ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:
ಪಾಸುರ-51 (ವೈಗಲ್….) ಈ ಪಾಸುರದಲ್ಲಿ ಮಾಮುನಿಗಳು, ವಿರಹ ತಾಪದಿಂದ ಆೞ್ವಾರ್ ಮಾಡುವ ದೂತಪ್ರೇಷಣೆಯನ್ನು ವಿವರಿಸುತ್ತಾರೆ.
ವೈಗಲ್ ತಿರುವಣ್ವಣ್ಡೂರ್ ವೈಗುಮ್ ಇರಾಮನುಕ್ಕು ಎನ್
ಸೆಯ್ಗೈತನೈಪ್ ಪುಳ್ಳೈನನ್ಗಾಳ್ ಸೆಪ್ಪುಮ್ ಎನಕ್ ಕೈಕೞಿನ್ದ
ಕಾದಲುಡನ್ ತೂದು ವಿಡುಮ್ ಕಾರಿಮಾಱನ್ ಕೞಲೇ
ಮೇದಿನಿಯೀರ್ ನೀರ್ ವಣನ್ಗುಮಿನ್
ಭೂಮಿಯ ವಾಸಿಗಳೆ! “ಓ ಪಕ್ಷಿಗಳ ಸಮೂಹವೇ! ತನ್ನ ಕೃಪೆಯಿಂದ ತಿರುವಣ್ವಂದೂರಿನಲ್ಲಿ ಎಂದೂ ನೆಲಸಿರುವ ದಶರಥ ಚಕ್ರವರ್ತಿಯ ಮಗನಿಗೆ (ಶ್ರೀರಾಮನಿಗೆ) ನನ್ನ ಸ್ಥಿತಿಯನ್ನು ಹೇಳಿ” ಎಂದು ಪಕ್ಷಿಗಳನ್ನು ತುಂಬಾ ಪ್ರೀತಿಯಿಂದ ದೂತರಾಗಿ ಕಳುಹಿಸಿದ ಆೞ್ವಾರಿನ ದಿವ್ಯ ಪಾದಗಳನ್ನು ಆರಾಧಿಸು.
ಪಾಸುರ-52 (ಮಿನ್ನಿಡೈಯಾರ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಪ್ರಣಯ ರೋಷದಿಂದ ಎಮ್ಪೆರುಮಾನನ್ನು ದೂರ ತಳ್ಳುವ ಪಾಸುರಗಳ ಛಾಯೆಯಲ್ಲೇ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ಮಿನ್ನಿಡೈಯಾರ್ ಸೇರ್ ಕಣ್ಣನ್ ಮೆತ್ತೆನ ವನ್ದಾನ್ ಎನ್ಱು
ತನ್ನಿಲೈ ಪೋಯ್ಪ್ ಪೆಣ್ಣಿಲೈಯಾಯ್ತ್ ತಾನ್ ತಳ್ಳಿ ಉನ್ನುಡನೇ
ಕೂಡೇನ್ ಎನ್ಱೂಡುಮ್ ಕುರುಗೈಯರ್ಕೋನ್ ತಾಳ್ ತೊೞವೇ
ನಾಡೋಱುಮ್ ನೆನ್ಜಮೇ ನಲ್ಗು
ಓ ಹೃದಯವೇ! ವಿದ್ಯುತ್ ಸದೃಶವಾದ ಸೊಂಟವನ್ನು ಹೋಂದಿದ್ದ ಯುವತಿಯರೊಂದಿಗೆ ಸೇರಿದರಿಂದ ಸ್ವಲ್ಪ ಕಾಲ ವಿಳಂಬದ ನಂತರ ಆಗಮಿಸಿದ ಕೃಷ್ಣನಿಗೆ, “ನಿನ್ನೊಂದಿಗೆ ನಾನು ಸೇರುವುದಿಲ್ಲ” ಎಂದು ತಮ್ಮ ನೆಲೆಯನ್ನು ಬಿಟ್ಟು ನಾಯಿಕಾಭಾವವನ್ನು ಧರಿಸಿದ ನಮ್ಮಾಳ್ವಾರಿನ ದಿವ್ಯ ಪಾದಗಳನ್ನು ಪ್ರತಿದಿನವೂ ಆರಾಧಸಲು ಸಹಕರಿಸು.
ಪಾಸುರ-53 (ನಲ್ಲ ವಲತ್ತಾಲ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನಿನ ಪರಸ್ಪರ-ವಿರುದ್ಧವಾದ ಧರ್ಮಗಳ ವಿಭೂತಿಯನ್ನು ಹೊಂದಿರುವ ಎಮ್ಪೆರುಮಾನನ್ನು ಸ್ತುತಿಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ನಲ್ಲ ವಲತ್ತಾಲ್ ನಮ್ಮೈಚ್ ಚೇರ್ತ್ತೋನ್ ಮುನ್ ನಣ್ಣಾರೈ
ವೆಲ್ಲುಮ್ ವಿರುತ್ತ ವಿಭೂದಿಯನ್ ಎನ್ಱು ಎಲ್ಲೈಯಱತ್
ತಾನಿರುನ್ದು ವಾೞ್ತ್ತುಮ್ ತಮಿೞ್ ಮಾಱನ್ ಸೊಲ್ವಲ್ಲಾರ್
ವಾನವರ್ಕ್ಕು ವಾಯ್ತ್ತ ಕುರವರ್
ಓ ಹೃದಯವೇ! ಹಗಲು ರಾತ್ರಿ ಎನ್ನುವ ಭೇದವಿಲ್ಲದೆ ,ಸದಾ ಕೃಷ್ಣನ ರಸಕ್ರೀಡೆ ಮುಂತಾದ ದಿವ್ಯ ಕ್ರಿಯೆಗಳನ್ನು ಪ್ರಶಂಸಿಸುವ ಹೃದಯ ಹೊಂದಿರುವ ಆಳ್ವಾರಿನ ಜೇನುತುಪ್ಪದಂತಿರುವ ವಾಕ್ಯಗಳಲ್ಲಿ ಮುಳುಗಿರಿ!
ಪಾಸುರ-54 (ಕುರವೈ ಮುದಲಾಮ್…) ಈ ಪಾಸುರದಲ್ಲಿ ಮಾಮುನಿಗಳು ಕೃಷ್ಣನ ಏಲ್ಲ ದಿವ್ಯ ಚೇಷ್ಟಿತಗಳನ್ನು ಅನುಭವಿಸುತ್ತಾ ಅದರ ಬಗ್ಗೆ ನುಡಿಯುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ.
ಕುರವೈ ಮುದಲಾಮ್ ಕಣ್ಣನ್ ಕೋಲಚ್ ಚೆಯಲ್ಗಳ್
ಇರವು ಪಗಲ್ ಎನ್ನಾಮಲ್ ಎನ್ಱುಮ್ ಪರವುಮನಮ್
ಪೆಟ್ರೇನ್ ಎನ್ಱೇ ಕಳಿತ್ತುಪ್ ಪೇಸುಮ್ ಪರಾನ್ಗುಸನ್ ತನ್
ಸೊಟ್ರೇನಿಲ್ ನೆನ್ಜೇ ತುವಳ್
ಓ ಹೃದಯವೇ! (ಸಾತ್ವಿಕ) ಗರ್ವದಿಂದ ಹಗಲೆನ್ನದೆ ಇರುಳೆನ್ನದ್ದೆ ಸಾದ ರಾಸ ಕ್ರೀಡೆ ಮೊದಲಾದ ಕೃಷ್ಣನ ಚೇಷ್ಟಿತಗಳನ್ನು ಸ್ತುತಿಸುವ ಹೃದಯದವನ್ನು ಹೋಂದಿದ್ದಾರೆ ಎಂದು ಹೇಳಿದ ಜೇನು ತುಪ್ಪದಂತಹ ಮುಧುರವಾದ ಆೞ್ವಾರಿನ ದಿವ್ಯ ವಾಕ್ಕಿನಲ್ಲಿ ಮುಳುಗು.
ಪಾಸುರ 55 (ತುವಳಱು ಸೀರ್…) ಈ ಪಾಸುರದಲ್ಲಿ ಮಾಮುನಿಗಳು ಭಗವದ್ವಿಷಯದಲ್ಲಿದ್ದ ಆೞ್ವಾರಿನ ಅಘಾಡ ಪ್ರೀತಿಯ ವಿಷಯದ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ತುವಳಱು ಸೀರ್ ಮಾಲ್ ತಿಱತ್ತುತ್ ತೊನ್ನಲತ್ತಾಲ್ ನಾಳುಮ್
ತುವಳಱು ತನ್ ಸೀಲಮ್ ಎಲ್ಲಾಮ್ ಸೊನ್ನಾನ್ ತುವಳಱವೇ
ಮುನ್ನಮ್ ಅನುಬವತ್ತಿಲ್ ಮೂೞ್ಗಿ ನಿನ್ಱ ಮಾಱನ್ ಅದಿಲ್
ಮನ್ನುಮ್ ಉವಪ್ಪಾಲ್ ವನ್ದ ಮಾಲ್
ಆೞ್ವಾರ್ ಭಗವದ್ ಅನುಭವ ಜನಿತ (ಅದರಿಂದ ಹುಟ್ಟಿದ/ಕಾರಣದಿಂದ) ಆನಂದದಿಂದ ದೋಷ ಪ್ರತ್ಯನೀಕವಾದ ಕಲ್ಯಾಣ ಗುಣಗಳನ್ನು ಹೋಂದಿರುವ ಎಮ್ಪೆರುಮಾನಿನಲ್ಲಿ ಪ್ರಾರಂಭದಿಂದಲೂ ನಿರ್ದೋಷವಾದ ಪ್ರೀತಿಯಿಂದ ನಿಮಗ್ನರಾದರು. ಸಹಜವಾದ ಭಗವದ್ ಭಕ್ತಿಯಿಂದ ಇಂತಹ ವಿಷಯದಲ್ಲಿ ತಮ್ಮ ನಿರಾಸಕ್ತಿ ಇಲ್ಲದಿರುವಂತ ಗುಣವನ್ನು ಹೇಳಿದರು.
ಪಾಸುರ-56 (ಮಾಲುಡನೇ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಮ್ಮ ಎಲ್ಲಾ ವಸ್ತುಗಳನ್ನು ಹೇಗೆ ಕಳೆದುಕೊಂಡರೆಂದು ಹೇಳುವ ಪಾಸುರಗಳ ಛಾಯೆಯಲ್ಲೇ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ಮಾಲುಡನೇ ತಾನ್ ಕಲನ್ದು ವಾೞಪ್ ಪೆಱಾಮೈಯಾಲ್
ಸಾಲ ನೈನ್ದು ತನ್ನುಡೈಮೈ ತಾನ್ ಅಡೈಯಕ್ ಕೋಲಿಯೇ
ತಾನ್ ಇಗೞ ವೇಣ್ಡಾಮಲ್ ತನ್ನೈ ವಿಡಲ್ ಸೊಲ್ ಮಾಱನ್
ಊನಮ್ ಅಱು ಸೀರ್ ನೆನ್ಜೇ ಉಣ್
ಓ ಹೃದಯವೇ! ಎಮ್ಪೆರುಮಾನೊಂದಿಗೆ ಇರಲಾಗದೆ, ಆಳ್ವಾರ್ ತುಂಬಾ ದುರ್ಬಲರಾಗಿ ತಮ್ಮ ಕೃಪೆಯಿಂದ “ನನ್ನ ಪ್ರಾಣ ಹಾಗು ನನ್ನ ವಸ್ತುಗಳನ್ನು ತ್ಯಜಿಸುವುದಕ್ಕಿಂತಲೂ, ಅವೇ ನಮ್ಮನ್ನು ಬಿಟ್ಟವು.
ಪಾಸುರ-57 (ಉಣ್ಣುನ್ಜೋಱು…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಿರುಕ್ಕೋಳೂರಿನ ಕಡೆ ಹೊರಡುವ ಪಾಸುರಗಳ ಛಾಯೆಯಲ್ಲೇ ತಮ್ಮ ಕೃಪೆಯಿಂದ ವಿವರಿಸುತ್ತಾರೆ
ಉಣ್ಣುಮ್ ಸೋಱಾದಿ ಒರು ಮೂನ್ಱೂಮ್ ಎಮ್ಪೆರುಮಾನ್
ಕಣ್ಣನ್ ಎನ್ಱೇ ನೀರ್ಮಲ್ಗಿಕ್ ಕಣ್ಣಿನೈಗಳ್ ಮಣ್ಣುಲಗಿಲ್
ಮನ್ನು ತಿರುಕ್ಕೋಳೂರಿಲ್ ಮಾಯನ್ ಪಾಲ್ ಪೋಮ್ ಮಾಱನ್
ಪೊನ್ನಡಿಯೇ ನನ್ದಮಕ್ಕುಪ್ ಪೊನ್
ತಿನ್ನುವ ಅನ್ನವು(ಧಾರಕ) ಪೋಶಕಾದಿಗಳಲ್ಲಿ ಕೃಷ್ಣನೇ ಎಂದು ಭಾಷ್ಪಭರಿತ ನೇತ್ರಗಳೊಂದಿಗೆ ಭೂಮಿಯಲ್ಲಿ ಸ್ಥಿರವಾಗಿರುವ ತಿರುಕ್ಕೋಳೂರಿನಲ್ಲಿರುವ ಸರ್ವೇಶ್ವರನ ಕಡೆ ಹೊರಟರು. ಇಂತಹ ಆೞ್ವಾರಿನ ದಿವ್ಯ ಪಾದಗಳೇ ನಮಗೆ ನಿಧಿ
ಪಾಸುರ-58 (ಪೊನ್ನುಲಗು…) ಈ ಪಾಸುರದಲ್ಲಿ ಮಾಮುನಿಗಳು ದುಃಖದಿಂದ ಬಂದಿತರಾಗಿ ದೂತ ಪ್ರೇಷಣೆಯನ್ನು (ದೂತರನ್ನು ಕಳುಹಿಸುವುದು) ಮಾಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ಪೊನ್ನುಲಗು ಬೂಮಿ ಎಲ್ಲಾಮ್ ಪುಳ್ಳಿನನ್ಗಟ್ಕೇ ವೞನ್ಗಿ
ಎನ್ನಿಡರೈ ಮಾಲುಕ್ಕಿಯಮ್ಬುಮೆನ – ಮನ್ನು ತಿರು
ನಾದ ಮುದಲ್ ತೂದು ನಲ್ಗಿವಿಡುಮಾಱನೈಯೇ
ನೀಡುಲಗೀರ್ ಪೋಯ್ ವಣನ್ಗುನೀರ್
ವಿಶಾಲವಾದಿ ಭೂಮಿಯವಾಡಿಗಳೆ ಪೂರ್ಣವಾಗಿ ನಿತ್ಯ ವಿಭೂತಿಯನ್ನು ಲೀಲಾ ವಿಭೂತಿಯನ್ನು ಪಕ್ಷಿಗಳ ಸಮೂಹಕ್ಕೆ ನೀಡಿ, “ನನ್ನ ವ್ಯಸನವನ್ನು ಎಮ್ಪೆರುಮಾನಿಗೆ ತಿಳಿಸಿ” ಎಂದು ಆಸೆಯಿಂದ ನಿತ್ಯವಾದ ಶ್ರೀವೈಕುಣ್ಠಾದಿಗಳಿಗೆ ಸಂದೇಶವನ್ನು ಕಳುಹಿಸಿದ ಆೞ್ವಾರನ್ನೇ ಆರಾಧಿಸಿ.
ಪಾಸುರ-59 (ನೀರಾಗಿ….) ಈ ಪಾಸುರದಲ್ಲಿ ಮಾಮುನಿಗಳು ಕೇಳುವವರ ಹೃದಯವನ್ನು ಕರೆಗಿಸುವಂತೆ ಎಮ್ಪೆರುಮಾನನ್ನು ಕೂಗಿದ ಆೞ್ವಾರಿನ ಪಾಸುರಗಳ ಛಾಯೆಯಲ್ಲೇ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ನೀರಾಗಿಕ್ ಕೇಟ್ಟವರ್ಗಳ್ ನೆನ್ಜೞಿಯ ಮಾಲುಕ್ಕುಮ್
ಏರಾರ್ ವಿಸುಮ್ಬಿಲ್ ಇರುಪ್ಪರಿದಾ ಆರಾದ
ಕಾದಲುಡನ್ ಕೂಪ್ಪಿಟ್ಟ ಕಾರಿಮಾಱನ್ ಸೊಲ್ಲೈ
ಓದಿಡವೇ ಉಯ್ಯುಮ್ ಉಲಗು
ಸರ್ವೇಶ್ವರನನ್ನು ಸುಂದರವಾದ ಪರಮಪದದಲ್ಲಿ ಇರಲಾಗದಂತೆ ತೀರಲಾಗದ ಪ್ರೀತಿಯಿಂದ ಕೇಳುವವರ ಹೃದಯವನ್ನು ಕರೆಗಿ ನಶಿಸುವಂತೆ ಆೞ್ವಾರ್ ಕೂಗಿದರು. ಈ ಶ್ರೀಸೂಕ್ತಿಯ ಅನುಸಂಧಾನದಿಂದ ವಿಶ್ವವು ಉಜ್ಜೀವಿಸುವುದು.
ಪಾಸುರ-60 (ಉಲಗುಯ್ಯ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಿರುವೇಂಕಟಮುಡೈಯಾನಿನ (ಶ್ರೀನಿವಾಸನ) ದಿವ್ಯ ಪಾದಗಳಲ್ಲಿ ಶರಣಾಗತಿಯನ್ನು ಮಾಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ .
ಉಲಗುಯ್ಯ ಮಾಲ್ ನಿನ್ಱ ಉಯರ್ ವೇನ್ಗಡತ್ತೇ
ಅಲರ್ ಮಗಳೈ ಮುನ್ನಿಟ್ಟು ಅವನ್ ತನ್ ಮಲರಡಿಯೇ
ವನ್ ಸರಣಾಯ್ಚ್ ಚೇರ್ನ್ದ ಮಗಿೞ್ಮಾಱನ್ ತಾಳಿಣೈಯೇ
ಉನ್ ಸರಣಾಯ್ ನೆನ್ಜಮೇ ಉಳ್
ಓ ಮನವೇ! ಪೆರಿಯ ಪಿರಾಟ್ಟಿಯಾರಿನ (ಶ್ರೀಮಹಾಲಕ್ಷ್ಮಿಯ) ಪುರುಷಕಾರದೊಂದಿಗೆ ವಿಶ್ವವನ್ನು ಉಜ್ಜೀವಿಸಲು ಉಚ್ಚವಾದ ತಿರುವೇಂಕಟಮಲೆಯಲ್ಲಿ ನೆಲಸಿರುವ ಸರ್ವೇಶ್ವರನ ದಿವ್ಯ ಪಾದಪದ್ಮಗಳನ್ನೇ ಉಪಾಯವೆಂದು ನೆನದ ವಕುಳಾಭರಣರ ದಿವ್ಯ ಪಾದಗಳನ್ನೆ ಉಪಾಯವೆಂದು ನೆನೆ.
ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್
ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-51-60-simple/
ಆರ್ಕೈವ್ ಮಾಡಲಾಗಿದೆ : http://divyaprabandham.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org