ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ
ಮೊದಲನೇ ಪಾಸುರಂ : “ ನಾವು ಎಂಪೆರುಮಾನಾರರ ದಿವ್ಯ ನಾಮಗಳನ್ನು ಪಠಿಸುತ್ತಾ ಅವರ ದಿವ್ಯ ಪಾದಗಳಲ್ಲಿ ಸೂಕ್ತವಾಗಿ ಇರಬಹುದು “ ಎಂದು ಅಮುಧನಾರ್ ಅವರ ಮನಸನ್ನು ಆಹ್ವಾನಿಸುತ್ತಾರೆ.
ಪೂ ಮನ್ನು ಮಾದು ಪೊರುಂದಿಯ ಮಾರ್ಬನ್ ಪುಗೞ್ ಮಲಿಂದ
ಪಾ ಮನ್ನು ಮಾಱನ್ ಅಡಿ ಪಣಿಂದು ಉಯ್ನ್ದವನ್ ಪಲ್ ಕಲೈಯೋರ್
ತಾಂ ಮನ್ನ ವಂದ ಇರಾಮಾನುಶನ್ ಚರಣಾರವಿಂದಮ್
ನಾಂ ಮನ್ನಿ ವಾೞ ನೆಂಜೇ ಶೊಲ್ಲುವೋಂ ಅವನ್ ನಾಮಂಗಳೇ
ಓ ಮನಸೇ ! ತಾವರೆಯನ್ನು ತನ್ನ ವಾಸಸ್ಥಳವಾಗಿ ಹೊಂದಿರುವ ಪೆರಿಯ ಪಿರಾಟ್ಟಿಯಾರ್, ಎಂಪೆರುಮಾನಿನ ದಿವ್ಯ ತಿರುಮೇನಿಯ ಮಾಧುರ್ಯವನ್ನು ಅನುಭವಿಸಿದ ನಂತರ ಆ ದಿವ್ಯ ಎದೆಯಯಲ್ಲಿ ವಾಸಿಸಲು ಪ್ರಾರಂಭಿಸಿದಳು. ನಮ್ಮಾೞ್ವಾರ್ ಸಂಪೂರ್ಣವಾಗಿ ಎಂಪೆರುಮಾನಿನ ಕಲ್ಯಾಣ ಗುಣಗಳಿಂದ ತುಂಬಿರುವ ತಿರುವಾಯ್ಮೊೞಿಯೊಂದಿಗೆ ತೊಡಗಿಸಿಕೊಂಡರು . ಆ ನಮ್ಮಾೞ್ವಾರ್ ಅವರ ದಿವ್ಯ ಪಾದಗಳನ್ನು ಪಡೆದ ನಂತರ ರಾಮಾನುಜರ್ ತನ್ನನ್ನು ತಾನೇ ಉನ್ನತಿಗೇರಿಸಿಕೊಂಡರು. ವಿವಿಧ ಶಾಸ್ತ್ರಗಳನ್ನು (ಧಾರ್ಮಿಕ ಗ್ರಂಥಗಳು) ಕಲಿತ್ತಿದ್ದರೂ, ರಾಮಾನುಜರ ಮೊದಲು ಬದುಕಿದ ಅನೇಕ ಜನರಿಗೆ ಅದರ ಆಂತರಿಕ ಅರ್ಥಗಳು ಅರ್ಥವಾಗಲಿಲ್ಲ. ರಾಮಾನುಜರು ಅಂತಹ ಆಂತರಿಕ ಅರ್ಥಗಳನ್ನು ತಿಳಿದಿದ್ದರು ಮತ್ತು ಅವುಗಳನ್ನು ಚೆನ್ನಾಗಿ ಸ್ಥಾಪಿಸಿದರು. ನಾವು [ಅಮುಧನಾರ್ ಅವರ ಹೃದಯಕ್ಕೆ ಹೇಳುತ್ತಾರೆ ] ಅವರ ದಿವ್ಯ ಪಾದಗಳನ್ನು ನಮ್ಮ ಗುರಿಯೆಂದು ಪರಿಗಣಿಸೋಣ ಮತ್ತು ಅಂತಹ ರಾಮಾನುಜರ ದೈವಿಕ ಹೆಸರುಗಳ ಬಗ್ಗೆ ಮಾತನಾಡೋಣ, ಇದರಿಂದ ನಾವು ಉದ್ದೇಶಪೂರ್ವಕವಾಗಿ ಬದುಕಬಹುದು.
ಎರಡನೇಯ ಪಾಸುರಂ : ಹಿಂದಿನ ಪಾಸುರದಲ್ಲಿ ಅವರ ಮನಸ್ಸಿಗೆ ಎಂಪೆರುಮಾನಾರರ ದಿವ್ಯ ನಾಮಗಳನ್ನು ಜಪಿಸಲು ಹೇಳಿದ ನಂತರ ಅವರ ಮನಸು ಬೇರೆಲ್ಲ ವಿಷಯಗಳನ್ನು ತ್ಯಜಿಸಿ ಎಂಪೆರುಮಾನಾರರ ದಿವ್ಯ ಪಾದಗಳನ್ನು ಅನುಭವಿಸ ತೊಡಗಿತು. ಅದನ್ನು ಕಂಡ ಅಮುಧನಾರ್ ಆಶ್ಚರ್ಯಗೊಂಡರು.
ಕಳ್ ಆರ್ ಪೊೞಿಲ್ ತೆನ್ನರಂಗನ್ ಕಮಲ ಪದಂಗಳ್ ನೆಂಜಿಲ್
ಕೊಳ್ಳಾ ಮನಿಶರೈ ನೀಂಗಿ ಕುಱೈಯಲ್ ಪಿರಾನ್ ಅಡಿಕ್ಕೀೞ್
ವಿಳ್ಳಾದ ಅನ್ಬನ್ ಇರಾಮಾನುಶನ್ ಮಿಕ್ಕ ಶೀಲಮ್ ಅಲ್ಲಾಳ್
ಉಳ್ಳಾದು ಎನ್ ನೆಂಜು ಒನ್ಱು ಅಱಿಯೇನ್ ಎನಕ್ಕುಱ್ಱ ಪೇರಿಯಲ್ವೇ
ಮಾನವ ಪ್ರಭೇದದಲ್ಲಿ ಜನಿಸಿದರೂ, ಜೇನುತುಪ್ಪದೊಂದಿಗೆ ಇರುವ ಹೊವುಗಳಿಂದ ತುಂಬಿದ ಉದ್ಯಾನಗಳಿಂದ ಆವರಿಸಿದ ದೇವಾಲಯದಲ್ಲಿ (ಶ್ರೀರಂಗಂ ದೇವಸ್ಥಾನ) ಶಯನಿಸಿರುವ ಪೆರಿಯ ಪೆರುಮಾಳಿನ ದಿವ್ಯ ಕಮಲದಂತಹ ಪಾದಗಳ ಬಳಿ ತಮ್ಮ ಮನಸನ್ನು ಇಟ್ಟುಕೊಳ್ಳುವ ಶಾಸ್ತ್ರವನ್ನು ಕಲಿಯುವ ಅದೃಷ್ಟವನ್ನು ಹೊಂದಿರದವರು ಇದ್ದಾರೆ.ಅಂತಹವರಿಂದ ನನ್ನ ಮನಸು ದೂರವಾಗಿದೆ. ಅದರ ನಂತರ, ತಿರುಕ್ಕುರೈಯಲೂರಲ್ಲಿ ಅವತರಿಸಿದ ಮತ್ತು ದಿವ್ಯ ಪ್ರಬಂಧಂ (ದೈವಿಕ ಸ್ತುತಿಗೀತೆಗಳನ್ನು) ರಚಿಸುವ ಅಪಾರ ಕಾಣಿಕೆಯನ್ನು ನೀಡಿದ ತಿರುಮಂಗೈ ಆೞ್ವಾರ್ ಅವರ ದೈವಿಕ ಪಾದಗಳ ಬಗ್ಗೆ ಶಾಶ್ವತವಾದ ಪ್ರೀತಿಯನ್ನು ಹೊಂದಿರುವ ರಾಮಾನುಜರ ಅನಂತ ಶ್ರೇಷ್ಠ ಗುಣಗಳನ್ನು ಹೊರತುಪಡಿಸಿ ನನ್ನ ಹೃದಯವು ಬೇರೆ ಯಾವುದನ್ನೂ ಯೋಚಿಸಲಿಲ್ಲ. ಇದು ನನಗೆ ಹೇಗೆ ಸಂಭವಿಸಿತು ಎಂದು ನನಗೆ ತಿಳಿದಿಲ್ಲ.
ಮೂರನೆಯ ಪಾಸುರಂ :ಅಮುಧನಾರ್ ಅವರ ಮನಸ್ಸಿಗೆ ಹೇಳುತ್ತಾರೆ “ ಲೌಕಿಕ ವಿಷಯಗಳಲ್ಲಿ ತೊಡಗಿರುವವರೊಂದಿಗಿನ ನನ್ನ ಸಂಪರ್ಕವನ್ನು ತೆಗೆದುಹಾಕಿ ಮತ್ತು ಎಂಪೆರುಮಾನಾರ್ ಜೊತೆ ಸಂಪರ್ಕ ಹೊಂದಿರುವವರ ದೈವಿಕ ಪಾದಗಳೊಂದಿಗೆ ನನ್ನನ್ನು ತೊಡಗಿಸಿಕೊಳ್ಳುವ ಮೂಲಕ ನೀವು ನನಗೆ ನೀಡಿದ ದೊಡ್ಡ ಲಾಭಕ್ಕಾಗಿ ನಾನು ನಮಸ್ಕರಿಸುತ್ತೇನೆ ”.
ಪೇರ್ ಇಯಲ್ ನೆಂಜೇ ಅಡಿ ಪಣಿಂದೇನ್ ಉನ್ನೈ ಪೇಯ್ ಪಿಱವಿ
ಪೂರಿಯರೋಡು ಉಳ್ಳ ಸುಱ್ಱಂ ಪುಲರ್ತಿ ಪೊರುವು ಅರುಮ್ ಸೀರ್
ಆರಿಯನ್ ಸೆಮ್ಮೈ ಇರಾಮಾನುಶ ಮುನಿಕ್ಕು ಅನ್ಬು ಶೆಯ್ಯುಂ
ಶೀಱಿಯ ಪೇರು ಉಡೆಯಾರ್ ಅಡಿಕ್ಕೀೞ್ ಎನ್ನೈ ಚೇರ್ತದರ್ಕೇ
ಓ ಮನಸೇ ! ದೀನರಾಗಿರುವ ಮತ್ತು ಅಹಂ ಇತ್ಯಾದಿಗಳಂತಹ ದೋಷಗಳನ್ನು ಹೊಂದಿರುವ ಜನರೊಂದಿಗೆ ನನ್ನ ಸಂಪರ್ಕವನ್ನು ಬೇರ್ಪಡಿಸುವುದು , ಮತ್ತು ಮಹಾನ್ ವ್ಯಕ್ತಿಗಳ ದೈವಿಕ ಪಾದಗಳನ್ನು ಸಾಧಿಸುವಂತೆ ನನಗೆ ದೊಡ್ಡ ಲಾಭವನ್ನು ನೀಡಿದ್ದಕ್ಕಾಗಿ ನಾನು ನಮಸ್ಕರಿಸುತ್ತೇನೆ . ಈ ಮಹಾನ್ ವ್ಯಕ್ತಿಗಳಿಗೆ, ತನ್ನ ಭಕ್ತರ ಗುಣಮಟ್ಟದೊಂದಿಗೆ ತನ್ನನ್ನು ಹೊಂದಿಸಿಕೊಳ್ಳುವ ಪ್ರಾಮಾಣಿಕತೆಯನ್ನು ಹೊಂದಿರುವ ಎಂಪೆರುಮಾನಾರ್, ಬಗ್ಗೆ ಭಕ್ತಿ ಹೊಂದುವ ಅದೃಷ್ಟವಿದೆ.
ನಾಲ್ಕನೆಯ ಪಾಸುರಂ : ಎಂಪೆರುಮಾನಾರಿನ ಕಾರಣವಿಲ್ಲದ ಕರುಣೆಯಿಂದಾಗಿ, ಅವನು ತನ್ನ ಹಿಂದಿನ ಕೆಳಮಟ್ಟದ ಸ್ಥಾನಮಾನವನ್ನು ತಲುಪುವ ಸಾಧ್ಯತೆಯಿಲ್ಲ ಮತ್ತು ಅವನಲ್ಲಿ ಯಾವುದೇ ಕೊರತೆಯಿಲ್ಲ ಎಂದು ಅವರು ಹೇಳುತ್ತಾರೆ.
ಎನ್ನೈ ಪುವಿಯಿಲ್ ಒರು ಪೊರುಳಾಕ್ಕಿ ಮರುಳ್ ಶುರಂದ
ಮುನ್ನೈ ಪೞವಿನೈ ವೇರ್ ಅಱುತ್ತು ಊೞಿ ಮುದಲ್ವನೈಯೇ
ಪನ್ನ ಪಣಿತ್ತ ಇರಾಮಾನುಶನ್ ಪರಂ ಪಾದಮುಂ ಎನ್
ಶೆಣ್ಣಿ ತರಿಕ್ಕ ವೈತ್ತಾನ್ ಎನಕ್ಕು ಏದುಮ್ ಶಿದೈವು ಇಲ್ಲೈಯೇ
ಎಂಪೆರುಮಾನಾರ್ ಎಲ್ಲರನ್ನೂ, ಸರ್ವತ್ವಕ್ಕು(ಚೇತನ ವಸ್ತು ಮತ್ತು ಅಚೇತನ ವಸ್ತು) ಕಾರಣಕರ್ತನಾದ ಪರಮಾತ್ಮನನ್ನು ಅರಿತುಕೊಂಡು ಧ್ಯಾನಿಸುವಂತೆ ಮಾಡಿದರು . ಅವರು ಇದನ್ನು ಶ್ರೀ ಭಾಷ್ಯಂ (ಅವರು ರಚಿಸಿದ ಕೃತಿ ) ಮೂಲಕ ಮಾಡಿದರು. ಎಲ್ಲರಿಗಿಂತ ಶ್ರೇಷ್ಠನಾಗಿರುವ ರಾಮಾನುಜ, ನನ್ನನ್ನು ಅಚೇತನ (ಪ್ರಜ್ಞಾಪೂರ್ವಕ) ಅಸ್ತಿತ್ವದಿಂದ , ಈ ಜಗತ್ತಿನಲ್ಲಿ ಒಂದು ಚೇತನ (ಮನೋಭಾವದ) ಅಸ್ತಿತ್ವದಂತೆ ಮಾಡಿದನು. ಅನಾದಿ ಕಾಲದಿಂದಲೂ ನನ್ನನ್ನು ಅನುಸರಿಸುತ್ತಿದ್ದ ನನ್ನ ಎಲ್ಲಾ ಪಾಪಗಳನ್ನು ಅವನು ಸಂಪೂರ್ಣವಾಗಿ ಕಡಿದುಕೊಂಡನು ಮತ್ತು ಅವನ ದೈವಿಕ ಪಾದಗಳನ್ನು ನನ್ನ ತಲೆಯ ಮೇಲೆ ಇಟ್ಟು ನನ್ನನ್ನು ಆಶೀರ್ವದಿಸಿದನು. ಇದರ ನಂತರ, ನನ್ನಲ್ಲಿ ಯಾವುದೇ ನ್ಯೂನತೆಯಿಲ್ಲ.
ಐದನೆಯ ಪಾಸುರಂ : ರಾಮಾನುಜರ್ ದಿವ್ಯ ನಾಮಗಳನ್ನು ಪಠಿಸುವಂತೆ ಅಮುಧನಾರ್ ಈ ಪ್ರಬಂದವನ್ನು ಆರಂಭಿಸಿದರು. ಕುದ್ರುಷ್ಟಿಗಳು (ವೇದಗಳನ್ನು ತಪ್ಪಾಗಿ ಅರ್ಥೈಸುವವರು) ಅವರನ್ನು ನಿಂದಿಸಬಹುದು ಎಂದು ಹೇಳುತ್ತಾ ಅವರು ಹಿಂಜರಿಯುತ್ತಾರೆ; ನಂತರ ಅವರು ತನ್ನನ್ನು ತಾನು ಮನವರಿಕೆ ಮಾಡಿಕೊಳ್ಳುತ್ತಾರೆ ಮತ್ತು ತಾನು ನಿರ್ವಹಿಸಲು ಹೊರಟ ಚಟುವಟಿಕೆಯೊಂದಿಗೆ ತೊಡಗುತ್ತಾರೆ.
ಎನಕ್ಕು ಉಱ್ಱ ಸೆಲ್ವಮ್ ಇರಾಮಾನುಶನ್ ಎನ್ಱು ಇಸೈಯಗಿಲ್ಲಾ
ಮನ ಕುಱ್ಱ ಮಾಂಧರ್ ಪೞಿಕ್ಕಿಲ್ ಪುಗೞ್ ಅವನ್ ಮನ್ನಿಯ ಶೀರ್
ತನಕ್ಕು ಉಱ್ಱ ಅನ್ಬರ್ ಅವನ್ ತಿರುನಾಮಂಗಳ್ ಸಾಱ್ಱುಂ ಎನ್ ಪಾ
ಇನಕ್ ಕುಱ್ಱಂ ಕಾಣಗಿಲ್ಲಾರ್ ಪತ್ತಿ ಏಯ್ನದ್ಧ ಇಯಲ್ವು ಇದು ಎನ್ಱೆ
ನನ್ನ ದೃಷ್ಟಿಕೋಣವನ್ನು ಸ್ವೀಕರಿಸಿದವರು ಮತ್ತು ಮನಸ್ಸಿನಲ್ಲಿ ದೋಷಗಳನ್ನು ಹೊಂದಿರುವವರು, ನಮ್ಮ ಸ್ವರೂಪಕ್ಕೆ (ಮೂಲ ಸ್ವಭಾವ) ಸಂಪತ್ತು ಎಂಪೆರುಮಾನಾರ್ ಮಾತ್ರ ಎಂದು ಹೇಳುವ ನನ್ನ ಪ್ರಯತ್ನವನ್ನು ಅಪಹಾಸ್ಯ ಮಾಡಿದರೆ ಅದು ನನಗೆ ಆಚರಣೆಗೆ ಒಂದು ಕಾರಣವಾಗಿದೆ. ವಾತ್ಸಲ್ಯ ಹೊಂದಿರುವವರು ಎಂಪೆರುಮಾನಾರ್ ಶುಭ ಗುಣಗಳೊಂದಿಗೆ ಅನುಗುಣವಾಗಿರುತ್ತಾರೆ, ಅವರ ದೈವಿಕ ಹೆಸರುಗಳನ್ನು ತಿಳಿಸುವ ಮತ್ತು ಭಕ್ತಿಯಿಂದ ತುಂಬಿದ ಚಟುವಟಿಕೆಗಳಾದ ನನ್ನ ಪಾಸುರಮ್ಗಳಲ್ಲಿ ಯಾವುದೇ ದೋಷವನ್ನು ಕಾಣುವುದಿಲ್ಲ.
ಆರನೆಯ ಪಾಸುರಂ : ಹಿಂದಿನ ಪಾಸುರದಲ್ಲಿ , (ರಾಮಾನುಜರಿಗೆ )ಅವರ ಭಕ್ತಿಯ ಅಭವ್ಯಕ್ತಿ ಎಂದು ಅಮುಧನಾರ್ ಹೇಳುತ್ತಾರೆ. ಈಗ ಆತನು, ಎಂಪೆರುಮಾನಾರ್ ಶ್ರೇಷ್ಠತೆಗೆ ಅನುಗುಣವಾಗಿ ಅವನಿಗೆ ಭಕ್ತಿ ಇಲ್ಲ ಎಂದು ತನ್ನನ್ನು ತಾನೇ ದೂಷಿಸುತ್ತಾನೆ.
ಇಯಲುಮ್ ಪೊರುಳುಂ ಇಸೈಯ ತೋಡುತ್ತು ಈನ್ ಕವಿಗಳ್ ಅನ್ಬಾಲ್
ಮಯಲ್ ಕೊಂಡು ವಾೞ್ತುಂ ಇರಾಮಾನುಶನೈ ಮದಿ ಇನ್ಮೈಯಾಲ್
ಪಯಿಲುಮ್ ಕವಿಗಳಿಲ್ ಪತ್ತಿ ಇಲ್ಲಾದ ಎನ್ ಪಾವಿ ನೆಂಜಾಲ್
ಮುಯಲ್ಗಿನ್ಱನನ್ ಅವನ್ ತನ್ ಪೆರುಂ ಕೀರ್ತಿ ಮೊೞಿನ್ದಿಡವೇ
ಮಹಾಕವಿಗಳು, ಎಂಪೆರುಮಾನಾರ ಮೇಲೆ ಇರುವ ಅತ್ಯಂತ ಮಮತೆ ವಾತ್ಸಲ್ಯದಿಂದ , ಕವಿತೆಗಳನ್ನು ಪದ ಅರ್ಥಗಳೊಂದಿಗೆ ಆಚರಿಸುತ್ತಾರೆ. ನನಗೆ ಅಂತಹ ಭಕ್ತಿಯೂ ಇಲ್ಲ ಮತ್ತು ನನಗೆ ದೋಷಪೂರ್ವ ಮನಸ್ಸು ಇದೆ.ನನ್ನು ರಚಿಸಿದ ಈ ಪಾಸುರಗಳಿಂದ , ನನ್ನ ಅಜ್ಞಾನ ಮನಸಿನಿಂದ , ಅವರ ಅಪಾರ ಕರುಣೆಯನ್ನು ತಿಳಿಸಲು ಪ್ರಯತ್ನಿಸುತ್ತಿದೇನೆ .
ಏಳನೆಯ ಪಾಸುರಂ : ತನ್ನ ದೀನತೆಯನ್ನು ನೋಡುತ್ತಾ ಹಿಂದೆ ಸರಿದ ಅಮುಧನಾರ್ , ಕೂರತ್ ಆೞ್ವಾನ್ [ರಾಮಾನುಜರ ಪ್ರಖ್ಯಾತ ಶಿಷ್ಯ] ದೈವಿಕ ಪಾದಗಳೊಂದಿಗಿನ ತನ್ನ ಸಂಪರ್ಕವನ್ನು ನೆನಪಿಸಿಕೊಳ್ಳುತ್ತಾ ಇದು ಅವನಿಗೆ ಕಷ್ಟದ ಕೆಲಸವಲ್ಲ ಎಂದು ನಿರ್ಧರಿಸಿ ಅದನ್ನು ಪ್ರಾರಂಭಿಸುತ್ತಾನೆ.
ಮೊೞಿಯೈ ಕಡಕ್ಕುಂ ಪೆರುಂ ಪುಗೞಾನ್ ವಂಜ ಮುಕ್ಕುಱುಂಬಾಂ
ಕುೞಿಯೈ ಕಡಕ್ಕುಂ ನಂ ಕೂರತ್ ಆೞ್ವಾನ್ ಚರಣ್ ಕೂಡಿಯ ಪಿನ್
ಪೞಿಯೈ ಕಡತ್ತುಂ ಇರಾಮಾನುಶನ್ ಪುಗೞ್ ಪಾಡಿ ಅಲ್ಲಾ
ವೞಿಯೈ ಕಡತ್ತಾಲ್ ಎನಕ್ಕು ಇನಿ ಯಾದುಮ್ ವರುತ್ತಮ್ ಅನ್ಱೇ
ಕೂರತ್ ಆೞ್ವಾನ್ ಅವರಿಗಿರುವ ಅಪಾರ ಕೀರ್ತಿಯನ್ನು ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ; ಒಬ್ಬರ ಜನನ [ಒಂದು ಶ್ರೇಷ್ಠ ಕುಲದಲ್ಲಿ ಜನಿಸಿದ], ಜ್ಞಾನ ಮತ್ತು ಉತ್ತಮ ನಡವಳಿಕೆಯ ಬಗ್ಗೆ ಗರ್ವ ಹೊಂದುವ ಮೂರು ತಳವಿಲ್ಲದ ಹೊಂಡಗಳನ್ನು ಅವರು ದಾಟಿದ್ದಾರೆ.ನಮ್ಮ ನಾಯಕನಾದ ಅಂತಹ ಕೂರತ್ ಆೞ್ವಾನ್ ಅವರ ದಿವ್ಯ ಪಾದಗಳನ್ನು ನಾವು ಹೊಂದಿದ್ದೇವೆ . ಪಾಪಸಾಗರದಿಂದ ದೂರ ಸರಿದು ದಡಸೇರಲು ಉಪಯೋಗವಾಗುವ , ಕರುಣೆಯಿಂದ ತುಂಬಿದ ಎಂಪೆರುಮಾನಾರರ ದಿವ್ಯ ಗುಣಗಳನ್ನು ಹಾಡಲು ನನಗೆ ಇನ್ನು ಯಾವ ಕಷ್ಟವೂ ಇಲ್ಲ. ನನ್ನ ಸ್ವರೂಪಕ್ಕೆ ಅನುಗುಣವಾಗದಿರುವ ಯಾವುದೇ ವಿಷಯದಿಂದ ನಾನು ತಪ್ಪಿಸಿಕೊಳ್ಳಲು ಸಹ ಸಾಧ್ಯ.
ಎಂಟನೆಯ ಪಾಸುರಂ : ಪೊಯ್ಗೈ ಆೞ್ವಾರ್ ರಚಿಸಿದ ದಿವ್ಯ ಪ್ರಬಂಧವನ್ನು ಧ್ಯಾನಿಸುವ ಕೀರ್ತಿಯುಳ್ಳ ಎಂಪೆರುಮಾನಾರೇ ಅವರ ಒಡೆಯ ಎಂದು ಅಮುಧನಾರ್ ಹೇಳುತ್ತಾರೆ.
ವರುತ್ತುಂ ಪುಱ ಇರುಳ್ ಮಾಱ್ಱ ಎಮ್ ಪೊಯ್ಗೈಪಿರಾನ್ ಮಱೈಯಿನ್
ಕುರುತ್ತಿನ್ ಪೊರುಳೈಯುಂ ಸೆಂದಮಿೞ್ ತನ್ನಿಯುಂ ಕೂಟ್ಟಿ ಒನ್ಱ
ತಿರುತ್ತು ಅನ್ಱು ಎರಿತ್ತ ತಿರುವಿಳಕ್ಕೆ ತನ್ ತಿರು ಉಳ್ಳತ್ತೇ
ಇರುತ್ತುಂ ಪರಮನ್ ಇರಾಮಾನುಶನ್ ಎಮ್ ಇರೈಯವನೇ
ಆಜ್ಞಾನವು ಚೇತನ ವಸ್ತುಗಳನ್ನು ಲೌಕಿಕ ವಿಷಯಗಳಲ್ಲಿ ಒಳಗೊಂಡು ದುಃಖ ಅನುಭವಿಸುವಂತೆ ಮಾಡುವುದು . ಪ್ರಪನ್ನ ಕುಲಕ್ಕೆ ( ಎಂಪೆರುಮಾನಿಗೆ ಶರಣರಾದವರು ) ಪ್ರಿಯರಾದ ,ಉದಾತ್ತರಾದ ಪೊಯ್ಗೈ ಆೞ್ವಾರ್ ,ರಚಿಸಿದ ವೈಯಮ್ ತಗಳಿಯ( ಜಗತ್ತೇ ದೀಪವು ) ಎಂದು ಆರಂಭಿಸುವ ಮುದಲ್ ತಿರುವಂದಾದಿ ಎಂಪೆರುಮಾನಿನ ದಿವ್ಯ ಸಭೆಯಲ್ಲಿ , ವೇದಾಂತ (ಎಂಪೆರುಮಾನ್ ಕುರಿತ ,ವೇದಗಳ ಕೊನೆಯ ಭಾಗ ) ಅರ್ಥಗಳೊಂದಿಗೆ ಸುಂದರ ತಮಿಳು ಪದಗಳ ಸಂಯೋಜನೆ, ಆ ಅಜ್ಞಾನದ ಕತ್ತಲನ್ನು ತೊರೆಯಿತು. ಆ ದೀಪವನ್ನು ಅವರ ದಿವ್ಯ ಮನಸ್ಸಿನಲ್ಲಿ ಇರಿಸಿ ಮಹೋನ್ನತರಾದ ಎಂಪೆರುಮಾನಾರ್ ನಮ್ಮ ದೊರೆ.
ಒಂಬತ್ತನೇ ಪಾಸುರಂ : ಭೂದತ್ ಆೞ್ವಾರ್ ಅವರ ದಿವ್ಯ ಪಾದಗಳ ನೆನಪನ್ನು ಸದಾ ತಮ್ಮ ಮನಸ್ಸಿನಲ್ಲಿಟ್ಟುಕೊಂಡ ಎಂಪೆರುಮಾನಾರರ ದಿವ್ಯ ಗುಣಗಳನ್ನು ಪಠಿಸುವವರು ಈ ಜಗತ್ತಿನಲ್ಲಿ ವೇದಗಳನ್ನು ರಕ್ಷಿಸಿ ಸ್ಥಾಪಿಸುವರು, ಎಂದು ಅಮುಧನಾರ್ ಹೇಳುತ್ತಾರೆ.
ಇರೈವನೈ ಕಾಣುಮ್ ಇದಯತ್ತು ಇರುಳ್ ಕೆಡ ಜ್ಞಾನಮ್ ಎನ್ನುಂ
ನಿರೈವಿಳಕ್ಕು ಏಱ್ಱಿಯ ಭೂದತ್ ತಿರುವಡಿ ತಾಳ್ಗಲ್ ನೆಂಜತ್ತು
ಉಱೈಯ ವೈತ್ತು ಆಳುಂ ಇರಾಮಾನುಶನ್ ಪುಗೞ್ ಓದುಮ್ ನಲ್ಲೋರ್
ಮಱೈಯಿನೈ ಕಾತ್ತು ಇಂದ ಮಣ್ಣಗತ್ತೇ ಮನ್ನವೈಪ್ಪವರೇ
ಅನ್ಬೇ ತಗಳಿಯ ( ವಾತ್ಸಲಯವೇ ದೀಪದಂತೆ ) ಎಂದು ಆರಂಭಿಸುವ ಇರಂಡಾಮ್ ತಿರುವಂದಾದಿ ರಚಿಸಿ ಭೂದತ್ ಆೞ್ವಾರ್ ತಮ್ಮ ,ಎಲ್ಲಾ ಅಂಶಗಳಲ್ಲಿ ಪೂರ್ಣಗೊಂಡ, ದೀಪವನ್ನು ಹಚ್ಚಿದರು. ಈ ದೀಪವು (ಪ್ರಬಂಧ ) ನಮ್ಮ ಮನಸ್ಸನ್ನು ಹಿಡಿದಿರುವ ಅಜ್ಞಾನದ ಕತ್ತಲನ್ನು ನಶಿಸುವುದು. ನಾವು (ಪ್ರಕಾಶಮಾನ) ಮನಸ್ಸಿನಿಂದ ಮಾತ್ರ ನಮಗೆ ಸೂಕ್ತ ನಾಯಕನನ್ನು ಗುರುತಿಸಬಹುದು. ಎಂಪೆರುಮಾನಾರರು ಭೂದತ್ ಆೞ್ವಾರ್ ಅವರ ದಿವ್ಯ ಪಾದಗಳ ನೆನಪನ್ನು ಸದಾ ತಮ್ಮ ಮನಸ್ಸಿನಲ್ಲಿಟ್ಟುಕೊಂಡಿರುವರು. ಅಂತಹ ಎಂಪೆರುಮಾನಾರಿನ ದಿವ್ಯ ಗುಣಗಳನ್ನು ಸದಾ ಪಠಿಸುವ ಮಹನೀಯರು ಬಾಹ್ಯ ( ವೇದಗಳನ್ನು ನಂಬದಿರುವವರು ) ಮತ್ತು ಕುದೃಷ್ಟಿಗಳಿಂದ (ವೇದಗಳನ್ನು ತಪ್ಪಾಗಿ ಅರ್ಥೈಸುವವರು ) ವಿನಾಶವಿಲ್ಲದ ವೇದಗಳನ್ನು ರಕ್ಷಿಸಿ ಈ ಜಗತ್ತಿನಲ್ಲಿ ದೃಢವಾಗಿ ಸ್ಥಾಪಿಸುವರು.
ಹತ್ತನೇ ಪಾಸುರಂ : ಎಂಪೆರುಮಾನಾರ್ ಮೇಲೆ ಅತೀತ ವಾತ್ಸಲ್ಯ ಹೊಂದಿರುವವರ ದಿವ್ಯ ಪಾದಗಳನ್ನು ತಮ್ಮ ಶಿರಸ್ಸಿನಲ್ಲಿ ಇರಿಸುವವರು , ಪ್ರತಿಯಾಗಿ ಸದಾ ಪೇಯ್ ಆೞ್ವಾರ್ ಅವರ ದಿವ್ಯ ಪಾದಗಳನ್ನು ಆಚರಿಸುವವರು , ಎಂದೆಂದಿಗೂ ಮಹನೀಯರಾಗಿರುತ್ತಾರೆ.
ಮನ್ನಿಯ ಪೇರ್ ಇರುಳ್ ಮಾನ್ಡಪಿನ್ ಕೋವಲುಳ್ ಮಾಮಲರಾಳ್
ತನ್ನೊಡುಂ ಆಯನೈ ಕಂಡಮೈ ಕಾಟ್ಟುಂ ತಮಿೞ್ ತಲೈವನ್
ಪೋನ್ ಅಡಿ ಪೋಱ್ಱುಂ ಇರಾಮಾನುಶರ್ಕು ಅನ್ಬು ಪೂಣ್ಡವರ್ ತಾಳ್
ಶೆನ್ನಿಯಿಲ್ ಶೂಡುಂ ತಿರುವುಡೈಯಾರ್ ಎನ್ಱುಂ ಶೀರಿಯರೇ
ಮೊದಲ ಎರಡು ಆೞ್ವಾರ್ಗಳು (ಅವರ ತಿರುವಂದಾದಿಗಳ ಮೂಲಕ ) ದೀಪಗಳನ್ನೂ ಹಚ್ಚಿದಾಗ ಅಜ್ಞಾನದ ಅಸ್ಥಿರವಾದ ಕತ್ತಲನ್ನು ಸಂಪೂರ್ಣವಾಗಿ ಓಡಿಸಲಾಯಿತು. ಕತ್ತಲನ್ನು ಓಡಿಸಿದ ನಂತರ , ಪೇಯ್ ಆೞ್ವಾರ್, ತಿರುಕ್ಕೋವಲೂರಲ್ಲಿ , ಕೃಷ್ಣಾವತಾರದಲ್ಲಿ ಅವರ ಭಕ್ತರಿಗೆ ವಿಧೇಯರಾದ, ಅವರು ತಿರುಮಾಮಗಳ್ (ಶ್ರೀ ಮಹಾಲಕ್ಷ್ಮಿ ) ಜೊತೆ ಪರಮಾತ್ಮನನ್ನು ಕಂಡ ರೀತಿಯನ್ನು ತೋರಿಸುತ್ತಾರೆ. ತಮಿಳು ನಾಯಕರಾದ ಅಂತಹ ಪೇಯ್ ಆೞ್ವಾರ್ ದಿವ್ಯ ಪಾದಗಳನ್ನು ಎಂಪೆರುಮಾನಾರ್ ಪ್ರಶಂಸಿಸುತ್ತಾರೆ. ಎಂಪೆರುಮಾನಾರ್ ಮೇಲೆ ಅತೀತ ವಾತ್ಸಲ್ಯ ಹೊಂದಿರುವ ಭಕ್ತರ ದಿವ್ಯ ಪಾದಗಳನ್ನು ತಮ್ಮ ಶಿರಸ್ಸಿನಲ್ಲಿ ಆಭರಣದಂತೆ ಧರಿಸುವವರು, ಈ ಮಹಾನಿಧಿಯನ್ನು ಹೊಂದಿದ ಕಾರಣ, ಸದಾ ಮಹಾನೀಯರಾಗಿರುತ್ತಾರೆ.
ಮುಂದಿನ ಲೇಖನದಲ್ಲಿ ಈ ಪ್ರಬಂದದ ಮುಂದಿನ ಶೀರ್ಷಿಕೆಯನ್ನು ಚರ್ಚಿಸೋಣ.
ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ : https://divyaprabandham.koyil.org/index.php/2020/04/ramanusa-nurrandhadhi-pasurams-1-10-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org