ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ
ಮುನ್ನೈ ವಿನೈ ಅಗಲ ಮೂಂಗಿಱ್ ಕುಡಿ ಅಮುದನ್
ಪೊನ್ನಂ ಕಱಱ್ಕಮಲ ಪ್ಪೋದಿರಂಡುಂ – ಎಣ್ಣುಡೈಯ
ಶೆನ್ನಿಕ್ಕಣಿ ಆಗ ಚ್ಚೇರ್ತಿನೇನ್ ತೆನ್ಬುಲತ್ತಾರ್ಕ್ಕು
ಎನ್ನು ಕ್ಕಡವುಡೈಯೇನ್ ಯಾನ್
ಅನಾದಿ ಕಾಲದಿಂದ ಸಂಗ್ರಹಿಸಿದ ನನ್ನ ಪಾಪಗಳು ತೊಲಗಲಿ ಎಂದು ಬಂಗಾರದಂತಹ , ಅಪೇಕ್ಷಣೀಯ, ಮೂಂಗಿಱ್ ಕುಡಿಯಲ್ಲಿ ಜನಿಸಿದ ಅಮುಧನಾರ ದಿವ್ಯ ಪಾದಗಳನ್ನು ಆಭರಣದಂತೆ ನನ್ನ ತಲೆಯಮೇಲೆ ಧರಿಸುತ್ತೇನೆ.ಇದನಂತರ, ಯಮ (ಧರ್ಮ ದೇವತೆ) ಮತ್ತು ಅವನ ಧೂತರಿಗೆ ನನ್ನ ಜೊತೆ ಯಾವುದೇ ಸಂಬಂಧ ಇರುವುದಿಲ್ಲ.
ನಯಂದರು ಪೇರಿನ್ಬಂ ಎಲ್ಲಾಂ ಪೞುದಿನ್ಱಿ ನಣ್ಣಿನರ್ಪಾಲ್
ಶಯಂದರು ಕೀರ್ತಿ ಇರಾಮಾನುಶ ಮುನಿ ತಾಳಿನೈ ಮೇಲ್
ಉಯರ್ನ್ದ ಗುಣತ್ತು ತಿರುವರಂಗತ್ತು ಅಮುದು ಓಂಗುಂ
ಅನ್ಬಾಲ್
ಇಯಂಬುಮ್ ಕಲಿತ್ತುಱೈ ಅಂದಾದಿ ಓದ ಇಶೈ ನೆಂಜಮೇ
ಲೌಕಿಕ ವಿಷಯಗಳಿಂದ ಬರುವ ಎಲ್ಲಾ ಹಿರಿಯ ಸಂತೋಷಗಳು ಕೆಳಮಟ್ಟದಲ್ಲಿವೆ ಎಂದು ತಿಳಿದ ನಂತರ, ಅವನಿಗೆ ಶರಣಾಗುವವರಿಗೆ ಸಂಸಾರಂನಲ್ಲಿ ವಿಜಯಶಾಲಿಯಾಗುವ ಶಕ್ತಿಯನ್ನು ದಯಪಾಲಿಸುವವನು ಎಂಪೆರುಮಾನಾರ್. ಓ ಮನಸೇ ! ವಿಶೇಷ ಗುಣಗಳನ್ನು ಹೊಂದಿರುವ ತಿರುವರಂಗತ್ತು ಅಮುಧನಾರ್ ಅವರಿಂದ ರಾಮನುಜ ಮುನಿ (ಋಷಿ) ಅವರ ದೈವಿಕ ಪಾದಗಳ ಮೇಲೆ ಪೂರ್ಣ ವಾತ್ಸಲ್ಯದಿಂದ ಕರುಣೆಯಿಂದ ಸಂಯೋಜಿಸಲ್ಪಟ್ಟಿರುವ ಈ ಪ್ರಬಂಧವನ್ನು ಪಠಿಸಲು ಒಪ್ಪಿಕೋ . ಈ ಪ್ರಬಂಧಂ ಕಲಿತ್ತುರೈ ಅಂದಾದಿ (ತಮಿಳು ಕವಿತೆಯ ಒಂದು ರೂಪದಲ್ಲಿದೆ, ಇದರಲ್ಲಿ ಹಿಂದಿನ ಪಾಸುರಂನ ಕೊನೆಯ ಪದವು ಮುಂದಿನ ಪಾಸುರದ ಮೊದಲ ಪದವಾಗುತ್ತದೆ).
ಶೊಲ್ಲಿನ್ ತೊಗೈ ಕೊಂಡು ಉನದು ಅಡಿಪ್ಪೋದುಕ್ಕು ತೊಂಡು ಶೆಯ್ಯುಂ
ನಲ್ಲನ್ಬರ್ ಏತ್ತುಂ ಉನ್ ನಾಮಂ ಎಲ್ಲಾಂ ಎಂದನ್ ನಾವಿನುಳ್ಳೇ
ಅಲ್ಲುಂ ಪಗಲುಮ್ ಅಮರುಂ ಪಡಿ ನಲ್ಗು ಅಱು ಶಮಯಂ
ವೆಲ್ಲುಂ ಪರಮ ಇರಾಮಾನುಶ ಇದು ಎನ್ ವಿಣ್ಣಪ್ಪಮೇ
ನಿಮ್ಮ ಭಕ್ತರು ನಿರ್ದಿಷ್ಟ ಸಂಖ್ಯೆಯ ಪಾಸುರಮ್‌ಗಳನ್ನು ಪಠಿಸುತ್ತಾರೆ ಎಂದು ನಿರ್ಧರಿಸುವವರು ಮತ್ತು ನಿಮ್ಮ ದೈವಿಕ ಪಾದಗಳಿಗಾಗಿ ವಾಚಿಕ ಕೈಂಕರ್ಯಂ (ಮಾತಿನ ಮೂಲಕ ಸೇವೆ) ನಡೆಸಿ ಮತ್ತು ಅದರಿಂದ ಪ್ರಯೋಜನ ಪಡೆಯುವವರು. ಅವರು ನಿಮ್ಮ ಕಡೆಗೆ ತುಂಬಿರುವ ಪ್ರೀತಿಯಿಂದ ಪಠಿಸುವ ಎಲ್ಲಾ ದೈವಿಕ ಹೆಸರುಗಳು ನನ್ನ ನಾಲಿಗೆಯ ಮೇಲೆ ಉಳಿಯಲಿ , ಯಾವಾಗಲೂ, ಹಗಲು ಮತ್ತು ರಾತ್ರಿಗಳ ವ್ಯತ್ಯಾಸವಿಲ್ಲದೆ, ಎಂದು ನಿಮ್ಮ ಕರುಣೆಯನ್ನು ನೀವು ನನ್ನ ಮೇಲೆ ಅನುಗ್ರಹಿಸಬೇಕು. ವೇದಗಳಲ್ಲಿ ನಂಬಿಕೆಯಿಲ್ಲದವರು ಮತ್ತು ವೇದಗಳಿಗೆ ತಪ್ಪು ವ್ಯಾಖ್ಯಾನ ನೀಡುವವರು ಸೇರಿದಂತೆ ಆರು ಬಗೆಯ ತತ್ತ್ವಚಿಂತನೆಗಳನ್ನು ಅಭ್ಯಾಸ ಮಾಡುವ ಜನರ ಮೇಲೆ ಗೆದ್ದ ಓ ಮಹಾನ್ ರಾಮಾನುಜಾ! ಇದು ನಿಮಗೆ ನನ್ನ ಪ್ರಾರ್ಥನೆ.
ಮುಂದಿನ ಶೀರ್ಷಿಕೆಯಲ್ಲಿ ಈ ಪ್ರಬಂದದ ಮುಂದಿನ ಭಾಗವನ್ನು ಚರ್ಚಿಸೋಣ.
ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ: https://divyaprabandham.koyil.org/index.php/2020/04/iramanusa-nurrandhadhi-thaniyans-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org