ಉಪದೇಶ ರತ್ನಮಾಲೈ- ಸರಳ ವಿವರಣೆ ೧ ರಿಂದ ೩ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೧
ಮೊದಲನೇ ಪಾಸುರ : ಈ ಪಾಸುರದಲ್ಲಿ , ಮಾಮುನಿಗಳು ಅವರ ಆಚಾರ್ಯರಿಗೆ (ಗುರುವಿಗೆ) ನಮಸ್ಕರಿಸುತ್ತಾ ಕರುಣೆಯಿಂದ ಈ ಪ್ರಬಂದವನ್ನು ರಚಿಸಲು ಪ್ರಮುಖ ಕಾರಣವನ್ನು ತಿಳಿಸುತ್ತಾರೆ.


ಎನ್ದೈ ತಿರುವಾಯ್ಮೊழிಪಿಳ್ಳೈ ಇನ್ನರುಳಾಲ್
ವಂದ ಉಪದೇಶ ಮಾರ್ಗತ್ತೈ ಚ್ಚಿನ್ದೈ ಸೈದು
ಪಿನ್ನವರುಮ್ ಕಱ್ಕ ಉಪದೇಶಮಾಯ್ ಪೇಸುಗಿನ್ರೇನ್
ಮನ್ನೀಯ ಸೀರ್ ವೆಣ್ಬಾವಿಲ್ ವೈತ್ತು

ನನಗೆ ಜ್ಞಾನ ಕೊಟ್ಟ ನನ್ನ ಸ್ವಾಮಿ ( ಇಲ್ಲಿ ಆಚಾರ್ಯರೆಂದು ಭಾವಿಸಬೇಕು ) ಹಾಗೂ ತಂದೆ ಸ್ಥಾನದಲ್ಲಿರುವ ಕರುಣಾಮಯಿ ತಿರುವಾಯ್ಮೊழிಪಿಳ್ಳೈ ಅವರಿಂದ ನಾನು ಈ ಉಪದೇಶ ಪಡೆದಿದ್ದೇನೆ . ಅದನ್ನು ವಿಶ್ಲೇಷಿಸಿ ಮುಂಬರುವ ಪೀಳಿಗೆ ಸ್ಪಷ್ಟವಾಗಿ ಕಲಿಯಲು ಇದನ್ನು ವೆಣ್ಬಾ ಎಂಬ ಮಹಾ ಕಾವ್ಯದ (ತಮಿಳು) ರೀತಿಯಲ್ಲಿ ರಚಿಸುತ್ತಿದೇನೆ .

ಪಾಸುರ ೨
ತಮ್ಮ ದಿವ್ಯ ಮನಸಿನಲ್ಲಿದ್ದ ಪ್ರಶ್ನೆ “ ಇದನ್ನು ಇಷ್ಟಪಡದಿರುವವರು ಇದನ್ನು ಅಪಹಾಸ್ಯ ಮಾಡುವರೋ ? “ ಎಂದು ಊಹಿಸಿಕೊಂಡು ಇಂಥಹ ವಿಚಾರದಿಂದ ಅವರಿಗೆ ಯಾವ ಕೊರತೆಯೂ ಇಲ್ಲವೆಂದು ಮಾಮುನಿಗಳು ತಮ್ಮ ದಿವ್ಯ ಮನಸ್ಸಿಗೆ ಹೇಳುತ್ತಾರೆ.


ಕಱ್ಱೋರ್ಗಳ್ ತಾಂ ಉಗಪ್ಪರ್ ಕಲ್ವಿ ತನ್ನಿಲ್ ಆಸೈ ಉಳ್ಳೋರ್
ಪೆಱ್ಱೋಮ್ ಎನ ಉಗನ್ದು ಪಿನ್ಬು ಕಱ್ಪರ್ – ಮಱ್ಱೋರ್ಗಳ್
ಮಾಚ್ಚರ್ಯತ್ತೈ ಇಗழிಲ್ ವಂದದು ಎನ್ ನೆಂಜೇ ಇಗழ்ಗೈ
ಆಚ್ಚರ್ಯಮೋ ತಾನ್ ಅವರ್ಕ್ಕು

ನಮ್ಮ ಉತ್ತಮ ತತ್ವಶಾಸ್ತ್ರದಲ್ಲಿ ನಿಪುಣರಾದವರು ಇದು ಬಹು ಸುಂದರವಾಗಿದೆಯೆಂದು ಹಾಗೂ ಖಚಿತವಾಗಿದೆಯೆಂದು ಸಂತೋಷಪಡುವರು. ಯಾರೊಬ್ಬರು ತಮ್ಮ ಹಿರಿಯರಿಂದ ಉತ್ತಮ ಮೌಲ್ಯಗಳನ್ನು ಕಲಿಯಬೇಕೆಂದು ಆಶಿಸುವರೋ ಅವರು ಇದನ್ನು ಮೆಚ್ಚುಗೆಯಿಂದ ಕಲಿಯುವರು. ಇದಾವ ಗುಂಪಿಗೂ ಸೇರದಿರುವವರು ಅಸೂಯೆಯಿಂದ ಅಪಹಾಸ್ಯ ಮಾಡುವರು. ಇದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದರಿಂದ ನಾವು ದುಃಖ ಪಡಬೇಕಿಲ್ಲ .

ಪಾಸುರ ೩
ಅವರ ಮನಸನ್ನು ಸಮಾಧಾನಿಸಿದ ನಂತರ , ದಯೆಯಿಂದ ಪಾಸುರಗಳನ್ನು ರಚಿಸುವ ನಿರ್ಧಾರ ಮಾಡಿ , ಅಪಶಕುನವು ತೊಲಗಲಿ ಎಂದು ಮಂಗಳಾಶಾಸಣಂ (ಒಳ್ಳೆಯದನ್ನು ಬಯಸುತ್ತಾ ) ಪ್ರಾರಂಭಿಸುತ್ತಾರೆ .

ಆழ்ವಾರ್ಗಳ್ ವಾழி ಅರುಳಿಚ್ಚೆಯಲ್ ವಾழி
ತಾழ்ವಾದುಮಿಲ್ ಕುರವರ್ ತಾಂ ವಾழி – ಏழ்ಪಾರುಂ
ಉಯ್ಯ ಅವರ್ಗಳ್ ಉರೈತ್ತವೈಗಳ್ ತಾಂ ವಾழி
ಸೆಯ್ಯ ಮಱೈ ತನ್ನುಡನೇ ಸೇರ್ನ್ದು

ಆழ்ವಾರ್ಗಳು ಶಾಶ್ವತವಾಗಿರಲಿ . ಅವರು ದಯೆತೋರಿ ರಚಿಸಿದ ದಿವ್ಯಪ್ರಬಂದಗಳು ( ದೈವೀಕ ಕೃತಿಗಳು ) ಶಾಶ್ವತವಾಗಿರಲಿ. ಆழ்ವಾರ್ಗಳ ಮಾರ್ಗವನ್ನು ಅನುಸರಿಸಿದ ಪೂರ್ವಾಚಾರ್ಯರು ಲೋಕದ ಉನ್ನತಿಗಾಗಿ ಹೇಳಿದ ಮಾತುಗಳು ಶಾಶ್ವತವಾಗಿರಲಿ. ಇವರಿಗೆಲ್ಲಾ ಆಧಾರವಾದ , ಸ್ವತಃ ಮಹತ್ವವಾದ , ವೇದಗಳು ಶಾಶ್ವತವಾಗಿರಲಿ.

ಮೂಲ : http://divyaprabandham.koyil.org/index.php/2020/06/upadhesa-raththina-malai-1-3-simple/

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment