Category Archives: upadhESa raththina mAlai

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೯ ಮತ್ತು ೩೦ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ  ೨೯

ಚಿತ್ತಿರೈ ತಿರುವಾದಿರೈಯ (ಚೈತ್ರ ಮಾಸದ ಆರ್ದ್ರಾ ನಕ್ಷತ್ರ ) ವಿಶೇಷತೆಯನ್ನು ಸದಾ ಸ್ಮರಿಸಲು ಅವರ ಮನಸ್ಸಿಗೆ ಹೇಳುತ್ತಾರೆ.

ಎಂದೈ ಯತಿರಾಸರ್ ಇವ್ವುಲಗಿಲ್ ಎಂದಮಕ್ಕಾ

ವಂದು ಉದಿತ್ತ ನಾಳ್ ಎನ್ನುಮ್ ವಾಸಿಯಿನಾಲ್ -ಇಂದತ್

ತಿರುವಾದಿರೈ ತನ್ನಿನ್ ಸೀರ್ಮೈ ತನೈ ನೆಂಜೇ

ಒರುವಾಮಲ್ ಎಪ್ಪೊೞುದುಂ ಓರ್

ಓ ಮನಸೇ! ಈ ಲೋಕದಲ್ಲಿ ಯತಿರಾಜರು ( ರಾಮಾನುಜರು) ಅವತರಿಸಿದ ಚಿತ್ತಿರೈ ತಿರುವಾದಿರೈ (ಚೈತ್ರ ಮಾಸದ ಆರ್ದ್ರಾ ನಕ್ಷತ್ರ ) ದಿನದ ವಿಶೇಷತೆಯನ್ನು ಸದಾ ಸ್ಮರಿಸುತ್ತಾ ಆನಂದಿಸು.

ಹಿಂದಿನ ಪಾಸುರದಲ್ಲಿ ಈ ಲೋಕಕ್ಕೆ ಉಪದೇಶಿಸಿದರು. ತನ್ನನ್ನು ತೊಡಗಿಸಿಕೊಂಡು ಈ ಪಾಸುರದಲ್ಲಿ ಈ ದಿನದ ಖ್ಯಾತಿಯನ್ನು ಅನುಭವಿಸುವರು.ಎಂಪೆರುಮಾನಾರರು ಅವರ ಶರಣಾಗತಿ ಗದ್ಯದಲ್ಲಿ “ಅಖಿಲ ಜಗತ್ ಸ್ವಾಮಿನ್ !ಅಸ್ಮತ್  ಸ್ವಾಮಿನ್  “ (ಓ ಜಗತ್ ಪ್ರಭು! ನನ್ನ ಸ್ವಾಮಿ “ ಎಂದು ಅನುಭವಿಸಿದಂತೆ, ಮಾಮುನಿಗಳು ಸಹ ಎಂಪೆರುಮಾನಾರ್ ಮಾಡಿದ ಜಗತ್ ಕಲ್ಯಾಣವನ್ನು ಹಿಂದಿನ ಪಾಸುರದಲ್ಲಿ ಅನುಭವಿಸಿ, ಈ ಪಾಸುರದಲ್ಲಿ ಎಂಪೆರುಮಾನಾರ್ ಅವರಿಗೆ ತೋರಿದ ಕೃಪೆಯನ್ನು ಅನುಭವಿಸಿದ್ದಾರೆ .

ಪಾಸುರ ೩೦

ಇದುವರೆಗೂ ಮಾಮುನಿಗಳು ಆೞ್ವಾರ್ಗಳ ಅವತಾರದ ದಿನಗಳನ್ನು ನಕ್ಷತ್ರಗಳನ್ನು ಅದ್ಭುತವಾಗಿ ಆಚರಿಸಿದರು. ಈ ಪಾಸುರದಿಂದ ಮುಂದಿನ ನಾಲ್ಕು ಪಾಸುರಗಳಲ್ಲಿ  ಅವರು ಅವತರಿಸಿದ ಸ್ಥಳಗಳನ್ನು ಆಚರಿಸುವರು.ಈ ಪಾಸುರದಲ್ಲಿ ಮೊದಲ ಮೂರು ಆೞ್ವಾರರು,ತಿರುಮಂಗೈ ಆೞ್ವಾರ್ ಮತ್ತು ತಿರುಪ್ಪಾನ್ ಆೞ್ವಾರ್ ಅವತರಿಸಿದ ಸ್ಥಳಗಳನ್ನು ಕರುಣೆಯಿಂದ ಹೇಳುವರು . ಶ್ರೀ ಅಯೋಧ್ಯಾ ಮತ್ತು ಶ್ರೀ ಮಥುರಾ ಎಂಪೆರುಮಾನರು  (ಶ್ರೀ ರಾಮ ಮತ್ತು ಶ್ರೀ ಕೃಷ್ಣ ನಂತೆ )ಅವತರಿಸಿದ ದಿವ್ಯ ದೇಶಗಳು. ಎಂಪೆರುಮಾನಾರರ ಅವತಾರದ ನಂತರ ನಮಗೆ ಆೞ್ವಾರುಗಳ ಬಗ್ಗೆ ತಿಳಿದಿದ್ದ ಕಾರಣದಿಂದಾಗಿ ಆೞ್ವಾರ್ಗಳು ಅವತರಿಸಿದ ಸ್ಥಳಗಳು ಹಿಂದೆ ಹೇಳಿದ ದಿವ್ಯ ದೇಶಗಳಿಗಿಂತ ಹೆಚ್ಚಿನ ಮಹತ್ವವನ್ನು ಹೊಂದಿರುವುದು.

 ಎಣ್ಣರುಮ್ ಸೀರ್ಪ್ ಪೊಯ್ಗೈ  ಮುನ್ನೋರ್ ಇವ್ವುಲಗಿಲ್ ತೋನ್ಱಿಯ ಊರ್

ವಣ್ಮೈ ಮಿಗು ಕಚ್ಚಿ ಮಲ್ಲೈ ಮಾಮಯಿಲೈ – ಮಣ್ಣಿಯಿಲ್ ನೀರ್

ತೇಂಗುಮ್ ಕೂಱೈಯಲೂರ್  ಸೀರ್ ಕಲಿಯನ್ ತೋನ್ಱಿಯ   ಊರ್

ಓಂಗುಮ್  ಉಱೈಯೂರ್ ಪಾಣನ್ ಊರ್

ಮುದಲ್ ಆೞ್ವಾರರು ,- ಪೊಯ್ಗೈ ಆೞ್ವಾರ್ ,ಭೂದತ್  ಆೞ್ವಾರ್ , ಮತ್ತು ಪೇಯ್ ಆೞ್ವಾರ್ ಅಪಾರ ಕಲ್ಯಾಣ ಗುಣಗಳುಳ್ಳವರು. ಅವರು ಅವತರಿಸಿದ ಸ್ಥಳಗಳು ಅನುಕ್ರಮವಾಗಿ ಭವ್ಯವಾದ ಕಾಂಚೀಪುರಂ (ತಿರುವೆಃಕ ), ತಿರುಕ್ಕಡನ್ಮಲ್ಲೈ ( ಇಂದಿನ ಮಹಾಬಲಿಪುರಂ)ಮತ್ತು ತಿರುಮಯಿಲೈ. ಮಣ್ಣಿ ನದಿಯ ಸಮೃದ್ಧವಾದ ನೀರುಳ್ಳ,  ತಿರುಕ್ಕುರೈಯಲೂರ್ ಸ್ಥಳದಲ್ಲಿ ಖ್ಯಾತಿವಂತರು ತಿರುಮಂಗೈ ಆೞ್ವಾರ್ ಅವತರಿಸಿದ ಸ್ಥಳ .  ಅಪಾರ ಘನತೆಯುಳ್ಳ ತಿರುಕ್ಕೋೞೀ ಎಂಬ ಉಱೈಯೂರಲ್ಲಿ ತಿರುಪ್ಪಾನಾೞ್ವಾರ್ ಅವತರಿಸಿದರು .

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-29-30-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೭ ರಿಂದ ೨೮ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಮುಂದಿನ ಮೂರು ಪಾಸುರಗಳಲ್ಲಿ ಮಾಮುನಿಗಳು ಆೞ್ವಾರ್ಗಳಂತೆ ಅಪಾರ ಖ್ಯಾತಿ ಪಡೆದ, ಅವರ ಸೇವಕನಾದ ಮತ್ತು ಇತರರಿಗೆಲ್ಲಾ ನಾಯಕನಾದ ಎಂಪೆರುಮಾನಾರ್ ಅವತರಿಸಿದ ದಿವ್ಯ ನಕ್ಷತ್ರದ ವೈಶಿಷ್ಟ್ಯತೆಯನ್ನು ಅನುಭವಿಸುವರು.ಈ ಪಾಸುರದಲ್ಲಿ ಚೈತ್ರ ಮಾಸದ ಆರ್ದ್ರಾ ನಕ್ಷತ್ರದ ವಿಶೇಷತೆಯನ್ನು ಈ ಲೋಕದ ಜನರಿಗೆ ತಿಳಿಸುವರು.

ಇನ್ಱುಲಗೀರ್ ಚಿತ್ತಿರೈಯಿಲ್ ಎಯ್ನ್ದ ತಿರುವಾದಿರೈ ನಾಳ್

ಎನ್ಱೈಯಿನುಂ ಇನ್ಱು ಇದನುಕ್ಕು ಎಱ್ಱಂ ಎಂದಾನ್ – ಎನ್ಱವರ್ಕ್ಕು

ಚಾಱ್ಱುಗಿನ್ಱೇನ್ ಕೇಣ್ಮಿನ್ ಎತಿರಾಸರ್ ತಂ ಪಿಱಪ್ಪಾಲ್
 
ಕೊಂಡಾಡುಂ ನಾಳ್
 

ಪಾಸುರ ೨೮

ಮಾಮುನಿಗಳು , ಚೈತ್ರ ಮಾಸದ ಆರ್ದ್ರಾ ನಕ್ಷತ್ರವು ಆೞ್ವಾರರು ಅವತರಿಸಿದ ದಿನ ಕ್ಕಿಂತ ವಿಶೇಷವಾದ ದಿನವೆಂದು, ಎಲ್ಲರೂ ತಿಳಿಯಲೆಂದು ಕರುಣೆಯಿಂದ ಹೇಳುವರು.

ಆೞ್ವಾರ್ಗಳ್ ತಾಂಗಳ್ ಅವದರಿತ್ತ ನಾಳ್ಗಳಿಲುಂ

ನಾಳ್ ನಮಕ್ಕು ಮಣ್ಣುಲಗೀರ್ – ಎೞ್ಪಾರುಂ

ಉಯ್ಯ ಯತಿರಾಸರ್ ಉದಿತ್ತು ಅರುಳುಂ

ಚಿತ್ತಿರೈಯಿಲ್ ಸೈಯ್ಯ ತಿರುವಾದಿರೈ.

ಓ ಲೋಕದ ಜನಗಳೆ, ಚೈತ್ರ ಮಾಸದ ಆರ್ದ್ರಾ ನಕ್ಷತ್ರವು ಆಱ್ವಾರರು ಅವತರಿಸಿದ ದಿನಕ್ಕಿಂತ ವಿಶೇಷವಾದ ದಿನ. ಈ ಲೋಕದ ಜನಸಾಮಾನ್ಯರ ಅಭಿವೃದ್ಧಿಗಾಗಿ ಈ ದಿನದಂದು ಶ್ರೀ ರಾಮಾನುಜರು ಅವತರಿಸಿದರು. ಎಂಪೆರುಮಾನರು ಆೞ್ವಾರುಗಳಿಗೆ ಕಲ್ಮಷವಿಲ್ಲದ ಙಾನ ಮತ್ತು ಭಕ್ತಿ ಅನುಗ್ರಹಿಸಿದ್ದಾರೆ.ಅವರು ಜಗತ್ಕಲ್ಯಾಣಕ್ಕಾಗಿ ಪಾಸುರಗಳನ್ನು( ದೈವ ಗಾನ) ಕರುಣೆಯಿಂದ ಹಾಡಿದ್ದಾರೆ. ಇವರ ರಚನೆಗಳನ್ನು ಆಧಾರವಾಗಿ ಎಂಪೆರುಮಾನಾರರು ಜನಸಾಮಾನ್ಯರ ಏಳಿಗೆಗಾಗಿ ಸಂಪ್ರದಾಯವನ್ನು(ಪ್ರತಿಷ್ಠಿತ ಆಚಾರಗಳು ) ನಿರ್ವಹಿಸಿದ್ದಾರೆ.ಶ್ರೀ ರಾಮಾನುಜರ ಅವತಾರದಿಂದಲೇ ಈ ಲೋಕದ ಜನರಿಗೆ ಜ್ಞಾನೋದಯವಾಗಿ ಶ್ರೀಮನ್ನಾರಾಯಣನ ಭಕ್ತರಾದರು ಎಂದು ರಾಮಾನುಜ ನೂಟ್ರಂದಾದಿ ಎಂಬ ದಿವ್ಯ ಸೂಕ್ತಿಯಲ್ಲಿ ಅಮುದನಾರ್ (ಶ್ರೀ ರಾಮಾನುಜರ ಶಿಷ್ಯರು) ಬರೆದಿದ್ದಾರೆ.ಇದಕ್ಕೆ ವ್ಯಾಖ್ಯಾನ ಬರೆಯುವಾಗ ಮಾಮುನಿಗಳು ಇದೇ ರೀತಿಯ ಆಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ . ರಾಮಾನುಜರು ಅವತರಿಸಿದಾಗ ಇದ್ದವರು ಹಿತವನ್ನು ಅನುಭವಿಸಿ ,ಮಹತ್ ತತ್ವವಾದ ಆದಿ ಶೇಷನ ಅವತಾರವಾದವರು ಮತ್ತು ಕರುಣೆ ತೋರಿ ಶ್ರೀಭಾಷ್ಯಂ ನಂತಹ ಗ್ರಂಥಗಳನ್ನು ರಚಿಸಿ, ಜನರ ಜ್ಞಾನವನ್ನು ಪೋಷಿಸಿ ಸರಿಯಾದ ಮಾರ್ಗದಲ್ಲಿ ನಾಯಕತ್ವ ವಹಿಸಿದರು, ಎಂದು ಬರೆದಿದ್ದಾರೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-27-28-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೫ ಮತ್ತು ೨೬ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೨೫

ಮಾಮುನಿಗಳು ಮಧುರಕವಿಯ ಘನತೆಯನ್ನು ಎರಡು ಪಾಸುರಗಳಲ್ಲಿ ವರ್ಣಿಸಿದ್ದಾರೆ.ಈ ಪಾಸುರದಲ್ಲಿ , ಮಿಕ್ಕ ಆೞ್ವಾರ್ಗಳು ಅವತರಿಸಿದ ದಿನ ಗಳಿಗಿಂತ  ಚೈತ್ರ ಮಾಸದ ಚಿತ್ರಾ ನಕ್ಷತ್ರದಂದು ಅವತರಿಸಿದ ಮಧುರಕವಿ ಆೞ್ವಾರರ ಖ್ಯಾತಿಯನ್ನು ತಿಳಿಸುತ್ತಾ ಅದನ್ನು ಪರಿಶೀಲಿಸಲು ಅವರ ಮನಸ್ಸಿಗೆ ಹೇಳುತ್ತಾರೆ.

ಏರಾರ್ ಮಧುರಕವಿ ಇವ್ವುಲಗಿಲ್  ವಂದು ಉದಿತ್ತ

ಶೀರಾರುಂ ಶಿತ್ತಿರೆಯಿಲ್  ಶಿತ್ತಿರೈ ನಾಳ್ – ಪಾರ್  ಉಲಗಿಲ್

ಮಱ್ಱುಳ್ಳ ಆೞ್ವಾರ್ಗಳ್ ವಂದು ಉದಿತ್ತ ನಾಳ್ಗಳಿಲುಮ್

ಉಱ್ಱದು ಎಮಕ್ಕು ಎನ್ಱು ನೆಂಜೇ ಓರ್  

ಓ ಮನಸೇ! ಚೈತ್ರ ಮಾಸದ ಚಿತ್ರಾ ನಕ್ಷತ್ರಕ್ಕೆ ತಕ್ಕ ಖ್ಯಾತಿಯೆಂದರೆ ಅಂದು ಮಹನೀಯರು, ಮಧುರಕವಿ ಆೞ್ವಾರ್ ಈ ಭುವಿಯಲ್ಲಿ ಅವತರಿಸಿದರು . ಮಿಕ್ಕ ಆೞ್ವಾರ್ಗಳು ಅವತರಿಸಿದ ದಿನಗಳಿಗಿಂತ ಇದು ನಮ್ಮ ಸ್ವರೂಪಕ್ಕೆ  ( ನೈಜಿಕ ಸ್ವಭಾವಕ್ಕೆ ) ತಕ್ಕವಾದದ್ದು ಎಂದು ಪರಿಶೀಲಿಸು.

ನಮ್ಮ ಪೂರ್ವಾಚಾರ್ಯಾರಾದ ಪಿಳ್ಳೈ ಲೋಕಾಚಾರ್ಯರು , ಅವರ ಶಾಸ್ತ್ರ   ಶ್ರೀವಚನ ಭೂಷಣದಲ್ಲಿ , ಮಧುರಕವಿ ಆೞ್ವಾರರ ವಿಖ್ಯಾತಿಯನ್ನು  ಸುಂದರವಾಗಿ ವಿವರಿಸಿದ್ದಾರೆ. ಮಿಕ್ಕ ಆೞ್ವಾರ್ಗಳು ಅವರವರು ಎಂಪೆರುಮಾನರನ್ನು ಎಂದು ಪಡೆದು ಅನುಭವಿಸುವರೋ ಎಂದು ಪರಿಶ್ರಮಿಸಿದಾಗ ಅವರು  ದುಃಖದಲ್ಲಿ ಪಾಸುರಗಳನ್ನು ರಚಿಸಿದರು ಮತ್ತು ಅವರು ಮಾನಸಿಕವಾಗಿ ಸಂತೋಷವಾಗಿ ಅವರನ್ನು ಅನುಭವಿಸಿದಾಗ ಆನಂದದಿಂದ ಪಾಸುರಗಳನ್ನು ರಚಿಸಿದರು. ಆದರೆ ಮಧುರಕವಿ ಆೞ್ವಾರ್ ಅವರ ಆಚಾರ್ಯಾರಾದ ನಮ್ಮಾೞ್ವಾರರನ್ನು ತನಗೆ  ಸರ್ವಸ್ವವೆಂದು ಭಾವಿಸಿ ಅವರ ಆಚಾರ್ಯರ ಕೈಂಕರ್ಯದಲ್ಲಿ ತೊಡಗಿದರು. ಆದ್ದರಿಂದ ಅವರು ಈ ಲೋಕದಲ್ಲಿ  ಸದಾ ಪರಮಾನಂದದಲ್ಲಿದ್ದು  ಅದನ್ನು ಇತರರಿಗೆ ಹೇಳಿ ಉಪದೇಶಿಸಿದರು. ಬೇರಾವುದು ಈ ವೈಶಿಷ್ಟ್ಯತೆ ಹೊಂದಿಲ್ಲ.  ಶೀರಾರುಂ ಚಿತ್ತಿರೆಯಿಲ್  ಚಿತ್ತಿರೈ ನಾಳ್  ಎಂಬ ಸೂಕ್ತಿಯಲ್ಲಿರುವ ಸೀರ್ಮೈ  ( ಖ್ಯಾತಿ ಅಥವಾ ವೈಶಿಷ್ಟ್ಯತೆ ) ಚೈತ್ರ ಮಾಸ  ಮತ್ತು ಚಿತ್ರಾ ನಕ್ಷತ್ರಕ್ಕೆ ಸೂಕ್ತವಾಗಿರುವುದು. ಆಚಾರ್ಯರ ಕೃಪೆಯಾಗಿ ಊರ್ಜಿತವಾಗುವುದೇ ನಮ್ಮ ಸ್ವರೂಪ. ಈ ಆೞ್ವಾರರ ದೆಸೆ ಇದಕ್ಕೆ  ಅನುಗುಣವಾಗಿರುವುದು.

ಪಾಸುರ ೨೬  

 ನಮ್ಮ ಆಚಾರ್ಯರು , ಆೞ್ವಾರುಗಳ ಅರುಳಿಚೆಯಲ್ಗಳ ( ದೈವ ಗಾಯನ ) ಅರ್ಥಗಳನ್ನು ಖಚಿತವಾಗಿ ಪ್ರಕಟಿಸಿದಂತೆ, ಮಧುರಕವಿ ಆೞ್ವಾರರ ಪ್ರಬಂಧದ  ( ದೈವ ಗಾಯನ) ವೈಶಿಷ್ಟ್ಯತೆಯನ್ನು ಪರಿಶೀಲಿಸಿ ಅದನ್ನು ಅರುಳಿಚೆಯಲ್ಗಳಿಗೆ ಸೇರಿಸಿದ ರೀತಿಯನ್ನು ಮಾಮುನಿಗಳು ಉದಾಹರಣೆಯಂತೆ ವಿವರಿಸಿರುವರು.

ವಾಯ್ತ ತಿರುಮಂದಿರತ್ತಿನ್ ಮದ್ದಿಮಮಾಂ ಪದಂ ಪೋಲ್

ಸೀರ್ತ್ತ ಮಧುರಕವಿ ಸೈಕಲೆಯೈ – ಆರ್ತ್ತ ಪುಗೞ್

ಆರಿಯರ್ಗಳ್  ತಾಂಗಳ್ ಅರುಳಿಚೆಯಲ್ ನಡುವೇ

ಸೇರ್ವಿತ್ತಾರ್ ತಾಱ್ಪರಿಯಂ  ತೇರ್ನ್ದು     

ಎಂಟು ಅಕ್ಷರಗಳು ಉಳ್ಳ ( ದೈವ  ಗಾನ)  ತಿರುಮಂತ್ರಂ , ಪದ ಅರ್ಥಗಳಿಂದ ಪರಿಪೂರ್ಣವಾಗಿದೆ ಎಂದು ಭಾವಿಸಲಾಗಿದೆ. ಅದರ ಮಧ್ಯಭಾಗವಾದ ನಮಃ  ಪದದ ವೈಶಿಷ್ಟ್ಯತೆಯು ಮಹನೀಯರಾದ ಮಧುರಕವಿ ಆೞ್ವಾರ್ ರಚಿಸಿದ  ಅಪೂರ್ವ ರಚನೆಯಾದ ಕಣ್ಣಿನುನ್ ಚಿರುತ್ತಾಂಬು ಗೆ ಸಾಟಿಯಾಗಿರದು. ಈ ಪ್ರಬಂಧದ ಅರ್ಥ ವೈಶಿಷ್ಟ್ಯತೆ ತಿಳಿದ ಪೂರ್ವಾಚಾರ್ಯರು ಇದನ್ನು ಮಿಕ್ಕ ಆೞ್ವಾರ್ಗಳ ಅರುಳಿಚೆಯಲೊಂದಿಗೆ ಸೇರಿಸಿ ಮಿಕ್ಕ ಪ್ರಬಂಧಗಳೊಂದಿಗೆ ಸದಾ  ಇದನ್ನು ಪಠಿಸಲು ಏರ್ಪಡಿಸಿದರು.ನಮಃ  ಎಂಬ ಪದವು ಭಾಗವತ ಶೇಷತ್ವಂ- ಎಂಪೆರುಮಾನರ ಭಕ್ತರಿಗೆ ಕೈಂಕರ್ಯ ಮಾಡುವುದನ್ನು ಸೂಚಿಸುವುದು . ಮಧುರಕವಿ  ಆೞ್ವಾರ್ ನಮ್ಮಾೞ್ವಾರರೆ ಭಗವಂತನೆಂದು ಭಾವಿಸಿ  ತೇವು ಮಟ್ರರಿಯೇನ್ – ಬೇರಾವ ದೇವರನು ನಾನ್ ಅರಿಯೆನು  ಎಂದು ಹಾಡಿ, ಈ ಪ್ರಬಂಧದಲ್ಲಿ ಅವರ ಅಪಾರ ನಂಬಿಕೆಯನ್ನು ಪ್ರಕಟಿಸಿದ್ದಾರೆ. ಇದನ್ನು ಅರಿತ ಪೂರ್ವಾಚಾರ್ಯರು ಈ ಪ್ರಬಂಧವನ್ನು ಇತರ ಅರುಳಿಚೆಯಲೊಂದಿಗೆ  ಸೇರಿಸಿ ಗೌರವಿಸಿದ್ದಾರೆ

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-25-26-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೩ ಮತ್ತು ೨೪ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೨೩ 

ಆಂಡಾಳ್  ಅವತರಿಸಿದ ದಿನ ತಿರುವಾಡಿಪ್ಪೂರಂ ( ಆಷಾಡ ಮಾಸದ ದಿವ್ಯವಾದ ಪುಬ್ಬಾ ನಕ್ಷತ್ರ )  ಎಣೆಯಿಲ್ಲದ್ದೆಂದು ಅದರ ಖ್ಯಾತಿ ಅವರ ಮನಸ್ಸಿಗೆ ಹೇಳುತ್ತಾರೆ 

ಪೆರಿಯಾೞ್ವಾರ್  ಪೆಣ್  ಪಿಳ್ಳೈಯಾಯ್ ಆಂಡಾಳ್ ಪಿರಂದ 

ತಿರುವಾಡಿಪ್ಪೂರತ್ತಿನ್  ಸೀರ್ಮೈ – ಒರು ನಾಳೈಕ್ಕು 

ಉನ್ಡೊ ಮನಮೇ ಉಣರ್ನ್ದು ಪಾರ್ ಆಂಡಾಳುಕ್ಕು   

ಉಂಡಾಗಿಲ್ ಒಪ್ಪು ಇದರ್ಕುಂ ಉಂಡು 

ಓ  ಮನಸೇ ವಿಚಾರಿಸಿ ನೋಡು ತಿರುವಾಡಿಪ್ಪೂರಂ ದಿನಕ್ಕೆ ಎಣೆಯಾದ ದಿನವಿರುವುದೇ , ಪೆರಿಯಾೞ್ವಾರರ  ದಿವ್ಯ ಪುತ್ರಿಯಾಗಿ ಆಂಡಾಳ್  ಅವತರಿಸಿದ  ದಿನ. ಆಂಡಾಳ್ ನಾಚ್ಚಿಯಾರ್ರಿಗೆ ಎಣೆಯಿದ್ದರೆ ಮಾತ್ರ  ಅದು ಈ ದಿನಕ್ಕೆ ಸಮನಾಗುವುದು !

ಆಂಡಾಳ್  ನಾಚಚ್ಚಿಯಾರ್ ಭೂಮಿ ಪಿರಾಟ್ಟಿಯ ಪುನರವತಾರ ಆಗಿರುವರು.  

 ಈ ಲೋಕದ ಜನರ ಮೇಲಿರುವ ವಾತ್ಸಲ್ಯದಿಂದ ಎಂಪೆರುಮಾನರನ್ನು ಅಗಲಿ ಈ ಭುವಿಯಲ್ಲಿ ಅವತರಿಸಿದಳು. ಅದಲ್ಲದೆ ಆೞ್ವಾರ್ಗಳು ಅಲ್ಲಿಯವರೆಗೂ ಈ ಲೋಕದಲ್ಲಿ ಇದ್ದರು.ಎಂಪೆರುಮಾನರ ನಿರ್ಬಂಧರಹಿತ ಕರುಣೆಯಿಂದ ಅವರಿಗೆ ಕಲ್ಮಷವಿಲ್ಲದ ಙಾನ ಹಾಗು ಭಕ್ತಿಯಿಂದ ಎಂಪೆರುಮಾನರನ್ನು ಪರಿಪೂರ್ಣವಾಗಿ ಅನುಭವಿಸಿದರು. ಇತರರಿಗಾಗಿ ತನ್ನ ಮಹತ್ತಾದ ನೆಲೆಯನ್ನು ತ್ಯಜಿಸಿದ ಆಂಡಾಳಿಗೆ ಎಣೆಯಾದವರು ಯಾರೂ ಇಲ್ಲ. ಅಪ್ರತಿಮವಾದ ಆೞ್ವಾರ್ಗಳು ಆಂಡಾಳಿಗೆ ಎಣೆಯಿಲ್ಲವೆಂದರೆ ಬೇರಾರು ಎಣೆ? ಆದ್ದರಿಂದಲೇ ಆಕೆಯ ನಕ್ಷತ್ರ ಆಡಿ (ಆಷಾಡ) ಮಾಸದ ಪೂರ(ಪುಬ್ಬಾ) ನಕ್ಷತ್ರಕ್ಕೆ ಸರಿಸಮ ಯಾವುದೂ ಇಲ್ಲ.

ಪಾಸುರ ೨೪

ಆೞ್ವಾರುಗಳಲ್ಲಿ  ಆಂಡಾಳಿನ   ಶ್ರೇಷ್ಠತೆ ಆಚರಿಸಲು ಅವರ ಮನಸ್ಸಿಗೆ ಹೇಳುತ್ತಾರೆ. 

ಅಂಜು ಕುಡಿಕ್ಕು ಒರು ಸಂದದಿಯಾಯ್  ೞ್ವಾರ್ಗಳ್ 

ತಂ ಸೆಯಲೈ ವಿಂಜಿ ನಿಱ್ಕುಂ ತನ್ಮೆಯಲಾಯ್  – ಪಿಂಜಾಯ್ 

ೞುತ್ತಾಳೇ  ಆಂಡಾಳೈ ಪತ್ತಿಯುಡನ್ ನಾಳುಂ 

ೞುತ್ತಾಯ್ ಮನಮೇ ಮಗಿೞ್ನ್ದು

ಆೞ್ವಾರರ ಕುಲಕ್ಕೆ ಉತ್ತರಾಧಿಕಾರಿಯಾಗಿಯೇ  ಆಂಡಾಳ್ ಅವತರಿಸಿದಳು. ಅಂಜು ಎಂಬ ಪದವು ಇಲ್ಲಿ ಐದು ಎಂದರ್ಥವಾಗಿಯೂ, ಅಂಜುವಿಕೆ ಎಂದು ಭಾವಿಸಬಹುದು.ಪಂಚ ಪಾಂಡವರ ( ಐದು ಪಾಂಡವರು ) ಏಕೈಕ ಉತ್ತರಾಧಿಕಾರಿಯಾಗಿದ್ದ ಪರೀಕ್ಷಿತ್ ರಾಜನಂತೆ , ಹತ್ತು ಆೞ್ವಾರ್ಗಳಿಗೆ ಆಂಡಾಳ್ ಏಕೈಕ ವಾರಸ್ಸು. ಇದು ಮೊದಲ ಅರ್ಥ. ಎಂಪೆರುಮಾನರಿಗೆ ಹಾನಿ ಉಂಟಾಗವುದೆಂದು ಸದಾ  ಭೀತಿಯಲ್ಲಿರುವ ಆೞ್ವಾರರ ಕುಲಕ್ಕೆ ಆಕೆ ಏಕೈಕ ಉತ್ತರಾಧಿಕಾರಿ  ಎಂಬುದು ಮತ್ತೊಂದು ಅರ್ಥ. ಪೆರಿಯಾೞ್ವಾರರು ಪರಿಪೂರ್ಣರಾಗಿ ಮಂಗಳಶಾಸನ ಮಾಡಿದ್ದಾರೆ. ಮಿಕ್ಕ ಆೞ್ವಾರ್ಗಳು ಅವರ ನಿಷ್ಠೆಯಲ್ಲಿ ಪರಮಭಕ್ತಿ  (ಎಂಪೆರುಮಾನರನ್ನು ಅಡೆದರೆ ಮಾತ್ರ ಜೀವಿತವಾಗಿರುವುದು ) ಸ್ಥಿತಿಯಲ್ಲಿದ್ದರು.  ಪೆರಿಯಾೞ್ವಾರರಂತೆ , ಮಿಕ್ಕ ಆೞ್ವಾರರಂತೆ ತನ್ನ ಭಕ್ತಿಯಲ್ಲಿ  ಆಂಡಾಳ್ ಅಸಾಧಾರಣವಾಗಿ,  ಎಂಪೆರುಮಾನರಿಗೆ ಮಂಗಳಾಸಾಸನ ಮಾಡಿದಳು.  ಸಹಜವಾಗಿ ಗಿಡವು ಹೂವು ಅರಳಿಸಿ, ನಂತರ ಕಾಯಿ ಬಿಟ್ಟು , ಅದನಂತರ ಹಣ್ಣಾಗುವುದು ಎಂಬುದು   ಪಿಂಜಾಯ್  ೞುತ್ತಾಳ್  ಎಂಬ ಪದಕ್ಕೆ  ಅರ್ಥ . ಆಂಡಾಳ್ ತುಳಸಿ ಗಿಡದಂತೆ, ಭೂಮಿಯಿಂದ ಮೊಳಕೆಯಿಟ್ಟಾಗಲೇ ಸುಗಂಧ ಪರಿಮಳ ಬೀರುವುದಂತೆ ಆಕೆ ಪ್ರಾರಂಭದಿಂದಲೇ ಹಣ್ಣಾಗಿದ್ದಳು. ಅಂದರೆ ಹದಿ ಹರೆಯದ ವಯಸ್ಸಿನಿಂದಲೇ ಅವಳಿಗೆ ಎಂಪೆರುಮಾನರಲ್ಲಿ ಅಸಾಧಾರಣ ಭಕ್ತಿ ಇತ್ತು , ತಿರುಪ್ಪಾವೈ  ರಚಿಸಿದಾಗ ಆಕೆಗೆ ಐದು ವಯಸ್ಸು. ನಾಚಚ್ಚಿಯಾರ್ ತಿರುಮೊೞಿ ರಚಿಸುತ್ತಾ ಆಕೆ ಎಂಪೆರುಮಾನರನ್ನು ಅಡೆಯುತ್ತಾ ಸೊರಗಿ, ಕರುಗಿದಳು.  ಅಂತಹ ಆಂಡಾಳನ್ನು ಸದಾ ಆಚರಿಸು.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://divyaprabandham.koyil.org/index.php/2020/06/upadhesa-raththina-malai-23-24-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೧ ರಿಂದ ೨೨ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೨೧  

ಆೞ್ವಾರ್ಗಳು ಹತ್ತು ಜನ. ಆದರೆ ಹನ್ನೆರೆಡೆಂದೂ ಭಾವಿಸಲಾಗಿದೆ. ಎಂಪೆರುಮಾನರೊಡನೆ ಪೂರ್ಣರಾಗಿ ನಿರತವಾದ ಆೞ್ವಾರ್ಗಳು ಎಂದು ಭಾವಿಸಿದರೆ ಹತ್ತು ಎಣಿಕೆಗೆ ಬರುವುದು. ಈಗಾಗಲೇ ನೋಡಿದ ಪಾಸುರಗಳಲ್ಲಿ ಮಾಮುನಿಗಳು ಅವರ ಅವತಾರ ಮಾಸ ಹಾಗು ನಕ್ಷತ್ರವನ್ನು ದಯೆತೋರಿ ಹೇಳಿದ್ದಾರೆ. ಆಂಡಾಳ್  ಹಾಗು  ಮಧುರಕವಿ ಆೞ್ವಾರರು ಆಚಾರ್ಯ ಅಭಿಮಾನದಲ್ಲಿ ಆಸರೆಗೊಂಡವರು. ಎಂಪೆರುಮಾನರನ್ನು ಆಂಡಾಳ್  ವಿಟ್ಟುಚಿತ್ತರ್ ತಂಗಳ್ ದೇವರ್ , ಅಂದರೆ  ತನ್ನ ತಂದೆಯಾದ ವಿಷ್ಣುಚಿತ್ತರರ ದೇವರು ಎಂದು ಅನುಭವಿಸಿದಳು. ಮಧುರಕವಿ ಆೞ್ವಾರರೂ  ಹೇಳಿದ್ದು ತೇವು ಮಟ್ಟೃ ಅರಿಯೇನ್ ; ಅಂದರೆ ಅವರಿಗೆ ನಮ್ಮಾೞ್ವಾರರಲ್ಲದೆ  ಬೇರಾವ ದೇವರು ತಿಳಿಯದು. ಇವರಿಬ್ಬರನ್ನು ಸೇರಿದರೆ ಆೞ್ವಾರ್ಗಳು  ಹನ್ನೆರಡು ಜನ.  

ಇವರಿಬ್ಬರೊಡನೆ, ನಮ್ಮ ಗುರುಪರಂಪರೆಯ (ಆಚಾರ್ಯರ ಸಾಂಪ್ರದಾಯಿಕ ಪರಂಪರೆ ) ಪ್ರಮುಖ ಆಚಾರ್ಯರಾದ ,ಯತಿರಾಜ, ಮಾರನ್ ಅಡಿ ಪಣಿಂದು ಉಯ್ನ್ದವನ್ , ಎಂಬ ಹೆಸರಾಂತ ಎಂಪೆರುಮಾನಾರ್ , ನಮ್ಮಾೞ್ವಾರರ ದಿವ್ಯ ಪಾದಗಳನ್ನು ಅಡೆದು ಉನ್ನತಗೊಂಡವರು ಎಂದು  ಈ ಪಾಸುರದಲ್ಲಿ ಸೇರಿಸಿ ಮಾಮುನಿಗಳು ಸಂತೋಷದಿಂದ ಅನುಭವಿಸುವರು. ಎಂಪೆರುಮಾನಾರನ್ನು ನಮ್ಮಾೞ್ವಾರರ ದಿವ್ಯ ಪಾದಗಳೆಂದು “ಶ್ರೀರಾಮಾನುಜಂ “ ಎಂದು ಆಚರಿಸಲಾಗಿದೆ. ಈ ಮೂವರಲ್ಲಿ [ಆಂಡಾಳ್ , ಮಧುರಕವಿ ಆೞ್ವಾರ್ , ಎಂಪೆರುಮಾನಾರ್  ] ಮತ್ತೊಂದು ಹೊಂದಿಕೆ ಇದೆ ಆಂಡಾಳನ್ನು ಶ್ರೀ ಭೂಮಪಿರಾಟ್ಟಿಯ ಪುನರವತಾರವೆಂದು  ಆಚರಿಸಲಾಗಿದೆ ಮಧುರಕವಿ ಆೞ್ವಾರ್  ಪೆರಿಯ ತಿರುವಡಿಯ (ಗರುಡ) ಪುನರವತಾರವೆಂದು  ಆಚರಿಸಲಾಗಿದೆ  ಹಾಗು ಎಂಪೆರುಮಾನಾರ್  ಆದಿಶೇಷನ ಪುನರವತಾರವೆಂದು  ಆಚರಿಸಲಾಗಿದೆ. ಮಾಮುನಿಗಳು ಈ ಮೂವರು ಅವತರಿಸಿದ ದಿನಗಳನ್ನು ಕರುಣೆಯಿಂದ ಹೇಳುವರು 

ಆೞ್ವಾರ್  ತಿರುಮಗಳಾರ್ ಆಂಡಾಳ್ ಮದುರಕವಿ

 ಆೞ್ವಾರ್   ಯಾತಿರಾಸರಾಂ ಇವರ್ಗಳ್  – ವಾೞ್ವಾಗ 

ವಂದು ಉದಿತ್ತ ಮಾದಂಗಳ್ ನಾಳ್ಗಳ್ ತಮ್ಮಿನ್ ವಾಸಿಯೈಯುಂ 

ಇಂದ ಉಲಗೋರ್ಕ್ಕು ಉರೈಪ್ಪೋಂ ಯಾಂ 

ಆಂಡಾಳ್ ಪೆರಿಯಾೞ್ವಾರರ ದಿವ್ಯ ಪುತ್ರಿ , ಮಧುರಕವಿ ಆೞ್ವಾರ್  , ಯತಿಗಳ ಒಡೆಯನಾದ ಶ್ರೀ ರಾಮಾನುಜರು ಈ ಲೋಕ ಕಲ್ಯಾಣಕ್ಕಾಗಿ ಅವತರಿಸಿದ ಮಾಸ ಹಾಗು ನಕ್ಷತ್ರಗಳ ವೈಶಿಷ್ಟ್ಯತೆಯನ್ನು ಎಲ್ಲರಿಗೂ ಬಹಿರಂಗ ಪಡಿಸುತ್ತೇವೆ. 

ಪಾಸುರ ೨೨ 

ಆಂಡಾಳ್  ಅವರಿಗಾಗಿಯೇ ಈ ಲೋಕದಲ್ಲಿ ಅವತರಿಸಿದಳೆಂದು  ಮಾಮುನಿಗಳು ಕರುಣೆಯಿಂದ ವಿವರಿಸುವರು. 

