ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 11 ರಿಂದ 20

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

ಪಾಸುರ-11
ಅವ:
ಈ ಪಾಸುರದಲ್ಲಿ ಮಾಮುನಿಗಳು ಎಲ್ಲಾ ಪದಾರ್ಥಗಳ ವ್ಯಸನವನ್ನು (ನೋವನ್ನು) ತನ್ನದಾಗಿಯೇ ಭಾವಿಸಿದ ಆಳ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ವಾಯುಮ್ ತಿರುಮಾಲ್ ಮಱೈಯ ನಿಱ್ಕ ಆಟ್ರಾಮೈ
ಪೋಯ್ ವಿಞ್ಜಿ ಮಿಕ್ಕ ಪುಲಮ್ಬುದಲಾಯ್ – ಆಯ.
ಅಱಿಯದವಟ್ರೋಡು ಅಣೈನ್ದಳುದ ಮಾಱನ್
ಸೆಱಿವಾರೈ ನೋಕ್ಕುಮ್ ತಿಣಿನ್ದು

ತನ್ನ ಭಕ್ತರಕಡೆ ಬರುವ ಶ್ರಿಯಪತಿಯು ಮರೈಯಾದ (ಕಣದಂತಿರುವ) ವೇಳೆಯಲ್ಲಿ ಅತಿಶಯಿಸುತ್ತಿರುವ ದುಃಖವು ತಡಿಯಲಾಗದ ಕಣ್ಣೀರಿನ ದಶೈಯನ್ನು ಹೋಂದಿ, ತಮ್ಮ ದುಃಖವನ್ನು ಅರಿಯಲಾಗದ ವಸ್ತುಗಳೋಂದಿಗೆ ಅಪ್ಪಿಕೋಂಡು ಅತ್ತ ಆೞ್ವಾರ್ ತಮ್ಮ ಕರುಣಾಮಯವಾದ ನೇತ್ರಗಳಿಂದ ಭಕ್ತರನ್ನು ಕಟಾಕ್ಷಿಸುತ್ತಾರೆ.

ಪಾಸುರ-12
ಅವ:
ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನಿನ ಅವತಾರದಲ್ಲಿ ಅವನ ಪ್ರಸಂಗಾತ್ ದರ್ಶಿತವಾದ (ಕಾಣಿಸಿಕೋಂಡ) ಪರತ್ವವನ್ನು ಉಪದೇಶಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ಕೃಪೆಯಿಂದ ವಿವರಿಸುತಿದ್ದಾರೆ.
ತಿಣ್ಣಿದಾ ಮಾಱನ್ ತಿರುಮಾಲ್ ಪರತ್ತುವತ್ತೈ
ನಣ್ಣಿ ಅವದಾರತ್ತೇ ನಙ್ಗುರೈತ್ತ – ವಣ್ಣಮಱಿನ್ದು
ಅಟ್ರಾರ್ಗಳ್ ಯಾವರ್ ಅವರಡಿಕ್ಕೇ ಆಙ್ಗವರ್ಪಾಲ್
ಉಟ್ರಾರೈ ಮೇಲಿಡಾದೂನ್

ಎಮ್ಪೆರುಮಾನಿನ ಅವತಾರದಲ್ಲಿ ಅವನ ಪರತ್ವವನ್ನು ಕೃಪೆಯಿಂದ ನಿಶ್ಚಿತವಾಗಿ ಆಳ್ವಾರ್ ಹೇಳಿದರೆಂದು ಅರಿತ ಆೞ್ವಾರಿನ ಪ್ರಪನ್ನರ ದಿವ್ಯ ಪಾದಗಳನ್ನು ಆಶ್ರಯಿಸಿದವರು ದೇಹ ಬಂಧದಿಂದ ಜಯಿತರಾಗುವುದಿಲ್ಲ.

ಪಾಸುರ-13
ಅವ: ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನ್ ಆೞ್ವಾರೊಂದಿಗೆ ಎಕತತ್ವವೇನೋ ಎಂಬುವಂತೆ  ಸಂಶ್ಲೇಶಿಸಿದಾಗ ಇಚ್ಛಿಸಿದ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಊನಮಱವೇ ವನ್ದು ಉಳ್ ಕಲನ್ದ ಮಾಲ್ ಇನಿಮೈ
ಆನದು ಅನುಬವಿತ್ತಱ್ಕಾಮ್ ತುಣೈಯಾ – ವಾನಿಲ್
ಅಡಿಯಾರ್ ಕುೞಾಮ್ ಕೂಡ ಆಸೈ ಉಟ್ರ ಮಾಱನ್
ಅಡಿಯಾರುಡನ್ ನೆನ್ಜೇ ಆಡು
ಸರ್ವೇಶ್ವರನು ಆೞ್ವಾರೋಂದಿಗೆ ಕೊರೆಯಿಲ್ಲದೆ ಸಂಶ್ಲೇಶಿಸಿದನು ಅನುಭವಿಸಲು ಇಚ್ಛಿಸಿದ ಅಭಿರುಚಿಯೋಂದಿದ್ದ ಪರಮಪದದ ಭಕ್ತ ಘೋಷ್ಟಿಟನ್ನು ಸೇರಲು ಇಚ್ಛಿಸಿದ ಆೞ್ವಾರಿನ ಭಕ್ತರೋಂದಿಗೆ , ಓ ಹೃದವೇ! ನೀನು ಸೇರು .

ಪಾಸುರ-14
ಅವ: ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನ್ ಹಾಗು ಅವನ ಭಕ್ತರ ವಿಶ್ಲೇಶದಿಂದ ದುಃಖಪಡುತಿದ್ದ ಯುವಕಿಯ ತಾಯಿಯ ಭಾವದಲ್ಲಿ ಹೇಳುತ್ತಿರುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಆಡಿ ಮಗಿೞ್ ವಾನಿಲ್ ಅಡಿಯಾರ್ ಕುೞಾನ್ಗಳುಡನ್
ಕೂಡಿ ಇನ್ಬಮ್ ಎಯ್ದಾಕ್ ಕುಱೈ ಅದನಾಲ್ – ವಾಡಿ ಮಿಗ
ಅನ್ಬುಟ್ರಾರ್ ತನ್ ನಿಲೈಮೈ ಆಯ್ನ್ದುರೈಕ್ಕ ಮೋಗಿತ್ತುತ್
ತುನ್ಬುಟ್ರಾನ್ ಮಾಱನ್ ಅನ್ದೋ
ಆೞ್ವಾರ್, ಪರಮಪದದಲ್ಲಿ ಭಕ್ತರ ಘೋಷ್ಟಿಯೊಂದಿಗೆ ಕೂಡಿ ಆನಂದದಿಂದ ನರ್ತಿಸುವ ಅನುಭವವನ್ನು ಕಳೆದುಕೊಂಡು ತುಂಬಾ ದುಃಖದಿಂದ ಭ್ರಮಿತರಾಗಿ ,ಮದುರಕವಿ ಆೞ್ವಾರ್ ಮೊದಲಾದ ಸುಹೃದ್ಗಳು ಅವರನ್ನು ವಿಷ್ಲೇಶಿಸಿ ಹೇಳಲ್ಪಡಬೇಕಿತ್ತು. ಅಯ್ಯೋ!(ಆೞ್ವಾರಿನದು ಇದೆಂತಹ ಸ್ಥಿತಿ)

ಪಾಸುರ-15
ಅವ: ಈ ಪಾಸುರದಲ್ಲಿ ಮಾಮುನಿಗಳು ಹೇಗೆ ಎಮ್ಪೆರುಮಾನ್ ತನ್ನ ಭಕ್ತರೊಂದಿಗೆ (ಅಸ್ತ್ರಗಳ ರೂಪದಲ್ಲಿದ್ದ ನಿತ್ಯಸೂರಿಗಳು) ಆಗಮಿಸಿ 2.4 “ಆಡಿ ಆಡಿ“ಎಂಬ ತಿರುವಾಯ್ಮೊಳಿಯಲ್ಲಿ ವಿವರಿಸಲ್ಪಟ್ಟ ಅವರ ದುಃಖವನ್ನು ದೂರಮಾಡಿದನೆಂದು ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ಹೇಳುತಿದ್ದಾರೆ.
ಅನ್ದಾಮತ್ತನ್ಬಾಲ್ ಅಡಿಯಾರ್ಗಳೋಡಿಱೈವನ್
ವನ್ದಾರತ್ ತಾನ್ ಕಲನ್ದ ವಣ್ಮೈಯಿನಾಲ್ – ಸನ್ದಾಬಮ್
ತೀರ್ನ್ದ ಸಟಕೋಪನ್ ತಿರುವಡಿಕ್ಕೇ ನೆನ್ಜಮೇ
ವಾಯ್ನ್ದ ಅನ್ಬೈ ನಾಡೋಱುಮ್ ವೈ
ಶ್ರೀವೈಕುಣ್ಠದಲ್ಲಿ ಆೞ್ವಾರಿಗಿದ್ದ ಆಸೆಯಂತೆ ಸರ್ವೇಶ್ವರನು ಅಸ್ತ್ರ-ಆಭರಣಗಳ ರೂಪದಲ್ಲಿದ್ದ ನಿತ್ಯಸೂರಿಗಳೊಂದಿಗೆ ಆಗಮಿಸಿ ಅವರ ದುಃಖವನ್ನು ದೂರಮಾಡಿ ಔದಾರ್ಯದಿಂದ ಸಂಶ್ಲೇಶಿಸಿದನು ಕೂಡ,ಓ ಹೃದಯವೇ! ಇಂತಹ ಆೞ್ವಾರಿನ ದಿವ್ಯ ಪಾದಗಳಲ್ಲಿ ತಕ್ಕ ಭಕ್ತಿಯನ್ನು ನೀನು ಹೋಂದಿರು.

ಪಾಸುರ-16
ಅವ: ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನ್ ತನ್ನನ್ನು ಆನಂದದಿಂದ “ಅಪ್ಪೊೞುದುಕ್ಕಪ್ಪೊೞುದು ಎನ್ನಾರವಮುದಮ್” ಎಂಬ 2.5.4ನೆ ತಿರುವಾಯ್ಮೊಳಿಯಲ್ಲಿ ಅನುಭವಿಸಿದ ಆೞ್ವಾರ್, ಅವರನ್ನು ನೈಚ್ಯದ ಅನುಸಂಧಾನದಿಂದ (ತಮ್ಮನ್ನು ನೀಚನೆಂದು ಅನರ್ಹನೆಂದು ಚಿಂತಿಸಿ) ಅಸ್ಥಾನದಲ್ಲಿ (ಸಂದೇಹದ ಅವಷ್ಯಕತೆಯಿಲ್ಲದ ಸ್ಥಳದಲ್ಲಿ) ಸಂದೇಹ ಪಟ್ಟಿದ್ದನ್ನು ಕಂಡು ತನ್ನನ್ನು ಸಾಂತ್ವಾನಿಸುವ ಪಾಸುರಗಳನ್ನು ಅನುಸರಿಸುತ್ತಿದ್ದಾರೆ.
ವೈಗುನ್ದನ್ ವನ್ದು ಕಲನ್ದದಿಱ್ಪಿನ್ ವಾೞ್ ಮಾಱನ್
ಸೆಯ್ಗಿನ್ಱ ನೈಚ್ಚಿಯತ್ತೈಚ್ ಚಿನ್ದಿತ್ತು – ನೈಗಿನ್ಱ
ತನ್ಮೈ ತನೈಕ್ ಕಣ್ಡು ಉನ್ನೈತ್ತಾನ್ ವಿಡೇನ್ ಎನ್ಱುರೈಕ್ಕ
ವನ್ಮೈ ಅಡೈನ್ದಾನ್ ಕೇಶವನ್
ಆೞ್ವಾರ್ ನಿತ್ಯ ವಿಭೂತಿಯ ನಾಥನಾದ ಸರ್ವೇಶ್ವರನು ಆಗಮಿಸಿ ಸಂಶ್ಲೇಶಿಸಿದರಿಂದ ತಮ್ಮನ್ನು ಧರಿಸಿದರು; ಆದರೆ ನೈಚ್ಯವನ್ನು ಅನುಸಂಧಿಸಲು ಪ್ರಾರಂಭಿಸಿದ್ದನ್ನು ಕಂಡ ಎಮ್ಪೆರುಮಾನ್ ಚಿಂತಿಸಲಾರಂಬಿಸಿದರು ಹಾಗು , ಆೞ್ವಾರ್ ಇದನ್ನು ನೋಡಿ ಕೃಪೆಯಿಂದ, “ನಾನು ನಿಮ್ಮನ್ನು ಬಿಡುವುದಿಲ್ಲ” ಎಂದು ಹೇಳಿದಾಗ ಎಮ್ಪೆರುಮಾನ್ ಶಾಂತನಾದರು.

ಪಾಸುರ-17
ಅವ: ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿನ ಹಿಂದಿನ ಹಾಗು ಮುಂದಿನ ತಲೆಮಾರುಗಳಿಗೂ ತಮ್ಮ ಸಂಬಂಧದಿಂದ ಭಗವದ್ ಶೇಷತ್ವವು ಸಿದ್ಧಿಸಿತೆಂದು ಆನಂದದಿಂದ ಹೇಳುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ.

ಕೇಶವನಾಲ್ ಎನ್ ತಮರ್ಗಳ್ ಕೀೞ್ ಮೇಲ್ ಎೞು ಪಿಱಪ್ಪುಮ್
ತೇಸಡೈನ್ದಾರ್ ಎನ್ಡ್ಱು ಸಿಱನ್ದುರೈತ್ತ – ವೀಸು ಪುಗೞ್
ಮಾಱನ್ ಮಲರಡಿಯೇ ಮನ್ನುಯಿರ್ಕ್ಕೆಲ್ಲಾಮ್ ಉಯ್ಗೈಕ್ಕು
ಆಱೆನ್ಱು ನೆನ್ಜೇ ಅಣೈ
* ಓ ಹೃದಯವೇ! ಎಲ್ಲಾ ನಿತ್ಯರಾದ ಆತ್ಮರಿಗೂ, “ನನಗೆ ಸೇರಿದ ಹಿಂದಿನ ಹಾಗು ಮುಂದಿನ ತಲೆಮಾರುಗಳು ತಮ್ಮ ಸಂಬಂಧಗಳೊಂದಿಗೆ ಪ್ರಕಾಶಿಸಿದರು “,ಎಂದು ಸ್ಪಷ್ಟವಾಗಿ ಹೇಳಿದ ,ಎಲ್ಲಡೆಯು ಹರಡುವ ವೈಭವವನ್ನು ಉಳ್ಳವರಾದ ಆೞ್ವಾರಿನ ಪಾದಗಳೆ ಮೋಕ್ಷಕ್ಕೆ ಉಪಾಯವೆಂದು ಅವಲ್ಲಿ ಶರಣಾಗು.

ಪಾಸುರ-18
ಅವ (ಅಣೈನ್ದವರ್ಗಳ್…): ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನಿನ ಮೋಕ್ಷಪ್ರದತ್ವವನ್ನು ಉಪದೇಶಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಅಣೈನ್ದವರ್ಗಳ್ ತಮ್ಮುಡನೇ ಆಯನ್ ಅರುಟ್ಕಾಳಾಮ್
ಗುಣನ್ದನೈಯೇ ಕೊಣ್ಡುಲಗೈಕ್ ಕೂಟ್ಟ – ಇಣನ್ಗಿ ಮಿಗ
ಮಾಸಿಲ್ ಉಪದೇಸಮ್ ಸೆಯ್ ಮಾಱನ್ ಮಲರ್ ಅಡಿಯೇ
ವೀಸು ಪುಗೞ್ ಎಮ್ಮಾ ವೀಡು
ಸರ್ವೇಶ್ವರನನ್ನು ಆಶ್ರಯಿಸಿ ಸೇವಿಸುವ ನಿತ್ಯಸೂರಿಗಳೊಂದಿಗೆ ನಿತ್ಯ ಸಂಸಾರಿಗಳನ್ನು ಸೇರಿಸುವುದಕ್ಕೇ, ಎಮ್ಪೆರುಮಾನಿನ ಮೋಕ್ಷಪ್ರದತ್ವವನ್ನು ತೋರುವ ನಿರ್ದೋಶವಾದ ಉಪದೇಶದಿಂದ ಅವರನ್ನು ಕೃಷ್ಣನ ಕೃಪೆಗೆ ಪಾತ್ರರಾಗಲು ಬೋಧಿಸುವ , ಎಲ್ಲಡೆಯು ಹರಡುವ ವೈಭವವನ್ನು ಉಳ್ಳವರಾದ ಆೞ್ವಾರಿನ ಪಾದಗಳೆಲ್ಲೇ  ಮೋಕ್ಷದ ಸ್ಥಾನ

ಪಾಸುರ-19
ಅವ : (ಎಮ್ಮಾ ವೀಡುಮ್ ವೇಣ್ಡಾ…) ಈ ಪಾಸುರದಲ್ಲಿ ಮಾಮುನಿಗಳು ಉಪೇಯ (ಫಲವನ್ನು) ನಿಶ್ಚಯಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ಕೃಪೆಯಿಂದ ವಿವರಿಸುದಿದ್ದಾರೆ.
ಎಮ್ಮಾ ವೀಡುಮ್ ವೇಣ್ಡಾ ಎನ್ಱನ್ಕ್ಕುನ್ ತಾಳಿಣೈಯೇ
ಅಮ್ಮಾ ಅಮೈಯುಮ್ ಎನ ಆಯ್ನ್ದುರೈತ್ತ – ನಮ್ಮುಡೈಯ
ವಾೞ್ ಮುದಲಾ ಮಾಱನ್ ಮಲರ್ತ್ ತಾಳಿಣೈ ಸೂಡಿಕ್
ಕೀೞ್ಮೈಯಟ್ರು ನೆನ್ಜೇ ಕಿಳರ್
ಓ ಹೃದಯವೇ!, “ಓ ಭಗವಾನೇ! ನಿಮ್ಮ ದಿವ್ಯ ಪಾದಗಳೇ ಸಾಕು” ಎಂದು ಹೇಳಿದ ನಮ್ಮ ಧಾರಾಕರಾದ ಆೞ್ವಾರಿನ ದಿವ್ಯ ಪಾದಗಳನ್ನು ನಮ್ಮ ಶಿರಸ್ಸಿನ ಮೇಲೆ ಧರಿಸುವುದರಿಂದ ಅಲ್ಪ ಫಲದಲ್ಲಿ ಆಸೆ ಹೋಗಿ ನೀನು ಉಜ್ಜೀವಿಸುವೆ.

ಪಾಸುರ-20
ಅವ: (ಕಿಳರೊಳಿ ಸೇರ್…) ಈ ಪಾಸುರದಲ್ಲಿ ಮಾಮುನಿಗಳು “ತಿರುಮಲೆಯಲ್ಲಿ (ದಿವ್ಯವಾದ ತಿರುಮಾಳಿರುಂಶೋಲೈ ಮಲೆ) ಶರಣಾಗುವುದೇ ಫಲಕ್ಕೆ ಸಾಧನವೆಂದು ಹೇಳುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ಕೃಪೆಯಿಂದ ವಿವರಿಸುತ್ತಿದ್ದಾರೆ ; ಅಥವಾ ಮಾಮುನಿಗಳು, ಹೇಗೆ ಆೞ್ವಾರ್ ತಿರುಮಾಲಿರುಂಶೋಲೆಯನ್ನೇ ಪರಮಪ್ರಾಪ್ಯವೆಂದು ಅನುಭವಿಸುತಿದ್ದಾರೆ ಎಂಬುದನ್ನು ವಿವರಿಸುತ್ತಿದ್ದಾರೆ.
ಕಿಳರೊಳಿ ಸೇರ್ ಕೀೞುರೈತ್ತ ಪೇಱು ಕಿಡೈಕ್ಕ
ವಳರೊಳಿ ಮಾಲ್ ಸೋಲೈ ಮಲೈಕ್ಕೇ – ತಳರ್ವಱವೇ
ನೆನ್ಜೈ ವೈತ್ತುಚ್ ಚೇರುಮೆನುಮ್ ನೀಡು ಪುಗೞ್ ಮಾಱನ್ ತಾಳ್
ಮುನ್ ಸೆಲುತ್ತುವೋಮ್ ಎಮ್ ಮುಡಿ
ಹಿಂದೆ ಹೇಳಿದ ಪ್ರಕಾಶಮಯವಾದ ಪುರುಷಾರ್ಥವನ್ನು ಹೋಂದಲು ಆಯಾಸ ವಿಲ್ಲದೆ ಹೃದಯಪೂರ್ವಕವಾಗಿ ಪ್ರಕಾಶ ಹೋಂದಿರುವ ಎಮ್ಪೆರುಮಾನಿನ ಆಸ್ಥಾನವಾದ ತಿರುಮಾಲಿರುಂಶೋಲೆಯನ್ನು ಸೇರಿ ಎಂದು ಹೇಳಿದ ಉತ್ಕೃಷ್ಟ ಆೞ್ವಾರಿನ ದಿವ್ಯ ಪಾದಗಳನ್ನು ನಮ್ಮ ಶಿರಸ್ಸಿನ ಮೇಲೆ ಧರಿಸುವೆವು.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – https://divyaprabandham.koyil.org/index.php/2020/10/thiruvaimozhi-nurrandhadhi-11-20-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment