ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ಹದಿನಾಲ್ಕನೇ ತಿರುಮೊಳಿ – ಪಟ್ಟಿಮೇಯ್ಂದು
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ನಾಚ್ಚಿಯಾರ್ ತಿರುಮೊಳಿ << ಹದಿಮೂರನೇ ತಿರುಮೊಳಿ – ಕಣ್ಣನೆನ್ನುಮ್ ತಿರುಪ್ಪಾವೈಯಲ್ಲಿ, ಆಂಡಾಳ್ ಪ್ರಾಪ್ಯಂ (ಅಂತ್ಯ ಫಲ) ಮತ್ತು ಪ್ರಾಪಕಂ (ಅದನ್ನು ಸಾಧಿಸುವ ರೀತಿ) ಅನ್ನು ಸ್ಥಾಪಿಸಿದ್ದರು. ತಾನು ಅಂತಿಮ ಫಲವನ್ನು ಆಗಲೇ ಪಡೆಯದ ಕಾರಣ, ಅವಳು ಗೊಂದಲಕ್ಕೊಳಗಾದಳು ಮತ್ತು ನಾಚ್ಚಿಯಾರ್ ತಿರುಮೊಳಿಯಲ್ಲಿ, ಆರಂಭದಲ್ಲಿ ಕಾಮನ (ಪ್ರೀತಿಯ ದೇವತೆ) ಪಾದಗಳಿಗೆ ಬಿದ್ದಳು. ಅದರ ನಂತರ, ಅವಳು ಮುಂಜಾನೆ ಸ್ನಾನಕ್ಕೆ ಹೋದಳು (ಪನಿ ನೀರಾಟ್ಟಂ); ಅವಳ ಆಸೆ ಈಡೇರುತ್ತದೆಯೇ … Read more