ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 51 – 60

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ಸ್ತೋತ್ರ ರತ್ನ

<< ಶ್ಲೋಕ 41-50

ಶ್ಲೋಕ-51 – “ಕರುಣೆಯ ಅವಶ್ಯಕತೆಯಿರುವವನು ಹಾಗು ಕರುಣಾವಾನಿನ ಸಂಬಂಧವನ್ನು ನಿಮ್ಮ ದಯೆಯಿಂದ ಏರ್ಪಡಿಸಲ್ಪಟ್ಟಿರಲು, ನನ್ನನ್ನು ತ್ಯಜಿಸದೆ ರಕ್ಷಿಸಬೇಕು”, ಎಂದು ಆಳವಂದಾರ್ ಹೇಳುತಿದ್ದಾರೆ.

ತದಹಮ್ ತ್ವದೃತೇ ನ ನಾತವಾನ್
ಮದೃತೇ ತ್ವಮ್ ದಯನೀಯವಾನ್ ನ ಚ |
ವಿದಿನಿರ್ಮಿತಮೇತದನ್ವಯಮ್
ಭಗವನ್! ಪಾಲಯ ಮಾ ಸ್ಮ ಜೀಹಪಃ ||

ಜ್ಞಾನವಾನಾದ ಭಗವಂತನೇ! ನೀವಲ್ಲದೆ ನನಗೆ ಇನ್ನೊಬ್ಬ ನಾಥನಿಲ್ಲ, ಹಾಗೆಯೆ ನಿಮಗೂ ನಾನಲ್ಲದೆ ನಿಮ್ಮ ದಯೆಗೆ ಇನ್ನೊಬ್ಬ ಪಾತ್ರರಿಲ್ಲ. ನಿಮ್ಮ ದಯೆಯಿಂದ ನಿರ್ಮಿತವಾದ ಇದನ್ನು ತ್ಯಜಿಸದೆ ರಕ್ಷಿಸು.

ಶ್ಲೋಕ-52 –”ನನ್ನ ರಕ್ಷಣೆ ಆತ್ಮವಿನ ಸ್ವರೂಪಾನುಗುಣವಾಗಿರುವುದು; ನಿಮ್ಮ ಸ್ವರೂಪವನ್ನು ನಿಶ್ಚಯಿಸಿ, ನಿಮನ್ನು ನನ್ನಲ್ಲಿ ಸಮರ್ಪಿಸಿ. ” ಎಂದು ಎಮ್ಪೆರುಮಾನ್ ಹೆಳುತಿದ್ದಾನೆ. “ಸಿಱಪ್ಪಿಲ್ ವೀಡು (ತಿರುವಾಯ್ಮೊೞಿ 2.9.5)ಯಲ್ಲಿ ಹೇಳಿದಂತೆ “ಹಾವ ನಿರ್ಬಂದನೆಯಾಗಲಿ ಸಂಕೋಚವಿಲ್ಲದೆ ಆತ್ಮವೆಂದು ಅರಿಯಲ್ಪಡುವ ಈ ವಸ್ತುವನ್ನು (ನನನ್ನು) ನಿಮ್ಮ ಪಾದರಕ್ಷ್ರ್ಗಳಾಗಿ ಸಮರ್ಪಿತವಾಗಿದೆ.”

ವಪುರಾದಿಷು ಯೋ£ಪಿ ಕೋ£ಪಿ ವಾ
ಗುಣತೋSಸಾನಿ ಯತಾತತಾವಿದಃ |
ತದಯಮ್ ತವ ಪಾದಪದ್ಮಯೋಃ
ಅಹಮದ್ಯೈವ ಮಯಾ ಸಮರ್ಪಿತಃ ||

ಶರೀರಾದಿಗಳಲ್ಲಿ (ನಾನು ಯಾರೆ ಆಗಿರಲಿ) ಯಾವುದೆ (ಸ್ವರೂಪ ಗುಣಗಳಿಂದ) ಲಕ್ಷಿತನಾಗಲಿ (ಇದರಲ್ಲಿ ಯಾವುದೆ ನಿರ್ಬಂದವಿಲ್ಲದೆ) ಆತ್ಮವೆಂದು ಅರಿಯಲ್ಪಡುವ ಈ ವಸ್ತುವು ಇದ್ರ್ ಕ್ಷಣದಲ್ಲಿ ನಿಮ್ಮ ಪಾದಪಂಕಾಜಗಳಲ್ಲಿ ನನ್ನಿಂದ ಸಮರ್ಪಿಸಲ್ಪಟ್ಟಿದೆ.

ಶ್ಲೋಕ-53 – “ಆಳವಂದಾರನ್ನು ಭ್ರಮಿತರಾಗಿ ಹೇಗೆ ಬಿಡಲಿ” ಎಂದು ಕರುಣೆಯಿಂದ ಎಮ್ಪೆರುಮಾನ್ ಚಿಂತಿಸಿ, “ನೀವು ಯಾರು? ಮತ್ತು ನಿಮ್ಮನ್ನು ಯಾರಿಗೆ ಸಮರ್ಪಿಸಿದಿರಿ?” ಎಂದು ಕೇಳಿದನು.”ಎನದಾವಿ ಆವಿಯುಮ್ ನೀ … ಎನದಾವಿ ಯಾರ್? ಯಾನಾರ್?“ (ತಿರುವಾಯ್ಮೊೞಿ 2.3.4)ಯಲ್ಲಿ ಹೇಳಿದಂತೆ ತಮ್ಮ ಸ್ವರೂಪವನ್ನು ನಿಶ್ಚಯಿಸಿ, “ನಿಮ್ಮ ಸೊತ್ತನ್ನು ನೀವೆ ಸ್ವೀಕರಿಸಿದ್ದೀರ, ಆತ್ಮಸಮರ್ಪಣವು ಆತ್ಮಾಪಹಾರದಂತಿದೆ( ಆತ್ಮವಿನ ಚೌರ್ಯ)” ಆಳವಂದಾರ್ ತಮ್ಮ ಆತ್ಮಸಮರ್ಪಣವನ್ನು (ಕಂಡು) ದುಃಖಿಸುತಿದ್ದಾರೆ.

ಮಮ ನಾತ ! ಯದಸ್ತಿ ಯೋ£ಸ್ಮ್ಯಹಮ್
ಸಕಲಮ್ ತದ್ಧಿ ತವೈವ ಮಾದವ |
ನಿಯತಸ್ವಮಿತಿ ಪ್ರಬುದ್ಧಧೀಃ
ಅಥವಾ ಕಿನ್ನು ಸಮರ್ಪಯಾಮಿ ತೇ ||

ಸರ್ವಸ್ವಾಮಿ ಹಾಗು ಲಕ್ಷ್ಮೀನಾಥನಾದ ಎಮ್ಪೆರುಮಾನೇ! ನನ್ನ ಸ್ವತ್ತು ಎಂದು ಇರುವವು ಹಾಗು ನಾನು ಇಬ್ಬರು ಎಂದೂ ನಿನಗೆ ಸೇರಿದವರು (ನಿನ್ನ ಸ್ವತ್ತು) ಇದನ್ನು ತಿಳಿದು ನಾನು ಏನನ್ನು ಸಮರ್ಪಿಸಲಿ ?

ಶ್ಲೋಕ-54 – “ನಾನು ಆತ್ಮಚೌರ್ಯದಂದ ಕಾಣುವ ಆತ್ಮಸಮರ್ಪಣೆಯಲ್ಲಿ ನಿಲ್ಲದಿದಡನ್ನು ಕಂಡು, ನಿಮ್ಮ ನಿರ್ಹೆತುಕ ಕರುಣೆಯಿಂದ ಶೇಷತ್ವನ್ನು ತೋರಿದಹಾಗೆ, ಪರ ಭಕ್ತಿಯ ಮೂರು ಸ್ತರಗಳನ್ನು, ನಿಮ್ಮ ಕೈಂಕರ್ಯದಲ್ಲಿ ಉಪಯೋಗವಾಗುವಂತೆ ಅನುಗ್ರಹಿಸಿ”, ಎಂದು ಆಳವಂದಾರ್ ಎಮ್ಪೆರುಮಾನಿಗೆ ಹೇಲುತಿದ್ದಾರೆ.
ಅವಬೋದಿತವಾನಿಮಾಮ್ ಯತಾ
ಮಯಿ ನಿತ್ಯಾಮ್ ಭವದೀಯತಾಮ್ ಸ್ವಯಮ್ |
ಕೃಪಯೈತದನನ್ಯಭೋಗ್ಯತಾಮ್
ಭಗವನ್! ಭಕ್ತಿಮಪಿ ಪ್ರಯಚ್ಚ ಮೇ ||

ಹೇ ಭಗವಾನ್! ನಿಮ್ಮ ನಿರ್ಹೇತುಕ ಕೃಪೆಯಿಂದ ಅನುಗ್ರಹಿಸಿದ ರೀತಿಯಲ್ಲೆ, ಬೇರಲ್ಲೂ ಕಾಣದ ಮಾಧುರ್ಯವನ್ನು ಹೋಂದಿರುವ (ನಿಮ್ಮ) ಭಕ್ತಿಯನ್ನೂ ಅನುಗ್ರ್ಹಿಸಿ.

ಶ್ಲೋಕ-55 – ಆಳವಂದಾರ್ ಭಗವದನುಗ್ರಹದಿಂದ ಲಭಿಸಿದ ಭಗವದ್ ಶೇಷತ್ವದಲ್ಲಿ ನಿಲ್ಲದೆ, ತದೀಯ (ಭಗವದ್ ಭಕ್ತರಿಗೆ) ಶೇಷತ್ವಕ್ಕಾಗಿ ಪ್ರಾರ್ಥಿಸುತಿದ್ದಾರೆ.
ತವ ದಾಸ್ಯಸುಖೈಕಸಂಗಿನಾಮ್
ಭವನೇಷ್ವಸ್ತ್ವಪಿ ಕೀಟಜನ್ಮ ಮೇ |
ಇತರಾವಸತೇಶು ಮಾ ಸ್ಮ ಭೂತ್
ಅಪಿ ಮೇ ಜನ್ಮ ಚತುರ್ಮುಖಾತ್ಮನಾ ||

ಕೈಂಕರ್ಯಸುಖವನ್ನು ಅನುಭವಿಸುವವರ ದಿವ್ಯ ಭವನದಲ್ಲಿ ಕೀಟನಾಗಿ ಜನಿಸುವೆ (ಜನಿಸುವುದೂ ಮೇಲು). ಬೇರೆಯಾರೋ ನಿವಾಸದಲ್ಲಿ ಬ್ರಹ್ಮನಾಗಿಯೂ ಜನಿಸುವುದಿಲ್ಲ.

ಶ್ಲೋಕ- 56 – ಆಳವಂದಾರ್ “ವೈಷ್ಣವರ ನಿವಾಸದಲ್ಲಿ ವಾಸದ ಕೀರ್ತಿಬೇಕೆ? ಅವರು ನನ್ನನ್ನು ಕಂಡಲ್ಲಿ ನನ್ನನ್ನು ಪಕ್ಕಕ್ಕೆ ತಳ್ಳುವುದಲ್ಲದೆ, ತಮ್ಮ ವಿಶೇಷವಾಗಿ ಕಟಾಕ್ಷಿಸಿ ಹಾಗು, ಇವನು ನಮ್ಮವನೆಂದು ಹೇಳುವಂತೆ ನನ್ನನ್ನು ಮಾಡಿ”, ಎಂದು ಹೇಳುತಿದ್ದಾರೆ.
ಸಕೃತ್ ತ್ವದಾಕಾರವಿಲೋಕನಾಶಯಾ
ತೃಣೀಕೃತಾನುತ್ತಮಭುಕ್ತಿಮುಕ್ತಿಭಿಃ |
ಮಹಾತ್ಮಭಿರ್ ಮಾಮವಲೋಕ್ಯತಾಮ್ ನಯ
ಕ್ಷಣೇಪಿ ತೇ ಯದ್ವಿರಹೋ$ತಿದುಸ್ಸಹಃ ||

ಒಮ್ಮೆ ನಿಮ್ಮ ದಿವ್ಯರೂಪವನ್ನು ನೋಡುವುದಕ್ಕೆ ಹೋಲಿಸಿದರೆ, ಮಹಾ ಭೋಗಗಳನ್ನು ಹಾಗು ಮೋಕ್ಷವನ್ನು ನೋಡುವವರು ಹಾಗು ಯಾರ ವಿರಹವು ನಿಮ್ಮಿಂದ ಅತಿ ದುಸ್ಸಹವಾಗಿರುವ ಉತ್ಕೃಷ್ಠ ವೈಷ್ಣವರ ಕಟಾಕ್ಷಕ್ಕ ಪಾತ್ರನಾಗಿ ಮಾಡಿ.

ಶ್ಲೋಕ-57 – ಹಿಂದಿನ ಶ್ಲೋಕದಲ್ಲಿ ಶೇಷತ್ವದ ಚರಮಪರ್ವವಾಗಿರುವ ತದೀಯ ಶೇಷತ್ವದ ಬಗ್ಗೆ ಚಿಂತಿಸಿದರು. ಈ ಶ್ಲೋಕದಲ್ಲಿ ಶೇಷತ್ವಕ್ಕೆ ಹೊರಗಿರುವ ಎಲ್ಲಾವುದಕ್ಕೆ ತಮಗಿರುವ ಅರುಚಿಯನ್ನು ತೋರಿ, “ದಯವಿಟ್ಟು ಅವನ್ನು ದೂರಮಾಡಿ” ಎಂದು ಎಮ್ಪೆರುಮಾನನ್ನು ಪ್ರಾರ್ತಿಸುತಿದ್ದಾರೆ.
ನ ದೇಹಮ್ ನ ಪ್ರಾಣಾನ್ನ ಚ ಸುಖಮಶೇಷಭಿಲಷಿತಮ್
ನ ಚಾತ್ಮಾನಮ್ ನಾನ್ಯತ್ ಕಿಮಪಿ ತವ ಸೇಷತ್ವವಿಭವಾತ್ |
ಬಹಿರ್ಭೂತಮ್ ನಾಥಮ್! ಕ್ಷಣಮಪಿ ಸಹೇ ಯಾತು ಶತದಾ
ವಿನಾಶಮ್ ತತ್ಸತ್ಯಮ್ ಮಧುಮಥನ! ವಿಜ್ಞಾಪನಮಿದಮ್

ಹೇ ಭಗವಾನ್! ಪ್ರಪನ್ನನಾಗಿರುವ ನಿಧಿಗೆ ಹೊರಗಿರುವುದು ಯಾವುದೆಯಾಗಲಿ, ಶರೀರವಾಗಲಿ, ಮುಖ್ಯ ಪ್ರಾಣವಾಗಲಿ, ಎಲ್ಲರಿಂದ ಅರ್ಥಿಸಲ್ಪಡುವ ಭೊಗಗಳಾಗಲಿ, ನನ್ನ ಆತ್ಮವೇ ಆಗಲಿ ಶೇಷತ್ವ ರಹಿತವಾಗಿದಲ್ಲಿ, ನಾನು ಒಂದು ಕ್ಷಣವು ನಾನು (ಅವನ್ನು) ಸಹಿಸಲಾರೆ, ಅವನ್ನು ದೂರ ಮಾಡು. ಇದು ಸತ್ಯವು, ಇದು ನನ್ನ ವಿಜ್ಞಾಪನೆ.

ಶ್ಲೋಕಮ್-58 – “ಈ ಸಂಸಾರದಲ್ಲಿ ನನಗೆ ಕೋಪಗೋಲಿಸುವ ಭಗವ್ದಪಚಾರಾದಿಗಳಂತಹ ಹಲವಾರು ಅಶುಭಗಳು ಕೈಂಕರ್ಯ ವಿರೋದಿಗಳಾಗಿ ನಿವರ್ತ್ಯಗಳಾಗಿವೆ, ಅವುಗಳಲ್ಲಿ ಅರುಚಿಯನ್ನು ಹೋಂದಿ, ಯೋಗಿಗಳಿಗೂ ಕಠಿನವಾಗಿರುವ ಅವುಗಳ ನಿವರ್ತನೆಯನ್ನು ಪ್ರಾರ್ತಿಸುತಿದ್ದೀರೆ!” ಎಂದು ಎಮ್ಪೆರುಮಾನ್ ಚಿಂತಿಸಲು, “ಅನವಾದಿಕ ಅಶುಭಗಳನ್ನು ದೂರಮಾಡುವ ನಿಮ್ಮ ಅನವದಿಕ ಕಲ್ಯಾಣಗುಣಗಳನ್ನು ಚಿಂತಿಸಿ ನಾನು ಇಚ್ಚಿಸುತಿದ್ದೇನೆ.” ಎಂದು ಆಳವಾಂದಾರ್ ಹೇಳುತಿದ್ದಾರೆ.
ದುರನ್ತಸ್ಯಾನಾತೇರಪರಿಹರಣೀಯಸ್ಯ ಮಹತೋ
ನಿಹೀನಾಚಾರೋ$ಹಮ್ ನೃಪಶುರಶುಭಸ್ಯಾಪದಮಪಿ |
ದಯಾಸಿಂಧೋ! ಬಂಧೋ !  ನಿರವದಿಕವಾತ್ಸಲ್ಯಜಲದೇ
ತವ ಸ್ಮಾರಮ್ ಸ್ಮಾರಮ್ ಗುಣಗಣಮಿದೀಚ್ಚಾಮಿಗತಭೀಃ

ಹೇ ಕರುಣಾ ಸಾಗರನೇ! ಸನಗೆ ಎಲ್ಲಾ ರೀತಿಯಲ್ಲು ಬಂಧುವಾದವನೆ! ವಾತ್ಸಲ್ಯ ಸಾಗರನೇ! ದುರ್ನಿವಾರ್ಯವಾದ ಆದಿ-ಅಂತಗಳಿಲ್ಲದ ಮಹಾಪಾಪಗಳಿಗೆ ನಿವಾಸನಾಗಿರುವ ನಾನು ನಿಮ್ಮ ಕಲ್ಯಾಣಗುಣಗಳ ಅನುಸ್ಮರಣೆಯಿಂದ ಯಾವುದೆ ಭೀತಿಯಿಲ್ಲದೆ ಹೀಗೆ ಇಚ್ಛಿಸುತಿದ್ದೇನೆ.

ಶ್ಲೋಕ-59 – “(ಹಿಂದಿನ ಶ್ಲೋಕದಲ್ಲಿ) “ಇಚ್ಚಾಮಿ” ಎಂದು ಹೇಳಿದಂತೆ ನಿಮಗೆ ನಿಜವಾಗಲೂ ಆಸೆ ಇದಯೇ ?” ಎಂದು ಎಮ್ಪೆರುಮಾನ್ ಕೇಳಿದಾಗ ಆಳವಂದಾರ್, “ಮಂದ-ಮತಿಯಾದ ನಾನು ನಿಮ್ಮ ಸಾನ್ನಿಧ್ಯದಲ್ಲಿ ನಿಮ್ಮ ಮಹಿಮೆಗೆ ತಕ್ಕ ಆಸೆಯು ನನ್ನಲ್ಲಿದೆ ಎಂದು ಹೇಳಲರೆ. ಆಸೆಯನ್ನು ತೋರುವ ಮಾತನ್ನೆ ಸ್ವೀಕರಿಸಿ, ನನ್ನ ಮನಸನ್ನು ತಿದ್ದಿ, ಆ ಆಸೆಯನು ನಿಜವಾಗಲು ನನ್ನಲ್ಲಿ ಉಂಟುಮಾಡಿ.”
ಅನಿಚ್ಛನ್ನಪ್ಯೇವಮ್ ಯದಿ ಪುನರಿದೀಚ್ಛನ್ನಿವ ರಜಸ್ತಮಶ್ಚನ್ನಶ್ಚದ್ಮಸ್ತುತಿವಚನಭನ್ಗೀಮರಚ್ಅಯಮ್ |
ತಥಾ$ಪೀತ್ಥಮ್ರೂಪಮ್ ವಚನವಲಮ್ಬ್ಯಾ$ಪಿ ಕೃಪಯಾ
ತ್ವಮೇವೈವಮ್ಭೂತಮ್ ದರಣಿದರ! ಮೇ ಶಿಕ್ಷಯಮನ: ||

ಭೂಮಿಯನ್ನು ಉದ್ಧರಿಸಿದ ಧರನಿದರನೇ! ನಿಜವಾಗಲೂ ಇಚ್ಛಿಸುವವನಂತೆ ಆಸೆಯಿಲ್ಲದಿದ್ದರೂ, ರಜೋಗುಣ ತಮೋಗುಣಗಳಿಂದ ಛಾದಿತನಾಗಿ ಈ ರೀತಿಯಲ್ಲಿ ಕಪಟ ಸ್ತುತಿಗಳಿಂದ ಸ್ತುತಿಸಿದರು, ಇದನ್ನೆ ವ್ಯಾಜವಾಗಿ ಹಿಡಿದು ನೀವೇ ನನ್ನ ಈ ರೀತಿಯ ಮನವನ್ನು ತಿದ್ದಬೇಕು.

ಸ್ಲೋಕ-60 – ” ನಿಮಗೆ ಆಸೆಯೂ ಇಲ್ಲಾ, ಅದನ್ನು ನಿಮ್ಮಲ್ಲಿ ಜನಿಸಿ ಕರುಣೆಯಿಂದ ರಕ್ಷಿಸು ಎಂದು ಇಚ್ಛಿಸುತಿದ್ದೀರಿ- ಇದನ್ನು ನಾನು ಏಕೆ ಮಾಡಬೇಕು ?” ಎಂದು ಎಮ್ಪೆರುಮಾನ್ ಕೇಳಿದಲ್ಲಿ, ಆಳವಂದಾರ್ (ತಮ್ಮ ಹಾಗು ಎಮ್ಪೆರುಮಾನಿನ ನಡುವೆ ಇರುವ) ಅವ್ಯಾಜ ಬಂಧವನ್ನು ವಿವರಿಸುತಿದ್ದಾರೆ.

ಪಿತಾ ತ್ವಮ್ ಮಾತಾ ತ್ವಮ್ ದಯಿತ ತನಯಸ್ತ್ವಂ ಪ್ರಿಯ ಸುಹೃತ್ತ್ವಮೇವ ತ್ವಮ್ ಮಿತ್ರಮ್ ಗುರುರಸಿ ಗತಿಶ್ಚಾಸಿ ಜಗತಾಮ್ |
ತ್ವದೀಯಸ್ ತ್ವದ್ಭೃತ್ಯಸ್ ತವ ಪರಿಜನಸ್ ತ್ವದ್ಗತಿರಹಂ

ಪ್ರಪನ್ನಶ್ಚೈವಮ್ ಸತ್ಯಹಮಪಿ ತವೈವಾಸ್ಮಿ ಹಿ ಭರಃ ||

ಈ ಜಗತ್ತಿಗೆ ನೀವು ತಂದೆ, ನೀನೇ ತಾಯಿ, ನೀನೇ ಪ್ರಿಯ ಪುತ್ರನು, ನೀನೇ ಹಿತೈಶಿಯಾದ ಸುಹೃದ್, ನೀನೇ (ರಹಸ್ಯ/ ಗುಹ್ಯ ವಿಷಯಗಳನ್ನು ಹೇಳತಕ್ಕ) ಆಲಮ್ಬಿಸಲ್ತಕ್ಕ ಮಿತ್ರನು, ನೀನೆ ಆಚಾರ್ಯನು, ನೀನೆ ಉಪಾಯವು, ನೀನೇ ಉಪೇಯವು, ಹಾಗು ನಾನು ನಿನ್ನವನು ನಿನ್ನ ದಾಸನು, ನಿನ್ನ ಶೇಷಭೂತನು, ನಿನ್ನನ್ನೇ ಪರಮಪ್ರಾಪ್ಯಪ್ರಾಪಕವಾಗಿ ಇರುವವನು; ಹೀಗಿದಲ್ಲಿ ನಿನ್ನಿನ್ನಂದಲೆ ರಕ್ಷಿತವ್ಯನಲ್ಲವೆ?

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/sthothra-rathnam-slokams-51-to-60-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment