ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಮುದಲಾಯಿರಮ್
ಉಪದೇಶ ರತ್ತಿನಮಾಲೈಯ ೩೬ನೆ ಪಾಶುರದಲ್ಲಿ, ಮಣವಾಳ ಮಾಮುನಿಗಳ್ ಅವರು ಕಣ್ಣಿನುನ್ ಶಿರುತ್ತಾಂಬಿನ ಮಹತ್ವವನ್ನು ಬಹಿರಂಗಪಡಿಸ್ಸಿದ್ದಾರೆ.
“ವಾಯ್ತ ತಿರುಮಂ ತಿರತ್ತಿನ್ ಮದ್ಧಿಮಮಾಂ ಪದಂಪೋಲ್
ಶೇರ್ತ ಮಧುರಕವಿ ಶೈ ಕಲೆಯೈ ಆರ್ಥ ಪುಗಳ್
ಆರಿಯರ್ಗಳ್ ತಾಂಗಳ್ ಅರುಳಿಚ್ಚೆಯಲ್ ನಡುವೆ.
ಶೇರ್ವಿತ್ತಾರ್ ತಾರ್ಪರಿಯಮ್ ತೇರ್ನ್ದು.”
ಪದಗಳು ಮತ್ತು ಅರ್ಥಗಳಲ್ಲಿ ಸಂಪೋರ್ಣತೆ ಹೊಂದಿರುವ ‘ತಿರುಮಂತ್ರಂ’ ಎಂಬುವ ಅಷ್ಟಾಕ್ಷರದಲ್ಲಿ ಮಧ್ಯದಲ್ಲಿರುವ “ನಮಃ” ಶಬ್ದ ಹೊಂದಿರುವ ಅದೇ ಶ್ರೇಷ್ಠತೆಯನ್ನು ಮಧುರಕವಿ ಆಳ್ವಾರ್ ಅವರು ಅದ್ಭುತವಾಗಿ ರಚಿಸಿದ ಕಣ್ಣಿನುನ್ ಶಿರುತ್ತಾಂಬು ಹೊಂದಿದೆ. ಕಣ್ಣಿನುನ್ ಶಿರುತ್ತಾಂಬಿನಲ್ಲಿರುವ ಅರ್ಥಗಳನ್ನು ತಿಳಿದುಕೊಂಡ ನಮ್ಮ ಆಚಾರ್ಯರು ( ನಮ್ಮ ಸಂಪ್ರದಾಯದ ಉಪದೇಶಕರು) ಈ ಪ್ರಬಂಧವನ್ನು ಅರುಳಿಚ್ಚೈಯಲ್ಲೊಂದಿಗೆ ( ೪೦೦೦ ದಿವ್ಯ ಪ್ರಬಂಧವನ್ನು ಪಠಿಸುವುದನ್ನು ಅರುಳಿಚ್ಚೈಯಲ್ ಎನ್ನುವುದು. ) ಪಠಿಸುವುದಕ್ಕಾಗಿ ಸೇರಿಸಿದರು.
ಮಧುರಕವಿ ಆಳವಾರಿಗೆ, ನಮ್ಮಾಳ್ವಾರನ್ನು ಬಿಟ್ಟು ಬೇರೇನು ತಿಳಿದಿರಲಿಲ್ಲ.ಅಂತಹ ಮಧುರಕವಿ ಆಳವಾರಿನ ಶ್ರೇಷ್ಠವಾದ ರಚನೆಯೇ ಈ ಕಣ್ಣಿನುನ್ ಶಿರುತ್ತಾಂಬು. ಈ ಪ್ರಬಂಧ, ಆಚಾರ್ಯರು(ಗುರು, ಶಿಕ್ಷಕ) ನಮಗೆ ದೇವರು ಎನ್ನುವ ನಮ್ನ ಸಂಪ್ರದಾಯದ ಮುಖ್ಯವಾದ ತತ್ವವನ್ನು ಬಹಿರಂಗಪಡಿಸುತ್ತದೆ.
ನಮ್ಮಾಳ್ವಾರ್ ಅವರ ಶ್ರೇಷ್ಠತೆಯನ್ನು ತೋರಿಸುವ ಕಣ್ಣಿನುನ್ ಶಿರುತ್ತಾಂಬು, ನಮ್ಮ ಸಂಪ್ರದಾಯದಲ್ಲಿ ಅನನ್ಯ ಮಹತ್ವವನ್ನು ಪಡೆದಿದೆ. ಈ ಪ್ರಬಂಧದ ಸರಳ ವಿವರಣೆಯನ್ನು ನಮ್ಮ ಪೂರ್ವಾಚಾರ್ಯರ ವ್ಯಾಖ್ಯಾನಗಳ ಸಹಾಯದಿಂದ ಬರೆಯಲಾಗಿದೆ.
ತನಿಯನ್: (1)
ಅವಿದತ ವಿಷಯಾಂತರಃ ಶಠಾರೇರ್
ಉಪನಿಷತಾಮ್ ಉಪಗಾನಮಾತ್ರ ಭೋಗಃ
ಅಪ ಚ ಗುಣವಶಾತ್ತ ದೇಕ ಶೇಷೀ
ಮಧುರಕವಿ ಹೃದಯೇ ಮಮಾವಿರಸ್ತು
ನಮ್ಮಾಳ್ವಾರನ್ನು ತನ್ನ ಆಚಾರ್ಯರಾಗಿಗೊಂಡು, ಅವರನ್ನು ಬಿಟ್ಟು ಬೇರೇನು ಅರಿಯದೆ, ಸದಾ ಅವರ ಗುಣಗಳ ಸ್ಮರಣೆಯಲ್ಲಿ ಮುಳುಗುತ್ತಿದ್ದು, ಅವರ ದಿವ್ಯ ಸ್ತೋತ್ರಗಳ ಶ್ರೇಷ್ಠತೆಯನ್ನು ಸ್ತುತಿಸಿಕೊಂಡಿರುವುದರಿಂದಲೇ ಆನಂದವನ್ನು ಪಡೆದುಕೊಂಡಿದ್ದ. ಮಧುರಕವಿ ಆಳ್ವಾರ್ ನನ್ನ ಹೃದಯದಲ್ಲಿ ಸದಾ ಇರಲಿ.
ತನಿಯನ್: (2)
ವೇರೊನ್ಡ್ರುಮ್ ನಾನ್ ಅರಿಯೇನ್ ವೇದಮ್ ತಮಿಳ್ ಶೈದ
ಮಾರನ್ ಶಠಗೋಪನ್ ವಣ್ ಕುರುಗೂರ್ ಏರು ಎಂಗಳ್
ವಾಳ್ವಾಮ್ ಎನ್ಡ್ರೇತ್ತುಮ್
ಮಧುರಕವಿಯಾರ್ ಎಮ್ಮೈ ಆಳ್ವಾರ್ ಅವರೇ ಅರಣ್.
“ ಕರುಣೆಯಿಂದ ವೇದದ ಅರ್ಥಗಳನ್ನು ತಮಿಳಲ್ಲಿ ರಚಿಸಿ, ನಮ್ಮಂತಿರುವ ಪ್ರಪನ್ನರನ್ನು ( ಶರಣಾಗತಿ ಮಾಡಿರುವವರು)
ಉನ್ನತಿಗೇರಿಸುವ, ಸುಂದರವಾದ ಕುರುಗೂರಿನ ನಾಯಕನಾದ ನಮ್ಮಾಳ್ವಾರನ್ನು ಬಿಟ್ಟು ನಾನೇನು ಅರಿಯೆನು” ಎಂದು ಹೇಳುವ ಕೇವಲ ಮಧುರಕವಿ ಆಳ್ವಾರೇ ನಮಗೆಲ್ಲಾ ಆಶ್ರಯ!
೧. ಪಾಶುರಮ್. ಈ ಪಾಶುರದಲ್ಲಿ ಮಧುರಕವಿ ಆಳ್ವಾರ್ ನಮ್ಮಾಳ್ವಾರಿಗೆ ಅತ್ಯಂತ ಪ್ರಿಯನಾದ( ಕಣ್ಣನ್) ಶ್ರೀ
ಕೃಷ್ಣನನ್ನು ಆನಂದದಿಂದ ಅನುಭವಿಸುತ್ತಾರೆ.
ಕಣ್ಣಿ ನುಣ್ ಚಿಱುತ್ತಾಮ್ಬಿನಾಲ್ ಕಟ್ಟುಣ್ಣಪ್
ಪಣ್ಣಿಯ ಪೇರು ಮಾಯನ್ ಏನ್ ಅಪ್ಪನಿಲ್
ನಣ್ಣಿತ್ ತೇನ್ ಕುರುಗೂರ್ ನಮ್ಬಿ ಏನ್ಱಕ್ಕಾಲ್
ಅಣ್ಣಿಕ್ಕುಮ್ ಅಮುದೂಱುಮ್ ಏನ್ ನಾವುಕ್ಕೇ
ತಾಯಿಯಾದ ಅಶೋದೈ ( ಯಶೋದಾ) ಪಿರಾಟ್ಟಿಗೆ ತನ್ನನ್ನು ತೆಳುವಾದ ಹಗ್ಗದಿಂದ ಕಟ್ಟಿ ಹಾಕಲು ಅವಕಾಶ ಮಾಡಿಕೊಟ್ಟ ನನ್ನ ಸ್ವಾಮಿಯಾದ , ಸರ್ವೋಚ್ಚ ಅಸ್ತಿತ್ವನಾದ ಸಾಕ್ಷಾತ್ ಕಣ್ಣನ್( ಶ್ರೀ ಕೃಷ್ಣ) ಎಂಪೆರುಮಾನಿಗಿಂತಲೂ ದಕ್ಷಿಣ ದಿಕ್ಕಿನಲ್ಲಿರುವ ಕುರುಗೂರಿನ ನಾಯಕನಾದ ನಮ್ಮಾಳ್ವಾರಿನ ನಾಮ ಸಂಕೀರ್ತನೆ ಮಾಡುವುದೇ ನನ್ನ ನಾಲಿಗೆಗೆ ಅತ್ಯಂತ ಮಕರಂದದಂತೆ ಸಿಹಿಯಾಗಿದೆ.
೨.ಪಾಶುರಮ್: ಈ ಪಾಶುರದಲ್ಲಿ ಮಧುರಕವಿ ಆಳ್ವಾರ್ ತನಗೆ ಅತ್ಯಂತ ಸಿಹಿಯಾದ ನಮ್ಮಾಳ್ವಾರಿನ ಪಾಶುರಗಳು ಮಾತ್ರವೇ ತನ್ನನ್ನು ಉಳಿಸಿಕೊಂಡಿವೆ ಎಂದು ಹೇಳುತ್ತಾರೆ.
ನಾವಿನಾಲ್ ನವಿಟ್ಟ್ರು ಇನ್ಬಮ್ ಎಯ್ದಿನೇನ್
ಮೇವಿನೇನ್ ಅವನ್ ಪೊನ್ನಡಿ ಮೈಮಯೇ
ತೇವು ಮಟ್ರರಿಯೇನ್ ಕುರುಗೂರ್ ನಂಬಿ
ಪಾವಿನ್ ಇನ್ನಿಶೈ ಪಾಡಿ ತ್ತಿರಿವನೇ.
ಆಳ್ವಾರಿನ ಪಾಶುರಗಳನ್ನು ನನ್ನ ನಾಲಿಗೆಯಲ್ಲಿ ಸ್ತುತಿಸಿಕೊಂಡೇ ನಾನು ಆನಂದಮಯನಾದೆ.
ಆಳ್ವಾರಿನ ದಿವ್ಯ ಪಾದಗಳಲ್ಲಿ ನಾನು ಶರಣಾದೆ!
ಸಂಪೂರ್ಣವಾಗಿ ಕಲ್ಯಾಣ ಗುಣಗಳನ್ನು ಹೊಂದಿರುವ ತಿರುಕ್ಕುರುಗೂರಿನ ನಾಯಕನಾದ ನಮ್ಮಾಳ್ವಾರನ್ನು ಬಿಟ್ಟು ಬೇರೆ ಯಾವ ದೈವವನ್ನುೂ ನಾನು ಅರಿಯನಲ್ಲೆ.
ಆಳ್ವಾರಿನ ಪಾಶುರಗಳನ್ನು ಸಂಗೀತವಾಗಿ ಹಾಡಿಕೊಂಡು ನಾನು ವಿವಿಧ ಸ್ಥಳಗಳಿಗೆ ತಿರುಗಾಡುತ್ತೇನೆ.
೩.ಪಾಶುರಮ್: ಈ ಪಾಶುರದಲ್ಲಿ ಮಧುರಕವಿ ಆಳ್ವಾರ್ ತಾನು ನಮ್ಮಾಳ್ವಾರಿನ ಸೇವಕನಾಗಿರುವುದರಿಂದ, ಎಂಪೆರುಮಾನ್ ತನಗೆ ಅದ್ಭುತವಾದ ದರ್ಶನವನ್ನು ( ದಿವ್ಯ ಸ್ವರೂಪ) ನೀಡಿದ ಬಗ್ಗೆ ಆನಂದದಿಂದ ನಿರೂಪಿಸುತ್ತಾರೆ.
ತಿರಿ ತಂದಾಗಿಲುಮ್ ದೇವ ಪ್ಪಿರಾನ್ ಉಡೈ
ಕರಿಯ ಕೋಲತ್ ತಿರು ಉರುಕ್ ಕಾಣ್ಬನ್ ನಾನ್
ಪೆರಿಯ ವಣ್ ಕುರುಗೂರ್ ನಗರ್ ನಂಬಿಕ್ಕು ಆಳ್
ಉರಿಯನಾಯ್ ಅಡಿಯೇನ್ ಪೆಟ್ರ ನನ್ನಮಯೇ.
ಆಳ್ವಾರಿಗೆ ಸೇವಕ ಸ್ಥಾನದಲ್ಲಿದ್ದ ನಾನು ಆ ಸ್ಥಾನದಿಂದ ಜಾರಿಬಿಟ್ಟೆ.
ಆಳ್ವಾರ್ ಕಾಣಿಸಿಕೊಟ್ಟಂತೆ ನಾನು ನಿತ್ಯಸೂರಿಗಳಿಗೆ ನಾಯಕನಾದ, ಅಂಧಕಾರ ಮೈಬಣ್ಣವನ್ನು ಹೊಂದಿರುವ ಶ್ರೀಮನ್ ನಾರಾಯಣನ್ನು ಕಂಡೆ!
ಉದಾತ್ತವಾದ ತಿರುಕ್ಕುರುಗೂರಲ್ಲಿ ಅವತರಿಸಿದ ನಮ್ಮಾಳ್ವಾರಿನ ಸೇವಕನಾಗಿರುವುದರಿಂದ ನಾನು ಪಡೆದ
ಅದ್ಭುತವಾದ ಪ್ರಯೇಜನವನ್ನು ನೋಡಿ!
೪.ಪಾಶುರಮ್: ಈ ಪಾಶುರದಲ್ಲಿ ಮಧುರಕವಿ ಆಳ್ವಾರ್, ನಮ್ಮಾಳ್ವಾರ್ ತನ್ನ ಮೇಲೆ ಅನುಗ್ರಹಿಸಿದ ಪ್ರಯೋಜನಗಳ ಸುರಿತವನ್ನು ಕಂಡು , ನಮ್ಮಾಳ್ವಾರ್ ಮೆಚ್ಚುವುದನ್ನೇ ತಾನೂ ಬಯಸಬೇಕೆಂದು ಹೇಳುತ್ತಾರೆ. ಮತ್ತು, ತಾನು ಎಷ್ಟೇ ದೀನನಾದರು ಕೂಡ, ನಮ್ಮಾಳ್ವಾರ್ ಹೇಗೆ ತನ್ನನ್ನು ಸ್ವೀಕರಿಸಿಕೊಂಡರು ಎಂದು ಹೇಳುತ್ತಾರೆ.
ನನ್ಮೈಯಾಲ್ ಮಿಕ್ಕ ನಾನ್ಮರೈ ಆಳರ್ಗಳ್
ಪುನ್ಮೈಯಾಗಕ್ ಕರುದುವರ್ ಆದಲಿಲ್
ಅನ್ನಯಾಯ್ ಅತ್ತನಾಯ್ ಎನ್ನೈ ಆಂಡಿಡುಮ್ ತನ್ಮೈಯಾನ್
ಶಠಗೋಪನ್ ಎನ್ ನಂಬಿಯೇ.
“ಜ್ಞಾನಕ್ಕೆ ತಕ್ಕಂತೆ ಶ್ರೇಷ್ಠವಾದ ಆಚಾರವನ್ನು ನಿರ್ವಹಿಸುವ ವೇದ ಪಂಡಿತರು ಕೀಳು ಸ್ಧಿತಿಯ ಸಾರಾಂಶವಾಗಿರುವಂತಹ ನನ್ನನ್ನು ಕೈಬಿಟ್ಟರು. ಆದರೆ, ನಮ್ಮಾಳ್ವಾರ್ ,ತಂದೆಯಾಗಿ, ತಾಯಿಯಾಗಿ ನನ್ನನ್ನು ತನ್ನ ಆಶ್ರಯದಲ್ಲಿ ಇಟ್ಟುಕೊಂಡರು.ಆವರೇ ನನ್ನ ದೇವರು! “
೫.ಪಾಶುರಮ್: ಹಿಂದಿನ ಪಾಶುರದಲ್ಲಿ ತನ್ನ ದೀನತೆಯನ್ನು ವಿವರಿಸಿದ ಮಧುರಕವಿ ಆಳ್ವಾರ್, ನಮ್ಮಾಳ್ವಾರಿನ ಕೃಪೆಯಿಂದ ಹೇಗೆ ತಿದ್ದುಪ್ಪಡಿಸಿದರೊ ಹೇಳಿ, ನಮ್ಮಾಳ್ವಾರಿಗೆ ಕೃತಜ್ಞತೆಯನ್ನು ತಿಳಿಸುತ್ತಾರೆ.
ನಂಬಿನೇನ್ ಪಿರರ್ ನನ್ ಪೊರುಳ್ ತನ್ನೆಯುಮ್
ನಂಬಿನೇನ್ ಮಡವಾರೆಯುಮ್ ಮುನ್ನೆಲಾಮ್
ಸೆಂ ಪೊನ್ ಮಾಡತ್ ತಿರುಕ್ಕುರುಗೂರ್ ನಂಬಿಕ್ಕು
ಅನ್ಬನಾಯ್ ಅಡಿಯೇನ್ ಸದಿರ್ತೇನ್ ಇನ್ಡ್ರೇ!
ಕಳೆದ ದಿನಗಳಲ್ಲಿ ನಾನು ಇತರ ಐಶ್ವರ್ಯವನ್ನು, ಸ್ತ್ರೀಯರನ್ನು ಬಯಸುತ್ತಿದ್ದೆ.
ಆದರೆ ಈಗ, ನಮ್ಮಾಳ್ವಾರಿನ ಕೃಪೆಯಿಂದ ಸರಿಪಡಿಸಲ್ಪಟ್ಟು, ಶ್ರೇಷ್ಠತೆ ಪಡೆದು ಅವರಿಗೆ ಸೇವಕನಾಗಿದ್ದೇನೆ! ಅಂತಹ ನಮ್ಮಾಳ್ವಾರ್, ಚಿನ್ನದ ಮಹಲ್ಗಳಿರುವ ತಿರುಕ್ಕುರುಗೂರಿನ ನಾಯಕ!
೬.ಪಾಶುರಮ್: “ಇಂತಹ ಶ್ರೇಷ್ಠತೆಯನ್ನು ಹೇಗೆ ಪಡೆದಿರಿ? “ ಎಂದು ಕೇಳಿದಾಗ, ಮಧುರಕವಿ ಆಳ್ವಾರ್, “ನಮ್ಮಾಳ್ವಾರಿನ ಕೃಪೆಯಿಂದ ಮಾತ್ರವೇ ಶ್ರೇಷ್ಠತೆ ಪಡೆದೆ ಹಾಗು ಅದರಿಂದ ಜಾರಲು ಇನ್ನು ಸಾಧ್ಯವೇ ಇಲ್ಲ “ಎಂದು ಹೇಳುತ್ತಾರೆ.
ಇನ್ಡೃ ತೊಟ್ಟುಮ್ ಎಳುಮೆಯುಮ್ ಎಂಪಿರಾನ್
ನಿನ್ಡೃ ತನ್ ಪುಗಳ್ ಏತ್ತ ಅರುಳಿನಾನ್
ಕುನ್ಡ್ರ ಮಾಡತ್ ತಿರುಕ್ಕುರುಗೂರ್ ನಂಬಿ
ಎನ್ಡ್ರುಮ್ ಎನ್ನೈ ಇಗಳ್ವು ಇಲನ್ ಕಾಣ್ಮಿನೇ.
“ತಿರುಕ್ಕುರುಗೂರಿನ ನಾಯಕನಾದ, ನನ್ನ ಸ್ವಾಮಿ ನಮ್ಮಾಳ್ವಾರ್ ನನ್ನ ಮೇಲೆ ಕರುಣೆಯನ್ನು ಸುರಿಸಿ, ನಾನು ಅವರ ವೈಭವವನ್ನು ಹಾಡುವಂತೆ ಮಾಡಿದರು! ಅವರೆಂದಿಗೂ ನನ್ನ ಕೈ ಬಿಡುವುದಿಲ್ಲ” ಎಂದು ನೀವು ಕಾಣಬಹುದು!
೭.ಪಾಶುರಮ್ : ಈ ಪಾಶುರದಲ್ಲಿ”ನಮ್ಮಾಳ್ವಾರಿನ ಅನುಗ್ರಹವನ್ನು ಪಡೆದ ನಾನು (ಮಧುರಕವಿ ಆಳ್ವಾರ್, ) ನಮ್ಮಾಳ್ವಾರಿನ ಕೃಪೆ ಪಡೆಯದೆ ಈ ಸಂಸಾರದಲ್ಲಿ ನೆರಳುತ್ತಿರುವವರಿಗೆಲ್ಲಾ ನಮ್ಮಾಳ್ವಾರಿನ ವೈಭವವನ್ನು ತಿಳಿಸುತ್ತೇನೆ.ಅವರ ಅನುಗ್ರಹವನ್ನು ಸಂಸಾರಿಗಳು ಪಡೆದು ಸಮೃದ್ಧಿಗೊಳ್ಲಲಿ”ಎಂದು ಹೇಳುತ್ತಾರೆ.
ಕಂಡು ಕೊಂಡು ಎನ್ನೈಕ್ ಕಾರಿಮಾರಪ್ಪಿರಾನ್
ಪಂಡೈ ವಲ್ವಿನೈ ಪಾಟ್ಟ್ರಿ ಅರುಳಿನಾನ್
ಎಣ್ ದಿಶೈಯುಮ್ ಅರಿಯ ಇಯಮ್ಬುಗೇನ್
ಒಣ್ ತಮಿಳ್ ಶಠಗೋಪನ್ ಅರುಳಯೇ.
ಪೊರ್ಕಾರಿಯ ಪುತ್ರನಾದ, ಕಾರಿಮಾರನ್ ಎನ್ನುವ ಹೆಸರು ಸಹ ಪಡೆದ ನಮ್ಮಾಳ್ವಾರ್, ನನ್ನ ಮೇಲೆ ಅನುಗ್ರಹವನ್ನು ಸುರಿಸಿ, ಅನಾದಿ ಕಾಲದಿಂದ ನನ್ನಲ್ಲಿರುವ ಪಾಪಗಳನ್ನು ತೆಗೆದು, ನನ್ನನು ತನ್ನ ಕೈಂಕರ್ಯದಲ್ಲಿ ಒಳಗೊಂಡಿಸಿದ್ದಾರೆ.
ಅದ್ಭುತವಾದ ತಮಿಳ್ ಪಾಶುರಗಳನ್ನು ರಚಿಸಿದ ಅಂತಹ ಆಳ್ವಾರಿನ ಕರುಣೆಯ ಶ್ರೇಷ್ಠತೆಯನ್ನು ನಾನು ಎಂಟು ದಿಕ್ಕುಗಳಲ್ಲೂ ಹರಡುತ್ತೇನೆ.
೮.ಪಾಶುರಮ್ : ಈ ಪಾಶುರದಲ್ಲಿ ಮಧುರಕವಿ ಆಳ್ವಾರ್ ನಮ್ಮಾಳ್ವಾರಿನ ಕರುಣೆ ಎಂಬೆರುಮಾನಿನ ಕರುಣೆಗಿಂತಲೂ ಹೆಚ್ಚು ಮತ್ತು ಆಳ್ವಾರ್ ರಚಿಸಿದ ತಿರುವಾಯ್ಮೊಳಿ ಎಂಬೆರುಮಾನಿನ ಭಗವದ್ಗೀತೆಗಿಂತಲೂ ಶ್ರೇಷ್ಠವಾದದು ಎಂದು ವಿವರಿಸುತ್ತಾರೆ.
ಅರುಳ್ ಕೊಂಡಾಡುಮ್ ಅಡಿಯವರ್ ಇನ್ಬುರ
ಅರುಳಿನಾನ್ ಅವ್ವರುಮರೈಯಿನ್ ಪೊರುಳ್
ಅರುಳ್ ಕೊಂಡು ಆಯಿರಮ್ ಇನ್ ತಮಿಳ್ ಪಾಡಿನಾನ್
ಅರುಳ್ ಕಂಡೀರ್ ಇವ್ವುಲಗಿನಿಲ್ ಮಿಕ್ಕದೇ
ನಮ್ಮಾಳ್ವಾರ್ ಕರುಣೆಯಿಂದ ವೇದದ ಸಾರವಾದ ತಿರುವಾಯ್ಮೊಳಿಯನ್ನು ಎಂಬೆರುಮಾನನ್ನು ಪ್ರಶಂಸಿಸುವ ಅವನ (ಎಮ್ಪೆರುಮಾನಿನ) ಸೇವಕರ (ಅಡಿಯಾರ್) ಆನಂದಕ್ಕಾಗಿ ರಚಿಸಿದರು. ನಮ್ಮಾಳ್ವಾರಿನ ಈ ಕರುಣೆಗಿಂತಲೂ ಹೆಚ್ಚು ಬೇರೇನು ಇಲ್ಲ!
೯.ಪಾಶುರಮ್: ಈ ಪಾಶುರದಲ್ಲಿ ಮಧುರಕವಿ ಆಳ್ವಾರ್, ತನ್ನ ದೀನತೆಯನ್ನು ಕೂಡ ಸಹಿಸಿಕೊಂಡು, ನಮ್ಮಾಳ್ವಾರ್ ತನಗೆ ಎಂಬೆರುಮಾನನಿಗೆ ನಾವು ಸದಾ ಕೈಂಕರ್ಯವನ್ನು ಮಾಡಿಕೊಂಡು, ಅವನ ಸೇವಕರ(ಅಡಿಯಾರ್) ಸೇವಕರಾಗಿರಬೇಕೆನ್ನುವ ವೇದದ ಸಾರವನ್ನು ತಿಳಿಸಿ ಕೊಟ್ಟರು. ಅಂತಹ ನಮ್ಮಾಳ್ವಾರಿಗೆ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ!
ಮಿಕ್ಕ ವೇದಿಯರ್ ವೈದತ್ತಿನ್ ಉಟ್ಪೊರುಳ್
ನಿರ್ಕ್ಕ ಪಾಡಿ ಎನ್ ನೆಂಜುಳ್ ನಿರುತ್ತಿನಾನ್
ತಕ್ಕ ಶೀರ್ ಶಠಗೋಪನ್ ಎನ್ನಂಬಿಕ್ಕು
ಆಟ್ಪುಕ್ಕ ಕಾದಲ್ ಅಡಿಮೈಪ್ ಪಯಣ್ ಅನ್ಡ್ರೇ!
ಅದ್ಭುತವಾದ ವಿದ್ವಾಂಸರು ಪಠಿಸುವ ವೇದ ಸಾರವನ್ನು ನನ್ನ ಹೃದಯದಲ್ಲಿ ಧೃಡವಾಗಿ ನೆಲೆಸಿ, ಎಂಬೆರುಮಾನಿಗೆ ಎಂದೆಂದಿಗೂ ಸೇವಕನಾಗಿರುವಂತಹ ಜೀವಾತ್ಮ ಸ್ವರೂಪವನ್ನು ಅರಿತುಕೊಳ್ಳುವಂತೆ ಸ್ವಾಮಿ ನಮ್ಮಾಳ್ವಾರ್ ಉಪದೇಶಿಸಿದರು!
೧೦. ಪಾಶುರಮ್: ಈ ಪಾಶುರದಲ್ಲಿ ಮಧುರಕವಿ ಆಳ್ವಾರ್, ನಮ್ಮಾಳ್ವಾರ್ ತನಗೆ ಅತ್ಯಂತ ಉತ್ತಮವಾದ ಪ್ರಯೋಜನಗಳನ್ನು ಅನುಗ್ರಹಿಸಿದಕ್ಕೆ ತಾನು ಎಂದಿಗೂ ಮರುಪಾವತಿ ಮಾಡಲು ಸಾಧ್ಯವಿಲ್ಲ! ಅಂತಹ ನಮ್ಮಾಳ್ವಾರಿನ ದಿವ್ಯ ಪಾದಗಳಿಗೆ ಮಧುರಕವಿ ಆಳ್ವಾರ್ ಅತ್ಯಂತ ಪ್ರೇಮವನ್ನು ಅಭಿವೃದ್ಧಿ ಪಡಿಸಿಕೊಂಡರೆಂದು ತಿಳಿಸುತ್ತಾರೆ!
ಪಯಣ್ ಅಂಡ್ರು ಆಗಿಲುಮ್ ಪಾಗಲ್ಲರ್ ಆಗಿಲುಮ್
ಸೆಯಲ್ ನನ್ಡರಾಗತ್ ತಿರುತ್ತಿ ಪಣಿಕೊಳ್ವಾನ್
ಕುಯಿಲ್ ನಿನ್ಡ್ರಾರ್ ಪೊಳಿಲ್ ಶೂಳ್
ಕುರುಗೂರ್ ನಂಬಿ
ಮುಯಲ್ಗಿನ್ಡ್ರೇನ್ ಉನ್ ತನ್ ಮೊಯ್ಕಳರ್ಕ್ಕು ಅನ್ಬಯೇ.
“ತಮಗೆ ಈ ಪ್ರಪಂಚದ ಜನರಿಂದ ಏನೂ ಪ್ರಯೋಜನವಿಲ್ಲದಿದ್ದರೂ ಕೂಡ, ಅವರನ್ನು ತಮ್ಮ ಉಪದೇಶಗಳು ಮತ್ತು ಆಚಾರದಿಂದ ತಿದ್ದಿ, ಎಂಬೆರುಮಾನಿನ ಸೇವಕರಾಗಿ ಬದಲಾಯಿಸಿದ , ಕೋಗಿಲೆಯ ಧ್ವನಿ ಪ್ರತಿಧ್ವನಿಸುವಂತಹ ವನಗಳಿಂದ ಸುತ್ತಲ್ಪಟ್ಟ ತಿರುಕ್ಕುರುಗೂರಿನಲ್ಲಿ ವಾಸಿಸುವ ,ಓ ನಮ್ಮಾಳ್ವಾರ್! ನಿಮ್ಮನ್ನು ಅತ್ಯಂತವಾಗಿ ಪ್ರೇಮಿಸಲು ನಾನು ಪ್ರಯತ್ನಿಸುತ್ತಿದ್ದೇನೆ!”ಎಂದು ಮಧುರಕವಿ ಆಳ್ವಾರ್ ಹೇಳುತ್ತಾರೆ
೧೧.ಪಾಶುರಮ್: ಈ ಪಾಶುರದಲ್ಲಿ ಮಧುರಕವಿ ಆಳ್ವಾರ್, ಕಣ್ಣಿನುನ್ ಸಿರುತ್ತಾಬು ಪಠಿಸುವವರೆಲ್ಲಾ, ನಮ್ಮಾಳ್ವಾರಿನ ನಿಯಂತ್ರಣದಲ್ಲಿರುವ ಶ್ರೀ ವೈಕುಂಠಕ್ಕೆ ತಲುಪಿ ಅಲ್ಲೇ ವಾಸಿಸುತ್ತಾರೆಂದು ತಿಳಿಸುತ್ತಾರೆ. ಈ ಪಾಶುರದ ಮುಖ್ಯವಾದ ಅರ್ಥವೇನೆಂದರೆ, ಆಳ್ವಾರ್ ತಿರುನಗರಿಗೆ ಅಲ್ಲಿನ ಆದಿನಾಥ ( ದೇವತೆ) ಮತ್ತು ನಮ್ಮಾಳ್ವಾರ್ ನಾಯಕರು ಆದರೆ ಶ್ರೀ ವೈಕುಂಠಕ್ಕೆ ನಮ್ಮಾಳ್ವಾರ್ ಒಬ್ಬರೇ ನಾಯಕ!
ಅನ್ಬನ್ ತನ್ನೈ ಅಡೈನ್ದವರ್ಘಟ್ಕ್ಕುಎಲ್ಲಾಮ್ ಅನ್ಬನ್.
ತೆನ್ ಕುರುಗೂರ್ ನಗರ್ ನಂಬಿಕ್ಕು ಅನ್ಬನಾಯ್
ಮಧುರಕವಿ ಸೊನ್ನೆ ಸೊಲ್ ನಂಬುವಾರ್ ಪದಿ
ವೈಕುಂದಮ್ ಕಾಣ್ಮಿನೇ.
ಎಂಬೆರುಮಾನ್ ಎಲ್ಲರಿಗೂ,ವಿಷೇಶವಾಗಿ ತನ್ನ ಸೇವಕರಿಗೆ ಮಮತೆಯನ್ನು ನೀಡುವವನು. ಆದರೆ ನಮ್ಮಾಳ್ವಾರ್ ಎಂಬೆರುಮಾನಿನ ಸೇವಕರಿಗೆ ಮಮತೆಯನ್ನು ನೀಡುತ್ತಾರೆ! ನಮ್ಮಾಳ್ವಾರಿನ ಬಳಿ ಅತ್ಯಂತ ಪ್ರೀತಿ ಹೊಂದಿರುವ ನಾನು(ಮಧುರಕವಿ ಆಳ್ವಾರ್) ರಚಿಸಿರುವ ಈ ಪ್ರಬಂಧವನ್ನು ಭಕ್ತಿಯಿಂದ ಪಠಿಸುವರೆಲ್ಲಾ, ವೈಕುಂಠವನ್ನು ಸೇರಿ ಅಲ್ಲೇ ನಿರಂತರವಾಗಿ ವಾಸಿಸುತ್ತಾರೆ!
ಮೂಲ: https://divyaprabandham.koyil.org/index.php/2020/04/kanninun-chiruth-thambu-simple/
ಅಡಿಯೇನ್ ರೂಪ ರಾಮಾನುಜ ದಾಸಿ
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org