ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 61 – 65

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ಸ್ತೋತ್ರ ರತ್ನ

<< ಶ್ಲೋಕ 51-60

ಶ್ಲೋಕ-61 – ” ನೀವು ಶ್ರೇಷ್ಟ ಕುಲದಲ್ಲಿ ಜನನದ ಆಭಿಜಾತ್ಯವನ್ನು ಹೋಂದಿದವವರಲ್ಲವೇ ಕೃಪಣನಾಗೆ ಏಕೆ ಮಾತನಾಡುತಿದ್ದೀರಿ ?”, ಎಂದು ಎಮ್ಪೆರುಮಾನ್ ಕೇಳಲು, ” ಶ್ರೇಷ್ಟ ಕುಲದಲ್ಲಿಜನಿಸಿದರು ನನ್ನ ನಿರತಿಶಯ ಪಾಪದಿಂದ ಸಂಸಾರದಲ್ಲಿ ಮುಳುಗುತ್ತಿರುವ ನನ್ನನ್ನು ದಯವಿಟ್ಟು ಉದ್ಧರಿಸು. “, ಎಂದು ಆಳವಂದಾರ್ ಹೆಳುತಿದ್ದಾರೆ.

ಜನಿತ್ವಾSಹಮ್ ವಮ್ಶೇ ಮಹತಿ ಜಗತಿ ಖ್ಯಾತಯಶಸಾಮ್ಶುಚೀನಾಮ್
ಯುಕ್ತಾನಾಮ್ ಗುಣ ಪುರುಷ ತತ್ವಸ್ತಿ ತಿವಿದಾಮ್ |
ನಿಸರ್ಗಾದೇವ ತ್ವಚ್ಚರಣ ಕಮಲೈಕಾನ್ತ ಮನಸಾಂ

ಅದೋ£ದ:ಃಪಾಪಾತ್ಮಾ ಶರಣದ! ನಿಮಜ್ಜಾಮಿ ತಮಸಿ ||

ಶರಣವನ್ನು ಪ್ರಸಾದಿಸುವ ಭಗವಂತನೇ! ಲೋಕದಲ್ಲಿ ಪ್ರಖ್ಯಾತರಾದವರು, ಶುದ್ಧರೂ, ನಿಮ್ಮೋಂದಿಗೆ ಇರಲು ಇಚ್ಛಿಸುವವರೂ, ಚಿತ್-ಅಚಿತ್ಗಳನ್ನು ತತ್ತ್ವತಃ ಅರಿತವರೂ, ಸಹಜವಾಗಿಯೇ ನಿಮ್ಮ ದಿವ್ಯಪಾದಗಳಲ್ಲೆ ಮನಸ್ಕರಾದರಾದ ಮಹನೀಯರ, ಶ್ರೇಷ್ಠ ವಂಶದಲ್ಲಿ ಜನಿಸಿದರು ಪಾಪಗಳ ರೂಪವೇಯಾಗಿರುವ ನಾನು ಸಂಸಾರದಲ್ಲೆ ಕೆಳಕೆಳಗೆ ಮುಳುಗುತಿದ್ದೇನೆ.

ಶ್ಲೋಕ-62 – “ಇಂತಹ ಶ್ರೇಷ್ಠ ಕುಲದಲ್ಲಿ ಜನ್ಮವನ್ನು ವ್ಯರ್ತವನ್ನಾಗಿ ಮಾಡುವಂತಹ ನಿಮ್ಮ ಪಾಪಗಳಾವು?”, ಎಂದು ಎಮ್ಪೆರುಮಾನ್ ಕೇಳಲು, ಆಳವಂದರ್ (ಹಿಂದಿನ ಶ್ಲೋಕದಲ್ಲಿ ) ಹೇಳಿದ “ಪಾಪಾತ್ಮಾ”ವನ್ನೇ ವಿವರಿಸುತಿದ್ದಾರೆ.
ಅಮರ್ಯಾದಃ ಕ್ಷುದ್ರಶ್ ಚಲಮತಿರಸೂಯಾಪ್ರಸವಭೂಃ
ಕ್ರುತGನೋ ದುರ್ಮಾನೀ ಸ್ಮರಪರವಶೋ ವನ್ಚನಪರಃ |
ನೃಶಮ್ಸಃ ಪಾಪಿಶ್ಟಃ ಕಥಮಹಮಿತೋ ಧುಃಖಜಲದೇಃ
ಅಪಾರಾದುತ್ತೀರ್ಣಸ್ ತವ ಪರಿಚರೇಯಮ್ ಚರಣಯೋಃ ||

ವೇದದಮಿತಿಅಯನ್ನು ದಾಟಿದವನು, ಕ್ಷುದ್ರವಿಷಯಗಆಳನ್ನು ಇಚ್ಛಿಸುವವನು, ಚಂಚಲ ಮನಸ್ಕನು, ಅಸೂಯೆಯ ಮೂಲವಾದವನು (ಅದಕ್ಕೇ ಸಶ್ರಯನಾದವನು), ನನಗೆ ಶ್ರೇಯಸನ್ನು ಮಾಡುವವರಿಗೂ ಕೆಟ್ಟದನ್ನೇ ಮಾಡುವವನು, ತ್ಯಾಜ್ಯವಾದ ದುರಭಿಮಾನವುಳ್ಳವನು, ಕಾಮಾಸಕ್ತನು, ವಂಚಕನು, ಕ್ರೂರಕರ್ಮಗಳಲ್ಲಿ ಪಾಪಕರ್ಮಗಳಲ್ಲಿ ಮಗ್ನನಾದವನಾದ ನಾನು ಈ ಅಪಾರವಾದ ಧುಃಖಸಾಗರವನ್ನು ಹೇಗೆ ದಾಟಿ ನಿಮ್ಮ ಪಾದಗಳಲ್ಲಿ ಕೈಂಕರ್ಯವನ್ನು ಮಾಡುವೆ.

ಶ್ಲೋಕ-63 – “ತಿಳಿದೇ ಮಾಡಿದ ಆಪರಾದಗಳಾನ್ನು ಹೇಗೆ ದೂರಮಾಡಲಿ” ಎಂದು ಎಮ್ಪೆರುಮಾನ್ ಕೇಳಲು ಆಳವಂದಾರ್, “ಕಾಕಾಸುರನು (ಕಾಗೆಯರೂಪದಲ್ಲಿ ಬಂದ ಇಂದ್ರನಮಗ ಜಯಂತನು) ಹಾಗು ಶಿಶುಪಾಲನು ಮಾಡಿದ ಅಪಚಾರಗಳನ್ನು ಕ್ಷಮಿಸಿದ ನೀನು ನನ್ನ ಅಪರಾದಗಳನ್ನು ಕ್ಷಮಿಸುವುದಿಲ್ಲವೇ”.
ರಘುವರ! ಯದಭೂಸ್ತ್ವಮ್ ತಾದ್ರುಶೋ ವಾಯಸಸ್ಯ
ಪ್ರಣತ ಇತಿ ದಯಾಳೂರ್ ಯಚ್ಚ ಚೈದ್ಯಸ್ಯ ಕ್ರಿಶ್ಣ! |
ಪ್ರತಿಭವಮ್ ಅಪರಾದ್ದುರ್ ಮುಗ್ದ! ಸಾಯುಜ್ಯದೋ$ಭೂಃ
ವದ ಕಿಮಪದಮಾಗಸ್ತಸ್ಯ ತೇ$ಸ್ತಿ ಕ್ಶಮಾಯಾಃ ||

ರಘುಕುಲೋತಮ್ಮನಾಗಿ ಅವತರಿಸಿದ ಶ್ರೀರಾಮನೇ! ಶರಣಾಗತನೆಂದು ಮಹತ್ ಅಪಚಾರವನ್ನು ಮಾಡಿದ ಕಾಕಾಸುರನಿಗೆ ಕರುಣೆ ತೊರವಿಲ್ಲವೆ? ದೋಶಗಳನ್ನೆ ಅರಿಯದ ಕೃಷ್ಣನೆ! ಜನ್ಮಜನ್ಮಗಳಿಂದ ಅಪರಾದಗಳನ್ನೆ ಮಾಡುತಿದ್ದ ಚೇದಿಕುಲದ ಶಿಶುಪಾಲನಿಗೆ ಮೋಕ್ಷವನ್ನು ಅನುಗ್ರಹಿಸುದಿಲ್ಲವೇ? ನಿಮ್ಮ ಕ್ಷಮೆಗೆ ಪಾತ್ರವಲ್ಲದ ಪಾಪವು ಯಾವುದೆಂದು ದಯವಿಟ್ಟು ಹೇಳಿ.

ಶ್ಲೋಕ-64 – “ಸ್ವತಂತ್ರನಾದ ನಾನು ವಿಶೇಷವಾದ ಸಂದರ್ಬದಲ್ಲಿ ಕೆಲವರನ್ನು ಉದ್ಧರಿಸುವೆ, ಅದುವೆ ನನ್ನ ಸಾಮಾನ್ಯ ಪ್ರವೃತ್ತಿಯೆಂದು ಹೇಳಬಹುದೇ ”, ಎಂದು ಎಮ್ಪೆರುಮಾನ್ ಕೇಳಲು, ಸಮುದ್ರತರದಲ್ಲಿ ನೀನು (ಶರಣಾಗತರೆಲ್ಲರನ್ನು ರಕ್ಷಿಸುವೆನೆಂಬ) ವ್ರತದಲ್ಲಿ ನಿನ್ನ ಭಕ್ತಸಭೆಯಲ್ಲಿ ದೀಕ್ಷಿತನಾದಾಗೆ, ಆ ವ್ರತವು ನನ್ನನ್ನು ವರ್ಜಿಸಿತೋ ?”, ಎಂದು ಆಳವಂದಾರ್ ಹೇಳಿದರು.
ನನು ಪ್ರಪನ್ನಸ್ ಸಕ್ರುದೇವ ನಾತ!
ತವಾಹಸ್ಮೀತಿ ಚ ಯಾಚಮಾನಃ |
ತವಾನುಕಂಪ್ಯ: ಸ್ಮರತಃ ಪ್ರತಿಜ್ಞಾಮ್
ಮದೇಕವರ್ಜಮ್ ಕಿಮಿದಮ್ ವ್ರತಮ್ ತೇ ||

ಹೇ ಭಗವಂತನೇ! “ನಿನಲ್ಲಿ ಒಮ್ಮೆ ಶರಣಾಗಿದ್ದೇನೆ” ಹಾಗು “ನಿನ್ನನ್ನೆ ಸೇವಿಸಬೇಕು” ಎಂದು ಹೇಳಿದ ನಾನು, ([ರಾಮ-ರಾವಣ ಯುದ್ಧಕ್ಕೆ ಪೂರ್ವ] ವಿಭೀಶಣನಿಗೇ ಮಾಡಿದ) ಪ್ರತಿಜ್ಞೇಯನ್ನು ಚಿಂತಿಸುತ್ತಿರುವ ನಾನು ನಿಮ್ಮ ದಯೆಗೆ ಪಾತ್ರನು; ನಿಮ್ಮ (ಈ) ವ್ರತವನ್ನು ನನ್ನನ್ನು ಮಾತ್ರ ವರ್ಜಿಸಿ ಮಾಡಿದೆಯೋ.

ಶ್ಲೋಕ-65 – “ ರಾಮೋ ದ್ವಿರ್ ನಾಭಿಭಾಶತೇ”( ಶ್ರೀ ರಾಮಾಯಣಮ್
ಅಯೋದ್ಯಾ ಕಾಣ್ಡಮ್ 18.30 ರಾಮನು ಎರಡು ವಿದದಲ್ಲಿ ನುಡಿಯನು) ಯಲ್ಲಿ ಹೇಳಲ್ಪಟ್ಟ ಪ್ರತಿಜ್ಞೇಯನ್ನು ಬಿಟ್ಟರು, ನನ್ನ ಗುಣ ದೋಹಗಳೆರಡನ್ನು ಉಪೇಕ್ಶಿಸಿ, ಜ್ಞಾನಗ್ರಹಣಾದರೂಪದಲ್ಲಿ ಹಾಗು (ಪೌತ್ರರಾದ ರೂಪವಾದ) ಜನ್ಮದಲ್ಲಿರುವ ಪೆರಿಯ ಮುದಲಿಯಾರೋಂದಿಗೆ (ಶ್ರೀಮಾನ್ ನಾಥಮುನಿಗಳು) ಇರುವ ಸಂಬಂದವನೇ ಕರುಣೆಯಿಂದ ಅಂಗೀಕರಿಸಬೇಕು.” ಎಂದು ಆಳವಂದಾರ್ ಹೇಳಲು, “ಈ ಆಶ್ರಯಣದಲ್ಲಿ ಯಾವ ಕೊರೆಯು ಇಲ್ಲ. ನಾನು ಅಂಗೀಕರಿಸುವೆ.” ಎಂದು ಈಶ್ವರನು ಹೇಳಿ ವರವನ್ನು ಆಳವಂದಾರಿಗೆ ನೀಡಿದನು, ಸಂತ್ರುಪ್ತರಾಗಿ ಆಲವಂದಾರ್ ಸ್ತೋತ್ರವನ್ನು [ಪ್ರಬಂದವನ್ನು] ಪೂರ್ಣಗೋಳಿಸಿದರು.
ಅಕೃತ್ರಿಮ ತ್ವಚ್ಚರಣಾರವಿಂದ
ಪ್ರೇಮ ಪ್ರಕರ್ಷಾವದಿಮ್ ಆತ್ಮವನ್ತಮ್ |
ಪಿತಾಮಹಮ್ ನಾತಮುನಿಮ್ ವಿಲೋಕ್ಯ
ಪ್ರಸೀದ ಮತ್ವೃತ್ತಮ್ ಅಚಿಂತಯಿತ್ವಾ ||

[ಹೇ ಭಗವಾನೇ!] ನನ್ನ ಕೃತ್ಯವನ್ನು ಉಪೇಕ್ಷಿಸಿ ನಿಮ್ಮ ದಿವ್ಯ ಪಾದ ಪಂಕಜಗಳಲ್ಲಿ ಸಹಜಭಕ್ತಿಯ ಕಾಷ್ಠೆಯಾದವರು, ಆತ್ಮಜ್ಞ್ನರಾದರು ನನ್ನ ಪಿತಾಮಹರರಾದ ನಾಥಮುನಿಗಳನ್ನು ನೋಡಿ ನನ್ನನ್ನು ಕರುಣೆಯಿಂದ ಕ್ಷಮಿಸಿ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – https://divyaprabandham.koyil.org/index.php/2020/10/sthothra-rathnam-slokams-61-to-65-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment