ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ಎಂಟನೇ ತಿರುಮೊಳಿ – ವಿಣ್ಣೀಲ ಮೇಲಾಪ್ಪು

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ

ನಾಚ್ಚಿಯಾರ್ ತಿರುಮೊಳಿ

<< ಏಳನೇ ತಿರುಮೊಳಿ – ಕರ್ಪೂರಮ್ ನಾರುಮೋ

ಹಿಂದಿನ ಪಧಿಗಂನಲ್ಲಿ ಅವಳು ಎಂಪೆರುಮಾನ್ ಅವರ ಬಾಯಿಯ ಮಕರಂದದ ಸ್ವರೂಪದ ಬಗ್ಗೆ ಶ್ರೀ ಪಾಂಚಜನ್ಯಂ ಅವರನ್ನು ಕೇಳಿದಳು. ಇದರ ನಂತರ, ಅವಳ ಮನಸ್ಸಿನಲ್ಲಿ ಅನುಭವವು ಎಂಪೆರುಮಾನ್‌ಗೆ ತಲುಪಿತು. ಆಗ ಅಲ್ಲಿಗೆ ಮುಂಗಾರು ಮೋಡಗಳು ಆರ್ಭಟದಿಂದ ಬಂದವು. ಅವುಗಳ ಬಣ್ಣದ ಹೋಲಿಕೆ ಮತ್ತು ಉದಾತ್ತತೆಯ ಗುಣದಿಂದಾಗಿ, ಮೋಡಗಳು ಅವಳಿಗೆ ಎಂಪೆರುಮಾನ್‌ನಂತೆ ಕಾಣಿಸಿಕೊಂಡವು. ಸ್ವತಃ ಎಂಪೆರುಮಾನ್ ತನ್ನ ಬಳಿಗೆ ಬಂದಿದ್ದಾನೆ ಎಂದು ಅವಳು ಭಾವಿಸಿದಳು. ಸ್ವಲ್ಪ ಸ್ಪಷ್ಟವಾದ ನಂತರ, ಎಂಪೆರುಮಾನ್ ಅಲ್ಲಿಗೆ ತಲುಪಿಲ್ಲ ಎಂದು ಅವಳು ಅರಿತುಕೊಂಡಳು. ಅಲ್ಲಿಗೆ ಬಂದ ಮೋಡಗಳು ತಿರುಗಾಡುವ ಬುದ್ಧಿಮತ್ತೆಯನ್ನು ಹೊಂದಿದ್ದರಿಂದ ಅವುಗಳನ್ನು ಎಂಪೆರುಮಾನ್‌ಗೆ ದೂತರನ್ನಾಗಿ ಕಳುಹಿಸಲು ಅವಳು ನಿರ್ಧರಿಸಿದಳು. ವಿಭವ ಅವತಾರಕ್ಕೆ (ಎಂಪೆರುಮಾನ್ ರಾಮ, ಕೃಷ್ಣ ಮತ್ತು ಇತರ ಅವತಾರಗಳಿಗೆ) ಸಂದೇಶವಾಹಕರಾಗಿ ಕಳುಹಿಸುವ ಬದಲು, ಆಕೆ ಅವನ್ನು ತಿರುವೇಂಗಡಂನಲ್ಲಿರುವ ಅರ್ಚೈಗೆ (ಎಂಪೆರುಮಾನ್ ವಿಗ್ರಹ ರೂಪದಲ್ಲಿ) ಸಂದೇಶವಾಹಕರಾಗಿ ಕಳುಹಿಸುತ್ತಾಳೆ. ರಾಮಾವತಾರದಲ್ಲಿ, ಸೀತಾ ದೇವಿಯು ಶ್ರೀರಾಮನಿಗೆ ತನ್ನ ಸ್ಥಿತಿಯನ್ನು ತಿಳಿಸಲು ಹನುಮಾನ್‌ನಂತಹ ವಿಶಿಷ್ಟ, ಬುದ್ಧಿವಂತ ವ್ಯಕ್ತಿಯನ್ನು ಹೊಂದಿದ್ದಳು. ಇಲ್ಲಿ ಆಂಡಾಳ್ ತನ್ನ ಎಂಪೆರುಮಾನ್ ಮೇಲಿನ ಪ್ರೀತಿಯಿಂದ ಎಷ್ಟು ಗೊಂದಲಕ್ಕೊಳಗಾಗಿದ್ದಾಳೆಂದರೆ, ಅವಳು ತನ್ನ ಪ್ರೀತಿಯನ್ನು ತಿಳಿಸಲು ಸಂದೇಶವಾಹಕನಾಗಿ ಅಚೇತನ ಘಟಕವನ್ನು (ಆಲೋಚನಾ ಶಕ್ತಿ ಹೊಂದಿರದ) ಕಳುಹಿಸುತ್ತಿದ್ದಾಳೆ. ಅವಳು ಎಂಪೆರುಮಾನ್‌ನ ಮೇಲೆ ಹೊಂದಿರುವ ಪ್ರೇಮದಿಂದಾಗಿ, ಅರ್ಚೈ ರೂಪದಲ್ಲಿ ಎಮ್ಪೆರುಮಾನ್ ಕೇವಲ ದರ್ಶನ (ಅವನ ದೈವೀಕ ರೂಪವನ್ನು ಬಹಿರಂಗಪಡಿಸುವುದು) ನೀಡುತ್ತಾನೆ ಮತ್ತು ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುವುದಿಲ್ಲ ಅಥವಾ ಚಲಿಸುವುದಿಲ್ಲ ಎಂಬುದು ಅವಳಿಗೆ ಅರಿವಾಗುವುದಿಲ್ಲ. ಪ್ರೀತಿ ಅಥವಾ ಪ್ರೇಮವು ಸಹ ಭಕ್ತಿಯ ಒಂದು ರೂಪವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು (ಗಂಡು ಮತ್ತು ಹೆಣ್ಣು) ಒಟ್ಟಿಗೆ ಇದ್ದರೆ ತಮ್ಮನ್ನು ತಾವು ಉಳಿಸಿಕೊಳ್ಳುತ್ತಾರೆ, ಇಲ್ಲದಿದ್ದರೆ ಅವರು ತಮ್ಮನ್ನು ತಾವು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಈ ಗುಣಗಳು ಪಿರಾಟ್ಟಿಮಾರರಲ್ಲಿ (ಮಹಿಳೆಯರು) ಅವರ ಸ್ವಭಾವದಂತೆ ಇರುತ್ತದೆ. ಈ ಕಾರಣಕ್ಕಾಗಿಯೇ ಆಳ್ವಾರರು ಎಂಪೆರುಮಾನ್‌ನ ಸ್ತ್ರೀ ಸಂಗಾತಿಯ ಅನುಭವವನ್ನು ಊಹಿಸಿದರು. ಆದರೆ, ಆಂಡಾಳ್ ವಿಷಯದಲ್ಲಿ, ಅವಳು ಭೂಮಿಪ್ಪಿರಾಟ್ಟಿಯ (ಭೂದೇವಿ) ಪುನರ್ಜನ್ಮವಾಗಿರುವುದರಿಂದ, ಇವು ಅವಳ ಸ್ವಭಾವದ ಭಾಗವಾಗಿ ಸಹಜವಾಗಿ ಇರುತ್ತವೆ.

ಮೊದಲನೇ ಪಾಸುರಂ. ತನ್ನ ಸ್ತ್ರೀತ್ವವನ್ನು ನಾಶಪಡಿಸುವುದರಿಂದ ಅವನಿಗೆ ಏನಾದರೂ ಕೀರ್ತಿ ಬರುತ್ತದೆಯೇ ಎಂದು ತಿರುವೇಂಗಡಮುಡಯಾನ್ ನನ್ನು ಕೇಳಲು ಅವಳು ಮೋಡಗಳಿಗೆ ಹೇಳುತ್ತಾಳೆ.

ವಿಣ್ಣ್ಣೀಲ ಮೇಲಾಪ್ಪು ವಿರಿತ್ತಾರ್ ಪೋಲ್ ಮೇಗಂಗಾಳ್

ತೆಣ್ನೀರ್ಪಾಯ್ ವೇಂಗಡತ್ತು ಎನ್ ತಿರುಮಾಲುಮ್ ಪೋನ್ದಾನೈ

ಕಣ್ಣ್ಣೀರ್ಗಳ್  ಮುಲೈ ಕುವಟ್ಟಿಲ್ ತುಳಿ ಶೋರ ಶೋರ್ವೇನೈ

ಪೆಣ್ ನೀರ್ಮೈ ಈಡಳಿಕ್ಕುಮ್ ಇದು ತಮಕ್ಕೋರ್ ಪೆರುಮೈಯೇ

ನೀಲಿ ಬಣ್ಣದ ಆಕಾಶಕ್ಕೆ ಮೇಲಾವರಣದಂತೆ ತೋರುವ ಮೋಡಗಳೇ! ತಿಳಿಯಾದ ತೊರೆಗಳು ಹರಿಯುವ ತಿರುವೇಂಗಡಂ ಬೆಟ್ಟದಲ್ಲಿ ಶಾಶ್ವತವಾಗಿ ನೆಲೆಸಿರುವ ನನ್ನ ಸ್ವಾಮಿ (ಪ್ರಭು) ತಿರುಮಾಲ್ ನಿಮ್ಮೊಂದಿಗೆ ಬಂದಿದ್ದಾರೆಯೇ? ನನ್ನ ಕಣ್ಣೀರಿನ ಹನಿಗಳು ನನ್ನ ಎದೆಯ ಅಂಚಿನಲ್ಲಿ ಬೀಳುವಷ್ಟು ನಾನು ದುಃಖಿತಳಾಗಿದ್ದೇನೆ. ಇದು ಅವನಿಗೆ ಯಾವುದೇ ಖ್ಯಾತಿಯನ್ನು ತರುತ್ತದೆಯೇ?

ಎರಡನೇ ಪಾಸುರಂ. ಗಾಳಿಯಿಂದ ತೊಂದರೆಗೀಡಾದ ತನಗೆ ಎಮ್ಪೆರುಮಾನ್ ಕೆಲವು ಸಾಂತ್ವನದ ಮಾತುಗಳನ್ನು ಕಳುಹಿಸಿದ್ದಾನೆಯೇ ಎಂದು ಅವಳು ಮೋಡಗಳನ್ನು ಕೇಳುತ್ತಾಳೆ.

ಮಾಮುತ್ತ ನಿದಿ ಶೊರಿಯುಮ್ ಮಾಮುಗಿಲ್ಗಾಳ್! ವೇಂಗಡತ್ತು

ಶಾಮತ್ತಿನ್ ನಿರಂ ಕೊಂಡ ತಾಳಾಳನ್ ವಾರ್ತೈ ಎನ್ನೇ?

ಕಾಮತ್ತೀ ಉಳ್ ಪುಗುಂದು ಕದುವಪ್ಪಟ್ಟು ಇಡೈ ಕಂಗುಲ್

ಏಮತ್ತೋರ್ ತೆನ್ರಲುಕ್ಕು ಇಂಗು ಇಲಕ್ಕಾಯ್ ನಾನ್ ಇರುಪ್ಪೇನೇ

ಮುತ್ತುಗಳು ಮತ್ತು ಚಿನ್ನವನ್ನು ಸುರಿಸುವ ಓ ವಿಶಿಷ್ಠ ಮುಂಗಾರು ಮೋಡಗಳೇ! ನೀಲವರ್ಣ ಮೈಬಣ್ಣದ ವೈಭವದ ಮತ್ತು ತಿರುವೇಂಗಡಂನಲ್ಲಿ ಶಾಶ್ವತವಾಗಿ ನೆಲೆಸಿರುವ ಎಂಪೆರುಮಾನ್‌ನಿಂದ ಏನಾದರೂ ಸಂದೇಶವಿದೆಯೇ? ನನ್ನೊಳಗೆ ಪ್ರವೇಶಿಸಿ ನನ್ನನ್ನು ವಶಪಡಿಸಿಕೊಂಡ ಪ್ರೇಮದ ಜ್ವಾಲೆಯಿಂದ ನಾನು ತೊಂದರೆಗೀಡಾಗಿದ್ದೇನೆ, ಇದರಿಂದಾಗಿ ನಾನು ಮಧ್ಯರಾತ್ರಿಯ ಸೌಮ್ಯವಾದ ಗಾಳಿಗೆ ಗುರಿಯಾಗಿದ್ದೇನೆ, ಅದು ನನ್ನನ್ನು ದುಃಖಿತಳಾಗಿ ಮಾಡುತ್ತಿದೆ.

ಮೂರನೇ ಪಾಸುರಂ. ಎಂಪೆರುಮಾನ್‌ನ ದಿವ್ಯ ನಾಮಗಳನ್ನು ಹೇಳುವುದರ ಮೂಲಕ ತನ್ನನ್ನು ತಾನು ಉಳಿಸಿಕೊಳ್ಳಬಹುದೇ ಎಂದು ಅವಳು ಮೋಡಗಳನ್ನು ಕೇಳುತ್ತಾಳೆ.

ಒಳಿ ವಣ್ಣಮ್ ವಳೈ ಶಿಂದೈ ಉರಕ್ಕತ್ತೋಡು ಇವೈಯೆಲ್ಲಾಮ್

ಎಳಿಮೈಯಾಲ್ ಇಟ್ಟು ಎನ್ನೈ ಈಡಳಿಯ ಪೋಯಿನವಾಲ್

ಕುಳಿರ್ ಅರುವಿ ವೇಂಗಡತ್ತು ಎನ್ ಗೋವಿಂದನ್ ಗುಣಂ ಪಾಡಿ

ಅಳಿಯತ್ತ ಮೇಘಂಗಾಳ್ ಆವಿ ಕಾತ್ತಿರುಪ್ಪೇನೇ

ಓ ಕರುಣಾಮಯಿ ಮೋಡಗಳೇ! ನನ್ನ ರೂಪದ ಕಾಂತಿ ಮತ್ತು ಮೈಬಣ್ಣ, ನನ್ನ ಬಳೆಗಳು, ಹೃದಯ ಮತ್ತು ನಿದ್ರೆಯು ನನ್ನ ದುಃಖದ ಸ್ಥಿತಿಯಿಂದ ನನ್ನನ್ನು ತೊರೆದಿದೆ, ನನ್ನನ್ನು ತುಂಬಾ ದುರ್ಬಲಗೊಳಿಸಿದೆ. ಅಯ್ಯೋ! ತಣ್ಣನೆಯ ತೊರೆಗಳನ್ನು ಹೊಂದಿರುವ ತಿರುವೇಂಗಡಂನಲ್ಲಿ ಶಾಶ್ವತವಾಗಿ ನೆಲೆಸಿರುವ ನನ್ನ ಎಂಪೆರುಮಾನ್ ಗೋವಿಂದನ ದೈವೀಕ, ಮಂಗಳಕರ ಗುಣಗಳನ್ನು ನಾನು ಪಠಿಸಬಹುದೇ ಮತ್ತು ನನ್ನನ್ನು ಉಳಿಸಿಕೊಳ್ಳಬಹುದೇ?

ನಾಲ್ಕನೆಯ ಪಾಸುರಂ. ಶಿಫಾರಸ್ಸು ಮಾಡುವ ಪಾತ್ರವನ್ನು ನಿರ್ವಹಿಸುವ ಪಿರಾಟ್ಟಿಯ (ಶ್ರೀ ಮಹಾಲಕ್ಷ್ಮಿ) ಸಮ್ಮುಖದಲ್ಲಿ ಎಂಪೆರುಮಾನ್‌ಗೆ ತನ್ನ ಬಯಕೆಯನ್ನು ತಿಳಿಸಲು ಅವಳು ಮೋಡಗಳಿಗೆ ಪ್ರಾರ್ಥಿಸುತ್ತಾಳೆ.

ಮಿನ್ನಾಗತ್ತು ಎಳುಗಿನ್ರ ಮೇಗಂಗಾಳ್ ವೇಂಗಡತ್ತು

ತನ್ನಾಗ ತಿರುಮಂಗೈ ತಂಗಿಯ ಶೀರ್ ಮಾರ್ವರ್ಕು

ಎನ್ನಾಗತ್ತು ಇಳಂ ಕೊಂಗೈ  ವಿರುಮ್ಬಿ ತಾಮ್ ನಾಳ್ದೋರುಮ್

ಪೊನ್ನಾಗಮ್ ಫುಲ್ಗುದರ್ಕು ಎನ್ ಪುರಿವುಡೈಮೈ ಶೆಪ್ಪುಮಿನೇ

ಓಹ್, ಮಿಂಚು ಸಹಿತ ಮೋಡಗಳೇ! ತಿರುವೇಂಗಡಂನಲ್ಲಿ ಶಾಶ್ವತವಾಗಿ ನೆಲೆಸಿರುವ ಎಂಪೆರುಮಾನ್ ತನ್ನ ಸುಂದರವಾದ, ದಿವ್ಯವಾದ ಎದೆಯ ಮೇಲೆ ನನ್ನ ಯೌವನದ ಎದೆಯನ್ನು ಅಪ್ಪಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ದೇವಿಯು ಕರುಣಾಮಯವಾಗಿ ನೆಲೆಸಿರುವ ದಿವ್ಯವಾದ ಎದೆಯನ್ನು ಹೊಂದಿರುವ ಎಂಪೆರುಮಾನ್‌ಗೆ ಇದನ್ನು ಹೇಳು.

ಐದನೇ ಪಾಸುರಂ. ತನ್ನ ಅನುಯಾಯಿಗಳ ಶತ್ರುಗಳನ್ನು ತೊಡೆದುಹಾಕುವ ಎಂಪೆರುಮಾನ್‌ಗೆ ತನ್ನ ಸ್ಥಿತಿಯನ್ನು ಬಹಿರಂಗಪಡಿಸಲು ಅವಳು ಮೋಡಗಳನ್ನು ಪ್ರಾರ್ಥಿಸುತ್ತಾಳೆ.

ವಾನ್ ಕೊಂಡು ಕಿಳರ್ನ್ದು ಎಳುನ್ದ ಮಾಮುಗಿಲ್ಗಾಳ್

ವೇಂಗಡತ್ತು ತೇನ್ ಕೊಂಡ ಮಲರ್ ಶಿದರ ತಿರಂಡೇರಿ ಪೊಳಿವೀರ್ಗಾಳ್

ಊನ್ ಕೊಂಡ ವಳ್ಳುಗಿರಾಲ್  ಇರಣಿಯನೈ ಉಡಲ್ ಇಡನ್ದಾನ್

ತಾನ್ ಕೊಂಡ ಶರಿವಳೈಗಳ್ ತರುಮಾಗಿಲ್ ಶಾಟ್ರುಮಿನೇ

ಬೆಳೆದು ಮೇಲೆದ್ದು ಆಕಾಶವನ್ನು ವ್ಯಾಪಿಸಿ ನುಂಗುವ ಮತ್ತು ಭಾರಿ ಗುಂಪಿನಲ್ಲಿ, ತಿರುವೇಂಗಡಮಲೈನಲ್ಲಿ ಜೇನುತುಪ್ಪದಿಂದ ತುಂಬಿರುವ ಹೂವುಗಳು ಚದುರಿಹೋಗುವಂತೆ, ಆಕಾಶದಿಂದ ಮಳೆಯನ್ನು ಸುರಿಸುವಂತಹ ಓ ಮೇಘಗಳೇ! ಎಂಪೆರುಮಾನನು ರಾಕ್ಷಸ ಹಿರಣ್ಯ ಕಶ್ಯಪುವಿನ ದೇಹವನ್ನು ತನ್ನ ಚೂಪಾದ ಉಗುರುಗಳಿಂದ ಹರಿದು ಹಾಕಿದನು. ಆ ಎಂಪೆರುಮಾನನು ನನ್ನಿಂದ ತೆಗೆದ ಬಳೆಗಳನ್ನು ಹಿಂತಿರುಗಿಸುವುದಾದರೆ ನನ್ನ ಸ್ಥಿತಿಯನ್ನು ಅವನಿಗೆ ಹೇಳಿ.

ಆರನೇ ಪಾಸುರಂ. ತನ್ನ ಲಾಭಗಳನ್ನು ಕಸಿದುಕೊಂಡ ನಾರಾಯಣನಿಗೆ ತನ್ನ ಸ್ಥಿತಿಯನ್ನು ಹೇಳಲು ಅವಳು ಮೋಡಗಳನ್ನು ಪ್ರಾರ್ಥಿಸುತ್ತಾಳೆ.

ಶಲಂ ಕೊಂಡು ಕಿಳರ್ನ್ದು ಎಳುನ್ದ ತಣ್ ಮುಗಿಲ್ಗಾಳ್

ಮಾವಲಿಯೈ ನಿಲಂ ಕೊಂಡಾನ್ ವೇಂಗಡತ್ತೇ ನಿರಂದೇರಿ ಪೊಳಿವೀರ್ಗಾಳ್

ಉಲಂಗುಂಡ ವಿಳಂಗನಿ ಪೋಲ್ ಉಳ್ ಮೆಲಿಯ ಪುಗುಂದು

ಎನ್ನೈ ನಲಂ ಕೊಂಡ ನಾರಣರ್ಕು ಎನ್ ನಡಲೈ  ನೋಯ್ ಶೆಪ್ಪುಮಿನೇ

ತಣ್ಣನೆಯ ಜಲವ ಕೊಂಡು ವ್ಯಾಪಿಸಿ ಮೇಲೆದ್ಧ ತಂಪಾದ ಮೋಡಗಳೇ! ಮಹಾಬಲಿಯಿಂದ ಲೋಕಗಳನ್ನು ದಾನವಾಗಿ ಪಡೆದ ಎಂಪೆರುಮಾನ್‌ನ ಶಾಶ್ವತ ನಿವಾಸವಾದ ತಿರುವೇಂಗಡಂನಲ್ಲಿ ಚೆನ್ನಾಗಿ ಹರಡಿದ ನಂತರ ಬೆಟ್ಟದ ಮೇಲೆ ಏರುವ ಓ ಮೋಡಗಳೇ! ಸೊಳ್ಳೆಯು ಬೇಲದ ಹಣ್ಣಿನ ರಸವನ್ನು ಹೀರಿದಂತೆ, ನಾರಾಯಣನು ನನ್ನ ಲಾಭಗಳನ್ನು  (ಸ್ತ್ರೀ ಗುಣಗಳನ್ನು) ಕಸಿದುಕೊಂಡಿದ್ದಾನೆ. ಆ ಎಂಪೆರುಮಾನ್‌ಗೆ ನನ್ನ ದುಃಖದ ನೋವಿನ ಬಗ್ಗೆ ಹೇಳಿ.

ಏಳನೇ ಪಾಸುರಂ. ಎಂಪೆರುಮಾನನನ್ನ ಅಪ್ಪಿಕೊಳ್ಳದ ಹೊರತು ತನ್ನನ್ನು ತಾನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲು ಅವಳು ಮೋಡಗಳನ್ನು ಪ್ರಾರ್ಥಿಸುತ್ತಾಳೆ.

ಶಂಗ ಮಾ ಕಡಲ್ ಕಡೈನ್ದಾನ್ ತಣ್ ಮುಗಿಲ್ಗಾಳ್

ವೇಂಗಡತ್ತು ಶೆಂಗಣ್ಮಾಲ್ ಶೇವಡಿಕ್ಕೀಳ್ ಅಡಿ ವೀಳ್ಚಿ ವಿಣ್ಣಪ್ಪಮ್

ಕೊಂಗೈ ಮೇಲ್ ಕುಂಕುಮತ್ತಿನ್ ಕುಳುಂಬಳಿಯ ಪುಗುಂದು

ಒರುನಾಳ್ ತಂಗುಮ್ ಏಲ್ ಎನ್ ಆವಿ ತಂಗುಮ್ ಎನ್ರು ಉರೈಯೀರೇ

ಎಂಪೆರುಮಾನನು ಖ್ಯಾತಿ ಮತ್ತು ಅಪಾರ ಶಂಖಗಳನ್ನು ಹೊಂದಿರುವ ಸಾಗರವನ್ನು ಮಂಥನ ಮಾಡಿದನು. ಆ ಎಂಪೆರುಮಾನ್ ಶಾಶ್ವತವಾಗಿ ನೆಲೆಸಿರುವ ತಿರುವೇಂಗಡಮಲೈ ಸುತ್ತಲೂ ಸಂಚರಿಸುವ ತಂಪಾದ ಮೋಡಗಳೇ! ಕೆಂಪಾದ ಕಣ್ಣುಗಳನ್ನು ಹೊಂದಿರುವ ಆ ಎಂಪೆರುಮಾನ್‌ನ ದಿವ್ಯವಾದ ಕೆಂಪಾದ ಪಾದಗಳಿಗೆ ನನ್ನ ನಮನ ಇದು: ಒಂದು ದಿನ ಆ ಎಂಪೆರುಮಾನ್ ಇಲ್ಲಿಗೆ ಬಂದು ನನ್ನ ಎದೆಯ ಮೇಲಿನ ಕುಂಕುಮದ ಲೇಪನ ಅಳಿಯುವಂತೆ ನನ್ನೊಂದಿಗೆ ಸೇರಿದರೆ, ನನ್ನ ಜೀವನವು ಸ್ಥಿರವಾಗಿರುತ್ತದೆ. ಹೋಗಿ ಅವನಿಗೆ ಇದನ್ನು ಹೇಳಿ.

ಎಂಟನೆಯ ಪಾಸುರಂ. (ಅವನ ಕಡೆಯಿಂದ) ಈ ರೀತಿ ಮೌನವಾಗಿರುವುದು ತಪ್ಪು ಎಂದು ಹೇಳಲು ಅವಳು ಮೋಡವನ್ನು ಪ್ರಾರ್ಥಿಸುತ್ತಾಳೆ.

ಕಾರ್ಕಾಲತ್ತು ಎಳುಗಿನ್ರ ಕಾರ್ ಮುಗಿಲ್ಗಾಳ್ ವೇಂಗಡತ್ತು

ಪೋರ್ಕಾಲತ್ತು ಎಳುನ್ದು ಅರುಳಿ ಪೊರುದವನಾರ್ ಪೇರ್ ಶೊಲ್ಲಿ

ನೀರ್ಕಾಲತ್ತೆರುಕ್ಕಿಲ್ ಅಮ್ ಪಳವಿಲೈ ಪೋಲ್ ವೀಳ್ವೇನೈ

ವಾರ್ಕಾಲತ್ತುಒರು ನಾಳ್ ತಮ್ ವಾಶಕಮ್ ತಂದರುಳಾರೇ

ಓಹ್, ಮಳೆಗಾಲದಲ್ಲಿ ತಿರುವೇಂಗಡಮಲೈನಲ್ಲಿ ಇರುವ ಕಪ್ಪು ಮೋಡಗಳೇ! ಎಂಪೆರುಮಾನನು ಕರುಣೆಯಿಂದ ಯುದ್ಧದ ಸಮಯದಲ್ಲಿ ಯುದ್ಧರಂಗವನ್ನು ಪ್ರವೇಶಿಸಿದನು ಮತ್ತು ವಿಜಯಶಾಲಿಯಾದನು. ನಾನು ಆ ಎಂಪೆರುಮಾನ್‌ನ ದಿವ್ಯನಾಮಗಳನ್ನು ಪಠಿಸಿ, ಮಳೆಗಾಲದಲ್ಲಿ ಎಕ್ಕದ ಗಿಡದ ಸುಂದರವಾದ ಎಲೆಗಳಂತೆ ಕೆಳಗೆ ಬೀಳುತ್ತೇನೆ. ಬರಲಿರುವ ದೀರ್ಘ ವರ್ಷಗಳಲ್ಲಿ, ಯಾವುದೇ ದಿನದಲ್ಲಿ ಅವನು ಕರುಣೆಯಿಂದ ಒಂದು ಮಾತನ್ನೂ ಹೇಳುವುದಿಲ್ಲವೇ?

ಒಂಭತ್ತನೇ ಪಾಸುರಂ. ಅವನು ತನ್ನನ್ನು ಮತ್ತಷ್ಟು ಹಿಂಸಿಸುವುದನ್ನು ಮುಂದುವರೆಸಿದರೆ, ಅವನ ಖ್ಯಾತಿಗೆ ಧಕ್ಕೆಯಾಗುತ್ತದೆ ಎಂದು ಹೇಳಲು ಅವಳು ಮೋಡಗಳನ್ನು ಪ್ರಾರ್ಥಿಸುತ್ತಾಳೆ.

ಮದಯಾನೈ ಪೋಲ್ ಎಳುನ್ದ ಮಾಮುಗಿಲ್ಗಾಳ್

ವೇಂಗಡತ್ತೈ ಪದಿ ಆಗ ವಾಳ್ವೀರ್ಗಾಳ್ ಪಾಮ್ಬಣೈಯಾನ್ ವಾರ್ತೈ ಎನ್ನೇ!

ಕದಿ ಎನ್ರುಮ್ ತಾನ್ ಆವಾನ್ ಕರದಾದು ಓರ್ ಪೆಣ್ ಕೊಡಿಯೈ

ವದೈ ಶೆಯ್ದಾನ್ ಎನ್ನುಮ್ ಶೊಲ್ ವೈಯಗತ್ತಾರ್ ಮದಿಯಾರೇ

ಓಹ್ ಸಂಭ್ರಮದ ಗದ್ದಲದಿಂದ ಮೇಲೇರುತ್ತಿರುವ ಆನೆಗಳಂತಿರುವ, ತಿರುವೇಂಗಡಮಲೈಯನ್ನು ನಿಮ್ಮ ನಿವಾಸವನ್ನಾಗಿ ಮಾಡಿಕೊಂಡು ಬೆಳೆಯುತ್ತಿರುವ ಪ್ರಿಯ ಮೋಡಗಳೇ! ಆದಿಶೇಷನ ಮೇಲೆ ಮಲಗಿರುವ ಎಂಪೆರುಮಾನನ ಮಾತು ಏನು! ಅವನು ನನ್ನನ್ನು ಹೀಗೆ ನಿರ್ಲಕ್ಷಿಸುತ್ತಾ ಹೋದರೆ, ಈ ಲೋಕದ ಜನರು “ಆ ಎಂಪೆರುಮಾನ್ ಯಾವಾಗಲೂ ರಕ್ಷಕನಾಗಿ ಉಳಿದಿದ್ದರೂ, ಅವನು ತನ್ನ ಮೂಲ ಸ್ವಭಾವಕ್ಕೆ ಕೊರತೆಯನ್ನುಂಟುಮಾಡುತ್ತದೆ ಎಂದು ಯೋಚಿಸದೆ, ಹುಡುಗಿಯನ್ನು ಕೊಂದನು” ಎಂದು ಹೇಳುವುದಿಲ್ಲವೇ?

ಹತ್ತನೇ ಪಾಸುರಂ. ಈ ಪಧಿಗವನ್ನು ಯಾರು ಮನದಲ್ಲಿ ಧ್ಯಾನಿಸುತ್ತಾ ಆನಂದಿಸುತ್ತಾರೋ ಅವರು ಆ ಎಂಪೆರುಮಾನ್‌ನ ಸೇವಕರಾಗುತ್ತಾರೆ ಮತ್ತು ಸಮೃದ್ಧಿ ಹೊಂದುತ್ತಾರೆ ಎಂದು ಹೇಳಿ ಪಧಿಗವನ್ನು ಪೂರ್ಣಗೊಳಿಸುತ್ತಾಳೆ.

ನಾಗತ್ತಿನ್ ಅಣೈಯಾನೈ ನನ್ನುದಲಾಳ್ ನಯಂದು ಉರೈ ಶೆಯ್

ಮೇಘತ್ತೈ ವೇನ್ಗಡ ಕೋನ್ ವಿಡುತೂದಿಲ್ ವಿಣ್ಣಪ್ಪಮ್

ಭೋಗತ್ತಿಲ್ ವಳುವಾದ ಪುದುವೈಯರ್ ಕೋನ್ ಕೋದೈ ತಮಿಳ್

ಆಗತ್ತು ವೈತ್ತುರೈಪ್ಪಾರ್ ಅವರ್ ಅಡಿಯಾರ್ ಆಗುವರೇ ಪೆರಿಯಾಳ್ವಾರ್ ಅವರ ಮಗಳಾದ ಆಂಡಾಳ್, ಸುಂದರವಾದ ದಿವ್ಯ ಹಣೆ ಮತ್ತು ಸುಂದರವಾದ ದಿವ್ಯ ಮುಖವನ್ನು ಹೊಂದಿರುವ, ಎಂಪೆರುಮಾನ್ ಅನ್ನು ದೋಷ ರಹಿತವಾಗಿ ಆನಂದಿಸಿದರು. ಆಂಡಾಳ್, ಮೋಡಗಳನ್ನು ಸಂದೇಶವಾಹಕರಾಗಿ ಬಳಸಿ, ಆದಿಶೇಷನನ್ನು ತನ್ನ ಹಾಸಿಗೆಯನ್ನಾಗಿ ಹೊಂದಿರುವ ಎಂಪೆರುಮಾನ್ ಅನ್ನು ಅಪೇಕ್ಷಿಸಿ, ಈ ಹತ್ತು ಪಾಸುರಂಗಳನ್ನು ಕರುಣಾಪೂರ್ವಕವಾಗಿ ರಚಿಸಿದರು. ಈ ತಮಿಳು ಪಾಸುರಂಗಳನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡು ಅವುಗಳನ್ನು ಪಠಿಸುವ ಸಾಮರ್ಥ್ಯವುಳ್ಳವರು ಅವನ ಸೇವಕರಾಗುತ್ತಾರೆ, ಪ್ರತಿದಿನ ಕೈಂಕರ್ಯವನ್ನು ಮಾಡುತ್ತಾರೆ.

ಅಡಿಯೇನ್ ಯತಿರಾಜ ರಾಮಾನುಜ ದಾಸನ್ 

ಮೂಲ: https://divyaprabandham.koyil.org/index.php/2020/05/nachchiyar-thirumozhi-8-simple/

ಸಂಗ್ರಹಣಾ ಸ್ಥಾನ https://divyaprabandham.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org