ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:
ಪಾಸುರ-21
ಅವ: (ಮುಡಿಯಾರ್ ತಿರುಮಲೈಯಿಲ್…)
ಈ ಪಾಸುರದಲ್ಲಿ ಮಾಮುನಿಗಳು ತಿರುಮಾಲಿರುಂಶೋಲೈಯಿನಲ್ಲಿ ನೆಲೆಸಿರುವ ಅೞಗರ್ ಎಮ್ಪೆರುಮಾನಿನ ಸೌಂದರ್ಯವನ್ನು ಪೂರ್ಣವಾಗಿ ಅನುಭವಿಸವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ
ಮುಡಿಯಾರ್ ತಿರುಮಲೈಯಿಲ್ ಮೂಣ್ಡು ನಿನ್ಡ್ಱ ಮಾಱನ್
ಅಡಿವಾರಮ್ ತನ್ನಿಲ್ ಅೞಗರ್ ವಡಿವೞಗೈಪ್
ಪಟ್ರಿ ಮುಡಿಯುಮ್ ಅಡಿಯುಮ್ ಪಡಿಗಲನುಮ್
ಮುಟ್ರುಮ್ ಅನುಭವಿತ್ತಾನ್ ಮುನ್
ಹಿಂದೆ ಆೞ್ವಾರ್ ಧೃಡವಗಿ ನಿಂತು, ಶ್ರೇಣಿಗಳು(ಶಿಖರಗಳಿರುವ) ತಿರುಮಲೆಯನ್ನು ಅನುಭವಿಸಿದರು ಹಾಗು ಪೂರ್ಣವಾಗಿ ಅೞಗರ್ ಎಮ್ಪೆರುಮಾನಿನ ಸೌಂದರ್ಯ ಮತ್ತು ಅವನ ದಿವ್ಯ ರೂಪ, ಕಿರೀಟ ನೂಪುರ(ಗೆಜ್ಜೆ) ಹಾಗು ಇತರ ಆಭರಣಗಳನ್ನು ಅನುಭಸಿಸಿದರು.
ಪಾಸುರ-22
ಅವ: (ಮುನ್ನಮ್ ಅೞಗರ್ ಎೞಿಲ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ “ಕರಣಗಳ(ಇನ್ದ್ರಿಯಗಳ) ಕೊರೆಯಿಂದ ಎಮ್ಪೆರುಮಾನಿನ ಗುಣಗಳನ್ನು ಅನುಭವಿಸಲಾಗುತ್ತಿಲ್ಲ” ಎಂದು ಭ್ರಮಿತರಾದದ್ದನ್ನು ನೋಡಿ ಎಮ್ಪೆರುಮಾನ್ ಆ ವನ್ನು ದೂರಮಾಡಿದನು ಎಂಬ (ಅಭಿಪ್ರಾಯದ) ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಮುನ್ನಮ್ ಅೞಗರ್ ಎೞಿಲ್ ಮೂೞ್ಗುಮ್ ಕುರುಗೈಯರ್ ಕೋನ್
ಇನ್ನವಳವೆನ್ನ ಎನಕ್ಕರಿದಾಯ್ತ್ತೆನ್ನ
ಕರಣಕ್ ಕುಱೈಯಿನ್ ಕಲಕ್ಕತ್ತೈಕ್ ಕಣ್ಣನ್
ಒರುಮೈಪ್ ಪಡುತ್ತಾನ್ ಒೞಿತ್ತು
ಹಿಂದೆ ಆೞ್ವಾರ್ ಅೞಗರ್ ಎಮ್ಪೆರುಮಾನಿನ ಸೌಂದರ್ಯದಲ್ಲಿ ಮಗ್ನರಾಗಿದ್ದರು, ಕರಣಗಳ ಕೊರೆಯಿಂದ ಇದ್ದ ಅಜ್ಞಾನದಿಂದ , “(ಎಮ್ಪೆರುಮಾನಿಂದ ವಿಶೇಷ ಜ್ಞಾನಿದಿಂದ ಅನುಗ್ರಹಿಸಲ್ಪಟ್ಟ) ನನ್ನಿಂದಲೂ ಎಮ್ಪೆರುಮಾನಿನ ಸೌಂದರ್ಯವು ಇಷ್ಟು ಎಂದು ಅರಿಯಲು ಕಷ್ಟವಾಗಿದೆ.” ಎಂದು ಕೃಪೆಯಿಂದ ಹೇಳಿದ ಆೞ್ವಾರಿನ ಈ ಅಜ್ಞಾನವನ್ನು ದೂರಮಾಡಿ ಅವರ ಮನವನ್ನು ಸಾಂತ್ವಾನಿಸಿದರು.
ಪಾಸುರ-23
ಅವ: (ಒೞಿವಿಲಾಕ್ ಕಾಲಮ್…) ಈ ಪಾಸುರದಲ್ಲಿ ಮಾಮುನಿಗಳು ಕೈಂಕರ್ಯದಲ್ಲಿ ಇದ್ದ ಆೞ್ವಾರಿನ ದೊಡ್ಡ ಆಸೆಯನ್ನು (ರುಚಿಯನ್ನು) ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಒೞಿವಿಲಾಕ್ ಕಾಲಮ್ ಉಡನಾಗಿ ಮನ್ನಿ
ವೞುವಿಲಾ ಆಟ್ಚೆಯ್ಯ ಮಾಲುಕ್ಕು – ಎೞುಸಿಗರ
ವೇGಗಡತ್ತುಪ್ ಪಾರಿತ್ತ ಮಿಕ್ಕ ನಲಮ್ ಸೇರ್ ಮಾRಅನ್
ಪೂಃಗೞಲೈ ನೆನ್ಜೇ ಪುಗೞ್
ಓ ಹೃದಯವೇ! ಎತ್ತರವಾದ ಶಿಖರಗಳಿರುವ (ಶ್ರೇಣಿಗಳಿರುವ) ತಿರುಮಲೈಯಲ್ಲಿ ಎಮ್ಪೆರುಮಾನೊಂದಿಗೆ ಇದ್ದು ನಿರ್ದೋಷವಾದ ಕೈಂಕರ್ಯವನ್ನು ಎಂದೂ ಮಾಡಲು ಹೊರಟು ತುಂಬಾ ಆನಂದದಿಂದ ಆೞ್ವಾರಿನ ಸುಂದರ ದಿವ್ಯ ಪಾದಗಳನ್ನು ಭಜಿಸು (ಸ್ತುತಿಸು).
ಪಾಸುರ-24
ಅವ: (ಪುಗೞೊನ್ಱು ಮಾಲ್…) ಈ ಪಾಸುರದಲ್ಲಿ ಮಾಮುನಿಗಳು, ಹಿಂದೆ ಆೞ್ವಾರ್ ಕೈಂಕರ್ಯ ಪ್ರಾರ್ಥನೆಯನ್ನು ಅನುಗ್ರಹಿಸಲು ತಾನು ಅಂತರ್ಯಾಮಿಯಾಗಿರುವುದನ್ನು ಅವರಿಗೆ ಪ್ರಕಾಶಿಸಿದನು, ಎಂಬ (ಅಭಿಪ್ರಾಯದ) ಆೞ್ವಾರಿನ ಪಾಸುರ-ಕ್ಕೈಂಕರ್ಯವನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ
ಪುಗೞೊನ್ಱು ಮಾಲ್ ಎಪ್ಪೊರುಳ್ಗಳುಮ್ ತಾನಾಯ್
ನಿಗೞ್ಗಿನ್ಱ ನೇರ್ ಕಾಟ್ಟಿ ನಿಱ್ಕ – ಮಗಿೞ್ಮಾಱನ್
ಎGಗುಮ್ ಅಡಿಮೈ ಸೆಯ ಇಚ್ಚಿತ್ತು ವಾಸಿಗಮಾಯ್
ಅGಗಡಿಮೈ ಸೆಯ್ದಾನ್ ಮೊಯ್ಮ್ಬಾಲ್
ವಕುಳಾಭರಣರಾದ ಆೞ್ವಾರ್ ಎಲ್ಲಾ ವಸ್ತುಗಳಾಗಿ ಪ್ರಕಾಶಿಸುವ ಎಮ್ಪೆರುಮಾನನ್ನು ಸೇವಿಸಲು ಇಚ್ಛಿಸಿದಂತೆ ನಿರ್ದೋಷವಾದ ಜ್ಞಾನ-ಭಕ್ತಿಗಳಿಂದ ಅನುಗ್ರಿಹೀತರಾದ ಇವರು ವಾಚಿಕ ಕೈಂಕರ್ಯವನ್ನು ಸಲ್ಲಿಸಿದರು.
ಪಾಸುರ-25
ಅವ: (ಮೊಯ್ಮ್ಬಾಱುಮ್ ಮಾಲುಕ್ಕು…) ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನನ್ನು ಸೇವಿಸುವವರನ್ನು ಹೊಗಳಿ , ಸೇವಿಸಡ್ಗವರನ್ನು ನಿಂದಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ಮಾಮುನಿಗಳು ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಮೊಯ್ಮ್ಬಾರುಮ್ ಮಾಲುಕ್ಕು ಮುನ್ ಅಡಿಮೈ ಸೆಯ್ದುವಪ್ಪಾಲ್
ಅನ್ಬಾಲ್ ಆಟ್ಚೆಯ್ಬವರೈ ಆದರಿತ್ತುಮ್ – ಅನ್ಬಿಲಾ
ಮೂಡರೈ ನಿನ್ದಿತ್ತು ಮೊೞಿನ್ದರುಳುಮಾಱನ್ ಪಾಲ್
ತೇಡರಿಯ ಪತ್ತಿ ನೆನ್ಜೇ ಸೆಯ್
ಓಹೃದಯವೇ! ಹಿಂದೆ ವಾಚಿಕವಾಗಿ ಎಮ್ಪೆರುಮಾನನ್ನು ಸೇವಿಸುವುದರಲ್ಲಿರುವ ಆನಂದದಿಂದ ,ತಮ್ಮ ಕೃಪೆಯಿಂದ ,ಭಕ್ತಿಯಿಂದ ಎಮ್ಪೆರುಮಾನನ್ನು ಸೇವಿಸುವರನ್ನು ಪ್ರಶಂಸಿಸಿ, , ಭಕ್ತಿಯಿಲ್ಲದ ಮೂಢರನ್ನು ನಿನ್ದಿಸಿದ ಆೞ್ವಾರಿನಲ್ಲಿ ಪರಮ ಭಕ್ತಿಯನ್ನು ಸಲ್ಲಿಸು .
ಪಾಸುರ-26
ಅವ: (ಸೆಯ್ಯ ಪರತ್ತುವಮಾಯ್…) ಈ ಪಾಸುರದಲ್ಲಿ ಮಾಮುನಿಗಳು ಅರ್ಚಾವತಾರದವರೆಗು ಬರುವ ಎಮ್ಪೆರುಮಾನಿನ ಸೌಲಭ್ಯವನ್ನು ಸಂಸಾರಿಗಳಿಗೆ ಉಪದೇಶಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಸೆಯ್ಯ ಪರತ್ತುವಮಾಯ್ಚ್ ಚೀರಾರ್ ವಿಯೂಗಮಾಯ್ತ್
ತುಯ್ಯ ವಿಬವಮಾಯ್ತ್ ತೋನ್ಱಿವಟ್ರುಳ್ – ಎಯ್ದುಮವರ್ಕ್ಕು
ಇನ್ನಿಲತ್ತಿಲ್ ಅರ್ಚಾವತಾರಮ್ ಎಳಿದೆನ್ಱಾನ್
ಪನ್ನು ತಮಿೞ್ ಮಾಱನ್ ಪಯಿನ್ಱು
ಶರಣಾಗತರಿಗೆ ವಿಲಕ್ಷಣವಾದ ಪರತ್ವ, ಉತ್ಯ್ತ್ಕ್ರುಷ್ಟವಾದ ವ್ಯೂಹ-ರೂಪ, ಪರಿಶುದ್ಧವಾದ ವಿಭವಗಳಲ್ಲಿ ಸರಳವಾಗಿ ಆಶ್ರಯಣೀಯನಾಗಿರುವುದು ಅರ್ಚಾವತಾರವೆಂದು ಚೇತನೊರಿಂದಿಗೆ ವಿಶ್ಲೇಶಿಸಲ್ಪಟ್ಟ ತಮಿೞ್ ವೇದವನ್ನೇ ತಮ್ಮ ಲಕ್ಷಣವೆಂದಿರುವ ಆೞ್ವಾರ್ ಉಪದೇಶಿಸಿದರು.
ಪಾಸುರ-27
ಅವ: (ಪಯಿಲುಮ್ ತಿರುಮಾಲ್…) ಈ ಪಾಸುರದಲ್ಲಿ ಮಾಮುನಿಗಳು ಭಗವದ್ಭಕ್ತರೇ ಇಚ್ಛಿಸಬೇಕಾದ ಉಪೇಯವೇಂದು ಹೇಳುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ.
ಪಯಿಲುಮ್ ತಿರುಮಾಲ್ ಪದಮ್ ತನ್ನಿಲ್ ನೆನ್ಜಮ್
ತಯಲುಣ್ಡು ನಿಱ್ಕುಮ್ ತದಿಯಱ್ಕು – ಇಯಲ್ವುಡನೇ
ಆಳಾನಾರ್ಕ್ಕಾಳಾಗುಮ್ ಮಾಱನ್ ಅಡಿ ಅದನಿಲ್
ಆಳಾಗಾರ್ ಸನ್ಮಮ್ ಮುಡಿಯಾ
ಶ್ರೀಯಪತಿಯಲ್ಲೇ ತಮ್ಮ ಹೃದಯವನ್ನಿಟ್ಟು ಅವನನ್ನು ಯಥಾಕ್ರಮ ಸೇವಿಸುವ ಭಕ್ತರನ್ನು ಸೇವಿಸಲು ಇಚ್ಛಿಸಿದ ಆೞ್ವಾರಿನ ದಿವ್ಯ ಪಾದಪದ್ಮಗಳನ್ನು ಸೇವಿಸದವರಿಗೆ (ಈ ಸಂಸಾರದಲ್ಲಿ ) ಜನ್ಮ ಮುಗಿಯದು.
ಪಾಸುರ-28
ಅವ: (ಮುಡಿಯಾದ ಆಸೈ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಹಾಗು ಅವರ ಕರಣಗಳು ತಲ್ಲಣದಲ್ಲಿದ್ದವೆಂದು ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಮುಡಿಯಾದ ಆಸೈ ಮಿಗ ಮುಟ್ರು ಕರಣನ್ಗಳ್
ಅಡಿಯಾರ್ ತಮ್ಮೈ ವಿಟ್ಟು ಅವನ್ ಪಾಲ್ ಪಡಿಯಾ – ಒನ್ಱೊನ್ಱಿನ್
ಸೆಯಲ್ ವಿರುಮ್ಬ ಉಳ್ಳದೆಲ್ಲಾಮ್ ತಾಮ್ ವಿರುಮ್ಬತ್
ತುನ್ನಿಯದೇ ಮಾಱನ್ ತನ್ ಸೊಲ್
ಆೞ್ವಾರಿನ ನಿರಂತರವಾದ ಪ್ರೀತಿ ಹೆಚ್ಚಾಗುತ್ತಲೆ, ಅವರ ಕರಣಗಳು ಭಾಗವತರನ್ನು ಬಿಟ್ಟು ಸರ್ವೇಶ್ವರನಲ್ಲಿ ಸೇರಿ, ಪ್ರತಿ ಕರಣವು ಎಲ್ಲಾ ಕರಣಗಳ ಕಾರ್ಯವನ್ನು ನಿರ್ವಹಿಸಲು ಇಚ್ಛಿಸಿತು ಹಾಗು ಆೞ್ವಾರ್ ಎಲ್ಲಾ ಕರಣಗಳ ಇಚ್ಛೆಗಳನ್ನು ಆಶಿಸಿದರು. ಈ ರೀತಿಯಲ್ಲಿ ಆೞ್ವಾರಿನ ಮಾತು ದಟ್ಟಗೊಂಡವು.
ಪಾಸುರ-29
ಅವ: (ಸೊನ್ನಾವಿಲ್ ವಾೞ್ ಪುಲವೀರ್…)
ಈ ಪಾಸುರದಲ್ಲಿ ಮಾಮುನಿಗಳು ಇತರರನ್ನು ಸೇವಿಸುವುದು ಹಾನಿಕಾರಕವಾದದ್ದು, ಹಾಗು ಭಗವದ್ ಸೇವೆ (ನಮ್ಮಿಂದ) ತಕ್ಕ ಕಾರ್ಯವೆಂದು ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಸೊನ್ನಾವಿಲ್ ವಾೞ್ ಪುಲವೀರ್ ಸೋಱು ಕೂಋಐಕ್ಕಾಗ
ಮನ್ನಾದ ಮಾನಿಡರೈ ವಾೞ್ತ್ತುದಲಾಲ್ ಎನ್ನಾಗುಮ್
ಎನ್ನುಡನೇ ಮಾದವನೈ ಏತ್ತುಮೆನುಮ್ ಕುರುಗೂರ್
ಮನ್ನರುಳಾಲ್ ಮಾಱುಮ್ ಸನ್ಮಮ್
(ಓ!) ಕವಿತಾರಚನ ಸಾಮರ್ಥ್ಯವನ್ನು ಹೊಂದಿರುವ ನಾಲಿಗೆಯುಳ್ಳ ಕವಿಗಳೇ ! ಅಲ್ಪ (ಚಿಕ್ಕ) ಆಯುಶ್ಶನ್ನು ಪಡೆದವರನ್ನು ಆನ್ನ ವಸ್ತ್ರಗಳಿಗಾಗಿ ಸ್ತುತಿಸುವುದರಿಂದ ಯಾವ ಲಾಭ ಪಡೆಯುವಿರಿ ? ಅವರನ್ನು (ಎಲ್ಲರನ್ನು) ತಮ್ಮೊಂದಿಗೆ ಸೇರಿ ಶ್ರಿಯಪತಿಯನ್ನು ಸ್ತುತಿಸಲು ಉಪದೇಶಿಸಿದ ತಿರುಕ್ಕುರುಗೂರಿನ ನಾಥರಾದ ಆೞ್ವಾರಿನ ಅನುಗ್ರಹದಿಂದ ಅವರ ಜನ್ಮ ಕೊನೆಗೊಳ್ಳುವುದು
ಪಾಸುರ-30
ಅವ: (ಸನ್ಮಮ್ ಪಲ ಸೆಯ್ದು…) ಈ ಪಾಸುರದಲ್ಲಿ ಮಾಮುನಿಗಳು “ನನ್ನ ಎಲ್ಲಾ ಕರಣಗಳು ಪುರ್ಣವಾಗಿ ಭಗವಾನಿಗಾಗಿರುವ ನನಗೆ ಯಾವ ಕೊರೆಯು ಇಲ್ಲಾ” ಎಂದು ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ.
ಸನ್ಮಮ್ ಪಲ ಸೆಯ್ದು ತಾನ್ ಇವ್ವುಲಗಳಿಕ್ಕುಮ್
ನನ್ಮೈಯುಡೈ ಮಾಲ್ ಗುಣತ್ತೈ ನಾಡೋಱುಮ್ – ಇಮ್ಮೈಯಿಲೇ
ಏತ್ತುಮ್ ಇನ್ಬಮ್ ಪೆಟ್ರೇನ್ ಎನುಮ್ ಮಾಱನೈ ಉಲಗೀರ್
ನಾತ್ತೞುಮ್ಬ ಏತ್ತುಮ್ ಒರು ನಾಳ್
“ಓ! ವಿಶ್ವದಲ್ಲಿ ವಾಸಿಸುತ್ತಿರುವ ಜನರೇ ! ಈ ಜನ್ಮದಲ್ಲಿ ಹಲವಾರು ಬಾರಿ ಅವತರಿಸಿ ವಿಶ್ವವನ್ನು ರಕ್ಷಿಸುವು ಶುಭ ಗುಣವಿರುವ ಸರ್ವೇಶ್ವರನ ಕಲ್ಯಾಣ ಗುಣಗಳನ್ನು ಸ್ತುತಿಸುವ ಆನಂದವನ್ನು ಪಡೆದೆನು. ಇಂತಹ ಆಳ್ವಾರನ್ನು ಒಂದು ದಿನವಾದರೂ ನಿನ್ನ ಪಾಲಿಗೆಯ ಮೇಲೆ ಗರುತಾಗುವಂತೆ ಸ್ತುತಿಸು.
ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್
ಮೂಲ – https://divyaprabandham.koyil.org/index.php/2020/10/thiruvaimozhi-nurrandhadhi-21-30-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org