ತಿರುವಾಯ್ಮೊೞಿ – ಸರಳ ವಿವರಣೆ – 4.1 ಒರುನಾಯಗಮಾಯ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 3.3 ಒೞಿವಿಲ್

ಮೂರು ಪುರುಷಾರ್ಥಗಳಾದ ಐಶ್ವರ್ಯ (ಜಗತ್ತಿನ ಸುಖ ಭೋಗಗಳು), ಕೈವಲ್ಯ (ನಿರಂತರ ಆತ್ಮಾನುಭವ, ಆತ್ಮಾನಂದ)ಮತ್ತು ಮೋಕ್ಷ ( ನಿರಂತರ ಭಗವತ್ ಕೈಂಕರ್ಯ) ಇವುಗಳಲ್ಲಿ ಆೞ್ವಾರ್ ಐಶ್ವರ್ಯ ಮತ್ತು ಕೈವಲ್ಯ ಎರಡೂ ಕೀಳಾದದು ಹಾಗು ಆತ್ಮಾವಿನ ನಿಜಸ್ವರೂಪಕ್ಕೆ ಹೊಂದುವುದಿಲ್ಲ ಎಂದು ಒತ್ತಿ ಹೇಳುತ್ತಾರೆ. ಕರುಣಾಮಯನಾದ ನಮ್ಮಾೞ್ವಾರ್ ಸಂಸಾರಿಗಳನ್ನು ಸರ್ವೇಶ್ವರನಾದ ಶ್ರಿಯಃಪತಿ( ಶ್ರೀ ಮಹಾಲಕ್ಷ್ಮಿಯ ಪತಿ) ಶ್ರೀಮನ್ ನಾರಾಯಣನ ಪಾದಕಮಲದಲ್ಲಿ ಕೈಂಕರ್ಯವನ್ನು ಸಲ್ಲಿಸಲು ಆದೇಶಿಸುತ್ತಾರೆ.
ಎಂಪೆರುಮಾನಾರ್ ತಿರುವಾಯ್ಮೊೞಿಯ ಈ ಪದಿಗವನ್ನು( ಒರುನಾಯಗಮಾಯ್) ತಿರುನಾರಾಯಣಪುರದ ತಿರುನಾರಣನಿಗೆ ಅರ್ಪಿಸಿದ್ದಾರೆ.


೧.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಒಂದು ದಿನ ರಾಜರು ಕೂಡ ತಮ್ಮ ರಾಜ್ಯವನ್ನು ಕಳೆದುಕೊಂಡ, ಭಿಕ್ಷಾಟನೆ ಮಾಡಿಕೊಂಡು ಶೋಚನೀಯವಾಗಿ ಬಾಳುತ್ತಾರೆ ಎಂದು ತಿಳಿಸುತ್ತಾರೆ. ಆದುದರಿಂದ, ಶಾಶ್ವತವಾಗಿ ಶ್ರೀಮಂತನಾದ ತಿರುನಾರಾಯಣನ ಪಾದಕಮಲವನ್ನು ಸಮೀಪಿಸಿ ಉನ್ನತಿ ಹೊಂದಿರಿ ಎಂದು ಹೇಳುತ್ತಾರೆ.

ಒರುನಾಯಗಮಾಯ್ ಓಡ ಉಲಗುಡನ್ ಆನ್ಡವರ್
ಕರು ನಾಯ್ ಕವರ್ನ್ದದ ಕಾಲರ್ ಸಿದೈಗಿಯ ಪಾನಯರ್
ಪೆರು ನಾಡು ಕಾಣ ಇಮ್ಮಯಿಲೇ ಪಿಚ್ಚೈ ತಾಮ್ ಕೊಳ್ವರ್
ತಿರುನಾರಣನ್ ತಾಳ್ ಕಾಲಮ್ ಪೆರಚ್ ಚಿಂದಿತ್ತುಯ್ಮಿನೋ||


ಒಂದು ಕಾಲದಲ್ಲಿ ಜಗತ್ತಿಗೆ ಸಂಪೂರ್ಣವಾಗಿ ಹೊಂದಿರುವ ರಾಜರು ತಮ್ಮ ರಾಜ್ಯವನ್ನು ಅತ್ಯಂತ ಸ್ವ ಸ್ವಾತಂತ್ರ್ಯದಿಂದ ಆಳುತ್ತಾ ,ತಮ್ಮ ರಾಜ್ಯದ ಪ್ರಜೆಗಳನ್ನು ರಕ್ಷಿಸುತ್ತಿದ್ದರು. ಅದೇ ರಾಜರು ತಮ್ಮ ರಾಜ್ಯವನ್ನು ಕಳೆದುಕೊಂಡ, ಭಿಕ್ಷಾಟನೆ ಮಾಡಲು ರಾತ್ರಿಯ ವೇಳೆ ಹೋಗುತ್ತಿದ್ದಾಗ, ಕತ್ತಲೆಯಲ್ಲಿ ಕರಿ ನಾಯಿ ಅವರ ಕಾಲುಗಳನ್ನು ಕಚ್ಚಿತು.ಆಗ ಅವರ ಭಿಕ್ಷೆ ಪಾತ್ರೆ ಕೆಳಗೆ ಬಿದ್ದು ಒಡೆದುಹೋದಾಗ,ಪ್ರಜೆಗಳೆಲ್ಲಾ ಬಂದು ನೋಡಿದರು. ಒಂದು ಕಾಲದಲ್ಲಿ ರಾಜನಾಗಿದ್ದವನು ಈಗ ಭಿಕ್ಷುಕನಾಗಿರುವುದನ್ನು ಕಂಡರು! ಐಶ್ವರ್ಯ ತಾತ್ಕಾಲಿಕವಾದದ್ದು. ಯಾವತ್ತೂ ಸಮಯವನ್ನು ವ್ಯರ್ಥ ಮಾಡದೇ ಶಾಶ್ವತವಾಗಿ ಶ್ರೀಮಂತನಾದ ಶ್ರೀಮನ್ ನಾರಾಯಣನ ಪಾದಕಮಲವನ್ನು ಧ್ಯಾನಿಸಿ ಉನ್ನತಿ ಹೊಂದಿರಿ!

೨.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ “ಐಶ್ವರ್ಯವನ್ನು ಕಳೆದುಕೊಂಡ ನಂತರ ನಿಮ್ಮ ಭಾರ್ಯಳನ್ನು ಕೂಡ ಕಳೆದುಕೊಳ್ಳುವಿರೀ! ಆದುದರಿಂದ ಶ್ರಿಯಃಪತಿಯಾದ (ಶ್ರೀ ಮಹಾಲಕ್ಷ್ಮಿಯ ಪತಿ) ಮತ್ತು ಎಲ್ಲರಿಗೂ ದೇವರಾದ ಎಂಪೆರುಮಾನಿನ ದೈವಿಕ ಪಾದಕಮಲದಲ್ಲಿ ಆಶ್ರಯಗೊಳ್ಳಿರಿ ಎಂದು ಹೇಳುತ್ತಾರೆ.

ಉಯ್ಮಿನ್ ತಿಱೈ ಕೊಣರ್ನದು ಎನ್ರುಲಗಾಂಡವರ್
ಇಮ್ಮಯೇ ತಮ್ ಇನ್ ಸುವೈ ಮಡವಾರೈಪ್ ಪಿಱರ್ ಕೊಳ್ಳ ತಾಮ್ ವಿಟ್ಟು
ವೆಮ್ಮಿನ್ ಒಳಿ ವೆಯಿಲ್ ಕಾನಗಮ್ ಪೋಯ್ಕ್ ಕುಮೈ ತಿನ್ಬರ್ಗಳ್
ಸೆಮ್ಮಿನ್ ಮುಡಿತ್ ತಿರುಮಾಲೈ ವಿರೈನ್ದಡಿ ಸೇರ್ಮಿನೋ||

ಗೌರವ ತಂದುಕೊಂಡು ಬಾಳಬೇಕು ಎಂದು ಬೇರೆಯವರಿಗೆ ( ಪ್ರಾದೇಶಿಕ ರಾಜರಿಗೆ ಮತ್ತು ಇತರರಿಗೆ)ಹೇಳುತ್ತಾ ರಾಜ್ಯವನ್ನು ಆಳುತ್ತಿದ್ದ ರಾಜರು ತಮಗೆ ಅತ್ಯಂತ ಪ್ರೀತಿಯಾದ, ಎಲ್ಲಾ ಸುಖಗಳನ್ನುೂ ಕೊಡುತ್ತಿದ್ದ ಪತ್ನಿಯರನ್ನು ಬೇರೆಯವರು ಕಿತ್ತುಕೊಳ್ಳುವಂತೆ ಅವರನ್ನು ತ್ಯಜಿಸಿ, ರಾಜ್ಯದಲ್ಲಿ ಇರಲಾರದೆ, ಬಿಸಿಲು ಸುಡುತ್ತಿರುವ ಕಾಡುಗಳಿಗೆ ಹೋಗಿ ಅಲ್ಲೂ ಕೂಡ ಬೇರೆ ರಾಜರಿಂದ ಚಿತ್ರಹಿಂಸೆ ಅನುಭವಿಸುತ್ತಾರೆ. ಆದುದರಿಂದ ನೀವು ಒಳ್ಳೆಯತನದಿಂದ ತ್ವರಿತವಾಗಿ, ನಿಲ್ಲಿಸಲಾರದ ಪ್ರಕಾಶದಿಂದ ಹೊಳೆಯುವ ಕಿರೀಟವನ್ನು ಧರಿಸಿರುವ, ಶ್ರೀ ಮಹಾಲಕ್ಷ್ಮಿಯ ಪತಿಯಾದ ಶ್ರೀಮನ್ ನಾರಾಯಣನ ಪಾದಕಮಲಗಳಲ್ಲಿ ಶರಣಾಗತಿ ಸಲ್ಲಿಸಿ!

೩.ಪಾಸುರಮ್: ಈ ಪಾಸುರದಲ್ಲಿ , ತಮಗೆ ಶರಣರಾದ ರಾಜರ ಬಗ್ಗೆ ಕಾಳಜಿಯಿಲ್ಲದೆ ಬಾಳುತ್ತಿದ್ದ ರಾಜರು ತಮ್ಮ ಎಲ್ಲಾ ಐಶ್ವರ್ಯಗಳನ್ನು ಕಳೆದುಕೊಂಡು ಯಾರಿಂದಲೂ ಗೌರವ ಪಡೆಯದೆ ಬಾಳುತ್ತಾರೆ. ಆದುದರಿಂದ, ಆಹ್ಲಾದಿಸಬಹುದಾದ ಕೃಷ್ಣನ ದೈವಿಕ ಪಾದಗಳಲ್ಲಿ ಶರಣಾಗಿ ಎಂದು ಆೞ್ವಾರ್ ಹೇಳುತ್ತಾರೆ.

ಅಡಿಸೇರ್ ಮುಡಿಯಿನರಾಗಿ ಅರಸರ್ಗಳ್ ತಾಮ್ ತೊೞ
ಇಡಿಸೇರ್ ಮುರಸಂಗಳ್ ಮುತ್ತತ್ತಿಯಂಬ ಇರುನ್ದವರ್
ಪೊಡಿಸೇರ್ ತುಗಳಾಯ್ಪ್ ಪೋವರ್ಗಳ್ ಆದಲಿಲ್ ನೊಕ್ಕೆನಕ್ಕ್
ಕಡಿಸೇರ್ ತುೞಾಯ್ ಮುಡಿ ಕಣ್ಣನ್ ಕೞಲ್ಗಳ್ ನಿನೈಮಿನೋ||

ಹೊರಗೆ ಬಾರಿಸುತ್ತಿರುವ , ಗುಡುಗಿನಂತೆ ಶಬ್ದವನ್ನು ಮಾಡುವಂತಹ ವಾದ್ಯಗಳನ್ನು (drums) ಆನಂದದಿಂದ ಕೇಳುವ, ತನಗೆ ಶರಣರಾದ ರಾಜರನ್ನು ನಿರ್ಲಕ್ಷಿಸುವ ರಾಜ ನಿಷ್ಪ್ರಯೋಜಕನಾಗಿ ಒಂದು ವಸ್ತುವಿನ ಮೇಲಿರುವ ಧೂಳಿನಂತೆ ಬಾಳುತ್ತಾನೆ.
ಆದುದರಿಂದ, ತುಳಸಿಯಿಂದ ಅಲಂಕರಿಸಿರುವ ಕಿರೀಟವನ್ನು ಧರಿಸಿಕೊಂಡಿರುವ ಕೃಷ್ಣನ ಪಾದಕಮಲವನ್ನು ಧ್ಯಾನಿಸಿರಿ !

೪.ಪಾಸುರಮ್:ಈ ಪಾಸುರದಲ್ಲಿ ಆೞ್ವಾರ್, ಜೀವನ ಸ್ವಲ್ಪ ಕಾಲ ಮತ್ತು ತಾತ್ಕಾಲಿಕವಾಗಿರುವುದರಿಂದ, ತಡೆಗಳನ್ನು ನಿವಾರಿಸುವ ಶ್ರೀ ಕೃಷ್ಣನ ದೈವಿಕ ಪಾದಗಳನ್ನು ಧ್ಯಾನಿಸೀ ಎಂದು ಹೇಳುತ್ತಾರೆ.

ನಿನೈಪ್ಪಾನ್ ಪುಗಿನ್ ಕಡಲ್ ಎಕ್ಕಲಿನ್ ನುಣ್ ಮಣಲಿಲ್ ಪಲರ್
ಎನೈತ್ತೋರುಗನ್ಗಳುನ್ ಇವ್ವುಲಗಾಂಡು ಕೞನ್ದವರ್
ಮನೈಪ್ಪಾಲ್ ಮರುಂಗರ ಮಾಯ್ದಲ್ ಅಲ್ಲಾಲ್ ಮಟ್ಟ್ರು ಕಂಡಿಲಮ್
ಪನೈತ್ತಾಳ್ ಮದ ಕಳಿಱಟ್ಟವನ್ ಪಾದಮ್ ಪಣಿಮಿನೋ||

(ಭಗವದನುಭವವನ್ನು ಬಿಟ್ಟುಕೊಟ್ಟು ಮರಣ ಹೊಂದಿದ )ರಾಜರ ಬಗ್ಗೆ ಮಾತನಾಡಬೇಕೆಂದರೆ, ಸಮುದ್ರದ ಮರಳಿನ ದಿಬ್ಬೆಗಳಲ್ಲಿರುವ ಹಲವಾರು ಮರಳು ಕಣಗಳಿಗಿಂತ ಹೆಚ್ಚು ಸಂಖ್ಯೆ! ಅನೇಕ ಯುಗಗಳಲ್ಲಿ ಭಾರಿ ಸಂಖ್ಯೆಯ ಜನ ನಿಧನರಾದರು. ಅವರೆಲ್ಲರೂ ಯಾವ ರೀತಿ ನಾಶವಾದರೆಂದರೆ, ಅವರ ಗೃಹಕ್ಕೂ, ಅದಕ್ಕೆ ಹೊರಗಿರುವ ಭೂಮಿಗೂ ವ್ಯತ್ಯಾಸವಿಲ್ಲದಿರುವ ಹಾಗೆ ( ಎಲ್ಲವೂ ಚಪ್ಪಟೆಯಾದ ಹಾಗೆ) ಆದರು. ನಾವು ಅವರ ಯಾವ ಉಳಿಕೆಯನ್ನುೂ ಕಂಡಿಲ್ಲ. ಆದುದರಿಂದ, ನೀವೆಲ್ಲರೂ, ತಾಳೆ ಮರದಂತೆ ದುಂಡಾದ ಪಾದಗಳನ್ನು ಹೊಂದಿದ, ( ಕುವಲಯಾಪೀಡಮ್) ಮತಿಗೆಟ್ಟ ಆನೆಯನ್ನು ನಾಶಮಾಡಿದ ಶ್ರೀ ಕೃಷ್ಣನ ದೈವಿಕ ಪಾದಗಳನ್ನು ಪೂಜಿಸಿ!

೫.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್, ಐಶ್ವರ್ಯವು ಹೇಗೆ ಶಾಶ್ವತವಲ್ಲವೋ, ಹಾಗೆಯೇ, ಸ್ತ್ರೀಯರೊಂದಿಗೆ ಕೂಡಿ ಅನುಭವಿಸುವ ಸುಖವು ಕೂಡ ತಾತ್ಕಾಲಿಕ ಎಂದು ಹೇಳುತ್ತಾರೆ.

ಪಣಿಮಿನ್ ತಿರುವರುಳ್ ಎನ್ನುಮ್ ಅಮ್ ಸೀದ ಪೈಮ್ ಪೂಮ್ ಪಳ್ಳಿ
ಅಣಿ ಮೆನ್ ಕುೞಲಾರ್ ಇನ್ಬಕ್ ಕಲವಿ ಅಮುದುಣ್ಡಾರ್
ತುಣಿ ಮುನ್ಬು ನಾಲಪ್ ಪಲ್ ಏೞಯರ್ ತಾಮಿೞಿಪ್ಪಚ್ ಚೆಲ್ವರ್
ಮಣಿ ಮಿನ್ನು ಮೇನಿ ನಮ್ ಮಾಯವನ್ ಪೇರ್ ಸೊಲ್ಲಿ ವಾೞ್ಮಿನೋ||

ದೇಹದ ಮುಂದಿನ ಭಾಗದಲ್ಲಿ ಮಾತ್ರವೇ ನೇತಾಡುವ ವಸ್ತ್ರವನ್ನು ಧರಿಸಿಕೊಂಡು, ದೈವಿಕ ಅನುಗ್ರಹವನ್ನು ಪಡೆಯಲು ಸುಂದರವಾದ, ಬೃಹತ್ತಾದ, ತಂಪಾದ ಹೂವಿನ ಹಾಸಿಗೆಯ ಮೇಲೆ ಮಲಗಿರುವ ,ಉದ್ದವಾದ ಅಲಂಕರಿಸಿದ ಕೇಶ ಹೊಂದಿರುವ ಯುವತಿಯರೊಂದಿಗೆ ಆನಂದದಿಂದ ಕೂಡಿ ಸುಖವನ್ನು ಅನುಭವಿಸಿದವರನ್ನು (ರಾಜರು ಮತ್ತು ಶ್ರೀಮಂತರು) ಆ ಯುವತಿಯರು ಒಂದು ಕಾಲದಲ್ಲಿ ಅಪೇಕ್ಷಿಸಿ, ನಂತರ ಅವಮಾನ ಪಡಿಸಿದರು ಕೂಡ, ಆ ರಾಜರು ಮತ್ತು ಶ್ರೀಮಂತರು ಪುನಃ ಅದೇ ಯುವತಿಯರ ಬಳಿ ಹೋಗುತ್ತಾರೆ.
ಆದುದರಿಂದ, ನೀಲಿ ರತ್ನದಂತೆ ಪ್ರಕಾಶವಾದ ದೈವಿಕ ರೂಪವನ್ನು ಹೊಂದಿರುವ, ಭಕ್ತರು ತನ್ನನ್ನು ಆನಂದದಿಂದ ಅನುಭವಿಸಲು ಅನುಮತಿ ನೀಡುವ, ಅದ್ಭುತ ನಾಯಕನಾದ ಆ ಭಗವಂತನ ದೈವಿಕ ನಾಮಗಳನ್ನು ಪಠಿಸುತ್ತಾ, ಸಂತೋಷದಿಂದ ಬಾಳಿರಿ.

೬.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್, ಸೃಷ್ಟಿ ಶುರುವಾದಾಗಲಿಂದ ಈ ದಿನದ ವರೆಗೂ ಯಾರೂ ಐಶ್ವರ್ಯದಿಂದ ಉಳಿದಿರುವುದನ್ನು ನಾನು ಕಂಡಿಲ್ಲ. ಆದುದರಿಂದ, ಕ್ಷೀರಾಬ್ಧಿಯ ನಾಥನಿಗೆ ಸೇವಕರಾಗಿ ಎಂದು ಹೇಳುತ್ತಾರೆ.

ವಾೞ್ನ್ದಾರ್ಗಳ್ ವಾೞ್ನ್ದದು ಮಾ ಮೞೈ ಮೊಕ್ಕುಳಿನ್ ಮಾಯ್ನದು ಮಾಯ್ನದು
ಆೞ್ನದಾರ್ ಎನ್ರಲ್ಲಾಲ್ ಅನ್ರು ಮುದಲ್ ಇನ್ರರುದಿಯ
ವಾೞ್ನ್ದಾರ್ಗಳ್ ವಾೞ್ನದೇ ನಿರ್ಪರ್ ಎನ್ಬದಿಲ್ಲೈ ನಿರ್ಕುರಿಲ್
ಆೞ್ನದಾರ್ ಕಡರ್ ಪಳ್ಳಿ ಅಣ್ಣಲ್ ಅಡಿಯವರಾಮಿನೋ||

ನಾವು ಶಾಶ್ವತವಾಗಿ ಬಾಳುತ್ತೇವೆ ಎಂದು ಹೇಳುವವರೆಲ್ಲಾ ಭಾರಿಯಾಗಿ ಸುರಿಯುವ ಮಳೆಯಲ್ಲಿ ಜಜ್ಜಿ ನಾಶವಾಗುವ ನೀರಿನ ಬುಗ್ಗೆಗಳ ಹಾಗೆ ತಾತ್ಕಾಲಿಕ! ಶಾಶ್ವತವಾಗಿ ಬಾಳಿ ಬಂದಿರುವುದು ಎನ್ನುವ ತತ್ವ ಸೃಷ್ಟಿ ಶುರುವಾಗಿ ಈ ದಿನದ ವರೆಗೂ
ಅಸ್ತಿತ್ವದಲ್ಲಿಲ್ಲ. ಆದುದರಿಂದ, ಆಳವಾದ, ಹೇರಳವಾದ ಸಾಗರವನ್ನು ತನ್ನ ಸುಪ್ಪತ್ತಿಗೆಯಾಗಿ ಹೊಂದಿರುವ ನಾಯಕನಿಗೆ ಸೇವಕರಾಗಿರಿ !

೭.ಪಾಸುರಮ್:ಈ ಪಾಸುರದಲ್ಲಿ ಆೞ್ವಾರ್ ಆಹಾರ, ಪಾನೀಯಗಳು ಮುಂತಾದ ಭೋಗಗಳ ತಾತ್ಕಾಲಿಕ ಸ್ವಭಾವವನ್ನು ವಿವರಿಸುತ್ತಾರೆ.

ಆಮಿನ್ ಸುವೈ ಅವೈ ಆರೋಡು ಅಡಿಸಿಲ್ ಉಣ್ಡಾರ್ನದ ಪಿನ್
ತೂ ಮೆನ್ ಮೋೞಿ ಮಡವಾರ್ ಇರಕ್ಕಪ್ ಪಿನ್ನುಮ್ ತುಟ್ಟ್ರುವಾರ್
ಈಮಿನ್ ಎನಕ್ಕೊರು ತುಟ್ಟ್ರೆನ್ರು ಇಡರುವರ್ ಆದಲಿನ್
ಕೋಮಿನ್ ತುೞಾಯ್ ಮುಡಿ ಆದಿ ಅಮ್ ಸೋದಿ ಗುಣಙ್ಗಳೇ||

ಶ್ರೀಮಂತರು ತಮಗೆ ತಕ್ಕಂತಹ ವಿಶಿಷ್ಟವಾದ, ಇಷ್ಟವಾದ ಆಹಾರವನ್ನು ಹೊಟ್ಟೆ ತುಂಬಾ ತಿನ್ನುತ್ತಾರೆ. ಜಗತ್ತಿನಲ್ಲಿ ಹೆಸರುವಾಸಿಗಳಾಗಿರುತ್ತಾರೆ. ಆವರು ಆರು ತರಹ ರುಚಿ ಪಡೆದಿರುವವರಾಗಿರುತ್ತಾರೆ. ಆದರೂ, ಶುದ್ಧವಾದ, ಮೃದುವಾದ ಯುವತಿಯರ ಬಯಕೆಯನ್ನು ನಿರಾಕರಿಸದೆ ಪುನಃ ತಿನ್ನುತ್ತಾರೆ. ತಮ್ಮ ಐಶ್ವರ್ಯವನ್ನು ಕಳೆದುಕೊಂಡ ಮೇಲೆ, ಅದೇ ಯುವತಿಯರ ಬಾಗಿಲನ್ನು ತಟ್ಟಿ ಆಹಾರವನ್ನು ಬೇಡುತ್ತಾರೆ ಆದುದರಿಂದ, ತುಳಸಿಯಿಂದ ಅಲಂಕರಿಸಿರುವ ದೈವಿಕ ಕಿರೀಟವನ್ನು ಧರಿಸಿಕೊಂಡಿರುವುದರಿಂದ ಎಲ್ಲೆ ಇಲ್ಲದ ಆನಂದವನ್ನು ನಮಗೆ ಕೊಡುವಂತಹ, ಪ್ರಕಾಶವಾದ ದೈವಿಕ ರೂಪವನ್ನು ಹೊಂದಿರುವ, ಎಲ್ಲಾದಕ್ಕೂ ಕಾರಣವಾಗಿರುವ ಸರ್ವೇಶ್ವರನ ಸುಂದರವಾದ ದೈವಿಕ ಕಲ್ಯಾಣ ಗುಣಗಳನ್ನು ಸಂತೋಷದಿಂದ ಅನುಭವಿಸಿರಿ.

೮.ಪಾಸುರಮ್: “ನೀವು ಪಡೆದಿರುವ ಈ ರಾಜ್ಯವು ಭಗವಂತನ ಅನುಗ್ರಹವಿಲ್ಲದೆ ಶಾಶ್ವತವಾದದಲ್ಲ! ಅನಂತಸಾಯಿಯ ( ಆದಿಶೇಷನ ಮೇಲೆ ಶಯನಿಸುವ ಎಂಪೆರುಮಾನ್) ದೈವಿಕ ತಿರುನಾಮಗಳನ್ನು ಪಠಿಸಿರಿ” ಎಂದು ಈ ಪಾಸುರದಲ್ಲಿ ಆೞ್ವಾರ್ ಹೇಳುತ್ತಾರೆ.

ಗುಣಮ್ ಕೊಳ್ ನಿರೈ ಪುಗೞ್ ಮನ್ನರ್ ಕೊಡೈಕ್ ಕಡನ್ ಪೂಂಡಿರುನ್ದು
ಇಣಙ್ಗಿ ಉಲಗುಡನ್ ಆಕ್ಕಿಲುಮ್ ಆಙ್ಗವನೈ ಇಲ್ಲಾರ್
ಮಣಂ ಕೊಂಡ ಭೋಗತ್ತು ಮನ್ನಿಯುಮ್ ಮೀಳ್ವರ್ಗಳ್ ಮೀಳ್ವಿಲ್ಲೈ
ಪಣಂ ಕೊಳ್ ಅರವಣೈಯಾಯ್ ತಿರುನಾಮಮ್ ಪಡಿಮಿನೋ||

ಶೀಲಮ್(ಸರಳತೆ) ಇತ್ಯಾದಿ ಒಳ್ಳೆಯ ಗುಣಗಳನ್ನು ಹೊಂದಿರುವ, ಪ್ರಸಿದ್ಧರಾದ, ಸ್ಥಿರವಾಗಿ ಸ್ಥಾಪಿಸಿರುವ, ಹೃದಯ ವೈಶಾಲ್ಯ ಹೊಂದಿರುವ( ತಮ್ಮ ಐಶ್ವರ್ಯದಿಂದ ಎಲ್ಲರಿಗೂ ಲಾಭವನ್ನು ನೀಡುವ) ಜಗತ್ತಿಗೆ ಜನ್ನಾಗಿ ತಕ್ಕಂತಿರುವ, ಸಾಮರಸ್ಯದಿಂದ ತಮ್ಮ ಪ್ರಜೆಗಳನ್ನು ರಕ್ಷಿಸುವ, ಕಿರೀಟವನ್ನು ಧರಿಸಿರುವಂತಹ ರಾಜನಾದವನು, ಪ್ರತಿದಿನ ಸಂತೋಷದಿಂದ ತನ್ನ ಐಶ್ವರ್ಯವನ್ನು ಆಚರಿಸಿಕೊಂಡು, ತನಗೆ ಆ ಐಶ್ವರ್ಯ, ಕೀರ್ತಿ ಎಲ್ಲವನ್ನೂ ಕೊಟ್ಟ ಸರ್ವೇಶ್ವರನಿಗೆ ಸೇವಕನಾಗಿಲ್ಲದೆ,ಅಧೀನನಾಗಿಲ್ಲದೆ ಕೃತಜ್ಞತೆ ಸಲ್ಲಿಸದಿದ್ದರೆ, ಅವನು ದಿವಾಳಿತನ ಅನುಭವಿಸುತ್ತಾನೆ. ವಿಸ್ತಾರವಾದ ಹೆಡೆ ಹೊಂದಿರುವ ಆದಿಶೇಷನನ್ನು ಸುಪ್ಪತ್ತಿಗೆಯಾಗಿ ಹೊಂದಿರುವ, ತನ್ನ ಭಕ್ತರೊಂದಿಗೆ ಸದಾ ಕೂಡಿರುಲು ಆಶಿಸುವ ಎಂಪೆರುಮಾನಿನ ದೈವಿಕ ನಾಮಗಳನ್ನು ನೀವು ಪಠಿಸುತ್ತಿದ್ದರೆ, ಪುನಃ ಈ ಲೀಲಾ ವಿಭೂತಿಗೆ ಬರುವುದನ್ನು ತಪ್ಪಿಸುವ ಗುರಿಯನ್ನು ಪಡೆಯುತ್ತೀರಿ!

೯.ಪಾಸುರಮ್: ಲೌಕಿಕ ಮತ್ತು ಸ್ವರ್ಗ ಸುಖ ಭೋಗಗಳು ತಾತ್ಕಾಲಿಕವಾಗಿರುವುದರಿಂದ, ಶಾಶ್ವತವಾದ ಗುರಿಯನ್ನು ಸ್ಥಾಪಿಸಿ ಕೊಡುವ ಆ ಸರ್ವೇಶ್ವರನ ದೈವಿಕ ಪಾದಗಳಲ್ಲಿ ಆಶ್ರಯ ಪಡೆಯಿರಿ ಎಂದು ಆೞ್ವಾರ್ ಹೇಳುತ್ತಾರೆ.

ಪಡಿ ಮನ್ನು ಪಲ್ಕಲನ್ ಪಟ್ಟ್ರೋಡರುತ್ತು ಐಮ್ಪುಲನ್ ವೆನ್ರು
ಸೆಡಿ ಮನ್ನು ಕಾಯಮ್ ಸೆಟ್ಟ್ರಾರ್ಗಳುಮ್ ಆಂಗವನೈ ಇಲ್ಲಾರ್
ಕುಡಿ ಮನ್ನುಮ್ ಇನ್ ಸುವರ್ಗಮ್ ಏಯ್ದಿಯುಮ್ ಮೀಳ್ವರ್ಗಳ್ ಮೀಳ್ವಿಲ್ಲೈ
ಕೊಡಿ ಮನ್ನು ಪುಳ್ಳುಡೈ ಅಣ್ಣಲ್ ಕೞಲ್ಗಳ್ ಕುರುಗುಮಿನೋ ||

ಗಿಡಗಳ ಪೊದೆಗಳು ತಮ್ಮ ಸುತ್ತಲೂ ಬೆಳೆಯುವಂತೆ ಕುಳಿತು ದೇಹವನ್ನು ಶ್ರಮಪಡಿಸಿಕೊಂಡು, ಕಠಿಣವಾದ ತಪಸ್ಸನ್ನು ಮಾಡಿ ಐದು ಇಂದ್ರಿಯಗಳನ್ನು ಗೆದ್ದು, ಭೂಮಿ, ಸ್ವತ್ತು, ಸದಾ ಧರಿಸಿಕೊಂಡಿರುವ ಒಡವೆಗಳನ್ನು ದಾನ ಮಾಡಿ, ನಿರಂತರವಾಗಿ ಕಾಣಿಸುವ ( ಸ್ವರ್ಗದ ಜೀವನ ದೀರ್ಘ ಕಾಲ ಇರುವುದರಿಂದ ಶಾಶ್ವತ ಎಂದು ಅನ್ನಿಸುತ್ತದೆ)ಆನಂದಮಯವಾದ ಸ್ವರ್ಗವನ್ನು ಪಡೆದವರು ಭಗವಂತನ ದೈವಿಕ ಪಾದಗಳಲ್ಲಿ ಆಶ್ರಯ ಪಡೆಯದಿದ್ದರೆ, ಆ ಸ್ವರ್ಗಲೋಕದ ಜೀವನವನ್ನೂ ಕಳೆದುಕೊಳ್ಳುತ್ತಾರೆ.
ಶಾಶ್ವತವಾದ ಪರಿಣಾಮವನ್ನು ಪಡೆಯಲು,’ ಪೆರಿಯ ತಿರುವಡಿ’ಯನ್ನು(ಗರುಡನನ್ನು) ಸದಾ ತನ್ನ ಧ್ವಜದಲ್ಲಿ ಹೊಂದಿರುವ ಸರ್ವೇಶ್ವರನ ದೈವಿಕ ಪಾದಗಳಲ್ಲಿ ಶರಣರಾಗಿ. ‘ಪಡಿ ಮನ್ನು’ ಎನ್ನುವ ಪದಗಳು ದೇಹಕ್ಕೆ ಚನ್ನಾಗಿ ಹೊಂದುವ ಒಡವೆಗಳು ಎಂದು ಸೂಚಿಸುತ್ತದೆ.

೧೦.ಪಾಸುರಮ್: ಕೈವಲ್ಯ ಎನ್ನುವ ನೆಲೆ, ಲೌಕಿಕ ಸುಖಗಳಂತೆ ತಾತ್ಕಾಲಿಕವಾಗಿಲ್ಲದಿದ್ದರೂ ಕೂಡ, ಪರಮ ಪುರುಷಾರ್ಥದಂತೆ( ಅಂತಿಮ ಗುರಿಯಾದ ಭಗವಂತನ ನಿರಂತರ ಕೈಂಕರ್ಯ) ಸಮೃದ್ಧಿಗೊಳಿಸುವುದಿಲ್ಲ ಎಂದು ಆೞ್ವಾರ್ ಈ ಪಾಸುರದಲ್ಲಿ ಹೇಳುತ್ತಾರೆ.

ಕುರುಗ ಮಿಗ ಉಣರ್ವತ್ತೊಡು ನೋಕ್ಕಿ ಎಲ್ಲಾಮ್ ವಿಟ್ಟ
ಇರುಗಲ್ ಇರಪ್ಪೆನ್ನುಮ್ ಜ್ಞಾನಿಕ್ಕುಮ್ ಅಪ್ಪಯನ್ ಇಲ್ಲಯೇಲ್
ಸಿರುಗ ನಿನೈವದೋರ್ ಪಾಸಮ್ ಉಣ್ಡಾಮ್ ಪಿನ್ನುಮ್ ವೀಡಿಲ್ಲೈ
ಮರುಗಲಿಲ್ ಈಸನೈಪ್ ಪಟ್ಟ್ರಿ ವಿಡಾ ವಿಡಿಲ್ ವೀಡಃದೇ ||

ಎಲ್ಲವನ್ನೂ ಬಿಟ್ಟು ಕೇವಲ ತನ್ನ ಆತ್ಮವನ್ನೇ ತೀವ್ರವಾಗಿ ಧ್ಯಾನಿಸಿ, ಅತಿ ಸಾಮೀಪ್ಯದಲ್ಲಿ ಜ್ಞಾನದಿಂದ ತನ್ನ ಆತ್ಮವನ್ನು ಗುರುತಿಸಿ, ಆತ್ಮಾನುಭವವನ್ನೇ ಮೋಕ್ಷವೆಂದು ಪರಿಗಣಿಸಿ, ಭಗವಂತನನ್ನು ಉಪಾಯವಾಗಿ ಸ್ವೀಕರಿಸದೆ ಇರುವ ಜ್ಞಾನಿಗೆ ಅಲ್ಪ ಗುರಿಯೇ ಇರುತ್ತದೆ ಮತ್ತು ಕೈವಲ್ಯ ಕೂಡ ಪಡೆಯಲು ಸಾಧ್ಯವಾಗುವುದಿಲ್ಲ.
ಆದುದರಿಂದ, ಸಕಲ ಕಲ್ಯಾಣ ಗುಣಗಳನ್ನು ಸದಾ ಹೊಂದಿರುವ, ಎಲ್ಲಾ ದೇವತೆಗಳಿಗೂ ನಾಯಕನಾದ , ಎಲ್ಲವನ್ನೂ ನಿಯಂತ್ರಿಸುವನಾದ, ಎಲ್ಲಾ ದೋಷಗಳಿಗೂ ವಿರುದ್ಧನಾದ ಎಂಪೆರುಮಾನಿನ ಪಾದಕಮಲದಲ್ಲಿ ಶರಣರಾಗುವುದೇ ಪರಮ ಪುರುಷಾರ್ಥ(ಅಂತಿಮ ಗುರಿ)

೧೧.ಪಾಸುರಮ್: ದುಃಖವನ್ನು ನಿವಾರಿಸಿ, ಆತ್ಮಕ್ಕೆ ಉನ್ನತಿ ತರುವುದೇ ಈ ಪದಿಗದ ಪರಿಣಾಮ ಎಂದು ಈ ಪಾಸುರದಲ್ಲಿ ಆೞ್ವಾರ್ ಹೇಳುತ್ತಾರೆ.

ಅಃದೇ ಉಯ್ಯಪ್ ಪುಗುಮಾರೆನ್ರು ಕಣ್ಣನ್ ಕೞಲ್ಗಳ್ ಮೇಲ್
ಕೊಯ್ ಪೂಮ್ ಪೊೞಿಲ್ ಸೂೞ್ ಕುರುಗೂರ್ಚ ಚಟಕೊಪನ್ ಕುಟ್ಟ್ರೇವಲ್
ಸೈ ಕೋಲತ್ತು ಆಯಿರಮ್ ಸೀರ್ತ್ ತೊಡೈಪ್ ಪಾಡಲ್ ಇವೈ ಪತ್ತುಮ್
ಅಹ್ಕ್ಕಾಮಲ್ ಕರ್ಪವರ್ ಆೞ್ ತುಯರ್ ಪೋಯ್ ಉಯ್ಯರ್ಪಾಲರೇ||

ಸೀರ್ ಮತ್ತು ತೊಡೈಯೊಂದಿಗೆ ( ಪದ್ಯ ರಚಿಸಲು ಉಪಯೋಗಿಸುವ ವ್ಯಾಕರಣದ ಅಂಶ) ಶ್ರೀ ಕೃಷ್ಣನ ದೈವಿಕ ಪಾದಗಳಲ್ಲಿ ಗೌಪ್ಯ ಸೇವೆಯನ್ನು ಮಾಡಿದ, ಕಿತ್ತು ಹಾಕಬಹುದಾದಂತಹ ಅನೇಕ ಹೂವಿನ ವನಗಳನ್ನು ಹೊಂದಿರುವ ಆೞ್ವಾರ್ತಿರುನಗರಿಯ ನಾಯಕನಾದ ನಮ್ಮಾೞ್ವಾರ್ ಸಾವಿರ ಪಾಸುರಗಳನ್ನು ,ಆತ್ಮ ಉನ್ನತಿ ಪಡೆಯಲು ಒಂದೇ ಮಾರ್ಗವಾದ ಕೃಷ್ಣನ ಚರಣಗಳಲ್ಲಿ ಅರ್ಪಿಸಿದರು. ಸಾವಿರ ಪಾಸುರಗಳಲ್ಲಿ ಈ ಪದಿಗವನ್ನು ಪೂರ್ತಿಯಾಗಿ ಕಲಿತು ಪಠಿಸುವರು ಸಂಸಾರದ ಐಶ್ವರ್ಯ ಮತ್ತು ಸ್ವಯಂ ಸಂತೋಷದ ದುಃಖದಲ್ಲಿ ಮುಳುಗುವುದರಿಂದ ಬಿಡುಗಡೆಯಾಗಿ ಆತ್ಮವನ್ನು ಉನ್ನತಿಗೊಳಿಸುವುದರಲ್ಲಿ ಒಳಗಾಗಿ, ಎಂಪೆರುಮಾನಿನ ಬಳಿ ಭಕ್ತಿಯನ್ನು ಹೊಂದುತ್ತಾರೆ.

ಮೂಲ : http://divyaprabandham.koyil.org/index.php/2020/05/thiruvaimozhi-4-1-simple/

ಅಡಿಯೇನ್ ರಾಮಾನುಜ ದಾಸಿ ಕುಮುದವಲ್ಲಿ

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment