ತಿರುವಾಯ್ಮೊೞಿ – ಸರಳ ವಿವರಣೆ – 3.3 ಒೞಿವಿಲ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 2.10 ಕಿಳರೊಳಿ

srinivasan -ahzwar

ಆೞ್ವಾರರು ಎಂಪೆರುಮಾನರ ಹತ್ತಿರ ಪ್ರಾರ್ಥಿಸುತ್ತಾರೆ: ನಿನ್ನ ಪವಿತ್ರ ಕೈಂಕರ್‍ಯವನ್ನು ಮಾಡುವುದಕ್ಕೆ ತೊಂದರೆಯುನ್ನುಂಟು ಮಾಡುವ ಈ ದೇಹವನ್ನು ದಯವಿಟ್ಟು ತೆಗೆದು ಹಾಕು (ನಿರ್ಮೂಲನೆ ಮಾಡು) ಎಂದು.

ಅದಕ್ಕೆ ಎಂಪೆರುಮಾನರು : ನಾವು ಉತ್ತರದಿಕ್ಕಿನ ತಿರುಮಲೈಯಲ್ಲಿ ತಿರುವೇಂಗಡಮ್ ಬೆಟ್ಟದಲ್ಲಿ ಪ್ರತಿಷ್ಠಿತರಾಗಿದ್ದೇವೆ. ಅಲ್ಲಿ ನಿಮ್ಮ ಕೈಂಕರ್‍ಯವನ್ನು ಈಗಿರುವ ದೇಹದೊಂದಿಗೇ ಸ್ವೀಕರಿಸುತ್ತೇವೆ. ಆದ್ದರಿಂದ ನೀವು ಅಲ್ಲಿಗೆ ಬಂದು ಆನಂದದಿಂದ ಸೇವೆ ಸಲ್ಲಿಸಬಹುದು. ಎಂದು ಉತ್ತರಿಸುತ್ತಾರೆ.

ಪಾಸುರಮ್ ೧:
ಆೞ್ವಾರರು ಮತ್ತು ಅವರ ಸಂಗಡಿಗರಾದ ಅವರ ಪೂರ್ವಿಕರು, ಅತ್ಯಂತ ಶ್ರೇಷ್ಠನಾದ, ಸರ್ವೋತ್ತಮನಾದ ತಿರುವೇಂಗಡಮುಡೈಯಾನರಿಗೆ ಎಂಪೆರುಮಾನರಿಗೆ ಸೇವೆ ಸಲ್ಲಿಸಲು ತವಕಿಸುತ್ತಾರೆ.

ಒೞಿವಿಲ್ ಕಾಲಮೆಲ್ಲಾಮ್ ಉಡನಾಯ್ ಮನ್ನಿ
ವೞುವಿಲಾ ಅಡಿಮೈ ಸೈಯ್ಯ ವೇಣ್ಡುಮ್ ನಾಮ್
ತೆೞಿಕುರಲ್ ಅರುವಿ ತ್ತಿರುವೇಂಗಡತ್ತು
ಎೞಿಲ್‌ಕೊಳ್ ಸೋದಿ ಎನ್ದೈ ತನ್ದೈ ತನ್ದೈಕ್ಕೇ॥

ನಾವು ನಮ್ಮ ಪೂರ್ವಿಕರು, ನಮ್ಮ ಸತತ ಪೂರ್ವಜರ ಕುಲಕ್ಕೆ ನಾಯಕನಾದ ತಿರುವೇಂಗಡಮುಡೈಯಾನರಿಗಾಗಿ ಎಲ್ಲಾ ರೀತಿಯ ಸೇವೆಗಳನ್ನು, ಒಂದನ್ನೂ ಬಿಡದೇ, ಎಲ್ಲಾ ಕಾಲಗಳಲ್ಲಿಯೂ, ಒಂದು ನಿಮಿಷವನ್ನೂ ಬಿಡದೇ, ವ್ಯರ್ಥಮಾಡದೇ, ಎಲ್ಲಾ ಸ್ಥಳಗಳಲ್ಲಿಯೂ ಅವರ ಜೊತೆಯಲ್ಲಿಯೇ ಇದ್ದುಕೊಂಡು , ಅವರಿಂದ ಎಲ್ಲಿಯೂ ಬೇರ್ಪಡೆಯಾಗದೇ, ಪೂರ್ತಿಯಾಗಿ ಹೊಳೆಯುವ ಪ್ರಕಾಶವಾದ ತಿರುಮೇನಿಯನ್ನು ಹೊಂದಿರುವ , ಅತ್ಯಂತ ಸದ್ದು ಮಾಡುವ ಶ್ರೇಷ್ಠವಾದ ಜಲಪಾತಗಳನ್ನು ಹೊಂದಿರುವ ತಿರುಮಲದಲ್ಲಿ ತಿರುವೇಂಗಡ ಬೆಟ್ಟದಲ್ಲಿರುವುದರಿಂದ ಅತ್ಯಂತ ಸೌಂದರ್‍ಯವನ್ನು ಹೊಂದಿರುವ ತಿರುವೇಂಗಡಮುಡೈಯಾನರಿಗೆ ಹೀಗೆ ಸೇವೆಯನ್ನು ಮಾಡಬೇಕೆಂದು ಆೞ್ವಾರರು ಆಶಿಸುತ್ತಾರೆ.

ಪಪಾಸುರಮ್ ೨:
ಆೞ್ವಾರರು ಅತಿ ಕರುಣೆಯಿಂದ ಎಲ್ಲರಿಗೂ ನಾಯಕನಾದ ಶ್ರೀನಿವಾಸರ ವಿಶಿಷ್ಟವಾದ ಗುಣಗಳನ್ನೂ, ವಿವಿಧ ರೂಪಗಳನ್ನೂ ತಿಳಿಸಿಕೊಡುತ್ತಾರೆ.

ಎನ್ದೈ ತನ್ದೈ ತನ್ದೈ ತನ್ದೈ ತನ್ದೈಕ್ಕುಮ್
ಮುನ್ದೈ , ವಾನವರ್ ವಾನವರ್ ಕೋನೊಡುಮ್
ಸಿನ್ದು ಪೂ ಮಗಿೞುಮ್ ತಿರುವೇಂಗಡತ್ತು
ಅನ್ದಮಿಲ್ ಪುಗೞ್ ಕಾರ್ ಎೞಿಲ್ ಅಣ್ಣಲೇ॥

ಎಂಪೆರುಮಾನರು ನಮ್ಮ ಪೂರ್ವಜರ ಸರಪಳಿಯಲ್ಲಿ ಮೊದಲನೆಯ ಪೂರ್ವಜ. ಅವರು ನಿತ್ಯಸೂರಿಗಳೊಂದಿಗೆ ಅವರ ನಾಯಕನಾದ ಸೇನೈ ಮುದಲಿಯಾರ್ – ವಿಷ್ವಕ್ಸೇನರಿಂದ ಪೂಜಿಸಲ್ಪಡುತ್ತಾರೆ. ಅವರಿಗಾಗಿ ಬೆಟ್ಟದಲ್ಲಿ ಹೂಗಳು ಅರಳಿ, ಹರಡುತ್ತವೆ. ಅವರು ತಿರುಮಲದಲ್ಲಿ ‘ಸರ್ವಾಧಿಕ’ವಾಗಿದ್ದಾರೆ. (ಎಲ್ಲರಿಗಿಂತ ಹೆಚ್ಚು) . ಅವರು ಕೊನೆಯಿಲ್ಲದ ಶುಭ ಗುಣಗಳು ಮತ್ತು ಮಂಗಳಕರವಾದ ಸುಂದರ ಕಪ್ಪು ತಿರುಮೇನಿಯನ್ನು ಹೊಂದಿದ್ದಾರೆ.

ಪಾಸುರಮ್ ೩:
ಅಂತಹ ವಿಶಿಷ್ಟವಾದ ರೂಪ, ಗುಣಗಳುಳ್ಳ ಎಂಪೆರುಮಾನರಿಗೆ ನಿತ್ಯಸೂರಿಗಳು ಸೇವೆ ಸಲ್ಲಿಸುತ್ತಾರೆ. ಎಂದು ಆೞ್ವಾರರು ಹೇಳುತ್ತಾರೆ.

ಅಣ್ಣಲ್ ಮಾಯನ್ ಅಣಿಕೊಳ್ ಸೆನ್ದಾಮರೈಕ್ಕಣ್ಣನ್
ಶೆಙ್ಗನಿವಾಯ್ಶೆಙ್ಗನಿವಾಯ್ಕ್ ಕರುಮಾಣಿಕ್ಕಮ್
ತೆಣ್ಣಿಱೈ ಚ್ಚುನೈನೀರ್ ತ್ತಿರುವೇಂಗಡತ್ತು
ಎಣ್ಣಿಲ್ ತೊಲ್ ಪುಗೞ್ ವಾನವರ್ ಈಶನೇ॥

ಎಂಪೆರುಮಾನರ ಆಧಿಪತ್ಯವನ್ನು ಸ್ಥಾಪಿಸಿದ ಅವರ ದಿವ್ಯವಾದ ರೂಪ, ಆಶ್ಚರ್‍ಯ ಪಡುವಂತಹ ಅವರ ಶ್ರೇಷ್ಠವಾದ ಗುಣಗಳು, (ಅವರ ಆಧಿಪತ್ಯಕ್ಕೆ ಸಮನಾದ ಗುಣಗಳು) ಮತ್ತು ಅವರ ಸೌಂದರ್‍ಯ (ಅವರ ಐಶ್ವರ್‍ಯವನ್ನೂ ಅವರ ಅಧಿಕಾರವನ್ನೂ ಬಹಿರಂಗಪಡಿಸುವ ಸೌಂದರ್‍ಯ) , ಕೆಂಪು ಹಣ್ಣಿನಂತಹ (ಸೇಬಿನಂತಹ) ತುಟಿಗಳನ್ನು ಹೊಂದಿರುವ ಪುಣ್ಡರೀಕಾಕ್ಷರು, ಇಂತಹ ಅವರ ಸೌಂದರ್‍ಯವನ್ನು ನೋಡಿ , ಅದರಿಂದ ಹೃದಯವನ್ನೇ ಸೋತವರಿಗೆ ಸಮಾಧಾನಪಡಿಸುವಂತಹ , ಪ್ರಕಾಶವಾಗಿ ಹೊಳೆಯುವ ರೂಪವನ್ನು ಹೊಂದಿರುವ ಮತ್ತು ನೀಲ ಮಿಶ್ರಿತವಾದ ಕಪ್ಪು ಮಾಣಿಕ್ಯದಂತಿರುವ ತಿರುಮೇನಿಯನ್ನು ಹೊಂದಿರುವ ಎಂಪೆರುಮಾನರು, ಅವರ ದಿವ್ಯವಾದ ಅವಯವಗಳನ್ನು ನೋಡಿ , ಅದರಿಂದ ಹೊರಬರಲಾರದೆ ಇರುವವರಿಗೆ ಅವರು ತಮ್ಮ ಅಪೂರ್ವವಾದ ರೂಪದ ಆಶೀರ್ವಾದವನ್ನೇ ಸುರಿಸುತ್ತಾರೆ.
ಅವರದೇ ಮೈಬಣ್ಣದಲ್ಲಿ ಹೊಳೆಯುವ ಪುಷ್ಕರಣಿಯ ನೀರನ್ನು ಹೊಂದಿರುವ , ತಿರುಮಲೈ ಪರ್ವತದಲ್ಲಿ, ನಿಂತಿರುವ ಭಂಗಿಯಲ್ಲಿರುವ ತಿರುವೇಂಗಡಮುಡೈಯಾನರು ಅಸಂಖ್ಯೇಯ ಕಲ್ಯಾಣ ಗುಣಗಳನ್ನು ಹೊಂದಿದ್ದು, ಅಂತಹ ಎಂಪೆರುಮಾನರು ನಿತ್ಯಸೂರಿಗಳಿಂದ ದಿನವೂ ಆರಾಧಿಸಲ್ಪಡುವವರಾಗಿ , ನಿತ್ಯಸೂರಿಗಳಿಗೇ ಒಡೆಯನಾದ ತಿರುವೇಂಗಡಮುಡೈಯಾನರು, ನಿತ್ಯಸೂರಿಗಳಿಗೆಲ್ಲಾ ಸೇವೆ ಸಲ್ಲಿಸುವ ಆನಂದವನ್ನೂ, ಭಾಗ್ಯವನ್ನೂ ನೀಡುವ ಎಂಪೆರುಮಾನರು ಇಲ್ಲಿ ಸ್ಥಾಪನಗೊಂಡಿದ್ದಾರೆ.

ಪಾಸುರಮ್ ೪:
ನನ್ನಂತಹ ದೀನನಾದ, ಯಾವುದೇ ಅರ್ಹತೆಯಿಲ್ಲದವನ ಜೊತೆ ಎಂಪೆರುಮಾನರು ಕೂಡಿಯಿರುವಾಗ ಅವರು ಪ್ರಾಚೀನ , ನಿಷ್ಕಳಂಕ ಜ್ಞಾನವನ್ನು ಹೊಂದಿರುವ ನಿತ್ಯಸೂರಿಗಳಿಗೆ ತಮ್ಮನ್ನು ತಾವು ಕೊಟ್ಟಿರುವುದರ ಬಗ್ಗೆ ಹೆಚ್ಚಳಿಕೆ ಏನು? ಎಂದು ಆೞ್ವಾರರು ತಿರುವೇಂಗಡಮುಡೈಯಾನರ ಶ್ರೇಷ್ಠತೆಯ ಬಗ್ಗೆ ಹೇಳುತ್ತಾರೆ.

ಈಸನ್ ವಾನವರ್ಕ್ಕು ಎನ್ಬನ್ ಎನ್ರಾಲ್, ಅದು
ತೇಸಮೋ ತಿರುವೇಂಗಡತ್ತಾನುಕ್ಕು
ನೀಸನೇನ್ ನಿಱೈ ಒನ್ರುಮ್ ಇಲೇನ್, ಎನ್ ಕಣ್
ಪಾಸಮ್ ವೈತ್ತ ಪರಞ್ಜುಡರ್ ಸೋದಿಕ್ಕೇ॥

ಎಂಪೆರುಮಾನರು ನಿತ್ಯಸೂರಿಗಳಿಗೆಲ್ಲಾ ನಾಯಕರು ಎಂದು ಹೇಳಿದರೆ ಇದರಲ್ಲಿ ಹೆಚ್ಚಳಿಕೆ ಏನೂ ಇಲ್ಲ. ಅವರು ನನ್ನಂತಹವನ ಮೇಲೆಯೇ ಮಿತಿಯಿಲ್ಲದ ಪ್ರೀತಿಯನ್ನು ಇಟ್ಟಿದ್ದಾರೆ. ನಾನು ಅವರ ಗುಣಗಳಿಗೆ ತದ್ವಿರುದ್ಧವಾದ ಗುಣವುಳ್ಳವನು. ನನ್ನಲ್ಲಿ ಯಾವ ಹೆಚ್ಚಿನ ದಿವ್ಯ ಗುಣಗಳೂ ಇಲ್ಲ. ಆದರೆ ಅವನು ನಿಷ್ಕಳಂಕವಾದ ದಿವ್ಯ ಕಲ್ಯಾಣ ಗುಣಗಳ ವಾಸಸ್ಥಾನವಾಗಿರುವವನು. ನಾನು ದೀನನಾದವನು. ದಿವ್ಯಗುಣಗಳ ಅಭಾವದಿಂದ ಅಪೂರ್ಣನಾದವನು.
ತಿರುಮಲೈಯಲ್ಲಿರುವ ತಿರುವೇಂಗಡಮುಡೈಯಾನರ ಸರಳ ಸ್ವಭಾವದಿಂದ, ದಿವ್ಯಗುಣಗಳಿಂದ , ಯಾರು ತಿರುಮಲೈಯಲ್ಲಿ ವಾಸವಾಗಿರುವರೋ ಅವರಿಗೂ ಪೆರುಮಾಳಿನ ದಿವ್ಯರೂಪವು ಪ್ರಾಪ್ತವಾಗಿ, ಅವರೂ ಪ್ರಕಾಶಿಸುವರು ಎಂದು ನಮ್ಮಾೞ್ವಾರರು ಹೇಳುತ್ತಾರೆ.

ಪಾಸುರಮ್ ೫:
ಎಂಪೆರುಮಾನರು ಶೀಲವಾನ್ ಮಾತ್ರವೇ? (ಸರಳ ಸ್ವಭಾವ ಮತ್ತು ದಿವ್ಯ ಗುಣವುಳ್ಳವನು). ಅಲ್ಲದೇ, ಎಂಪೆರುಮಾನರು ಸರಳ ಸ್ವಭಾವದೊಂದಿಗೆ, ಸರ್ವೇಶ್ವರನಾಗಿ ಆನಂದಿಸಲ್ಪಡುವವನು ಎಂದರೆ ಅದು ಅವನ ಮಹಿಮೆಯ ಜೊತೆಗೆ ಇನ್ನೂ ಹೆಚ್ಚುವುದೇ?

ಸೋದಿಯಾಗಿ ಎಲ್ಲಾ ವುಲಗುಮ್ ತೊೞುಮ್
ಆದಿಮೂರ್ತ್ತಿ ಎನ್ರಾಲ್ ಅಳವಾಗುಮೋ
ವೇದಿಯರ್ ಮುೞು ವೇದತ್ತು ಅಮುದತ್ತೈ
ತೀದಿಲ್ ಸೀರ್ ತ್ತಿರುವೇಂಗಡತ್ತಾನೈಯೇ॥

ತೈತ್ತಿರಿಯ ಉಪನಿಶತ್ತಿನಲ್ಲಿ ವರ್ಣಿಸಿರುವ ಹಾಗೆ ಆನಂದೋಬ್ರಹ್ಮ (ಸರ್ವೋಚ್ಚ ಬ್ರಹ್ಮನೆಂದರೆ ಅದು ಪರಮಾನಂದ-bliss) ರಸೋ ವೈ ಸಃ (ಎಲ್ಲಾ ರುಚಿಗಳಿಂದ ಭರಿತನಾದವನು), ಅವನು ಎಲ್ಲಾ ವೇದಗಳಿಂದಲೂ , ವೈದಿಕರಿಂದಲೂ ಪ್ರಮುಖವಾಗಿ, ಶ್ರೇಷ್ಠನಾಗಿ ಆನಂದಿಸಲ್ಪಡುವವನು. ಯಾವ ರೀತಿಯ ದೋಷವೂ ಇಲ್ಲದವನು. ಸಂತೋಷ ಪಡುವವನ ರುಚಿಗೆ, ಅರ್ಹತೆಗೆ ಅನುಸಾರವಾಗಿ ಸಿಹಿಯನ್ನು (ತನ್ನ ಗುಣವನ್ನು) ದಯಪಾಲಿಸುವವನು. ಅವನು ಅನೇಕ ಕಲ್ಯಾಣ ಗುಣಗಳನ್ನು ಹೊಂದಿರುವವನು. ಅಡವಿಗೆ, ಕೋತಿಗಳಿಗೆ, ಬೇಡರಿಗೆ ಅವರಿಗೆ ತಕ್ಕ ಹಾಗೆ ಆನಂದವನ್ನು ನೀಡುವವನು. ಅವನು ಸರ್ವೇಶ್ವರನೆಂಬ ಪ್ರಕಾಶ ರೂಪದಿಂದ ಪ್ರಸಿದ್ಧಿಯಾದವನು. ಎಲ್ಲದಕ್ಕೂ ಕಾರಣೀಭೂತನಾಗಿರುವವನು. ಎಲ್ಲರಿಗೂ ಪೂಜಿಸಲು ತನ್ನನ್ನು ತಾನೇ ಕೊಡುವವನು. ಯಾರಿಗೂ ತಾರತಮ್ಯ, ಪಕ್ಷಪಾತ ಮಾಡದೇ, ಎಲ್ಲರಿಂದ ಸೇವೆ ಸ್ವೀಕರಿಸುವವನು. ಅವನ ಆಧಿಪತ್ಯ ಮತ್ತು ಸರ್ವಾಧಿಕಾರವು , ಎಲ್ಲರಿಗೂ ಆಶ್ರಯವಾದ ಅವನ ಗುಣವು -ಮತ್ತು – ಅವನ ಸರಳತೆ , ಸಲುಗೆಯು ಒಂದಕ್ಕೊಂದು ತಾಳೆಯಾಗುವುದಂತಹುದು ಅಲ್ಲ. ಆದರೂ ಅವನು ತನ್ನ ಸರಳತೆಯಲ್ಲಿ ಮೆರೆದಿದ್ದಾನೆ ಎಂದು ಆೞ್ವಾರರು ಹೇಳಿದ್ದಾರೆ.

ಪಾಸುರಮ್ ೬:
ನಮ್ಮ ಪ್ರತಿಕೂಲ (ತೊಂದರೆ) ಗಳನ್ನೆಲ್ಲಾ ನಿವಾರಿಸಿಕೊಂಡ ಮೇಲೆ ಭಗವಂತನಲ್ಲಿ ಶರಣಾಗತಿ ಹೊಂದುವುದರಿಂದ ಪರಮಾನಂದವಾದ ಅನುಭವವನ್ನು ಪಡೆಯಬಹುದು ಎಂದು ಆೞ್ವಾರರು ಕರುಣೆಯಿಂದ ನಮಗೆ ವಿವರಿಸಿದ್ದಾರೆ.

ವೇಂಗಡಙ್ಗಳ್ ಮೆಯ್ಮ್ ಮ್ಮೇಲ್ ವಿನೈ ಮುಟ್ಟ್ರವುಮ್
ತಾಙ್ಗಳ್ ತಙ್ಗಟ್ಕು ನಲ್ಲನವೇ ಸೈವಾರ್
ವೇಂಗಡತ್ತುಱೈವಾರ್ಕ್ಕು ನಮವೆನ್ನಲ್
ಆಮ್ ಕಡಮೈ ಅದು ಸುಮನ್ದಾರ್ಗಟ್ಕೇ॥

ತಿರುಮಲೈಯಲ್ಲಿ ನಿರಂತರವಾಗಿರುವ ದೇವನಲ್ಲಿ, ಯಾರು ಯಾರು ‘ನಮಃ’ ಎಂಬ ಕ್ರಿಯೆಯನ್ನು ಸರಿಯಾಗಿ ಅವರವರ ಮನಸ್ಸಿನಲ್ಲಿ ಪಾಲಿಸುತ್ತಾರೋ, ಅವರ ಪೂರ್ವದ ಕರ್ಮದ ಫಲಗಳು, ಸಾಲದ ರೂಪದಲ್ಲಿರುವ ಪಾಪಗಳು ಉರಿದು ಬೂದಿಯಾಗುತ್ತವೆ. ಇದು ಬಹಳ ಸತ್ಯವಾದುದು. ಪ್ರತಿಕೂಲವಾಗಿರುವ ಪಾಪಗಳೆಲ್ಲಾ ನಿರ್ಮೂಲನೆಯಾದ ಮೇಲೆ , ಅವರು ಭಗವಂತನ ಅನುಭವದಲ್ಲಿ ಸದಾ ಮುಳುಗಿದ್ದುಕೊಂಡು , ಇದರಿಂದ ಅವರಿಗೆ ಸಹಜವಾಗಿ ಬರೀ ಆನಂದದ ಪರಮಾನಂದದ ಅನುಭವವುಂಟಾಗುವುದು.

ಪಾಸುರಮ್ ୭:
ಹಿಂದಿನ ಪಾಸುರದಲ್ಲಿದ್ದಂತೆ ಶರಣಾಗತಿ ಮಾಡಿದ ಮೇಲೆ ಸ್ವಾಮಿಯು ವಾಸವಾಗಿರುವ ತಿರುಮಲೈಯು ತಾನೇ ಅವರ ಮೇಲೆ ಸಾಮ್ಯಾಪ್ತಿಯ ಗುಣವನ್ನು ದಯಪಾಲಿಸುತ್ತದೆ. (ಸಾಮ್ಯಾಪ್ತಿ – ಭಗವಂತನಿಗೆ ಎಂಟು ಗುಣಗಳಲ್ಲಿ ಸಮನಾಗುವುದು).

ಸುಮನ್ದು ಮಾಮಲರ್ ನೀರ್ ಸುಡರ್ ಧೂಪಮ್ ಕೊಣ್ಡು
ಅಮರ್ನ್ದು ವಾನವರ್ ವಾನವರ್ ಕೋನೊಡುಮ್
ನಮನ್ರೆೞುಮ್ ತಿರುವೇಂಗಡ ನಙ್ಗಟ್ಕು
ಶಮನ್ ಕೊಳ್ ವೀಡು ತರುಮ್ ತಡಮ್ ಕುನ್ಡ್ರಮೇ॥

ನಿತ್ಯಸೂರಿಗಳು, ಸೇನೈ ಮುದಲಿಯಾರರೊಂದಿಗೆ ಭಕ್ತಿಯಿಂದ , ಜಗತ್ತಿನ ಅತ್ಯಂತ ಸುಂದರ ಹೂಗಳನ್ನು, ಪವಿತ್ರವಾದ ನೀರನ್ನು ತಂದು, ವಿಶಿಷ್ಟವಾದ ದೀಪಗಳನ್ನೂ, ಗಂಧದ ಕಡ್ಡಿಗಳನ್ನೂ ಹಚ್ಚಿಸಿ, ಅನನ್ಯಪ್ರಯೋಜನಕ್ಕಾಗಿ (ಭಗವಂತನ ಸೇವೆಗಾಗಿ ತಮ್ಮ ಧ್ಯಾನವನ್ನು ಮೀಸಲಿಟ್ಟು) , ಬಗ್ಗಿ ವಂದಿಸಿ (ಅವರ ಭಗವಂತನ ಮೇಲಿನ ಸಂಪೂರ್ಣ ಅವಲಂಬನೆಯನ್ನು ತಿಳಿಸುತ್ತದೆ) ಬಹಳ ವಿಶಾಲವಾದ (ಸರ್ವೇಶ್ವರನು ಶ್ರೀ ಮಹಾಲಕ್ಷ್ಮಿಯೊಂದಿಗೆ ಇರುವುದರಿಂದ ಅವರ ಪರಿವರ್ತಿತ ಭಾವನೆಯೊಂದಿಗೆ ) , ತಿರುವೇಂಗಡಮ್ ಎಂದೇ ಪ್ರಸಿದ್ಧವಾಗಿರುವ ಪವಿತ್ರವಾದ ತಿರುಮಲೈ ಬೆಟ್ಟವು ಅವರಿಗೆ ಗುರಿಮುಟ್ಟಿದ ಸಾಧಿಸಿದ ತೃಪ್ತಿಯನ್ನು (ಅವರ ನಿಜ ಸ್ವರೂಪದಂತೆ) ತಂದು ಕೊಟ್ಟಿದೆ.
ಅಂತಹ ತಿರುಮಲೈ ಬೆಟ್ಟವು , ನಮ್ಮ ಗುರಿಯನ್ನು ಮುಟ್ಟುವ ಮತ್ತು ಸ್ವತಂತ್ರದ (ಮುಕ್ತಿಯ) ಆನಂದವನ್ನು ಹೊಂದುವ ಮತ್ತು ಅದರಿಂದ ಪರಮ ಸಾಮ್ಯಾಪ್ತಿಯನ್ನು (ಭಗವಂತನಿಗೆ ಎಂಟು ಗುಣಗಳಲ್ಲಿ ಸಮನಾಗುವುದು) ಹೊಂದಲು ನಮಗೆ ಆಶೀರ್ವದಿಸಲಿ ಎಂದು ಆೞ್ವಾರರು ಕೇಳಿಕೊಳ್ಳುತ್ತಾರೆ.

ಪಾಸುರಮ್ ೮: ಅಂತಹ ತಿರುಮಲೈಯನ್ನು ಅನುಭವ ಪಡೆದುಕೊಂಡ ಮೇಲೆ ಗುರಿ ಮುಟ್ಟಲು ಒದಗುವ ತೊಂದರೆಗಳು ತಾನೇ ಸಹಜವಾಗಿ ದೂರವಾಗುತ್ತವೆ ಎಂದು ಆೞ್ವಾರ್ ಹೇಳುತ್ತಾರೆ.

ಕುನ್ಡ್ರಮ್ ಏನ್ದಿಕ್ ಕುಳಿರ್ ಮೞೈಕ್ ಕಾತ್ತವನ್
ಅನ್ಡ್ರು ಜ್ಞಾಲಮ್ ಅಳಂದ ಪಿರಾನ್
ಸೆನ್ಡ್ರು ಸೇರ್ ತಿರುವೇಂಗಡ ಮಾ ಮಲೈ
ಒನ್ಡ್ರುಮೇ ತೊೞ ನಮ್ ವಿನೈ ಓಯುಮೇ||

ಎಂಪೆರುಮಾನರು ಬೆಟ್ಟವನ್ನೇ ಎತ್ತಿ ಬಿರುಗಾಳಿ, ಮಳೆಯಿಂದ ಹಸು, ಕರು ಮತ್ತು ಹಸುಮೇಯಿಸುವ ( ಗೊಲ್ಲರ) ಸಂತತಿಯನ್ನು ಕಾಪಾಡಿದರು. ಅವರು ಇಡೀ ಭೂಮಿಯನ್ನು ಮಹಾಬಲಿಯ ಕುಚೇಷ್ಟೆಗಳಿಂದ ರಕ್ಷಿಸಿದರು(ಅವರು ತ್ರಿವಿಕ್ರಮನಾಗಿ ಭೂಮಿಯನ್ನು ಅಳೆಯುವಾಗ) ಅವರು ತಾವೇ ಸ್ವತಃ ತಿರುವೇಂಗಕ್ಕೆ ( ಎತ್ತರವಾದ, ದೊಡ್ಡ, ಪವಿತ್ರವಾದ ಬೆಟ್ಟ) ಬಂದರು.
ಅಂತಹ ತಿರುಮಲೈಯನ್ನು ಅನುಭವಿಸಿದ ಮೇಲೆ, ಯಾವ ರೀತಿಯ ಷರತ್ತು ( ನಿರ್ಬಂಧಗಳೂ ಇಲ್ಲದೇ) ಆ ಪವಿತ್ರ ಬೆಟ್ಟವು ತಾನೇ
ನಮ್ಮ ಲೋಕದ ತೊಂದರೆಗಳನ್ನು ಪಾಪಗಳನ್ನು ಯಾವುವು ನಮ್ಮ ನಾಯಕನಾದ ತಿರುವೇಂಗಡಮುಡೈಯಾನರನ್ನು ಅನುಭವ ಪಡೆಯಲು ತಡೆಹಿಡಿದಿವೆಯೋ ಅಂತಹ ಪಾಪಗಳನ್ನು ನಿವಾರಿಸಬಲ್ಲದು.

ಪಾಸುರಮ್ ೯. ತಡೆಗಳನ್ನು ನಿವಾರಿಸುವ ದೇಶಿಕನಾದ( ನಾಯಕನಾದ) ತಿರುವೇಂಗಡಮುಡೆಯಾನಿನ ಸಾಮರ್ಥ್ಯಕ್ಕೆ ಅವರಿಗೆ ದೈವಿಕ ತಿರುಮಲೈ ದೇಶದೊಂದಿರುವ ಸಂಬಂಧವೇ ಕಾರಣ ಎಂದು ಈ ಪಾಸುರದಲ್ಲಿ ಆೞ್ವಾರ್ ಹೇಳುತ್ತಾರೆ.
ಓಯುಮ್ ಮೂಪ್ಪುಪ್ ಪಿರಪ್ಪಿರಪ್ಪುಪ್ ಪಿಣಿ
ವೀಯುಮಾರು ಸೈವಾನ್ ತಿರುವೇಂಗಡತ್ತು
ಆಯನ್ ನಾಳ್ಮಲರಾಮ್ ಅಡಿತ್ ತಾಮರೈ
ವಾಯುಳ್ಳುಮ್ ಮನತ್ತುಳ್ಳುಮ್ ವೈಪ್ಪಾರ್ಗಟ್ಕೇ||

ವಾರ್ತೆಯಲ್ಲೂ ಮನದಲ್ಲೂ ಅವನ ( ಎಂಪೆರುಮಾನಿನ)ಮೃದುವಾದ, ( ಹೊಸದಾಗಿ ಅರಳಿದ) ಕಮಲದಂತಹ ದೈವಿಕ ಪಾದಗಳನ್ನು ಇಟ್ಟುಕೊಳ್ಳುವವರ ಇಳಿವಯಸ್ಸನ್ನು (ಮುಪ್ಪು) ( ಪರಿಣಾಮವನ್ನು ಪಡೆಯಲು ತಡೆಯಾಗಿರುವ ಜನನ, (ಶರೀರಕ್ಕೆ ಆಧಾರ, ) ಮುಪ್ಪಿನೊಂದಿಗೆ ಬರುವ ವ್ಯಾಧಿಗಳನ್ನು ಮತ್ತು ದೇಹವನ್ನೇ ತಿರುಮಲೈಯಲ್ಲಿ ವಾಸಿಸುತ್ತಿರುವ ಕೃಷ್ಣನು ನಾಶಮಾಡುತ್ತಾನೆ!

ಪಾಸುರಮ್ ೧೦: “ಸಂಪೂರ್ಣವಾಗಿ ಆನಂದಿಸಲು ಸಾಧ್ಯವಾಗುವ ತಿರುಮಲೈಯನ್ನು ನಿಮ್ಮ ಅಂತಿಮ ಗುರಿಯಾಗಿ ಸ್ವೀಕರಿಸಿರಿ” ಎಂದು ಈ ಪಾಸುರದಲ್ಲಿ ಆೞ್ವಾರ್ ತಮ್ಮ ಜನರಿಗೆ ಹೇಳುತ್ತಾರೆ.

ವೈತ್ತ ನಾಳ್ ವರೈ ಎಲ್ಲೈ ಕುರುಗಿಚ್ ಚೆನ್ರು
ಎಯ್ತಿಳೈಪ್ಪದನ್ ಮುನ್ನಮ್ ಅಡೈಮಿನೋ
ಪೈತ್ತ ಪಾಂಬಣೈಯಾನ್ ತಿರುವೇಂಗಡಮ್
ಮೊಯ್ತ್ತಸೋಲೈ ಮೊಯ್ ಪೂಮ್ ತಡಮ್ ತಾೞ್ವರೇೇ||

ಅನಂತನಿಗೂ(ಆದಿಶೇಷ) ತಿರುಮಲೈಗೂ ಇರುವ ಹೋಲಿಕೆಯು ತಿರುಮಲೈಯ ವೈಭವಕ್ಕೆ ಕಾರಣವಾಗಿದೆ. ವಿಸ್ತಾರವಾದ ಹೆಡೆ ಹೊಂದಿರುವ ಆದಿಶೇಷನು ಸರ್ವೇಶ್ವರನಿಗೆ ಸುಪ್ಪತ್ತಿಗೆಯಾಗಿದ್ದಾನೆ. ತಿರುಮಲೈಯ ವಿಸ್ತಾರವಾದ ದಿಣ್ಣೆಗಳು( ಬೆಟ್ಟದ ಬುಡದ ಗುಡ್ಡಗಳು) ಸುಂದರವಾದ ಹೂವುಗಳಿರುವ ವನಗಳಿಂದ ಪುಷ್ಟೀಕರವಾಗಿದೆ. ನಿಮ್ಮ ಇಂದ್ರಿಯಗಳು ತಗ್ಗಿ ( ಕ್ಷೀಣಿಸುವ) ನಿಮ್ಮ ಹೃದಯ ಸಾಯುವ ಮುನ್ನ,(ಕಾರಣವಾಗಿ) ನಿಮ್ಮ ಅಯಸ್ಸಿನ ಅಂತ್ಯದ ಪ್ರಾರಂಭ ನಿಮ್ಮನ್ನು ಸಮೀಪಿಸುವಾಗ , ಹೋಗಿ ಅಂತಹ ತಿರುಮಲೈಯ ಗುಡ್ಡಗಳನ್ನು ತಲುಪಿರಿ!

ಪಾಸುರಮ್ ೧೧: ಈ ಪಾಸುರದಲ್ಲಿ ಆೞ್ವಾರ್ ಕೈಂಕರ್ಯವನ್ನೇ ಐಶ್ವರ್ಯವಾಗಿ ಪಡೆಯಬೇಕು ಎಂದು ಹೇಳುತ್ತಾರೆ.

ತಾಳ್ ಪರಪ್ಪೀ ಮಣ್ ತಾವಿಯ ಈಸನೈ
ನೀಳ್ ಪೊೞಿಲ್ ಕುರುಗೂರ್ಚ ಚಟಕೊಪನ್ ಸೊಲ್
ಕೇೞಿಲ್ ಆಯಿರತ್ತು ಇಪ್ಪತ್ತುಮ್ ವಲ್ಲವರ್
ವಾೞ್ವರ್ ವಾೞ್ವೇಯ್ದೀ ಜ್ಞಾಲಮ್ ಪುಗೞವೇ||

ಪುಷ್ಟಿಯಾಗಿ ಬೆಳೆದ ವನಗಳನ್ನು ಹೊಂದಿರುವ ಆೞ್ವಾರ್ತಿರುನಗರಿಯ ನಾಯಕನಾದ ನಮ್ಮಾೞ್ವಾರ್ ಕರುಣೆಯಿಂದ ನಮಗೆ ಸರ್ವೇಶ್ವರನ ಬಗ್ಗೆ ಹೇಳಿದ್ದಾರೆ. ತಿರುವಾಯ್ಮೊೞಿಯ ಸಾವಿರ ಪಾಸುರಗಳಲ್ಲಿ ( ಶ್ಲೋಕ) ಈ ಪದಿಗವನ್ನು ಕೂಡ ( decad) ಪಠಿಸುವರು ( ಆೞ್ವಾರ್ ಬೇಡಿಕೊಂಡಂತೆ)ಮಹತ್ವ ಕೈಂಕರ್ಯದ ಐಶ್ವರ್ಯವನ್ನು ಪ್ರಾಪ್ತಿಗೊಂಡು ಅದ್ಭುತವಾಗಿ ( ಇಂತಹ ಸೇವಕತನದಿಂದ) ಇಡೀ ಜಗತ್ತಿನ ಪ್ರಶಂಸೆಯನ್ನು ಪಡೆದು ಬಾಳುತ್ತಾರೆ.

ಮೂಲ: http://divyaprabandham.koyil.org/index.php/2020/05/thiruvaimozhi-3-3-simple/

ಅಡಿಯೇನ್ ರಾಮಾನುಜ ದಾಸಿ ಕುಮುದವಲ್ಲಿ

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org


Leave a Comment