ತಿರುವಾಯ್ಮೊೞಿ – ಸರಳ ವಿವರಣೆ – 10.10 – ಮುನಿಯೇ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 10.9 – ಶೂೞ್ ವಿಶುಮ್ಬು


ತನ್ನ ಮನಸ್ಸಿನಲ್ಲಿ ಪರಮಪದವನ್ನು ಅನುಭವಿಸಿದ ಮೇಲೆ , ಆಳ್ವಾರರು ತಮ್ಮ ದಿವ್ಯ ಕಣ್ಣುಗಳನ್ನು ತೆರೆದರು. ಅವರು ತಾವು ಇನ್ನೂ ಈ ಸಂಸಾರದಲ್ಲಿಯೇ ಇರುವುದನ್ನು ತಿಳಿದುಕೊಂಡು ಬಹಳ ಉದ್ವಿಗ್ನರಾದರು. ಅವರು ಇದನ್ನು ಇನ್ನು ತಾವು ಹೆಚ್ಚು ಸಹಿಸಿಕೊಳ್ಳಲಾಗುವುದಿಲ್ಲ ಎಂದು ತಿಳಿದು, ಎಂಪೆರುಮಾನರನ್ನು ಕೂಗಿ ಕರೆದರು. ಅವರು ಶ್ರೀಮಹಾಲಕ್ಶ್ಮಿಯ ಮೇಲೆ ಆಣೆ ಮಾಡಿ ತಮ್ಮನ್ನು ಪರಮಪದಕ್ಕೆ ಸ್ವೀಕರಿಸುವಂತೆ ಎಂಪೆರುಮಾನರಿಗೆ ಪ್ರಾರ್ಥಿಸಿದರು. ಎಂಪೆರುಮಾನರು ಆಳ್ವಾರರ ಅಗಲಿಕೆಯಿಂದ ಇನ್ನೂ ಉದ್ವಿಗ್ನರಾಗಿದ್ದರು. ಅವರು ಒಡನೇ ಗರುಡವಾಹನದಲ್ಲಿ ಪಿರಾಟ್ಟಿಯೊಂದಿಗೆ ಕುಳಿತು ಪರಮಪದವನ್ನು ಬಿಟ್ಟು , ಆಳ್ವಾರರು ಇರುವಲ್ಲಿಗೆ ತಕ್ಷಣ ಬಂದು ಅವರನ್ನು ಪರಮಪದಕ್ಕೆ ಕರೆದೊಯ್ದರು. ಆಳ್ವಾರರು ತಾವು ಆನಂದಮಯವಾಗಿ ಘೋಷಿಸಿದರು , “ಅವಾವಱ್ಱು ವೀಡು ಪೆಱ್ಱ ಕುರುಗೂರ್ ಚ್ಚಡಗೋಪನ್” ಎಂದು ಮತ್ತು ತಮ್ಮ ಪ್ರಬಂಧವನ್ನು ಪೂರ್ಣಗೊಳಿಸಿದರು.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ನೀನು ನಿನ್ನ ಮಹತ್ತರ ಗುಣಗಳಾದ ಸೌಂದರ್‍ಯಮ್ ಮುಂತಾದುವುಗಳನ್ನು ನನ್ನ ಮುಂದೆ ಯಾವ ಕಾರಣವೂ ಇಲ್ಲದೆ ಪ್ರಕಟಿಸಿದ್ದರಿಂದ , ನಾನು ನಿನ್ನ ಬಿಟ್ಟು ಬದುಕಲಾರೆನು. ಈಗ ನೀನು ನನ್ನಿಂದ ದೂರ ಇರಲು ಸಾಧ್ಯವೇ ಇಲ್ಲ. ನನಗೆ ಸಹಿಸಲಾರದ ಈ ಸಂಸಾರದಲ್ಲಿ ನನ್ನನ್ನು ಬಿಟ್ಟು, ನಿನ್ನ ಗುಣಗಳನ್ನು ಮಾತ್ರ ಆನಂದಿಸಲು ಬಿಟ್ಟಿರುವೆ.”
ಮುನಿಯೇ ನಾನ್ಮುಗನೇ ಮುಕ್ಕಣ್ಣಪ್ಪಾ, ಎನ್ ಪೊಲ್ಲಾ
ಕ್ಕನಿವಾಯ್ ತ್ತಾಮರೈಕ್ಕಣ್ ಕರುಮಾಣಿಕ್ಕಮೇ ಎನ್ ಕಳ್ವಾ,
ತನಿಯೇನಾರುಯಿರೇ ಎನ್ ತಲೈಮಿಶೈಯಾಯ್ ವನ್ದಿಟ್ಟು,
ಇನಿ ನಾನ್ ಪ್ಪೋಗಲೊಟ್ಟೇನ್ ಒನ್‍ಱುಮ್ ಮಾಯಮ್ ಶೆಯ್ಯೇಲ್ ಎನ್ನೈಯೇ ॥

ಓಹ್! ಸೃಷ್ಟಿಯ ವಿಧಗಳನ್ನು, ಅವುಗಳು ರೂಪುಗೊಂಡ ದಾರಿಗಳನ್ನು ಧ್ಯಾನಿಸುವ, ನಾಲ್ಕು ತಲೆಯ ಬ್ರಹ್ಮನನ್ನು ತನ್ನ ದೇಹದಲ್ಲಿ ಹೊಂದಿರುವವನೇ! ಮೂರು ಕಣ್ಣಿರುವ, ಪೋಷಕನಾದ ರುದ್ರರನ್ನು ತನ್ನ ದೇಹದಲ್ಲಿ ಹೊಂದಿರುವವನೇ! ಓಹ್! ಕಪ್ಪಾದ ದೋಷವಿಲ್ಲದ ಮಾಣಿಕ್ಯದ ರೂಪವನ್ನು ಹೊಂದಿರುವವನೇ! ತುಟಿಗಳು ಮಾಗಿದ ಫಲದಂತಿರುವವನೇ, ಕಣ್ಣುಗಳು ತಾವರೆಯಂತೆ ನನ್ನನ್ನು ಆಕರ್ಷಣೆ ಮಾಡುವವನೇ! ನನ್ನನ್ನು ಮೋಸಗೊಳಿಸಿ ನನ್ನನ್ನು ಅಪಹರಿಸಿರುವೆ. ಒಬ್ಬಂಟಿಯಾಗಿರುವ ನನ್ನ ಪೂರ್ಣ ಪ್ರಾಣವಾಗಿರುವವನೇ! ನೀನು ನನ್ನಲ್ಲಿಗೆ ಬಂದು ನಿನ್ನ ದಿವ್ಯ ಪಾದವನ್ನು ನನ್ನ ತಲೆಯ ಮೇಲಿರಿಸಿರುವೆ. ಇಷ್ಟೆಲ್ಲಾ ನಡೆದ ಮೇಲೆ, ನೀನು ನನ್ನನ್ನು ಬಿಟ್ಟು ಹೋಗಲು ಅನುಮತಿಸುವುದಿಲ್ಲ. ನೀನು ನನ್ನನ್ನು ಸ್ವಲ್ಪವೂ ಯಾಮಾರಿಸಲು ಬಿಡುವುದಿಲ್ಲ.

ಎರಡನೆಯ ಪಾಸುರಮ್:
ಆಳ್ವಾರರು ಪೆರಿಯ ಪಿರಾಟ್ಟಿಯ ಮೇಲೆ ಆಣೆ ಮಾಡಿ , ಎಂಪೆರುಮಾನರು ತಮ್ಮ ಆಸೆಯನ್ನು ನೆರವೇರಿಸುವುದರಿಂದ ತಪ್ಪಿಸಿಕೊಳ್ಳದಂತೆ ಮಾಡುತ್ತಾರೆ.
ಮಾಯಮ್ ಸೆಯ್ಯೇಲ್ ಎನ್ನೈ ಉನ್‍ತಿರು ಮಾರ್ವತ್ತುಮಾಲೈನಙ್ಗೈ,
ವಾಶಮ್ ಶೆಯ್ ಪೂಙ್ಕುೞಲಾಳ್ ತಿರುವಾಣೈ ನಿನ್ನಾಣೈ ಕಣ್ಡಾಯ್,
ನೇಶಮ್ ಶೆಯ್‍ದು ಉನ್ನೋಡು ಎನ್ನೈ ಉಯಿರ್ ವೇಱಿನ್‍ಱಿ ಒನ್‍ಱಾಗವೇ,
ಕೂಶಮ್ ಶೆಯ್ಯಾದು ಕೊಣ್ಡಾಯ್ ಎನ್ನೈ ಕ್ಕೂವಿಕ್ಕೊಳ್ಳಾಯ್ ವನ್ದನ್ದೋ ॥

ನನ್ನನ್ನು ಮಾಯೆಯ ಪರಿಧಿಗೆ ಇನ್ನೂ ಹಾಕಬೇಡ, ನಿನ್ನ ಸಹಜವಾದ ಐಶ್ವರ್‍ಯಕ್ಕೆ , ನಿನ್ನ ಶ್ರೇಷ್ಠತ್ವಕ್ಕೆ ಕಾರಣವಾಗಿರುವುದು ಶ್ರೀಲಕ್ಷ್ಮಿ. ನಿನ್ನ ದಿವ್ಯ ವಕ್ಷಸ್ಥಲದಲ್ಲಿ ನಿನ್ನ ಬಣ್ಣಕ್ಕೆ ವ್ಯತ್ಯಾಸವಾಗಿರುವ ಚಿನ್ನದ ಹಾರದಂತಿರುವ ಬಣ್ಣವನ್ನು ಹೊಂದಿರುವ, ಯಾರ ಉಪಸ್ಥಿತಿಯಿಂದ ನಿನ್ನ ಗುಣಗಳಿಗೆ ಇನ್ನೂ ಹೊಳಪು ಬಂದಿರುವ, ಅವಳ ವಿಶಿಷ್ಟವಾದ ದಿವ್ಯ ತಲೆಗೂದಲಿನಿಂದ ನಿನಗೆ ಶ್ರೇಷ್ಠ ಪರಿಮಳ ಬಂದಿರುವ ಆಕೆಯೇ ನಿನ್ನ ಅಪ್ಪಣೆ. ನೀನು ನನ್ನನ್ನು ಕಂಡು ಅಸಹ್ಯ ಪಡಲಿಲ್ಲ , ಬದಲಾಗಿ ಪರಮ ಸ್ನೇಹಗೊಂಡು ಕರುಣೆಯಿಂದ ನನ್ನನ್ನು ಪರಿಗಣಿಸಿದೆ. ನಿನ್ನಲ್ಲಿ ನನ್ನ ಜೀವವು ಒಂದಾಗಿದೆ. ನಿನಗೂ ನನಗೂ ವ್ಯತ್ಯಾಸವಿಲ್ಲದಾಗಿದೆ. ಇಲ್ಲಿಗೆ ಬಂದು ಕರುಣೆಯಿಂದಲಿ ನನ್ನನ್ನು ಅಲ್ಲಿಗೆ ಆಮಂತ್ರಿಸು. ಅಯ್ಯೋ! ನೀನು ಕಾತುರ ಪಡುತ್ತಿರುವ ವಸ್ತುವಿಗೆ ನಾನು ಅಪ್ಪಣೆ ಕೊಟ್ಟಾಗಿದೆ.

ಮೂರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಬ್ರಹ್ಮ, ಈಶಾನ ಮುಂತಾದವರ ಸಹಜವಾದ ಸ್ವಭಾವಕ್ಕೆ, ಅಸ್ತಿತ್ವಕ್ಕೆ ನಿಯಂತ್ರಕನಾಗಿರುವ ನೀನು, ಅಯ್ಯೋ! ನನ್ನನ್ನು ಒಪ್ಪಿಕೊಳ್ಳಬೇಕು. ನಿನ್ನನ್ನು ಬಿಟ್ಟು ನನ್ನ ವಿಮೋಚನೆಗೆ (ಮೋಕ್ಷಕ್ಕೆ) ನನಗೆ ಬೇರೆ ದಾರಿಯೇ ಇಲ್ಲ.”
ಕೂವಿಕ್ಕೊಳ್ಳಾಯ್ ವನ್ದನ್ದೋ ಎನ್ ಪೊಲ್ಲಾ ಕ್ಕರುಮಾಣಿಕ್ಕಮೇ,
ಆವಿಕ್ಕೊರ್‍‌ ಪಱ್ಱು ಕ್ಕೊಮ್ಬು ನಿನ್ನಲಾಲ್ ಅಱಿಗಿನ್‍ಱಿಲೇನ್‍ಯಾನ್,
ಮೇವಿ ತ್ತೊೞುಮ್ ಪಿರಮನ್ ಶಿವನ್ ಇನ್ದಿರನ್ ಆದಿಕ್ಕೆಲ್ಲಾಮ್,
ನಾವಿಕ್ಕಮಲಮುದಲ್ ಕಿೞಙ್ಗೇ ಉಮ್ಬರನ್ದದುವೇ ॥

ನನಗೆ ಸಮಂಜಸವಾದ ಆನಂದವನ್ನು ಕೊಡುವ, ವಿಶಿಷ್ಟವಾದ ಯಾವ ತೂತಿಲ್ಲದ ಅಪರೂಪದ ಕಪ್ಪು ಮಾಣಿಕ್ಯ ರತ್ನದ ರೂಪವನ್ನು ಹೊಂದಿರುವ ,ದಿವ್ಯ ನಾಭಿಯಲ್ಲಿ ದಿವ್ಯ ಕಮಲಕ್ಕೆ ಬೇರಾಗಿರುವ, ಅದರಿಂದ ಹುಟ್ಟಿದ ಬ್ರಹ್ಮ, ರುದ್ರ, ಇಂದ್ರ ಮತ್ತಿತರಿಗೆ ಆಶ್ರಯವಾಗಿರುವ , ನಿತ್ಯಸೂರಿಗಳ ಸ್ವಭಾವವನ್ನು, ಅಸ್ತಿತ್ವವನ್ನು ನಿಯಂತ್ರಿಸುವ ನಿನ್ನನ್ನು ಬಿಟ್ಟು, ನನಗೆ ಬೇರೆ ಯಾವ ಬೆಂಬಲಿಸುವ ಕಂಭವೂ , ಸರಿಯಾದ ಆಶ್ರಯವೂ ಈ ಆತ್ಮಕ್ಕಿಲ್ಲ. ಇಲ್ಲಿಗೆ ಬಂದು , ನನ್ನನ್ನು ಕರೆದು ಕರುಣೆಯಿಂದಲಿ ನನ್ನನ್ನು ಸ್ವೀಕರಿಸು. ಅಯ್ಯೋ! ನಾನು ನಿನಗೆ ನಿನ್ನ ಕೆಲಸವನ್ನು ಹೇಳಬೇಕಾಗಿದೆ.

ನಾಲ್ಕನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ನೀನು ಎಲ್ಲದರ ನಿಯಂತ್ರಕನಾಗಿದ್ದರೆ, ಕರುಣೆಯಿಂದ ನನ್ನ ಪರಿಸ್ಥಿತಿಯನ್ನು ನಿಯಂತ್ರಿಸು. ನೀನು ನನ್ನನ್ನು ಬಹಿಷ್ಕಾರ ಹಾಕಿಲ್ಲ ಅಲ್ಲವೇ?”
ಉಮ್ಬರನ್ದಣ್ ಪಾೞೇಯೋ ಅದನುಳ್ ಮಿಶೈ ನೀಯೇಯೋ,
ಅಮ್ಬರನಲ್ ಶೋದಿ ಅದನುಳ್ ಪಿರಮನ್ ಅರನ್ ನೀ,
ಉಮ್ಬರುಮ್ ಯಾದವರುಮ್ ಪಡೈತ್ತ ಮುನಿವನವನ್ ನೀ,
ಎಮ್ಬರುಮ್ ಶಾದಿಕ್ಕಲುಱ್ಱು ಎನ್ನೈ ಪ್ಪೋರವಿಟ್ಟಿಟ್ಟಾಯೇ ॥

ನೀನು ನಿನ್ನ ಆಟದ ಸಾಮಾನಾಗಿರುವ ಪ್ರಕೃತಿಯ ಮೂಲ ವಸ್ತುಗಳನ್ನು ನಿಯಂತ್ರಿಸುವ ಸರ್ವ ಶ್ರೇಷ್ಠ ಮತ್ತು ವಿಶಿಷ್ಟನಾದವನು. ಈ ಮೂಲಭೂತ ವಸ್ತುಗಳು ಅವನ್ನು ಆಶ್ರಯಿಸಿರುವ ಚೇತನಗಳಿಗೆ ಭೋಗ ಮತ್ತು ಮೋಕ್ಷವನ್ನು ಕೊಡಲು ಕಾರಣವಾಗುತ್ತವೆ. ನೀನು ನಿರ್ಮಲವಾದ ಆಕಾಶ ಮತ್ತು ಬೆಂಕಿ ಮುಂತಾದ ಮೂಲಾಂಶಗಳನ್ನು ಸೃಷ್ಟಿಸಿರುವೆ ಮತ್ತು ಅವುಗಳನ್ನು ನಿನ್ನ ರೂಪವಾಗಿಸಿಕೊಂಡಿರುವೆ. ನೀನು ಅಂಡಾಕಾರದ ಬ್ರಹ್ಮಾಂಡವನ್ನು ಈ ಮೂಲಾಂಶದಿಂದ ಸೃಷ್ಟಿಸಿರುವೆ . ಬ್ರಹ್ಮ ,ರುದ್ರ ಮುಂತಾದವರು ಈ ಬ್ರಹ್ಮಾಂಡದಲ್ಲಿರುವರು ಮತ್ತು ಅವರು ನಿನ್ನ ರೂಪದಲ್ಲಿರುವರು. ನೀನು ಎಲ್ಲಾ ರೀತಿಯ ಜೀವಿಗಳಾದ (ಚೇತನಗಳನ್ನು) ಸ್ವರ್ಗೀಯ ಜನರನ್ನು, ಮಾನವರನ್ನು ಮುಂತಾದವರನ್ನು ಸೃಷ್ಟಿ ಮಾಡಿರುವೆ. ನನ್ನ ದೇಹವನ್ನು ನಿಯಂತ್ರಿಸಲು ಒಪ್ಪಿಕೊಂಡಾದ ಮೇಲೆ ನನ್ನನ್ನು ಇಲ್ಲಿಯೇ ಬಿಟ್ಟಿರುವೆ. ‘ಓ’ ಕಾರವನ್ನು ‘ನೀ’ ಕಾರವಿರುವ ಎಲ್ಲಾ ಕಡೆಯಲ್ಲೂ ಬದಲಾಯಿಸಬೇಕು. ಇದು ಆಳ್ವಾರರ ದುಃಖವನ್ನೂ ಹತಾಶೆಯನ್ನೂ ಪ್ರತಿಪಾದಿಸುತ್ತದೆ. ಆಳ್ವಾರರು “ಇಲ್ಲಿ ಎಲ್ಲಾ ಕಾರಣಗಳಿಗಾಗಿಯೂ ನೀನು ನನ್ನನ್ನು ರಕ್ಷಿಸಬೇಕು ಆದರೆ ನೀನು ನನ್ನನ್ನು ಬಹಿಷ್ಕರಿಸಿರುವೆ.” ಎಂದು ನೊಂದುಕೊಳ್ಳುತ್ತಾರೆ.

ಐದನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ನೀನು ನನ್ನನ್ನು ದೂರಮಾಡಿದ ಕಾರಣ ನನ್ನ ಸ್ವತಃ ಪ್ರಯತ್ನದಿಂದ ನಾನು ನಿನ್ನನ್ನು ಪಡೆಯಬಲ್ಲೆ ಎಂಬುದಾಗಿದ್ದರೆ ನಾನು ನನ್ನದು ಎಂಬ ಯಾವುದಾದರೂ ಸ್ಥಿತಿಯುಂಟೆ? ನಾನು ಒಡನೆ ನಾಶವಾಗುತ್ತೇನೆ.”
ಪ್ಪೋರವಿಟ್ಟಿಟ್ಟೆನ್ನೈ ನೀ ಪುಱಮ್ ಪೋಕ್ಕಲುತ್ತಾಲ್, ಪಿನ್ನೈ ಯಾನ್
ಆರೈಕೊಣ್ಡು ಎತ್ತೈ ಅನ್ದೋ ಎನದೆನ್ಬದೆನ್ ಯಾನೆನ್ಬದೆನ್,
ತೀರ ಇರುಮ್ಬುಣ್ಡ ನೀರದುಪೋಲ ಎನ್ನಾರುಯಿರೈ
ಆರ ಪ್ಪರುಗ , ಎನಕ್ಕಾರಾವಮುದಾನಾಯೇ ॥

ಕಾದ ಕಬ್ಬಿಣವು ನೀರನ್ನು ತಕ್ಷಣ ಹೀರುವಂತೆ, ನನ್ನ ಆತ್ಮ ತೃಷೆಯನ್ನು ತಣಿಸಲು ನೀನು ಸರಿಸಾಟಿಯಿಲ್ಲದ ಅಮೃತ, ನಾನು ನಿನ್ನನ್ನು ಸಂಪೂರ್ಣವಾಗಿ ಕುಡಿದುಬಿಟ್ಟಿದ್ದೇನೆ. ನೀನು ನನ್ನನ್ನು ವ್ಯರ್ಥವಾಗಿ ನಿನ್ನಿಂದ ಹೊರತಾಗಿರುವ ಈ ಲೌಕಿಕ ಆನಂದದಲ್ಲಿ ವ್ಯಸ್ತವಾಗಲು ಎಸೆದುಬಿಟ್ಟರೆ, ನಾನು ಯಾವ ಗುರಿಯನ್ನು ಮುಟ್ಟುತ್ತೇನೆ? ಮತ್ತು ಯಾರ ಜೊತೆಯಲ್ಲಿ ಇರುತ್ತೇನೆ? ಅಯ್ಯೋ! ನನ್ನ ಹತ್ತಿರ ನನ್ನದು ಎಂದು ಹೇಳಿಕೊಳ್ಳಲು ಯಾವ ವಸ್ತುವೂ ಇಲ್ಲ. ನಾನು ಎಂದು ಹೇಳಿಕೊಳ್ಳಲು ಯಾವ ಸ್ವತಂತ್ರವಾಗಿ ಕಾರ್‍ಯವನ್ನು ಮಾಡುವ ಆತ್ಮವೂ ಇಲ್ಲ. ಇದರ ಅರ್ಥ ಇಲ್ಲಿ ಬೇರೇನೂ ಉಳಿದಿಲ್ಲ. ಆಳ್ವಾರರು ತದ್ವಿರುದ್ಧವಾಗಿ ಅತ್ಯಂತ ನಿರಾಶೆಗೊಂಡು ಹೇಳುತ್ತಾರೆ, “ಆರೈಕ್ಕೊಣ್ಡು ಎತ್ತೈ” ಮತ್ತು ಆಳ್ವಾರರು ಹೇಳುತ್ತಾರೆ, “ಇರುಮ್ಬುಣ್ಡ ನೀರ್‌ಪೋಲ್ ಎನ್ ಆತ್ಮಾವೈ ಮುಱ್ಱ ಪರುಗಿನಾನ್” ಎಂದರೆ “ನೀನು ನನ್ನನ್ನು ಪೂರ್ತಿಯಾಗಿ ಆನಂದಗೊಂಡು ಕುಡಿದುಬಿಟ್ಟಿದ್ದೀಯ” ಎಂದು.

ಆರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ನೀನು ಪೆರಿಯ ಪಿರಾಟ್ಟಿಯ ಮೇಲೆ ಇರುವ ದೃಢತೆಯನ್ನು ನನ್ನ ಮೇಲೆಯೂ ಇರಿಸಿದ್ದೀಯ. ನೀನು ನನ್ನ ದೇಹದ/ಸ್ವಭಾವದ ಮೇಲೆ ಅತ್ಯಂತ ಪ್ರೀತಿಯನ್ನು ತೋರಿಸಿ, ನನ್ನನ್ನು ನುಂಗಿರುವೆ. ಕರುಣೆಯಿಂದ ನನ್ನನ್ನು ನಿರ್ಲಕ್ಷಿಸದೇ ಬೇಗನೆ ಸ್ವೀಕರಿಸು.”
ಎನಕ್ಕಾರಾವಮುದಾಯ್ ಎನದಾವಿಯೈ ಇನ್ನುಯಿರೈ,
ಮನಕ್ಕಾರಾಮೈ ಮನ್ನಿ ಉಣ್ಡಿಟ್ಟಾಯ್ ಇನಿ ಉಣ್ಡೊೞಿಯಾಯ್,
ಪುನಕ್ಕಾಯಾನಿಱತ್ತ ಪುಣ್ಡರೀಕಕ್ಕಣ್ ಶೆಙ್ಗನಿವಾಯ್,
ಉನಕ್ಕೇಱ್ಕುಮ್ ಕೋಲಮಲರ್‌ ಪಾವೈಕ್ಕು ಅನ್ಬಾ ಎನ್ನನ್ಬೇಯೋ ॥

ಸ್ತ್ರೀಯ ಸಹಜಗುಣ ಅದಕ್ಕೆ ತಕ್ಕಂತೆ ಮನೋಭಾವವನ್ನು ಹೊಂದಿರುವ ಲಕ್ಷ್ಮಿಗೆ ನೀನು ಅತ್ಯಂತ ಪ್ರೀತಿಪಾತ್ರನು, ಪುಷ್ಪದಲ್ಲೇ ಹುಟ್ಟಿರುವ, ನಿನಗೆ ಸರಿಸಾಟಿಯಾದ ರೂಪವನ್ನು ಹೊಂದಿರುವ, . ಕಾಯಂಪೂ ಹೂವಿನಂತೆ ಬಣ್ಣವನ್ನು ಹೊಂದಿರುವ ನಿನಗೆ ಸರಿಯಾದ ಜೋಡಿಯಾಗಿರುವ, ಕಮಲದ ಹೂವನ್ನು ಹೋಲುವ ದಿವ್ಯ ಕಣ್ಣುಗಳನ್ನು ಮತ್ತು ಕೆಂಪಾದ ದಿವ್ಯ ತುಟಿಗಳನ್ನು ಹೊಂದಿರುವ ಶ್ರೀಲಕ್ಷ್ಮಿಯು ಸರಿಯಾದ ಆನಂದ ತರುವವಳು. ಓಹ್! ನೀನು ನನ್ನ ಪ್ರೇಮದ ಸಂಕೇತವಾಗಿರುವೆ. ನೀನು ನನ್ನ ಸ್ವಭಾವವನ್ನು/ದೇಹವನ್ನು ಮತ್ತು ನನ್ನ ವಿಶಿಷ್ಟವಾದ ಆತ್ಮವನ್ನು ನಿರಂತರವಾಗಿ ಆನಂದಿಸಿರುವೆ. ನೀನು ನನ್ನನ್ನು ಅಂಥ ಆನಂದಿಸುವ ವ್ಯಕ್ತಿತ್ವವಾಗಿದ್ದು, ನಿನ್ನ ಹೃದಯವು ಅಂತಹ ಆಸೆಯಿಂದ ಅತೃಪ್ತಿಯನ್ನು ಹೊಂದಬಾರದು. ಈಮೇಲಾದರೂ ನಾನು ನಿನ್ನನ್ನು ಆನಂದಿಸಲು ನೀನು ಅನುಮತಿಸಬೇಕು.

ಏಳನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ನೀನು ನನ್ನನ್ನು ಸಂಸಾರ ಸಾಗರದಿಂದ ಕರುಣೆಯಿಂದ ಮೇಲಕ್ಕೆತ್ತಿದ್ದೀಯ ಮತ್ತು ಪೆರಿಯ ಪಿರಾಟ್ಟಿಯ ಜೊತೆಗೆ ನೀನು ಸಮಾಗಮವಾದಂತೆ ಅವಳ ಸೇವಕನಾದ ನನ್ನಲ್ಲೂ ಒಂದಾಗಿರುವೆ. ನೀನು ಶ್ರೀ ಭೂಮಿ ಪಿರಾಟ್ಟಿಯನ್ನು ಪ್ರಳಯ ಕಾಲದ ಸಮುದ್ರದಿಂದ ಮೇಲೆತ್ತಿರುವ ಹಾಗೆ ಮತ್ತು ಹಾಲಿನ ಸಮುದ್ರವನ್ನು ಕಡೆದು ಪೆರಿಯ ಪಿರಾಟ್ಟಿಯನ್ನು ಹೊರಗೆ ತೆಗೆದು, ಅವರೊಂದಿಗೆ ಒಂದಾದ ಹಾಗೆ. ನನ್ನ ಮೇಲೆ ಅಪರಿಮಿತ ಪ್ರೀತಿಯನ್ನು ತೋರಿದ ನಿನ್ನನ್ನು ನಾನು ಪಡೆದ ಮೇಲೆ, ನೀನು ತಪ್ಪಿಸಿಕೊಂಡು ಹೋಗಲು ನಾನು ಬಿಡುತ್ತೇನೆಯೇ?”
ಕೋಲಮಲರ್ ಪಾವೈಕ್ಕು ಅನ್ಬಾಗಿಯ ಎನ್ ಅನ್ಬೇಯೋ,
ನೀಲವರೈ ಇರಣ್ಡು ಪಿಱೈ ಕವ್ವಿ ನಿಮಿರ್ನ್ದದೊಪ್ಪ,
ಕೋಲವರಾಗಮೊನ್‍ಱಾಯ್ ನಿಲಮ್ ಕೋಟ್ಟಿಡೈಕ್ಕೊಣ್ಡ ಎನ್ದಾಯ್,
ನೀಲಕ್ಕಡಲ್ ಕಡೈನ್ದಾಯ್ ಉನ್ನೈ ಪೆಱ್ಱು ಇನಿ ಪ್ಪೋಕ್ಕುವನೋ ॥

ನೀನು ಸುಂದರವಾದ ಆನಂದಮಯವಾದ ಪಿರಾಟ್ಟಿಯ ಮೇಲೆ ಇಟ್ಟಿರುವ ಪ್ರೀತಿಯನ್ನೇ ನನ್ನ ಮೇಲೂ ಇಟ್ಟಿರುವೆ. ಓಹ್! ನನ್ನ ಸ್ವಾಮಿಯೇ, ವಿಶಿಷ್ಟವಾದ ದೈಹಿಕ ಅಂದವನ್ನು ಹೊಂದಿರುವ ಅನನ್ಯವಾದ ಮಹಾವರಾಹ ಮೂರ್ತಿಯೇ! ನೀನು ಇಡೀ ಭೂಮಿಯನ್ನು ನಿನ್ನ ಕೋರೆ ದಾಡಿಯಲ್ಲಿ ಹಿಡಿದುಕೊಂಡಿರುವೆ. ಆ ರೂಪವು ಒಂದು ಎತ್ತರದ ನೀಲಿ ಪರ್ವತವು ಎರಡು ಅರ್ಧ ಚಂದ್ರಗಳನ್ನು ಹಿಡಿದುಕೊಂಡು ಮೇಲೇರುವ ಹಾಗಿದೆ. ಓಹ್! ನಿನ್ನ ಭಕ್ತರನ್ನು ಸಲಹಲು ನೀಲಿಯ ಬಣ್ಣದ ಸಾಗರವನ್ನು ಕಡಿದು ಕಷ್ಟದ ಕೆಲಸದಲ್ಲಿ ತೊಡಗಿದವನೇ! ನಿನ್ನನ್ನು ಹೊಂದಿ ಸಂಪೂರ್ಣವಾಗಿ ನನ್ನ ಕೈಯ್ಯಲ್ಲಿ ಹಿಡಿದ ಮೇಲೆ , ನಾನು ನಿನ್ನನ್ನು ತಪ್ಪಿಸಿಕೊಂಡು ಹೋಗಲು ಬಿಟ್ಟೇನೆಯೆ? “ನೀಲಕ್ಕಡಲ್” ಎಂದರೆ ಅಮೂಲ್ಯ ನೀಲಿ ಮುತ್ತು ರತ್ನಗಳನ್ನೊಳಗೊಂಡ ಕಡಲು ಎಂದೂ ಅರ್ಥವಿದೆ.

ಎಂಟನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಅರ್ಥ ಮಾಡಿಕೊಳ್ಳಲು ಮತ್ತು ಪಡೆಯಲು ತುಂಬಾ ಕಷ್ಟವಾಗಿರುವ ನಿನ್ನನ್ನು ಪಡೆದ ಮೇಲೆ , ನಿನ್ನನ್ನು ಹೋಗಬಿಡುವುದು ಸಾಧ್ಯವೇ ಇಲ್ಲ.”
ಪೆಱ್ಱಿನಿ ಪ್ಪೋಕ್ಕುವನೋ ಉನ್ನೈ ಎನ್ ತನಿಪ್ಪೇರುಯಿರೈ,
ಉಱ್ಱ ಇರುವಿನೈಯಾಯ್ ಉಯಿರಾಯ್ ಪ್ಪಯನಾಯ್ ಅವೈಯಾಯ್,
ಮುಱ್ಱ ಇಮ್ಮೂವುಲಗುಮ್ ಪೆರುಮ್ ತೂಱಾಯ್ ತ್ತೂಱ್ಱಿಲ್ ಪುಕ್ಕು,
ಮುಱ್ಱಕ್ಕರನ್ದೊಳಿತ್ತಾಯ್ ಎನ್ ಮುದಲ್ ತನಿ ವಿತ್ತೇಯೋ ॥

ನೀನು ಎರಡು ರೀತಿಯ ಕರ್ಮಗಳನ್ನು ನಿಯಂತ್ರಿಸುತ್ತೀಯ. ಅವುಗಳು ಪುಣ್ಯ ಮತ್ತು ಪಾಪ. ನೀನು ಆತ್ಮದ ನಿಯಂತ್ರಕ. ನೀನೇ ಆ ಎರಡು ಕರ್ಮಗಳ ಫಲವಾದ ಆನಂದ ಮತ್ತು ದುಃಖದ ಪೋಷಕ. ಮಹಾ ಪೊದೆಯಂತಿರುವ ಮೂಲಭೂತ ವಸ್ತುಗಳನ್ನು ಹೊಂದಿರುವ ಮೂರು ಲೋಕಗಳನ್ನು ಸಂಪೂರ್ಣವಾಗಿ ನೀನು ನಿನ್ನ ಪ್ರಕಾರಮ್ ಆಗಿ ಹೊಂದಿರುವೆ. ನೀನು ಈ ಮೂಲಭೂತವಾದ ವಸ್ತುವಾದ ಮಹಾ ಪೊದೆಯನ್ನು ಹೊಕ್ಕಿ , ಯಾರಿಗೂ ಕಾಣದಂತೆ, ಎಲ್ಲರಿಗೂ ತಿಳಿಯ ಪಡದ ಹಾಗೆ ಅವಿತಿರುವೆ. ಓಹ್! ನೀನು ವಿಶಿಷ್ಟವಾದ ಕಾರಣ ಮತ್ತು ಮೂಲ ಒಳ್ಳೆಯ ಕರ್ಮದ ಫಲ ನನಗೆ. ನಿನ್ನನ್ನು ಪಡೆದ ಮೇಲೆ, ನಿನ್ನಿಂದ ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲವೆಂಬ ಸ್ಥಿತಿಯನ್ನು ತಲುಪಿದ ಮೇಲೆ, ನಿನ್ನನ್ನು ಹೋಗಬಿಡುವುದು ಸಾಧ್ಯವೇ? ‘ಓ’ ಎಂಬ ಶಬ್ದವು ಅವರ ಅಗಲಿಕೆಯ ದುಃಖದ ಪ್ರತೀಕವಾಗಿದೆ.

ಒಂಬತ್ತನೆಯ ಪಾಸುರಮ್:
ಎಂಪೆರುಮಾನರು ಕೇಳುತ್ತಾರೆ, “ಇಡೀ ಬ್ರಹ್ಮಾಂಡವನ್ನು ನನ್ನ ರೂಪವನ್ನಾಗಿ ನೋಡಿದ ಮೇಲೆ, ಇನ್ನೇನು ಬೇಕು ನಿನಗೆ?” ಅದಕ್ಕೆ ಆಳ್ವಾರರು ಹೇಳುತ್ತಾರೆ, “ಅದು ನನಗೆ ತೃಪ್ತಿಯಾಗಿಲ್ಲ. ನಾನು ನಿನ್ನನ್ನು ವಿಶಿಷ್ಟವಾದ ಪರಿಪೂರ್ಣವಾದ ತಿರುನಾಡಿನಲ್ಲಿ (ಪರಮಪದದಲ್ಲಿ) ನೋಡಲು ಇಷ್ಟ ಪಡುತ್ತೇನೆ.”
ಮುದಲ್ ತನಿವಿತ್ತೇಯೋ ಮುೞುಮೂವುಲಗಾದಿಕ್ಕೆಲ್ಲಾಮ್,
ಮುದಲ್ ತನಿ ಉನ್ನೈ ಉನ್ನೈ ಎನೈನಾಳ್ ವನ್ದು ಕೂಡುವನ್ ನಾನ್,
ಮುದಲ್ ತನಿ ಅಙ್ಗುಮಿಙ್ಗುಮ್ ಮುೞುಮುಱ್ಱುಱುವಾೞ್ ಪಾೞಾಯ್,
ಮುದಲ್ ತನಿ ಶೂೞ್‍ನ್ದಗನ್‍ಱಾೞ್‍ನ್ದು ಉಯರ್ನ್ದ ಮುಡಿವಿಲೀಯೋ ॥

ಓಹ್! ನೀನೇ ಮೂರು ಲೋಕಗಳಿಗೂ ಮೂಲವಾದ ಮತ್ತು ಸಮರ್ಥವಾದ ಕಾರಣ. ಅನನ್ಯ ಲೌಕಿಕ ಕಾರಣ. ಅಂಡಾಕಾರದ ಬ್ರಹ್ಮಾಂಡದ ಒಳಗೆ ಮತ್ತು ಹೊರಗೆ ಇರುವ ಎಲ್ಲಾ ವಸ್ತುಗಳಲ್ಲೂ ನೀನೇ ಹರಡಿಕೊಂಡಿರುವೆ. ಸಮೃದ್ಧತೆಯ ಮತ್ತು ಫಲವತ್ತತೆಯ ಮೂಲ ಕಾರಣವಾದ ಮೂಲ ಪ್ರಕೃತಿಯ ನಿಯಂತ್ರಕನಾಗಿರುವೆ. ನೀನೇ ಮೂಲವಾದ ಮತ್ತು ಸರಿಸಾಟಿಯಿಲ್ಲದ ನಿಯಂತ್ರಕನಾಗಿ ಎಲ್ಲಾ ಹತ್ತು ದಿಕ್ಕಿನಲ್ಲೂ ಉಪಸ್ಥಿತನಿದ್ದು, ವ್ಯಾಪಿಸಿಕೊಂಡಿರುವೆ. ನಾನು ಯಾವಾಗ ಅಲ್ಲಿಗೆ ಬಂದು ಎಲ್ಲದಕ್ಕೂ ಮೂಲವಾಗಿರುವ , ಯಾರೊಂದಿಗೂ ಹೋಲಿಸಲಾಗದ ನಿನ್ನೊಂದಿಗೆ ಒಂದಾಗುತ್ತೇನೆ?

ಹತ್ತನೆಯ ಪಾಸುರಮ್ :
ಆಳ್ವಾರರು ಪೆರಿಯ ಪಿರಾಟ್ಟಿಗೆ ಹೇಳುತ್ತಾರೆ, ಎಂಪೆರುಮಾನರು ಅವರ ಆಸೆಯನ್ನು ನೆರವೇರಿಸದೆ, ತೃಪ್ತಿಯಾಗಿ ಇರಲು ಬಿಡದಿರುವಂತೆ ಮಾಡಲು ಬಹಳ ಶೋಕದಿಂದ ಕೂಗಿ ಕರೆಯುತ್ತಾರೆ. ಪರಿಪೂರ್ಣನಾದ ಎಂಪೆರುಮಾನರು ಆಳ್ವಾರರ ಕರೆಗೆ ಓಗೊಟ್ಟು ಅವರಿರುವಲ್ಲಿಗೆ ಬರುತ್ತಾರೆ ಮತ್ತು ಆಳ್ವಾರರ ಜೊತೆಗೆ ಒಂದಾಗಿ ಕೂಡಿಕೊಳ್ಳುತ್ತಾರೆ. ಅದನ್ನು ಕಂಡ ಆಳ್ವಾರರು ಹೇಳುತ್ತಾರೆ, “ನೀನು ಬಂದು ಅಳತೆಗೆ ಮೀರಿದ ಪ್ರಕೃತಿ, ಆತ್ಮಗಳು, ಮತ್ತು ನಿನ್ನ ಸಂಕಲ್ಪದ ರೂಪದಲ್ಲಿರುವ ಜ್ಞಾನಕ್ಕಿಂತಲೂ ಹೆಚ್ಚಾಗಿರುವ ನನ್ನ ಕಾತುರದ ಹಂಬಲವನ್ನು ದೂರಮಾಡಿದೆ. ನನ್ನ ಆಸೆಯು ಈಗ ನೆರವೇರಿತು.”
ಶೂೞ್‍ನ್ದಗನ್‍ಱಾೞ್‍ನ್ದು ಉಯರ್ನ್ದ ಮುಡಿವಿಲ್ ಪೆರುಮ್ ಪಾೞೇಯೋ,
ಶೂೞ್‍ನ್ದದನಿಲ್ ಪೆರಿಯ ಪರನನ್ಮಲರ್ ಚ್ಚೋದೀಯೋ,
ಶೂೞ್‍ನ್ದದನಿಲ್ ಪೆರಿಯ ಶುಡರ್ ಞಾನಿನ್ಬಮೇಯೋ,
ಶೂೞ್‍ನ್ದದನಿಲ್ ಪೆರಿಯ ಎನ್ನವಾವಱಚ್ಚೂೞ್‍ನ್ದಾಯೇ ॥

ಸುತ್ತಮುತ್ತಲೂ ಹರಡಿರುವ, ದೂರದೂರದವರೆಗೂ ವ್ಯಾಪಿಸಿರುವ, ಎಲ್ಲಾ ದಿಕ್ಕಿನಲ್ಲೂ ಕೆಳಮಟ್ಟದ ಮತ್ತು ಮೇಲ್ಮಟ್ಟದ ಪ್ರದೇಶಗಳಲ್ಲಿಯೂ ಹರಡಿಕೊಂಡಿರುವ, ಅಳತೆಗೆ ಸಿಗದ, ಭೋಗಮ್ ಮತ್ತು ಮೋಕ್ಷಮ್ ಇವೆರಡರ ನಡುವಿನ ಆಟದ ಮೈದಾನವಾಗಿರುವ, ಪ್ರಕಾರವಾಗಿರುವ, ಪ್ರಕೃತಿಯನ್ನು ನೀನು ಹೊಂದಿರುವೆ. ಜ್ಞಾನದಿಂದ ಹಬ್ಬುತ್ತಿರುವ , ಪ್ರಕೃತಿಗಿಂತಲೂ ದೊಡ್ಡದಾಗಿರುವ ಆತ್ಮಗಳಿಗೆ ನೀನು ನಿಯಂತ್ರಕನಾಗಿರುವೆ. ಶ್ರೇಷ್ಠನಾಗಿ ಮತ್ತು ಸ್ವಯಮ್ ಪ್ರಕಾಶತ್ವಮ್ ಮುಂತಾದ ಶ್ರೇಷ್ಠ ಪ್ರವೃತ್ತಿಗಳನ್ನು ಹೊಂದಿರುವ ಪ್ರಕಾರಮ್ ಆಗಿ ಜ್ಞಾನದ ಕಿರಣಗಳಿಂದ ಹೊಳೆಯುತ್ತಿರುವೆ. ವಸ್ತುಗಳಲ್ಲಿ ಮತ್ತು ಆತ್ಮಗಳಲ್ಲಿ ವ್ಯಾಪಿಸಿರುವ , ಅವುಗಳಿಗಿಂತಲೂ ಬಹಳ ದೊಡ್ಡವನಾಗಿರುವ, ಕಲ್ಯಾಣ ಗುಣಗಳಿಂದ ಸ್ವಪ್ರಕಾಶಮಾನವಾಗಿರುವ, ಜ್ಞಾನ ಮತ್ತು ಆನಂದದಿಂದ ಗುರುತಿಸಲ್ಪಡುವ ನಿಜ ಸಹಜ ಸ್ವಭಾವವನ್ನು ಹೊಂದಿರುವೆ. ನಿನ್ನಲ್ಲೇ ಸಂಪೂರ್ಣವಾಗಿ ಆನಂದವಾಗಿ ಮುಳುಗಿರುವಂತೆ ಸಾಯುಜ್ಯ ಭೋಗಮ್ ನನ್ನು ನನಗೆ ಕರುಣಿಸಿರುವೆ. ನಿಜವಾದ ಸ್ವಭಾವ, ಅನೇಕ ಕಲ್ಯಾಣ ಗುಣಗಳು , ರೂಪ, ಆಭರಣಗಳು, ಆಯುಧಗಳು, ದಿವ್ಯ ಮಡದಿಯರು, ಸೇವಕರು ಮತ್ತು ದಿವ್ಯ ವಾಸಸ್ಥಾನಗಳನ್ನು ಹೊಂದಿರುವೆ. ನನ್ನ ಆಳವಾದ ಪ್ರೀತಿಯನ್ನು ತೃಪ್ತಿಗೊಳಿಸಿ , ಅವುಗಳಿಂದ ಸುತ್ತುವರಿದ ಮೂರು ತತ್ವಗಳನ್ನು ಮತ್ತು ಅದಕ್ಕಿಂತಾ ನೀನು ಹೆಚ್ಚಾಗಿರುವೆ. ಇಲ್ಲಿ ಎಲ್ಲಾ ವಾಕ್ಯಗಳಲ್ಲಿರುವ ‘ಓ’ ಕಾರವು ಆಳ್ವಾರರ ಮಹದಾನಂದವನ್ನು ತಿಳಿಯಪಡಿಸುತ್ತದೆ, “ವಾಹ್! ಎಂತಹ ಅದ್ಭುತವಾಗಿದೆ” ಎಂದು.

ಹನ್ನೊಂದನೆಯ ಪಾಸುರಮ್:
ಭಗವಂತನನ್ನು ಪಡೆದ ಮಾರ್ಗವನ್ನು ಆಳ್ವಾರರು ಮುಖ್ಯವಾಗಿಸಿ, ಜ್ಞಾನವಂತರಾಗಿ ಜನ್ಮವನ್ನೆತ್ತಿರುವ ಎಲ್ಲರಿಗೂ ತಿರುವಾಯ್ಮೊೞಿಯ ಶ್ರೇಷ್ಠತ್ವವನ್ನು ಕಾರಣವಾಗಿರಿಸಿಕೊಂಡು ಆಳ್ವಾರರು ವಿವರಿಸಿದ್ದಾರೆ.
ಅವಾವಱಚ್ಚೂೞ್ ಅರಿಯೈ ಅಯನೈ ಅರನೈ ಅಲಱ್ಱಿ,
ಅವಾವಱ್ಱು ವೀಡುಪೆಱ್ಱ ಕುರುಗೂರ್ ಚ್ಚಡಗೋಪನ್ ಶೊನ್ನ,
ಅವಾವಿಲ್ ಅನ್ದಾದಿಗಳಾಲ್ ಇವೈ ಆಯಿರಮುಮ್ , ಮುಡಿನ್ದ
ಅವಾವಿಲ್ ಅನ್ದಾದಿ ಇಪ್ಪತ್ತಱಿನ್ದಾರ್ ಪಿಱನ್ದಾರ್ ಉಯರ್ನ್ದೇ ॥

ಆಳ್ವಾರ್ ತಿರುನಗರಿಯ ನಮ್ಮಾಳ್ವಾರರು ಹರಿಯನ್ನು ಅತ್ಯಂತ ಆಳವಾದ ಪ್ರೀತಿಯಿಂದ ಕೂಗಿ ಕರೆದರು ಮತ್ತು ಅವನ ಕೊನೆಯಿಲ್ಲದ ಸಮಾಗಮದಿಂದ ಅತೀವ ತೃಪ್ತಿ ಹೊಂದಿದರು. ಬ್ರಹ್ಮನ ಅಂತರಾತ್ಮವನ್ನು ಮತ್ತು ಪಾಶುಪತ ಶಾಲೆಯ ಗುರಿಯನ್ನು ಹೊಂದಿರುವ ರುದ್ರರ ಹಿಂಬಾಲಕರ ಪರಮಗುರಿ ಮತ್ತು ಅಂತರಾತ್ಮವನ್ನು ನಾಶಮಾಡಿದ ಗುಣವುಳ್ಳವರು. ಆಳ್ವಾರರ ಆಸೆಯು ಪೂರ್ಣವಾಯಿತು ಮತ್ತು ಅವರು ಸ್ವತಂತ್ರರಾದರು, (ಮೋಕ್ಷ ಹೊಂದಿದರು) , ಅವರು ಈ ಸಾವಿರ ಪಾಸುರಗಳನ್ನು ಅಂತಾದಿ ಪದ್ಯಗಳ ರೂಪದಲ್ಲಿ ಹಾಡಿದ್ದಾರೆ. ಯಾರು ಈ ಅಂತಾದಿ ಪದ್ಯಗಳನ್ನು ಈ ಪದಿಗೆಯಲ್ಲಿ, ಸಾವಿರ ಪಾಸುರಗಳ ಜೊತೆಯಲ್ಲಿ ಅರ್ಥಪೂರ್ಣವಾಗಿ ಧ್ಯಾನಿಸುತ್ತಾರೋ, ಅವರ ಆಸೆಗಳು ಸಂಪೂರ್ಣವಾಗುತ್ತದೆ ಮತ್ತು ಅವರು ಹುಟ್ಟಿನಿಂದಲೇ ಶ್ರೇಷ್ಠರೆನಿಸಿಕೊಳ್ಳುತ್ತಾರೆ. “ಅವಾವಱ ಚೂೞ್ ಅರಿ” ಎಂದರೆ “ಯಾರು ತಮ್ಮ ಕಲ್ಯಾಣ ಗುಣಗಳಿಂದ ಸುತ್ತುವರೆಯಲ್ಪಟ್ಟ ತಮ್ಮ ಭಕ್ತರ ಆಸೆಗಳನ್ನು ಪೂರೈಸಿ, ಆ ಭಕ್ತರನ್ನು ಸ್ವೀಕರಿಸುವರೋ , “ ಎಂದೂ ವಿವರಣೆ ನೀಡಲಾಗಿದೆ.

ತಿರುವಾಯ್ಮೊೞಿ ಸಂಪೂರ್ಣಮ್
ನಮ್ಮಾಳ್ವಾರ್ ತಿರುವಡಿಗಳೇ ಶರಣಮ್
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-10-10-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org