ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ಮೊದಲನೇ ತಿರುಮೊಳಿ – ತೈಯೊರು ತಿಂಗಳ್

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ

ನಾಚ್ಚಿಯಾರ್  ತಿರುಮೊಳಿ

<< ತನಿಯನ್

ಆಂಡಾಳ್ ಎಂಪೆರುಮಾನ್ ಅನ್ನು ತಿರುಪಾವೈನಲ್ಲಿ ರೀತಿ/ಗುರಿ ಎಂದು ಪರಿಗಣಿಸಿದ್ದಾಳೆ. ಯಾವುದೇ ಸ್ವಾರ್ಥವಿಲ್ಲದೆ ಆ ಎಂಪೆರುಮಾನ್‌ಗೆ ಕೈಂಕರ್ಯವನ್ನು (ಸೇವೆ) ನಡೆಸುವುದೊಂದೇ  (ಸೇವೆಯನ್ನು ಅವನ ಸಂತೋಷಕ್ಕಾಗಿ ಸಲ್ಲಿಸಲಾಗುತ್ತಿದೆಯೇ ಹೊರತು ನಮ್ಮ ಸಂತೋಷಕ್ಕಾಗಿ ಅಲ್ಲ) ಅವನನ್ನು ಪಡೆಯುವ ಪ್ರತಿಫಲ ಎಂದು ಅವಳು ಬಹಿರಂಗಪಡಿಸಿದಳು. ಇಂತಹ ಆಲೋಚನೆಯನ್ನು ಹೊಂದಿರುವವರಿಗೆ  ಎಂಪೆರುಮಾನ್ ಈ ಫಲವನ್ನು ನೀಡುತ್ತಾನೆ. ಆದಾಗ್ಯೂ, ಆಂಡಾಳ್ ವಿಷಯದಲ್ಲಿ, ಎಂಪೆರುಮಾನ್ ಅವಳನ್ನು ಸ್ವೀಕರಿಸಲು ಮತ್ತು ಅವಳ ಆಸೆಯನ್ನು ಪೂರೈಸಲು ಬರಲಿಲ್ಲ. ಎಂಪೆರುಮಾನ್‌ನ ಮೇಲೆ ತನಗಿದ್ದ ಅಪರಿಮಿತ ಪ್ರೀತಿ ಮತ್ತು ಅವನು ತನ್ನನ್ನು ಸ್ವೀಕರಿಸಲು ಬರದ ಕಾರಣ ಅವಳು ಗೊಂದಲಕ್ಕೊಳಗಾದಳು. ಸೀತಾ ದೇವಿ ಸೇರಿದಂತೆ ಅಯೋಧ್ಯೆಯಲ್ಲಿದ್ದವರು ಶ್ರೀರಾಮನ ಹೊರತಾಗಿ ಬೇರೆ ಯಾವುದೇ ದೇವತೆಯನ್ನು ಪೂಜಿಸದಿದ್ದರೂ, ಎಲ್ಲಾ ದೇವತೆಗಳ ಬಳಿಗೆ ಹೋಗಿ ಶ್ರೀರಾಮನ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದರು. ಬೇರೆ ಯಾವುದೇ ರೂಪದಲ್ಲಿ ಶ್ರೀರಾಮನನ್ನು ಅನುಭವಿಸುವುದಿಲ್ಲ ಎಂದು ಹೇಳಿದ ಹನುಮಂತನೂ ಸಹ ವಾಚಸ್ಪತಿ ದೇವತೆಯ ಬಳಿಗೆ ಹೋಗಿ ಶ್ರೀರಾಮನ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದನು. ಅದೇ ರೀತಿಯಲ್ಲಿ, ಆಂಡಾಳ್ ಇಲ್ಲಿ ಎಮ್ಪೆರುಮಾನ್ ಜೊತೆ ಒಂದಾಗಲು ಕಾಮದೇವನನ್ನು (ಕ್ಯುಪಿಡ್, ಪ್ರೀತಿಯ ದೇವರು) ಪ್ರಾರ್ಥಿಸುತ್ತಿದ್ದಾರೆ. ಭಗವತ್ ಭಕ್ತಿಯಿಂದ (ಎಂಪೆರುಮಾನ್ ಮೇಲಿನ ಭಕ್ತಿ) ಹೊರಹೊಮ್ಮುವ ಅಜ್ಞಾನವು ಬಹಳ ದೊಡ್ಡದಾಗಿದೆ ಎಂದು ನಮ್ಮ ಪೂರ್ವಾಚಾರ್ಯರು (ಗುರುಗಳು) ಹೇಳಿದ್ದಾರೆ. ಪೆರಿಯಾಳ್ವಾರ್ ಎಂಪೆರುಮಾನ್‌ಗೆ ಹೂವುಗಳಿಂದ ಮಾಡಿದ ಮಾಲೆಗಳನ್ನು ಅರ್ಪಿಸಿದಂತೆಯೇ, ಆಂಡಾಳ್ ಕೂಡ ಕಾಮದೇವನಿಗೆ, ಅವನು ಬಯಸಿದ ಕಾಡು ಹೂವುಗಳನ್ನುಎಂಪೆರುಮಾನ್‌ನೊಂದಿಗೆ ಅವಳನ್ನು ಐಕ್ಯಗೊಳಿಸಲು ಅರ್ಪಿಸುತ್ತಾಳೆ. ಆಂಡಾಳ್ ಈ ರೀತಿ ಮಾಡಿದರೂ ಸಹ, ಎಂಪೆರುಮಾನ್‌ನಿಂದ ಅವಳ ಪ್ರತ್ಯೇಕತೆಯ ದುಃಖಕ್ಕೆ ಇದು ಸ್ವೀಕಾರಾರ್ಹವಾಗಿದೆ.  ಆದರೆ ನಾವು ಇತರ ದೇವತೆಗಳನ್ನು ಪೂಜಿಸಿದರೆ, ಅದು ನಮ್ಮ ಸ್ವರೂಪಕ್ಕೆ (ಮೂಲ ಸ್ವಭಾವಕ್ಕೆ) ಹೊಂದಿಕೆಯಾಗುವುದಿಲ್ಲ.

ಮೊದಲನೇ ಪಾಸುರಂ. ಇದರಲ್ಲಿ ಅವಳು ಕಾಮನ್ ಮತ್ತು ಅವನ ಸಹೋದರ ಸಾಮನ್ ನನ್ನು ಪೂಜಿಸುವ ವಿಧಾನವನ್ನು ವಿವರಿಸುತ್ತಾಳೆ.

ತೈ ಒರು ತಿಂಗಳುಮ್ ತರೈ ವಿಳಕ್ಕಿ ತಣ್ ಮಂಡಲಮಿಟ್ಟು ಮಾಶಿ ಮುನ್ನಾಳ್

ಐಯ ನುಣ್ ಮಣಲ್ ಕೊಂಡು ತೆರು ಅಣಿನ್ದು ಅಳಗನಿಕ್ಕು ಅಲಂಗರಿತ್ತು ಅನಂಗ ದೇವಾ!

ಉಯ್ಯವುಮ್ ಅಂಗೊಲೋ ಎನ್ರು ಶೊಲ್ಲಿ ಉನ್ನೈಯುಮ್ ಉಂಬಿಯೆಯುಮ್ ತೊಳುದೇನ್

ವೆಯ್ಯದೋರ್ ತಯಲ್ ಉಮಿಳ್ ಚಕ್ಕರ ಕೈ ವೇಂಗಡವರ್ಕು ಎನ್ನೈ ವಿದಿಕ್ಕಿಟ್ರಿಯೇ

ತೈ ತಿಂಗಳ (ತಮಿಳ್) ಉದ್ದಕ್ಕೂ, ಅವನು ಬರಲಿರುವ ಜಾಗದ ನೆಲವನ್ನು ನಾನು ಒರೆಸುತ್ತಿದ್ದೆ. ನಾನು ಚೆನ್ನಾಗಿರುವ ವೇದಿಕೆಯನ್ನು ಮಾಡಿದ್ದೆ (ಮಂಡಲ ಪೂಜೆಯನ್ನು ನೆರವೇರಿಸುವುದಕ್ಕಾಗಿ). ಮಾಶಿಯ (ತಮಿಳ್) ತಿಂಗಳ ಮೊದಲ ಹದಿನೈದು ದಿನಗಳವರೆಗೆ, ನಾನು ಅವನು ಬರುವ ಬೀದಿಯನ್ನು ಸುಂದರವಾದ, ಸಣ್ಣದಾದ ಉತ್ತಮ  ಮರಳಿನಿಂದ ಅಲಂಕರಿಸಿದ್ದೆ (ಅದು ಅವನ ಮೃದುವಾದ ಪಾದಗಳಿಗೆ ನೋವು ಉಂಟುಮಾಡುವುದಿಲ್ಲ). ನಾನು ಅವನನ್ನು ನೋಡಿ ಹೇಳಿದೆ  “ಓ ಮನ್ಮಥ! ನನ್ನ ಆಸೆಯನ್ನು ಪೂರೈಸುವೆಯಾ?” ನಾನು ನಿನ್ನನ್ನು ಮತ್ತು ನಿನ್ನ ಸಹೋದರ ಸಾಮನ್‌ನನ್ನು ಆರಾಧಿಸಿದ್ದೇನೆ. ಅದ್ವಿತೀಯ, ಉರಿಯುತ್ತಿರುವ ದಿವ್ಯವಾದ ಚಕ್ರವನ್ನು ತನ್ನ ದಿವ್ಯ ಹಸ್ತಗಳಲ್ಲಿ ಹೊಂದಿರುವ ತಿರುವೇಂಗಡಮುಡಯನಿಗೆ ನೀನು ನನ್ನನ್ನು ಅಧೀನಗೊಳಿಸಬೇಕು.

ಎರಡನೇ ಪಾಸುರಂ. ಅವಳು ತನ್ನ ನೋಂಬು ವಿಧಾನವನ್ನು ಮತ್ತಷ್ಟು ವಿವರಿಸುತ್ತಾಳೆ ಮತ್ತು ತನ್ನನ್ನು ಎಂಪೆರುಮಾನ್‌ಗೆ ತಲುಪಿಸಲು ಕಾಮನ್‌ನನ್ನು ಕೇಳುತ್ತಾಳೆ.

ವೆಳ್ಳೈ ನುಣ್ ಮಣಲ್ ಕೊಂಡು ತೆರು ಅಣಿನ್ದು  ವೆಳ್ ವರೈಪ್ಪದನ್ ಮುನ್ನಮ್ ತುರೈ ಪಡಿಂದು

ಮುಳ್ಳುಮ್ ಇಲ್ಲಾ ಶುಳ್ಳಿ ಎರಿ ಮಡುತ್ತು ಮುಯನ್ರು ಉನ್ನೈ ನೋರ್ಕಿನ್ರೇನ್ ಕಾಮದೇವಾ!

ಕಳ್ಳವಿಳ್ ಪೂಂಕಣೈೆ ತೊಡುತ್ತುಕೊಂಡು ಕಡಲ್ ವಣ್ಣನ್ ಎನ್ಬದೋರ್  ಪೇರ್ ಎಳುದಿ

ಪುಳ್ಳಿನೈ ವಾಯ್ ಪಿಳಂದಾನ್ ಎನ್ಬದೋರ್ ಇಲಕ್ಕಿನಿಲ್ ಪುಗ ಎನ್ನೈ ಎಯ್ ಕ್ಕಿಟ್ರಿಯೇ 

ಓ ಮನ್ಮಥ! ನೀನು ಬರುವ ಬೀದಿಯನ್ನು ನಾನು ಬಿಳಿ ಹಾಗು ಉತ್ತಮವಾದ ಮರಳಿನಿಂದ (ಮಾದರಿಗಳಂತೆ)  ಅಲಂಕರಿಸುತ್ತೇನೆ. ನಾನು ಬೆಳಗಾಗುವುದರೊಳಗೆ ನದಿಯ ದಡಕ್ಕೆ ಹೋಗಿ ಚೆನ್ನಾಗಿ ಮುಳುಗಿ (ನದಿ ನೀರಿನಲ್ಲಿ) ಸ್ನಾನ ಮಾಡುತ್ತೇನೆ. ನಾನು ಬೆಂಕಿಗೆ ಯಾವುದೇ ಮುಳ್ಳುಗಳಿಲ್ಲದ ಉರುವಲನ್ನು ಸೇರಿಸುತ್ತೇನೆ ಮತ್ತು ನೋಂಬು (ತಪಸ್ಸು, ಉಪವಾಸ ಇತ್ಯಾದಿಗಳನ್ನು ಒಳಗೊಂಡಂತಹ ಆಚರಣೆ) ಅನ್ನು ಆಚರಿಸುತ್ತೇನೆ. ನೀನು, ಸಾಗರದ ದಿವ್ಯ ಮೈಬಣ್ಣವನ್ನು ಹೊಂದಿರುವ ಎಂಪೆರುಮಾನ್‌ನ ದಿಕ್ಕಿಗೆ ಜೇನು ತೊಟ್ಟಿಕ್ಕುವ ಹೂವಿನ ಪ್ರೇಮಬಾಣಗಳನ್ನು ಬಿಡಿಸಿ ನಾನು ಅವನನ್ನು ಅಪ್ಪಿಕೊಳ್ಳುವಂತೆ ಮಾಡಬೇಕು.

ಮೂರನೇ ಪಾಸುರಂ. ಅವನು (ಮನ್ಮಥ) ತನ್ನನ್ನು ಅವಳು ನಿಂದಿಸುವುದನ್ನು ಬಯಸದಿದ್ದರೆ, ಅವನು ತನ್ನನ್ನು ತಿರುವೇಂಗಡಮುದಾಯನಿಗೆ ತಲುಪಿಸಬೇಕೆಂದು ಅವಳು ಹೇಳುತ್ತಾಳೆ.

ಮತ್ತ ನನ್  ನರುಮಲರ್ ಮುರುಕ್ಕ ಮಲರ್ ಕೊಂಡು ಮುಪ್ಪೋದುಂ ಉನ್ ಅಡಿ ವಣಂಗಿ

ತತ್ತುವಂಇಲಿ ಎನ್ರು  ನೆಂಜೆರಿಂದು ವಾಶಗತ್ತಳಿತ್ತುನ್ನೈ ವೈದಿಡಾಮೇ

ಕೊತ್ತಲರ್ ಪೂಂಕಣೈೆ ತೊಡುತ್ತುಕ್ಕೊಂಡು ಗೋವಿಂದನ್ ಎನ್ಬದೋರ್ ಪೇರ್ ಎಳುದಿ

ವಿತ್ತಗನ್ ವೇಂಗಡವಾಣನ್ ಎನ್ನುಂ ವಿಳಕ್ಕಿನಿಲ್ ಪುಗ ಎನ್ನೈ ವಿದಿಕ್ಕಿಟ್ರಿಯೇ

ನೇರಳೆ ಬಣ್ಣದ ಸಂಪಿಗೆ ಹೂವುಗಳು ಮತ್ತು ಪಲಾಶ ಹೂವುಗಳನ್ನು ತೆಗೆದುಕೊಂಡು, ನಾನು ದಿನಕ್ಕೆ ಮೂರು ಬಾರಿ ನಿಮ್ಮ ಪಾದಗಳಿಗೆ ಬೀಳುತ್ತೇನೆ (ಇದರಿಂದ ನೀವು ನನ್ನ ಆಸೆಯನ್ನು ಪೂರೈಸಲೆಂದು). ಇದಾದ ನಂತರವೂ ನನ್ನ ಆಸೆ ಈಡೇರದಿದ್ದರೆ, ನನ್ನ ಹೃದಯವು ಕುದಿಯಲು ಪ್ರಾರಂಭಿಸುವುದು ಮತ್ತು ನಾನು ಪಟ್ಟಣವನ್ನು ಸುತ್ತುತ್ತಾ, “ಮನ್ಮಥನು ಫಲವನ್ನು ನೀಡುವ ಸತ್ಯವಂತ ದೇವತೆಯಲ್ಲ, ಅವನು ಸುಳ್ಳು ದೇವತೆ” ಎಂದು ಹೇಳುತ್ತಾ ನಿನ್ನ ಗೌರವವನ್ನು ಹಾಳುಮಾಡುತ್ತೇನೆ. ನಾನು ಇದನ್ನು ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ನಿನ್ನ ಬಿಲ್ಲಿನ ಮೇಲೆ ಹೊಸದಾಗಿ ಅರಳಿದ ಹೂವುಗಳ ಗೊಂಚಲುಗಳ ಬಾಣಗಳನ್ನು ಬಿಡಿಸಿ, ಹೃದಯದಲ್ಲಿ ‘ಗೋವಿಂದ’ ನಾಮವನ್ನು ಬರೆಯಬೇಕು ಮತ್ತು ಅದ್ಭುತವಾದ ಅಸ್ತಿತ್ವವಾದ ತಿರುವೇಂಗಡಮುಡಯನ ಪ್ರಕಾಶಮಾನ ದೀಪವನ್ನು ತಲುಪುವಂತೆ ಮಾಡಬೇಕು.

ನಾಲ್ಕನೆಯ ಪಾಸುರಂ. ಇದರಲ್ಲಿ ಅವಳು ತನ್ನ ಅತಿಯಾದ ದುಃಖವನ್ನು ಬಹಿರಂಗಪಡಿಸುತ್ತಾಳೆ.

ಶುವರಿಲ್ ಪುರಾಣ! ನಿನ್ ಪೇರ್ ಏಳುದಿ ಶುರವನರ್ ಕೊಡಿಕ್ಕಳುಂ ತುರಂಗಂಗಳುಂ

ಕವರಿ ಪಿಣಾಕ್ಕಳುಂ ಕರುಮ್ಬು ವಿಲ್ಲುಮ್ ಕಾಟ್ಟಿ ತಂದೇನ್ ಕಂಡಾಯ್ ಕಾಮದೇವಾ!

ಅವರೈ ಪಿರಾಯಮ್ ತೊಡಂಗಿ ಎನ್ರುಮ್ ಆದರಿತ್ತು ಎಳುನ್ದ ಎನ್ ತಡಂ ಮುಲೈಗಳ್ 

ತುವರೈ ಪಿರಾನುಕ್ಕೇ ಶಂಗರ್ಪಿತ್ತು ತೊಳುದು ವೈತ್ತೇನ್  ಒಲ್ಲೈ ವಿದಿಕ್ಕಿಟ್ರಿಯೇ

ಓ ಅನಾದಿಕಾಲದಿಂದ ಇರುವವನೇ! ನಾನು ನಿನ್ನ ಹೆಸರನ್ನು ಗೋಡೆಗಳ ಮೇಲೆ ಬರೆದಿದ್ದೇನೆ ಮತ್ತು ಮೀನಿನ ಅಂಕಿತದ (ಮನ್ಮಥನ ಧ್ವಜದ ಮೇಲೆ ಮೀನುಗಳಿವೆ) ಧ್ವಜಗಳು, ಕುದುರೆಗಳು, ಹೆಂಗಸರು ಮತ್ತು ಕಬ್ಬಿನಿಂದಮಾಡಿದ ಬಿಲ್ಲುಗಳನ್ನು (ಇದು ಕೂಡ ಮನ್ಮಥನ ಗುರುತು) ನಿನಗೆ ಅರ್ಪಿಸಿದೆ. ನಾನು (ಕಣ್ಣನನ್ನು) ಚಿಕ್ಕಂದಿನಿಂದಲೂ ಪೂಜಿಸುತ್ತಿದ್ದೇನೆ.  ದ್ವಾರಕಾ ರಾಜನಾದ ಕಣ್ಣನನ್ನುಆದರಿಸಲು ರೂಪುಗೊಂಡ ವಿಸ್ತಾರವಾದ ನನ್ನ ದೊಡ್ಡ ಎದೆಯು ಅಪೇಕ್ಷೆಯಿಂದ ಏರಿದೆ. ನೀನು ಬಹು ಬೇಗ ನಾನು ಆತನಲ್ಲಿ ಸೇರುವಂತೆ ಮಾಡಬೇಕು.

ಐದನೇ ಪಾಸುರಂ. ಅವಳು ಎಂಪೆರುಮಾನ್ ಹೊರತುಪಡಿಸಿ ಬೇರೆ ಯಾರೊಂದಿಗೆ ಸೇರಿದರೂ ಬದುಕುವುದಿಲ್ಲ ಎಂದು ಹೇಳುತ್ತಾಳೆ.

ವಾನಿಡೈ ವಾಳುಮ್ ಅವ್ವಾನವರ್ಕು ಮರೈಯವರ್ ವೇಳ್ವಿಯಿಲ್ ವಗುತ್ತ ಅವಿ

ಕಾನಿಡೈ ತಿರಿವದೋರ್ ನರಿ ಪುಗುಂದು ಕಡಪ್ಪದುಮ್ ಮೋಪ್ಪದುಮ್ ಶೈವದೊಪ್ಪ

ಊನಿಡೈ ಆಳಿ ಶಂಗು ಉತ್ತಮರ್ಕು ಎನ್ರು ಉನ್ನಿತ್ತು ಎಳುನ್ದ ಎನ್ ತಡ ಮುಲೈಗಲ್ 

ಮಾನಿಡವರ್ಕು ಎನ್ರು ಪೇಚ್ಚು ಪ್ಪಡಿಲ್ ವಾಳಗಿಲ್ಲೇನ್ ಕಂಡಾಯ್ ಮನ್ಮಥನೇ

ಓ ಮನ್ಮಥ! ಬ್ರಾಹ್ಮಣರು [ಈ ಪ್ರಪಂಚದಲ್ಲಿ] ಹವಿಸ್ಸು [ತುಪ್ಪ, ಹಾಲು, ಮೊಸರು ಇತ್ಯಾದಿಗಳಿಂದ ಮಾಡಿದ ನೈವೇದ್ಯವನ್ನು] ಆಚರಣೆಗಳ ಸಮಯದಲ್ಲಿ ವಿಶಿಷ್ಟವಾದ ಆಕಾಶ ದೇವತೆಗಳಿಗೆ (ಅಮರರು) ಅರ್ಪಿಸುತ್ತಾರೆ. ಕಾಡಿನಲ್ಲಿ ತಿರುಗಾಡುವ ನರಿ ಅದನ್ನು ದಾಟಿದರೆ ಅಥವಾ ವಾಸನೆಯನ್ನು ಅನುಭವಿಸಿದರೆ, ನೈವೇದ್ಯ ಸಮರ್ಪಣೆಯು ವ್ಯರ್ಥವಾಗುತ್ತದೆ. ಅದೇ ರೀತಿಯಲ್ಲಿ, ನನ್ನ ವಿಸ್ತಾರವಾದ ಎದೆಯು, ತನ್ನ ದಿವ್ಯವಾದ ಕೈಗಳ ಮೇಲೆ ದಿವ್ಯವಾದ ಚಕ್ರ  ಮತ್ತು ದಿವ್ಯವಾದ ಶಂಖವನ್ನು ಹೊಂದಿರುವ, ಪುರುಷರಲ್ಲಿ (ಸಂವೇದನಾಶೀಲರು) ಅತ್ಯುತ್ತಮವಾದ ಎಂಪೆರುಮಾನ್‌ಗೆ ಮಾತ್ರ ಮೀಸಲಾಗಿದೆ. ಇಹಲೋಕದ ಪುರುಷನಿಗೆ ಎಂಬ ಮಾತು ಬಂದರೆ ನಾನು ಬದುಕುವುದಿಲ್ಲ.

ಆರನೇ ಪಾಸುರಂ. ಎಂಪೆರುಮಾನ್‌ನನ್ನು ಅನುಭವಿಸುತ್ತಾ ಮುಂದೆ ಹೋಗುವಾಗ ಸತ್ವಗುಣದಲ್ಲಿ (ಶುಧ್ಧ ಉತ್ತಮ ಗುಣಗಳು) ಸಂಪೂರ್ಣವಾಗಿ ಲಂಗರು ಹಾಕಿರುವವರ ಜೊತೆ ಸೇರುವಂತೆ,  ಆಂಡಾಳ್ ಎಂಪೆರುಮಾನ್‌ನನ್ನು ಪಡೆಯಲು ಕಾಮಶಾಸ್ತ್ರದಲ್ಲಿ (ಪ್ರೀತಿಯ ಕುರಿತಾದ ಗ್ರಂಥ) ಪರಿಣಿತರಾದವರ ಜೊತೆ ಸೇರಲು ಮನ್ಮಥನನ್ನು ಪ್ರಾರ್ಥಿಸುತ್ತಾಳೆ.

ಉರುಉಡೈಯಾರ್ ಇಳೈಯಾರ್ಗಳ್ ನಲ್ಲಾರ್ ಓತ್ತು ವಲ್ಲಾರ್ಗಳೈ ಕೊಂಡು ವೈಗಲ್

ತೆರುವಿಡೈ ಎದಿರ್ಕೊಂಡು ಪಂಗುನಿ ನಾಳ್ ತಿರುಂದವೇ ನೊರ್ಕಿನ್ರೇನ್ ಕಾಮದೇವಾ!

ಕರುವುಡೈ ಮುಗಿಲ್ವಣ್ಣನ್ ಕಾಯಾವಣ್ಣನ್ ಕರುವಿಳೈಪೋಲ್ ವಣ್ಣನ್ ಕಮಲವಣ್ಣನ್

ತಿರುವುಡೈ ಮುಗತ್ತಿನಿಲ್  ತಿರುಕಣ್ಗಳಾಲ್ ತಿರುಂದವೇ ನೋಕ್ಕೆನಕ್ಕು ಅರುಳ್ ಕಂಡಾಯ್

ಓ ಮನ್ಮಥ! ಸುಂದರಿಯರು, ಯುವತಿಯರು, ಆಚಾರಶೀಲರು  ಮತ್ತು ಕಾಮಶಾಸ್ತ್ರದಲ್ಲಿ ಪರಿಣಿತರನ್ನು ಮುಂದಿಟ್ಟುಕೊಂಡು, ನಾನು ನೀನು  ಬರುವ ಬೀದಿಯಲ್ಲಿ ಹೋಗುತ್ತೇನೆ ಮತ್ತು ಪಂಗುನಿ (ತಮಿಳ್) ಮಾಸದ ನಿನ್ನ ಹಬ್ಬದಲ್ಲಿ ಮನಸ್ಸಿನಲ್ಲಿ ಸ್ಪಷ್ಟತೆಯೊಂದಿಗೆ ನಿನ್ನನ್ನು ಪೂಜಿಸುತ್ತೇನೆ. ಗಾಢವಾದ, ಮಳೆಯನ್ನು ಕೊಡುವ ಮೋಡಗಳ ಮೈಬಣ್ಣ, ನೇರಳೆ ಬಣ್ಣದ ಕಾಯಾ ಹೂವಿನ ಮೈಬಣ್ಣ ಮತ್ತು ಕಾಡು ಬಳ್ಳಿಯ ನೀಲಿ ಬಣ್ಣದ ಹೂವುಗಳ ಪ್ರಕಾಶವನ್ನು

ಹೊಂದಿರುವ ಎಂಪೆರುಮಾನ್ ಕಮಲದಂತಿರುವ ತನ್ನ ದೈವೀಕ ಮುಖದಲ್ಲಿರುವ ದಿವ್ಯ ಚಕ್ಷುಗಳಿಂದ ನನ್ನನ್ನು ಆಶೀರ್ವದಿಸುವಂತೆ ನನಗೆ ಹರಸು.

ಏಳನೇ ಪಾಸುರಂ. ಇದರಲ್ಲಿ, ಎಂಪೆರುಮಾನ್ ತ್ರಿವಿಕ್ರಮನ್ ತನ್ನ ದಿವ್ಯ ಹಸ್ತಗಳಿಂದ ತನ್ನನ್ನು ಸ್ಪರ್ಶಿಸಬೇಕೆಂದು ಅವಳು ವಿನಂತಿಸುತ್ತಾಳೆ. ತನ್ನ ಭಕ್ತಿ ಎಂಪೆರುಮಾನ್‌ಗೆ ಮಾತ್ರ ಎಂದು ವಿವರಿಸುತ್ತಾಳೆ.

ಕಾಯುಡೈ ನೆಲ್ಲೊಡು  ಕರುಮ್ಬಮೈತ್ತು ಕಟ್ಟಿ ಅರಿಶಿ ಅವಲ್ ಅಮೈತ್ತು

ವಾಯುಡೈ ಮರೈಯವರ್ ಮಂದಿರತ್ತಾಲ್ ಮನ್ಮಥನೇ ಉನ್ನೈ ವಣoಗುಗಿಂಡ್ರೇನ್

ದೇಶಂ ಮುನ್ ಅಳಂದವನ್ ತ್ರಿವಿಕ್ರಮನ್ ತಿರುಕೈಗಳಾಲ್ ಎನ್ನೈ ತೀಂಡುಮ್ ವಣ್ಣಮ್

ಶಾಯ್ ಉಡೈ ವಯಿರುಮ್ ಎನ್ ತಡ ಮುಲೈಯುಮ್ ಧರಣಿಯಿಲ್ ತಲೈ ಪುಗಳ್ ತರಕ್ಕಿಟ್ರಿಯೇ

ಓ ಮನ್ಮಥ! ನಾನು ಅಕ್ಕಿ, ಬೆಲ್ಲ ಮತ್ತು ಅವಲಕ್ಕಿಯೊಂದಿಗೆ  ಮಾಗದ  ಹಣ್ಣು ಮತ್ತು ಕಬ್ಬನ್ನು ನಿವೇದಿಸಿ , ಸುಸ್ವರವುಳ್ಳ ಮತ್ತು ಕಾಮಶಾಸ್ತ್ರದಲ್ಲಿ ಪರಿಣಿತರಾದವರ ಮಂತ್ರಗಳೊಂದಿಗೆ (ಸ್ತೋತ್ರಗಳು) ನಿನ್ನನ್ನು ಪೂಜಿಸುತ್ತೇನೆ. ಲೋಕಗಳು (ಮಹಾಬಲಿಯಿಂದ) ವಶಪಡಿಸಲ್ಪಟ್ಟಾಗ, ತನ್ನ ದಿವ್ಯ ಪಾದಗಳಿಂದ ಎಲ್ಲಾ ಲೋಕಗಳನ್ನು ಅಳೆದ  ಎಂಪೆರುಮಾನ್‌ನನ್ನು, ನೀನು ನನ್ನ ಕಾಂತಿತುಂಬಿದ ಹೊಟ್ಟೆಯನ್ನು ಮತ್ತು ನನ್ನ ಮೃದುವಾದ ಬೃಹತ್ ಎದೆಯನ್ನು ಸ್ಪರ್ಶಿಸುವಂತೆ ಮಾಡಬೇಕು, ಇದರಿಂದ ನಾನು ಈ ಜಗತ್ತಿನಲ್ಲಿ ಶಾಶ್ವತ ಕೀರ್ತಿಯನ್ನು ಹೊಂದುತ್ತೇನೆ.

ಎಂಟನೆಯ ಪಾಸುರಂ. ಇದರಲ್ಲಿ, ಅವಳು ತನ್ನ ಸ್ವರೂಪಕ್ಕೆ (ಮೂಲ ಸ್ವಭಾವ) ಹೊಂದುವಂತೆ, ಮನ್ಮಥನನ್ನು ಎಮ್ಪೆರುಮಾನ್ ಅವರ ದೈವೀಕ ಪಾದಗಳಿಗೆ ಸೇವೆ ಸಲ್ಲಿಸುವಂತೆ ಆಶೀರ್ವದಿಸುವಂತೆ ಕೇಳುತ್ತಾಳೆ.

ಮಾಶುಡೈ ಉಡಂಬೊಡು ತಲೈ ಉಲರಿ ವಾಯ್ಪುರಮ್ ವೆಳುತ್ತು ಒರು ಪೋದುಮ್  ಉಂಡು

ತೇಶುಡೈ ತಿರಲುಡೈ ಕಾಮದೇವಾ! ನೋರ್ಕಿನ್ರ ನೋನ್ಬಿನೈ ಕುರಿಕ್ಕೊಳ್ ಕಂಡಾಯ್

ಪೇಶುವದು ಒನ್ರು ಉಂಡು ಇಂಗು ಎಂಪೆರುಮಾನ್!   ಪೆಣ್ಮೈಯೈ ತಲೈಯುಡೈ ತಾಕ್ಕುಮ್ ವಣ್ಣಮ್

ಕೇಶವ ನಂಬಿಯೈ ಕಾಲ್ ಪಿಡಿಪ್ಪಾಳ್ ಎನ್ನುಂ ಇಪ್ಪೇರ್ ಎನಕ್ಕು ಅರುಳ್ ಕಂಡಾಯ್

ಓಹ್ ಮನ್ಮಥ! ತೇಜಸ್ವಿ ಮತ್ತು ಬಲಾಢ್ಯ ಪ್ರಭು! ನಾನು ಸ್ನಾನ ಮಾಡದ [ದುಃಖದ ಕಾರಣ] ದೇಹ, ಕಳಂಕಿತ ವಸ್ತ್ರಗಳು ಮತ್ತು ಬಿಳುಪೇರಿದ ತುಟಿಗಳೊಂದಿಗೆ, ದಿನಕ್ಕೆ ಒಂದು ಹೊತ್ತು ಮಾತ್ರವೇ ಉಂಡು, ಈ  ನೋಂಬು(ವ್ರತ) ವನ್ನು ನಾನು ಆಚಿರಿಸುತ್ತಿದ್ದೇನೆ  ಎಂದು ನೆನಪಿಡು. ನಾನೀಗ ನಿನಗೆ ಒಂದು ಮಾತು ಹೇಳಬೇಕು. ಕೇಶಿ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ಮತ್ತು  ಮಂಗಳಕರ ಗುಣಗಳಲ್ಲಿ ಪೂರ್ಣನಾಗಿರುವ ಎಂಪೆರುಮಾನ್‌ನ ದಿವ್ಯ ಪಾದಗಳಿಗೆ ಸೇವೆ ಸಲ್ಲಿಸುವ ಫಲವನ್ನು ಪಡೆಯಲು ನೀನು  ನನಗೆ ಸಹಾಯ ಮಾಡಬೇಕು.

ಒಂಭತ್ತನೇ ಪಾಸುರಂ. ತನಗೆ ಸಹಾಯ ಮಾಡದಿದ್ದರೆ ಅವನಿಗೆ ಆಗುವ ಅನರ್ಥಗಳನ್ನು ಅವಳು ಇದರಲ್ಲಿ ಬಹಿರಂಗಪಡಿಸುತ್ತಾಳೆ.

ತೊಳುದು ಮುಪ್ಪೋದುಂ ಉನ್ ಅಡಿ ವಣಂಗಿ ತೂ ಮಲರ್ ತೂಯ್ ತೊಳುದೇತ್ತುಗಿಂಡ್ರೇನ್

ಪಳುದಿಂಡ್ರಿ  ಪಾರ್ಕಡಲ್ವಣ್ಣನುಕ್ಕೇ ಪಣಿ ಶೆಯ್ದು ವಾಳಪ್ಪೆರಾವಿಡಿಲ್ ನಾನ್

ಅಳುದಳುದು ಅಲಮಂದು ಅಮ್ಮಾ ವಳಂಗ ಆತ್ತವುಮ್ ಅದು ಉನಕ್ಕುರೈಕ್ಕುಮ್ ಕಂಡಾಯ್

ಉಳುವದೋರ್ ಎರುತ್ತಿನೈ ನುಗಮ್ಕೊಡು ಪಾಯ್ಂದು ಊಟ್ಟಮಿನ್ರಿ ತುರಂದಾಲ್ ಒಕ್ಕುಮೇ

ದಿನಕ್ಕೆ ಮೂರು ಬಾರಿ ನಿನ್ನನ್ನು ಪೂಜಿಸಿ, ನನ್ನ ತಲೆಯಿಂದ ನಮಸ್ಕರಿಸುತ್ತಾ, ನಿನ್ನ ಪಾದಗಳಿಗೆ ಶುದ್ಧ ಹೂವುಗಳನ್ನು ಅರ್ಪಿಸುತ್ತಾ, ನಾನು ನಿನಗಾಗಿ ಸ್ತೋತ್ರಗಳನ್ನು ಹೇಳುತ್ತಿದ್ದೇನೆ. ಜಗತ್ತನ್ನು ಸುತ್ತುವರೆದಿರುವ ಸಾಗರದ ರೂಪವನ್ನು

ಹೊಂದಿರುವವನಿಗೆ ದೋಷರಹಿತ ಸೇವೆಯನ್ನು ಮಾಡಿ ಉನ್ನತಿ ಹೊಂದಲು ನನಗೆ ಸಾಧ್ಯವಾಗದಿದ್ದರೆ, ನಾನು ಪದೇ ಪದೇ ಅಳುತ್ತೇನೆ, ಅಸ್ಥಿರವಾಗಿ ತಿರುಗುತ್ತೇನೆ ಮತ್ತು “ಅಯ್ಯೋ ತಾಯಿ!” ಎಂದು ಆಗಾಗ್ಗೆ ಚೀರುತ್ತೇನೆ. ಇವೆಲ್ಲವುಗಳ ಫಲಿತಾಂಶವು ನಿನಗೆ ಬರುತ್ತದೆ. ರೈತನು ಹೊಲದಲ್ಲಿ ತನ್ನಎತ್ತಿನಿಂದ ಕೆಲಸ ಮಾಡಿಸಿ ಅದಕ್ಕೆ ತಿನ್ನಲು ಕೊಡದೇ ನೊಗದಿಂದ ಓಡಿಸುವಂತೆಯೇ ಇರುತ್ತದೆ.

ಹತ್ತನೇ ಪಾಸುರಂ. ಈ ಹತ್ತು ಪಾಸುರಗಳನ್ನು ಕಲಿಯುವುದರಿಂದ ಆಗುವ ಲಾಭವನ್ನು ಹೇಳಿ ಪದಿಗವನ್ನು ಪೂರ್ಣಗೊಳಿಸುತ್ತಾಳೆ.

ಕರುಮ್ಬು ವಿಲ್ ಮಲರ್ ಕಣೈ  ಕಾಮವೇಳೈ ಕಳಲಿನೈ  ಪಣಿಂದು  ಅಂಗೋರ್ ಕರಿ ಅಲರ

ಮರುಪ್ಪಿನ್ನೈ ಒಶಿತ್ತು ಪುಳ್ ವಾಯ್ ಪಿಳಂದ ಮಣಿವಣ್ಣರ್ಕು  ಎನ್ನೈ ವಗುತ್ತಿಡೆನ್ರು

ಪೊರುಪ್ಪನ್ನ ಮಾಡಮ್ ಪೊಲಿಂದು  ತೋನ್ರುಮ್ ಪುದುವೈಯರ್ ಕೋನ್ ವಿಟ್ಟುಚಿತ್ತನ್ ಕೋಧೈ

ವಿರುಪ್ಪುಡೈ ಇನ್ ತಮಿಳ್ ಮಾಲೈ ವಲ್ಲಾರ್ ವಿಣ್ಣವರ್ ಕೋನ್ ಅಡಿ ನಣ್ಣುವರೇ

ಕಬ್ಬಿನಿಂದ ಮಾಡಿದ ಬಿಲ್ಲು ಮತ್ತು ಹೂವಿನ ಬಾಣಗಳನ್ನು ಹೊಂದಿರುವ ಮನ್ಮಥನ ಪಾದಗಳನ್ನು ನಾನು ಪೂಜಿಸಿದೆ.

ಮಥುರಾದಲ್ಲಿ (ಉತ್ತರದಲ್ಲಿ) ಬಿಲ್ಲುಗಳ ಉತ್ಸವವನ್ನು ನಡೆಸುತ್ತಿದ್ದ ಅಖಾಡದ ಪ್ರವೇಶದ್ವಾರದಲ್ಲಿ, ಕುವಲಯಾಪೀಡ ಎಂಬ ಆನೆಯನ್ನು ಅದರ ದಂತಗಳನ್ನು ಮುರಿದು ಕೊಂದ,  ಮತ್ತು ದೈವಿಕ ನೀಲಿ ರತ್ನಕ್ಕೆ ಹೊಂದಿಕೆಯಾಗುವ  ಕೊಕ್ಕರೆ ರೂಪದಲ್ಲಿ ಬಂದ ರಾಕ್ಷಸ ಬಕಾಸುರನನ್ನ ಕೊಂದ  ಕಣ್ಣನ್ ಎಂಪೆರುಮಾನ್‌ನೊಂದಿಗೆ ನನ್ನನ್ನು ಒಂದುಗೂಡಿಸಲು ನಾನು ಕೇಳಿಕೊಂಡೆ. ನಾನು ಪರ್ವತಗಳಂತೆ ಕಾಣುವ ಮಹಲುಗಳಿಂದ ತುಂಬಿರುವ ಶ್ರೀವಿಲ್ಲಿಪುತ್ತೂರಿನ ನಾಯಕ ಪೆರಿಯಾಳ್ವಾರ್ ಅವರ ಮಗಳು, ಕೋಧೈ. ಈ ಹತ್ತು ಮಧುರವಾದ ತಮಿಳ್ ಪಾಸುರಂಗಳನ್ನು ಆಸೆಯಿಂದ ಹಾಡುವವರು ನಿತ್ಯಸೂರಿಗಳ ನಾಯಕರಾದ ಶ್ರೀಮಾನ್ ನಾರಾಯಣನ ದಿವ್ಯ ಪಾದಗಳನ್ನು ಪಡೆಯುತ್ತಾರೆ.

ಅಡಿಯೇನ್ ಯತಿರಾಜ ರಾಮಾನುಜ ದಾಸನ್ 

ಮೂಲ: https://divyaprabandham.koyil.org/index.php/2020/05/nachchiyar-thirumozhi-1-simple/

ಸಂಗ್ರಹಣಾ ಸ್ಥಾನ http://divyaprabandham.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org