ಉಪದೇಶ ರತ್ನಮಾಲೈ – ಸರಳ ವಿವರಣೆ – ೫೩ ಮತ್ತು ೫೪ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೫೩

ಈ ಪಾಸುರದಿಂದ ತೊಡಗಿ, ಅವರು ಆೞ್ವಾರ್ಗಳ ಅರುಳಿಚೆಯಲ್ ಸಾರಾಂಶವಾದ, ಲೋಕಾಚಾರ್ಯರು ಕೃಪೆ ತೋರಿ ಬರೆದ ಶ್ರೀವಚನ ಭೂಷಣದ ವೈಭವವನ್ನು ತಿಳಿಸುತ್ತಾರೆ.  ಈ ಪಾಸುರದಲ್ಲಿ ಮಾಮುನಿಗಳು ಲೋಕಾಚಾರ್ಯರ ತೋರಿದ ಕರುಣೆಯನ್ನು ವಿವರಿಸುತ್ತಾರೆ.

ಅನ್ನ ಪುಗೞ್ ಮುಡುಂಬೈ ಅನ್ನಲ್ ಉಲಗಾಸಿರಿಯನ್

ಇನ್ನರುಳಾಲ್ ಸೈದ ಕಲೈ ಯಾವೈಯಿಲುಂ -ಉನ್ನಿಲ್

ತಿಗೞ್ ವಚನ ಭೂಡಣತ್ತಿನ್ ಸೀರ್ಮೈ ಒನ್ಱುಕ್ಕಿಲ್ಲೈ

ಪುಗೞಲ ಇವ್ವಾರ್ತ್ತೈ ಮೈ ಇಪ್ಪೋದು

ಹಿಂದಿನ ಪಾಸುರದಲ್ಲಿ ವಿವರಿಸದಂತೆ, ಅಂತಹ ಶ್ರೇಷ್ಠತೆಯನ್ನು ಹೊಂದಿದ್ದ ನಮ್ಮೆಲ್ಲರಿಗೂ ಭಗವಂತನಾದ ಮುಡುಂಬೈ ಕುಲದ ಮುಖ್ಯಸ್ಥನಾಗಿದ್ದ ಪಿಳ್ಳೈ ಲೋಕಾಚಾರ್ಯರ್, ತಮ್ಮ ಅತ್ಯಂತ ಸಹಾನುಭೂತಿಯಿಂದ , ಮುಂದೆ ಬಂದ ಆಚಾರ್ಯರಿಂದ ಆಚಾರ್ಯ- ಶಿಷ್ಯ(ಶಿಕ್ಷಕ-ವಿದ್ಯಾರ್ಥಿ)ವಂಶಾವಳಿಯ ಮೂಲಕ ತಲುಪಿದ  ಅಂತರಂಗದ ಅರ್ಥಗಳನ್ನು  ರಹಸ್ಯ ಗ್ರಂಥಗಳಾಗಿ(ಗುಪ್ತ ಶಾಸ್ತ್ರಗಳು)ರಚಿಸಿ, ಜನರು ತಮ್ಮನ್ನು ಉನ್ನತಿಗೇರಿಸುವಂತೆ ಮಾರ್ಗ ತೋರಿದರು. ಅವರು ಕರುಣೆಯಿಂದ ರಚಿಸಿದ ಎಲ್ಲಾ ಗ್ರಂಥಗಳನ್ನು ವಿಶ್ಲೇಸಿದರೆ, ಶ್ರೀ ವಚನಭೂಷಣದ ಹಿರಿಮೆಗೆ ಸಮನಾದದ್ದು ಯಾವುದು ಇಲ್ಲ. ಇದು ಅವರ ಕೃತಿಗಳನ್ನು ಮೇಲ್ನೋಟಕ್ಕೆ ಹೊಗಳಲು ಹೇಳುವುದಿಲ್ಲ.ಈ ಗ್ರಂಥವು ಸತ್ಯವನ್ನು ಬಹಿರಂಗಪಡಿಸುವ ವೈಶಿಷ್ಟ್ಯತೆಯನ್ನು ಹೊಂದಿದೆ,ವೇದಾಂತಗಳು ( ಉಪನಿಷತ್ತುಗಳು ಅಥವಾ ವೇದಗಳ ಅಂತಿಮ ಭಾಗಗಳು ಸರ್ವೋಚ್ಚ ಜೀವಿಗಳ ಗುರುತನ್ನು ಹುಡುಕುವ ಮತ್ತು ಸ್ಥಾಪಿಸುವ) ಮತ್ತು ಆೞ್ವಾರ್ಗಳ ಅರುಳಿಚೆಯಲ್ಗಳ ಸಾರಾಂಶವಾದ ಆಚಾರ್ಯರ ಕರುಣೆಯ ವೈಶಿಷ್ಟ್ಯತೆಯನ್ನು ಹೇಳುತ್ತದೆ.

ಪಾಸುರ ೫೪

ಅಂತಹ ಶ್ರೇಷ್ಠವಾದ ಗ್ರಂಥವನ್ನು ಬರೆದ ಪಿಳ್ಳೈ ಲೋಕಾಚಾರ್ಯರೇ ಅದಕ್ಕೆ ಸೂಕ್ತವಾದ ಶೀರ್ಷಿಕೆಯನ್ನು ನೀಡಿದರು ಎಂದು ಮಾಮುನಿಗಳು ಹೇಳುತ್ತಾರೆ.

ಮುನ್ನಂ ಕುರವೋರ್ ಮೊೞಿಂದ ವಚನಂಗಳ್

ತನ್ನೈ ಮಿಗಕ್ ಕೊಂಡು ಕಱ್ಱೋರ್ ತಂ ಉಯಿರ್ಕು -ಮಿನ್ನಣಿಯಾಚ್

ಚೇರಚ್ ಚಮೈತ್ತವರೇ ಶೀರ್ ವಚನಬೂಡಣಂ ಎನ್ನುಂ

ಪೇರ್ ಇಕ್ಕಲೈಕ್ಕು ಇಟ್ಟಾರ್ ಪಿನ್

ಪೂರ್ವಾಚಾರ್ಯರು ನುಡಿದ ಸಂಪತ್ತಿನ ಸಹಾಯದಿಂದ, ಹಿರಿಯರಿಂದ ಶಾಸ್ತ್ರ ಸಂಪ್ರದಾಯಗಳ ಅರ್ಥಗಳನ್ನು ( ಸಾಂಪ್ರದಾಯಿಕ ಗ್ರಂಥಗಳು ಮತ್ತು ನಂಬಿಕೆಗಳು ) ಕಲಿತವರು ಸಂತೋಷದಿಂದ ಆಭರಣವಾಗಿ ಅಲಂಕರಿಸುವ, ಈ ಗ್ರಂಥವನ್ನು ರಚಿಸಿದರು.ಹೀಗೆ ಸಂಕಲಿಸಿ ಅವರು ಅದಕ್ಕೆ ಶ್ರೀ ವಚನ ಭೂಷಣಂ ಎಂಬ ದಿವ್ಯ ನಾಮ ಕೊಟ್ಟರು.ಹೇಗೆ ರತ್ನಗಳಿಂದ ( ಮಣಿಗಳು) ಮಾಡಿದ ಆಭರಣವನ್ನು ರತ್ನಭೂಷಣಂ ಎಂದು ಕರೆಯುವರೊ,ಹಾಗೆ ಈ ಗ್ರಂಥವು ಪೂರ್ವಾಚಾರ್ಯರ ದಿವ್ಯ ನುಡಿಗಳಿಂದ ರಚಿಸಿದರಿಂದ ಇದನ್ನು ಶ್ರೀವಚನಭೂಷಣಂ ಎಂದು ಕರೆಯಲಾಗಿದೆ. ಈ ದೇಹಕ್ಕೆ ಆಭರಣದಂತೆ ಅಲ್ಲದೆ ,ಇದು ಆತ್ಮಕ್ಕೆ ಆಭರಣವಾಗಿರುವುದು ಇದರ ವೈಶಿಷ್ಟ್ಯತೆ ಆಗಿರುವುದು.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/07/upadhesa-raththina-malai-53-54-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org   
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment