ತಿರುವಾಯ್ಮೊೞಿ – ಸರಳ ವಿವರಣೆ – 7.4 – ಆೞಿಯೆೞ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 7.2 – ಕಙ್ಗುಲುಮ್

ಎಂಪೆರುಮಾನರ ಅಗಲಿಕೆಯಿಂದ ಅತೀವ ದುಃಖಗೊಂಡು ಎರಡು ಪದಿಗೆಗಳಲ್ಲಿ ಅತ್ಯಂತ ಯಾತನೆ, ಬೇಗುದಿಯಿಂದ ಆಳ್ವಾರರು ಹಾಡಿದ್ದರು. ಇದನ್ನು ನೋಡಿದ ಎಂಪೆರುಮಾನರು ಆಳ್ವಾರರನ್ನು ಸಮಾಧಾನ ಪಡಿಸಲು ತನ್ನ ಎಲ್ಲಾ ವಿಜಯದ ಚಿಹ್ನೆಗಳನ್ನು ಆಳ್ವಾರರಿಗೆ ತೋರಿಸಿದರು. ಅದನ್ನು ಆಳವಾಗಿ ಅನುಭವಿಸಿದ ಆಳ್ವಾರರು , ಎಲ್ಲರಿಗೂ ಆ ಅನುಭವ ಸಿಗುವಂತೆ ಕರುಣೆಯಿಂದ ಈ ಹತ್ತು ಪಾಸುರಗಳನ್ನು ‘ಆೞಿಯೆೞ’ ಎಂಬ ಪಾಸುರದಿಂದ ಆರಂಭಿಸುತ್ತಾರೆ.

ಪಾಸುರಮ್ 1:
ಆಳ್ವಾರರು ಎಂಪೆರುಮಾನರ ದಿವ್ಯ ಕ್ರಿಯೆಯಾದ ಮೂರು ಲೋಕಗಳನ್ನು ಅಳೆಯುವುದನ್ನು ಈ ಪಾಸುರದ ಮೂಲಕ ವಿವರಿಸಿ ಸಂತೋಷ ಹೊಂದುತ್ತಾರೆ.
ಆೞಿಯೆೞ ಚ್ಚಙ್ಗುಮ್ ವಿಲ್ಲುಮ್ ಎೞ, ತಿಶೈ
ವಾೞಿ ಎೞ ತ್ತಣ್ಡುಮ್ ವಾಳುಮ್ ಎೞ, ಅಣ್ಡಮ್
ಮೋೞೈಯೆೞ ಮುಡಿ ಪಾದಮ್ ಎೞ, ಅಪ್ಪನ್
ಊೞಿಯೆೞ ಉಲಗಮ್ ಕೊಣ್ಡವಾಱೇ॥

ದಿವ್ಯ ಚಕ್ರವು ದಿವ್ಯ ಶಂಖುವಿನೊಂದಿಗೆ , ದಿವ್ಯ ಬಿಲ್ಲು, ದಿವ್ಯ ಗದೆ, ದಿವ್ಯ ಕತ್ತಿಗಳೊಂದಿಗೆ ಮೇಲೆದ್ದು ಬರುವಂತೆ ಕಾಣಿಸುತ್ತಿದೆ. ಮಂಗಳಾಶಾಸನದ ಗದ್ದಲವು ಎಲ್ಲಾ ದಿಕ್ಕಿನಲ್ಲಿರುವ ಜನಗಳಿಂದ ಕೇಳಿ ಬರುತ್ತಿದೆ. ದಿವ್ಯ ಕಿರೀಟವು ಮತ್ತು ದಿವ ಪಾದಗಳು ಎರಡೂ ಒಟ್ಟಿಗೆ ಮೇಲೆದ್ದು ಬಂದು, ಅಂಡಾಕಾರದ ಈ ವಿಶ್ವವನ್ನೇ ಮೇಲ್ಭಾಗದಲ್ಲಿ ಒಡೆದು ಏರುವ ಹಾಗಿದೆ. ನೀರಿನಿಂದ ಗುಳ್ಳೆಗಳು ಏರುತ್ತಿವೆ. ಈ ರೀತಿಯಿಂದ ಸರ್ವೇಶ್ವರನು ಎಲ್ಲಾ ಲೋಕಗಳಿಗೂ ನಾಯಕನಾದವನು ಅವುಗಳನ್ನು ಅಳೆದು ಸ್ವೀಕರಿಸಿ, ಆಶ್ಚರ್‍ಯ ಪಡಿಸಿದನು. ಕಾಲಗಳ ವ್ಯತ್ಯಾಸವನ್ನು ತಿಳಿಯಪಡೆಸಿದನು.

ಪಾಸುರಮ್ 2:
ಆಳ್ವಾರರು ಎಂಪೆರುಮಾನರ ಸಮುದ್ರ ಮಥನದ ಕ್ರಿಯೆಯನ್ನು ಆನಂದಿಸುತ್ತಾರೆ.
ಆಱು ಮಲೈಕ್ಕೆದಿರ್ನ್ದು ಓಡುಮ್ ಒಲಿ, ಅರ
ಊಱು ಶುಲಾಯ್ ಮಲೈ ತೇಯ್‍ಕ್ಕುಮ್ ಒಲಿ, ಕಡಲ್
ಮಾಱು ಶುೞನ್ ಅೞೈಕ್ಕಿನ್‍ಱ ಒಲಿ, ಅಪ್ಪನ್
ಶಾಱುಪಡ ಅಮುದಮ್ ಕೊಣ್ಡ ನಾನ್‍ಱೇ॥

ಶ್ರೇಷ್ಠ ಪೋಷಕನಾದ ಸರ್ವೇಶ್ವರನು , ದೇವತೆಗಳಿಗೆ ಅಮೃತವನ್ನು ದೊರಕಿಸಿ ಕೊಟ್ಟಾಗ, ಈ ರೀತಿಯ ಶಬ್ದಗಳು ಕೇಳಿಸಿದವು. ಅ) ನದಿಗಳು ಪರ್ವತದ ವಿರುದ್ಧ ದಿಕ್ಕಿನಲ್ಲಿ ಮೇಲೆ ಹತ್ತುವ ಶಬ್ದ. ಆ) ಮಂದರ ಪರ್ವತದ ಸುತ್ತಲೂ ಸುತ್ತಿಕೊಂಡಿರುವ ವಾಸುಕಿ ಸರ್ಪದ ದೇಹವು ಉಜ್ಜುವ ಶಬ್ದ. ಇ) ಸಮುದ್ರವು ಸುರುಳಿಯಾಗಿ ಸುಳಿ ಏರ್ಪಟ್ಟು ಕರೆಯುವ ಶಬ್ದ.

ಪಾಸುರಮ್ 3:
ಆಳ್ವಾರರು ಎಂಪೆರುಮಾನರ ಮಹಾವರಾಹ (ದೊಡ್ಡ ಹಂದಿ) ಅವತಾರವೆತ್ತಿದ್ದನ್ನು ಮೆಲುಕು ಹಾಕುತ್ತಾರೆ.
ನಾನ್‍ಱಿಲ ಏೞ್ ಮಣ್ಣುಮ್ ತಾನತ್ತವೇ, ಪಿನ್ನುಮ್
ನಾನ್‍ಱಿಲ ಏೞ್ ಮಲೈ ತಾನತ್ತವೇ, ಪಿನ್ನುಮ್
ನಾನ್‍ಱಿಲ ಏೞ್‍ಕಡಲ್ ತಾನತ್ತವೇ, ಅಪ್ಪನ್
ಊನ್‍ಱಿ ಇಡನ್ದು ಎಯಿತ್ತಿಲ್ ಕೊಣ್ಡ ನಾಳೇ ॥

ಈ ಪೃಥ್ವಿಯು ಪ್ರಳಯದ ಕಾಲದಲ್ಲಿ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಹೋದಾಗ , ಶ್ರೇಷ್ಠ ಪೋಷಕನಾದ ಎಂಪೆರುಮಾನರು , ಅದನ್ನು ತನ್ನ ಕೋರೆಹಲ್ಲುಗಳಿಂದ ಅಗೆದು ತೆಗೆದು ರಕ್ಷಿಸಿ, ಅದನ್ನು ವಿಶ್ವದಲ್ಲಿರುವ ತನ್ನ ಕಕ್ಷೆಯಲ್ಲಿ ಮತ್ತೆ ದೂಡುತ್ತಾನೆ. ಬೇರೆ ಬೇರೆ ನೆಲದ ಪ್ರದೇಶಗಳು ಏಳು ರೀತಿಯ ದ್ವೀಪಗಳಾಗಿ, ತಮ್ಮ ತಮ್ಮ ಮೂಲ ಜಾಗಕ್ಕೆ ಜಾರದಂತೆ ಸ್ಥಾಪಿತವಾದವು. ಏಳು ಮುಖ್ಯ ಪರ್ವತಗಳು ತಮ್ಮ ಮೂಲ ಪ್ರದೇಶದಲ್ಲೇ ಅಲ್ಲಾಡದೇ ಬೇರು ಬಿಟ್ಟವು. ಮತ್ತೆ ಮುಂದೆ ಏಳು ಸಮುದ್ರಗಳು ತಮ್ಮ ಮೂಲ ಸ್ಥಾನದಲ್ಲಿಯೇ ಸಮುದ್ರತೀರಗಳನ್ನು ಉಲ್ಲಂಘಿಸದೇ ಸ್ಥಾಪಿತವಾದವು.

ಪಾಸುರಮ್ 4:
ಆಳ್ವಾರರು ಕರುಣೆಯಿಂದ ಮಹಾ ಪ್ರಳಯದ(ಸಂಪೂರ್ಣ ಮುಳುಗಿದ) ಕಾಲದಲ್ಲಿ ಎಂಪೆರುಮಾನರು ಹೇಗೆ ರಕ್ಷಿಸಿದರು ಎಂದು ವಿವರಿಸಿದ್ದಾರೆ. “ಮಧ್ಯಂತರ ಪ್ರಳಯವನ್ನು ಪುರಾಣದ ಪ್ರಕಾರ ಹೇಗೆ ಮಾರ್ಕಂಡೇಯನು ‘ಹೊರಗಿನಿಂದ ಮತ್ತು ಎಂಪೆರುಮಾನರ ದಿವ್ಯ ಹೊಟ್ಟೆಯ ಒಳಗಿನಿಂದ’ ಕಂಡನೋ ಅದನ್ನು ಆಳ್ವಾರರು ಕರುಣೆಯಿಂದ ಹೇಳಿದ್ದಾರೆ” ಎಂದು ಕೆಲವು ಆಚಾರ್‍ಯರು ಕರುಣೆಯಿಂದ ಹೇಳಿದ್ದಾರೆ.
ನಾಳುಮ್ ಎೞ ನಿಲನೀರುಮ್ ಎೞ, ವಿಣ್ಣುಮ್
ಕೋಳುಮ್ ಎೞ ಎರಿಕಾಲುಮ್ ಎೞ, ಮಲೈ
ತಾಳುಮೆೞ ಚ್ಚುಡರ್ ತಾನುಮ್‍ ಎೞ, ಅಪ್ಪನ್
ಊಳಿ ಎೞ ಉಲಗಮ್ ಉಣ್ಡ ಊಣೇ ॥

ಎಂಪೆರುಮಾನರು ಅತ್ಯದ್ಭುತ ರೀತಿಯಲ್ಲಿ ಇಡೀ ವಿಶ್ವವನ್ನೇ ನುಂಗಿದರು. ‘ಅವರು ಅತ್ಯಂತ ಹಸಿವೆಯಿಂದ ನುಂಗಿದರು’ ಎಂದೂ ಹೇಳಿಕೆಯಿದೆ. ಇದರಿಂದ ಹಗಲು ಮತ್ತು ರಾತ್ರಿ, ನೆಲ ಮತ್ತು ನೀರಿನ ಪ್ರದೇಶ, ಆಕಾಶ ಮತ್ತು ಗ್ರಹಗಳು, ಪರ್ವತದ ಬುಡದ ಪ್ರದೇಶ ಮತ್ತು ಹೊಳೆಯುವ ನಕ್ಷತ್ರದ ನಡುವಿನ ಅಂತರವನ್ನು ತಮ್ಮ ಅಧೀನಕ್ಕೆ (ಹತೋಟಿಗೆ) ತೆಗೆದು ಕೊಂಡರು.

ಪಾಸುರಮ್ 5:
ಆಳ್ವಾರರು ಮಹಾಭಾರತದ ಯುದ್ಧವನ್ನು ಆನಂದಿಸುತ್ತಾರೆ. ಭೂಮಿಯ ಹೊರೆಯನ್ನು ಇಳಿಸಲು ಈ ಯುದ್ಧವು ನಡೆದಿದೆ ಎಂದು ಹೇಳಿದ್ದಾರೆ.
ಊಣುಡೈ ಮಲ್ಲರ್ ತದೈನ್ದ ಒಲಿ, ಮನ್ನರ್
ಆಣುಡೈ ಚ್ಚೇನೈ ನಡುಙ್ಗುಮ್ ಒಲಿ, ವಿಣ್ಣುಳ್
ಏಣುಡೈ ತ್ತೇವರ್ ವೆಳಿಪ್ಪಟ್ಟ ಒಲಿ, ಅಪ್ಪನ್
ಕಾಣುಡೈ ಪ್ಪಾರದಮ್ ಕೈಯಱೈಪೋೞ್‍ದೇ ॥

ಕೃಷ್ಣನು ತನ್ನ ಹಿಂಬಾಲಕರಿಗೆ (ಶರಣಾಗತರಿಗೆ) ಪಕ್ಷಪಾತವನ್ನು ಮಾಡಿ, ಅವರ ಜೊತೆಗೆ ಕೈಮಿಲಾಯಿಸಿ, ಅವರಿಗೆ ತನ್ನ ಬೆಂಬಲವನ್ನು ಕೊಟ್ಟು, ಅವರನ್ನು ಮಹಾಭಾರತದ ಯುದ್ಧ ಮಾಡಲು ಹುರಿದುಂಬಿಸಿದನು. ಆ ಯುದ್ಧದಲ್ಲಿ ಈ ರೀತಿಯ ಶಬ್ದಗಳು ಕೇಳಿ ಬಂದವು . ಅ) ಅಪ್ರತಿಮ ಮಲ್ಲಯುದ್ಧಗಾರರ ದೇಹದಲ್ಲಿರುವ ಶಕ್ತಿಯಿಂದ ಒಬ್ಬರನ್ನೊಬ್ಬರು ತಾಗಿ ಬೀಳುವ ಶಬ್ದ. ಆ) ಅನೇಕ ಶೂರ ಸಿಪಾಯಿಗಳನ್ನು ಹೊಂದಿರುವ ರಾಜರ ಸೇನೆಯು ಮಾಡುವ ಶಬ್ದ. ಇ) ಆಕಾಶದಲ್ಲಿ ಮುಖ್ಯ ದೇವತೆಗಳೆಲ್ಲಾ ಅವರವರ ಜಾಗದಲ್ಲಿ ನಿಂತು, ಕಾಣಿಸಿಕೊಂಡು ಸಂಭ್ರಮಾಚರಣೆಯ ಶಬ್ದ.

ಪಾಸುರಮ್ 6:
ಆಳ್ವಾರರು ಕರುಣೆಯಿಂದ ಹಿರಣ್ಯನ ವಧೆಯನ್ನು ವಿವರಿಸಿದ್ದಾರೆ. ಭಕ್ತನನ್ನು ಸಲಹುವ ಉದ್ದೇಶದಿಂದ ಹಿರಣ್ಯನನ್ನು ಕೊಲ್ಲಲಾಗಿದೆ ಎಂದು.
ಪೋೞ್‍ನ್ದು ಮೆಲಿನ್ದ ಪುನ್‍ಶೆಕ್ಕರಿಲ್ , ವಾನ್ ತಿಶೈ
ಶೂೞುಮ್ ಎೞುನ್ದು ಉದಿರಪ್ಪುನಲಾ, ಮಲೈ
ಕೀೞ್‍ನ್ದು ಪಿಳನ್ದ ಶಿಙ್ಗ ಮೊತ್ತದಾಲ್, ಅಪ್ಪನ್
ಆೞ್‍ತುಯರ್ ಶೆಯ್‍ದು ಅಶುರರೈ ಕ್ಕೊಲ್ಲುಮಾಱೇ ॥

ದಿನವು ಪೂರ್ಣಗೊಂಡಾಗ , ಎಂಪೆರುಮಾನರು ನರಸಿಂಹನಾಗಿ ಮೇಲೆದ್ದು, ಎಳೆಯ ಕೆಂಪಾಗಿರುವ ಆಕಾಶದಲ್ಲಿ , ಸಂಜೆಯ ವೇಳೆಯಲ್ಲಿ , ಆಕಾಶದ ಎಲ್ಲಾ ದಿಕ್ಕಿನಲ್ಲಿಯೂ ಕೆಂಪಾದ ರಕ್ತದ ಹೊಳೆಯನ್ನೇ ಹರಿಸಿ, ಹಿರಣ್ಯನೆಂಬ ರಾಕ್ಷಸನನ್ನು ಕೊಂದರು. ಒಂದು ದೊಡ್ಡ ಸಿಂಹವು ಮಹಾಪರ್ವತವನ್ನು ಒಡೆದಂತೆ , ರಾಕ್ಷಸನನ್ನು ಕೊಂದ ರೀತಿ ಇತ್ತು.

ಪಾಸುರಮ್ 7:
ಆಳ್ವಾರರು ರಾವಣನ ವಧೆಯನ್ನು ಆನಂದಿಸುತ್ತಾರೆ.
ಮಾಱು ನಿರೈತ್ತು ಇರೈಕ್ಕುಮ್ ಶರಙ್ಗಳ್ , ಇನ
ನೂಱುಪಿಣಮ್ ಮಲೈಪೋಲ್ ಪುರಳ, ಕಡಲ್
ಅಱು ಮಡುತ್ತುದಿರಪ್ಪುನಲಾ, ಅಪ್ಪನ್
ನೀಱುಪಡ ಇಲಙ್ಗೈ ಶೆತ್ತ ನೇರೇ॥

ಬಾಣಗಳ ಗುಂಪು ತಾಗಿದಾಗ ಮಹಾ ಶಬ್ದವನ್ನೇ ಮಾಡುತ್ತಿತ್ತು. ಅವುಗಳು ನೂರು, ಸಾವಿರಾರು ರಾಕ್ಷಸರ ಮೃತದೇಹಗಳನ್ನು ಬೆಟ್ಟಗಳು ಉರುಳುವಂತೆ, ಬೀಳುವಂತೆ ಮಾಡುತ್ತಿದ್ದವು. ಸಮುದ್ರವು ರಕ್ತದ ಹೊಳೆಯಿಂದ ಕೆಂಪಾಗುತ್ತಿತ್ತು. ಹೀಗೆ ಚಕ್ರವರ್ತಿ ತಿರುಮಗನಾದ ರಾಮನು , ತನ್ನ ಶರಣಾಗತರಿಗೆ ರಕ್ಷಣೆಯನ್ನು ಕೊಡುತ್ತಾ , ಲಂಕೆಯನ್ನು ನಶಿಸಿ, ಬೂದಿ ಮಾಡಲು, ಧರ್ಮಯುದ್ಧದಲ್ಲಿ ಹೋರಾಡಿದರು.

ಪಾಸುರಮ್ 8:
ಆಳ್ವಾರರು ಕೃಷ್ಣನು ಬಾಣನ ಮೇಲೆ ವಿಜಯ ಸಾಧಿಸಿದ್ದನ್ನು ಮೆಲುಕು ಹಾಕುತ್ತಾರೆ.
ನೇರ್ ಶರಿನ್ದಾನ್ ಕೊಡಿಕ್ಕೋೞಿಕೊಣ್ಡಾನ್ , ಪಿನ್ನುಮ್
ನೇರ್ ಶರಿನ್ದಾನ್ ಎರಿಯುಮ್ ಅನಲೋನ್, ಪಿನ್ನುಮ್
ನೇರ್ ಶರಿನ್ದಾನ್ ಮುಕ್ಕಣ್ ಮೂರ್ತ್ತಿ ಕಣ್ಡೀರ್ ,ಅಪ್ಪನ್
ನೇರ್ ಶರಿ ವಾಣನ್ ತಿಣ್ ತೋಳ್ ಕೊಣ್ಡವನ್‍ಱೇ ॥

ಆ ದಿನ ಕೃಷ್ಣನು ಅನಿರುದ್ಧನಿಗೆ ಸಹಾಯ ಮಾಡಲು , ಬಾಣನ ಮೇಲೆ ವಿಜಯ ಸಾಧಿಸಿದನು. ಬಾಣನ ಸಹಾಯಕ್ಕೆ ರುದ್ರರು, ಸುಬ್ರಹ್ಮಣ್ಯ ಮುಂತಾದವರು ಇದ್ದರು. ನವಿಲಿನ ಧ್ವಜವನ್ನು ಹೊಂದಿರುವ ಸುಬ್ರಹ್ಮಣ್ಯರು ಯುದ್ಧ ಮಾಡಲಾರದೆ ಬಿದ್ದರು. ಅಗ್ನಿಯು ತನ್ನ ಏರುತ್ತಿರುವ ಜ್ವಾಲೆಯ ಜೊತೆಗೇ ಕೃಷ್ಣನನ್ನು ತಡೆಯಲಾರದೇ ಬಿದ್ದನು, ತನ್ನ ಮೂರು ಕಣ್ಣುಗಳಿಂದ ಅತ್ಯಂತ ಶಕ್ತಿವಂತರಾದ ದೇವತೆಗಳಿಗೇ ಮುಖ್ಯನಾದ ರುದ್ರರು ಯುದ್ಧ ಭೂಮಿಯಿಂದ ಓಡಿಹೋದರು. ಈ ಕಥೆಗಳೆಲ್ಲಾ ಪ್ರಸಿದ್ಧವಾಗಿರುವುದಲ್ಲವೇ ?

ಪಾಸುರಮ್ 9:
ಆಳ್ವಾರರು ಭಗವಂತನು ಈ ವಿಶ್ವವನ್ನು ಸೃಷ್ಟಿಸಿದ್ದನ್ನು ಕರುಣೆಯಿಂದ ಹೇಳುತ್ತಾರೆ. (ವಿವರಿಸುತ್ತಾರೆ).
ಅನ್‍ಱು ಮಣ್ ನೀರ್ ಎರಿ ಕಾಲ್ ವಿಣ್ ಮಲೈ ಮುದಲ್
ಅನ್‍ಱು ಶುಡರಿರಣ್ಡು ಪಿಱವುಮ್ , ಪಿನ್ನುಮ್
ಅನ್‍ಱು ಮೞೈ ಉಯಿರ್ ತೇವುಮ್ ಮಟ್ರುಮ್, ಅಪ್ಪನ್
ಅನ್‍ಱು ಮುದಲ್ ಉಲಗಮ್ ಶೆಯ್‍ದದುಮೇ ॥

ಮೊದಲು ರಚನೆಯಲ್ಲಿ , ಶ್ರೇಷ್ಠ ಪೋಷಕನಾದ ಸರ್ವೇಶ್ವರನು ವಿಶ್ವವನ್ನು ರಚಿಸಿದನು. ಅವನು ಐದು ಮುಖ್ಯ ಪ್ರಾಣಗಳನ್ನು ಭೂಮಿಯಿಂದ ಮೊದಲುಗೊಂಡು , ಪರ್ವತಗಳನ್ನು ಮತ್ತು ಇತರೆ ಲೌಕಿಕ ವಸ್ತುಗಳನ್ನು ರೂಪಿಸಿದನು. ಅವನು ಚಂದ್ರ ಮತ್ತು ಸೂರ್‍ಯರನ್ನೂ, ಮತ್ತು ಇತರೆ ಹೊಳೆಯುವ ವಸ್ತುಗಳನ್ನೂ ರಚಿಸಿದನು. ಮತ್ತು ಮಳೆಯನ್ನು ಸೃಷ್ಟಿಸಿದನು. ಭೂಮಿಯಲ್ಲಿ ಮಳೆಯನ್ನು ಅವಲಂಬಿಸಿರುವ ಇತರೆ ಜೀವಿಗಳನ್ನು ಹುಟ್ಟಿಸಿದನು. ಮಳೆಯನ್ನು ನಿಯಂತ್ರಿಸಲು ದೇವತೆಗಳನ್ನು ಸೃಷ್ಟಿಸಿದನು.
 ಇದರ ಅರ್ಥ , ಆಳ್ವಾರರು ಪ್ರಳಯದ ನಂತರದ ಮೊದಲ ಸೃಷ್ಟಿಯನ್ನು ಈ ರೀತಿಯಾಗಿ ವರ್ಣಿಸಿದ್ದಾರೆ.

ಪಾಸುರಮ್ 10:
ಆಳ್ವಾರರು ಎಂಪೆರುಮಾನರ ಗೋವರ್ಧನ ಬೆಟ್ಟವನ್ನು ಎತ್ತಿದ ಕ್ರಿಯೆಯನ್ನೂ ಮತ್ತು ಹಸುಗಳನ್ನೂ, ದನಕಾಯುವವರನ್ನೂ ರಕ್ಷಿಸಿದ ಕ್ರಿಯೆಯನ್ನೂ ಆನಂದಿಸುತ್ತಾರೆ.
ಮೇಯ್ ನಿರೈ ಕೀೞ್ ಪುಗ ಮಾ ಪುರಳ , ಶುನೈ
ವಾಯ್ ನಿಱೈ ನೀರ್ ಪಿಳಿಱಿ ಚ್ಚೊರಿಯ, ಇನ
ಆನಿರೈ ಪಾಡಿ ಅಙ್ಗೇ ಒಡುಙ್ಗ , ಅಪ್ಪನ್
ತೀಮೞೈ ಕಾತ್ತು ಕ್ಕುನ್‍ಱಮ್ ಎಡುತ್ತಾನೇ ॥

ಕೃಷ್ಣನು ಅಪಾಯವನ್ನು ತಪ್ಪಿಸಲು , ಗೋವರ್ಧನ ಬೆಟ್ಟವನ್ನು ಎತ್ತಿ , ದುರಂತಕ್ಕೆ ಕಾರಣವಾಗುವಂತಹ ಮಳೆಯಿಂದ ರಕ್ಷಿಸಿ, ಹುಲ್ಲು ತಿನ್ನುವ ಹಸುಗಳಿಗೆ ಬೆಟ್ಟದ ಕೆಳಗೆ ಆಶ್ರಯವನ್ನು ಕೊಟ್ಟನು. ಬೆಟ್ಟದ ಮೇಲೆ ವಾಸಿಸುತ್ತಿದ್ದ ವನ್ಯಮೃಗಗಳು ಜಾರಿ ಬಿದ್ದರೆ ಅವುಗಳಿಗೆ ಪೆಟ್ಟಾಗದಂತೆ ನೀರಿನ ಮೇಲೆ ಬೀಳುವ ವ್ಯವಸ್ಥೆಯನ್ನೂ ಮಾಡಿದನು. ತಿರುವಾಯ್‍ಪ್ಪಾಡಿಯ ಹಸುಗಳಿಗೆ ಮತ್ತು ದನಕಾಯುವವರಿಗೆ ಈ ರೀತಿಯಾಗಿ ಆಶ್ರಯ ಕೊಟ್ಟು ರಕ್ಷಿಸಿದನು.

ಪಾಸುರಮ್ 11:
ಆಳ್ವಾರರು ಹೇಳುತ್ತಾರೆ “ ಯಾರು ಈ ಹತ್ತು ಪಾಸುರಗಳನ್ನು , ಎಂಪೆರುಮಾನರ ವಿಜಯ ಸಾಧಿಸಿದ ಅಮಿತವಾದ ಪಟ್ಟಿಯನ್ನು ಕಲಿಯುತ್ತಾರೋ, ಅವರಿಗೆ ವಿಜಯವನ್ನು ಈ ಪದಿಗೆಯು ನೀಡುತ್ತದೆ.
ಕುನ್‍ಱಮೆಡುತ್ತ ಪಿರಾನ್ ಅಡಿಯಾರೊಡುಮ್ ,
ಒನ್‍ಱಿನಿನ್‍ಱ ಶಡಗೋಪನ್ ಉರೈಶೆಯಲ್ ,
ನನ್‍ಱಿಪುನೈನ್ದ ಓರ್ ಆಯಿರತ್ತುಳ್ ಇವೈ,
ವೆನ್‍ಱಿತರುಮ್ ಪತ್ತುಮ್ ಮೇವಿ ಕ್ಕಱ್ಪಾರ್ಕ್ಕೇ ॥

ಆಳ್ವಾರರು ಗೋವರ್ಧನ ಬೆಟ್ಟವನ್ನು ಎತ್ತಿದ ಪರಮಪೋಷಕನಾದ ಕೃಷ್ಣನ , ವಿಶಿಷ್ಟವಾದ ಸೇವಕರುಗಳಾದ ಭಾಗವತರ ಅದೇ ಸ್ವರೂಪ (ಗುಣ) ಗಳನ್ನು ಹೊಂದಿ , ಅದೇ ಭಾಗವತರ ಜೊತಗೆ ಸಮಾಗಮವಾಗಿದ್ದರು. ಯಾರು ಈ ಪಾಸುರಗಳನ್ನು ಸರಿಯಾದ ಅರ್ಥದೊಂದಿಗೆ ಪಠಿಸಿ, ಇದನ್ನು ಕಲಿಯುತ್ತಾರೋ, ಅವರಿಗೆ ಈ ಪಾಸುಗಳಲ್ಲಿರುವಂತೆ ವಿಜಯ ಸ್ಥಾಪಿಸಿದ ಭಗವಂತನ ಹಾಗೇ , ಅವರಿಗೂ ಈ ಹತ್ತು ಪಾಸುರಗಳು . ಆಳ್ವಾರರ ಸಾವಿರ ಪಾಸುರದೊಂದಿಗೆ ವಿಜಯವನ್ನು ಪ್ರಾಪ್ತಿ ಮಾಡುತ್ತದೆ.
ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : https://divyaprabandham.koyil.org/index.php/2020/06/thiruvaimozhi-7-4-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org