ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 31 ರಿಂದ 40

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

paramapadham

ಪಾಸುರ-31
ಅವ: (ಒರು ನಾಯಗಮಾಯ್…) ಈ ಪಾಸುರದಲ್ಲಿ ಮಾಮುನಿಗಳು ಹೇಯವಾಗಿಯು ಅಸ್ತಿರವಾಗಿರುವ ಲೌಕಿಕ ಸಂಪತ್ತಿನ ದೋಷಗಳನ್ನು ಪ್ರಕಾಶಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸಿದ್ದಾರೆ.
ಒರು ನಾಯಗಮಾಯ್ ಉಲಗುಕ್ಕು ವಾನೋರ್
ಇರು ನಾಟ್ಟಿಲ್ ಏಱಿ ಉಯ್ಕ್ಕುಮ್ ಇನ್ಬಮ್ ತಿರಮಾಗಾ
ಮನ್ನುಯಿರ್ಪ್ ಪೋಗಮ್ ತೀದು ಮಾಲ್ ಅಡಿಮೈಯೇ ಇನಿದಾಮ್
ಪನ್ನಿಯಿವೈ ಮಾಱನ್ ಉರೈಪ್ಪಾಲ್
ಆೞ್ವಾರ್ ವಿಶ್ಲೇಶಿಸಿ ವಿವರಿಸಿದ್ದು- 1. ಅಖಿಲ ವಿಶ್ವಕ್ಕೂ ಏಕ ನಾಯಕನಾಗಿರುವ ಸುಖವು ಸ್ಥಿರವಿಲ್ಲ. 2.ವಿಶಾಲವಾದ ಅವತಾರದಲ್ಲಿ ದೇವತೆಗಳು ಅನುಭವಿಸುವ ಸುಖವು ಸ್ತಿರವಲ್ಲ 3. ನಿತ್ಯವಾದ ಆತ್ಮಾನುಭವವು ಹೇಯವಾದದ್ದು 4.ಭಗವದ್ ಶೇಶತ್ವವೇ ಅನುಭಾವ್ಯವು (ರಾಸಿಕ್ಯತೆಯನ್ನು ಹೋಂದಿದೆ)

ಪಾಸುರ-32
ಅವ: (ಬಾಲರೈಪ್ ಪೋಲ್…) ಈ ಪಾಸುರದಲ್ಲಿ ಮಾಮುನಿಗಳು, ವಿವಿಧ ಸ್ಥಳಗಳಲ್ಲಿ ವಿವಿಧ ಕಾಲಗಳಲ್ಲಿದ್ದ ಎಮ್ಪೆರುಮಾನಿನ ವಿವಿಧ ರೂಪಗಳನ್ನು ಅನುಭವಿಸಲು ಇಚ್ಛಿಸಿವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ಬಾಲರೈಪ್ ಪೋಲ್ ಸೀೞ್ಗಿ ಪರನ್ ಅಳವಿಲ್ ವೇಟ್ಕೈಯಾಲ್
ಕಾಲತ್ತಾಲ್ ದೇಸತ್ತಾಲ್ ಕೈ ಕೞಿನ್ದ – ಸಾಲ
ಅರಿದಾನ ಬೋಗತ್ತಿಲ್ ಆಸೈಯುಟ್ರು ನೈನ್ದಾನ್
ಕುರುಗೂರಿಲ್ ವನ್ದುದಿತ್ತ ಕೋ
ಆೞ್ವಾರ್-ತಿರುನಗರಿಯಲ್ಲಿ ಅವತರಿಸಿದ  ನಾಯಕರಾದ ಆೞ್ವಾರ್ ,ದೇಶದಿಂದ ಹಾಗು ಕಾಲದಿಂದ ದೂರಸ್ಥನಾಗಿ ಹೋಂದಲು ಕಠಿನನಾದ ಎಮ್ಪೆರುಮಾನಿನ ವಿಷಯದಲ್ಲಿ ಪ್ರೀತಿಯಿಂದ, ಅತಿಯಾದ ಕೈಂಕರ್ಯವನ್ನು ಮಾಡಲು ಇಚ್ಛಿಸಿ, ಮಗುವಂತೆ ದುಃಖಪಟ್ಟರು.

ಪಾಸುರ-33
(ಕೋವಾನ ಈಸನ್…) ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನ್ ಹೇಗೆ ಕಾಲದ ನಿರ್ಬಂಧವನ್ನು ದೂರಮಾಡಿ ಅನುಭವವನ್ನು ನೀಡಿದನು ಎಂದು ಹೇಳುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸಿದ್ದಾರೆ.
ಕೋವಾನ ಈಸನ್ ಕುಱೈ ಎಲ್ಲಾಮ್ ತೀರವೇ
ಓವಾದ ಕಾಲತ್ತು ಉವಾದಿತನೈ – ಮೇವಿಕ್
ಕೞಿತ್ತಡೈಯಕ್ ಕಾಟ್ಟಿ ಕಲನ್ದ ಗುಣಮ್
ವೞುತ್ತುದಲಾಲ್ ವಾೞ್ನ್ದದಿನ್ದ ಮಣ್
ಸರ್ವಶೇಷಿಯಾದ ಎಂಪೆರುಮಾನ್ ಆೞ್ವಾರೋಂದಿಗೆ ಸೇರಿ,ಅವರ ದುಃಖವನ್ನು ದೂರಮಾಡಲು, ಕಾಲವು ಮುಂದೆ ಸಾಗುತಿದ್ದರೂ ಮಹಾನಿರ್ಬಂಧನೆಗಳನ್ನು ದೂರಮಾಡಿ, ಅವರು ಹಿಂದೆ ಇಚ್ಛಿಸಿದಂತೆಯೇ ತನ್ನ ಎಲ್ಲಾ ಲೀಲೆಗಳನ್ನು ಪ್ರಾಕಾಶಿಸಿದನು ; ಆೞ್ವಾರ್ ಎಮ್ಪೆರುಮಾನಿನ ಈ ಗುಣವನ್ನು ಸ್ತುತಿಸುವುದರಿಂದ ಜಗವು ತನ್ನನ್ನು ಧರಿಸಿಕೋಳ್ಳಿತು.

ಪಾಸುರ-34
(ಮಣ್ಣುಲಗಿಲ್ ಮುನ್ ಕಲನ್ದು…)
ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನಿಗೆ ಸದೃಶವಾಗಿರುವ ಹಾಗು ಸಂಬಂಧವಿರುವ ವಸ್ತುಗಳನ್ನು ಎಮ್ಪೆರುಮಾನಾಗೆಯೇ ಅರಿಯುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಮಣ್ ಉಲಗಿಲ್ ಮುನ್ ಕಲನ್ದು ಮಾಲ್ ಪಿರಿಗೈಯಾಲ್ ಮಾಱನ್
ಪೆಣ್ ನಿಲೈಮೈಯಾಯ್ಕ್ ಕಾದಲ್ ಪಿತ್ತೇಱಿ – ಎಣ್ಣಿಡಿಲ್ ಮುನ್
ಪೋಲಿ ಮುದಲಾನ ಪೊರುಳೈ ಅವನಾಯ್ ನಿನೈನ್ದು
ಮೇಲ್ ವಿೞುನ್ದಾನ್ ಮೈಯಲ್ ತನಿನ್ ವೀಱು

ಎಮ್ಪೆರುಮಾನ್ ಈ ಸಂಸಾರದಲ್ಲಿ ಆೞ್ವಾರೋಂದಿಗೆ ಹಿಂದೆ ಸೇರಿ, ನಂತರ ವಿರಹವನ್ನು ಉಂಟುಮಾಡಿದನು; ಭಕ್ತಿ-ಪಾರವಶ್ಯದಿಂದ ನಾಯಿಕಾಭಾವದಲ್ಲಿ (ಭಕ್ತಿಯಿಂದ ಉಂಟಾದ) ಹುಚ್ಚರಾಗಿ ಕಾಣುವುದಕ್ಕೆ ಉಪಮಾನಾದಿಗಳನ್ನು ಎಮ್ಪೆರುನಾನಗಿ ಕಂಡರು ಹಾಗು ಅತಿ ಪ್ರೀತಿಯನ್ನು ನಿಶ್ಚಯಿಸಿದರು.

35‌( ವೀಟ್ರಿರುಕ್ಕುಮಾಲ್) ಈ ಪಾಸುರದಲ್ಲಿ ಮಾಮುನಿಗಳು ಆಳ್ವಾರ್ ಪಾಸುರದಲ್ಲಿ ಎಂಪೆರುಮಾನಿನ ಅಭಿವ್ಯಕ್ತಿಯು ಪರಮಪದದಲ್ಲಿರುವಂತೆಯೇ ಇದ್ದದ್ದನ್ನು ಕಂಡು ಆನಂದಿಸಿದದನ್ನು ನೆನೆಪಿಸಿಕೊಂಡು ಬಹಳ ಕೃಪೆಯಿಂದ ನಮಗೆ ವಿವರಿಸುತ್ತಾರೆ

ವೀಟ್ರಿರುಕ್ಕುಮಾಲ್ ವಿಣ್ಣಿಲ್ ಮಿಕ್ಕ ಮಯಲ್ ತನ್ನೈ
ಆಟ್ರುದರ್ಕಾತ್ ತನ್ ಪೆರುಮೈ ಆನದೆಲ್ಲಾಮ್
ನನ್ರು ಕಲಕ್ಕಪ್ ಪೋಟ್ರಿ ನಂಗುಗನ್ದು ವೀಟ್ರುರೈತ್ತಾನ್
ಹೆನ್ರಿ ತುಯರ್ ಮಾರನ್ ತೀರ್ನದು

ಕರುಣಾಮಯನಾಗಿ ಪರಮಪದದಲ್ಲಿ ಕುಳಿತಿರುವ ಎಂಪೆರುಮಾನ್ ಇಲ್ಲಿ ಪ್ರತ್ಯಕ್ಷವಾಗಿ,ಆಳ್ವಾರಿನ ದುಃಖವನ್ನು ದೂರಮಾಡಿ, ಅವರೊಂದಿಗೆ ಕೂಡಲು ತನ್ನ ಕಲ್ಯಾಣ ಗುಣಗಳನ್ನು ಅಭಿವ್ಯಕ್ತಿಗೊಳಿಸಿದನು. ಸರ್ವೇಶ್ವರನ್ನು ಕಂಡು ಆಳ್ವಾರಿನ ದುಃಖ ನಾಶವಾಯಿತು . ಅವರು ಸಂತೋಷದಿಂದ ಎಂಪೆರುಮಾನನ್ನು ಪೂಜಿಸಿ, ಅತ್ಯಂತ ಕೃಪೆಯಿಂದ ಈ ಮಹಾತ್ಮೆಯನ್ನು ನಮಗೆ ವಿವರಿಸುತ್ತಾರೆ.

ಪಾಸುರ-36

(ತೀರ್ಪ್ಪಾರಿಲಾದ…)ಈ ಪಾಸುರದಲ್ಲಿ ಮಾಮುನಿಗಳು ಈ ಭಾವವನ್ನು ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ. ಆೞ್ವಾರಿನಲ್ಲಿ ವಿಶೇಷವಾದ ಪ್ರೀತಿಯಿರುವ ಎಮ್ಪೆರುಮಾನನ್ನು # ಅನುಭವಿಸಲಾಗದೆ ಮೂರ್ಚಿತರಾದರು , ಆೞ್ವಾರಿನ ಸುಹೃದ್ಗಳು ಇದಕ್ಕೆ ಪರಿಹಾರವನ್ನು ಹುಡುಕಲು ಪ್ರಯತ್ನಿಸಿದರು, ಹಾಗು ಜಾಗರೂತರಾಗಿದ್ದ ಹಿತೈಶಿಯರು ಇದು ಆೞ್ವಾರಿನ (ಹಾಗು ನಮ್ಮ) ಸ್ವರೂಪಕ್ಕೆ ಪ್ರಾಪ್ತವಾದದ್ದು ಅಲ್ಲವೆಂದು ಹೇಳಿ ಸೂಕ್ತ ಕಾರಣವನ್ನು ಪರಿಹಾರವನ್ನು ಹೇಳಿದರು.

ತೀರ್ಪ್ಪಾರ್ ಇಲಾದ ಮಯಲ್ ತೀರಕ್ ಕಲನ್ದ ಮಾಲ್
ಓರ್ಪ್ಪಾದುಮ್ ಇನ್ಱಿ ಉಡನ್ ಪಿರಿಯ – ನೇರ್ಕ್ಕ
ಅಱಿವೞಿನ್ದು ಉಟ್ರಾರುಮ್ ಅಱಕ್ ಕಲನ್ಗಪ್ ಪೇರ್ ಕೇಟ್ಟು
ಅಱಿವು ಪೆಟ್ರಾನ್ ಮಾಱನ್ ಸೀಲಮ್

ಸರ್ವೇಶ್ವರನು ಆೞ್ವಾರಿನ ಪವಿತ್ರವಾದ ಭಕ್ತಿಯನ್ನು ಕಂಡು ಅವರನ್ನು ತೃಪ್ತಿ ಗೊಳಿಸಲು ಅವರೋಂದಿಗೆ ಸಂಶ್ಲೇಶಿಸಿ ಏನು ವಿಶ್ಲೇಶಿಸದೆ ಹೋರಟಿಹೋದನು; ಇದನ್ನು ಕಂಡ ಬಾಂಧವರು ಹಿಂದಿನ ಕಾಲಕ್ಕಿಂತಲೂ ಹೆಚ್ಚು ಚಿಂತಿಸಲಾರಂಬಿಸಿ ತಮ್ಮ ಮನಸ್ಸನ್ನು ಕಳೆದುಕೊಂಡರು. ಆೞ್ವಾರ್ ಎಮ್ಪೆರುಮಾನಿನ ದಿವ್ಯ ನಾಮಗಳನ್ನು ಕೇಳಿ ಎಚ್ಚರರಾದರು, ಇಂತಹದು ಆೞ್ವಾರಿನ ಗುಣ.

ಪಾಸುರ-37
(ಸೀಲಮಿಗು ಕಣ್ಣನ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ನಾರಾಯಣನನ್ನು ಅನುಭವಿಸಲಾಗದೆ ಅನುಕ್ರೋಶಿಸಿದರು ಹಾಗು ಎಮ್ಪೆರುಮಾನಿನ ಇಂತಹ ನಾಮಗಳನ್ನು ಕೇಳಿ ಎಚ್ಚರರಾದರು.

ಸೀಲಮಿಗು ಕಣ್ಣನ್ ತಿರುನಾಮತ್ತಾಲ್ ಉಣರ್ನ್ದು
ಮೇಲವನ್ ತನ್ ಮೇನಿ ಕಣ್ಡು ಮೇವುದಱ್ಕು – ಸಾಲ
ವರುನ್ದಿ ಇರವುಮ್ ಪಗಲುಮ್ ಮಾಱಾಮಲ್ ಕೂಪ್ಪಿಟ್ಟು
ಇರುನ್ದನನೇ ತೆನ್ಕುರುಗೂರ್ ಏಱು

ಆೞ್ವಾರ್ ತಿರುನಗರಿಯ ನಾಥರಾದ ಆೞ್ವಾರಿನ ಭ್ರಮೆಯು ಕಲ್ಯಾಣ ಗುಣಗಳಿಂದ ಭೂರಿತನಾದ ಕೃಷ್ಣನ ದಿವ್ಯ ನಾಮವನ್ನು ಕೇಳಿ ಸ್ಪಷ್ಟತೆಯನ್ನು ಪಡೆದರು, ಎಚ್ಚರರಾಗಿ ಅತೀವ ದುಃಖದಿಂದ ಕೃಷ್ಣನ ದಿವ್ಯ ರೂಪವನ್ನು ಕಾಣಲು , ಆಶ್ರಯಿಸಿ ಅನುಭವಿಸಲು ಕೂಗುತಿದ್ದರು.

ಪಾಸುರ-38
(ಏಱು ತಿರುವುಡೈಯ…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಭಗವಾನಿಗಾಗಿ (ಭಗವದರ್ಥವಾಗಿ) ಇಲ್ಲದ ಆತ್ಮ ಹಾಗು ಆತ್ಮೀಯ ವಿಷಯಗಳಲ್ಲಿ ವೈರಾಗ್ಯವನ್ನು ತೋರುವ, ಇಂತಹ ದುಃಖದಿಂದ ಸ್ಥಿತಿಯಲ್ಲಿ ಭಗವಾನ್ ಸಹಕರಿಸದೆ ಇರುವುದನ್ನು ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.

ಏಱು ತಿರುವುಡೈಯ ಈಸನ್ ಉಗಪ್ಪುಕ್ಕು
ವೇಱುಪಡಿಲ್ ಎನ್ನುಡೈಮೈ ಮಿಕ್ಕ ಉಯಿರ್ – ತೇಱುನ್ಗಾಲ್
ಎನ್ಱನಕ್ಕುಮ್ ವೇಣ್ಡಾವೆನುಮಾಱನ್ ತಾಳೈ ನೆನ್ಜೇ
ನನ್ದಮಕ್ಕುಪ್ ಪೇಱಾಗ ನಣ್ಣು

ಆೞ್ವಾರ್ ಅಸಹ್ಯದಿಂದ ಹೇಳಿದರು” ಆಭರಣಾದಿಗಳು ಹಾಗು ಅದುಕ್ಕಿಂತಲೂ ಅಮೂಲ್ಯವಾದ ಆತ್ಮವನ್ನು ವಿಶ್ಲೇಶಿಸಿದಾಗ , ಶ್ರೀ ಮಹಾಲಕ್ಷ್ಮಿಯು ಏರಿ (ಆಸೀನಳಾದ) ವಕ್ಷಸ್ಥಲವನ್ನುಹೋಂದಿರುವ ಸರ್ವೇಶ್ವರನ ಹೃದಯಕ್ಕಾಗಿ ಅಂಗೀಕರಿಸದಿದ್ದರೆ, ನನಗೂ ಅವುಗಳು ಬೇಡ” ಎಂದು ಹೇಳಿದ ಆೞ್ವಾರಿನ ದಿವ್ಯ ಪಾದಗಳೇ ಪರಮಪ್ರಯೋಜನವೆಂದು ಆಶ್ರಯಿಸು.

ಪಾಸುರ-39
(ನಣ್ಣಾದು ಮಾಲಡಿಯೈ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿನ ಪಾಸುರದಲ್ಲಿ ಈ ಜಗತ್ತಿನ ಸಂಸಾರಿಗಳು ಪಡವ ದುಃಖ ನೋಡಿ ತಾಪ ಪಡುವುದನ್ನು ವಿವರಿಸುತ್ತಾರೆ

ನಣ್ಣಾದು ಮಾಲಡಿಯೈ ನಾನಿಲತ್ತೇ ವಲ್ವಿನೈಯಾಲ್
ಎಣ್ಣಾರಾತ್ ತುನ್ಬಮುಱುಮ್ ಇವ್ವುಯಿರ್ಗಳ್ ತಣ್ಣಿಮೈಯೈಕ್
ಕಣ್ಡಿರುಕ್ಕ ಮಾಟ್ಟಾಮಲ್ ಕಣ್ ಕಲನ್ಗು ಮಾಱನರುಳ್
ಉಣ್ಡು ನಮಕ್ಕುಟ್ರ ತುಣೈ ಒನ್Rಉ

ಆೞ್ವಾರ್ ಈ ಭೂಮಿಯಲ್ಲಿ ಎಮ್ಪೆರುಮಾನಿನ ದಿವ್ಯ ಪಾದಗಳಲ್ಲಿ ಶರಣಾಗದೆ ಕ್ರೂರ ಪಾಪಗಳಿಂದ ಅನಂತ ದುಃಖವನ್ನು ಅನುಭವಿಸುತ್ತಿರುವ ಆತ್ಮರ ನೈಚ್ಯವನ್ನು ಕಂಡು ತಾಳಲಾರದೆ ಕಣ್ಣೀರಿಡುವ ಆೞ್ವಾರಿನ ಕರುಣೆಯೇ ನನಗೆ ಅಭಿಮತವಾದ ಸಂಗಾತಿ.

ಪಾಸುರ-40 (ಒನ್ಱುಮಿಲೈತ್ ತೇವು…) ಈ ಪಾಸುರದಲ್ಲಿ ಮಾಮುನಿಗಳು ಸಂಸಾರಿಗಳು ತನ್ನಲ್ಲಿ ಶರಣಾಗಲು ಇರುವ ಅರ್ಚಾವತಾರದಲ್ಲಿ ಪರತ್ವವನ್ನುವಿವರಿಸುವ ಪಾಸುರಗಳನ್ನು ಅನುವದಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.

ಒನ್ಱುಮ್ ಇಲೈತ್ ತೇವು ಇವ್ವುಲಗಮ್ ಪಡೈತ್ತ ಮಾಲ್
ಅನ್ಱಿಯೆನ ಆರುಮ್ ಅಱಿಯವೇ – ನನ್Rಆಗ
ಮೂದಲಿತ್ತುಪ್ ಪೇಸಿಯರುಳ್ ಮೊಯ್ಮ್ಮಗಿೞೋನ್ ತಾಳ್
ತೊೞವೇ
ಕಾದಲಿಕ್ಕುಮ್ ಎನ್ನುಡೈಯ ಕೈ

“ವಿಶ್ವವನ್ನು ಸೃಷ್ಟಿಸಿದ ಸರ್ವೇಶ್ವರನ್ನಲ್ಲದೆ ಇನ್ನೊಂದು ದೈವವಿಲ್ಲ”, ಎಂದು ಎಲ್ಲರು ಅರಿಯುವಂತೆ ದೃಢವಾಗಿ ನಿರ್ಣಯಿಸಿ ಕೃಪೆಯಿಂದ ಹೇಳಿದ ವಕುಳಾಭರಣರ ದಿವ್ಯ ಪಾದಗಳಿಗೇ ನನ್ನ ಕೈಗಳು ಅಂಜಲಿಯನ್ನು ಸಮರ್ಪಿಸಲು ಇಚ್ಛಿಸುವವು

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – https://divyaprabandham.koyil.org/index.php/2020/10/thiruvaimozhi-nurrandhadhi-31-40-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment