ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಇಪ್ಪತ್ತೊಂದನೆಯ ಪಾಸುರಮ್:-
ಈ ಪಾಸುರದಲ್ಲಿ ಆಂಡಾಳ್ ಕೃಷ್ಣನ ಅವತಾರ, ನಂದಗೋಪರ ಮನೆಯಲ್ಲಿ ಅವನ ಜನನ, ಮತ್ತು ಅವನ ಪ್ರಾಬಲ್ಯ, ವೇದಗಳಲ್ಲಿ ಉಲ್ಲೇಖಿಸಿರುವಂತೆ ಅವನ ಶ್ರೇಷ್ಠತೆಯ ಬಗ್ಗೆ ಹೇಳುತ್ತಾಳೆ.
ಏಟ್ರ ಕಲಙ್ಗಳ್ ಎದಿರ್‌ಪೊಙ್ಗಿ ಮೀದಳಿಪ್ಪ
ಮಾಟ್ರಾದೇ ಪಾಲ್‌ಶೊರಿಯುಮ್ ವಳ್ಳಲ್ ಪೆರುಮ್‌ಪಶುಕ್ಕಳ್
ಆಟ್ರಪ್ಪಡೈತ್ತಾನ್ ಮಹನೇ ಅಱಿವುರಾಯ್
ಊಟ್ರಮುಡೈಯಾಯ್ ಪೆರಿಯಾಯ್, ಉಲಹಿನಿಲ್
ತೋಟ್ರಮಾಯ್ ನಿನ್ರು ಶುಡರೇ ತುಯಿಲೆೞಾಯ್
ಮಟ್ರಾರ್ ಉನಕ್ಕು ವಲಿತುಲೈನ್ದು ಉನ್‌ವಾಶಱ್ಕಣ್
ಆಟ್ರಾದು ವಂದು ಉನ್ನಡಿ ಪಣಿಯುಮಾಪೋಲೇ
ಪೋಟ್ರಿಯಾಮ್ ವನ್ದೋಮ್ ಪುಗೞ್‌ನ್ದೇಲೋರೆಮ್ಬಾವಾಯ್॥
ಅಮಿತವಾದ (ಮಿತಿಯೇ ಇಲ್ಲದ) ಕೊಡಗಳ ತುಂಬಾ ಹಾಲು ಕರೆದು, ಅದು ಸೋರಿ ಹೋಗುವಷ್ಟು ಹಾಲನ್ನು ಕೊಡುವ ದೊಡ್ಡ ದೊಡ್ಡ ಗಾತ್ರದ , ದಾರಾಳವಾಗಿರುವ ಹಸುಗಳನ್ನು ಹೊಂದಿರುವ ನಂದಗೋಪರಿಗೇ ತಿರುಮಗನಾಗಿರುವ ಕೃಷ್ಣನೇ, ! ಎದ್ದೇಳು. (ಕೃಷ್ಣನು ತನ್ನ ತಿರುಕೈಗಳಿಂದ ಸ್ಪರ್ಶಿಸಿದ್ದರಿಂದ ಹಸುಗಳು ಮಿತಿಯೇ ಇಲ್ಲದಷ್ಟು ಹಾಲನ್ನು ಕೊಡುತ್ತಿರುತ್ತವೆ). ವೇದಗಳಲ್ಲೂ ವಿವರಿಸಲಾಗದಷ್ಟು ಅಪರಿಮಿತವಾದ ಶ್ರೇಷ್ಠತೆಯನ್ನು ಹೊಂದಿರುವ ಕೃಷ್ಣನೇ, ಎದ್ದೇಳು. ನಿನ್ನ ಹೊಳೆಯುವ ಮುಖದ ಕಾಂತಿಯನ್ನು ಎಲ್ಲರೂ ಪಡೆಯಲಿ ಎಂದು ಅವತಾರವೆತ್ತಿದ ಮಹಾ ಪುರುಷನೇ, ನಿನ್ನ ಯೋಗ ನಿದ್ರೆಯಿಂದ ಎಚ್ಚೆತ್ತುಕೊಳ್ಳು. ನಿನ್ನ ವೈರಿಗಳು, ನಿನ್ನಿಂದಲೇ ತಮ್ಮ ಬಲವನ್ನು ಕಳೆದುಕೊಳ್ಳುತ್ತಾರೆ. ನಾವು ಬೇರೆ ಎಲ್ಲಿಯೂ ಹೋಗಲು ಸ್ಥಳವಿಲ್ಲದೇ, (ಬೇರೆ ಗತಿಯಿಲ್ಲದೇ ನಿನ್ನನ್ನೇ ಶರಣು ಬಂದು) ನಿನ್ನ ಬಾಗಿಲಿಗೆ ಬಂದು ನಿನ್ನನ್ನು ಹಾಡಿ ಹೊಗಳಿ ಮಂಗಳಾಶಾಸನವನ್ನು ಮಾಡುತ್ತಿದ್ದೇವೆ. ದಯವಿಟ್ಟು ಎಚ್ಚೆತ್ತುಕೊಂಡು ನಮ್ಮನ್ನು ಹರಸು ಎಂದು ಆಂಡಾಳ್ ಮತ್ತು ಅವಳ ಗೆಳತಿಯರು ಕೃಷ್ಣನಲ್ಲಿ ಕೇಳಿಕೊಳ್ಳುತ್ತಾರೆ.
ಇಪ್ಪತ್ತೆರಡನೆಯ ಪಾಸುರಮ್:-
ಈ ಪಾಸುರದಲ್ಲಿ ಆಂಡಾಳ್ ತನಗೆ ಮತ್ತು ತನ್ನ ಗೆಳತಿಯರಿಗೆ ಬೇರೆ ಆಶ್ರಯವಿಲ್ಲದೇ ಕೃಷ್ಣನ ಬಳಿಗೆ ಬಂದಿರುವುದಾಗಿಯೂ , ತಾವು ವಿಭೀಷಣನ ಹಾಗೆ ಶ್ರೀರಾಮರಲ್ಲಿ ಆಶ್ರಯ ಬೇಡಿ ಬಂದಿರುವುದಾಗಿಯೂ ಹೇಳುತ್ತಾಳೆ. ಅವಳು ತನ್ನ ಎಲ್ಲಾ ರೀತಿಯ ಬೇರೆ ಆಸೆಗಳನ್ನು ತೊರೆದು ಎಂಬೆರುಮಾನರ ಅನುಗ್ರಹಕ್ಕಾಗಿಯೇ ಬಂದಿರುವುದಾಗಿ ಹೇಳುತ್ತಾಳೆ.
ಅಙ್ಗಣ್‌ಮಾಞಾಲತ್ತು ಅರಶರ್, ಅಭಿಮಾನ
ಬಙ್ಗಮಾಯ್ ವನ್ದು ನಿನ್ ಪಳ್ಳಿಕಟ್ಟಿಲ್ ಕೀೞೇ
ಶಙ್ಗಮಿರುಪ್ಪಾರ್ ಪೋಲ್ ವನ್ದು ತಲೈಪ್ಪೆಯ್‌ದೋಮ್
ಕಿಙ್ಗಿಣಿವಾಯ್ ಚ್ಚೆಯ್ದ ತಾಮರೈ ಪ್ಪೂಪ್ಪೋಲೇ
ಶೆಙ್ಗಣ್ ಶಿಱಿಚ್ಚಿಱಿದೇ ಎಮ್ಮೇಲ್ ವಿೞಿಯಾವೋ
ತಿಙ್ಗಳುಮ್ ಅದಿತ್ತಿಯನುಮ್ ಎೞುನ್ದಾಱ್ಪೋಲ್
ಅಙ್ಗಣಿರಣ್ಡುಮ್ ಕೊಣ್ಡು ಎಙ್ಗಳ್ ಮೇಲ್ ನೋಕ್ಕುದಿಯೇಲ್
ಎಙ್ಗಳ್‌ಮೇಲ್ ಶಾಪಮ್ ಇೞಿನ್ದೇಲೋರೆಮ್ಬಾವಾಯ್॥
ಈ ವಿಶಾಲವಾದ, ಸುಂದರವಾದ , ದೊಡ್ಡ ಪ್ರಪಂಚವನ್ನೇ ಆಳಿದ ಮಹಾ ದೊಡ್ಡ ಅರಸರು, ತಮ್ಮ ಅಹಂಕಾರವನ್ನು ಕಳೆದುಕೊಂಡು ನಿನ್ನ ಸಿಂಹಾಸನದ ಕೆಳಗೆ ನಿನ್ನಲ್ಲೇ ಆಶ್ರಯ ಕೋರಿ ಬಂದಿದ್ದಾರೆ. ನಾವೂ ಅದೇ ರೀತಿ ಗುಂಪಾಗಿ ವಿಭೀಷಣನ ಹಾಗೆ ನಿನ್ನಲ್ಲೇ ಆಶ್ರಯವನ್ನು ಕೋರಿ (ಬೇರೆಲ್ಲೂ ಹೋಗದೇ) ಬಂದಿದ್ದೇವೆ. ಮಕ್ಕಳಿಗೆ ಆಟವಾಡಿಸುವ ಕಿಂಕಿಣಿಯ ತಾವರೆಯ ಹೂವಿನ ಹಾಗೆ ಮೆಲ್ಲನೆ ತಮ್ಮ ಕಮಲದ ಕಣ್ಗಳನ್ನು ತೆರೆದು ನಮ್ಮನ್ನು ಆಶೀರ್ವದಿಸು. ಯಾವ ರೀತಿಯಲ್ಲಿ ಸೂರ್ಯನೂ ಚಂದ್ರನೂ ಉದಯಿಸುತ್ತಾರೋ ನಿಮ್ಮ ಎರಡೂ ಕಣ್ಣನ್ನು ಮೆಲ್ಲನೆ ತೆರೆದು ನಮ್ಮನ್ನು ಅನುಗ್ರಹಿಸು. ನಮ್ಮ ದುಃಖ, ನಿರಾಶೆ, ಶಾಪ ಮುಂತಾದುವುಗಳನ್ನು ದೂರಪಡಿಸು, ನಾಶಮಾಡು ಎಂದು ಆಂಡಾಳ್ ಕೃಷ್ಣನಲ್ಲಿ ಕೇಳಿಕೊಳ್ಳುತ್ತಾಳೆ.
ಇಪ್ಪತ್ಮೂರನೇ ಪಾಸುರಮ್:-
ಮಾರಿ ಮಲೈ ಮುೞೈಞ್ಜಿಲ್ ಮನ್ನಿಕ್ಕಿಡನ್ದು ಉಱಙ್ಗುಮ್
ಶೀರಿಯ ಶಿಙ್ಗಮ್ ಅಱಿವುಟ್ರು ತ್ತೀವಿೞಿತ್ತು
ವೇರಿಮಯಿರ್‌ಪೊಙ್ಗ ಎಪ್ಪಾಡುಮ್ ಪೇರ್ನ್ದುದಱಿ
ಮೂರಿನಿಮಿರ್ನ್ದು ಮುೞಙ್ಗಿ ಪ್ಪುರಪ್ಪಟ್ಟು
ಪ್ಪೋದರುಮಾಪೋಲೇ ನೀಪೂವೈಪ್ಪೂವಣ್ಣಾ, ಉನ್
ಕೋಯಿಲ್‌ನಿನ್ಱು ಇಙ್ಗಣೇ ಪೋನ್ದರುಳಿ, ಕೋಪ್ಪುಡೈಯ
ಶೀರಿಯ ಶಿಙ್ಗಾಸನತ್ತಿರುನ್ದು, ಯಾಮ್‌ವನ್ದ
ಕಾರಿಯಮ್ ಆರಾಯ್‌ನ್ದು ಅರುಳ್ ಏಲೋರೆಮ್ಬಾವಾಯ್॥
ಮಳೆಯ ಕಾಲದಲ್ಲಿ ಹೇಗೆ ಗಂಭೀರವಾದ , ಬೃಹದಾಕಾರವಾದ ಸಿಂಹವು ಬೆಟ್ಟದ ಗುಹೆಯ ಒಳಗೆ ತನ್ನಿತರ ಹೆಣ್ಣು ಸಿಂಹದ ಜೊತೆ ನಿದ್ರಿಸುತ್ತದೆಯೋ, ಮತ್ತು ಆ ಋತು ಮುಗಿದ ಮೇಲೆ ಮೆಲ್ಲನೆ ಎದ್ದು, ತನ್ನ ತೀಕ್ಷ್ಣವಾದ ಕಣ್ಣುಗಳನ್ನು ತೆರೆದು ಎಲ್ಲಾ ಕಡೆಯೂ ಚಲಿಸಿ, ಹೂಂಕರಿಸಿ, ತನ್ನ ದೊಡ್ಡದಾದ ದೇಹವನ್ನು ಒದರಿದಾಗ ಹೇಗೆ ಅದರ ಮೈಯಲ್ಲಿರುವ ವಾಸನೆಯು ಕೂದಲುಗಳಿಂದ ಪಸರುತ್ತದೆಯೋ ಮತ್ತು ನೆಟ್ಟಗೆ ನಿಂತುಕೊಂಡು , ಗರ್ಜಿಸಿ, ತನ್ನ ಗುಹೆಯನ್ನು ನಿರ್ಗಮಿಸಿ, ನಿಧಾನವಾಗಿ ಚಲಿಸಿ, ಹೊರಗೆ ಬಂದು ನಿಲ್ಲುತ್ತದೆಯೋ, ಹಾಗೆಯೇ ಕೃಷ್ಣನು ತನ್ನ ನಿದ್ರೆಯಿಂದ ಎಚ್ಚೆತ್ತುಕೊಂಡು, ತನ್ನ ಕಾಯಂ ಹೂವಿನಂತಹ ನೀಲಾಕಾರದ ತಿರುಮೇನಿಯಿಂದ , ತನ್ನ ಗುಡಿಯಿಂದ (ಇಲ್ಲಿ ಮಲಗುವ ಕೋಣೆಯಿಂದ) ಹೊರಬಂದು, ಸಕಲ ರೀತಿಯಲ್ಲಿ ಅಲಂಕರಿಸಲ್ಪಟ್ಟ ಸಿಂಹಾಸನವನ್ನೇರಿ ಗೋಪಿಕೆಯರನ್ನು ನೋಡಿ ಕನಿಕರಗೊಂಡು “ನಿಮಗೇನು ಬೇಕು? ” ಎಂದು ಆರ್ದ್ರದಿಂದ ಕೇಳಲು ಗೋಪಿಕೆಯರು ತಾವು ಬಂದ ಕಾರ್ಯವನ್ನು ಹೇಳಿದರು.
ಇಪ್ಪತ್ನಾಲ್ಕನೆಯ ಪಾಸುರಮ್:-
ಗೋಪಿಕೆಯರು ಕೃಷ್ಣನನ್ನು ತಮ್ಮ ಕೋರಿಕೆಯ ಮೇರೆಗೆ ಎದ್ದು ಬರುವುದನ್ನು, ಬಂದು ಸಿಂಹಾಸನದಲ್ಲಿ ಆರೋಹವಾಗುದನ್ನು ಕಂಡರು. ಅವರು ತಾವು ಏತಕ್ಕಾಗಿ ಬಂದರೆಂದು ಮರೆತು ಕೃಷ್ಣನ ಆಕರ್ಷಕವಾದ ನಡಿಗೆ, ಅವನ ಸುಂದರ ತಿರುಮೇನಿಯನ್ನು ನೋಡಿ ಆನಂದಿಸಿದರು. ಅವರು ಕೃಷ್ಣನಿಗೆ ಪಲ್ಲಾಂಡು ಹೇಳಲು ಆರಂಭಿಸಿದರು. ಕೃಷ್ಣನು ನಪ್ಪಿನ್ನೈ ಪಿರಾಟ್ಟಿಯ ಸಮೇತ ಸಿಂಹಾಸನದಲ್ಲಿ ಕೂರಲು , ಅವನ ಪಾದ ಕಮಲಕ್ಕೆ ನಮಸ್ಕರಿಸಿದರು.
ಅನ್‌ಱು ಇವ್ವುಲಹಮ್ ಅಳನ್ದಾಯ್ ಅಡಿಪೋಟ್ಟ್ರಿ
ಶೆನ್ರಙ್ಗು ತ್ತೆನ್ನಿಲಙ್ಗೈ ಶೆಟ್ರಾಯ್ ತಿಱಲ್ ಪೋಟ್ಟ್ರಿ
ಪೊನ್ರುಚ್ಚಕಡಮ್ ಉದೈತ್ತಾಯ್ ಪುಹೞ್ ಪೋಟ್ಟ್ರಿ
ಕನ್ರು ಕುಣಿಲಾ ಎಱಿನ್ದಾಯ್ ಕೞಲ್ ಪೋಟ್ಟ್ರಿ
ಕುನ್ರು ಕುಡೈಯಾಯ್ ಎಡುತ್ತಾಯ್ ಗುಣಮ್ ಪೋಟ್ಟ್ರಿ
ವೆನ್ರು ಪಹೈಕೆಡುಕ್ಕುಮ್ ನಿನ್‌ಕೈಯಿಲ್ ವೇಲ್‌ಪೋಟ್ಟ್ರಿ
ಎನ್ರು ಎನ್ರು ಉನ್ ಶೇವಕಮೇ ಏಟ್ರಿಪ್ಪಱೈಕೊಳ್ವಾನ್
ಇನ್ರು ಯಾಮ್ ವನ್ದೋಮ್ ಇಱಙ್ಗು ಏಲೋರೆಮ್ಬಾವಾಯ್॥
ಬಹಳ ಕಾಲದ ಹಿಂದೆ, ದೇವತೆಗಳಿಗಾಗಿ ಮಹಾಬಲಿಯನ್ನು ಮಟ್ಟಹಾಕಿ, ಈ ಲೋಕಗಳನ್ನು ಎರಡೇ ಅಡಿಗಳಿಂದ ಅಳೆದ ಪಾದಗಳು ಬಹಳ ಕಾಲ ಬಾಳಲಿ. ರಾವಣನ ಲಂಕೆಗೇ ಹೋಗಿ ಅವನನ್ನು ಸಂಹರಿಸಿದ ನಿನ್ನ ಸಾಹಸ ಬಹುಕಾಲ ಬಾಳಲಿ. ಬಂಡಿಯಲ್ಲಿ ನುಸುಳಿದ್ದ ಶಕಟಾಸುರನನ್ನು ಒದ್ದು ಕೊಂದ ನಿನ್ನ ಕೀರ್ತಿಯು ಬಹುಕಾಲ ಬಾಳಲಿ. ಒಂದು ಕರುವಿನೊಳಗೆ ಹೊಕ್ಕ ರಾಕ್ಷಸನನ್ನೂ, ಒಂದು ಸೇಬಿನ ಹಣ್ಣಿನ ಒಳಗೆ ಹುದುಗಿದ್ದ ರಾಕ್ಷಸನನ್ನೂ ಒಟ್ಟಿಗೆ ಎಸೆದು ಕೊಂದ ನಿನ್ನ ತಿರುವಡಿಗಳು ಬಹು ಕಾಲ ಬಾಳಲಿ. ಗೋವರ್ಧನ ಬೆಟ್ಟವನ್ನೇ ಕಿರುಬೆರಳಲ್ಲಿ ಕೊಡೆಯಾಗಿ ಎತ್ತಿ ಹಿಡಿದು, ಎಲ್ಲರಿಗೂ ಆಶ್ರಯ ಕೊಟ್ಟ ನಿನ್ನ ಗುಣವು ಬಹುಕಾಲ ಬಾಳಲಿ. ವೈರಿಗಳನ್ನು ಧ್ವಂಸಗೊಳಿಸುವ ನಿನ್ನ ಕೈಯಲ್ಲಿರುವ ಚಕ್ರ ಬಹುಕಾಲ ಬಾಳಲಿ.
ಯಾವಾಗಲೂ ನಿನ್ನನ್ನೇ ಹೊಗಳುವ, ನಿನ್ನ ಸೇವೆಯನ್ನೇ ಮಾಡುವ ಕೈಂಕರ್ಯದ ಭಾಗ್ಯವನ್ನು ನಮಗೆ ಕೊಡು. ನಿನ್ನ ಅನುಗ್ರಹವು ಸದಾ ನಮ್ಮ ಮೇಲಿರಲಿ ಎಂದು ಆಂಡಾಳ್ ಕೃಷ್ಣನಿಗೆ ಮಂಗಳಾಶಾಸನವನ್ನು ಮಾಡುತ್ತಾಳೆ.
ಇಪ್ಪತ್ತೈದನೆಯ ಪಾಸುರಮ್:-
ಕೃಷ್ಣನು ಗೋಪಿಕೆಯರನ್ನು ನಿಮಗೆ ವ್ರತವನ್ನು ಪೂರೈಸಲು ಏನಾದರೂ ಬೇಕಾಗಿದೆಯೇ ಎಂದು ಕೇಳಿದಾಗ , ಗೋಪಿಕೆಯರು ನಿನ್ನನ್ನು ಪಲ್ಲಾಂಡು ಹಾಡಿದ ಮೇಲೆ ನಮ್ಮ ಎಲ್ಲಾ ದುಃಖಗಳೂ ತೀರಿ ಹೋದವು, ನಮಗೆ ಈಗ ನಿನ್ನ ಕೈಂಕರ್‍ಯವನ್ನು ಮಾತ್ರ ಮಾಡಲು ಅನುಮತಿ ಕೊಡು ಎಂದು ಕೇಳುತ್ತಾರೆ.
ಒರುತ್ತಿ ಮಗನಾಯ್ ಪ್ಪಿಱನ್ದು, ಓರಿರವಿಲ್
ಒರುತ್ತಿ ಮಗನಾಯ್ ಒಳಿತ್ತುವಳರ
ತ್ತರಿಕ್ಕಿಲಾನಾಗಿ ತ್ತಾನ್ ತೀಙ್ಗು ನಿನೈನ್ದ
ಕ್ಕರುತ್ತೈ ಪ್ಪಿೞೈಪ್ಪಿತ್ತು ಕ್ಕಞ್ಜನ್ ವಯಿಟ್ಟ್ರಿಲ್
ನೆರುಪ್ಪೆನ್ನ ನಿನ್ರು ನೆಡುಮಾಲೇ, ಉನ್ನೈ
ಅರುತ್ತಿತ್ತು ವನ್ದೋಮ್ ಪಱೈ ತರುದಿಯಾಗಿಲ್
ತ್ತಿಱುತ್ತಕ್ಕ ಶೆಲ್ವಮುಮ್ ಶೇವಕಮುಮ್ ಯಾಮ್‍ಪಾಡಿ
ವರುತ್ತಮುಮ್ ತೀರ್ನ್ದು ಮಗಿೞ್‍ನ್ದು ಏಲೋರೆಮ್ಬಾವಾಯ್॥
ಮೊದಲು ದೇವಕಿಯ ಮಗನಾಗಿ ಹುಟ್ಟಿ, ಒಂದೇ ರಾತ್ರಿಯಲ್ಲಿ ನಂತರ ಯಶೋದೆಯ ಮಗನಾಗಿ , ಬಚ್ಚಿಟ್ಟು ಬೆಳೆದ ಕೃಷ್ಣನನ್ನೇ ಕಂಡು ಹಿಡಿದು , ಕಂಸನು ಅದನ್ನು ತಡೆಯಲಾಗದೇ, ಕೃಷ್ಣನನ್ನು ಕೊಲ್ಲುವ ಉಪಾಯಗಳನ್ನು ಮಾಡಿದನು. ಆ ಕಂಸನ ಹೊಟ್ಟೆಯಲ್ಲಿ ಕೃಷ್ಣನು ಬೆಂಕಿಯಾಗಿ ಅವನನ್ನು ಭಯಪಡಿಸಿ, ನಂತರದಲ್ಲಿ ಕಂಸನನ್ನೂ, ಅವನ ಕೆಟ್ಟ ದುರ್ಬುದ್ಧಿಯನ್ನೂ ನಾಶಮಾಡಿದನು. ನೀನು ನಿನ್ನ ಭಕ್ತರನ್ನು ಅತ್ಯಂತ ಪ್ರೀತಿಸುವುದರಿಂದ ನಾವು ನಿನ್ನನ್ನು ‘ನಮ್ಮ ಅಗಲಿಕೆಯ ಕಷ್ಟ , ದುಃಖಗಳನ್ನು ದೂರಮಾಡಿ, ನೀನು ಸಂತೋಷದಿಂದ ನಿನ್ನ ಸೌಭಾಗ್ಯವನ್ನೂ, ಕೈಂಕರ್‍ಯವನ್ನೂ (ಯಾವುದು ನಪ್ಪಿನ್ನೈ ಪಿರಾಟ್ಟಿಯೂ ಇಷ್ಟ ಪಡುವಳೊ) ನಮಗೆ ದಯಪಾಲಿಸಬೇಕೆಂದು ಕೇಳಿಕೊಳ್ಳುತ್ತೇವೆ’ ಎಂದು ಕೃಷ್ಣನನ್ನು ಕೇಳಿದರು.
ಇಪ್ಪತ್ತಾರನೆಯ ಪಾಸುರಮ್:-
ಈ ಪಾಸುರದಲ್ಲಿ ಆಂಡಾಳ್ , ವ್ರತಕ್ಕೆ ಬೇಕಾದ ಸಾಮಗ್ರಿಗಳನ್ನು ಕೇಳುತ್ತಾಳೆ. ಮೊದಲು ನಮಗೇನೂ ಬೇಡ ಎಂದಿದ್ದ ಆಂಡಾಳ್ , ಈಗ ನಮಗೆ ಕೈಂಕರ್‍ಯಪರಗಳು ಬೇಕೆಂದು ಕೇಳುತ್ತಾಳೆ. ಅದು ಏನೆಂದರೆ , ಪಾಂಚಜನ್ಯ – ಶಂಖ ಮಂಗಳಾಶಾಸನ ಮಾಡಲು, ಒಂದು ದೀಪ – ಕೃಷ್ಣನ ಮುಖವನ್ನು ಸರಿಯಾಗಿ ನೋಡಲು , ಒಂದು ಧ್ವಜ – ಕೃಷ್ಣನ ಉಪಸ್ಥಿತಿಯನ್ನು ತಿಳಿಸಲು, ಒಂದು ಮೇಲಾವರಣ, ಕೃಷ್ಣನಿಗೆ ನೆರಳು ನೀಡಲು, ಮುಂತಾದುವು.
ನಮ್ಮ ಪೂರ್ವಾಚಾರ್‍ಯರು ಹೇಳಿದ್ದಾರೆ .’ಆಂಡಾಳ್ ಇವನ್ನೆಲ್ಲಾ ಬೇಡಿದ್ದು ಕೃಷ್ಣಾನುಭವವು ಪೂರ್ಣತೆ ಮತ್ತು ಯಶಸ್ಸು ಪಡೆಯಲು.’
ಮಾಲೇ ಮಣಿವಣ್ಣಾ ಮಾರ್ಗೞಿ ನೀರಾಡುವಾನ್
ಮೇಲೈಯಾರ್ ಶೆಯ್‍ವನಗಳ್ ವೇಣ್ಡುವನ ಕೇಟ್ಟಿಯೇಲ್
ಞಾಲತ್ತೈ ಎಲ್ಲಾಮ್ ನಡುಙ್ಗ ಮುರಲ್ವನ
ಪಾಲನ್ನ ವಣ್ಣತ್ತು ಉನ್ ಪಾಞ್ಜಶನ್ನಿಯಮೇ
ಪೋಲ್‍ವನ ಶಙ್ಗಙ್ಗಳ್ ಪೋಯ್ ಪ್ಪಾಡುಡೈಯನವೇ,
ಶಾಲಪ್ಪೆರುಮ್ ಪಱೈಯೇ ಪಲ್ಲಾಣ್ಡು ಇಶೈಪ್ಪಾರೇ
ಕೋಲವಿಳಕ್ಕೇ ಕೊಡಿಯೇ ವಿದಾನಮೇ
ಆಲಿನಿಲೈಯಾಯ್ ಅರುಳ್ ಎಲೋರ್ ಎಮ್ಬಾವಾಯ್॥
ಓಹ್, ಭಕ್ತರಲ್ಲಿ ಪ್ರೀತಿಯುಳ್ಳವನೇ, ನೀಲ ಮಾಣಿಕ್ಯದಂತೆ ಬಣ್ಣವನ್ನು ಹೊಂದಿರುವವನೇ, ಕೋಮಲ ಅರಳೀ ಎಲೆಯ ಮೇಲೆ ಪ್ರಳಯ ಕಾಲದಲ್ಲಿ ನಿದ್ರಿಸುವವನೇ, ನೀನು ನಮ್ಮನ್ನು ಏನು ಬೇಕೆಂದು ಕೇಳಿದ್ದರಿಂದ , ನಮ್ಮ ಪೂರ್ವಜರು ನಡೆಸಿಕೊಂಡು ಹೋದ ಪದ್ಧತಿಯಂತೆ ನಾವು ಕೇಳುತ್ತೇವೆ.
ನಮಗೆ ಬಲವಾಗಿ ಶಬ್ದವನ್ನು ಹೊರಡಿಸುವ, ಜಗತ್ತನ್ನೇ ನಡುಗಿಸಬಲ್ಲ ಬೆಳ್ಳಗಿನ ಶಂಖ – ಪಾಂಚಜನ್ಯವು ಬೇಕು. ವಿಸ್ತಾರವಾಗಿರುವ ದೊಡ್ಡ ಡೋಲು, ನಮ್ಮ ಜೊತೆ ತಿರುಪ್ಪಲ್ಲಾಂಡು ಹಾಡುವವರು, ದೀಪ, ಧ್ವಜ ಮತ್ತು ಕೊಡೆಯಂತಹ ಮೇಲಾವರಣ ಬೇಕು . ಎಂದು ಆಂಡಾಳ್ ಕೃಷ್ಣನನ್ನು ಕೇಳುತ್ತಾಳೆ.
ಇಪ್ಪತ್ತೇಳನೆಯ ಪಾಸುರಮ್:-
ಈ ಪಾಸುರದಲ್ಲಿ ಆಂಡಾಳ್, ಎಂಬೆರುಮಾನರ ವಿಶಿಷ್ಟ ಗುಣವಾದ, ತನಗೆ ಒಲಿಯುವವರನ್ನೂ, ಒಲಿಯದೇ ಇರುವವರನ್ನೂ ಆಕರ್ಷಿಸುವ ಗುಣವನ್ನು ವಿವರಿಸುತ್ತಾಳೆ. ಉನ್ನತ ಮಟ್ಟದ ಪುರುಷಾರ್ಥವಾದ (GOAL) ಸಾಯುಜ್ಯ ಮೋಕ್ಷಮ್ – ಅಂದರೆ ಪೆರುಮಾಳಿನಿಂದ ಒಂದ ಕ್ಷಣವೂ ಬೇರ್ಪಡಿಸಲಾಗದೇ, ನಿರಂತರ ಅವನ ಸೇವೆಯನ್ನು ಮಾಡುವುದೇ ಎಂದು.
ಕೂಡಾರೈ ವೆಲ್ಲುಮ್ ಶೀರ್ ಗೋವಿಂದಾ, ಉನ್ ತನ್ನೈ
ಪ್ಪಾಡಿ ಪಱೈಕೊಂಡು ಯಾಮ್ ಪೆಱು ಶಮ್ಮಾನಮ್
ನಾಡು ಪುಗೞುಮ್ ಪರಿಶಿನಾಲ್ ನನ್ರಾಗ
ಶೂಡಗಮೇ ತೋಳ್‍ವಳೈಯೇ ತೋಡೇ ಶೆವಿಪ್ಪೂವೇ
ಪಾಡಗಮೇ ಎನ್ರು ಅನೈಯ ಪಲ್‍ಕಲನುಮ್ ಯಾಮ್ ಅಣಿವೋಮ್
ಆಡೈಯುಡುಪ್ಪೋಮ್ ಅದನ್‍ಪಿನ್ನೇ ಪಾಲ್ಚೋಱು,
ಮೂಡನೈಪೈದು ಮುೞಙ್ಗೈ ವೞಿವಾರ
ಕ್ಕೂಡಿಯಿರುನ್ದು ಕುಳಿರ್ನ್ದು ಏಲೋರೆಮ್ಬಾವಾಯ್॥
ಓಹ್! ಗೋವಿಂದಾ! ನಿನಗೆ ಬಗ್ಗದೇ ಇರುವ ಶತ್ರುಗಳನ್ನು ಗೆಲ್ಲುವ ಉತ್ತಮ ಗುಣವನ್ನು ಹೊಂದಿರುವವನೇ, ನಿನ್ನನ್ನು ಹಾಡಿ ಹೊಗಳುವುದಕ್ಕಾಗಿ ನಮಗೆ ಸಿಗುವ ಬಹುಮಾನವೇನೆಂದರೆ, ಮೊದಲು ನಮಗೆ ಕೈಕರ್‍ಯಪ್ರಾಪ್ತಿ. ಮತ್ತು ನಮಗೆ ನೀನು ಮತ್ತು ನಪ್ಪಿನ್ನೈ ಪಿರಾಟ್ಟಿಯು ತೊಡಿಸುವ ಆಭರಣಗಳು : ಕೈಗಳಿಗೆ ಬಳೆ, ತೋಳುಗಳಿಗೆ ತೋಳುಬಂದಿ, ಕಿವಿಗಳಿಗೆ ಓಲೆ, ಕಿವಿಗಳ ಮೇಲ್ಭಾಗಕ್ಕೆ ಸೆವಿ ಪೂ, ಕಾಲುಗಳಿಗೆ ಗೆಜ್ಜೆ, ಮತ್ತು ಮುಂತಾದ ಆಭರಣಗಳನ್ನು ತೊಡಿಸಿ, ನೀವು ಈಗಾಗಲೇ ಕಟ್ಟಲ್ಪಟ್ಟ ವಸ್ತ್ರಗಳನ್ನೂ ನಮಗೆ ತೊಡಿಸುತ್ತೀರಿ. ಈ ವೈಭೋಗವನ್ನು ಊರಿಗೆ ಊರೇ ಕೊಂಡಾಡುತ್ತದೆ. ಇದಾದ ಮೇಲೆ ಅಕ್ಕಾರ ಅಡಿಶಿಲ್‍ನ್ನು ತಿನ್ನಲು ಕೊಡುತ್ತೀರಿ. ಇದರಿಂದ ತುಪ್ಪವು ಸೋರಿ ಹೋಗಿ ನಮ್ಮ ಮೊಳಕೈವರೆಗೂ ಹರಿದು ಬರುತ್ತದೆ. ಈ ರೀತಿ ಒಟ್ಟಿಗೆ ತಿನ್ನುವುದರಿಂದ ಕೃಷ್ಣಾನುಭವದಿಂದ ನಮ್ಮ ಮನಸ್ಸು ತಣ್ಣಗಾಗುತ್ತದೆ.
ಇಪ್ಪತ್ತೆಂಟನೆಯ ಪಾಸುರಮ್:–
ಈ ಪಾಸುರದಲ್ಲಿ ಆಂಡಾಳ್ ಎಲ್ಲಾ ಜೀವಾತ್ಮಗಳಿಗೂ , ಪರಮಾತ್ಮನಿಗೂ ಇರುವ ಸಂಬಂಧವನ್ನೂ , ತನ್ನ ಅಸಮರ್ಥತೆಯನ್ನೂ (ಬೇರೆ ರೀತಿಯಲ್ಲಿ ಹೋಗಲು), ಅವನ ಗುಣವಾದ ‘ಎಲ್ಲರನ್ನೂ ಉದ್ಧರಿಸುವ’, ಯಾರನ್ನೂ ದ್ವೇಷಿಸದ, ಬೃಂದಾವನದ ಹಸುವಿನಂತಿರುವ ಮತ್ತು ಯಾವುದನ್ನೂ, ಯಾರಿಂದಲೂ ಅಪೇಕ್ಷಿಸದ ಅವನ ಸ್ವಭಾವವನ್ನು ವಿವರಿಸುತ್ತಾಳೆ.
ಕಱವೈಗಳ್ ಪಿನ್‍ಶೆನ್ರು ಕಾನಮ್ ಶೇರ್ನ್ದು ಉಣ್ಬೋಮ್,
ಅಱಿವೊನ್ರುಮಿಲ್ಲಾದ ಆಯ್ಕುಲತ್ತು, ಉನ್‍ತನ್ನೈ
ಪ್ಪಿಱವಿಪ್ಪೆಱುನ್ದನೈ ಪುಣ್ಣಿಯಮ್ ಯಾಮ್ ಉಡೈಯೋಮ್
ಕುಱೈವೊನ್ರುಮಿಲ್ಲಾದ ಗೋವಿಂದಾ! ಉನ್‍ತನ್ನೋ
ಡುಱವೇಲ್, ನಮಕ್ಕಿಙ್ಗಿ ಒೞಿಕ್ಕವೊೞಿಯಾದು
ಅಱಿಯಾದ ಪಿಳ್ಳೈಗಳೋಮ್ ಅನ್ಬಿನಾಲ್, ಉನ್‍ತನ್ನೈ
ಚ್ಚಿಱುಪೇರ ಅೞೈತ್ತನವುಮ್ ಶೀಱಿ ಅಱುಳಾದೇ
ಇಱೈವಾ ನೀ ತಾರಾಯ್ ಪಱೈ ಏಲೋರ್ ಎಮ್ಬಾವಾಯ್॥
ಯಾವುದೇ ಕೊರತೆಯಿರದ (ಲೋಪವಿರದ) ಗೋವಿಂದಾ, ನಾವು ದಿನವೂ ಈ ಹಸುಗಳನ್ನು ಮೇಯಿಸಲು ಅಡವಿಗೆ ಕರೆದುಕೊಂಡು ಹೋಗುತ್ತೇವೆ. ಮಹಾ ಮಹಿಮನಾದ ನೀನು, ನಮ್ಮಂತಹ ತಿಳುವಳಿಕೆಯಿಲ್ಲದವರ ಸಂತತಿಯಲ್ಲಿ ಹುಟ್ಟಿದ್ದು, (ಅವತಾರವನ್ನೆತ್ತಿದ್ದು) ನಮ್ಮ ಅದೃಷ್ಟ. ಓಹ್, ಭಗವಂತನೇ! ನಮ್ಮ ಮತ್ತು ನಿನ್ನ ನಡುವೆ ಇರುವ ಸಂಬಂಧವನ್ನು ಯಾರೂ ಬಲಪಡಿಸಲೂ ಆಗುವುದಿಲ್ಲ, ಯಾರೂ ಸಡಿಲಪಡಿಸಲೂ ಆಗುವುದಿಲ್ಲ. ನಾವು ನಿನ್ನನ್ನು ಪ್ರೀತಿಯಿಂದ ಸಾಮಾನ್ಯವಾದ , ಹಸು ಮೇಯಿಸುವ ಆಡುಭಾಷೆಯಲ್ಲಿ ಕರೆದುದ್ದರಿಂದ ಕೋಪಗೊಳ್ಳಬೇಡ. ನಮಗೆ ನಿನ್ನ ಕೈಂಕರ್‍ಯದ ಭಾಗ್ಯವನ್ನು, ನಾವು ಕೇಳುತ್ತಿರುವ ಪರಿಣಾಮವನ್ನೂ (end result) ಕೊಡು ಎಂದು ಆಂಡಾಳ್ ಕೃಷ್ಣನಲ್ಲಿ ಕೇಳಿಕೊಳ್ಳುತ್ತಾಳೆ.
ಇಪ್ಪತ್ತೊಂಬತ್ತನೆಯ ಪಾಸುರಮ್:-
ಈ ಪಾಸುರದಲ್ಲಿ ಆಂಡಾಳ್, ಎಂಬೆರುಮಾನರಿಗೆ ಕೈಂಕರ್‍ಯವನ್ನು ಮಾಡುವುದು ನಮ್ಮ ಸಂತೋಷಕ್ಕಾಗಿ ಅಲ್ಲ, ಭಗವಂತನ ಸಂತೋಷಕ್ಕಾಗಿ ಮಾತ್ರವೇ ಎಂದು ತಿಳಿಯಪಡಿಸುತ್ತಾಳೆ. ಈ ವ್ರತಪಾಲನೆ ಒಂದು ನೆಪ ಮಾತ್ರ. ಕೃಷ್ಣಾನುಭವವನ್ನು ಪಡೆಯಲು ಇರುವ ಆಳವಾದ ಆಸೆಯಿಂದ ಈ ವ್ರತವನ್ನು ಅನುಸರಿಸಿದ್ದೇನೆ ಎಂದು ತಿಳಿಸುತ್ತಾಳೆ.
ಶಿಟ್ಟ್ರಮ್ ಶಿಱುಕಾಲೇ ವನ್ದು ಉನ್ನೈ ಚ್ಚೇವಿತ್ತು, ಉನ್
ಪೊಟ್ಟ್ರಾಮರೈಯಡಿಯೇ ಪೋಟ್ಟ್ರುಮ್ ಪೊರುಳ್‍ಕೇಳಾಯ್
ಪೆಟ್ಟ್ರಮ್ ಮೇಯ್‌ತುಣ್ಣುಮ್ ಕುಲತ್ತಿಲ್ ಪಿಱನ್ದು, ನೀ
ಕುಟ್ಟ್ರೇವಲ್ ಎಙ್ಗಳೈ ಕ್ಕೊಳ್ಳಾಮಲ್ ಪೋಗಾದು
ಇಟ್ಟ್ರೈಪ್ಪಱೈಕೊಳ್ವಾನ್ ಅನ್ರು ಕಾಣ್ ಗೋವಿಂದಾ
ಎಟ್ಟ್ರೈಕ್ಕುಮ್ ಏೞೇೞ್‍ಪಿಱವಿಕ್ಕುಮ್, ಉನ್‍ತನ್ನೋಡು
ಉಟ್ಟ್ರೋಮೇಯಾವೋಮ್ ಉನಕ್ಕೇ ನಾಮ್ ಆಟ್ ಚೆಯ್ವೋಮ್
ಮಟ್ಟ್ರೈನಮ್ ಕಾಮಙ್ಗಳ್ ಮಾಟ್ಟ್ರು ಏಲೋರ್ ಎಮ್ಬಾವಾಯ್॥
ಓಹ್, ಗೋವಿಂದಾ!! ನಾವು ಮುಂಜಾನೆ ಬೇಗ ಎದ್ದು ಇಲ್ಲಿಗೆ ಬಂದು ನಿನ್ನ ತಾವರೆಯಂತಹ ಚರಣ ಕಮಲಗಳಿಗೆ ಬಗ್ಗಿ ವಂದಿಸಿ, ಮಂಗಳಾಶಾಸನವನ್ನು ಮಾಡಿದ ಪರಿಣಾಮವನ್ನು ತಿಳಿದುಕೊಳ್ಳಲು ನೀನು ಹಸುಮೇಯಿಸುವವರ ಸಂತತಿಯಲ್ಲಿ ಜನ್ಮವೆತ್ತಿದ್ದೀಯ. ನೀನು ಹಸುಮೇಯಿಸುವ ಜನಗಳಾದ ನಮ್ಮ ರಹಸ್ಯ ಕೈಂಕರ್‍ಯವನ್ನು ಸ್ವೀಕರಿಸದೆ ಇರುವ ಹಾಗಿಲ್ಲ. ನಾವು ನಿನ್ನಿಂದ ಸಂಗೀತ ಸಾಧನವಾದ ಡೋಲನ್ನು ತೆಗೆದುಕೂಳ್ಳಲು ಇಲ್ಲಿಗೆ ಬರಲಿಲ್ಲ. ನಾವು ಅನಿಯಮಿತ ಕಾಲದವರೆಗೂ , ಎಷ್ಟು ಜನ್ಮಗಳನ್ನೆತ್ತಿದರೂ ನಿನ್ನ ಜೊತೆ ಸಂಬಂಧವನ್ನೂ ಸಂಪರ್ಕವನ್ನೂ ಹೊಂದಿರಬೇಕು. ನಾವು ನಿನಗಾಗಿ ಕೈಂಕರ್‍ಯವನ್ನು ‘ನಿನಗಾಗಿ ಮಾತ್ರವೇ’ ಮಾಡಬೇಕು. ನಾವು ಆ ಕೈಂಕರ್‍ಯವನ್ನು ಮಾಡುವಾಗ ‘ನಮ್ಮ ಸಂತೋಷಕ್ಕಾಗಿ ಮಾಡುತ್ತಿದ್ದೇವೆ ‘ ಎಂಬ ಯೋಚನೆಯನ್ನು ನೀನು ತೆಗೆದುಹಾಕಬೇಕು. ನೀನು ನಮ್ಮನ್ನು ಕರುಣೆಯಿಂದ ಅನುಗ್ರಹಿಸು. ನಿನ್ನ ಸಂತೋಷಕ್ಕಾಗಿ ಮಾತ್ರವೇ ನಾವು ಕೈಂಕರ್‍ಯವನ್ನು ಮಾಡುತ್ತಿದ್ದೇವೆ ಎಂದು ಅನುಗ್ರಹಿಸು. ಎಂದು ಆಂಡಾಳ್ ಕೃಷ್ಣನನ್ನು ಕೇಳಿಕೊಳ್ಳುತ್ತಾಳೆ.
ಮೂವತ್ತನೆಯ ಪಾಸುರಮ್:-
ಎಂಬೆರುಮಾನರು ಆಂಡಾಳ್‍ನ ಇಚ್ಛೆಯನ್ನು ಈಡೇರಿಸುತ್ತೇನೆಂದು ಹೇಳಿದಾಗ , ಆಂಡಾಳ್ ತನ್ನ ಹಸು ಮೇಯಿಸುವ ಹುಡುಗಿಯ ರೂಪದಿಂದ (ಆ ಭಾವನೆಯಿಂದ) ಬಂದು ತನ್ನ ಸಹಜ ಸ್ಥಿತಿಯ ಆಂಡಾಳ್ ಆಗಿ ಬದಲಾಗುತ್ತಾಳೆ.
ಅವಳು ಯಾರು ಈ ಮೂವತ್ತು ಪಾಸುರಗಳನ್ನು ಹಾಡುತ್ತಾರೋ, ಅವರು ತಾನು ಮಾಡಿದ ಕೈಂಕರ್‍ಯಕ್ಕೆ ಸಮನಾಗುತ್ತಾರೆ (ಅವರಿಗೆ ತನ್ನಂತಹ ಶುದ್ಧ ಮನಸ್ಥಿತಿ ಇಲ್ಲದಿದ್ದರೂ) ಎಂದು ದೃಢೀಕರಿಸುತ್ತಾಳೆ. ಬೇರೆ ರೀತಿಯಲ್ಲಿ ಹೇಳುವುದಾದರೆ ತಿರು ಆಯ್‍ಪ್ಪಾಡಿಯ (ಗೋಕುಲದ) ಗೋಪಿಕೆಯರು ಯಾವ ರೀತಿ ಕೃಷ್ಣನ ಬಗ್ಗೆ ಅನುಭವ ಹೊಂದಿದ್ದರೋ, ಅವರಿಗಾದ ಪ್ರಯೋಜನವೇ ಈ ಪಾಸುರಗಳನ್ನು ಹಾಡುವವರಿಗೆ ಆಗುತ್ತದೆ ಎಂದು ಆಣ್ಡಾಳ್ ಆಶೀರ್ವದಿಸುತ್ತಾಳೆ.
ಆಂಡಾಳ್ ಈ ಕೊನೆಯ ಪಾಸುರದಲ್ಲಿ ಹಾಲು ಕಡಲು ಕಡೆಯುವುದರ ಬಗ್ಗೆ ಹೇಳುತ್ತಾಳೆ. ಹಾಗೆ ಕಡೆದಾಗ ಶ್ರೀಲಕ್ಷ್ಮಿ ಪಿರಾಟ್ಟಿಯು ಉದಯಿಸಿ, ಪೆರುಮಾಳನ್ನೇ ಮದುವೆಯಾಗುವುದರಿಂದ ಆಂಡಾಳ್ ಕೂಡಾ ಈ ಪಾಸುರದಲ್ಲಿ ಸಮುದ್ರಮಥನದ ಬಗ್ಗೆ ಉಲ್ಲೇಖಿಸುತ್ತಾಳೆ.
ಆಂಡಾಳಿಗೆ ಆಚಾರ್‍ಯಾಭಿಮಾನ (ಆಚಾರ್‍ಯರಿಗೆ ಪ್ರೀತಿಪಾತ್ರಳಾಗಿ) ಇದ್ದುದ್ದರಿಂದ ಅವಳು ಭಟ್ಟರ್‌ಪಿರಾನ್ ಕೋದೈ (ಪೆರಿಯಾೞ್ವಾರಿನ ಮಗಳು) ಎಂದು ಪ್ರಬಂಧದ ಕೊನೆಯಲ್ಲಿ ಹೇಳಿದ್ದಾಳೆ.
ವಙ್ಗಕ್ಕಡಲ್ ಕಡೈನ್ದ ಮಾದವನೈ ಕ್ಕೇಶವನೈ
ತ್ತಿಙ್ಗಳ್ ತಿರುಮುಗತ್ತು ಚ್ಚೇಯಿೞೈಯಾರ್ ಶೆನ್ರು ಇಱೈಞ್ಜಿ
ಅಙ್ಗ ಪ್ಪಱೈಕೊಣ್ಡ ವಾಟ್ರೈ, ಅಣ್ಣಿಪುದುವೈ
ಪ್ಪೈಙ್ಗಮಲ ತ್ತಣ್ ತೆರಿಯಲ್ ಪಟ್ಟರ್ ಪಿರಾನ್ ಕೋದೈಶೊನ್ನ
ಶಙ್ಗತ್ತಮಿೞ್ ಮಾಲೈ ಮುಪ್ಪದುಮ್ ತಪ್ಪಾಮೇ
ಇಙ್ಗು ಇಪ್ಪರಿಶುರೈಪ್ಪಾರ್ ಈರಿರಣ್ಡು ಮಾಲ್ವರೈತ್ತೋಳ್
ಶೆಙ್ಗಣ್ ತಿರುಮುಗತ್ತು ಚ್ಚೆಲ್ವತ್ತಿರುಮಾಲಾಲ್
ಎಙ್ಗುಮ್ ತಿರುವರುಳ್ ಪೆಟ್ಟ್ರು ಇನ್ಬುಱುವರ್ ಎಮ್ಬಾವಾಯ್॥
ಕೇಶವನು , ಅತ್ಯುನ್ನತವಾದವನು .ಹಾಲಿನ ಸಮುದ್ರವನ್ನು ಕಡೆಯುತ್ತಾನೆ. ತಿರುಆಯ್‍ಪ್ಪಾಡಿಯಲ್ಲಿ ಹಸುಮೇಯಿಸುವ ಗೋಪಿಕೆಯರು , ಸುಂದರವಾದ ಚಂದ್ರನಂತಹ ಮುಖವುಳ್ಳವರು, ಅನೇಕ ಆಭರಣಗಳನ್ನು ತೊಟ್ಟು , ಆ ಎಂಬೆರುಮಾನರನ್ನು ಪೂಜಿಸಿದ್ದರಿಂದ ಅನೇಕ ಲಾಭಗಳನ್ನು ಪಡೆದರು. ಶ್ರೀವಿಲ್ಲಿಪುತ್ತೂರಿನಲ್ಲಿ ಹುಟ್ಟಿದ , ಪೆರಿಯಾಳ್ವಾರಿನ ಮಗಳಾದ ಆಂಡಾಳ್, ಶೀತಲ ಕಮಲದ ಹೂಗಳ ಮಾಲೆಯನ್ನು ತೊಟ್ಟು, ಕರುಣೆಯಿಂದ ಈ ಕಥೆಯನ್ನು ತನ್ನ ಮೂವತ್ತು ಪಾಸುರಗಳನ್ನೊಳಗೊಂಡ ತಿರುಪ್ಪಾವೈ ಮೂಲಕ ಹೇಳಿರುತ್ತಾಳೆ. ಈ ಮೂವತ್ತು ಪಾಸುರಗಳನ್ನು , ಯಾವುದನ್ನೂ ಬಿಡದೆ ಹೇಳುವುದರಿಂದ , ಪರ್ವತದಂತಹ ಭುಜಗಳನ್ನು ಹೊಂದಿರುವ, ಕಮಲದಂತಹ ಕೆಂಪಾದ ಕಣ್ಣುಗಳನ್ನು ಹೊಂದಿರುವ, ಮಹಾ ಶ್ರೀಮಂತನಾದ ಎಂಬೆರುಮಾನರ ಕೃಪೆಗೆ ಪಾತ್ರರಾಗುತ್ತಾರೆ. ಅಂತಹ ಜನಗಳು ಯಾವ ಸ್ಥಳದಲ್ಲೂ ಅತ್ಯಂತ ಆನಂದಿತರಾಗಿ ಜೀವಿಸುತ್ತಾರೆ ಎಂದು ಆಂಡಾಳ್ ಆಶೀರ್ವದಿಸುತ್ತಾಳೆ.
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ : https://divyaprabandham.koyil.org/index.php/2020/05/thiruppavai-pasurams-21-30-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org