ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ
ಅಲ್ಲಿನಾಳ್ ತಾಮರೈ ಮೇಲ್ ಆರಣoಗಿನ್ ಇಂತುಣೈವಿ
ಮಲ್ಲಿ ನಾಡಾಂಡ ಮಡ ಮಯಿಲ್ – ಮೆಲ್ಲಿಯಲಾಳ್
ಆಯರ್ ಕುಲ ವೇಂದನ್ ಆಹತ್ತಾಳ್ ತೆನ್ ಪುದುವೈ
ವೇಯರ್ ಪಯಂದ ವಿಳಕ್ಕು
ಆಂಡಾಳ್ ನಾಚ್ಚಿಯಾರ್ ಮೃದು ಸ್ವಭಾವವನ್ನು ಹೊಂದಿದ್ದಾರೆ; ಅವಳು ಆಗ ತಾನೇ ಅರಳಿದ ದಳಗಳನ್ನು ಹೊಂದಿರುವ ಕಮಲದ ಹೂವಿನ ಮೇಲೆ ಶಾಶ್ವತವಾಗಿ ನೆಲೆಸಿರುವ ಪೆರಿಯ ಪಿರಾಟ್ಟಿಯಾರ್ (ತಾಯಾರ್) ಅವರ ಆತ್ಮೀಯ ಸ್ನೇಹಿತೆಯಾಗಿದ್ದಾಳೆ, ಮತ್ತು ಅವಳು ತಿರುಮಲ್ಲಿ ದೇಶವನ್ನು ಆಳುವ ಸುಂದರ ನವಿಲು. ಅವಳು ಗೋಪಾಲಕರ ಕುಲದ ರಾಜನಾಗಿರುವ ಕಣ್ಣನ್ ಎಂಪೆರುಮಾನ್‌ನ ದಿವ್ಯ ರೂಪಕ್ಕೆ ಪೂರಕವಾಗಿದ್ದಾಳೆ ಮತ್ತು ಸುಂದರ ಶ್ರೀವಿಲ್ಲಿಪುತ್ತೂರಿನಲ್ಲಿ ಬ್ರಾಹ್ಮಣರ ಕುಲದ ಮುಖ್ಯಸ್ಥರಾದ ಪೆರಿಯಾಳ್ವಾರ್ ಅವರಿಂದ ಅಲಂಕರಿಸಲ್ಪಟ್ಟ ದಿವ್ಯ ದೀಪದಂತೆ ಅವಳು ಪ್ರಕಾಶಿಸುತ್ತಾಳೆ.
ಕೋಲಚ್ಚುರಿಶಂಗೈ ಮಾಯನ್ ಶೆವ್ವಾಯಿನ್ ಗುಣಂ ವಿನವುಮ್
ಶೀಲತ್ತನಳ್ ತೆನ್ ತಿರುಮಲ್ಲಿನಾಡಿ ಶೆಯುಂಕುಯಲ್ ಮೇಲ್
ಮಾಲೈ ತ್ತೊಡೈ ತೆನ್ನರಂಗರುಕ್ಕು ಈಯುಮ್ ಮದಿಪ್ಪುಡೈಯ
ಶೋಲೈಕ್ಕಿಳಿ ಅವಳ್ ತೂಯ ನರ್ಪಾದಮ್ ತುಣೈ ನಮಕ್ಕೇ
ಸುಂದರವಾದ ಶ್ರೀ ಪಾಂಚಜನ್ಯಮ್ (ದೈವೀಕ ಶಂಖ) ವನ್ನು ನೋಡಿದ ನಂತರ ಅದ್ಭುತವಾದ ಚಟುವಟಿಕೆಗಳನ್ನು ಹೊಂದಿರುವ ಎಂಪೆರುಮಾನ್‌ನ ಕೆಂಪು ದಿವ್ಯ ತುಟಿಗಳ ರುಚಿಯ ಬಗ್ಗೆ ಆಂಡಾಳ್ ಕೇಳುವ ಹಿರಿಮೆಯನ್ನು ಹೊಂದಿದ್ದಾಳೆ. ಅವಳು ತಿರುಮಲ್ಲಿ ದೇಶದ ನಾಯಕಿ. ಅವಳು ತನ್ನ ಸುಂದರವಾದ ವಸ್ತ್ರದ ಮೇಲೆ ಧರಿಸಿದ್ದ ಮತ್ತು ತೆಗೆದ ಮಾಲೆಯನ್ನು ತಿರುವರಂಗನಾಥನಿಗೆ (ಶ್ರೀರಂಗದ ಪ್ರಭು) ಅರ್ಪಿಸುವ ಹಿರಿಮೆಯನ್ನು ಹೊಂದಿದ್ದಾಳೆ. ಅವಳು ತೋಟದಲ್ಲಿರುವ ಗಿಳಿಯಂತೆ. ಶುದ್ಧತೆ ಮತ್ತು ಸುವಾಸನೆಯನ್ನು ಹೊಂದಿರುವ ಇಂತಹ ಆಂಡಾಳ್ ಅವರ ದಿವ್ಯ ಪಾದಗಳು ನಮಗೆ ಆಶ್ರಯವಾಗಿದೆ.
ಅಡಿಯೇನ್ ಯತಿರಾಜ ರಾಮಾನುಜ ದಾಸನ್
ಮೂಲ: https://divyaprabandham.koyil.org/index.php/2020/05/nachchiyar-thirumozhi-thaniyans-simple/
ಸಂಗ್ರಹಣಾ ಸ್ಥಾನ https://divyaprabandham.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org