ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:
ಪಾಸುರ-61 (ಉಣ್ಣಿಲ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಭಯಾನಕವಾದ ಇನ್ದ್ರಿಯಗಳಿಂದ ಭಯಪಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ
ಉಣ್ಣಿಲಾ ಐವರುಡನ್ ಇರುತ್ತಿ ಇವ್ವುಲಗಿಲ್
ಎಣ್ಣಿಲಾ ಮಾಯನ್ ಎನೈ ನಲಿಯ ಎಣ್ಣುಗಿನ್ಱಾನ್
ಎನ್ಱು ನಿನೈನ್ದು ಓಲಮಿಟ್ಟ ಇನ್ ಪುಗೞ್ ಸೇರ್ ಮಾಱನ್ ಎನ
ಕುನ್ಱಿ ವಿಡುಮೇ ಪವಕ್ ಕನ್ಗುಲ್
ಮಧರವಾದ ವೈಭವವನ್ನು ಉಳ್ಳವರಾದ ಆೞ್ವಾರ್ ,ಅನಂತವಾದ ಅತ್ಯಾಶ್ಚರ್ಯಕರ ಕಾರ್ಯಗಳನ್ನು ಮಾಡುವ ಸರ್ವೇಶ್ವರನು ನಮ್ಮ ಒಳಗಿರುವ ಶತ್ರುರೂಪಿಗಳಾದ ಐದು ಇನ್ದ್ರಿಯಗಳೊಂದಿಗೆ ಈ ಸಂಸಾರದಲ್ಲಿ ಇಟ್ಟು ನಮ್ಮನ್ನು ಹಿಂಸಿಸಲು ಚಿಂತಿಸುತಿದ್ದಾನೆ ಎಂದು ರೋದಿಸಿದ ಆೞ್ವಾರಿನ ಕೇವಲ ಚಿಂತೆಯಿಂದಲೇ ಅಂಧಕಾರದ ರತಿಯಾದ ಸಂಸಾರವು ತೊಲಗುವುದು.
ಪಾಸುರ-62 (ಕನ್ಗುಲ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ದುಃಖದಿಂದ ರೋಧಿಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ಕನ್ಗುಲ್ ಪಗಲರತಿ ಕೈವಿನ್ಜಿ ಮೋಗಮುಱ
ಅನ್ಗದನೈಕ್ ಕಣ್ಡೋರ್ ಅರನ್ಗರೈಪ್ ಪಾರ್ತ್ತು – ಇನ್ಗಿವಳ್ಪಾಲ್
ಎನ್ ಸೆಯ ನೀರ್ ಎಣ್ಣುಗಿನ್ಱದೆನ್ನು ನಿಲೈ ಸೇರ್ ಮಾಱನ್
ಅನ್ಜೊಲುಱ ನೆನ್ಜು ವೆಳ್ಳೈಯಾಮ್
ಪರಾಂಕುಶ ನಾಯಕಿಯ ದುಃಖ ಹಗಲು ರಾತ್ರಿ ಹೆಚ್ಚಿಸುತ್ತಿರುವುದನ್ನು ಕಂಡು °ಖಿನ್ನರಾಗಿ ಮೂರ್ಚಿತರಾದರು. ಆಕೆಯನ್ನು ಹೀಗೆ ನೋಡಿ ಪರಾಂಕುಶ ನಾಯಕಿಯ ತಾಯಿಯ ಭಾವದಲ್ಲಿ ಶ್ರೀರಂಗನಾಥನನ್ನು, “ಇವಳ ವಿಷಯದಲ್ಲಿ ನೀವು ಚಿಂತಿಸುತಿದ್ದೀರಿ.” ಈ ಶ್ರೀಸೂಕ್ತಿಗಳ ಧ್ಯಾನದಿಂದ (ಧ್ಯಾಯಕನ) ಹೃದಯವು ಶದ್ಧವಾಗುವುದು..
ಪಾಸುರ-63 (ವೆಳ್ಳಿಯನಾಮಮ್….) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಮ್ಮ ಹೃದಯವನ್ನು ತೆನ್ತಿರುಪ್ಪೇರಿನಲ್ಲಿ ಕಳೆದುಕೊಳ್ಳುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ವೆಳ್ಳಿಯ ನಾಮಮ್ ಕೇಟ್ಟು ವಿಟ್ಟಗನ್ಱ ಪಿನ್ ಮೋಗಮ್
ತೆಳ್ಳಿಯ ಮಾಲ್ ತೆನ್ತಿರುಪ್ಪೇರ್ ಸೆನ್ಱು ಪುಗ – ಉಳ್ಳಮ್ ಅನ್ಗೇ
ಪಟ್ರಿ ನಿನ್ಱ ತನ್ಮೈ ತನ್ಮೈ ಪಗರುಮ್ ಸಟಕೋಪಱ್ಕು
ಅಟ್ರವರ್ಗಳ್ ತಾಮ್ ಆೞಿಯಾರ್
ಆೞ್ವಾರ್ ಭಗವಂತನ ಮಧುರ ದಿವ್ಯ ನಾಮಗಳನ್ನು ಆಕೆಯ ತಾಯಿಯಿಂದ ಕೇಳಿ ಎಚ್ಚರಗೊಂಡು ಹಿತಜ್ಞನಾದ ಸರ್ವೇಶ್ವರನು ತನ್ನ ಕರುಣೆಯಿಂದ ನೆಲಸಿರುವ ತೆನ್ತಿರುಪ್ಪೇರಿಗೆ ಹೋಗಲು ಹೊರಟರು. ಇಂತಹ ಆೞ್ವಾರಿನ ವಿಷಯದಲ್ಲಿ ಅನನ್ಯಾರ್ಹರಾದವರು ಆಳವಾದ ಹೃದಯ ಉಳ್ಳವರು.
ಪಾಸುರ-64 (ಆೞಿ ವಣ್ಣನ್) ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನಿನ ವಿಜಯದ ಚರಿತ್ರೆಯ ಕಲಾಪವನ್ನು ವಿವರಿಸುವ ಆೞ್ವಾರಿನ ಪಾಸುರಗಳ ಛಾಯೆಯಲ್ಲೇ ತಮ್ಮ ಕೃಪೆಯಿಂದ ವಿವರಿಸುತ್ತಾರೆ
ಆೞಿವಣ್ಣನ್ ತನ್ ವಿಸಯಮ್ ಆನವೈ ಮುಟ್ರುಮ್ ಕಾಟ್ಟಿ
ವಾೞ್ ಇದನಾಲ್ ಎನ್ಱು ಮಗಿೞ್ನ್ದು ನಿಱ್ಕ – ಊೞಿಲ್ ಅವೈ
ತನ್ನೈ ಇನ್ಱು ಪೋಲ್ ಕಣ್ಡು ತಾನ್ ಉರೈತ್ತ ಮಾಱನ್ ಸೊಲ್
ಪನ್ನುವರೇ ನಲ್ಲದು ಕಱ್ಪಾರ್
ಎಲ್ಲಾ ಶಾಸ್ತ್ರಗಳ ರಸವನ್ನು ಕಲಿತ ದಶರಥ , ವಾಸುದೇವ ಮುಂತಾದವರು ಸರ್ವೇಶ್ವರನ ವಿಭವಾವತಾರದ ವಿಜಯವನ್ನು ಅತ್ಯಂತವಾಗಿ ಪ್ರೀತಿಸಿದರು. ಇದನ್ನು ಚೆನ್ನಾಗಿ ಅರಿತ ಆಳ್ವಾರ್, ಈ ಸಂಸಾರದ ಜನರು ಹೇಗೆ ಭಗವದ್ ಅನುಭವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸರಿಯಾದ ರೀತಿಯಲ್ಲಿ ಬಹಳ ಕೃಪೆಯಿಂದ ನಮಗೆ ವಿವರಿಸುತ್ತಾರೆ.
ಪಾಸುರಮ್- 65. (ಕಟ್ರೋರ್…) ಈ ಪಾಸುರದಲ್ಲಿ ಮಾಮುನಿಗಳು ಜನರಿಗೆ ಎಂಪೆರುಮಾನಿನ ವಿಜಯವನ್ನು ತಿಳಿಸುವ ಅವತಾರಗಳಲ್ಲಿ ಏಕೆ ಲಗತ್ತಿಲ್ಲ ಎಂದು ಆಳ್ವಾರ್ ದುಃಖ ಪಡುವುದನ್ನು ಕುರಿತು ತಮ್ಮ ಕರುಣೆಯಿಂದ ವಿವಿರಿಸುತ್ತಾರೆ.
ಕಟ್ರೋರ್ ಕರುದುಮ್ ವಿಷಯಂಗಳುಕ್ಕಾಯ್
ಪಟ್ಟ್ರಾಮ್ ವಿಭವ ಗುಣಪ್ ಪಣ್ಬುಗಳೈ
ಉಟ್ಟ್ರುಣರ್ನನ್ದು ಮಣ್ಣಿಲ್ ಉಳ್ಳೋರ್ ತಮ್ ಇಳವೈ ವಾಯ್ನ್ದುರೈತ್ತ
ಮಾರನ್ ಸೊಲ್ ಪಣ್ಣಿಲ್ ಇನಿದಾನ ತಮಿಳ್ ಪಾ!
ಎಂಪೆರುಮಾನಿನ ವಿಜಯವನ್ನು ಹಾಗು ದೈವೀಕ ಕಲ್ಯಾಣ ಗುಣಗಳನ್ನು ತೋರಿಸುವ ವಿಭವಾವತಾರಗಳನ್ನು ಎಲ್ಲಾ ಶಾಸ್ತ್ರಗಳನ್ನು ಆಳವಾಗಿ ಕಲಿತ ದಶರಥ ಮತ್ತು ವಾಸುದೇವರು ಬಹಳ ಲಗತ್ತಿಸಿದರು.ಆಳ್ವಾರ್ ಇದನ್ನು ಚೆನ್ನಾಗಿ ಅರಿತು, ಈ ಸಂಸಾರದ ಜೀವಾತ್ಮರು ಇಷ್ಟು ಅಮೂಲ್ಯವಾದ ಭಗವತ್ ಅನುಭವವನ್ನು ಕಳೆದುಕೊಳ್ಳುತ್ತಿದ್ದಾರಲ್ಲಾ ಎಂದು ದುಃಖ ಪಟ್ಟರು. ಇದನ್ನು ನಮಗೆ ಸರಿಯಾದ ರೀತಿಯಲ್ಲಿ ಅತ್ಯಂತ ಕೃಪೆಯಿಂದ ವಿವರಿಸುತ್ತಾರೆ.
ಪಾಸುರ-66 (ಪಾಮರುವು…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನನ್ನು ತನ್ನ ಗುಣಗಳಿಂದ ಕೂಗುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ
ಪಾಮರುವು ವೇದಮ್ ಪಗರ್ಮಾಲ್ ಗುಣನ್ಗಳುಡನ್
ಆಮೞಗು ವೇಣ್ಡಪ್ಪಾಡಾಮ್ ಅವಟ್ರೈತ್ – ತೂಮನತ್ತಾಲ್
ನಣ್ಣಿಯವನೈಕ್ ಕಾಣ ನನ್ಗುರುಗಿಕ್ ಕೂಪ್ಪಿಟ್ಟ
ಅಣ್ಣಲೈ ನಣ್ಣಾರ್ ಏೞೈಯರ್
ಛಂಧೋಬದ್ಧವಾದ ವೇದದಲ್ಲಿ ದೀಪ್ತವಾದ ಎಮ್ಪೆರುಮಾನಿನ ವಿನಯತೆ, ಕಲ್ಯಾಣ ಗುಣಗಳನ್ನು ಅವನ ಸೌಂದರ್ಯವನ್ನು ಅವನ ಪರತ್ವವನ್ನು ಪರಿಗ್ರಹಿಸಿ ಅನುಭವಿಸಿ, ° ಅನುಭವಿಸಲಾರದೆ ಕರಗಿ ‘ಓ’ಎಂದು ಅಳುವ ಆೞ್ವಾರನ್ನು ಸ್ವಾಮಿಯೆಂದು ಆಶ್ರಯಿಸಿದವರು ಅಜ್ಞರು /ದುರ್ಭಾಗ್ಯವಂತರು..
ಪಾಸುರ-67 (ಏೞೈಯರ್ಗಳ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನಿನ ಮುಖದ (ಅವಯವ) ಸೌಂದರ್ಯವು ಅವರನ್ನು ಸತತವಾಗಿ (ವಿರಹತಾಪದಿಂದ) ಹಿಂಸಿಸುತ್ತಿದೆ ಎಂದು ಹೇಳುವ ತಮ್ಮ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ಏೞೈಯರ್ಗಳ್ ನೆಂಜೈ ಇಳಗುವಿಕ್ಕುಮ್ ಮಾಲzಹಗು
ಸೂೞ ವಂದು ತೋನ್ಱಿತ್ ತುಯರ್ ವಿಳೈಕ್ಕ – ಆೞುಮನಮ್
ತನ್ನುಡನೇ ಅವ್ವೞಗೈತ್ ತಾನ್ ಉರೈತ್ತ ಮಾಱನ್ಪಾಲ್
ಮನ್ನುಮವರ್ ತೀವಿನೈ ಪೋಮ್ ಮಾಯ್ನ್ದು
ಮನಸ್ಸು ಒಂದು ಕಡೆಯು ಸ್ಥಿರವಿಲ್ಲದ ಸಂಸಾರಿಗಳ ಹೃದಯವನ್ನು ಕರೆಗಿಸುವಂತೆ, ಎಲ್ಲಕಡೆಯೂ ಹರಡಿ ಸರ್ವತಃ ಕಾಣುವ ಎಮ್ಪೆರುಮಾನಿನ ವಿರಹತಾಪದಿಂದ ದುಃಖಾರ್ಣವದಲ್ಲಿ ಮುಳುಗಿದ್ದ ಆೞ್ವಾರ್ ಇಂತಹ ಶ್ಲಾಗ್ಯವಾದ ಎಮ್ಪೆರುಮಾನಿನ ಸೌಂದರ್ಯವನ್ನು ಅನುಭವಿಸಿ ತಮ್ಮ ಕೃಪೆಯಿಂದ ಹೇಳಿದ ಆೞ್ವಾರನ್ನು ಆಶ್ರಯಿಸಿರುವವರ ಪಾಪಗಳು ನಾಷವಾಗುವುದು.
ಪಾಸುರ-68 (ಮಾಯಾಮಲ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನಿನ ವಿಧವಿಧವಾದ ವಿಷ್ವರೂಪವನ್ನು ಎಮ್ಪೆರುಮಾನ್ ಪ್ರಾಕಾಶಿಸುವುದನ್ನು ಕಂಡು ಆಶ್ಚರ್ಯಚಕಿತರಾಗಿ ಅನುಭವಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ಮಾಯಾಮಲ್ ತನ್ನೈ ವೈತ್ತ ವೈಸಿತ್ತಿರಿಯಾಲೇ
ತೀಯಾ ವಿಸಿತ್ತಿರಮಾಚ್ ಚೇರ್ ಪೊರುಳೋಡಾಯಾಮಲ್
ವಾಯ್ನ್ದು ನಿಱ್ಕುಮ್ ಮಾಯನ್ ವಳಮುರೈತ್ತ ಮಾಱನೈ ನಾಮ್
ಏಯ್ನ್ದುರೈತ್ತು ವಾೞು ನಾಳ್ ಎನ್ಱು
ಆೞ್ವಾರಿನ ಶೇಷತ್ವ ಸ್ವರೂಪವನ್ನು ರಕ್ಷಿಸುತ್ತಾ, ಅವುಗಳ ದೋಷಗಳನ್ನು ಪರಿಗಣಿಸದೆ ಭಿನವಾದ ಪ್ರವ್ರುತ್ತಿ(ನಡತೆ) ಹಾಗು ರೂಪಗಳನ್ನು ಹೋಂದಿರುವ ಅಗ್ನಿ ಮೊದಲಾದ ಪಂಚಭೂತಗಳೋಂದಿಗೆ, 2.) ವಿವಿಧ ರೂಪಗಳಲ್ಲಿರುವ ಚೇತನರೊಂದಿಗೆ ಈ ಅನೇಕ ರೂಪಗಳಲ್ಲೂ, ತಾನು ಇವುಗಳೊಂದಿಗೆ ಇರುವ ಭಗವಾನಿನ ವಿಭೂತಿಯ ವಿಸ್ತರವನ್ನು ಆೞ್ವಾರ್ ತಮ್ಮ ಕೃಪೆಯಿಂದ ವಿವರಿಸಿದರು. ಎಂದು ನಾವು ಇಂತಹ ಆೞ್ವಾರನ್ನು ಸೇರಿ ಅವರ ದಿವ್ಯ ನಾಮಗಳನ್ನು ಕೀರ್ತಿಸುವೆವು.
ಪಾಸುರ-69 (ಎನ್ಱನೈ…) ಈ ಪಾಸುರದಲ್ಲಿ ಮಮುನಿಗಳು ಆೞ್ವಾರ್ ,ಎಮ್ಪೆರುಮಾನ್ ತಮ್ಮಿಂದ ತಿರುವಾಯ್ಮೊೞಿಯನ್ನು ಹಾಡಿಸುವ ಎಮ್ಪೆರುಮಾನಿನ ಕೃತ್ಯದಲ್ಲಿ ಮಘ್ನರಾಗಿ ಹಾಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ಎನ್ಱನೈ ನೀ ಇನ್ಗು ವೈತ್ತದು ಏದುಕ್ಕೆನ ಮಾಲುಮ್
ಎನ್ಱನಕ್ಕುಮ್ ಎನ್ ತಮರ್ಕ್ಕುಮ್ ಇನ್ಬಮದಾಮ್ – ನನ್ಱು ಕವಿ
ಪಾಡ ಎನಕ್ ಕೈಮ್ಮಾಱಿಲಾಮೈ ಪಗರ್ ಮಾಱನ್
ಪಾಡಣೈವಾರ್ಕ್ಕು ಉಣ್ಡಾಮ್ ಇನ್ಬಮ್
ಆೞ್ವಾರ್ ,”ಈ ಸಮ್ಸಾರದಲ್ಲಿ ಅಪ್ರಾಪ್ತನಾದ ನನನ್ನು ಯೇಕೆ ಇಲ್ಲಿಟ್ಟಿದ್ದೀರಿ?”, ಎಂದು ಎಮ್ಪೆರುಮಾನನ್ನು ಕೇಳಿದಾಗ, ಎಮ್ಪೆರುಮಾನ್ “(ನಿಮ್ಮ) ರಮಣೀಯ ಪ್ರಬಂಧದಗಳಿಂದ ನನಗೂ ನನ್ನ ಭಕ್ತರಿಗೂ ಆನಂದವನ್ನು ತರಲು”, ಎಂದು ಉತ್ತರಿಸಿದರು. ಎಮ್ಪೆರುಮಾನ್ ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರವಾಗಿ ನೀಡಲು ಏನುವಿಲ್ಲ ಎಂದು ತಮ್ಮ ಕೃಪೆಯಿಂದ ಹೇಳಿದರು. ಇಂತಃ ಆೞ್ವಾರನ್ನು ಆಶ್ರಯಿಸುವವರು ಆನಂದಗೊಳ್ಳುವರು.
ಪಾಸುರ-70 (ಇನ್ಬಕ್ಕವಿ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಮ್ಮ ದಿವ್ಯ ಪಾದಗಳಿಂದ ಸೇವಿಸಲು ಅವರಲ್ಲಿದ್ದ ತ್ವರೆಯನ್ನು ವ್ಯಕ್ತಪಡೆಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ
ಇನ್ಬಕ್ ಕವಿ ಪಾಡುವಿತ್ತೋನೈ ಇನ್ದಿರೈಯೋಡು
ಅನ್ಬುಟ್ರು ವಾೞ್ ತಿರುವಾಱನ್ವಿಳೈಯಿಲ್ ತುನ್ಬಮಱಕ್
ಕಣ್ಡಡಿಮೈ ಸೆಯ್ಯಕ್ ಕರುದಿಯ ಮಾಱನ್ ಕೞಲೇ
ತಿಣ್ಡಿಱಲೋರ್ ಯಾವರ್ಕ್ಕುಮ್ ದೇವು
ಪೆರಿಯ ಪಿರಾಟ್ಟಿಯಾರೊಂದಿಗೆ ಆನಂದದಿಂದ ವಾಸಿಸುತಿದ್ದ ತಿರುವಾಱನ್ವಿಳೈಯಿನಲ್ಲಿ ತಮ್ಮನ್ನು ಮಧುರವಾದ ತಿರುವಾಯ್ಮೊಳಿಯನ್ನು ಹಾಡಲು ಪ್ರೇರಿಸಿದ ಎಮ್ಪೆರುಮಾನನ್ನು ಕಂಡು ತಮ್ಮ ವ್ಯಸನದ ಶಮನಕ್ಕಾಗಿ ಹಾಗು ದಿವ್ಯ ದಂಪತಿಗಳಿಗೆ ಕೈಂಕರ್ಯವನ್ನು ಮಾಡಲು ಇಛ್ಚಿಸಿದ, ಇಂತ ಆೞ್ವಾರ್ ದೃಢನಂಬಿಕೆ ಉಳ್ಳವರಿಗೆಲ್ಲಾ ಪರಮವಾದ ನಾಥರು.
ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್
ಮೂಲ – https://divyaprabandham.koyil.org/index.php/2020/10/thiruvaimozhi-nurrandhadhi-61-70-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org