ರಾಮಾನುಜ ನೂಱ್ಱ್ರಂದಾದಿ – ಸರಳ ವಿವರಣೆ – 11 ರಿಂದ 20ನೆ ಪಾಸುರಗಳು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ

ಪೂರ್ಣ ಸರಣಿ

<< ಹಿಂದಿನ ಶೀರ್ಷಿಕೆ

ಹನ್ನೊಂದನೇ ಪಾಸುರ. ತಿರುಪ್ಪಾನಾಳ್ವಾರ್ ಅವರ ದೈವಿಕ ಪಾದಗಳನ್ನು ತನ್ನ ತಲೆಯ ಮೇಲೆ ಧರಿಸಿರುವ ರಾಮಾನುಜರ  ಅವರ ಅಡಿಯಲ್ಲಿ ಆಶ್ರಯ ಪಡೆದವರ ಚಟುವಟಿಕೆಗಳ ಹಿರಿಮೆಯ ಬಗ್ಗೆ ಎಷ್ಟು ಹೇಳಿದರು ಸಾಲದು ಎಂದು ಅಮುಧನಾರ್  ಹೇಳುತ್ತಾರೆ.

ಶೀರಿಯ ನಾಣ್ಮರೈ ಚೆಂಪೊರುಳ್ ಸೆಂದಮಿೞಾಳ್ ಅಳಿತ್ತ

ಪಾರ್ ಇಯಲುಮ್ ಪುಗೞ್ ಪಾಣ್ ಪೆರುಮಾಳ್ ಶರಣಾಮ್ ಪದುಮ

ತ್ತಾರ್ ಇಯಲ್ ಶೆನ್ನಿ ಇರಾಮಾನುಶನ್ ತನ್ನೈ ಚ್ಚಾರ್ನ್ದವರ್ ತಂ

ಕಾರಿಯ ವಣ್ಮೈ  ಎನ್ನಾಲ್ ಶೊಲ್ಲೊಣಾದಿಕ್ಕಡಲ್ ಇಡತ್ತೇ                

 ತಿರುಪ್ಪಾನಾಳ್ವಾರ್  ಕರುಣಾಮಯವಾಗಿ ನಮಗೆ ತಮಿೞಿನ ಸುಂದರವಾದ ಹಾರವನ್ನು ನೀಡಿದರು, ಇದು ನಾಲ್ಕು ವೇಧಗಳ ವಿಶಿಷ್ಟ ಅರ್ಥಗಳ ಹಿರಿಮೆಯನ್ನು ಹೊಂದಿದೆ, ಏಕೆಂದರೆ ಇದು ಎಂಪೆರುಮಾನ್‌ಗೆ ಸಂಬಂಧಿಸಿದ ವಿಷಯಗಳನ್ನು ವಿವರಿಸುತ್ತದೆ. ಕಮಲದ ಹೂವುಗಳಂತೆ ಇರುವ ತಿರುಪ್ಪಾನಾಳ್ವಾರ್  ಅವರ ದೈವಿಕ ಪಾದಗಳಿಂದ ಎಂಪೆರುಮಾನಾರ್  ತನ್ನ ದೈವಿಕ ತಲೆಯನ್ನು ಅಲಂಕರಿಸಿದ್ದಾರೆ . ಅಂತಹ ರಾಮಾನುಜರನ್ನು ತಮ್ಮ ಆಶ್ರಯವಾಗಿ ತೆಗೆದುಕೊಂಡಿರುವ ಈ ಜಗತ್ತಿನಲ್ಲಿರುವವರ ಚಟುವಟಿಕೆಗಳ ಬಗ್ಗೆ ನಾನು ಎಷ್ಟು ಹೇಳಿದರು ಸಾಲದು.

ಹನ್ನೆರಡನೆ ಪಾಸುರ. ತಿರುಮೞಿಸೈ  ಆಳ್ವಾರ್  ಅವರ ದೈವಿಕ ಪಾದಗಳಲ್ಲಿ  ವಾಸಿಸುವ  ರಾಮಾನುಜರನ್ನು ಪೂಜಿಸುವವರನ್ನು ಹೊರತುಪಡಿಸಿ ಬೇರೆಯವರ ಬಗ್ಗೆ ಅವರಿಗೆ ಪ್ರೀತಿ ಇದೆಯೇ ಎಂದು ಅಮುಧನಾರ್ ಪ್ರಶ್ನಿಸುತ್ತಾರೆ.

ಇಡಂಕೊಂಡ ಕೀರ್ತಿ ಮಱಿಶೈಕ್ಕಿಱೈವನ್ ಇಣೈ ಅಡಿಪ್ಪೋದು

ಅಡಂಗುಂ ಇದಯತ್ತಿರಾಮಾನುಶನ್ ಅಂ ಪೊಱ್ ಪಾದಮ್ ಎನ್ಱುಂ

ಕಡಂಗೊಂಡಿಱೈಂಜುಂ ತಿರು ಮುನಿವರ್ಕ್ಕನ್ಱಿ ಕಾದಲ್ ಶೆಯ್ಯಾ

ತಿಡಂಗೊಂಡ ಜ್ಞಾನಿಯರ್ಕೇ ಅಡಿಯೇನ್ ಅನ್ಬು ಶೆಯ್ವದುವೇ                      

ತಿರುಮೞಿಸೈ  ಆಳ್ವಾರ್ ಅವರ ಗುಣಗಳ ಹಿರಿಮೆ ಈ ಭೂಮಿಯಾದ್ಯಂತ ಹರಡಿದೆ. ಎಂಪೆರುಮಾನಾರ ದಿವ್ಯ ಸ್ವರೂಪದಲ್ಲಿ  ತಿರುಮೞಿಸೈ  ಆಳ್ವಾರ್ ಅವರ ಪುಷ್ಪಗಳಂತೆ ಇರುವ ದೈವಿಕ ಪಾದಗಳು ವಾಸಿಸುತ್ತವೆ. ಅಂತಹ ಎಂಪೆರುಮಾನಾರ  ದೈವಿಕ ಪಾದಗಳನ್ನು ನಿರಂತರವಾಗಿ ಧ್ಯಾನಿಸುವವರು ಮತ್ತು ಅಂತಹ ದೈವಿಕ ಪಾದಗಳನ್ನು ಪೂಜಿಸುವ ಸಂಪತ್ತು ಹೊಂದಿರುವವರು, ಈ ಕಾರ್ಯವು ಅವರ ಮೂಲ ಸ್ವರೂಪಕ್ಕೆ ಅನುಗುಣವಾಗಿದೆ ಎಂದು ಭಾವಿಸುವವರು ಇದ್ದಾರೆ . ಕಠಿಣ ಹೃದಯ ಹೊಂದಿರುವ, ಮತ್ತು ಎಂಪೆರುಮಾನಾರ ದೈವಿಕ ಪಾದಗಳ ಬಗ್ಗೆ ಪ್ರೀತಿಯನ್ನು ಹೊಂದಿರದ ಯಾರೊಬ್ಬರ ಬಗ್ಗೆ ನಾನು ಪ್ರೀತಿ ತೋರಿಸುತ್ತೇನೆಯೇ?

ಹದಿಮೂರನೇ ಪಾಸುರ. ತೊಂಡರಡಿಪ್ಪೊಡಿ ಆಳ್ವಾರ್ ಅವರ ದೈವಿಕ ಪಾದಗಳನ್ನು ಹೊರತುಪಡಿಸಿ ಬೇರೆ ಯಾವ ಆಸೆ ಇಲ್ಲದಿರುವ ರಾಮಾನುಜರ  ದೈವಿಕ ಪಾದಗಳೇ  ನಮ್ಮ ಏಕೈಕ ಉದ್ದೇಶ [ಅಂತಿಮ ಫಲಿತಾಂಶ].

ಶೆಯ್ಯುಂ ಪಶುನ್ ತುಳಬ ತ್ತೊೞಿಲ್ ಮಾಲೈಯುಂ ಶೆಂದಮಿೞಿಲ್

ಪೆಯ್ಯುಂ ಮಱೈ ತ್ತಮಿೞ್ ಮಾಲೈಯುಂ ಪೇರಾದ ಶೀರ್ ಅರಂಗತ್ತೈಯನ್

ಕೞಱ್ಕಣಿಯುಂ ಪರನ್ ತಾಳ್ ಅನ್ಱಿ ಆದರಿಯಾ

ಮೆಯ್ಯನ್ ಇರಾಮಾನುಶನ್ ಶರಣೇ ಗತಿ ವೇಱೆನಕ್ಕೇ           

ದಾಸ್ಯದ ಗಡಿಯಲ್ಲಿ ಲಂಗರು ಹಾಕಿರುವ ತೊಂಡರಡಿಪ್ಪೊಡಿ ಆಳ್ವಾರ್ ,  ನಿರ್ಮಲ ತುಳಸಿಯ ಹೂವಿನ ಹಾರವನ್ನು  ಮತ್ತು ತಮಿೞ್  ವೇದ  ಹಾರದಿಂದ  [ವೇದಗಳ ] ಗುಪ್ತ ಅರ್ಥಗಳನ್ನು  ಚೆನ್ನಾಗಿ ಬಹಿರಂಗಪಡಿಸಿ,  ಶ್ರೀರಂಗಂನಲ್ಲಿ ಶಾಶ್ವತವಾಗಿ ಉಳಿಯುವ ಎಂಪೆರುಮಾನ  ದೈವಿಕ ಪಾದಗಳನ್ನು ಅಲಂಕರಿಸಿದ್ದಾರೆ. ನನ್ನ ಏಕೈಕ ಅಂತಿಮ ಗುರಿ (ಪ್ರಯೋಜನ)  , ಆ ತೊಂಡರಡಿಪ್ಪೊಡಿ ಆಳ್ವಾರ್  ಅವರ ದೈವಿಕ ಪಾದಗಳನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಬಯಸದ ಸತ್ಯವಾದ ರಾಮಾನುಜನ ದೈವಿಕ ಪಾದಗಳು.

ಹದಿನಾಲ್ಕನೇ ಪಾಸುರ . ಕುಳಶೇಖರ ಆಳ್ವಾರರ ಪಾಸುರಗಳನ್ನು ಪಠಿಸುವವರನ್ನು ಹೊಗಳುವ ರಾಮಾನುಜರಿಂದ ಅವರು ಬೇರ್ಪಡೆಯಾಗದೆ ಇರುವುದರಿಂದ ಇತರ ಮೂಲಗಳಿಂದ ಉತ್ಕೃಷ್ಟ ಹಿತಗಳನ್ನು ಪಡೆಯುವ ತನ್ನ ಸ್ವಭಾವವನ್ನು ತ್ಯಜಿಸಿದ್ದಾರೆ ಎಂದು ಅಮುಧನಾರ್ ಹೇಳುತ್ತಾರೆ.  

ಕತಿಕ್ಕು ಪ್ಪದಱಿ ವೆಂಗಾನಮುಂ ಕಲ್ಲುಮ್ ಕಡಲುಮ್ ಎಲ್ಲಾಂ

ಕೊದಿಕ್ಕ ತ್ತವಂಜೆಯ್ಯುಂ ಕೊಳ್ಗೈ ಅಟ್ರೇನ್ ಕೊಲ್ಲಿ ಕಾವಲನ್ ಸೊಲ್

ಪದಿಕ್ಕುಂ ಕಲೈ ಕ್ಕವಿ ಪಾಡುಂ ಪೆರಿಯವರ್ ಪಾದಂಗಳೇ

ತುದಿಕ್ಕುಂ  ಪರಮನ್ ಇರಾಮಾನುಶನ್ ಎನ್ನೈ ಚೋರ್ವಿಲನೇ      

ರತ್ನಗಳಂತೆ ಶಾಸ್ತ್ರಗಳ ಪದಗಳಿಂದ ಅಲಂಕರಿಸಲ್ಪಟ್ಟ  ಕುಳಶೇಖರ ಆಳ್ವಾರರ ಪಾಸುರಗಳನ್ನು ನಿಷ್ಠೆಯಿಂದ ಪಠಿಸುವವರ ದಿವ್ಯ ಪಾದಗಳನ್ನು ಪ್ರಶಂಸಿಸುವ ಮತ್ತು ಉತ್ಕೃಷ್ಟವಾದ ರಾಮಾನುಜ ನನ್ನಿಂದ ಬೇರ್ಪಡೆಯಾಗುವುದಿಲ್ಲ. ಹಾಗಾಗಿ, ಬೇಕಾಗಿರುವ ಸಲುಗೆಗಳಿಗಾಗಿ ಆತುರದಿಂದ ದಟ್ಟ ಕಾಡುಗಳಲ್ಲಿ, ಗುಡ್ಡಗಳಲ್ಲಿ, ಸಾಗರದಲ್ಲಿ ನೋಯಿಸುವ ತಪಸ್ಸು ಮಾಡುವ ನನ್ನ ಸ್ವಭಾವವನ್ನು ತೊಲಗಿಸಿಕೊಂಡೆ.

ಹದಿನೈದನೇ ಪಾಸುರ. ಪೆರಿಯಾಳ್ವಾರರ ದಿವ್ಯ ಪಾದಗಳಲ್ಲಿ ಸದಾ ತನ್ನ ಮನಸನ್ನು ತೊಡಗಿಸಿಕೊಂಡಿರುವ ಎಂಪೆರುಮಾನಾರ್ ದಿವ್ಯಗುಣಗಳಲ್ಲಿ  ನಿರತರಾಗದಿರುವವರ ಜೊತೆ ತಾನು ಸಹವಾಸ ಮಾಡುವುದಿಲ್ಲ ಎಂದು ಅಮುಧನಾರ್ ಹೇಳುತ್ತಾರೆ. ಅವರಿಗೆ ಅದಕ್ಕಿಂತ ಕೀಳಾದದ್ದು ಬೇರಿಲ್ಲ ಎಂದು ಹೇಳುತ್ತಾರೆ.

ಶೋರಾದ ಕಾದಲ್ ಪೆರುಂಜುೞಿಪ್ಪಾಲ್  ತೊಲ್ಲೈ ಮಾಲೈ ಒನ್ಱುಂ

ಪಾರಾದವನೈ ಪಲ್ಲಾಂಡೆನ್ಱು ಕಾಪ್ಪಿಡುಂ ಪಾನ್ಮೈಯನ್   ತಾಳ್

ಪೇರಾದ ಉಳ್ಳತ್ತಿರಾಮಾನುಶನ್ ತನ್ ಪಿಱಂಗಿಯ ಶೀರ್

ಶಾರಾ ಮನಿಶರೈ ಚ್ಚೇರೇನ್ ಎನಕ್ಕೆನ್ನ ತಾೞ್ವಿನಿಯೇ        

ಎಲ್ಲರನ್ನೂ ರಕ್ಷಿಸುವ, ಶಾಶ್ವತ ಮತ್ತು  ಅಚಲವಾದ ಭಕ್ತಿಯಲ್ಲಿ ಸೆಳೆಯುವ  ಶ್ರೇಷ್ಠತೆಯನ್ನು ಎಂಪೆರುಮಾನಾರ್  ಹೊಂದಿದ್ದಾರೆ. ಯಾವುದೇ ವಿಶ್ಲೇಷಣೆ ಇಲ್ಲದೆ ಅವರು  ಸಾಮಾನ್ಯ ಜನರಿಗೆ ಮಾಡುವಂತೆಯೇ, ಪೆರಿಯಾಳ್ವಾರ್,  ಎಂಪೆರುಮಾನರಿಗಾಗಿ  ಮಂಗಳಾಶಾಸನ  (ಅವನನ್ನು ದೀರ್ಘಕಾಲ ಬದುಕಬೇಕೆಂದು ಬಯಸುವ ) ನಡೆಸುವ ಸ್ವಭಾವವನ್ನು ಹೊಂದಿದ್ದರು. ಅಂತಹ ಪೆರಿಯಾಳ್ವಾರ ದೈವಿಕ ಪಾದಗಳಿಂದ ಬೇರ್ಪಡಿಸದಿರುವ ದೈವಿಕ ಮನಸ್ಸನ್ನು ಎಂಪೆರುಮಾನಾರ್  ಹೊಂದಿದ್ದಾರೆ. ಅಂತಹ ಎಂಪೆರುಮಾನಾರ ಮಿತಿಯಿಲ್ಲದ ಗುಣಗಳನ್ನು  ಆಶ್ರಯವೆಂದು ಪರಿಗಣಿಸದವರೊಂದಿಗೆ ನಾನು ಸೇರಿಕೊಳ್ಳುವುದಿಲ್ಲ. ಈ ಆಲೋಚನೆ ನನ್ನೊಳಗೆ ಬಂದ ನಂತರ, ನನಗೆ ಯಾವ ಕೊರತೆ ಇದೆ? [ಯಾವುದೂ ಇಲ್ಲ]

ಹದಿನಾರನೇ ಪಾಸುರ. ಅವರಿಗೆ ಪ್ರೀತಿಪಾತ್ರರಾದ  ಅಂಡಾಳ್   ಕೃಪೆಯನ್ನು ಸ್ವೀಕರಿಸಿದ ಎಂಪೆರುಮಾನಾರ್  ಮಾಡಿದ ದೊಡ್ಡ ಲಾಭದ ಬಗ್ಗೆ ಅಮುಧನಾರ್  ಕರುಣಾಮಯದಿಂದ ಈ ಜಗತ್ತಿಗೆ ಬರೆಯುತ್ತಾರೆ .

ತಾೞ್ವು ಒನ್‍ಱು ಇಲ್ಲಾ ಮಱೈ ತಾೞ್ನ್ದು ತಲಮುೞುದುಂ ಕಲಿಯೇ

ಆಳ್ಗಿನ್ಱ  ನಾಳ್ ವಂದು ಅಳಿತ್ತವನ್ ಕಾಣ್ಮಿನ್ ಅಂಗರ್ ಮೌಲಿ

ಶೂೞ್ಗಿನ್ಱ ಮಾಲೈಯೈ ಚೂಡಿ ಕ್ಕೊಡುತ್ತವಳ್ ತೊಲ್ ಅರುಳಾಲ್  

ವಾೞ್ಗಿನ್ಱ ವಳ್ಳಲ್ ಇರಾಮಾನುಶನ್ ಎನ್ನುಂ ಮಾ ಮುನಿಯೇ  

ಆಂಡಾಳ್  ಮೊದಲು  ತನ್ನ  ಮೇಲೆ ಹಾರವನ್ನು ಧರಿಸಿ ನಂತರ ಆ ಹಾರವನ್ನು ಪೆರಿಯ ಪೆರುಮಾಳಿನ  ದೈವಿಕ ಕಿರೀಟದ ಮೇಲೆ ಅಲಂಕರಿಸಲು ನೀಡಿದಳು. ಆಂಡಾಳಿನ  ನೈಸರ್ಗಿಕ ಅನುಗ್ರಹದಿಂದಾಗಿ, ಎಲ್ಲಾ  ಋುಷಿಮುನಿಗಳ ಮಹಾ  ನಾಯಕನಾಗಿ ಎಂಪೆರುಮಾನಾರ್ ಉನ್ನತಿ ಪಡೆದರು. ಇಡೀ ಭೂಮಿಯು ಸಂಪೂರ್ಣವಾಗಿ  ಕತ್ತಲೆಯಲ್ಲಿದ್ದಾಗ ಕಲಿಯ ಸಮಯದಲ್ಲಿ (ನಾಲ್ಕು ಯುಗಗಳಲ್ಲಿ  ಒಂದು) ಯಾವುದೇ ಕೊರತೆಗಳಿಲ್ಲದ ವೇದಗಳನ್ನು  ಇತರ ದಾರ್ಶನಿಕರು ನಿಂದಿಸಿದಾಗ, ಯಾರೊಬ್ಬರೂ ಕೇಳದೆ ಎಂಪೆರುಮಾನಾರ್   ಅವರು ವೇದಗಳನ್ನು ಉನ್ನತಿಗೇರಿಸಿದರು.

ಹದಿನೇಳನೇ ಪಾಸುರ . ತಿರುಮಂಗೈ ಆಳ್ವಾರ್ಗೆ  ಮೀಸಲಾಗಿರುವ ನಮ್ಮ ಸ್ವಾಮಿ, ಎಂಪೆರುಮಾನಾರ್   ಅನ್ನು ಸಾಧಿಸುವವರು, ಎಂತಹ  ಅಡೆತಡೆಗಳನ್ನು ಎದುರಿಸಿದರೂ ದಿಗ್ಭ್ರಮೆಗೊಳ್ಳುವುದಿಲ್ಲ.

ಮುನಿಯಾರ್ ತುಯರಂಗಳ್ ಮುಂದಿಲುಮ್ ಇನ್ಬಂಗಳ್ ಮೊಯ್ತಿಡಿನುಂ

ಕನಿಯಾರ್ ಮನಂ ಕಣ್ಣಮಂಗೈ ನಿನ್ಱಾನೈ ಕಲೈ ಪರವುಂ

ತನಿ ಆನೈಯೈ ತಣ್ ತಮಿೞ್ ಸೈದ ನೀಲನ್ ತನಕ್ಕು  ಉಲಗಿಲ್

ಇನಿಯಾನೈ ಎಂಗಳ್ ಇರಾಮಾನುಶನೈ ವಂದೈಯ್ದಿನರೇ

ಸ್ವತಂತ್ರ ಆನೆಯಂತೆ ತಿರುಕ್ಕಣ್ಣಮಂಗೈನಲ್ಲಿ ಹೆಮ್ಮೆಯಿಂದ ನಿಂತಿರುವ, ಎಲ್ಲ ಶಾಸ್ತ್ರ ಗಳಿಂದ ಪ್ರಶಂಸಿಸಲ್ಪಟ್ಟ ಎಂಪೆರುಮಾನಾರ್ , ತಿರುಮಂಗೈ ಆಳ್ವಾರ್ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಮ್ಮ ಸ್ವಾಮಿ, ರಾಮಾನುಜ  ತಿರುಮಂಗೈ ಆಳ್ವಾರ್  ಬಗ್ಗೆ ಬಹಳ ಪ್ರೀತಿ ಪಡೆದಿರುವರು . ಅಂತಹ ರಾಮಾನುಜರನ್ನು  ಬಂದು ಸಾಧಿಸುವವರಿಗೆ ಅಡೆತಡೆಗಳನ್ನು ಎದುರಿಸುವಾಗಲೂ ದುಃಖವಾಗುವುದಿಲ್ಲ. ಸಂತೋಷದ ಘಟನೆಗಳು ನಡೆದರೆ ಅವರು ಹೆಚ್ಚು ಸಂತೋಷವನ್ನು ಅನುಭವಿಸುವುದಿಲ್ಲ.

ಹದಿನೆಂಟನೇ ಪಾಸುರ . ಮಧುರಕವಿ ಆಳ್ವಾರ್   ತನ್ನ ದೈವಿಕ ಹೃದಯದಲ್ಲಿ ನಮ್ಮಾಳ್ವಾರ್  ಅನ್ನು ಹೊಂದಿದ್ದಾರೆ . ಎಲ್ಲಾ ಆತ್ಮ ಗಳು (ಚೇತನಗಳು, ಮನೋಭಾವದ ಘಟಕಗಳು) ಉನ್ನತಿ ಹೊಂದಲಿ ಎಂದು ಎಂಪೆರುಮಾನಾರ್, ಮಧುರಕವಿ ಆಳ್ವಾರ್  ಅವರ ಗುಣಗಳನ್ನು ಕರುಣೆಯಿಂದ ವಿವರಿಸುವರು, ಎಂದು ಅಮುಧನಾರ್ ಹೇಳುತ್ತಾರೆ.

ಎಯ್ದಱ್ಕು  ಅರಿಯ ಮಱೈಗಳೈ ಆಯಿರಮ್ ಇಂದಮಿೞಾಲ್

ಸೈದಱ್ಕು ಉಲಗಿಲ್ ವರುಂ ಸಡಗೋಪನೈ ಚಿಂದೈ ಉಳ್ಳೇ

ಪೆಯ್ದಱ್ಕು ಇಸೈಯುಂ ಪೆರಿಯವರ್ ಸೀರೈ ಉಯಿರ್ಗಳ್ ಎಲ್ಲಾಮ್  

ಉಯ್ದಱ್ಕು ಉದವುಂ ಇರಾಮಾನುಶನ್ ಎಮ್ ಉಱುತುಣೈಯೇ

ಬಹಳ ಕಷ್ಟಕರವಾದ ವೇದಗಳ  ಅರ್ಥಗಳ ಬಗ್ಗೆ ಕರುಣೆಯಿಂದ ಮಾತನಾಡುವ ಸಲುವಾಗಿ ಮತ್ತು ಮಕ್ಕಳು ಮತ್ತು ಮಹಿಳೆಯರು ಸಹ ಅವುಗಳನ್ನು ಕಲಿಯಲು ಸಾಧ್ಯವಾಗುವಂತೆ ಸಾವಿರ ಪಾಸುರಗಳ [ತಿರುವಾಯ್ಮೊೞಿ ] ಮೂಲಕ ಅರ್ಥಮಾಡಿಕೊಳ್ಳಲು  ನಮ್ಮಾಳ್ವಾರ್ ಅವತರಿಸಿದರು. ಅವರನ್ನು ಶಠಕೋಪನ್ ಎಂದೂ ಕರೆಯಲಾಯಿತು  ಮತ್ತು ವೇದಗಳನ್ನು ನಂಬದವರಿಗೆ ಅಥವಾ ವೇದಗಳನ್ನು ತಪ್ಪಾಗಿ ಅರ್ಥೈಸುವವರಿಗೆ ವೈರಿಯಾಗಿದ್ದರು. ಶ್ರೀ ಮಧುರಕವಿ ಆಳ್ವಾರ್  ಅವರು ತಮ್ಮ ದೈವಿಕ ಮನಸ್ಸಿನಲ್ಲಿ ನಮ್ಮಾಳ್ವಾರ್  ಅನ್ನು ಉಳಿಸಿಕೊಳ್ಳಲು ಸೂಕ್ತವಾದ ಶ್ರೇಷ್ಠತೆಯನ್ನು ಹೊಂದಿದ್ದರು. ಮಧುರಕವಿ ಆಳ್ವಾರ್  ಅವರ ಜ್ಞಾನ ಮುಂತಾದ  ಗುಣಗಳನ್ನು  ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಎಲ್ಲಾ ಆತ್ಮಗಳನ್ನು ಉನ್ನತಿಗೇರಿಸಲು ಸಹಾಯ ಮಾಡಿದ ಎಂಪೆರುಮಾನಾರ್, ಅವರ ಸಹಚರ ಎಂದು ಅಮುದನಾರ್ ಹೇಳುತ್ತಾರೆ.

 ಹತ್ತೊಂಬತ್ತನೇ ಪಾಸುರಮ್: ನಮ್ಮಾಳ್ವಾರೇ ತನಗೆ ಎಲ್ಲವೂ ಎಂದು ಕರುಣೆಯಿಂದ ಹೇಳಿದ ಎಂಪೆರುಮಾನಾರ್, ಅವರಿಗೆ ಬಹಳ ಮಾಧುರ್ಯ ಅನುಭವ  ಎಂದು ಅಮುದನಾರ್ ಹೇಳುತ್ತಾರೆ.

ಉಱು ಪೆರುಂ ಸೆಲ್ವಮುಂ ತಂದೈಯುಂ ತಾಯುಮ್ ಉಯರ್ ಗುರುವುಮ್

ವೆಱಿ ತರು ಪೂಮಗಳ್ ನಾದನುಮ್ ಮಾಱನ್ ವಿಳಂಗಿಯ ಶೀರ್

ನೆಱಿ ತರುಂ ಸೆಂದಮಿೞ್ ಆರಣಮೇ ಎನ್ಱು ಇನ್ ನೀಳ್ ನಿಲತ್ತೋರ್

ಅಱಿದರ ನಿನ್ಱ ಇರಾಮಾನುಶನ್ ಎನಕ್ಕು ಆರಮುದೇ

ಸರ್ವೇಶ್ವರನ್ (ಎಂಪೆರುಮಾನ್ ) ಎಲ್ಲಾ ಅಂತಿಮ ಗುರಿಗಳಲ್ಲಿ ಶ್ರೇಷ್ಠವಾದುದು, ಅನಿಯಮಿತ ಸಂಪತ್ತು, ತಂದೆ, ತಾಯಿ, ಆಚಾರ್ಯ (ಶಿಕ್ಷಕ) ಮತ್ತು ಪರಿಮಳಯುಕ್ತ ಹೂವಿನಲ್ಲಿ ಜನಿಸಿದ ಪೆರಿಯ ಪಿರಾಟ್ಟಿಯ ಪತಿ. ಎಂಪೆರುಮಾನ್  ತನ್ನ ಕರುಣೆಯ ಮೂಲಕ ಈ ಎಲ್ಲವನ್ನು ನಮ್ಮಾಳ್ವಾರ್ಗೆ ಪ್ರಕಟಿಸಿದ ಕೂಡಲೇ, ಆಳ್ವಾರ್ ತಿರುವಾಯ್ಮೊೞಿ  ಸಂಯೋಜಿಸಿದರು, ಇದನ್ನು ಧ್ರಾವಿಡ  ವೇದಂ  (ತಮಿೞ್  ವೇದಂ) ಎಂದು ಆಚರಿಸಲಾಗುತ್ತದೆ. ವಿಶ್ವದ ಎಲ್ಲಾ ಜನರು  ಅರ್ಥಮಾಡಿಕೊಳ್ಳಲು  ತಿರುವಾಯ್ಮೊೞಿ  ಯನ್ನು ವಿವರಿಸಿದ ಎಂಪೆರುಮಾನಾರ್ ನನಗೆ ಮಧುರ  ಮಕರಂದವಾಗಿದ್ದಾರೆ.

ಇಪ್ಪತ್ತನೇ ಪಾಸುರಂ : ಅಮುದನಾರ್  ಹೇಳುವಂತೆ ನಾಥಮುನಿಗಳ್  ಅನ್ನು ಅಪೇಕ್ಷೆಯಿಂದ ಆನಂದಿಸುವ ಎಂಪೆರುಮಾನಾರ್ ತನ್ನ ದೊಡ್ಡ ಸಂಪತ್ತು.

ಆರ ಪೊೞಿಲ್ ತೆನ್ ಕುರುಗೈಪ್ಪಿರಾನ್ ಅಮುದ ತಿರುವಾಯ್

ಈರ ತಮಿೞಿನ್ ಇಸೈ ಉಣರ್ನ್ದೋರ್ಗಟ್ಕು ಇನಿಯವರ್ ತಂ

ಸೀರೈ ಪಯಿನ್ಱು ಉಯ್ಯುಮ್ ಶೀಲಮ್ ಕೊಳ್ ನಾದಮುನಿಯೈ ನೆಂಜಾಲ್  

ವಾರಿ ಪರುಗುಂ ಇರಾಮಾನುಶನ್ ಎಂದನ್ ಮಾನಿದಿಯೇ

ಶ್ರೀಚಂದನ ತೋಪಿನಿಂದ ಸುತ್ತುವರೆದಿರುವ ಸುಂದರವಾದ ತಿರುನಗರಿಯ (ಕುರುಗೂರ್) ಅಧಿಪತಿ ನಮ್ಮಾಳ್ವಾರ್, ತಮ್ಮ ದೈವಿಕ ತುಟಿಗಳ ಮೂಲಕ ತಿರುವಾಯ್ಮೊೞಿ ಅತ್ಯಂತ ಕಾರುಣ್ಯದಿಂದ  ಸಂಯೋಜಿಸಿದ್ದಾರೆ. ಸಂಗೀತದೊಂದಿಗೆ ಪದ್ಯಗಳನ್ನು ತಿಳಿದುಕೊಳ್ಳುವಲ್ಲಿ ತೊಡಗಿರುವವರನ್ನು ಸಮೃದ್ಧವಾಗಿ [ಆಳವಾದ ಭಕ್ತಿಯಿಂದ] ಇರುವಂತೆ ಮಾಡುವ ಗುಣವನ್ನು ನಾಥಮುನಿಗಳ್  ಹೊಂದಿದ್ದರು. ಎಂಪೆರುಮಾನಾರ್ , ಆ ದೈವ ಹೃದಯದಲ್ಲಿ ಅಂತಹ ನಾಥಮುನಿಗಳನ್ನು ಬಹಳ ಆಸೆಯಿಂದ ಆನಂದಿಸಿದವರು ,ನನ್ನ ದೊಡ್ಡ ಸಂಪತ್ತು.    

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: https://divyaprabandham.koyil.org/index.php/2020/05/ramanusa-nurrandhadhi-pasurams-11-20-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment