ತಿರುವಾಯ್ಮೊೞಿ – ಸರಳ ವಿವರಣೆ – 5.5 – ಎಂಗನೇಯೋ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 4.10 ಒನ್‌ಱುಮ್


ಆಳ್ವಾರರು ತಮ್ಮನ್ನು ತಾವು ಪರಾಂಕುಶ ನಾಯಕಿಯಾಗಿ ನೆನೆದು ಕೊಂಡು , ಮಡಲ್‍ನನ್ನು ಆಚರಿಸಲು ಪ್ರಾರಂಭಿಸುತ್ತಾರೆ. (ಎಂಪೆರುಮಾನರು ತಮ್ಮನ್ನು ಬಿಟ್ಟುಬಿಟ್ಟರೆಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ.) ರಾತ್ರಿಯಲ್ಲಿ ಬಹಳವೇ ನೊಂದು , ಮತ್ತು ಬೆಳಗಿನ ಝಾವದಲ್ಲಿ ಸ್ವಲ್ಪ ತಿಳಿಯಾದರು. ಅವರ ತಾಯಿಯು ಮತ್ತು ಸ್ನೇಹಿತೆಯರೂ ಅವರಿಗೆ ಸಲಹೆಗಳನ್ನು ಕೊಡಲು ಆರಂಭಿಸಿದರು. ಆದರೆ ಅವಳು ಆ ಮಾತುಗಳಿಗೆ ಗಮನ ಕೊಡದೆ , ಎಂಪೆರುಮಾನರ ಯೋಚನೆಯಲ್ಲೇ ಸಂತೋಷಿಸುತ್ತಾ , ಅವರು ಕಾಣದೆ ಇದ್ದಾಗ ದುಃಖಿಸುತ್ತಾ ಹಾಡುತ್ತಾಳೆ. ಈ ಪದಿಗೆಯು ಆಳ್ವಾರರ ಸಂತೋಷ/ದುಃಖವನ್ನು ಬಹಿರಂಗಪಡಿಸುತ್ತದೆ. ಈ ಪದಿಗೆಯು ಉರುವೆಳಿಪ್ಪಾಡು (ಚಿತ್ರ ಪಟದಂತೆ ತೋರಿಸುವುದು) ಮಾದರಿಯಲ್ಲಿ ಆಳ್ವಾರರು ನಿಜವಾಗಿ ಎಂಪೆರುಮಾನರನ್ನು ನೋಡುತ್ತಿದ್ದಾರೆ ಎಂಬಂತೆ ಹಾಡಲಾಗುತ್ತದೆ. ಆಳ್ವಾರರು ನಂಬಿ ಎಂಪೆರುಮಾನರ ಸುಂದರ ರೂಪವನ್ನು ಇಲ್ಲಿ ಆನಂದಿಸುತ್ತಾರೆ.

ಪಾಸುರಮ್ 1:

ಪರಾಂಕುಶ ನಾಯಕಿ ಹೇಳುತ್ತಾಳೆ “ ನನ್ನ ಹೃದಯಕ್ಕೆ ಶಂಖು, ಚಕ್ರ ಮುಂತಾದ ಆಳ್ವಾರರುಗಳ ಜೊತಗೆ ಲಗತ್ತು ಏರ್ಪಟ್ಟಿದೆ. ಅವುಗಳೆಲ್ಲಾ ನಂಬಿಯ ವಿಶಿಷ್ಟ ಸಂಕೇತಗಳು ಮತ್ತು ಅವರ ಸೌಂದರ್‍ಯಕ್ಕೆ ಮೆರಗು ತಂದಂತಹವು.

ಎಙ್ಗನೇಯೋ ಅನ್ನೈಮೀರ್ಗಾಳ್ ಎನ್ನೈ ಮುನಿವದು ನೀರ್
ನಙ್ಗಳ್ ಕೋಲತ್ತಿರುಕ್ಕುಱುಙ್ಗುಡಿ ನಮ್ಬಿಯೈ ನಾನ್ ಕಣ್ಡಪಿನ್
ಶಙ್ಗಿನೋಡುಮ್ ನೇಮಿಯೋಡುಮ್ ತಾಮರೈಕ್ಕಣ್‍ಗಳೋಡುಮ್
ಶೆಙ್ಗನಿವಾಯೊನ್‍ಱಿನೋಡುಮ್ ಶೆಲ್‍ಹಿನ್‍ಱದು ಎನ್ನೆಞ್ಜಮೇ॥

ಓ! ತಾಯಂದಿರೇ ನನ್ನ ಮೇಲೆ ಏತಕ್ಕಾಗಿ ಕೋಪಗೊಂಡಿದ್ದೀರಿ? ಇದರ ಬದಲಾಗಿ ನೀವು ಪ್ರೀತಿಯನ್ನು ತೋರಿ ಆನಂದದಿಂದ ಇರಬೇಕು. ತಿರುಕ್ಕುರುಂಗುಡಿಯ ಆಕರ್ಷಕ ನಂಬಿಯನ್ನು ಆನಂದಿಸಿದ ಮೇಲೆ , ಅವರು ವಿಶಿಷ್ಟವಾದ ನಮ್ಮ ಸಂತತಿಗೆ ಸರಿ ಹೊಂದುವವರು. ಅವರು ಎಲ್ಲಾ ಕಲ್ಯಾಣ ಗುಣಗಳಿಂದ ಪರಿಪೂರ್ಣರಾದವರು. ಅವರ ಶ್ರೀ ಪಾಂಚಜನ್ಯಮ್, ದಿವ್ಯಚಕ್ರಮ್, ತಾವರೆಯ ದಳದಂತಹ ಆಕರ್ಷಕ ಕಣ್ಣುಗಳು , ಕೆಂಪಾದ ಹಣ್ಣಿನಂತಹ ದಿವ್ಯ ತುಟಿಗಳು , ನನ್ನ ಹೃದಯಕ್ಕೆ ಲಗತ್ತು ಏರ್ಪಟ್ಟಿದೆ. (ಕೋಲಮ್ – ಆಕರ್ಷಕ ಎಂಬ ಗುಣವಾಚಕವನ್ನು ತಿರುಕ್ಕುರುಂಗುಡಿಗೆ ಇಲ್ಲಿ ಬಳಸಿದ್ದಾರೆ.)

ಪಾಸುರಮ್ 2:
ಪರಾಂಕುಶ ನಾಯಕಿಯು ಹೇಳುತ್ತಾಳೆ ” ನಂಬಿಯ ದಿವ್ಯ ಸಹಜರೂಪವು ಅವರ ದಿವ್ಯ ಎದೆ, ದಿವ್ಯ ಭುಜಗಳಲ್ಲಿ ಮತ್ತು ದಿವ್ಯ ಆಭರಣಗಳಲ್ಲಿದೆ. ಅವುಗಳೆಲ್ಲಾ ನನ್ನನ್ನು ಸುತ್ತುವರೆದು ಹಿಂಸಿಸುತ್ತಿದೆ”.

ಎನ್ನೆಞ್ಜಿನಾಲ್ ನೋಕ್ಕಿಕ್ಕಾಣೀರ್ ಎನ್ನೈ ಮುನಿಯಾದೇ
ತೆನ್ನನ್‍ಶೋಲೈ ತ್ತಿರುಕ್ಕುಱುಙ್ಗುಡಿ ನಮ್ಬಿಯೈ ನಾನ್ ಕಣ್ಡಪಿನ್
ಮಿನ್ನು ನೂಲುಮ್ ಕುಣ್ಡಲಮುಮ್ ಮಾರ್ಬಿಲ್ ತಿರುಮಱುವುಮ್
ಮನ್ನು ಪೂಣುಮ್ ನಾನ್ಗುತೋಳುಮ್ ವನ್ದೆಙ್ಗುಮ್ ನಿನ್‍ಱಿಡುಮೇ॥


ನನಗೆ ಅಪ್ಪಣೆ ಕೊಡುವುದರ ಬದಲಾಗಿ ನೀವು ನನ್ನ ಹೃದಯದಲ್ಲಿರುವ ನಂಬಿಯನ್ನು ನೋಡಿ ಅನುಭವಿಸಬೇಕು. ದಕ್ಷಿಣ ದಿಕ್ಕಿನಲ್ಲಿರುವ , ಸುಂದರ ಉದ್ಯಾನವನದಿಂದ ಕೂಡಿದ ತಿರುಕ್ಕುರುಂಗುಡಿಯಲ್ಲಿರುವ ನಂಬಿಯನ್ನು ನೋಡಿದ ಮೇಲೆ , ಅವರ ವೈಭವವನ್ನು ತೋರಿಸುವ ದಿವ್ಯ ಯಜ್ಞೋಪವೀತಮ್, ಅವರ ದಿವ್ಯ ಕಿವಿಯ ಕುಂಡಲಗಳು, ಅವರ ಎದೆಯ ಮೇಲಿರುವ ಬೇರ್ಪಡಿಸಲಾಗದ ಶ್ರೀವತ್ಸ, ಮತ್ತು ಇತರೆ ನಿರಂತರವಾಗಿ ಜೋಡಿಸಿದ ಆಭರಣಗಳು ಮತ್ತು ಅವರ ನಾಲ್ಕು ದಿವ್ಯ ಭುಜಗಳು ನಾನು ಎಲ್ಲೇ ಹೋದರೂ ನನ್ನನ್ನು ಹಿಂಬಾಲಿಸಿ ನಾನು ನಿಂತ ಕಡೆ ಕೂಡಿಯೇ ನಿಲ್ಲುತ್ತವೆ.

ಪಾಸುರಮ್ 3:
ಪರಾಂಕುಶ ನಾಯಕಿಯು ಹೇಳುತ್ತಾಳೆ, ”ನಂಬಿಯ ದಿವ್ಯ ಆಯುಧಗಳಾದ ಶ್ರೀ ಶಾರ್ನ್ಗ ಬಿಲ್ಲನ್ನು ಮೊದಲುಗೊಂಡು ಎಲ್ಲವೂ ಎಲ್ಲಾ ಕಡೆಯೂ ನಿರಂತರವಾಗಿ ನನ್ನ ಒಳಗೆ ಮತ್ತು ಹೊರಗೆ ಕಾಣಿಸುತ್ತಿವೆ”.

ನಿನ್‍ಱಿಡುಮ್ ತಿಶೈಕ್ಕುಮ್ ನೈಯುಮ್ ಎನ್‍ಱು ಅನ್ನೈಯರುಮ್ ಮುನಿದಿರ್
ಕುನ್‍ಱಮಾಡ ತ್ತಿರುಕ್ಕುಱುಙ್ಗುಡಿ ನಮ್ಬಿಯೈ ನಾನ್ ಕಣ್ಡಪಿನ್
ವೆನ್‍ಱಿ ವಿಲ್ಲುಮ್ ತಣ್ಡುಮ್ ವಾಳುಮ್ ಶಕ್ಕರಮುಮ್ ಶಙ್ಗಮುಮ್
ನಿನ್‍ಱುತೋನ್‍ಱಿ ಕ್ಕಣ್ಣುಳ್ ನೀಙ್ಗಾ ನೆಞ್ಜುಳ್ಳುಮ್ ನೀಙ್ಗಾವೇ॥


ನನ್ನ ತಾಯಂದಿರಾದ ನೀವು ನನ್ನನ್ನು ಈ ಪ್ರೀತಿಗೊಳಗಾಗುವಂತೆ ಪ್ರಚೋದಿಸಿ , ನಂತರ ನನಗೆ ವಿರುದ್ಧವಾದ ಶಬ್ದಗಳನ್ನು ಹೇಳುತ್ತಿದ್ದೀರಿ. ನಾನು ಮೂಕವಿಸ್ಮಿತಳಾದೆ, ನಾನು ಅತಿ ಆಶ್ಚರ್‍ಯಗೊಂಡೆ, ಅಶಕ್ತಳಾದೆ, ಎಂದು. ತಿರುಕ್ಕುರುಂಗುಡಿ ನಂಬಿಯನ್ನು ಪೂರ್ತಿಯಾಗಿ ಆನಂದಿಸಿದ ಮೇಲೆ , ಯಾರಿಗೆ ಪರ್ವತದಂತಹ ಗೃಹಗಳನ್ನು ಶ್ರೀವೈಕುಂಠದಲ್ಲಿ ಹೊಂದಿದ್ದಾರೋ, ಅವರ ಅಪರಾಜಿತವಾದ ಬಿಲ್ಲು, ಗದೆ, ಖಡ್ಗ, ಶ್ರೀಚಕ್ರ ಮತ್ತು ಶಂಖಗಳು ಎಲ್ಲವೂ ನನ್ನ ಕಣ್ಣಿನ ಒಳಗೆ ಸೇರಿಕೊಂಡು ನನ್ನಿಂದ ದೂರವಾಗದಿದೆ. ಹಾಗೆಯೇ ನನ್ನ ಹೃದಯದೊಳಗೆ ಸೇರಿಕೊಂಡಿದೆ.

ಪಾಸುರಮ್ 4:
ಪರಾಂಕುಶ ನಾಯಕಿಯು ಹೇಳುತ್ತಾಳೆ “ ನಂಬಿಯ ದಿವ್ಯ ಮತ್ತು ವಿಶಿಷ್ಟವಾದ ಅಲಂಕಾರಗಳು ಅವರ ಶ್ರೇಷ್ಠತ್ವವನ್ನು ನಿರೂಪಿಸುತ್ತದೆ ಮತ್ತು ನನಗೆ ತುಂಬಾ ಹತ್ತಿರವಾಗಿದೆ”.

ನೀಙ್ಗನಿಲ್ಲಾ ಕ್ಕಣ್ಣನೀರ್ಗಳ್ ಎನ್‍ಱು ಅನ್ನೈಯರುಮ್ ಮುನಿದಿರ್
ತೇನ್‍ಕೊಳ್ ಶೋಲೈ ತ್ತಿರುಕ್ಕುಱುಙ್ಗುಡಿ ನಮ್ಬಿಯೈ ನಾನ್ ಕಣ್ದಪಿನ್
ಪೂನ್ದಣ್‍ಮಾಲೈ ತ್ತಣ್ಡುೞಾಯುಮ್ ಪೊನ್ ಮುಡಿಯುಮ್ ವಡಿವುಮ್
ಪಾಙ್ಗು ತೋನ್‍ಱುಮ್ ಪಟ್ಟುಮ್ ನಾಣುಮ್ ಪಾವಿಯೇನ್ ಪಕ್ಕತ್ತವೇ॥


ನೀವು ಮೊದಲು ನಂಬಿಯ ಮೇಲೆ ನನ್ನ ಮನಸ್ಸನ್ನು ವ್ಯಸ್ತಗೊಳಿಸಿ, ಈಗ ನನ್ನನ್ನು ಬೈಯುತ್ತಿದ್ದೀರಿ “ಅವಳ ಕಣ್ಣೀರು ನಿಲ್ಲುತ್ತಲೇ ಇಲ್ಲ “ ಎಂದು. ತಿರುಕ್ಕುರುಂಗುಡಿಯ ನಂಬಿಯನ್ನು ಆನಂದಿಸಿದ ಮೇಲೆ , ಎಲ್ಲಿ ಉದ್ಯಾನವನಗಳಲ್ಲಿ ಮಧುವು ತುಂಬಿ ತುಳುಕುತ್ತದೆಯೋ, ಅವರ ಹಸಿರಾದ ತುಳಸಿಯು ಮಾಲೆಯ ರೂಪದಲ್ಲಿ ಉತ್ತೇಜಕವಾಗಿದೆಯೋ, ಅವರ ಆಕರ್ಷಕವಾದ ಕಿರೀಟವು ಅವರ ಸರ್ವಶ್ರೇಷ್ಠತ್ವವನ್ನು ತೋರಿಸುತ್ತದೆಯೋ, ಅವರ ರೇಶ್ಮೆ ವಸ್ತ್ರಗಳು ಅವರ ಮೈಕಟ್ಟಿಗೆ ಸರಿಹೊಂದುತ್ತದೆಯೋ ಅವರ ಸೊಂಟದ ಡಾಬು ಎಲ್ಲವೂ ಈ ಪಾಪಿಯಾದ ನನ್ನ ಹತ್ತಿರ ಬರುತ್ತಿವೆ.

ಪಾಸುರಮ್ 5:

ಪರಾಂಕುಶ ನಾಯಕಿಯು ಹೇಳುತ್ತಾಳೆ “ ನಂಬಿಯ ಮುಖದ ಸೌಂದರ್‍ಯ ನನ್ನ ಆತ್ಮವನ್ನು ಸೇರುತ್ತಿದೆ”.

ಪಕ್ಕಮ್‍ನೋಕ್ಕಿನಿಱ್ಕುಮ್ ನೈಯುಮ್ ಎನ್‍ಱು ಅನ್ನೈಯರುಮ್ ಮುನಿದಿರ್
ತಕ್ಕ ಕೀರ್ತಿ ತ್ತಿರುಕ್ಕುಱುಙ್ಗುಡಿ ನಮ್ಬಿಯೈ ನಾನ್ ಕಣ್ಡಪಿನ್
ತೊಕ್ಕ ಶೋದಿ ತ್ತೊಣ್ಡೈ ವಾಯುಮ್ ನೀಣ್ಡ ಪುರುವಙ್ಗಳುಮ್
ತಕ್ಕ ತಾಮರೈಕ್ಕಣ್ಣುಮ್ ಪಾವಿಯೇನ್ ಆವಿಯಿನ್‍ಮೇಲನವೇ॥


ನನ್ನ ತಾಯಂದಿರಾದ ನೀವು ಕೋಪದಿಂದ ನನ್ನನ್ನು ಬೈಯುತ್ತಿದ್ದೀರಿ. “ ನಾನು ನಿಂತುಕೊಂಡು ನನ್ನ ಅಕ್ಕಪಕ್ಕ ಅವರು ಬರುವುದನ್ನೇ ನೋಡುತ್ತಿದ್ದೇನೆಂದು. ಮತ್ತು ಅವರು ಬರಲಿಲ್ಲವಾದ್ದರಿಂದ ನಾನು ಅಶಕ್ತಳಾಗಿ ನಿತ್ರಾಣಳಾಗಿದ್ದೇನೆಂದು “. ತಿರುಕ್ಕುರುಂಗುಡಿ ನಂಬಿಯನ್ನು ಆನಂದಿಸಿದ ಮೇಲೆ , ಯಾರು ಸಮವಿಲ್ಲದ ಹೆಸರುವಾಸಿಯಾಗಿರುವರೋ, ಅವರ ದಿವ್ಯ ತುಟಿಗಳು ಹಣ್ಣಾಗಿರುವ ತೊಂಡೇಹಣ್ಣನ್ನು ಹೋಲುತ್ತವೆ. ಅವರು ಬಹಳ ಪ್ರಕಾಶಭರಿತರಾಗಿದ್ದಾರೆ. ಅವರ ನೀಳವಾದ ದಿವ್ಯ ಹುಬ್ಬುಗಳು ಮತ್ತು ತಾವರೆಯಂತಹ ಆಕರ್ಷಕ ದಿವ್ಯ ಕಣ್ಣುಗಳು ಅಷ್ಟೇ ನೀಳವಾಗಿದೆ. ಅವೆಲ್ಲವೂ ಪಾಪಿಯಾದ ನನ್ನನ್ನು ಸೇರಲು ಬರುತ್ತಿವೆ. ನಾನು ಅವರನ್ನು ಸೇರಿ ಆನಂದಿಸಲಾಗುತ್ತಿಲ್ಲ ಎಂದು ಪರಾಂಕುಶ ನಾಯಕಿಯು ಗೋಳಿಡುತ್ತಾಳೆ.

ಪಾಸುರಮ್ – 6:

ಪರಾಂಕುಶ ನಾಯಕಿಯು ಹೇಳುತ್ತಾಳೆ “ ಅವರ ವಿಶಿಷ್ಟವಾದ ಮುಖಲಕ್ಷಣಗಳು ಮತ್ತು ಭುಜಗಳ ಅಂದವು ನನ್ನ ಹೃದಯವನ್ನು ತುಂಬಿಕೊಂಡಿದೆ.

ಮೇಲುಮ್ ವನ್‍ಪೞಿ ನಮ್‍ಕುಡಿಕ್ಕು ಇವಳ್ ಎನ್‍ಱು ಅನ್ನೈ ಕಾಣಕೊಡಾಳ್
ಶೋಲೈಶೂೞ್ ತಣ್‍ತ್ತಿರುಕ್ಕುಱುಙ್ಗುಡಿ ನಮ್ಬಿಯೈ ನಾನ್ ಕಣ್ಡಪಿನ್
ಕೋಲನೀಳ್ ಕೊಡಿ ಮೂಕ್ಕುಮ್ ತಾಮರೈ ಕ್ಕಣ್ಣುಮ್ ಕನಿವಾಯುಮ್
ನೀಲಮೇನಿಯುಮ್ ನಾನ್ಗುತೋಳುಮ್ ಎನ್ನೆಞ್ಜಮ್ ನಿಱೈನ್ದನವೇ।।

ಪರಾಂಕುಶ ನಾಯಕಿಯ ತಾಯಿಯು ಅವಳನ್ನು ನಂಬಿಯನ್ನು ಕಾಣಲು ಬಿಡುವುದಿಲ್ಲ. ಪರಾಂಕುಶ ನಾಯಕಿಯು ಎಂದೆಂದಿಗೂ ಹೀಯಾಳಿಸಲ್ಪಡುವಳು ಎಂದು ಆತಂಕ ಪಡುತ್ತಾರೆ. ತಿರುಕ್ಕುರುಂಗುಡಿಯ ನಂಬಿಯನ್ನು ನೋಡಿದ ಮೇಲೆ , ಕಲ್ಪಕ ಬಳ್ಳಿಯನ್ನು ಅವರ ಸುಂದರ ನೀಳವಾದ ದಿವ್ಯ ಮೂಗು, ತಾವರೆಯನ್ನು ಹೋಲುವ ಅವರ ದಿವ್ಯ ಕಣ್ಣುಗಳು, ಮಾಗಿದ ತೊಂಡೆ ಹಣ್ಣನ್ನು ಹೋಲುವ ಅವರ ದಿವ್ಯ ತುಟಿಗಳು , ನೀಲ ಬಣ್ಣದ ಅವರ ದಿವ್ಯ ರೂಪ, ಅವರ ನಾಲ್ಕು ದಿವ್ಯ ಬಾಹುಗಳು ನನ್ನ ಹೃದಯವನ್ನು ಆವರಿಸಿದೆ ಎಂದು ಪರಾಂಕುಶ ನಾಯಕಿಯು ಹೇಳುತ್ತಾಳೆ.

ಪಾಸುರಮ್ – 7:
ಪರಾಂಕುಶ ನಾಯಕಿಯು ಹೇಳುತ್ತಾಳೆ “ ನಂಬಿಯು ಅವರ ದಿವ್ಯ ರೂಪದಲ್ಲಿ ಅನಂತವಾಗಿ ಹೊಳೆಯುತ್ತಾ ಭವ್ಯವಾಗಿ ಮತ್ತು ಆಕರ್ಷಕವಾಗಿ ನನ್ನ ಹೃದಯದಲ್ಲಿ ದಿವ್ಯ ಚಕ್ರವನ್ನು ಹಿಡಿದು ನಿರಂತರವಾಗಿ ನಿಂತಿದ್ದಾರೆ.”

ನಿಱೈನ್ದ ವನ್‍ಪೞಿ ನಮ್‍ಕುಡಿಕ್ಕು ಇವಳ್ ಎನ್‍ಱು ಅನ್ನೈ ಕಾಣಕೊಡಾಳ್
ಶಿಱನ್ದ ಕೀರ್ತಿ ತಿರುಕ್ಕುಱುಙ್ಗುಡಿ ನಮ್ಬಿಯೈ ನಾನ್ ಕಣ್ಡಪಿನ್
ನಿಱೈನ್ದ ಶೋದಿವೆಳ್ಳಮ್ ಶೂೞ್‍ನ್ದ ನೀಣ್ಡ ಪೊನ್ ಮೇನಿಯೊಡುಮ್
ನಿಱೈನ್ದು ಎನ್ನುಳ್ಳೇ ನಿನ್‍ಱೊೞಿನ್ದಾನ್ ನೇಮಿ ಅಙ್ಗೈ ಉಳದೇ॥


ಪರಾಂಕುಶ ನಾಯಕಿಯ ತಾಯಿಯು ಅವಳಿಗೆ ನಂಬಿಯನ್ನು ಕಾಣಲು ಬಿಡುತ್ತಿಲ್ಲ. ಅವಳು ನಮ್ಮ ಕುಲಕ್ಕೆ ಪೂರ್ತಿಯಾಗಿ ಒಂದು ಬಹು ದೊಡ್ಡ ಕಳಂಕ ಎಂದು ಹಳಿಯುತ್ತಾರೆ. ತಿರುಕ್ಕುರುಂಗುಡಿಯ ನಂಬಿಯನ್ನು ಪೂರ್ತಿಯಾಗಿ ಆನಂದಿಸಿದ ಮೇಲೆ ಅತ್ಯಂತ ಪ್ರಸಿದ್ಧವಾದ ಅವರ ರೂಪವು ನನ್ನ ಹೃದಯದಲ್ಲಿ ನಿಂತಿದೆ. ಅವರ ಅದ್ಭುತವಾದ ಆಕರ್ಷಕ ದಿವ್ಯ ರೂಪವು ಅವರ ಸುತ್ತಲೂ ಇರುವ ಕಾಂತಿಯುತವಾದ ಪ್ರಕಾಶದ ಅಲೆಗಳು, ಅವರ ದಿವ್ಯ ಕೈಗಳಲ್ಲಿ ಹಿಡಿದಿರುವ ಸುಂದರ ದಿವ್ಯಚಕ್ರವು ನನ್ನ ಹೃದಯದಲ್ಲಿ ಶಾಶ್ವತವಾಗಿ ನಿಂತಿದೆ ಎಂದು ಹೇಳುತ್ತಾಳೆ.

ಪಾಸುರಮ್ 8:
ಪರಾಂಕುಶ ನಾಯಕಿಯು ಹೇಳುತ್ತಾಳೆ, “ ಅವರ ಭುಜಗಳಲ್ಲಿ ಅವರ ಕೂದಲಿನ ಎಳೆಗಳು ಬಂದು ಮುಟ್ಟುತ್ತಿರುತ್ತವೆ. ಅವರ ವಿಶಿಷ್ಟವಾದ ಮುಖ ಲಕ್ಷಣಗಳು ನನ್ನ ಮುಂದೆ ಕಾಣಿಸಿಕೊಂಡು ನನ್ನನ್ನು ನೋಯಿಸುತ್ತಿವೆ.”

ಕೈಯುಳ್ ನನ್ ಮುಗಮ್ ವೈಕ್ಕುಮ್ ನೈಯುಮ್ ಎನ್‍ಱು ಅನ್ನೈಯರುಮ್ ಮುನಿದಿರ್
ಮೈಕೊಳ್ ಮಾಡ ತ್ತಿರುಕ್ಕುರುಙ್ಗುಡಿ ನಮ್ಬಿಯೈ ನಾನ್ ಕಣ್ಡಪಿನ್
ಶೆಯ್ಯ ತಾಮರೈ ಕ್ಕಣ್ಣುಮ್ ಅಲ್‍ಕುಲುಮ್ ಶಿತ್ತಿದೈಯುಮ್ ವಡಿವುಮ್
ಮೊಯ್ಯ ನೀಳ್ ಕುೞಲ್ ತಾೞ್‌ನ್ದ ತೋಳ್ಗಳುಮ್ ಪಾವಿಯೇನ್ ಮುನ್ ನಿಱ್‍ಕುಮೇ॥


ನಾನು ನನ್ನ ಸುಂದರ ಮುಖವನ್ನು ನನ್ನ ಕೈಯ್ಯಲ್ಲಿ ಹಿಡಿದು ನಾನು ಅಶಕ್ತಗೊಂಡಿದ್ದೇನೆ. ನೀವು ನನ್ನ ತಾಯಂದಿರು ನನ್ನನ್ನು ಈ ಅಶಕ್ತತೆಗೆ ಪ್ರಯತ್ನಿಸಿ ತಳ್ಳಿ ಈಗ ನೀವು ನನ್ನ ಮೇಲೆ ಕೋಪವನ್ನು ತೋರಿಸುತ್ತಿದ್ದೀರಿ. ತಿರುಕ್ಕುರುಂಗುಡಿಯ ನಂಬಿಯನ್ನು ನೋಡಿದಮೇಲೆ ಅವರ ಕೆಂಪು ತಾವರೆಯಂತಹ ದಿವ್ಯ ಕಣ್ಣುಗಳು , ಸಣ್ಣದಾದ ನಿಡಿದಾದ ನಡುವು, ಅವರ ದಿವ್ಯ ರೂಪ, ಅವರ ದಟ್ಟವಾದ ನೀಳವಾದ ಕೂದಲಿನ ಎಳೆಗಳು ಮೃದುವಾಗಿ ಅವರ ಭುಜಗಳನ್ನು ತಟ್ಟುತ್ತಿರುವ ರೀತಿ , ಈ ಪಾಪಿಯಾದ ನನ್ನ ಮುಂದೆ ಕಾಣಿಸಿಕೊಳ್ಳುತ್ತಿವೆ.

ಪಾಸುರಮ್ 9:
ಪರಾಂಕುಶ ನಾಯಕಿಯು ಹೇಳುತ್ತಾಳೆ, “ ನಂಬಿಯು ಅವರ ಸೌಂದರ್‍ಯದೊಂದಿಗೆ ನನ್ನ ಹೃದಯದೊಳಗೆ ಪ್ರವೇಶಿಸಿದ್ದಾರೆ. ಮತ್ತು ನಾನು ಅವರನ್ನು ಮರೆತು ಬಿಡುತ್ತೇನೆಂದು ಅವರು ಅಲ್ಲಿಂದ ಒಂದು ಕ್ಷಣವೂ ಹೋಗುವುದಿಲ್ಲ.”

ಮುನ್ನಿನ್ಱಾಯೆನ್‍ಱು ತೋೞಿಮಾರ್ಗಳುಮ್ ಅನ್ನೈಯರುಮ್ ಮುನಿದಿರ್
ಮನ್ನು ಮಾಡ ತ್ತಿರುಕ್ಕುಱುಙ್ಗುಡಿ ನಮ್ಬಿಯೈ ನಾನ್ ಕಣ್ಡಪಿನ್
ಶೆನ್ನಿ ನೀಳ್ ಮುಡಿ ಆದಿಯಾಯ ಉಲಪ್ಪಿಲ್ ಅಣಿ ಕಲತ್ತನ್
ಕನ್ನಲ್ ಪಾಲ್ ಅಮುದಾಗಿ ವನ್ದು ಎನ್ನೆಞ್ಜಮ್ ಕೞಿಯಾನೇ॥


ನನ್ನ ಸ್ನೇಹಿತೆಯರು ಮತ್ತು ತಾಯಂದಿರು ನಾನು ಹೊರಗೆ ಕಾಯುತ್ತಾ ನಿಂತಿದ್ದೇನೆಂದು ಕೋಪಗೊಂಡಿದ್ದಾರೆ. ತಿರುಕ್ಕುರುಂಗುಡಿಯ ನಂಬಿಯನ್ನು ನೋಡಿದ ಮೇಲೆ , ತಮ್ಮ ಆಧಿಪತ್ಯವನ್ನು ಸ್ಥಾಪಿಸುವ ಎತ್ತರವಾದ ಕಿರೀಟವನ್ನು ತಲೆಯ ಮೇಲೆ ಧರಿಸಿ, ಅನೇಕ ಲೆಕ್ಕವಿಲ್ಲದಷ್ಟು ಆಭರಣಗಳನ್ನು ಧರಿಸಿ, ಸಕ್ಕರೆ, ಹಾಲು ಮತ್ತು ಅಮೃತದ ರೀತಿಯಲ್ಲಿ ಅಪರಿಮಿತವಾಗಿ ಆನಂದಿಸಲ್ಪಡುವವರು ನನ್ನ ಹೃದಯದೊಳಗೆ ಪ್ರವೇಶಿಸಿದ್ದಾರೆ ಮತ್ತು ಅಲ್ಲಿಂದ ಹೊರ ಹೋಗಲು ನಿರಾಕರಿಸುತ್ತಿದ್ದಾರೆ.

ಪಾಸುರಮ್ 10:
ಪರಾಂಕುಶ ನಾಯಕಿಯು ಹೇಳುತ್ತಾಳೆ. “ಅನಂತವಾಗಿ ಹೊಳೆಯುತ್ತಿರುವ ಮತ್ತು ಸರಿಯಾದ ಗುರಿಯಾಗಿರುವ , ನಿತ್ಯಸೂರಿಗಳು ಅನುಕಾಲ ಆನಂದಿಸುವ ದಿವ್ಯರೂಪ ನನ್ನ ಹೃದಯದಲ್ಲಿ ನಿರಂತರವಾಗಿ ಹೊಳೆಯುತ್ತಿದ್ದೆ ಮತ್ತು ಅದು ಯಾವುದಕ್ಕೂ ಹೋಲಿಕೆಯಲ್ಲಿ ಸರಿಸಾಟಿಯಾಗಲಾರದು.”

ಕೞಿಯಮಿಕ್ಕದು ಓರ್ ಕಾದಲಳ್ ಇವಳ್ ಎನ್‍ಱು ಅನ್ನೈ ಕಾಣಕೊಡಾಳ್
ವೞುವಿಲ್ ಕೀರ್ತಿ ತಿರುಕ್ಕುಱುಙ್ಗುಡಿ ನಮ್ಬಿಯೈ ನಾನ್ ಕಣ್ಡಪಿನ್
ಕುೞುಮಿ ತ್ತೇವರ್ ಕುೞಾಙ್ಗಳ್ ಕೈತೊೞ ಚ್ಚೋದಿವೆಳ್ಳತ್ತಿನುಳ್ಳೇ
ಎೞುವದು ಓರ್ ಉರು ಎನ್ನೆಞ್ಜುಳ್ ಎೞುಮ್ ಆರ್ಕ್ಕುಮ್ ಅಱಿವರಿದೇ॥


ನನ್ನ ತಾಯಿಯು ನಂಬಿಯನ್ನು ನೋಡಲು ಬಿಡುತ್ತಿಲ್ಲ. ಅವರು ನನ್ನ ಮೇಲಿನ ಅಪರಿಮಿತ ಪ್ರೀತಿಯಿಂದ ನೋಡಲು ಬಿಡುತ್ತಿಲ್ಲವೆಂದು ಹೇಳುತ್ತಿದ್ದಾರೆ. ತಿರುಕ್ಕುರುಂಗುಡಿಯ ನಂಬಿಯನ್ನು ನೋಡಿದ ಮೇಲೆ ಅವರ ಎಂದೆಂದಿಗೂ ಕುಗ್ಗದ, ತಗ್ಗದ, ನಷ್ಟವಾಗದ ವೈಭವಗಳನ್ನು ,ಒಂದು ಸರಿಯಾದ ಗುರಿ ಮತ್ತು ನಿತ್ಯಸೂರಿಗಳಿಂದ ಅನುಕಾಲ ಆನಂದಿಸಲ್ಪಡುವ ಅವರ ದಿವ್ಯ ತಿರುಮೇನಿ ಮತ್ತು ಅದರ ಪ್ರಕಾಶದ ಪ್ರವಾಹ ನನ್ನ ಹೃದಯದಲ್ಲಿ ನಿಂತಿದೆ. ತುಂಬಾ ಬುದ್ಧಿವಂತರಿಗೂ ಇದು ಅರ್ಥ ಮಾಡಿಕೊಳ್ಳಲು ಕಷ್ಟ ಸಾಧ್ಯ ಎಂದು ಪರಾಂಕುಶ ನಾಯಕಿಯು ಹೇಳುತ್ತಾಳೆ.

ಪಾಸುರಮ್ 11:
ಆಳ್ವಾರರು ನಮ್ಮ ಪ್ರಸ್ತುತ ನಿಜಸ್ವರೂಪವನ್ನು ತಿಳಿಸಿದ್ದಾರೆ. ಭಗವಂತನಿಗೆ ಸೇವೆ ಸಲ್ಲಿಸುವುದೇ ಆ ನಿಜ ಸ್ವರೂಪ. (ಜೀವಾತ್ಮದ ಲಕ್ಷಣ) ಈ ಹತ್ತು ಪಾಸುರಗಳನ್ನು ಓದಿದವರಿಗೆ ಇದೇ ಪ್ರತಿಫಲವಾಗಿ ಲಭಿಸುವುದು.

ಅಱಿವರಿಯ ಪಿರಾನೈ ಆೞಿಯಙ್ಗೈಯನೈಯೇ ಅಲತ್ತಿ
ನಱಿಯ ನಲ್ ಮಲರ್ ನಾಡಿ ನನ್‍ಕುರುಗೂರ್ ಚ್ಚಡಗೋಪನ್ ಶೊನ್ನ,
ಕುಱಿಕೊಳ್ ಆಯಿರತ್ತುಳ್ ಇವೈಪತ್ತುಮ್ ತಿರುಕ್ಕುಱುಙ್ಗುಡಿಯದನ್ಮೇಲ್
ಅಱಿಯಕ್ಕತ್ತುವಲ್ಲಾರ್ ವೈಟ್ಟಣವರ್ ಆೞ್ ಕಡಲ್ ಞಾಲತ್ತುಳ್ಳೇ॥


ತಿರುಕ್ಕುರುಂಗುಡಿ ನಂಬಿಯೇ ಅತ್ಯಂತ ಶ್ರೇಷ್ಠವಾದ ಅಧಿಪತಿ. ತಮ್ಮ ಸುಂದರ ದಿವ್ಯ ಕೈಯಲ್ಲಿ ಚಕ್ರವನ್ನು ಹಿಡಿದಿರುವ ಅವರನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಆಳ್ವಾರ್ ತಿರುನಗರಿಗೆ ನಾಯಕರಾಗಿರುವ ನಮ್ಮಾಳ್ವಾರ್‌ರವರು ವಿಶಿಷ್ಟವಾದ ಜ್ಞಾನವನ್ನು ಹೊಂದಿದ್ದಾರೆ. ಶ್ರೇಷ್ಠವಾದ ವಾಸನೆಯುಳ್ಳ ಅತ್ಯುತ್ತಮ ಹೂವನ್ನು ಅರಸಿ ಹೋಗುವಂತೆ ,ಅವರು ಭಗವಂತನನ್ನು ಆನಂದಿಸಲು ಅರ್ಹರಾಗಿದ್ದಾರೆ. ಅವರು ಈ ಹತ್ತು ಪಾಸುರಗಳನ್ನು ಸಾವಿರ ಪಾಸುರದೊಳಗೆ ಆಶೀರ್ವದಿಸಿ ಕೊಟ್ಟಿದ್ದಾರೆ. ಯಾರು ಇವುಗಳನ್ನು ಕಲಿತು , ಇವುಗಳ ಅರ್ಥದೊಂದಿಗೆ ಧ್ಯಾನಿಸುತ್ತಾರೋ, ಅವರಿಗೆ ಜ್ಞಾನವು ಪ್ರಕಾಶಿಸಿ, ಭಗವಂತನೊಂದಿಗೆ ವಿಶಿಷ್ಟವಾದ ಸಂಬಂಧವೇರ್ಪಟ್ಟು , ಆಳ ಸಮುದ್ರಗಳನ್ನೊಳಗೊಂಡ ಈ ಭೂಮಿಯ ಮೇಲೆ ಭಗವಂತನನ್ನು ಅನುಭವಿಸುತ್ತಾ ಬದುಕುತ್ತಾರೆ ಎಂದು ಆಳ್ವಾರರು ಆಶೀರ್ವದಿಸುತ್ತಾರೆ.

ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : https://divyaprabandham.koyil.org/index.php/2020/05/thiruvaimozhi-5-5-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org