ಇನ್ಱೋ  ತಿರುವಾಡಿಪ್ಪೂರಂ ಎಮಕ್ಕಾಗ 

ಅನ್ಱೋ ಇಂಗು ಆಂಡಾಳ್ ಅವದರಿತ್ತಾಳ್  – ಕುನ್ಱಾದ  

ವಾೞ್ವಾನ  ವೈಗುಂದ ವಾನ್ ಭೋಗಮ್  ತನ್ನೈ ಇಗೞ್ನ್ದು 

ಆೞ್ವಾರ್ ತಿರುಮಗಳಾರ್  ಆಯ್ 

ಇಂದು ಆಡಿ ಮಾಸದ ಪೂರ (ಆಷಾಡ ಮಾಸದ ಪುಬ್ಬಾ) ನಕ್ಷತ್ರವೆ?  ಅಪರಿಮಿತ ಭೋಗ , ಉಲ್ಲಾಸಭರಿತ ಶ್ರೀ ವೈಕುಂಠವನ್ನು ತ್ಯಜಿಸಿ , ಆಕೆ ಆಂಡಾಳ್ ನಾಚ್ಚಿಯಾರಾಗಿ, ಪೆರಿಯಾೞ್ವಾರರ ದಿವ್ಯ ಪುತ್ರಿಯಾಗಿ ನನ್ನನ್ನು ಉದ್ಧರಿಸಲು ಅವತರಿಸಿದಳು . ಒಬ್ಬ ತಾಯಿ ತನ್ನ ಕೂಸು ಬಾವಿಗೆ ಬಿದ್ದಾಗ ಮಗುವನ್ನು ರಕ್ಷಿಸಲು ಭಾವಿಗೆ ಹಾರಿದಂತೆ . ಶ್ರೀ ವರಾಹ ಪೆರುಮಾಳ್ ಭೂಮಿ ಪಿರಾಟ್ಟಿಗೆ ಹೇಳಿದಂತೆ “  ಜೀವಾತ್ಮಗಳು ನನ್ನನು ಸ್ತುತಿಸಿ ಹಾಡಿ , ವಿಚಾರ ಮಾಡಿ , ಶುಭ್ರವಾದ ಹೂಗಳಿಂದ ಅರ್ಚಿಸಿ ಸುಲಭವಾಗಿ ನನ್ನನ್ನು ಪಡೆಯಬಹುದು “ ಎಂದು ನಮಗೆ  ತೋರಿಸಲು ಈ ಭುವಿಯಲ್ಲಿ ಅವತರಿಸಿದಳು. ಅದ್ಭುತವಾದದ್ದಲ್ಲವೇ! ಎಂತಹ ಕಾರುಣ್ಯ !

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-21-22-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೧೯ ರಿಂದ ೨೦ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೧೯

ಮತ್ತೆಲ್ಲಾ ಆೞ್ವಾರ್ಗಳ ಅರುಳಿಚೆಯಲ್ (ದೈವೀಕ ಸ್ತೋತ್ರಗಳ ಸಂಗ್ರಹ ) ನಡುವೆ ತಿರುಪಲ್ಲಾಂಡಿನ(ಪೆರಿಯಾಳ್ವಾರರು ದಯಪಾಲಿಸಿ‌ ರಚಿಸಿದ ಕೃತಿ) ವೈಶಿಷ್ಟ್ಯತೆಯನ್ನು ಮಾಮುನಿಗಳು ಉದಾಹರಣೆಯೊಂದಿಗೆ ವಿವರಿಸಿದ್ದಾರೆ.

ಕೋದಿಲವಾಂ ಆೞ್ವಾರ್ಗಳ್  ಕೂಱು ಕಲೈಕ್ಕೆಲ್ಲಾಂ

ಆದಿ ತಿರುಪ್ಪಲ್ಲಾಂಡು ಆನದುವುಂ- ವೇದತ್ತುಕ್ಕು

ಓಂ ಎನ್ನುಂ ಅದು ಪೋಲ್ ಉಳ್ಳದುಕ್ಕು ಎಲ್ಲಾಂ

ಶುರುಕ್ಕಾಯ್ ತಾನ್ ಮಂಗಳಂ ಆದಲಾಲ್

ಆೞ್ವಾರ್ಗಳು  ಎಂಪೆರುಮಾನರನ್ನು ಪಡೆಯಲು ಇತರ ದಿಟ್ಟಗಳನ್ನು ಅಳವಡಿಸಿದ ದೋಷವಿರಲಿಲ್ಲ  ಹಾಗೂ ಶೀಘ್ರವಾಗಿ ಅವರನ್ನು ಪಡೆಯಲು

ಪ್ರಬಲವಾದ ಅಪೇಕ್ಷೆಯಿಲ್ಲದ ದೋಷವಿರಲಿಲ್ಲ. ಎಂಪೆರುಮಾನರ ವಿಷಯವಲ್ಲದೆ ಇತರ ವಿಷಯಗಳನ್ನು ವ್ಯಕ್ತ ಪಡಿಸುವ  ಲೋಪವಿಲ್ಲದ ದಿವ್ಯ ಸ್ತೋತ್ರಗಳನ್ನು ಆೞ್ವಾರ್ಗಳು  ದಯೆತೋರಿ ರಚಿಸಿದ್ದಾರೆ.ಈ ಎಲ್ಲ ಸ್ತೋತ್ರಗಳ ನಡುವೆ ಮಂಗಳಾಶಾಸನದ ಮೇಲೆ ಆಧಾರವಾದ ತಿರುಪಲ್ಲಾಂಡು ಕೇವಲ ಎಂಪೆರುಮಾನರ ಹಿತವನ್ನೇ ಉದ್ದೇಶಿಸುವುದರಿಂದ, ಪ್ರಣವಂ ವೇದಗಳ ಒಳ ಅರ್ಥದಂತೆ , ಆೞ್ವಾರ್ಗಳ  ಎಲ್ಲಾ ಸ್ತೋತ್ರಗಳಿಗಿಂತ ಇದು ಅಧಿಕ ಪ್ರಾಮುಖ್ಯತೆ ಪಡೆದುಕೊಂಡಿದೆ.

ಪಾಸುರ ೨೦

ಇನ್ನು ಮುಂದೆ ತಿರುಪಲ್ಲಾಂಡು, ಪೆರಿಯಾೞ್ವಾರರ ಪ್ರಬಂದದ ವಿಶೇಷತೆ ವಿವರಿಸುತ್ತಾರೆ.

ಉನ್ಡೋ ತಿರುಪಲ್ಲಾಂಡುಕ್ಕು ಒಪ್ಪದೋರ್ ಕಲೈದಾನ್

ಉನ್ಡೋ ಪೆರಿಯಾೞ್ವಾರ್ಕ್ಕು ಒಪ್ಪೊರುವರ್ -ತಣ್ ತಮಿಳ್ ನೂಲ್

ಸೈದು ಅರುಳುಂ ಆೞ್ವಾರ್ಗಳ್  ತಮ್ಮಿಲ್ ಅವರ್ ಸೈ ಕಲೈಯಿಲ್

ಪೈದಲ್ ನೆಂಜೇ ನೀ ಉಣರ್ನ್ಂದು ಪಾರ್.

ಓ ಹುಡುಕು ಮನಸೇ! ಎಂಪೆರುಮಾನರ ನಿರ್ಭಂದವಿಲ್ಲದ ಕರುಣೆಯಿಂದ ರಚಿಸಿದ ಆೞ್ವಾರರನ್ನು ಹಾಗೂ ಅವರ ದಿವ್ಯ ಸ್ತೋತ್ರಗಳನ್ನು ಪರಿಶೀಲಿಸು. ತಿರುಪಲ್ಲಾಂಡಂತಹ ದೈವೀಕ ಸ್ತೋತ್ರದಂತೆ ಬೇರಾವುದಾದರೂ ಉಂಟೇ?ಇಲ್ಲ.  ತಿರುಪಲ್ಲಾಂಡು ಎಂಪೆರುಮಾನರ ಪರಮ ಹಿತವನ್ನು  ನಿರ್ದೇಶಿಸುತ್ತದೆ. ಇತರ ಆೞ್ವಾರುಗಳ ಸ್ತೋತ್ರಗಳು ಎಂಪೆರುಮಾನರ ದಿವ್ಯತೆ ಅನುಭವಿಸುವುದನ್ನು ನಿರ್ದೇಶಿಸುತ್ತದೆ. ಪೆರಿಯಾೞ್ವಾರರಿಗೆ ಸಾಟಿಯಾದ ಆೞ್ವಾರ್  ಯಾರಾದರು ಇರುವರೇ? ಇಲ್ಲ. ಪೆರಿಯಾೞ್ವಾರರು ವಿಜಯಗೀತೆ ಹಾಡಿ ಎಂಪೆರುಮಾನರ ಸೌಂದರ್ಯ ಇತ್ಯಾದಿಗಳನ್ನು  ಹೊಗಳುತ್ತಾ ಆಸರೆಯಾಗಿರುವರು, ಆದರೆ ಮತ್ತೆಲ್ಲ ಆೞ್ವಾರ್ಗಳು  ಎಂಪೆರುಮಾನರ ಕಲ್ಯಾಣ ಗುಣಗಳಲ್ಲಿ ಮಗ್ನರಾಗಿರುತ್ತಾರೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-19-20-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೧೬ ರಿಂದ ೧೮ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ


ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೧೬

ಪೆರಿಯಾೞ್ವಾರ್ ಇತರ ಆೞ್ವಾರರಿಗಿಂತ ಉನ್ನತರಾದವರೆಂದು ಅವರ ವೈಶಿಷ್ಟ್ಯವನ್ನು ಮಾಮುನಿಗಳು ಈ ಪಾಸುರದಿಂದ ಮುಂಬರುವ ಐದು ಪಾಸುರಗಳಲ್ಲಿ ತಿಳಿಸುವರು.

ಇನ್ಱೈ ಪೆರುಮೈ ಅಱಿಂದಿಲೈಯೋ ಏೞೈ ನೆಂಜೇ

ಇನ್ಱೈಕ್ಕು ಎನ್ ಏಱ್ಱಮ್ ಎನಿಲ್ ಉಱೈಕ್ಕೇನ್ -ನನ್ಱಿ ಪುನೈ

ಪಲ್ಲಾಂಡು ಪಾಡಿಯ ನಮ್ ಪಟ್ಟರ್ ಪಿರಾನ್ ವಂದು ಉದಿತ್ತ

ನಾಳ್ ಆನಿಯಿಲ್ ಸೋದಿ ನಾಳ್

 ಮಿಕ್ಕ ಆೞ್ವಾರರ ದಿವ್ಯ ನಕ್ಷತ್ರಗಳಲ್ಲಿ ಅಕ್ಕರೆಯುಳ್ಳ ಓ ಮನಸೇ !ಜ್ಯೇಷ್ಟ ಮಾಸದ ಸ್ವಾತಿ ನಕ್ಷತ್ರದ ಖ್ಯಾತಿಯನ್ನು ತಿಳಿದಿರುವೆಯೇ?ಹೇಳುವೆ ಕೇಳು. ಈ ದಿನದಂದು ಪಟ್ಟರ್ ಪಿರಾನರು (ಪೆರಿಯಾೞ್ವಾರ್) ಮಂಗಳಾಶಾಸನದ( ಎಂಪೆರುಮಾನರಿಗೆ ಶುಭಕೋರುವುದು) ವಿಶೇಷ ಸಾರಾಂಶವುಳ್ಳ ತಿರುಪಲ್ಲಾಂಡು ಹಾಡಿ ದಯೆತೋರಿದವರು ಅವತರಿಸಿದ ದಿನ. ಆದ್ದರಿಂದ ಇದು ವಿಶೇಷ ದಿನ.

ಪಾಸುರ ೧೭

ಪೆರಿಯಾೞ್ವಾರರು ಅವತರಿಸಿದ ದಿನ ಆನಿ ಸ್ವಾತಿ (ಜ್ಯೇಷ್ಟ ಮಾಸದ ಸ್ವಾತಿ ನಕ್ಷತ್ರ )ಪದಗಳನ್ನು ಕೇಳಿ ಮನ ಉರುಗದ ಬಲ್ಲವರಿಗೆ ಸಮನಾದವರು ಯಾರೂ ಇಲ್ಲ ಎಂದು ಅವರ ಮನಸ್ಸಿಗೆ ಹೇಳುವರು.

ಮಾನಿಲತ್ತಿಲ್ ಮುನ್ ನಂ ಪೆರಿಯಾೞ್ವಾರ್  ವಂದುದಿತ್ತ

ಆನಿ ತನ್ನಿಲ್ ಸೋದಿ ಎನ್ಱಾಲ್ ಆದರಿಕ್ಕುಂ ಞಾನಿಯರ್ಕ್ಕು

ಒಪ್ಪೋರಿಲೈ ಇವ್ವುಲಗು ತನ್ನಿಲ್ ಎನ್ಱು ನೆಂಜೇ

ಎಪ್ಪೋದುಂ ಶಿಂದಿತ್ತಿರು.

ಓ ಮನಸೇ , ಹಲವಾರು ವರ್ಷಗಳ ಹಿಂದೆ ಈ ಲೋಕದಲ್ಲಿ ಪೆರಿಯಾೞ್ವಾರ್  ಅವತರಿಸಿದ ಈ ದಿನ ಆಣಿ ( ಜ್ಯೇಷ್ಟ ಮಾಸ) ಸ್ವಾತಿ ಎಂದು ಕೇಳಿದೊಡನೆ ಮನ ಕರಗುವ ಮಹನೀಯರಿಗೆ ಸಮನಾದವರಿಲ್ಲವೆಂದು ಸದಾ ಚಿಂತಿಸುತ್ತಿರು.

ಪಾಸುರ ೧೮

ಮಿಕ್ಕ ಆೞ್ವಾರ್ಗಳಿಗೂ  ಈ ಆೞ್ವಾರ್ ಎಂಪೆರುಮಾನರಿಗೆ ಮಂಗಳಾಶಾಸನ ಮಾಡಿದ ರೀತಿಯಲ್ಲಿರುವ ಭಾರೀ  ವ್ಯತ್ಯಾಸದಿಂದ ಇವರಿಗೆ  ಪೆರಿಯಾೞ್ವಾರ್ (ಮಹನೀಯ ಅಳ್ವಾರ್) ಎಂಬ ದಿವ್ಯ ನಾಮ ಕರೆಯಲಾಗಿದೆ ಎಂದು ಮಾಮುನಿಗಳು ವರ್ಣಿಸುವರು.

ಮಂಗಳಾಶಾಸನತ್ತಿಲ್ ಮಱ್ಱುಳ್ಳ  ಆೞ್ವಾರ್ಗಳ್

ತಂಗಳ್ ಆರ್ವತ್ತು ಅಳವು ದಾನ್ ಅನ್ಱಿ -ಪೊಂಗುಂ

 ಪರಿವಾಲೇ ವಿಲ್ಲಿಪುತ್ತೂರ್ ಪ ಟ್ಟರ್ ಪಿರಾನ್ ಪೆಱ್ಱಾನ್

ಪೆರಿಯಾೞ್ವಾರ್ ಎನ್ನುಂ ಪೆಯರ್

ಎಂಪೆರುಮಾನರಿಗೆ ಮಂಗಳಾಶಾಸನ ಮಾಡಲು ಇತರ ಆೞ್ವಾರರಿಗಿಂತ ಹೆಚ್ಚು ತವಕವಿದ್ದರಿಂದ ಮತ್ತು  ಎಂಪೆರುಮಾನರ ಮೇಲಿರುವ ಪರಮ ವಾತ್ಸಲ್ಯದಿಂದ , ಶ್ರೀವಿಲ್ಲಿಪುತ್ತೂರಿನಲ್ಲಿ ಅವತರಿಸಿದ ವಿಷ್ಣುಚಿತ್ತರಿಗೆ ಪೆರಿಯಾೞ್ವಾರ್  ಎಂಬ ಬಿರುದು ವ್ಯಾಪಕವಾಗಿದೆ. ಮಂಗಳಾಶಾಸನವೆಂಬುದು ಇತರರಿಗೆ ಶುಭಕೋರುವುದು.

ಹಿರಿಯರು ಕಿರಿಯರಿಗಾಗಿ ಮಂಗಳಾಶಾಸನ ನೀಡುವುದು ಸಹಜ. ಇಲ್ಲೊಂದು ಪ್ರಶ್ನೆ :  ಕಿರಿಯರು ಹಿರಿಯರಿಗೆ ಮಂಗಳಾಶಾಸನ ಮಾಡಬಹುದೆ?ನಮ್ಮ ಪೂರ್ವಾಚಾರ್ಯರಾದ ಪಿಳ್ಳೈ ಲೋಕಾಚಾರ್ಯರು ಈ ವಿಚಾರವನ್ನು ಅವರ ಕೃತಿ ಶ್ರೀ ವಚನಭೂಷಣದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಎಂಪೆರುಮಾನರು ಎಲ್ಲದ್ದಕ್ಕಿಂತಲೂ ಅತಿ ಉನ್ನತವಾದವರು. ಆತ್ಮವು ಅತ್ಯಂತ ಸೂಕ್ಷ್ಮವಾದದ್ದು. ಹಾಗಾಗಿ ಆತ್ಮಗಳು ಎಂಪೆರುಮಾನರಿಗೆ ಮಂಗಳಾಶಾಸನ ಮಾಡುವುದು ಸರಿಯೇ ಎಂದು ಅವರು ಪ್ರಶ್ನಿಸಿ ಮತ್ತು ‌“ಮಂಗಳಾಶಾಸನ ಮಾಡುವುದು ನಮ್ಮ ಮೂಲಭೂತ ಪ್ರಕೃತಿ  ಸ್ವಭಾವ “ ಎಂದು ಉತ್ತರಿಸಿದ್ದಾರೆ. ವಿವೇಕ ಜ್ಞಾನದ ದೃಷ್ಟಿಕೋಣದಿಂದ ಎಂಪೆರುಮಾನರು ಉನ್ನತವಾದವರು. ಆದರೆ ಮಮತೆ ವಾತ್ಸಲ್ಯದ ದೃಷ್ಟಿಕೋಣದಲ್ಲಿ , ಎಂಪೆರುಮಾನರಿಗೆ ಹಾನಿಯಾಗುವುದೆಂಬ ಭೀತಿಯು ಎಂಪೆರುಮಾನರಿಗೆ  ಭಕ್ತನ ಪರಮ ವಾತ್ಸಲ್ಯದ ಸ್ವರೂಪವಾಗಿರುತ್ತದೆ. ಈ ವಿಷಯವನ್ನು ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಪೆರಿಯಾೞ್ವಾರರು ತಿಳಿಸಿದ್ದಾರೆ.ಇದರಿಂದಲೇ ಇತರ ಆೞ್ವಾರರಿಗಿಂತ ಭಿನ್ನವಾಗಿದ್ದು ಇವರಿಗೆ ಪೆರಿಯಾೞ್ವಾರ್  ಎಂಬ ದಿವ್ಯ ನಾಮ ಪಡೆದರು.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://divyaprabandham.koyil.org/index.php/2020/06/upadhesa-raththina-malai-16-18-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೧೪ ರಿಂದ ೧೫ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೧೪

  ವೈಶಾಖ ಮಾಸದ ವಿಶಾಖಾ ನಕ್ಷತ್ರದಂದು ಅವತರಿಸಿದ  , ವೇದಗಳ ಅರ್ಥಗಳನ್ನು ಸರಳ ತಮಿಳಿನಲ್ಲಿ ತಿಳಿಸಿದವರು,  ಮಿಕ್ಕ ಆೞ್ವಾರರು ಇವರ ಬಾಹುಗಳಂತಿರುವ ನಮ್ಮಾೞ್ವಾರರು ಈ ಸುದಿನದಂದು   ಅವತರಿಸಿದರೆಂದು ಮಾಮುನಿಗಳು ಆಚರಿಸುವರು .

ಏರಾರ್ ವೈಗಾಸಿ ವಿಸಾಗತ್ತಿನ್ ಏಱ್ಱತ್ತೈ

ಪಾರೋರ್ ಅಱಿಯ ಪಗರ್ಗಿನ್ರೇನ್ -ಸೀರಾರುಂ

ವೇದಂ ತಮಿಳ್ ಸೈದ ಮೈಯ್ಯನ್ ಎೞಿಲ್ ಕುರುಗೈ

ನಾದನ್ ಅವದರಿತ್ತ ನಾಳ್

ಲೋಕದ ಜನರು ಚೆನ್ನಾಗಿ ತಿಳಿಯಲು, ವಿಶೇಷವಾದ ವೈಶಾಖ ಮಾಸದ ವಿಶಾಖಾ ನಕ್ಷತ್ರದ ಖ್ಯಾತಿಯನ್ನು ಹೇಳುವೆನು.ಈ ದಿನದಂದು ಸತ್ಯವಾದವರು, ವೇದಗಳ ವಿಶೇಷ ಅರ್ಥಗಳನ್ನು ಸುಂದರ ತಮಿಳಿನಲ್ಲಿ ಸೂಕ್ತವಾಗಿ ರಚಿಸಿದ ನಮ್ಮಾೞ್ವಾರರ ಅವತರಿಸಿದ ದಿನ. ಸತ್ಯವಾದವರೆಂದರೆ ಅಸ್ತಿತ್ವವೊಂದನ್ನು ಅದು ಇರುವ ಹಾಗೆ ಪ್ರಾಮಾಣಿಕತೆಯಿಂದ ಹೇಳುವುದು.ವೇದಗಳ ವೈಶಿಷ್ಟ್ಯತೆಯೆಂದರೆ ಅಪೌರುಷೇಯತ್ವಂ( ಮನುಷ್ಯನಿಂದ ಬರೆಯದಿರುವಂತ) ಹೊಂದಿರುವುದು , ಸ್ವತಪ್ರಮಾಣತ್ವಂ( ಸ್ವತಃ ಆಧಾರವಾಗಿ, ಬೇರಾವುದೇ ಆಧಾರಗಳ ಅಗತ್ಯವಿಲ್ಲದ) . ವೇದಗಳ ಮತ್ತೊಂದು ವೈಶಿಷ್ಟ್ಯತೆಯೆಂದರೆ ಅವು ಕೇವಲ ಶ್ರೀ ಮನ್ನಾರಾಯಣನ ಸ್ವರೂಪ (ಮೂಲ ಪ್ರಕೃತಿ ),ರೂಪ ( ದೈವೀಕ ಸ್ಥಿತಿ),ಗುಣಗಳ(ಶುಭಲಕ್ಷಣ ) ಬಗ್ಗೆ ಹೇಳುವುದು.ನಾವೆಲ್ಲರು ಸ್ಪಷ್ಟ ವಾಗಿ ಅರ್ಥಮಾಡಿ ಕೊಳ್ಳಲು, ತಮಿಳಿನಲ್ಲಿ ಅರ್ಥಗಳನ್ನು ರಚಿಸುವುದೆಂದರೆ ಅವರು ದಯೆತೋರಿ ವೇದ ವೇದಾಂತಗಳ (ಉಪನಿಷತ್ತುಗಳು) ಒಳ ಅರ್ಥಗಳನ್ನು ಅವರ ನಾಲ್ಕು ರಚನೆಗಳಾದ

ತಿರುವೃತ್ತಂ (ರಿಗ್ ವೇದ), ತಿರುವಾಸಿರಿಯಂ(ಯಜುರ್ ವೇದ), ಪೆರಿಯ ತಿರುವಂದಾದಿ (ಅಥರ್ವಣ ವೇದ) ಮತ್ತು ತಿರುವಾಯ್ಮೊೞಿ (ಸಾಮ ವೇದ) ರಚಿಸುವುದು.

ಪಾಸುರ ೧೫

ಮಾಮುನಿಗಳು, ಆೞ್ವಾರರ ವೈಶಿಷ್ಟ್ಯತೆ, ಅವರು ಅವತರಿಸಿದ ದಿನ, ಅವರು ಕೃತಿಗಳನ್ನು ರಚಿಸಿದ ಸ್ಥಳ, ತಿರುವಾಯ್ಮೊೞಿ ಇವೆಲ್ಲವನ್ನು ಸಂತೋಷದಿಂದ ಅನುಭವಿಸುವುದನ್ನು ವಿವರಿಸುವರು.

ಉಣ್ಡೋ ವೈಗಾಸಿ ವಿಸಾಗತ್ತುಕ್ಕು ಒಪ್ಪು ಒರುನಾಳ್

ಉಣ್ಡೋ ಶಡಗೋಪ್ಪರ್ಕ್ಕು ಒಪ್ಪು ಒರುವರ್-ಉಣ್ಡೋ

ತಿರುವಾಯ್ಮೊೞಿಕ್ಕು ಒಪ್ಪು ತೆನ್ ಕುರುಗೈಕ್ಕು ಉಣ್ಡೋ

ಒರು ಪಾರ್ ತನಿಲ್ ಒಕ್ಕುಂ ಊರ್

ವೈಶಾಖ ಮಾಸದ ವಿಶಾಖಾ ನಕ್ಷತ್ರದಂದು ಅವತರಿಸಿದ, ಸರ್ವೇಶ್ವರ ಶ್ರೀಮನ್ನಾರಾಯಣನನ್ನು ಹಾಗು ಅವರ ಗುಣಗಳನ್ನು  ಸ್ತುತಿಸಿ ಅವು ವಿಶೇಷತೆ ನೀಡಿದ ನಮ್ಮಾಱ್ವಾರರು ಅವತರಿಸಿದ ದಿನಕ್ಕೆ ಬೇರಾವ ದಿನವೂ ಸರಿಸಮನಾಗುವುದೇ?(ಇಲ್ಲ) ನಮ್ಮಾೞ್ವಾರ್ ಎಂಬ ಶಠಗೋಪರ ವೈಶಿಷ್ಟ್ಯಕ್ಕೆ ಎಣೆಯಾದರು ಯಾರಿರುವರು?( ಸರ್ವೇಶ್ವರನು, ನಿತ್ಯರು, ಮುಕ್ತರು ಮತ್ತು ಈ ಜಗತ್ತಿನಲ್ಲಿರುವರು ಯಾರೂ ಇಲ್ಲ). ವೇದಾರ್ಥಗಳನ್ನು ಉತ್ಕೃಷ್ಟವಾಗಿ ವಿವರಿಸುವ ಪ್ರಬಂದವು ಯಾವುದಾದರೂ ಇದೆಯೇ?(ಇಲ್ಲ)

ನಮಗೆ ಅವರನ್ನು ಕೃಪೆ ಕೊಟ್ಟ ತಿರುಕ್ಕುರುಗೂರಂಥಹ ಸ್ಥಳಕ್ಕೆ ಎಣೆ ಬೇರಾವುದಾದರೂ ಇದೆಯೇ?( ಈ ಸ್ಥಳವು ಆದಿನಾಥ ಪೆರುಮಾಳ್ ಹಾಗು ನಮ್ಮಾೞ್ವಾರ್ ಇಬ್ಬರಿಗೂ ಸಮನಾದ ಕೀರ್ತಿ ಕೊಡುವುದು. ಈ ದೈವೀಕ  ಸ್ಥಳದಲ್ಲಿ ಅರ್ಚಾವತಾರದಲ್ಲಿರುವ (ವಿಗ್ರಹ ರೂಪ)ಎಂಪೆರುಮಾನರ ಶ್ರೇಷ್ಠತೆ ಉಜ್ವಲವಾಗಿರುವುದು) ಈ ಸ್ಥಳದಲ್ಲೆ ನಮ್ಮಾೞ್ವಾರರ ಅನುಗ್ರಹದಿಂದ , ಅವರ ಅವತಾರದ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಎಂಪೆರುಮಾನಾರ್ ಅವರ ದೈವೀಕ ವಿಗ್ರಹವು ಅವತರಿಸಿತು. ಎಂಪೆರುಮಾನಾರರ ಪುನರವತಾರವಾದ ಮಣವಾಳ ಮಾಮುನಿಗಳು ಅವತರಿಸಿದ ಪುಣ್ಯ ಕ್ಷೇತ್ರವಿದು.). ಎಂಪೆರುಮಾನ್, ಆೞ್ವಾರ್, ಆಚಾರ್ಯರ ವೈಶಿಷ್ಟ್ಯತೆ ಹೊಂದಿದ ಕಾರಣ ಇದು ಮೂರರಷ್ಟು ಕೊಂಡಾಡಲಾಗಿದೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-14-15-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ – ೧೨ ರಿಂದ ೧೩ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

>> ಹಿಂದಿನ ಶೀರ್ಷಿಕೆ

ಪಾಸುರ ೧೨

ಪುಷ್ಯ ಮಾಸದ (ತೈ ಮಾಸ) ಮಖಾ ನಕ್ಷತ್ರದಲ್ಲಿ ಅವತರಿಸಿದ ತಿರುಮೞಿಸೈ ಆೞ್ವಾರರ  ಖ್ಯಾತಿಯನ್ನು ಈ ಲೋಕದ ಜನರು ತಿಳಿಯಲಿ ಎಂದು ದಯೆತೋರಿ ವಿವರಿಸುವರು.

ತೈಯ್ಯಿಲ್ ಮಗಂ ಇನ್ಱು ತಾರಣಿಯೀರ್ ಏಱಂ ಇಂದ

ತೈಯ್ಯಿಲ್ ಮಗತುಕ್ಕು ಚ್ಚಾಟ್ರುಗಿನ್ಱೇನ್-ತುಯ್ಯ ಮದಿ

ಪೆಟ್ರ  ಮೞಿಸೈಪಿರಾನ್ ಪಿಱಂದ ನಾಳ್ ಎನ್ಱು

ನಟ್ರವರ್ಗಳ್ ಕೊಂಡಾಡುಂ ನಾಳ್

ಓ ಲೋಕದ ಜನಗಳೇ! ಪುಷ್ಯ ಮಾಸದ (ತೈ ಮಾಸ) ಮಖಾ ನಕ್ಷತ್ರವು ಅತಿ ಉನ್ನತ್ತವಾದದ್ದು.ಅದರ ವೈಶಿಷ್ಟ್ಯತೆಯನ್ನು ವಿವರಿಸುವೆ, ಕೇಳಿ.

ದೈವ ಙಾನ ಪಡೆದ ತಿರುಮೞಿಸೈ ಆೞ್ವಾರರು ಈ ದಿನದಂದು ಅವತರಿಸಿದರಿಂದ ಅಪಾರ ತಪಸ್ಸುಳ್ಳವರು ಈ ದಿನವನ್ನು ಕೊಂಡಾಡುವರು.

ನಿರ್ಮಲ ಙಾನವೆಂದರೆ ಆೞ್ವಾರರು ಪಡೆದ ದೋಷವಿಲ್ಲದ ಙಾನ ಹಾಗು ಭಕ್ತಿ ಮತ್ತು ಅವರು ಇತರ ದೇವತೆಗಳೊಡನೆ ತೊಡಗುವುದಿಲ್ಲ . ಆೞ್ವಾರಿಗೆ ತಿರುಕ್ಕುಡಂದೈ ಆರಾವಮುದನ್ ಎಂಪೆರುಮಾನರ ಬಳಿ ಇದ್ದ ನಿಕಟ ಸಂಬಂಧದಿಂದ ಇವರನ್ನು ತಿರುಮழிಸೈಪಿರಾನ್ ಎಂದು ಕರೆಯುವರು. (ಪಿರಾನ್ ಎಂಬ ಪದವು ಸಾಮಾನ್ಯವಾಗಿ ಎಂಪೆರುಮಾನರನ್ನು ಸೂಚಿಸುವುದು) ಹಾಗು ಆರಾಮುದನ್ ಎಂಬುವುದು ಆರಾವಮುದ ಆೞ್ವಾರ್ ಎಂದು ಕರೆಯುವರು. ಕಣಿಕಣ್ಣನ್ , ಪೆರುಂಬುಲಿಯೂರ್ ಅಡಿಗಳ್,ಎಂಪೆರುಮಾನಾರ್ ಮುಂತಾದವರು ಆಚಾರ್ಯ ವಿಚಾರಗಳಲ್ಲಿ ದೃಢವಾದ ತಪಸ್ಸುಳ್ಳವರು ಮತ್ತು ಶರಣಾಗತಿಯ ತಪಸ್ಸಿನಲ್ಲಿರುವವರನ್ನು ಮಹಾತಪಸ್ವಿ ಎನ್ನುವರು.

ಪಾಸುರ ೧೩

ಅದನಂತರ ಮಾಘ ಮಾಸದ ಪುನರ್ವಸು ನಕ್ಷತ್ರದಂದು ಅವತರಿಸಿದ ಕುಲಶೇಖರ ಆೞ್ವಾರರ ಕೀರ್ತಿ ಎಲ್ಲರಿಗೂ ಹೇಳುವರು.

ಮಾಸಿ ಪುನರ್ಪೂಸಂ ಕಾಣ್ಮಿನ್ ಇನ್ಱು ಮಣ್ಣುಲಗೀರ್

ತೇಸು ಇದ್ದಿವಸುತ್ತುಕ್ಕು ಏದೆನ್ನಿಲ್ -ಪೇಸುಗಿನ್ಱೇನ್

ಕೊಲ್ಲಿ ನಗರ್ ಕೋನ್ ಕುಲಶೇಖರನ್ ಪಿಱಪ್ಪಾಲ್

ನಲ್ಲವರ್ಗಳ್ ಕೊಂಡಾಡುಂ ನಾಳ್

ಓ ಲೋಕದ ಜನಗಳೇ! ಮಾಘ ಮಾಸದ ಪುನರ್ವಸು ನಕ್ಷತ್ರದ ಶ್ರೇಷ್ಠತೆಯನ್ನು ನಾನು ಹೇಳುವಂತೆ ಕೇಳಿ.ಚೇರದೇಶದ ಕೊಲ್ಲಿ ನಗರದ ನಾಯಕರಾದ ಕುಲಶೇಖರ ಪೆರುಮಾಳ್ ಅವತರಿಸಿದರಿಂದ ಈ ದಿನವನ್ನು  ಉತ್ತಮರು ಕೊಂಡಾಡುವರು.ಉತ್ತಮರೆಂದರೆ ವೈಷ್ಣವ ತತ್ವ ಮಾರ್ಗವನ್ನು ಅನುಸರಿಸುವವರು, ಪರಮ ಶ್ರೇಷ್ಠ ವಾದವರು, ಉನ್ನತ ಙಾನ ಭಕ್ತಿ, ವೈರಾಗ್ಯವುಳ್ಳವರು . ಹೇಗೆಂದರೆ, ನಮ್ಮ ಪೂರ್ವಾಚಾರ್ಯರಂತೆ ಶುಭಲಕ್ಷಣಗಳೊಂದಿಗೆ ಪರಿಪೂರ್ಣತೆ ಹೊಂದಿರುವರು.

ಅಡಿಯೇನ್ ರಂಗನಾಯಕಿ ರಾಮಾನುಜದಾಸಿ

ಮೂಲ: http://divyaprabandham.koyil.org/index.php/2020/06/upadhesa-raththina-malai-12-13-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಉಪದೇಶ ರತ್ನಮಾಲೈ – ಸರಳ ವಿವರಣೆ ೧೦ ರಿಂದ ೧೧ ನೇ ಪಾಸುರಗಳು

Published by:

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೧೦
ರೋಹಿಣಿ ನಕ್ಷತ್ರವು ಕೃತ್ತಿಕಾ ನಕ್ಷತ್ರದ ನಂತರ ಬರುವುದರಿಂದ , ಮಾಮುನಿಗಳು ಈ ಲೋಕದ ಜನರಿಗೆ ಕಾರ್ತಿಕ ಮಾಸದ ರೋಹಿಣಿ ನಕ್ಷತ್ರದಂದು ಅವತರಿಸಿದ ತಿರುಪಪ್ಪಾನಾೞ್ವಾರರ ಶ್ರೇಷ್ಠತೆಯನ್ನು ತಿಳಿಸುತ್ತಾರೆ.ರೋಹಿಣಿ ನಕ್ಷತ್ರದಲ್ಲಿ ಎಂಪೆರುಮಾನರು ಕಣ್ಣನಾಗಿ (ಕೃಷ್ಣ) ಅವತಾರಿಸಿದ್ದಾರೆ, ಆೞ್ವಾರರಲ್ಲಿ ತಿರುಪಪ್ಪಾನಾೞ್ವಾರರಾಗಿ,ಆಚಾರ್ಯರಲ್ಲಿ ತಿರುಕೋಟ್ಟಿಯೂರ್ ನಂಬಿಯಾಗಿ ಅವತರಿಸಿರುತ್ತಾರೆ.ಆದ್ದರಿಂದ ಈ ನಕ್ಷತ್ರಕ್ಕೆ ಮೂರರಷ್ಟು ಮಹತ್ವ ನೀಡಿ ಕಂಡಾಡುವರು.

ಕಾರ್ತಿಗೈಯಿಲ್ ರೋಹಿಣಿ ನಾಳ್ ಕಾಣ್ಮಿನ್ ಇನ್ಱು ಕಾಸಿಯಿನೀರ್
ವಾಯ್ತ್ತ ಪುಗೞ್ ಪಾಣರ್ ವಂದುದಿಪ್ಪಾಲ್ ಆತ್ತಿಯರ್ಗಳ್
ಅಂಬುಡನೆ ತಾನ್ ಅಮಲನಾದಿಪಿರಾನ್ ಕಱ್ಱದಱ್ಪಿನ್
ನಂಗುಡನೇ ಕೊಂಡಾಡುಂ ನಾಳ್

ಓ ಲೋಕದ ಮಕ್ಕಳೇ ! ನೋಡಿ ಇಂದು ಕಾರ್ತಿಕ ಮಾಸದ ರೋಹಿಣಿ ನಕ್ಷತ್ರದ ಮಹಾದಿನ . ಈ ದಿನದಂದು ಉನ್ನತವಾದ ಅದ್ಭುತವಾದ ತಿರುಪಪ್ಪಾನಾೞ್ವಾರರು ಅವತರಿಸಿದ ದಿನ. ವೇದಗಳನ್ನು ನಂಬಿ ಆದರಿಸುವವರು , ಈ ಆೞ್ವಾರರು ಅನುಗ್ರಹಿಸಿದ ಅಮಲನಾದಿಪಿರಾನ್ ಎಂಬ ಪ್ರಬಂದವನ್ನು ಕಲಿತು ,ಈ ಹತ್ತು ಪಾಸುರಗಳು ವೇದಗಳ ಸಾರಾಂಶ,ಸದಾ ಎಂಪೆರುಮಾನರನ್ನು ನೋಡುವುದು ಎಂದು ಸುಂದರವಾಗಿ ವಿವರಿಸುವುದೆಂದು ತಿಳಿದುಕೊಂಡಿರುತ್ತಾರೆ . ಅಂಥವರು ಈ ದಿನವನ್ನು ವಿಶೇಷವಾಗಿ ಕೊಂಡಾಡುವರು .

ಪಾಸುರ ೧೧
ಲೋಕದ ಜನರಿಗೆ ಮಾರ್ಗಶಿರ ಮಾಸದಲ್ಲಿ ಅವತರಿಸಿದ ವೇದಾರ್ಥಗಳನ್ನು ಅರಿತ ತೊಂಡರಡಿಪ್ಪೊಡಿ ಆೞ್ವಾರರ ಶ್ರೇಷ್ಟತೆಯನ್ನು ವೇದ ನಿಪುಣರು ಕೊಂಡಾಡುವುದರ ಬಗ್ಗೆ ವಿವರಿಸುತ್ತಾರೆ .
ಹನ್ನೆರಡು ಮಾಸಗಳಲ್ಲಿ ತಾನು ಮಾರ್ಗಶಿರ ಎಂದು ಎಂಪೆರುಮಾನರು ಶ್ರೀ ಗೀತೆ (ಭಗವದ್ಗೀತೆ)ಯಲ್ಲಿ ಹೇಳಿರುವುದೇ ಈ ಮಾಸದ ವೈಶಿಷ್ಟಯತೆ . ಅದಲ್ಲದೆ , ಈ ಮಾಸದಲ್ಲಲ್ಲವೇ ಆಂಡಾಳ್ ದಯೆತೋರಿ ತಿರುಪ್ಪಾವೈ ಹಾಡಿದ್ದು. ಮಾರ್ಗಶಿರ ಮಾಸದ ಜ್ಯೇಷ್ಟಾ ನಕ್ಷತ್ರಕ್ಕೆ ಮತ್ತೊಂದು ಖ್ಯಾತಿ ಇದೆ. ಅದು ಜಗದ್ಗುರು ಎಂಪೆರುಮಾನಾರ್ ಅವರ ಆಚಾರ್ಯರಾದ ಪೆರಿಯ ನಂಬಿಗಳು ಅವತರಿಸಿದ ನಕ್ಷತ್ರ.

ಮನ್ನಿಯಸೀರ್ ಮಾರ್ಗೞಿಯಿಲ್ ಕೇಟ್ಟೈ ಇನ್ಱು ಮಾನಿಲತ್ತೀರ್
ಎನ್ನಿದನುಕ್ಕು ಏಱಮ್ ಎನಿಲ್ ಉರೈಕ್ಕೇನ್ – ತುನ್ನು ಪುಗೞ್
ಮಾಮಱೈಯೊನ್ ತೊಂಡರಡಿಪ್ಪೊಡಿ ಆೞ್ವಾರ್ ಪಿಱಪ್ಪಾಲ್
ನಾನ್ಮಱೈಯೋರ್ ಕೊಂಡಾಡುಮ್ ನಾಳ್

ಓ ಜಗತ್ತಿನ ಮಕ್ಕಳೇ ! ವೈಶ್ಣವ ಮಾಸ ಎಂದು ಭಾವಿಸುವ ಮಾರ್ಗಶಿರ ಮಾಸದ ಜ್ಯೇಷ್ಟಾ ನಕ್ಷತ್ರದ ಮಹತ್ವವನ್ನು ಹೇಳುತ್ತೇನೆ . ಈ ದಿನದಂದು ಎಂಪೆರುಮಾನರ ಶಿಷ್ಯರ ದಾಸ್ಯ ಸೇವೆಯಲ್ಲಿದ್ದು , ಕೈಂಕರ್ಯವೇ ವೇದಗಳ ಪ್ರಮುಖ ಅರ್ಥವೆಂದು ತಿಳಿದ ತೊಂಡರಡಿಪ್ಪೊಡಿ ಆೞ್ವಾರ್ ಅವತರಿಸಿದ ದಿನವೆಂದು ಎಂಪೆರುಮಾನರಂತಹ ವೇದ ನಿಪುಣರು ಕೊಂಡಾಡುವ ದಿನ .

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/upadhesa-raththina-malai-10-11-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org