ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ
<< ಹನ್ನೊಂದನೇ ತಿರುಮೊಳಿ – ತಾಮ್ ಉಗಕ್ಕುಮ್
ಅವನು ಎಲ್ಲರನ್ನೂ ರಕ್ಷಿಸುತ್ತಾನೆ ಎಂಬ ಎಂಪೆರುಮಾನ್‌ನ ಮಾತುಗಳನ್ನು ಅವಳು ನಂಬಿದ್ದಳು. ಅದು ಫಲ ನೀಡಲಿಲ್ಲ.
ಅವಳು ಪೆರಿಯಾಳ್ವಾರ್ ಅವರೊಂದಿಗಿನ ತನ್ನ ಸಂಬಂಧವನ್ನು ನಂಬಿದ್ದಳು. ಅದೂ ಕೂಡ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಇವನ್ನೆಲ್ಲ ಯೋಚಿಸುತ್ತಾ ಅವಳು ಯಾತನೆಗೊಂಡಳು. ಎಂಪೆರುಮಾನ್ ಸ್ವತಂತ್ರನಾಗಿರುವುದರಿಂದ (ಸಂಪೂರ್ಣ ಸ್ವತಂತ್ರ) ಅವಳು ತನ್ನ ಆಚಾರ್ಯ (ಶಿಕ್ಷಕ), ಪೆರಿಯಾಳ್ವಾರ್ ಮೂಲಕ ಅವನನ್ನು ಪಡೆಯಲು ಪ್ರಯತ್ನಿಸಿದಳು. ಅದು ಕೂಡ ಅಪೇಕ್ಷಿತ ಫಲಿತಾಂಶವನ್ನು ನೀಡದ ಕಾರಣ, ಅವಳು ‘ಎಂಪೆರುಮಾನ್ ಸ್ವತಂತ್ರನು’ ಎಂದು ಚಿಂತಿಸಿದಳು. ಅವನು ತನ್ನ ಹಿಂಬಾಲಕರನ್ನು ರಕ್ಷಿಸದಿದ್ದರೆ, ಅವನ ಹೆಸರು ಕೆಡುತ್ತದೆ. ಒಮ್ಮೆ ಅವನು ಯಾರನ್ನಾದರೂ ರಕ್ಷಿಸಲು ನಿರ್ಧರಿಸಿದರೆ, ಬೇರೆ ಯಾರೂ ಅದನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಅವನ ಸ್ವಾತಂತ್ರ್ಯವೇ (ಸಂಪೂರ್ಣವಾಗಿ ಸ್ವತಂತ್ರವಾಗಿರುವ ಸ್ವಭಾವ) ನಾವು ಮತ್ತೆ ಅವನ ಬಳಿಗೆ ಹೋಗುವ ಪ್ರಯತ್ನದ ಮತ್ತು ಅದರ ಫಲ ವನ್ನು ಪಡೆಯುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಈ ವಿಷಯದಲ್ಲಿ ಆಕೆ ಅಚಲವಾಗಿದ್ದರೂ ಕೂಡ, ಅವನು ಬಾರದೇ ಇದ್ದುದರಿಂದ ಏನು ಮಾಡಬೇಕೆಂದು ಚಿಂತಾಕ್ರಾಂತಳಾಗುತ್ತಾಳೆ. ತನ್ನ ಅತಿಯಾದ ಪ್ರೇಮದಿಂದ, ಅವನು ಬರುತ್ತಾನೆ ಎಂದು ಕಾಯುವ ತಾಳ್ಮೆ ಅವಳಿಗಿಲ್ಲ. ಅದು ತನ್ನ ಸ್ವರೂಪಕ್ಕೆ ವಿರುದ್ಧವಾಗಿದ್ದರೂ (ಎಂಪೆರುಮಾನ್‌ನ ಮೇಲೆ ಅವಲಂಬನೆ ಮತ್ತು ಅವನ ಸೇವೆಯನ್ನು ನಿರ್ವಹಿಸುವ ಮೂಲಭೂತ ಸ್ವಭಾವ) ಅವಳು ಯಾವುದೇ ವಿಧಾನದಿಂದ ಅವನನ್ನು ತಲುಪಲು ಬಯಸುತ್ತಾಳೆ ಮತ್ತು ತನ್ನ ಬಳಿ ಇರುವವರಿಗೆ “ದಯವಿಟ್ಟು ನನ್ನನ್ನು ಉತ್ತರ ಮಥುರಾ, ದ್ವಾರಕಾ ಮುಂತಾದ ಎಂಪೆರುಮಾನ್ ವಾಸಿಸುವ ಸ್ಥಳಗಳಿಗೆ ತಲುಪಿಸಿರಿ” ಎಂದು ವಿನಂತಿಸುತ್ತಾಳೆ.
ಮೊದಲನೇ ಪಾಸುರಂ. ಆಕೆಗೆ “ಎಂಪೆರುಮಾನ್ ಬರುವವರೆಗೆ ಕಾಯಬೇಕು ಈ ರೀತಿ ಆತಂಕ ಪಡುವ ಅಗತ್ಯವಿಲ್ಲ” ಎಂದು ಹೇಳಿದಾಗ. “ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದ ನಿಮ್ಮೊಂದಿಗೆ ಮಾತನಾಡಲು ನನಗೆ ಯಾವುದೇ ಮಾರ್ಗವಿಲ್ಲ. ನಿನ್ನ ಮಾತುಗಳನ್ನು ಕೇಳುವ ಭಾಗ್ಯ ನನಗಿಲ್ಲ” ಎಂದು ಅವಳು ಉತ್ತರಿಸುತ್ತಾಳೆ.
ಮಟ್ರಿರಂದೀರ್ಗಳ್ಕು ಅರಿಯಲಾಗಾ ಮಾಧವನ್ ಎನ್ಬದೋರ್ ಅನ್ಬು ತನ್ನೈ
ಉಟ್ರಿರುಂದೇನುಕ್ಕು ಉರೈಪ್ಪದೆಲ್ಲಾಮ್ ಊಮೈಯರೋಡು ಶೆವಿಡರ್ ವಾರ್ತೈ
ಪೆಟ್ರಿರುಂದಾಳೈ ಒಳಿಯವೇ ಪೋಯ್ ಪೇರ್ತು ಒರು ತಾಯಿಲ್ ವಳರ್ನ್ದ ನಂಬಿ
ಮಾರ್ಪೊರುಂದಾಮರ್ಕಳಂ ಅಡೈನ್ದ ಮಧುರೈ ಪುರತ್ತು ಎನ್ನೈ ಉಯ್ತಿಡುಮಿನ್
ನಿಮ್ಮ ಪರಿಸ್ಥಿತಿ ನನ್ನದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ನೀವು ಗ್ರಹಿಸಲು ಸಾಧ್ಯವಾಗದ ಮಾಧವನ (ಶ್ರೀ ಮಹಾಲಕ್ಷ್ಮಿಯ ಪತ್ನಿ) ಮೇಲೆ ವಾತ್ಸಲ್ಯವನ್ನು ಹೊಂದಿರುವ ನನಗೆ ನೀವು ಏನು ಹೇಳಿದರೂ ಅದು ಮೂಕ ಮತ್ತು ಕಿವುಡ ವ್ಯಕ್ತಿಯ ನಡುವಿನ ಸಂಭಾಷಣೆಯಂತೆ ವ್ಯರ್ಥವಾಗಿದೆ. ನೀವು ನಿರ್ವಹಿಸಬಹುದಾದ ಒಂದೇ ಒಂದು ಚಟುವಟಿಕೆ
ಇದೆ. ತನ್ನ ಜೈವಿಕ ತಾಯಿ ದೇವಕಿಯನ್ನು ತೊರೆದು ತನ್ನ ಸಾಕು ತಾಯಿ ಯಶೋದೆಯ ಸ್ಥಾನದಲ್ಲಿ ಬೆಳೆದು ಕುಸ್ತಿಪಟುಗಳಿಗಿಂತ ಮುಂಚೆ ಕುಸ್ತಿಯ ಅಖಾಡವನ್ನು ತಲುಪಿದ ಕಣ್ಣನ್ (ಕೃಷ್ಣ) ವಾಸಿಸುವ ಮಥುರಾ ಸಮೀಪದ
ಸ್ಥಳವೊಂದಕ್ಕೆ ನನ್ನನ್ನು ಕರೆದುಕೊಂಡು ಹೋಗು.
ಎರಡನೇ ಪಾಸುರಂ. “ಏನೇ ಆಗಲಿ, ನೀನು ಹೀಗೆ ಅವನ ಹಿಂದೆ ಹೋಗುವುದು ಅವನಿಗೆ ಕೆಟ್ಟ ಹೆಸರು ತಂದುಕೊಡುತ್ತದೆ; ನಿನ್ನ ಸ್ತ್ರೀತ್ವವನ್ನು ನೀನು ರಕ್ಷಿಸಿಕೊಳ್ಳಬಾರದೇ?” ಅದಕ್ಕೆ ಅವಳು ಪ್ರತಿಕ್ರಿಯಿಸುತ್ತಾಳೆ.
ನಾಣಿ ಇನಿ ಓರ್ ಕರುಮಮ್ ಇಲ್ಲೈ ನಾಲ್ ಅಯಲಾರುಮ್ ಅರಿಂದೊಳಿಂದಾರ್
ಪಾಣಿಯಾದು ಎನ್ನೈ ಮರುಂದು ಶೆಯ್ದು ಪಂಡು ಪಂಡಾಕ್ಕ ಉರುತಿರಾಗಿಲ್
ಮಾಣಿ ಉರುವಾಯ್ ಉಲಗಳಂದ ಮಾಯನೈ ಕಾಣಿಲ್ ತಲೈ ಮರಿಯುಮ್
ಆಣೈಯಾಲ್ ನೀರ್ ಎನ್ನೈ ಕಾಕ್ಕವೇಂಡಿಲ್ ಆಯ್ಪಾಡಿಕ್ಕೇ ಎನ್ನೈ ಉಯ್ತಿಡುಮಿನ್
ನಾಚಿಕೆ ಪಡುವುದರಿಂದ ಹೆಚ್ಚು ಪ್ರಯೋಜನವಿಲ್ಲ. ಸ್ಥಳದಲ್ಲಿದ್ದ ಜನರು ನನ್ನ ವಿಷಯ ತಿಳಿದುಕೊಂಡಿದ್ದಾರೆ. ನಾನು ಎಂಪೆರುಮಾನ್‌ನೊಂದಿಗೆ ಐಕ್ಯವಾಗುವುದಕ್ಕಿಂತ ಮುಂಚೆಯೇ ನಾನು ಇದ್ದ ಅಜ್ಞಾನದ ಸ್ಥಿತಿಯಲ್ಲಿ ನನ್ನನ್ನು ನೋಡಲು ಬಯಸಿದರೆ, ನಾನು ಅವರಿಂದ ಬೇರ್ಪಟ್ಟು ಈ ರೀತಿ ಬಳಲುವ ಮುಂಚೆ, ಯಾವುದೇ ವಿಳಂಬ ಮಾಡದೆ, ಸೂಕ್ತ ಪರಿಹಾರಗಳನ್ನು ಕೈಗೊಳ್ಳಿ, ನನ್ನನ್ನು ತಿರುವಾಯ್ಪ್ಪಾಡಿಗೆ (ಶ್ರೀ ಗೋಕುಲಂ) ಕರೆದುಕೊಂಡು ಹೋಗಿ. ನಾನು ವಾಮನ ರೂಪದಲ್ಲಿ ಅವತರಿಸಿದ ಮತ್ತು ಎಲ್ಲಾ ಲೋಕಗಳನ್ನು ಅಳೆದ ಎಂಪೆರುಮಾನನನ್ನು ಪೂಜಿಸಿದರೆ ನನ್ನ ರೋಗವು ಮಾಯವಾಗುತ್ತದೆ.
ಮೂರನೇ ಪಾಸುರಂ. ಕಣ್ಣನ ಕಳಪೆ ಪಾಲನೆಗಾಗಿ ಯಶೋದಾ ದೇವಿಯನ್ನು ದೂಷಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ತಂದೆಯಾಗಿ ಕಣ್ಣನನ್ನು ನಿಯಂತ್ರಿಸಬೇಕಿದ್ದ ಶ್ರೀ ನಂದಗೋಪನ ದಿವ್ಯ ಭವನದ ಮುಂದೆ ತನ್ನನ್ನು ತಲುಪಿಸಲು ಹೇಳುತ್ತಾಳೆ.
ತಂದೆಯುಮ್ ತಾಯುಮ್ ಉಟ್ರಾರುಮ್ ನಿರ್ಕ ತನಿವಳಿ ಪೋಯಿನಾಳ್ ಎನ್ನುಂ ಶೊಲ್ಲು
ವಂದ ಪಿನ್ನೈ ಪಳಿಕಾಪ್ಪರಿದು ಮಾಯವನ್ ವಂದುರುಕಾಟ್ಟುಗಿನ್ರಾನ್
ಕೊಂದಳಂಮಾಕ್ಕಿ ಪರಕ್ಕಳಿತ್ತು ಕುರುಮ್ಬು ಶೆಯ್ವಾನ್ ಓರ್ ಮಗನೈ ಪೆಟ್ರ
ನಂದಗೋಪಾಲನ್ ಕಡೈತಲೈಕ್ಕೇ ನಳ್ಳಿರುಟ್ಕಣ್ ಎನ್ನೈ ಉಯ್ತಿಡುಮಿನ್
ತಂದೆ, ತಾಯಿ ಮತ್ತು ಬಂಧುಗಳು ಇರುವಾಗ, ಅವಳು ತನ್ನಷ್ಟಕ್ಕೆ ತಾನೇ ಹೊರಟಳು, ಎಂಬ ಮಾತು ಜಗತ್ತಿನಲ್ಲಿ ಹರಡಿದ ನಂತರ, ಆ ಕಳಂಕವನ್ನು ತಡೆಯಲು ಸಾಧ್ಯವಿಲ್ಲ. ಸ್ವಂತವಾಗಿ ಹೋಗದೇ ಇರಲು ನನ್ನಿಂದ ಸಾಧ್ಯವಿಲ್ಲ. ಏಕೆಂದರೆ, ಅದ್ಭುತವಾದ ಚಟುವಟಿಕೆಗಳನ್ನು ಹೊಂದಿರುವ ಕಣ್ಣನು ನನ್ನ ಮುಂದೆಯೇ ತನ್ನ ರೂಪವನ್ನು ತೋರಿಸುತ್ತಿದ್ದಾನೆ ಮತ್ತು ನನ್ನನ್ನು ಆಕರ್ಷಿಸುತ್ತಿದ್ದಾನೆ. ಮಧ್ಯರಾತ್ರಿಯಲ್ಲಿ ಹೆಣ್ಣುಮಕ್ಕಳೊಂದಿಗೆ ಜಗಳವಾಡಿದ, ದೂಷಣೆಗೆ ಕಾರಣವಾದ ಮತ್ತು ಕುಚೇಷ್ಟೆ ಮಾಡುವ ಮಗನನ್ನು ಪಡೆದ ಶ್ರೀ ನಂದಗೋಪರ್ ಅವರ ದಿವ್ಯ ಭವನದ ಪ್ರವೇಶಕ್ಕೆ ನನ್ನನ್ನು ಕರೆದುಕೊಂಡು ಹೋಗು.
ನಾಲ್ಕನೆಯ ಪಾಸುರಂ. ಎಂಪೆರುಮಾನ್‌ಗೆ ಸಂಪೂರ್ಣವಾಗಿ ಅಧೀನವಾಗಿರುವ ತನ್ನನ್ನು ಯಮುನಾ ನದಿಯ ದಡದಲ್ಲಿ ಬಿಡುವಂತೆ ಆಕೆ ಅವರನ್ನು ಕೇಳುತ್ತಾಳೆ.
ಅಂಗೈ ತಲತ್ತಿಡೈ ಆಳಿಕೊಂಡಾನ್ ಅವನ್ ಮುಗತ್ತನ್ರಿ ವಿಳಿಯೇನ್ ಏನ್ರು
ಶೆಂಗಚ್ಚುಕೊಂಡು ಕಣ್ಣಾಡೈ ಆರ್ತು ಶಿರು ಮಾನಿಡವರೈ ಕಾಣಿಲ್
ನಾಣುಮ್ ಕೊಂಗೈ ತಲಮ್ ಇವೈ ನೋಕ್ಕಿ ಕಾಣೀರ್ ಗೋವಿಂದನುಕ್ಕಲ್ಲಾಲ್ ವಾಯಿಲ್ ಪೋಗ
ಇಂಗುತ್ತೈ ವಾಳ್ವೈ ಒಳಿಯವೇ ಪೋಯ್ ಯಮುನೈಕರೈಕ್ಕೆನ್ನೈ ಉಯ್ತಿಡುಮಿನ್
ಓ ತಾಯಂದಿರೇ! ನನ್ನ ಎದೆಯನ್ನು ಹತ್ತಿರದಿಂದ ನೋಡಿ. ಕೆಳವರ್ಗದವರನ್ನು ನೋಡಲು ನಾಚಿಕೆಪಡುವುದರಿಂದ ಅವು ತಮ್ಮನ್ನು ಕೆಂಪು ಸೆರಗಿನಿಂದ ಮುಚ್ಚಿಕೊಳ್ಳುತ್ತವೆ. ತನ್ನ ಸುಂದರವಾದ ಕೈಯಲ್ಲಿ ದಿವ್ಯವಾದ ಚಕ್ರವನ್ನು ಹಿಡಿದಿರುವ ಕಣ್ಣನ್‌ನ ಮುಖವನ್ನು ಹೊರತುಪಡಿಸಿ ಬೇರೆ ಯಾರನ್ನೂ ಅವು ನೋಡುವುದಿಲ್ಲ. ಅವು ಗೋವಿಂದನ ಹೊರತಾಗಿ ಬೇರೆ ಯಾರ ಮನೆಯ ಪ್ರವೇಶವನ್ನು ನೋಡುವುದಿಲ್ಲ. ಆದ್ದರಿಂದ ಇಲ್ಲಿ ವಾಸಿಸುವುದಕ್ಕಿಂತ ಉತ್ತಮವಾದ ಯಮುನಾ ನದಿಯ ದಡಕ್ಕೆ ನನ್ನನ್ನು ಕರೆದುಕೊಂಡು ಹೋಗಿ.
ಐದನೇ ಪಾಸುರಂ. ಅಲ್ಲಿದ್ದವರು ಅವಳ ಖಾಯಿಲೆ ಗೊತ್ತಾದ ಮೇಲೆ ತಕ್ಕ ಉಪಚಾರ ಮಾಡಬೇಕು ಎಂದು ಬೇಸರ ವ್ಯಕ್ತಪಡಿಸಿದರು. ಅವರು ತನಗೆ ಸಂಬಂಧಿಸಿದವರೆಂಬ ಕಾರಣ ಮಾತ್ರ ತನ್ನ ಖಾಯಿಲೆಯನ್ನು ಅವರು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವಳು ಹೇಳುತ್ತಾಳೆ.
ಆರ್ಕುಮ್ ಎನ್ ನೋಯ್ ಇದು ಅರಿಲಾಗಾದು ಅಮ್ಮನೈಮೀರ್ ತುಲದಿಪಡಾದೇ
ಕಾರ್ಕಡಲ್ ವಣ್ಣನ್ ಎನ್ಬಾನ್ ಒರುವನ್ ಕೈ ಕೊಂಡ ಯೋಗಮ್ ತಡವ ತೀರುಮ್
ನೀರ್ಕರೈ ನಿನ್ರ ಕಡಂಬೈ ಏರಿ ಕಾಳಿಯನ್ ಉಚ್ಚಿಯಿಲ್ ನಟ್ಟಮ್ ಪಾಯ್ನ್ದು
ಪೋರ್ಕಳಮಾಗ ನಿರುತ್ತಮ್ ಶೆಯ್ದ ಪೊಯ್ಗೈ ಕರೈಕ್ಕು ಎನ್ನೈ ಉಯ್ತಿಡುಮಿನ್
ಓ ತಾಯಂದಿರೇ! ನನ್ನ ವ್ಯಾಧಿ ಯಾರಿಗೂ ಅರ್ಥವಾಗುವುದಿಲ್ಲ. ದುಃಖಿಸದೇ, ನೀವು ನನ್ನನ್ನು, ಕಣ್ಣನು ಯಮುನಾ ದಡದಲ್ಲಿರುವ ಕದಂಬ ಮರವನ್ನು (ಇಂಡಿಯನ್ ಓಕ್) ಏರಿ ಕಾಳಿಯ ಎಂಬ ರಾಕ್ಷಸ ಹಾವಿನ ತಲೆಯ ಮೇಲೆ ಹಾರಿ ನರ್ತಿಸಿ ನದೀ ತೀರವನ್ನು ಯುದ್ಧಭೂಮಿಯನ್ನಾಗಿ ಮಾಡಿದ ಸ್ಥಳಕ್ಕೆ ಒಯ್ಯಿರಿ. ಕಪ್ಪು ಕಡಲ ವರ್ಣದ ಮೈಬಣ್ಣವನ್ನು ಹೊಂದಿರುವ ಕಣ್ಣನು ತನ್ನ ದಿವ್ಯ ಹಸ್ತಗಳಿಂದ ನನ್ನನ್ನು ಮೃದುವಾಗಿ ತಡವಿದರೆ, ಈ ರೋಗವು ನೀಗುತ್ತದೆ . ಇದು ತಕ್ಷಣ ಪರಿಹಾರವನ್ನು ಪಡೆಯುವ ಮಾರ್ಗವಾಗಿದೆ.
ಆರನೇ ಪಾಸುರಂ. ಋಷಿಪತ್ನಿಗಳ (ಋಷಿಗಳ ಪತ್ನಿಯರು) ಕೈಯಿಂದ ಕಣ್ಣನು ಆಹಾರವನ್ನು ಸೇವಿಸಿದ ಸ್ಥಳದಲ್ಲಿ ಅವಳನ್ನು ತಲುಪಿಸಲು ಅವಳು ಅವರಿಗೆ ಹೇಳುತ್ತಾಳೆ.
ಕಾರ್ತಣ್ ಮುಗಿಲುಮ್ ಕರುವಿಳೈಯುಮ್ ಕಾಯಾಮಲರುಮ್ ಕಮಲಪ್ಪೂವುಮ್
ಈರ್ತಿಡುಗಿನ್ರನ ಎನ್ನೈ ವಂದಿಟ್ಟು ಇರುಡೀಕೇಶನ್ ಪಕ್ಕಲ್ ಪೋಗೇ ಎನ್ರು
ವೇರ್ತು ಪಶಿತ್ತು ವಯಿರಶೈನ್ದು ವೇಂಡಡಿಶಿಲ್ ಉಣ್ಣುಮ್ಪೋದು
ಈದೆನ್ರು ಪಾರ್ತಿರುಂದು ನೆಡು ನೋಕ್ಕು ಕೊಳ್ಳುಮ್ ಪತ್ತವಿಲೋಶನತ್ತು ಉಯ್ತಿಡುಮಿನ್
ಮಳೆಗಾಲದಲ್ಲಿ ರೂಪುಗೊಂಡ ಮೋಡಗಳು, ಕರುವಿಲಾ ಹೂವು (ಅಂಕುಡೊಂಕಾದ ಬಳ್ಳಿಯಿಂದ), ಕಾಯಾಂಬು (ನೇರಳೆ ಬಣ್ಣದ ಹೂವು) ಮತ್ತು ಕಮಲದ ಹೂವುಗಳು ನನ್ನ ಮುಂದೆ ನಿಂತು “ನೀನೂ ಹೃಷೀಕೇಶನೆಡೆಗೆ (ಎಂಪೆರುಮಾನ್) ಹೋಗು ಎಂದು ಒತ್ತಾಯಿಸಿದವು. ಆದ್ದರಿಂದ, ಹಸುಗಳನ್ನು ಮೇಯಿಸಿ ಬೆವರುತ್ತಿದ್ದ, ಹಸಿವಿನಿಂದ ದಣಿದಿದ್ದ, ಋಷಿಗಳ ಪತ್ನಿಯರ ಬರುವಿಕೆಗಾಗಿ ಕಾದು ಕುಳಿತಿದ್ದ ಕಣ್ಣನು ಬಹುಕಾಲ ತಂಗಿದ್ದ ಸ್ಥಳ ಭಕ್ತವಿಲೋಚನಕ್ಕೆ ನನ್ನನ್ನು ಕರೆದುಕೊಂಡು ಹೋಗಿ; ಋಷಿ ಪತ್ನಿಯರು ಅವನಿಗೆ ಆಹಾರ ತಂದು, “ಇದು ನಿನಗೆ ಬೇಕಾದಷ್ಟು ಆಹಾರವನ್ನು ತಿನ್ನುವ ಸಮಯ” ಎಂದು ಹೇಳುವರು.
ಏಳನೇ ಪಾಸುರಂ. ಈ ದುಃಖವು ಯಾವಾಗ ಕೊನೆಗೊಳ್ಳುತ್ತದೆ ಎಂದು ಕೇಳಿದಾಗ, ಅವಳು ಅವನ ದಿವ್ಯವಾದ ತುಳಸಿ ಮಾಲೆಯನ್ನು ಧರಿಸಿದರೆ ಮಾತ್ರ ಕೊನೆಗೊಳ್ಳುತ್ತದೆ ಎಂದು ಅವಳು ಹೇಳುತ್ತಾಳೆ; ಅವನ ವಿಜಯದ ಮಾಲೆಯಿರುವ ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ಅವಳು ಅವರಿಗೆ ಕೇಳುತ್ತಾಳೆ.
ವಣ್ಣನ್ ತಿರಿವುಮ್ ಮನಂ ಕುಳೈವುಮ್ ಮಾನಮ್ ಇಲಾಮೈಯುಮ್ ವಾಯ್ ವೆಳುಪುಮ್
ಉಣ್ಣಲ್ ಉರಾಮೈಯುಮ್ ಉಳ್ ಮೆಲಿವುಮ್ ಓದನೀರ್ ವಣ್ಣನ್ ಎನ್ಬಾನ್ ಒರುವನ್
ತಣ್ಣನ್ ತುಳಾಯ್ ಎನ್ನುಮ್ ಮಾಲೈ ಕೊಂಡು ಶೂಟ್ಟ ತಣಿಯುಮ್ ಪಿಲಂಬನ್ ತನ್ನೈ
ಪಣ್ಣಾಳಿಯ ಬಲದೇವನ್ ವೆನ್ರ ಪಾಂಡಿವಡತ್ತು ಎನ್ನೈ ಉಯ್ತಿಡುಮಿನ್
ನನ್ನ ಮೈಬಣ್ಣದಲ್ಲಿ ಬದಲಾವಣೆ, ನನ್ನ ಮನಸ್ಸಿನಲ್ಲಿ ದಣಿವು, ನಾಚಿಕೆಯಿಲ್ಲದ ಸ್ಥಿತಿ, ನನ್ನ ತುಟಿಗಳಲ್ಲಿ ಬಿಳಿಚುವಿಕೆ, ನನ್ನ ಜ್ಞಾನದಲ್ಲಿ ಸಂಕೋಚನವಾಗಿದೆ ಮತ್ತು ನಾನು ಆಹಾರವನ್ನು ಬಯಸುವುದಿಲ್ಲ. ಸಾಗರದ ಮೈಬಣ್ಣವನ್ನು ಹೊಂದಿರುವ ಮತ್ತು ಯಾವುದೇ ಹೋಲಿಕೆಯಿಲ್ಲದವನು ಎಂದು ಪ್ರಸಿದ್ಧವಾಗಿ ಕರೆಯಲ್ಪಡುವ ಕಣ್ಣನು ಧರಿಸಿರುವ ತಂಪಾದ, ಸುಂದರವಾದ ದೈವೀಕ ತುಳಸಿ ಮಾಲೆಯನ್ನು ನಾನು ಧರಿಸಿದಾಗ ಇವೆಲ್ಲವೂ ನನ್ನನ್ನು ಬಿಟ್ಟು ಹೋಗುತ್ತವೆ. ನೀವುಗಳು ಅದನ್ನು ಇಲ್ಲಿಗೆ ತರಲು ಸಾಧ್ಯವಿಲ್ಲದ ಕಾರಣ, ನನ್ನನ್ನು ಪಾಂಡೀರಮ್ ಎಂಬ ಆಲದ ಮರ ಇರುವ ಸ್ಥಳಕ್ಕೆ ಕರೆದುಕೊಂಡು ಹೋಗಿ. ಇಲ್ಲಿಯೇ ಕಣ್ಣನ ಅಣ್ಣ ಬಲರಾಮನು ಪ್ರಲಂಬಾಸುರನೆಂಬ ರಾಕ್ಷಸನನ್ನು ಅವನ ಮೂಳೆಗಳನ್ನು ಮುರಿದು ಕೊಂದನು.
ಎಂಟನೆಯ ಪಾಸುರಂ. ಆಕೆ ತನ್ನನ್ನು ಗೋವುಗಳನ್ನು ರಕ್ಷಿಸಿದ ಸ್ಥಳವಾದ ಗೋವರ್ಧನಂಗೆ ಕರೆದುಕೊಂಡು ಹೋಗುವಂತೆ ಅವರಿಗೆ ಹೇಳುತ್ತಾಳೆ.
ಕಟ್ರಿನಮ್ ಮೇಯ್ಕಿಲುಮ್ ಮೇಯ್ಕ ಪೆಟ್ರಾನ್ ಕಾಡು ವಾಳ್ ಶಾದಿಯುಮ್ ಆಗ ಪೆಟ್ರಾನ್
ಪಟ್ರಿ ಉರಲಿಡೈ ಆಪ್ಪುಮ್ ಉಂಡಾನ್ ಪಾವಿಗಾಳ್ ಉಂಗಳುಕ್ಕು ಏಚ್ಚುಕೊಲೋ
ಕಟ್ರನ ಪೇಶಿ ವಶವುಣಾದೇ ಕಾಲಿಗಳ್ ಉಯ್ಯ ಮಳೈ ತಡುತ್ತು
ಕೊಟ್ಟ್ರಕುಡೈಯಾಗ ಏನ್ದಿ ನಿನ್ರ ಗೋವರ್ಧನತ್ತು ಎನ್ನೈ ಉಯ್ತಿಡುಮಿನ್
ಕಣ್ಣನು ಕರುಗಳ ಮಂದೆಯನ್ನು ಮೇಯಿಸುವುದನ್ನು ತನ್ನ ಪೂರ್ಣ ಸಮಯದ ಕೆಲಸವಾಗಿ ಹೊಂದಿದ್ದನು. ಮನೆ ತೊರೆದು ಕಾಡುಗಳಲ್ಲಿ ವಾಸಿಸುವ ಕುರುಬರ ಕುಲದಲ್ಲಿ ಅವನೂ ಹುಟ್ಟಿದವನಾದನು. ಬೆಣ್ಣೆ ಕದಿಯುವ ಕೃತ್ಯದಲ್ಲಿ ಸಿಕ್ಕಿಬಿದ್ದು ಅವನು ಒರಳಿಗೆ ಕಟ್ಟಲ್ಪಟ್ಟವನು. ಅವನ ಗುಣಗಳನ್ನು ದೋಷವೆಂದು ತಪ್ಪಾಗಿ ಗ್ರಹಿಸುವ ಓ ಕೆಟ್ಟ ಜನರೇ! ನಾನು ನಿಮ್ಮನ್ನು ದೂಷಿಸಲು ಇವೇ ಕಾರಣವಾದವು! ನೀನು ಕೇಳಿದ್ದನ್ನು ನನಗೆ ಹೇಳುತ್ತಾ ನನ್ನಿಂದ ದೂಷಣೆಗೊಳಗಾಗುವ ಬದಲು, ಆಲಿಕಲ್ಲು ಮಳೆಯಿಂದ ಗೋವುಗಳನ್ನು ರಕ್ಷಿಸಲು ಎಂಪೆರುಮಾನ್ ನು ವಿಜಯದ ಛತ್ರಿಯಂತೆ ಬಳಸಿದ ಗೋವರ್ಧನ ಬೆಟ್ಟದ ಸಮೀಪಕ್ಕೆ ನನ್ನನ್ನು ಕರೆದುಕೊಂಡು ಹೋಗಿ.
ಒಂಭತ್ತನೇ ಪಾಸುರಂ. ಅವರು ಯಾವುದೇ ಆಪಾದನೆಯಿಂದ ತಪ್ಪಿಸಿಕೊಳ್ಳಲು ಬಯಸಿದರೆ ತನ್ನನ್ನು ದ್ವಾರಕೆಗೆ ಕರೆದೊಯ್ಯಬೇಕೆಂದು ಅವಳು ಅವರಿಗೆ ಹೇಳುತ್ತಾಳೆ.
ಕೂಟ್ಟಿಲ್ ಇರುಂದು ಕಿಳಿ ಎಪ್ಪೋದುಮ್ ಗೋವಿಂದಾ ಗೋವಿಂದಾ ಎನ್ರು ಅಳೈಕ್ಕುಂ
ಊಟ್ಟ ಕೊಡಾದು ಶೆರುಪ್ಪನ್ ಆಗಿಲ್ ಉಲಗು ಅಳನ್ದಾನ್ ಎನ್ರು ಉಯರ ಕೂವುಮ್
ನಾಟ್ಟಿಲ್ ತಲೈ ಪಳಿ ಎಯ್ದಿ ಉಂಗಳ್ ನನ್ಮಯ್ ಇಳಂದು ತಲೈಯಿಡಾದೇ
ಶೂಟ್ಟುಯರ್ ಮಾಡಂಗಳ್ ಶೂಳ್ನ್ದು ತೋನ್ರುಮ್ ತುವರಾಪದಿಕ್ಕು ಎನ್ನೈ ಉಯ್ತಿಡುಮಿನ್
ನಾನು ಸಾಕುತ್ತಿದ್ದ ಗಿಳಿ ಅದರ ಪಂಜರದಿಂದ ಗೋವಿಂದಾ! ಗೋವಿಂದಾ! ಎಂದು ಕರೆಯುತ್ತಿತ್ತು!
ನಾನು ಅದಕ್ಕೆ ಆಹಾರವನ್ನು ನೀಡದೆ ಶಿಕ್ಷಿಸಿದರೆ, ಅದು ಉಲಗಾನ್ಡ ಪೆರುಮಾನೇ ಎಂದು ಕರೆಯುತ್ತಿತ್ತು! ನಾನು ಈ ದೈವೀಕ ನಾಮಗಳನ್ನು ಕೇಳಿದರೆ, ನಾನು ಕುಸಿದು ಮೂರ್ಛೆ ಹೋಗುತ್ತೇನೆ. ಆದುದರಿಂದ, ನಿನ್ನ ತಲೆಯನ್ನು ಬಾಗಿಸಿ, ಇಹಲೋಕದಲ್ಲಿ ಬಹುದೊಡ್ಡ ಆಪಾದನೆಯನ್ನು ಗಳಿಸುವುದನ್ನೂ ಮತ್ತು ನಿನ್ನ ಹೆಸರನ್ನು ಹಾಳುಮಾಡಿಕೊಳ್ಳುವುದನ್ನು ತಡೆಯಲು, ಅತಿ ಎತ್ತರದ ಮಹಡಿಗಳಿಂದ ಸುತ್ತುವರಿದಿರುವ, ಬೆಳಗುವ ದ್ವಾರಕಕ್ಕೆ ನನ್ನನ್ನು ಕರೆದುಕೊಂಡು ಹೋಗು.
ಹತ್ತನೇ ಪಾಸುರಂ. ಎಂಪೆರುಮಾನ್ ನಿವಾಸಕ್ಕೆ ಕರೆದೊಯ್ಯಲು ಪ್ರಾರ್ಥಿಸಿದ ಈ ಪಾಸುರಂಗಳನ್ನು ಪಠಿಸುವವರು ಅರ್ಚಿರಾದಿ ಮಾರ್ಗದ ಮೂಲಕ ಶ್ರೀವೈಕುಂಠವನ್ನು ಪಡೆಯುತ್ತಾರೆ ಎಂದು ಹೇಳುವ ಮೂಲಕ ಅವಳುಪಧಿಗವನ್ನು ಪೂರ್ಣಗೊಳಿಸುತ್ತಾಳೆ.
ಮನ್ನು ಮಧುರೈ ತೊಡಕ್ಕಮ್ ಆಗ ವಣ್ ತುವರಾಪದಿ ತನ್ನಳವುಮ್
ತನ್ನೈ ತಮರ್ ಉಯ್ತು ಪೆಯ್ಯವೇಂಡಿ ತಾಳ್ ಕುಳಲಾಳ್ ತುಣಿನ್ದ ತುಣಿವೈ
ಪೊನ್ನಿಯಲ್ ಮಾಡಮ್ ಪೊಲಿಂದು ತೋನ್ರುಮ್ ಪುದುವೈಯರ್ ಕೋನ್ ವಿಟ್ಟುಶಿತ್ತನ್ ಗೋದೈ
ಇನ್ನ್ನಿಶೈಯಾಲ್ ಶೊನ್ನ ಶೆಂಜೋಲ್ ಮಾಲೈ ಏತ್ತ ವಲ್ಲಾರ್ಕು ಇಡಮ್ ವೈಗುಂದಮೇ
ಆಂಡಾಳ್ ನೀಳ ಕೇಶಾಲಂಕಾರವನ್ನು ಹೊಂದಿದ್ದಾಳೆ ಮತ್ತು ಅವಳು ಚಿನ್ನದ ಮಹಲುಗಳಿಂದ ಪ್ರಕಾಶಮಾನವಾಗಿರುವ ಶ್ರೀವಿಲ್ಲಿಪುತ್ತೂರಿನಲ್ಲಿ ನೆಲೆಸಿರುವವರ ಮುಖ್ಯಸ್ಥರಾಗಿರುವ ಪೆರಿಯಾಳ್ವಾರ್ ಅವರ ದೈವೀಕ ಮಗಳು. ಅವಳು ಹತ್ತು ಪಾಸುರಂಗಳನ್ನು ರಚಿಸಿದ್ದಳು, ಅದರಲ್ಲಿ ಅವಳು ತನ್ನ ಸಂಬಂಧಿಕರಿಗೆ ಮಥುರಾದಿಂದ ಪ್ರಾರಂಭಿಸಿ ದ್ವಾರಕದಲ್ಲಿ ಕೊನೆಗೊಳ್ಳುವ ದೈವೀಕ ಸ್ಥಳಗಳಿಗೆ ತನ್ನನ್ನು ಕರೆದುಕೊಂಡು ಹೋಗಬೇಕೆಂದು ದೃಢವಾಗಿ ಹೇಳಿದ್ದಳು. ಮಧುರವಾದ ಸಂಗೀತಕ್ಕೆ ಜೋಡಿಸಲಾದ ಪದಗಳ ಮಾಲೆಯಂತಿರುವ ಈ ದಿವ್ಯ ಸ್ತೋತ್ರಗಳನ್ನು ಪಠಿಸುವ ಸಾಮರ್ಥ್ಯವುಳ್ಳವರಿಗೆ ಪರಮಪದವೇ ವಾಸಸ್ಥಾನವಾಗಿರುತ್ತದೆ.
ಅಡಿಯೇನ್ ಯತಿರಾಜ ರಾಮಾನುಜ ದಾಸನ್
ಮೂಲ: https://divyaprabandham.koyil.org/index.php/2020/05/nachchiyar-thirumozhi-12-simple/
ಸಂಗ್ರಹಣಾ ಸ್ಥಾನ https://divyaprabandham.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org