೂ, ಅಥವಾ ಐಶ್ವರ್‍ಯವನ್ನೂ , ಕೈವಲ್ಯವನ್ನೂ ಈ ಭೂಲೋಕದಲ್ಲಿ ಅನುಭವಿಸಿದರೂ, ಇಂತಹ ಕೆಳಮಟ್ಟದ ದೇಹದಲ್ಲಿ ಜನಿಸಿ, ಅವನ ಉತ್ತಮ ಗುಣಗಳನ್ನು ಕಲಿತುಕೊಂಡು , ಅಮೃತದಂತಿರುವ ಅವನ ಗುಣಗಾನವನ್ನು ಮಾಡುವ ಪದ್ಯಗಳನ್ನು, ಪದಗಳ ಸುರಿಮಳೆಯನ್ನೂ ಹಾಡಿ ಆನಂದಿಸುವುದಕ್ಕೆ ಸಮನಾಗುವುದೇ?

ಆರನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ, “ ಐಶ್ವರ್‍ಯ (ಲೌಕಿಕ ಸಂಪತ್ತು) ಕೈವಲ್ಯ (ತನ್ನಲ್ಲಿ ತಾನೇ ಆನಂದ ಪಡುವುದು) , ಭಗವತ್ ಅನುಭವ ಪ್ರೀತಿ ಮತ್ತು ಭಗವತ್ ಆನಂದಮ್ ಇವುಗಳನ್ನು ಮಾತ್ರ ಸಾಧಿಸಿದರೆ , ಇವುಗಳು ಭಕ್ತರ ಆನಂದಕ್ಕಾಗಿ ತಿರುವಾಯ್‍ಮೊೞಿಯನ್ನು ಹಾಡಿದಕ್ಕೆ ಸಮನಾಗುವುದೇ?”
ನುಗರ್ಚ್ಚಿ ಉಱುಮೋ ಮೂವುಲಗಿನ್ ವೀಡು ಪೇಱು ತನ್ ಕೇೞಿಲ್
ಪುಗರ್ ಚ್ಚೆಮ್ಮುಗತ್ತ ಕಳಿಱಟ್ಟ ಪೊನ್ ಆೞಿಕ್ಕೈ ಎನ್ನಮ್ಮಾನ್
ನಿಗರ್ ಚ್ಚೆಮ್ಬಙ್ಗಿ ಎರಿ ವಿೞಿಗಳ್ ನೀಣ್ಡ ಅಶುರರ್ ಉಯಿರೆಲ್ಲಾಮ್,
ತಗರ್ತುಣ್ಡು ಉೞಲುಮ್ ಪುಟ್ ಪಾಗನ್ ಪೆರಿಯ ತನಿಮಾ ಪ್ಪುಗೞೇ ॥

ಎಂಪೆರುಮಾನರು, ನನ್ನ ಸ್ವಾಮಿ, ಅವರಿಗೆ ದಿವ್ಯ ಉಂಗುರವುಳ್ಳ ದಿವ್ಯ ಕೈಗಳು ಇವೆ. ಅದು ಅತ್ಯಂತ ತೇಜಸ್ಸುಳ್ಳ ಮತ್ತು ಕೆಂಪಾದ ಮುಖವುಳ್ಳ ಅಸುರನಾದ ಆನೆಯನ್ನು ಕೊಂದುಹಾಕಲು ಸಹಾಯ ಮಾಡಿತು. ಕೆಂಪಾದ ಕೂದಲುಳ್ಳ ಮತ್ತು ಭಯಂಕರವಾದ ತಟ್ಟೆಯಂತಹ ಕಣ್ಣುಗಳುಳ್ಳ ಎತ್ತರದ ಬಲಶಾಲಿಯಾದ ಅಸುರರನ್ನೆಲ್ಲಾ ನುಂಗಿ ಹಾಕುವ ಮತ್ತು ನಭದಲ್ಲಿ ಗಾಳಿಯ ಮೇಲೆ ಆಕ್ರಮಣ ಮಾಡುವ ಪೆರಿಯ ತಿರುವಡಿ ಎಂದೇ ಪ್ರಖ್ಯಾತವಾದ ಗರುಡಳ್ವಾರರನ್ನೇ ನಿಯಂತ್ರಿಸುವರು. ಮೂರು ಲೋಕಗಳನ್ನು ಸೃಷ್ಟಿಸುವ ಸಮರ್ಥವಾದ ಸ್ವಾಮಿತ್ವವು , ಅಂತಹ ಎಂಪೆರುಮಾನರ ಅಪರಿಮಿತ , ವಿಶಿಷ್ಟವಾದ ಮಹದಾನಂದಕರವಾದ ಕಲ್ಯಾಣ ಗುಣಗಳ ಸಂಕಲನವನ್ನು ಹಾಡಿ ಹೊಗಳುವ, ಭಾಗವತರಿಗೆ ಅತ್ಯಂತ ಪ್ರೀತಿ ಪಾತ್ರವಾದ ತಿರುವಾಯ್‍ಮೊೞಿಗೆ ಸಾಟಿಯಾಗುವುದೇ?

ಏಳನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ , “ನನಗೆ ಸ್ವಾತಂತ್ರ್ಯ ಗುರಿಯಾದ ಭಗವತ್ ಅನುಭವದ ಆಸೆ ಇಲ್ಲ. ಆದರೆ, ನನಗೆ ಭಾಗವತರ ಆನಂದಕ್ಕಾಗಿ ಭಾಗವತರ ಜೊತೆಗೆ ಕೂಡಿ ಭಗವತ್ ಅನುಭವಮ್ ಪಡೆಯುವುದರಲ್ಲಿ ಅತಿಯಾದ ಸಂತೋಷವಿದೆ”
ತನಿ ಮಾ ಪುಗೞೇ ಎಞ್ಜಾನ್‍ಱುಮ್ ನಿಱ್ಕುಮ್ ಪಡಿಯಾ ತ್ತಾನ್ ತೋನ್‍ಱಿ
ಮುನಿ ಮಾಪ್ಪಿರಮ ಮುದಲ್ ವಿತ್ತಾಯ್ ಉಲಗಮೂನ್‍ಱುಮ್ ಮುಳೈಪಿತ್ತ,
ತನಿಮಾತ್ತೆಯ್ ವತ್ತಳಿರ್ ಅಡಿಕ್ಕೀಳ್ ಪುಗುದಲ್ ಅನ್‍ಱಿ ಅವನ್ ಅಡಿಯಾರ್,
ನನಿಮಾ ಕ್ಕಲವಿ ಇನ್ಬಮೇ ನಾಳುಮ್ ವಾಯ್‍ಕ್ಕ ನಙ್ಗಟ್ಕೇ ॥


ಎಂಪೆರುಮಾನರು ತಮ್ಮ ವಿಶಿಷ್ಟವಾದ ಗುಣವಾದ ಕಾರಣತ್ವವನ್ನು (ಅವರೇ ಎಲ್ಲದಕ್ಕೂ ಕಾರಣಕರ್ತ) ಸ್ಥಾಪಿಸಲು ಸೃಷ್ಟಿಯನ್ನು ಆರಂಭಿಸಿದರು ಮತ್ತು ತಮ್ಮ ಸೃಷ್ಟಿಯ ಮೇಲೆ ಯಾವಾಗಲೂ ಸ್ಥಿರವಾಗಿ ತೊಡಗಿಸಿಕೊಂಡು ‘ಪರ ಬ್ರಹ್ಮಮ್’ ಎಂದು ಕರೆಯಲ್ಪಡುವರು. ಅವರು ಮೂಲ ಲೌಕಿಕ ಕಾರಣಕ್ಕಾಗಿ ಮೂರು ಲೋಕಗಳನ್ನು ಸೃಷ್ಟಿಸಿದರು. ಅಂತಹ ವಿಶಿಷ್ಟವಾದ ಶ್ರೇಷ್ಠ ಸ್ವಾಮಿಯ ಬಹು ಮೃದುವಾದ ದಿವ್ಯ ಪಾದಗಳ ಅಡಿಯನ್ನು ತಲುಪುವುದರ ಬದಲಾಗಿ , ಅಂತಹ ಭಗವಂತನು ತನ್ನ ಶ್ರೇಷ್ಠ ಗುಣಗಳಿಂದ ಗುಲಾಮರಾಗಿ ಮಾಡಿದ ಭಾಗವತರ ಜೊತೆಗೆ ಕೂಡಿ ಅವನನ್ನು ಸ್ಮರಿಸುವುದು ನಮಗೆ ಸೂಕ್ತವಾದುದು.

ಎಂಟನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ ,” ನಾನು ನಿಜವಾಗಿ ಭಾಗವತರೊಂದಿಗೆ ಕೂಡಿ ಸಂಭಾಷಣೆ ಮಾಡಬೇಕೆ? ಅವರ ಜೊತೆ ಇದ್ದರೆ ಸಾಕು. ಇಲ್ಲವಾದರೆ ಅವರ ಗುಂಪನ್ನು ನೋಡಿದರೆ ಸಾಕು.”
ನಾಳುಮ್ ವಾಯ್‍ಕ್ಕ ನಙ್ಗಟ್ಕು ನಳಿ ನೀರ್ ಕಡಲೈ ಪಡೈತ್ತು, ತನ್
ತಾಳುಮ್ ತೋಳುಮ್ ಮುಡಿಗಳುಮ್ ಶಮನ್ ಇಲಾದ ಪಲ ಪರಪ್ಪಿ,
ನೀಳುಮ್ ಪಡರ್ ಪೂಙ್ಗಱ್‌ಪಗ ಕ್ಕಾವುಮ್ ನಿಱೈಪ ನ್ನಾಯಿತ್ತಿನ್,
ಕೋಳುಮುಡೈಯ ಮಣಿಮಲೈಪೋಲ್ ಕಿಡನ್ದಾನ್ ತಮರ್ಗಳ್ ಕೂಟ್ಟಮೇ ॥


ಎಂಪೆರುಮಾನರು ಹಾಗೆಯೇ ಸಹಜವಾಗಿ ತಣ್ಣಗಿನ ನೀರಿನ ಸಮುದ್ರವನ್ನು ಸೃಷ್ಟಿಸಿದರು ಮತ್ತು ಅದರಲ್ಲಿ ವೇದಗಳಲ್ಲಿ ಹೇಳಿರುವ ಹಾಗೆ ಮಲಗಿ ವಿಶ್ರಾಂತಿಸಿದರು. ಅವರಿಗೆ ವಿಶಿಷ್ಟವಾದ , ಸರಿಸಾಟಿಯಿಲ್ಲದ ಬಹು ದಿವ್ಯ ಪಾದಗಳು, ದಿವ್ಯ ತೋಳುಗಳು, ಕೆಂಪು ರತ್ನದ ಬೆಟ್ಟದ ಮೇಲೆ ಇರುವ ಕರ್ಪಗ ಮರಗಳಂತಿರುವ ಮತ್ತು ಪ್ರಕಾಶಮಾನವಾದ ಸೂರ್‍ಯ ಮತ್ತು ಅವನ ಕಿರಣಗಳಂತಿರುವ ದಿವ್ಯ ಕಿರೀಟ/ತಲೆ . ಅಂತಹ ಭಗವಂತನ ಜೊತೆಗೆ ನಮ್ಮ ಮಿಲನವಾಗಬೇಕು. ಎಂದೆಂದಿಗೂ. ಕೂಟ್ಟಮ್ ಸೇರ್ತ್ತಿ – ಅಂದರೆ ಎಲ್ಲರನ್ನೂ ಸೇರಿಸುವುದು. ಆಳ್ವಾರರು ಅಂತಹ ಜನಗಳೊಂದಿಗೆ (ಭಾಗವತರೊಂದಿಗೆ) ಅವರ ಮುಂದೆ ನಿಲ್ಲಿಸಬೇಕೆಂದು ಕೇಳಿಕೊಳ್ಳುತ್ತಾರೆ.

ಒಂಬತ್ತನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ನಾವು ಅವರೊಂದಿಗೆ ಬಾಳಬೇಕೆ? ಅವರಿಗೆ ನಿರಂತರವಾಗಿ ಸೇವೆ ಸಲ್ಲಿಸಿದರೆ ಸಾಕು.”

ತಮರ್ಗಳ್ ಕೂಟ್ಟ ವಲ್ ವಿನೈಯೈ ನಾಶಮ್ ಶೆಯ್ಯುಮ್ ಶದುಮೂರ್ತ್ತಿ,
ಅಮರ್ ಕೊಳ್ ಆೞಿ ಶಙ್ಗು ವಾಳ್ ವಿಲ್ ತಣ್ಡಾ ಆದಿ ಪಲ್ ಪಡೈಯನ್,
ಕುಮರನ್ ಕೋಲವಙ್ಗಣೈ ವೇಳ್ ತಾದೈ ಕೋದಿಲ್ ಅಡಿಯಾರ್ ತಮ್,
ತಮರ್ಗಳ್ ತಮರ್ಗಳ್ ತಮರ್ಗಳಾಮ್ ಶದಿರೇ ವಾಯ್‍ಕ್ಕ ತಮಿಯೇಱ್ಕೇ ॥


ಎಂಪೆರುಮಾನರು ನಮ್ಮ ನಾಯಕನು. ಅವರ ಭಕ್ತವೃಂದಕ್ಕೆ ಇರುವ ಭಯಂಕರ ಪಾಪಗಳನ್ನು ತೊಡೆದುಹಾಕುವ ಸಾಮರ್ಥ್ಯವಿರುವವರು. ಅವರಿಗೆ ‘ಪಂಚಾಯುಧಮ್’ ಸೇರಿಕೊಂಡು ಅನೇಕ ಆಯುಧಗಳಿವೆ. ಅವರು ಅತಿ ಸೌಂದರ್ಯವನ್ನು ಹೊಂದಿರುವ, ಐದು ಬಾಣಗಳನ್ನು ಹೊಂದಿರುವ ಕಾಮದೇವನಿಗೇ ತಂದೆಯು. ಈ ಸಂಸಾರದಲ್ಲಿ ಗತಿಯಿಲ್ಲದ ನಾವು ಅಂತಹ ಎಂಪೆರುಮಾನರಿಗೇ ಕಳಂಕವಿಲ್ಲದೆ ದಾಸರಾಗಿರುವ ದಾಸರಿಗೇ ದಾಸರು . ಅವರು ನಮ್ಮ ಮೇಲೆ ಕರುಣೆ ತೋರಬೇಕು. ‘ಕೂಟ್ಟ ವಲ್ ವಿನೈ’ ಎಂಬುದು ಈ ಸಂಸಾರದಲ್ಲಿ ಲೌಕಿಕ ಸಂತೋಷಕ್ಕಾಗಿ ಬಂಧನಕ್ಕೊಳಗಾದ ಪಾಪಗಳಿಂದ ಬಂದಿರುವುದು. ಅದನ್ನು ‘ಸಾದಿರ್ ಮೂರ್ತಿ’ ಎಂದು ಉಚ್ಛಾರಣೆ ಮಾಡದೇ ‘ಚಾದು ಮೂರ್ತಿ’ (ಎಂದರೆ ಎಂಪೆರುಮಾನರ ವಿವಿಧ ರೂಪಗಳು) ಎಂದು ಉಚ್ಛರಿಸಬೇಕು.

ಹತ್ತನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ ,” ನನ್ನ ಸಂಬಂಧವನ್ನು ಹೊಂದಿರುವವರು ಮತ್ತು ನಾನೂ ಈ ಫಲವನ್ನು ಪಡೆಯಬೇಕು. ( ಭಾಗವತ ಶೇಷತ್ವಮ್ – ಭಕ್ತರಿಗೇ ಸೇವಕರಾಗಿರುವುದು. )
ವಾಯ್‍ಕ್ಕ ತಮಿಯೇಱ್ಕು ಊೞಿತೋಱೂೞಿ ಊೞಿ , ಮಾಕಾಯಾಮ್
ಪೂಕ್ಕೊಳ್ ಮೇವಿ ನಾನ್ಗುತೋಳ್ ಪೊನ್ ಆೞಿ ಕ್ಕೈ ಎನ್‍ ಅಮ್ಮಾನ್ ,
ನೀಕ್ಕಮಿಲ್ಲಾ ಅಡಿಯಾರ್ ತಮ್ ಅಡಿಯಾರಡಿಯಾರಡಿಯಾರ್ ಎಮ್
ಕೋಕ್ಕಳ್, ಅವರ್ಕ್ಕೇ ಕುಡಿಗಳಾಯ್ ಚ್ಚೆಲ್ಲುಮ್ ನಲ್ಲ ಕೋಟ್‍ಪಾಡೇ ॥


ಎಂಪೆರುಮಾನರು ತಮ್ಮ ಆಕರ್ಷಕ , ಶ್ರೇಷ್ಠ , ತಿರುಮೇನಿಯ ಸೌಂದರ್‍ಯದಿಂದ ನನ್ನನ್ನು ತಮ್ಮ ಅಡಿಯಾರಾಗಿಸಿಕೊಂಡರು. ಅವರ ದಿವ್ಯ ರೂಪವು ಕಾಯಾಮ್ ಹೂವಿನ (ದಟ್ಟವಾದ ನೇರಳೆ ಬಣ್ಣದ ಹೂವು) ಬಣ್ಣದ ಹಾಗಿದೆ. ನಾಲ್ಕು ದಿವ್ಯ ಭುಜಗಳು ಮತ್ತು ಅವರ ದಿವ್ಯ ಕೈಗಳು ದಿವ್ಯ ಚಕ್ರವನ್ನು ಹೊಂದಿದೆ. ನನಗೂ ಮತ್ತು ನನಗೆ ಸಂಬಂಧಿಸಿದವರಿಗೂ , ಅಂತಹ ಎಂಪೆರುಮಾನರನ್ನು ಅಗಲಿಕೆಯಿಲ್ಲದೆ ಅನುದಿನವೂ ಆಸ್ವಾದಿಸುತ್ತಿರುವ ಭಕ್ತರು ನಮಗೆ ನಾಯಕರು. ಅಂತಹ ಭಕ್ತರಿಗೆ ಮಾತ್ರ ಸೇವೆ ಸಲ್ಲಿಸುವ ಸಂತತಿಯಲ್ಲೇ ನಾನು ಹುಟ್ಟಬೇಕು. ಮತ್ತು ಹೊಗಳಿಕೆಗೆ ಪಾತ್ರವಾಗುವಂತಹ ಕಾರ್ಯವಾದ ಅವರನ್ನು ಪ್ರತಿಯೊಂದು ಮಹಾಕಲ್ಪಗಳಲ್ಲಿಯೂ ಸಂಭವಿಸುವ ಮಧ್ಯಮ ಕಲ್ಪದಲ್ಲಿ ಅವರ ಸಾನ್ನಿಧ್ಯ ನನಗೆ ಸಿಗಬೇಕು.

ಹನ್ನೊಂದನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ಯಾರು ಈ ಪದಿಗೆಯ ಪರಿಣಿತರಾಗುತ್ತಾರೋ ಅವರಿಗೆ ಈ ಪದಿಗೆಯಲ್ಲಿ ವಿವರಿಸಿರುವ ‘ಭಾಗವತ ಶೇಷತ್ವಮ್’ (ಭಕ್ತರಿಗೇ ಸೇವೆ ಸಲ್ಲಿಸುವ ಭಾಗ್ಯ) ಸಿಕ್ಕಿ, ಇಲ್ಲಿಯೇ ಅವರವರ ಕುಟುಂಬದೊಂದಿಗೆ ಸಂತೋಷವಾಗಿರುತ್ತಾರೆ.”
ನಲ್ಲ ಕೋಟ್‍ಪಾಟ್ಟುಲಗಙ್ಗಳ್ ಮೂನ್‍ಱಿನುಳ್ಳುಮ್ ತಾನ್ ನಿಱೈನ್ದ,
ಅಲ್ಲಿಕ್ಕಮಲಕ್ಕಣ್ಣನೈ ಅನ್ದಣ್ ಕುರುಗೂರ್ ಚ್ಚಡಗೋಪನ್,
ಶೊಲ್ಲಪಟ್ಟ ಆಯಿರತ್ತುಳ್ ಇವೈಯುಮ್ ಪತ್ತುಮ್ ವಲ್ಲಾರ್ಗಳ್,
ನಲ್ಲ ಪದತ್ತಾಲ್ ಮನೈ ವಾೞ್‍ವರ್ ಕೊಣ್ಡ ಪೆಣ್ಡೀರ್ ಮಕ್ಕಳೇ ॥


ಎಂಪೆರುಮಾನರು ವಿಸ್ತಾರವಾಗುತ್ತಿರುವ ಮೂರು ಲೋಕಗಳಲ್ಲೂ ಹರಡಿಕೊಂಡಿದ್ದಾರೆ ಮತ್ತು ಅವರಿಗೆ ಕಮಲದ ಹೂಗಳಂತಹ ಕಣ್ಣುಗಳಿವೆ. ಯಾರು ಈ ಹತ್ತು ಪಾಸುರಗಳನ್ನು ಉತ್ತೇಜಕವಾದ ಆಳ್ವಾರ್ ತಿರುನಗರಿಯ ನಾಯಕರಾದ ನಮ್ಮಾಳ್ವಾರರು ಕರುಣೆಯಿಂದ ರಚಿಸಿದ ಒಟ್ಟು ಮೊತ್ತ ಸಾವಿರ ಪಾಸುರಗಳಲ್ಲಿ ಪಠಿಸುತ್ತಾರೋ , ಅವರು ಗೃಹಸ್ತಾಶ್ರಮದಲ್ಲಿ ಸರಿಹೊಂದುವ ಪತ್ನಿ ಮತ್ತು ಸುತರೊಂದಿಗೆ ವಿಶಿಷ್ಟವಾದ ತದಿಯ ಶೇಷತ್ವಮ್‍ನಲ್ಲಿ ಸಂತೋಷದಿಂದ ಬಾಳಿ ಬದುಕುತ್ತಾರೆ.

ನಮ್ಮಾೞ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : https://divyaprabandham.koyil.org/index.php/2020/05/thiruvaimozhi-8-10-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org