ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ನಾಲ್ಕನೇ ತಿರುಮೊಳಿ – ತೆಳ್ಳಿಯಾರ್ ಪಲರ್

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ

ನಾಚ್ಚಿಯಾರ್ ತಿರುಮೊಳಿ

<< ಮೂರನೇ ತಿರುಮೊಳಿ – ಕೋಳಿ ಅಳೈಪ್ಪದನ್

ಎಂಪೆರುಮಾನನು ಗೋಪಿಕೆಯರ ವಸ್ತ್ರಗಳನ್ನು ತೆಗೆದುಕೊಂಡ ನಂತರ ಕುರುಂದಮ್ ಮರದ ಮೇಲೆ ಹತ್ತಿದನು. ಹುಡುಗಿಯರು ಅವನನ್ನು ಪ್ರಾರ್ಥಿಸಿದರು ಮತ್ತು ಅವನನ್ನು ನಿಂದಿಸಿದರು ಮತ್ತು ಹೇಗೋ ತಮ್ಮ ಉಡುಪನ್ನುಮರಳಿ ಪಡೆದರು. ಎಂಪೆರುಮಾನ್ ಮತ್ತು ಹುಡುಗಿಯರು ಒಟ್ಟಿಗೆ ಸೇರಿ ಆನಂದಿಸಿದರು. ಆದಾಗ್ಯೂ, ಈ ಸಂಸಾರದಲ್ಲಿ ಯಾವುದೇ ಸಂತೋಷವು ಶಾಶ್ವತವಾಗಿ ಉಳಿಯುವುದಿಲ್ಲವಾದ್ದರಿಂದ, ಎಂಪೆರುಮಾನ್ ಅವರಿಂದ ಬೇರ್ಪಟ್ಟು ಅವರ ಸಂತೋಷವು ನಿಲ್ಲಿಸಲ್ಪಟ್ಟಿತು. ಅವನು ಅವರ ವಸ್ತ್ರವನ್ನು ತೆಗೆದುಕೊಂಡು ಹೋದರೂ ಅವನ ಜೊತೆಯಲ್ಲಿದ್ದು ‘ಕೂಡಲ್’ ದಲ್ಲಿ ತೊಡಗುವುದೇ ಲೇಸು ಎಂದು ಹುಡುಗಿಯರು ಭಾವಿಸಿದ್ದರು. ‘ಕೂಡಲ್’ ಜ್ಯೋತಿಷ್ಯ ಹೇಳುವಿಕೆಯನ್ನು ಹೋಲುತ್ತದೆ. ಹಳ್ಳಿಗಳಲ್ಲಿ, ಹುಡುಗಿಯರು ತಾವು ಸಂಭವಿಸಲು ಬಯಸುವ ಘಟನೆಯ ಬಗ್ಗೆ ಯೋಚಿಸುತ್ತಾರೆ ಮತ್ತು, ಕಣ್ಣು ಮುಚ್ಚಿಕೊಂಡು ಮರಳಿನಲ್ಲಿ ವೃತ್ತವನ್ನು ಬರೆಯುತ್ತಾರೆ. ವೃತ್ತವು ಸರಿಯಾಗಿ ಸೇರಿಕೊಂಡರೆ, ಅವರು ಆರಂಭದಲ್ಲಿ ಯೋಚಿಸಿದ ಯಾವುದೇ ಘಟನೆಯು ನಿಜವಾಗುತ್ತದೆ ಎಂದು ಅವರು ನಂಬುತ್ತಾರೆ (ಅಂದರೆ, ಅದು ಸಂಭವಿಸುತ್ತದೆ). ಭಗವತ್ ವಿಷಯಗಳು (ಎಂಪೆರುಮಾನ್‌ಗೆ ಸಂಬಂಧಿಸಿದ ವಿಷಯಗಳು) ಶ್ರೇಷ್ಠ ಮತ್ತು ಮಧುರವಾಗಿರುವುದರಿಂದ, ಅವು ಭಕ್ತರಿಗೆ ಭಗವಂತನನ್ನು ಹೇಗಾದರೂ ಸಾಧಿಸುವಂತೆ ಪ್ರಚೋದಿಸುತ್ತವೆ, ಅವರುಗಳು ಅಚೇತನ (ಅಪ್ರಜ್ಞಾಪೂರ್ವಕ) ಘಟಕಗಳಿಗೆ (ಕೂಡಲ್ ಮುಂತಾದ) ಕಟ್ಟುಬೀಳುವಂತಾದರೂ ಕೂಡ. ಅವನಿಂದ ಬೇರ್ಪಟ್ಟಾಗ ಅವನು ತನ್ನ ಅನುಯಾಯಿಗಳಲ್ಲಿ ದಿಗ್ಭ್ರಮೆಯನ್ನು ಉಂಟುಮಾಡದಿದ್ದರೆ, ಎಂಪೆರುಮಾನ್‌ಗೆ ಯಾವುದೇ ಶ್ರೇಷ್ಠತೆ ಇಲ್ಲ ಎಂದು ತೋರುತ್ತದೆ! ಹೀಗಾಗಿ, ಈ ಪದಿಗ (ದಶಕ) ಅವರು ಕಣ್ಣನನ್ನು ಪಡೆಯಲು ಕೂಡಲ್ ನಲ್ಲಿ ತೊಡಗುತ್ತಾರೆ.

ಮೊದಲನೇ ಪಾಸುರಂ. ತಿರುಮಾಲಿರುಂಶೋಲೈನಲ್ಲಿ ಮದುಮಗನಂತಿರುವ ಎಂಪೆರುಮಾನ್ ಶ್ರೀರಂಗದಲ್ಲಿ ಮಲಗಿದ್ದಾನೆ. ಶ್ರೀರಂಗಂ ಎಂಪೆರುಮಾನ್‌ಗೆ ಗೌಪ್ಯ ಸೇವೆಯನ್ನು ಅಪೇಕ್ಷಿಸಿ, ಅವಳು ಕೂಡಲ್ (ಭವಿಷ್ಯ ಹೇಳುವ) ಪ್ರಯತ್ನಿಸುತ್ತಿದ್ದಾಳೆ.

ತೆಳ್ಳಿಯಾರ್ ಪಲರ್ ಕೈ ತೊಳುಮ್ ದೇವನಾರ್

ವಳ್ಳಲ್  ಮಾಲಿರುಂಶೋಲೈ ಮಣಾಳನಾರ್

ಪಳ್ಳಿ ಕೊಳ್ಳುಮ್ ಇಡತ್ತು ಅಡಿ ಕೊಟ್ಟಿಡ

ಕೊಳ್ಳುಮ್ ಆಗಿಲ್ ನೀ ಕೂಡಿಡು ಕೂಡಲೇ

ಓ ವೃತ್ತವೇ! ಎಲ್ಲರಲ್ಲಿಯೂ ಅತ್ಯಂತ ಶ್ರೇಷ್ಠನಾದ, ನಿತ್ಯರಿಂದ (ಶ್ರೀವೈಕುಂಠಂನ ಶಾಶ್ವತ ನಿವಾಸಿಗಳು) ಮತ್ತು ಮುಕ್ತರಿಂದ (ಸಂಸಾರದಿಂದ ಶ್ರೀವೈಕುಂಠವನ್ನು ತಲುಪಿದವರು) ತಮ್ಮ ಅಧಿಪತಿಯಾಗಿ ಪೂಜಿಸಲ್ಪಡುವ, ಸ್ಪಷ್ಟ ಜ್ಞಾನವನ್ನು ಹೊಂದಿರುವ, ಮಹಾನುಭಾವನು ದಯಾಪೂರ್ವಕವಾಗಿ ತಿರುಮಾಲಿರುಂಶೋಲೈಯಲ್ಲಿರುವವನು, ಶ್ರೀರಂಗದಲ್ಲಿ ದಿವ್ಯರೂಪದಲ್ಲಿ ಮಲಗಿದ್ದಾನೆ. ಆ ಎಂಪೆರುಮಾನ್ ತನ್ನ ದೈವೀಕ ಪಾದಗಳಿಗೆ ದಾಸ್ಯವನ್ನು ಮಾಡಲು ನನ್ನನ್ನು ಕೇಳಲು ಯೋಚಿಸುತ್ತಾನೆಂದರೆ, ನೀನು ಅದನ್ನು (ಸರಿಯಾದ ವೃತ್ತವನ್ನು ರಚಿಸುವ ಮೂಲಕ) ಮಾಡುತ್ತೀಯೆ.

ಎರಡನೇ ಪಾಸುರಂ. “ಎಂಪೆರುಮಾನ್ ನನ್ನನ್ನು ಸಾಧಿಸಲು ಕೆಲವು ಮಾರ್ಗಗಳನ್ನು ಅನುಸರಿಸುತ್ತಿರುವಂತೆ ತೋರುತ್ತಿದೆ. ಈ ಕಾರಣಕ್ಕಾಗಿ ನೀವು ನನಗೆ ಸಹಾಯ ಮಾಡುವಿರಾ?” ಎಂದು ಅವಳು ಹೇಳುತ್ತಾಳೆ.

ಕಾಟ್ಟಿಲ್ ವೇಂಗಡಂ ಕಣ್ಣಪುರ ನಗರ್

ವಾಟ್ಟಮಿನ್ರಿ ಮಗಿಳ್ನ್ದುರೈ   ವಾಮನನ್

ಓಟ್ಟರಾ ವಂದು ಎನ್ ಕೈಪ್ಪಟ್ರಿ ತನ್ನೊಡುಮ್

ಕೂಟ್ಟುಮಾಗಿಲ್ ನೀ ಕೂಡಿಡು ಕೂಡಲೇ

ಓ ವೃತ್ತವೇ! ಅರಣ್ಯದೊಳಗಿರುವ ತಿರುಮಾಲಿರುಂಶೋಲೈಯಲ್ಲಿ ಶಾಶ್ವತವಾಗಿ ನೆಲೆಸಿರುವ ಎಂಪೆರುಮಾನ್, ಪಟ್ಟಣದೊಳಗಿರುವ ತಿರುಕ್ಕಣ್ಣಪುರದಲ್ಲಿ ವಾಮನನಾಗಿ ಅವತರಿಸಿದ ಎಂಪೆರುಮಾನ್, ನನ್ನ ಬಳಿಗೆ ಓಡಿ ಬಂದರೆ, ನನ್ನ ಕೈ ಹಿಡಿದು ಕರೆದುಕೊಂಡು ಹೋಗುವುದಾದರೆ, ಪೂರ್ಣ ವೃತ್ತ ರಚಿಸಿ, ಅದನ್ನು ಸಾಧ್ಯ ಮಾಡು.

ಮೂರನೇ ಪಾಸುರಂ. ಕಣ್ಣನು ಬರುತ್ತಾನೆಯೇ ಎಂದು ಅವಳು ಕೂಡಲ್‌ನೊಂದಿಗೆ ಖಚಿತಪಡಿಸಿಕೊಳ್ಳುತ್ತಿದ್ದಾಳೆ.

ಪೂಮಗನ್ ಪುಗಳ್ ವಾನವರ್ ಪೋಟ್ರುದರ್ಕಾಮಗನ್

ಅಣಿ ವಾಣುದಲ್ ದೇವಕಿ

ಮಾಮಗನ್ ಮಿಗು ಶೇರ್ ವಶುದೇವರ್ ತಮ್

ಕೋಮಗನ್ ವರಿಲ್ ಕೂಡಿಡು ಕೂಡಲೇ

ಓ ವೃತ್ತವೇ!  ಎಂಪೆರುಮಾನನ್ ಸರ್ವೋತ್ತಮನು, ನಾಭಿಯಂತಹ ದಿವ್ಯ ಕಮಲದಲ್ಲಿ ಜನಿಸಿದ ಬ್ರಹ್ಮನಿಂದ ಹಾಗು ಪ್ರಸಿದ್ಧ ನಿತ್ಯಸೂರಿಗಳಿಂದ ಸ್ತುತಿಸಲ್ಪಡುವವನು. ಸುಂದರವಾದ ಮತ್ತು ಕಾಂತಿಯುತ ಹಣೆಯನ್ನು ಹೊಂದಿರುವ ದೇವಕಿ ದೇವಿಯ ಪ್ರಖ್ಯಾತ ಪುತ್ರನಾಗಿದ್ದಾನೆ. ಅವನು  ಶ್ರೀ ವಸುದೇವರ ಭವ್ಯ ಪುತ್ರನಾಗಿದ್ದಾನೆ ಹಾಗೂ ಅನೇಕ ಮಂಗಳಕರ ಗುಣಗಳನ್ನು ಹೊಂದಿದ್ದಾನೆ. ಅಂತಹ ಕಣ್ಣನು ನನ್ನ ಬಳಿಗೆ ಬರುವುದಾದರೆ, ನೀವು ಪೂರ್ಣ ವಲಯವಾಗಿ ಸೇರಿ ಅದನ್ನು ಸಾಧಿಸಿ.

ನಾಲ್ಕನೆಯ ಪಾಸುರಂ. ಅದ್ಭುತ ಚಟುವಟಿಕೆಗಳನ್ನು ನಡೆಸಿದ ಕಣ್ಣನು ಬರುತ್ತಾನೆಯೇ ಎಂದು ಅವಳು ಕೂಡಲ್‌ನೊಂದಿಗೆ ಪರಿಶೀಲಿಸುತ್ತಾಳೆ.

ಆಯ್ಚಿ ಮಾರ್ಗಳುಂ ಆಯರುಮ್ ಅಂಜಿಡ

ಪೂತ್ತ ನೀಳ್ ಕಡುಂಬೇರಿ ಪ್ಪುಗ ಪ್ಪಾಯ್ಂದು

ವಾಯ್ತ ಕಾಳಿಯನ್ ಮೇಲ್ ನಡಮ್ ಆಡಿಯ

ಕೂತ್ತನಾರ್ ವರಿಲ್ ಕೂಡಿಡು ಕೂಡಲೇ

ಓ ವೃತ್ತವೇ!  ಅವನು ಎತ್ತರದ ಮತ್ತು ಹೂವುಗಳಿಂದ ಅರಳಿದ ಕದಂಬ (ಭಾರತೀಯ ಓಕ್ವುಡ್) ಮರದಿಂದ ಹಾರಿದಾಗ ಅವನ ಪಾದಗಳು (ಯಮುನಾ) ನೀರಿನಲ್ಲಿ ಪ್ರವೇಶಿಸಿ, ಗುಂಪಿನ ಹುಡುಗಿಯರು ಮತ್ತು ಹುಡುಗರನ್ನು ಹೆದರಿಸಿದವು. ನೃತ್ಯದಲ್ಲಿ ಪರಿಣಿತನಾದ ಅವನು ಅದೃಷ್ಟವಂತನಾದ ಕಾಳಿಯನನ ತಲೆಯ ಮೇಲೆ ನೃತ್ಯ ಮಾಡಿದನು (ಎಂಪೆರುಮಾನನ ದಿವ್ಯ ಪಾದಗಳು ಅವನ ತಲೆಯ ಮೇಲೆ ಬಂದಿದ್ದರಿಂದ). ಅಂತಹ ಕಣ್ಣನು ನನ್ನ ಬಳಿಗೆ ಬರುವುದಾದರೆ, ನೀವು ಪೂರ್ಣ ವಲಯವಾಗಿ ಸೇರಿ ಅದನ್ನು ಸಾಧಿಸಿ.

ಐದನೇ ಪಾಸುರಂ. ತನ್ನ ಶತ್ರುಗಳನ್ನು ನಾಶಮಾಡುವ ಮೂಲ ಸ್ವಭಾವವನ್ನು ಹೊಂದಿರುವ ಕಣ್ಣನು ಬರುತ್ತಾನೆಯೇ ಎಂದು ನೋಡಲು ಅವಳು ಕೂಡಲ್‌ನೊಂದಿಗೆ ಪರಿಶೀಲಿಸುತ್ತಾಳೆ.

ಮಾಡ ಮಾಳಿಗೈ ಶೂಳ್ ಮದುರೈ ಪತಿ

ನಾಡಿ ನನ್ ತೆರುವಿನ್ ನಡುವೇ ವಂದಿಟ್ಟು

ಓಡೈ ಮಾ ಮದ ಯಾನೈ ಉದೈತ್ತವನ್

ಕೂಡುಮಾಗಿಲ್ ನೀ ಕೂಡಿಡು ಕೂಡಲೇ

ಕಣ್ಣನು ಕುವಲಯಾ ಪೀಡಮ್ ಅನ್ನು ಒದ್ದು ಕೊಂದನು, (ಕಂಸನ ರಾಜ ಆನೆ) ಇದು ಅಲಂಕರಿಸಲ್ಪಟ್ಟು ಉತ್ಸಾಹಿತವಾಗಿತ್ತು. ಅಂತಹ ಕಣ್ಣನು ಮಧುರಾ ನಗರದ ನಮ್ಮ ಬೀದಿಯನ್ನು ಹುಡುಕಿದರೆ, ಅದು ಬೃಹತ್ ಮಹಲುಗಳಿಂದ ಸುತ್ತುವರೆದಿದೆ. ಅಲ್ಲಿ ಎಲ್ಲರೂ ನಮ್ಮನ್ನು ನೋಡುವಂತೆ ಅವನು ನಮ್ಮೊಂದಿಗೆ ಸೇರಿಕೊಂಡರೆ, ನೀವು ಪೂರ್ಣ ವೃತ್ತವಾಗಿ ಸೇರಿ ಅದನ್ನು ಸಾಧಿಸಿ.

ಆರನೇ ಪಾಸುರಂ. ತನಗಿಂತ ಮೊದಲು ಮತ್ತು ತನಗಾಗಿ ಅವತರಿಸಿದ ಅವನು ಬಂದು ತನ್ನೊಂದಿಗೆ ಒಂದಾಗುತ್ತಾನೆಯೇ ಎಂದು ನೋಡಲು ಅವಳು ಕೂಡಲ್‌ನೊಂದಿಗೆ ಪರಿಶೀಲಿಸುತ್ತಾಳೆ.

ಅಟ್ರವನ್ ಮರುದಮ್ ಮುರಿಯ ನಡೈ

ಕಟ್ರವನ್ ಕಂಜನೈ ವಂಜನೈಯಿಲ್

ಶೆಟ್ರವನ್  ತಿಗಳುಮ್ ಮದುರೈ ಪದಿ

ಕೊಟ್ರವನ್ ವರಿಲ್ ಕೂಡಿಡು ಕೂಡಲೇ

ಓ ವೃತ್ತವೇ!  ನನಗಾಗಿ ಮಾತ್ರ ಅವನು ಇಲ್ಲಿದ್ದ; ಮರುಧ ವೃಕ್ಷಗಳು (ಇಬ್ಬರು ರಾಕ್ಷಸರು ವ್ಯಾಪಿಸಿರುವ ಯಮಳಾರ್ಜುನ ವೃಕ್ಷಗಳು) ಬೇರ್ಪಟ್ಟು ಅಪ್ಪಳಿಸುವಂತೆ ಅವನು ಮಗುವಿನ ಹೆಜ್ಜೆಗಳನ್ನು ಇಟ್ಟಿದ್ದ; ಅವನು ಮೋಸದಿಂದ ಕಂಸನನ್ನು ಕೊಂದನು. ಪ್ರಕಾಶಿತ ಮಥುರಾ ನಗರಕ್ಕೆ ರಾಜನಾದ ಆ ಕಣ್ಣನು ನನ್ನ ಬಳಿಗೆ ಬರುವುದಾದರೆ, ನೀವು ಪೂರ್ಣ ವೃತ್ತವಾಗಿ ಸೇರಿ ಅದನ್ನು ಸಾಧಿಸಿ.

ಏಳನೇ ಪಾಸುರಂ. ತನ್ನ ಶತ್ರುಗಳನ್ನೆಲ್ಲ ಸಂಹರಿಸಿದ ಕಣ್ಣನು ತನ್ನೊಂದಿಗೆ ಒಂದಾಗಲು ಬರುತ್ತಾನೆಯೇ ಎಂದು ನೋಡಲು ಅವಳು ಕೂಡಲ್‌ನೊಂದಿಗೆ ಪರಿಶೀಲಿಸುತ್ತಾಳೆ.

ಅನ್ರಿನ್ನಾದನ ಶೆಯ್ ಶಿಶುಪಾಲನುಮ್

ನಿನ್ರ ನೀಳ್ ಮರುದುಮ್ ಎರುದುಮ್  ಪುಳ್ಳುಮ್

ವೆನ್ರಿ ವೇಲ್ ವಿರಲ್ ಕಂಜನುಂ ವೀಳ ಮುನ್

ಕೊನ್ರವನ್ ವರಿಲ್ ಕೂಡಿಡು ಕೂಡಲೇ

ಓ ವೃತ್ತವೇ!  ಶಿಶುಪಾಲನು ಹಿಂದಿನ ಕಾಲದಲ್ಲಿ ದುಷ್ಟ ಕೃತ್ಯಗಳಲ್ಲಿ ತೊಡಗಿದ್ದನು; ಅವಳಿ ಮರುದ ಮರಗಳು ನೆಟ್ಟಗೆ ನಿಂತಿದ್ದವು; ಏಳು ಎತ್ತುಗಳು ಕಾಳಗಕ್ಕೆ ಸಿದ್ಧವಾಗಿದ್ದವು; ರಾಕ್ಷಸ ಬಕಾಸುರನು ಕೊಕ್ಕರೆಯ ರೂಪದಲ್ಲಿ ಬಂದನು; ಕಂಸನಿಗೆ ವಿಜಯಶಾಲಿ ಈಟಿ ಮತ್ತು ಬಲವಿತ್ತು. ಎಲ್ಲರೂ ಆ ಕೃತ್ಯಗಳನ್ನು ನೋಡುವ ರೀತಿಯಲ್ಲಿ ಕಣ್ಣನು ಅವರೆಲ್ಲರನ್ನೂ ನಿರ್ನಾಮ ಮಾಡಿದನು. ಅಂತಹ ಕಣ್ಣನು ನನ್ನ ಬಳಿಗೆ ಬಂದರೆ, ನೀವು ಪೂರ್ಣ ವಲಯವಾಗಿ ಸೇರಿ ಅದನ್ನು ಸಾಧಿಸಿ.

ಎಂಟನೆಯ ಪಾಸುರಂ. ಅವಳು ಉತ್ಸಾಹ ಮತ್ತು ವಾತ್ಸಲ್ಯವನ್ನು ಹೊಂದಿದ್ದಾಳೆ. ಅವನು ರಕ್ಷಕ ಮತ್ತು ಸರಳ ಅಸ್ತಿತ್ವವೂ ಹೌದು. ಈ ಸ್ಥಿತಿಯಲ್ಲಿ ಅವನು ಬರುತ್ತಾನೆಯೇ ಎಂದು ಅವಳು ಕೇಳುತ್ತಾಳೆ.

ಆವಲ್ ಅನ್ಬುಡೈಯಾರ್ ತಮ್ ಮನತ್ತು ಅನ್ರಿ

ಮೇವಲನ್ ವಿರೈ ಶೂಳ್ ತುವರಾಪದಿ

ಕಾವಲನ್ ಕನ್ರು ಮೇಯ್ತು ವಿಳೈಯಾಡುಮ್

ಕೋವಲನ್ ವರಿಲ್ ಕೂಡಿಡು ಕೂಡಲೇ

ಓ ವೃತ್ತವೇ! ತನ್ನ ಬಗ್ಗೆ ಉತ್ಸಾಹ ಮತ್ತು ವಾತ್ಸಲ್ಯ ಹೊಂದಿರುವವರ ಹೃದಯವನ್ನು ಹೊರತುಪಡಿಸಿ ಅವನು ಬೇರೆ ಯಾವುದನ್ನೂ ತೊಡಗಿಸಿಕೊಳ್ಳುವುದಿಲ್ಲ. ಅವನು ಪರಿಮಳಯುಕ್ತ ದ್ವಾರಕೆಯ ರಕ್ಷಕ. ಅವನು ಕರುಗಳೊಂದಿಗೆ ಆಟವಾಡುವ ಗೋಪಾಲ (ಹಸುಗಳ ರಕ್ಷಕ). ಅಂತಹ ಕಣ್ಣನು ನನ್ನ ಬಳಿಗೆ ಬಂದರೆ, ನೀವು ಪೂರ್ಣವಲಯವಾಗಿ ಸೇರಿ ಅದನ್ನು ಸಾಧಿಸಿ.

ಒಂಭತ್ತನೇ ಪಾಸುರಂ. ತನ್ನ ಸ್ವಾಧೀನದಲ್ಲಿದ್ದ ಲೋಕಗಳನ್ನು ಅಳೆದವನು ತನ್ನನ್ನೂ ತನ್ನೊಂದಿಗೆ ಸ್ವೀಕರಿಸುವನೋ ಎಂದು ನೋಡಲು ಅವಳು ಕೂಡಲ್‌ನೊಂದಿಗೆ ಪರಿಶೀಲಿಸುತ್ತಾಳೆ.

ಕೊಂಡ ಕೋಲ ಕುರಳುರುವಾಯ್ ಶೆನ್ರು

ಪಂಡು ಮಾವಲಿತನ್ ಪೆರು ವೇಳ್ವಿಯಿಲ್

ಅಂಡಮುಮ್ ನಿಲನುಮ್ ಅಡಿ ಒನ್ರಿನಾಲ್

ಕೊಂಡವನ್ ವರಿಲ್ ಕೂಡಿಡು ಕೂಡಲೇ

ಓ ವೃತ್ತವೇ! ಅವನು ಕರುಣೆಯಿಂದ, ಮಹಾಬಲಿಯು ಧಾರ್ಮಿಕ ವಿಧಿಗಳನ್ನು ನಡೆಸುತ್ತಿದ್ದ ಸ್ಥಳಕ್ಕೆ, ಸುಂದರವಾದ ಆಭರಣಗಳಿಂದ ಅಲಂಕರಿಸಲ್ಪಟ್ಟ ವಾಮನನಾಗಿ ಹೋಗಿದ್ದನು. ಅವನು ಮೇಲಿನ ಮತ್ತು ಕೆಳಗಿನ ಪ್ರಪಂಚಗಳನ್ನು ತಲಾ ಒಂದು ಹೆಜ್ಜೆಯಿಂದ ತ್ರಿವಿಕ್ರಮನಾಗಿ ಅಳೆದನು. ಅಂತಹ ತ್ರಿವಿಕ್ರಮನು ನನ್ನ ಬಳಿಗೆ ಬಂದರೆ, ನೀವು ಪೂರ್ಣ ವಲಯವಾಗಿ ಸೇರಿ ಅದನ್ನು ಸಾಧಿಸಿ.

ಹತ್ತನೇ ಪಾಸುರಂ. ಗಜೇಂದ್ರಾಳ್ವಾನ್ ಅವರನ್ನು ರಕ್ಷಿಸಿದ ಎಂಪೆರುಮಾನ್ ಬಂದು ಅವರನ್ನೂ ರಕ್ಷಿಸುತ್ತಾರೆಯೇ ಎಂದು ನೋಡಲು ಅವಳು ಕೂಡಲ್‌ನೊಂದಿಗೆ ಪರಿಶೀಲಿಸುತ್ತಾಳೆ.

ಪಳಗು ನಾನ್ಮರೈಯಿನ್ ಪೊರುಳಾಯ್

ಮದಮ್ ಒಳುಗು ವಾರಣಮ್ ಉಯ್ಯ ಅಳಿತ್ತ

ಎಮ್ ಅಳಗನಾರ್ ಅಣಿ ಆಯ್ಚಿಯರ್ ಶಿಂದೈಯುಳ್

ಕುಳಗನಾರ್ ವರಿಲ್ ಕೂಡಿಡು ಕೂಡಲೇ

ಓ ವೃತ್ತವೇ! ಅವನು (ಎಂಪೆರುಮಾನ್) ನಾಲ್ಕು ಕಾಲಾತೀತ ವೇದಗಳ ಆಂತರಿಕ ಅರ್ಥ. ಅವನು ತನ್ನ ದುಃಖಗಳನ್ನು ತೊಲಗಿಸಿ ನಂತರ ಬದುಕುವಂತೆ ಉತ್ಸಿತ ಗಜೇಂದ್ರಾಳ್ವಾನ್ ಮೇಲೆ ತನ್ನ ಕರುಣೆಯನ್ನು ಸುರಿಸಿದನು. ಅವನು ನಮ್ಮನ್ನು ಆಕರ್ಷಿಸುವ ಸೌಂದರ್ಯವನ್ನು ಹೊಂದಿದ್ದಾನೆ. ದನ ಕಾಯುವ ಹೆಣ್ಣುಮಕ್ಕಳ ಹೃದಯದಲ್ಲಿ ಕೋಮಲವಾಗಿ ಉಳಿಯುತ್ತಾನೆ. ಅಂತಹ ಕಣ್ಣನು ಬರುವುದಾದರೆ, ನೀವು ಪೂರ್ಣ ವಲಯವಾಗಿ ಸೇರಿ ಅದನ್ನು ಸಾಧಿಸಿ.

ಹನ್ನೊಂದನೇ ಪಾಸುರಂ. ಇದನ್ನು ಕಲಿತವರಿಗೆ ಆಗುವ ಫಲವನ್ನು ತಿಳಿಸುವ ಮೂಲಕ ಅವಳು ಪದಿಗವನ್ನು ಪೂರ್ಣಗೊಳಿಸುತ್ತಾಳೆ.

ಊಡಲ್ ಕೂಡಲ್ ಉಣರ್ದಲ್ ಪುಣರ್ದಲೈ

ನೀಡು ನಿನ್ರ ನಿರೈಪುಗಳ್ ಆಯ್ಚಿಯರ್

ಕೂಡಲೈಕುಳಲ್ ಕೋದೈ ಮುನ್ ಕೂರಿಯ

ಪಾಡಲ್ ಪತ್ತುಮ್ ವಲ್ಲಾರ್ಕು ಇಲ್ಲೈ ಪಾವಮೇ

ಗೋವಳ ಹುಡುಗಿಯರು ಬಹಳ ಸಮಯದಿಂದ ಊಡಲ್‌ನಲ್ಲಿ ತೊಡಗುತ್ತಾರೆ, ಪ್ರೇಮ-ಜಗಳ (ಎಂಪೆರುಮಾನ್‌ನೊಂದಿಗೆ) ಮತ್ತು ನಂತರ ಅವನೊಂದಿಗೆ ಪುನಃ ಒಂದಾಗುತ್ತಾರೆ. ಅವರು ದೋಷಗಳ ಬಗ್ಗೆ ನೆನಪಿಸುತ್ತಾರೆ ಮತ್ತು ಮತ್ತೆ ಒಕ್ಕೂಟದಲ್ಲಿ ತೊಡಗುತ್ತಾರೆ. ಆಂಡಾಳ್ (ನಾನು), ಸುಂದರವಾದ ವಸ್ತ್ರಗಳನ್ನು ಹೊಂದಿದ್ದು, ಸಂಪೂರ್ಣ ಶ್ರೇಷ್ಠತೆಯನ್ನು ಹೊಂದಿರುವ ಅಂತಹ ಗೋಪಾಲಕ ಹುಡುಗಿಯರ ಕೂಡಲ್‌ನೊಂದಿಗೆ ತೊಡಗಿಸಿಕೊಳ್ಳುವ ಬಗ್ಗೆ ಈ ಹತ್ತು ಪಾಸುರಂಗಳನ್ನು ರಚಿಸಿದೆ. ಈ ಪಾಸುರಂಗಳನ್ನು ಪಠಿಸುವ ಸಾಮರ್ಥ್ಯವುಳ್ಳವರಿಗೆ ಎಂಪೆರುಮಾನ್‌ನಿಂದ ಬೇರ್ಪಟ್ಟ ಪಾಪ ಮತ್ತು ಅದರಿಂದಾಗುವ ದುಃಖವಿರುವುದಿಲ್ಲ.

ಅಡಿಯೇನ್ ಯತಿರಾಜ ರಾಮಾನುಜ ದಾಸನ್ 

ಮೂಲ: https://divyaprabandham.koyil.org/index.php/2020/05/nachchiyar-thirumozhi-4-simple/

ಸಂಗ್ರಹಣಾ ಸ್ಥಾನ https://divyaprabandham.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org