ಉಪದೇಶ ರತ್ನಮಾಲೈ – ಸರಳ ವಿವರಣೆ – ೧೯ ರಿಂದ ೨೦ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೧೯

ಮತ್ತೆಲ್ಲಾ ಆೞ್ವಾರ್ಗಳ ಅರುಳಿಚೆಯಲ್ (ದೈವೀಕ ಸ್ತೋತ್ರಗಳ ಸಂಗ್ರಹ ) ನಡುವೆ ತಿರುಪಲ್ಲಾಂಡಿನ(ಪೆರಿಯಾಳ್ವಾರರು ದಯಪಾಲಿಸಿ‌ ರಚಿಸಿದ ಕೃತಿ) ವೈಶಿಷ್ಟ್ಯತೆಯನ್ನು ಮಾಮುನಿಗಳು ಉದಾಹರಣೆಯೊಂದಿಗೆ ವಿವರಿಸಿದ್ದಾರೆ.

ಕೋದಿಲವಾಂ ಆೞ್ವಾರ್ಗಳ್  ಕೂಱು ಕಲೈಕ್ಕೆಲ್ಲಾಂ

ಆದಿ ತಿರುಪ್ಪಲ್ಲಾಂಡು ಆನದುವುಂ- ವೇದತ್ತುಕ್ಕು

ಓಂ ಎನ್ನುಂ ಅದು ಪೋಲ್ ಉಳ್ಳದುಕ್ಕು ಎಲ್ಲಾಂ

ಶುರುಕ್ಕಾಯ್ ತಾನ್ ಮಂಗಳಂ ಆದಲಾಲ್

ಆೞ್ವಾರ್ಗಳು  ಎಂಪೆರುಮಾನರನ್ನು ಪಡೆಯಲು ಇತರ ದಿಟ್ಟಗಳನ್ನು ಅಳವಡಿಸಿದ ದೋಷವಿರಲಿಲ್ಲ  ಹಾಗೂ ಶೀಘ್ರವಾಗಿ ಅವರನ್ನು ಪಡೆಯಲು

ಪ್ರಬಲವಾದ ಅಪೇಕ್ಷೆಯಿಲ್ಲದ ದೋಷವಿರಲಿಲ್ಲ. ಎಂಪೆರುಮಾನರ ವಿಷಯವಲ್ಲದೆ ಇತರ ವಿಷಯಗಳನ್ನು ವ್ಯಕ್ತ ಪಡಿಸುವ  ಲೋಪವಿಲ್ಲದ ದಿವ್ಯ ಸ್ತೋತ್ರಗಳನ್ನು ಆೞ್ವಾರ್ಗಳು  ದಯೆತೋರಿ ರಚಿಸಿದ್ದಾರೆ.ಈ ಎಲ್ಲ ಸ್ತೋತ್ರಗಳ ನಡುವೆ ಮಂಗಳಾಶಾಸನದ ಮೇಲೆ ಆಧಾರವಾದ ತಿರುಪಲ್ಲಾಂಡು ಕೇವಲ ಎಂಪೆರುಮಾನರ ಹಿತವನ್ನೇ ಉದ್ದೇಶಿಸುವುದರಿಂದ, ಪ್ರಣವಂ ವೇದಗಳ ಒಳ ಅರ್ಥದಂತೆ , ಆೞ್ವಾರ್ಗಳ  ಎಲ್ಲಾ ಸ್ತೋತ್ರಗಳಿಗಿಂತ ಇದು ಅಧಿಕ ಪ್ರಾಮುಖ್ಯತೆ ಪಡೆದುಕೊಂಡಿದೆ.

ಪಾಸುರ ೨೦

ಇನ್ನು ಮುಂದೆ ತಿರುಪಲ್ಲಾಂಡು, ಪೆರಿಯಾೞ್ವಾರರ ಪ್ರಬಂದದ ವಿಶೇಷತೆ ವಿವರಿಸುತ್ತಾರೆ.

ಉನ್ಡೋ ತಿರುಪಲ್ಲಾಂಡುಕ್ಕು ಒಪ್ಪದೋರ್ ಕಲೈದಾನ್

ಉನ್ಡೋ ಪೆರಿಯಾೞ್ವಾರ್ಕ್ಕು ಒಪ್ಪೊರುವರ್ -ತಣ್ ತಮಿಳ್ ನೂಲ್

ಸೈದು ಅರುಳುಂ ಆೞ್ವಾರ್ಗಳ್  ತಮ್ಮಿಲ್ ಅವರ್ ಸೈ ಕಲೈಯಿಲ್

ಪೈದಲ್ ನೆಂಜೇ ನೀ ಉಣರ್ನ್ಂದು ಪಾರ್.

ಓ ಹುಡುಕು ಮನಸೇ! ಎಂಪೆರುಮಾನರ ನಿರ್ಭಂದವಿಲ್ಲದ ಕರುಣೆಯಿಂದ ರಚಿಸಿದ ಆೞ್ವಾರರನ್ನು ಹಾಗೂ ಅವರ ದಿವ್ಯ ಸ್ತೋತ್ರಗಳನ್ನು ಪರಿಶೀಲಿಸು. ತಿರುಪಲ್ಲಾಂಡಂತಹ ದೈವೀಕ ಸ್ತೋತ್ರದಂತೆ ಬೇರಾವುದಾದರೂ ಉಂಟೇ?ಇಲ್ಲ.  ತಿರುಪಲ್ಲಾಂಡು ಎಂಪೆರುಮಾನರ ಪರಮ ಹಿತವನ್ನು  ನಿರ್ದೇಶಿಸುತ್ತದೆ. ಇತರ ಆೞ್ವಾರುಗಳ ಸ್ತೋತ್ರಗಳು ಎಂಪೆರುಮಾನರ ದಿವ್ಯತೆ ಅನುಭವಿಸುವುದನ್ನು ನಿರ್ದೇಶಿಸುತ್ತದೆ. ಪೆರಿಯಾೞ್ವಾರರಿಗೆ ಸಾಟಿಯಾದ ಆೞ್ವಾರ್  ಯಾರಾದರು ಇರುವರೇ? ಇಲ್ಲ. ಪೆರಿಯಾೞ್ವಾರರು ವಿಜಯಗೀತೆ ಹಾಡಿ ಎಂಪೆರುಮಾನರ ಸೌಂದರ್ಯ ಇತ್ಯಾದಿಗಳನ್ನು  ಹೊಗಳುತ್ತಾ ಆಸರೆಯಾಗಿರುವರು, ಆದರೆ ಮತ್ತೆಲ್ಲ ಆೞ್ವಾರ್ಗಳು  ಎಂಪೆರುಮಾನರ ಕಲ್ಯಾಣ ಗುಣಗಳಲ್ಲಿ ಮಗ್ನರಾಗಿರುತ್ತಾರೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : https://divyaprabandham.koyil.org/index.php/2020/06/upadhesa-raththina-malai-19-20-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment