ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ಏಳನೇ ತಿರುಮೊಳಿ – ಕರ್ಪೂರಮ್ ನಾರುಮೋ

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ

ನಾಚ್ಚಿಯಾರ್ ತಿರುಮೊಳಿ

<<ಆರನೇ ತಿರುಮೊಳಿ – ವಾರಣಮ್ ಆಯಿರಂ

ಆ ದಾರಿಯಲ್ಲಿ ಬಂದ ಹನುಮಾನ್‌ನಿಂದ ಎಂಪೆರುಮಾನ್‌ನ ಅನುಭವವನ್ನು ವಿಚಾರಿಸಬೇಕಾಗಿದ್ದ ಸೀತಾ ದೇವಿಗಿಂತ ಭಿನ್ನವಾಗಿ, ಎಂಪೆರುಮಾನ್‌ನ ಅನುಭವವನ್ನು ಅವನ ಗೌಪ್ಯ ಸೇವಕ, ಎಂಪೆರುಮಾನ್‌ನ ಅನುಭವದ ಆಚಾರ್ಯರ (ತಜ್ಞ) ಬಳಿ ವಿಚಾರಿಸುವ ಭಾಗ್ಯ ಆಂಡಾಳ್‌ಗೆ ಇದೆ. ಅವಳ ಕನಸಿನ ಕೊನೆಯಲ್ಲಿ, ಎಂಪೆರುಮಾನ್ ಜೊತೆಗೆ ಒಕ್ಕೂಟವು ಸಂಭವಿಸಬಹುದು. ಎಂಪೆರುಮಾನ್ ಅವರ ತುಟಿಗಳ ಮಕರಂದವನ್ನು ನೆನಪಿಸಿಕೊಳ್ಳುತ್ತಾ ಆಂಡಾಳ್ ಶಂಖತ್ತಾಳ್ವಾನ್ ಎಂಬ ದಿವ್ಯವಾದ ಶಂಖ ಪಾಂಚಜನ್ಯಮ್‌ನೊಂದಿಗೆ ಅದರ ಬಗ್ಗೆ ವಿಚಾರಿಸುತ್ತಿದ್ದಳು. ಅವಳು ಎಂಪೆರುಮಾನನ ತುಟಿಗಳ ಮಕರಂದದ ಬಗ್ಗೆ ವಿಚಾರಿಸಲು ಕಾರಣಗಳು:

೧. ರಾಜ ಮತ್ತು ರಾಣಿಯ ಸಂತೋಷಕ್ಕಾಗಿ ರಾಣಿಯ ಖಾಸಗಿ ನಿಲಯದಲ್ಲಿ ಗೂನಿಯರು ಮತ್ತು ಕುಳ್ಳರು ಇರುವಂತೆ, ದೈವೀಕ ಶಂಖವು, ಗೌಪ್ಯ ಸಮಯಗಳಲ್ಲೂ ಸೇರಿದಂತೆ  ಎಂಪೆರುಮಾನ್‌ನಿಂದ ಪ್ರತ್ಯೇಕಗೊಳ್ಳದೆ ಯಾವಾಗಲೂ ಜೊತೆ ಇರುತ್ತದೆ.

೨. ಎಂಪೆರುಮಾನ್ ಶಂಖವನ್ನು ಊದಲು ತನ್ನ ಬಾಯಿಯಲ್ಲಿ ಇಟ್ಟುಕೊಂಡರೆ, ಶಂಖವು ಯಾವಾಗಲೂ ಎಂಪೆರುಮಾನನ ಬಾಯಿಂದ ಅಮೃತವನ್ನು ಕುಡಿಯುತ್ತದೆ.

೩. ದೈವೀಕ ಶಂಖವು ಎಂಪೆರುಮಾನ್‌ನೊಂದಿಗೆ ಎಂದಿಗೂ ಬೇರ್ಪಡದಂತೆ ಇರುತ್ತದೆ.  ಬೇರೆ ರೀತಿಯಲ್ಲಿ ಹೇಳುವುದಾದರೆ, ಎಂಪೆರುಮಾನ್ ತನ್ನ ಶತ್ರುಗಳನ್ನು ನಾಶಮಾಡಲು ದೈವೀಕ ಚಕ್ರವನ್ನು ಬಿಡುಗಡೆ ಮಾಡುತ್ತಾನೆ. ಈ ಸಮಯದಲ್ಲಿ ಆ ಚಕ್ರವು ಎಂಪೆರುಮಾನ್‌ನಿಂದ (ಅಲ್ಪ ಅವಧಿಯವರೆಗೆ) ಬೇರ್ಪಡುತ್ತದೆ. ಆದರೆ, ದೈವೀಕ ಶಂಖವು ಎಂಪೆರುಮಾನ್‌ನಿಂದ ಎಂದಿಗೂ ಪ್ರತ್ಯೇಕಗೊಳ್ಳುವುದಿಲ್ಲ.

೪. ಇದಲ್ಲದೇ, ದೈವೀಕ ಶಂಖದ ಬಿಳಿ ಬಣ್ಣವು ಎಂಪೆರುಮಾನ್‌ನ ದೈವೀಕ ರೂಪದ ಗಾಢ ಬಣ್ಣಕ್ಕೆ ಸಂಪೂರ್ಣ ವಿರೋಧ ಹೊಂದಿಕೆಯಿಂದಿರುವುದರಿಂದ, ಅವರ ಒಕ್ಕೂಟವು ಅನುಭವಿಸಲು ಯೋಗ್ಯವಾಗಿದೆ.

ಈ ಕಾರಣಗಳಿಗಾಗಿ, ದೈವೀಕ ಶಂಖದೊಂದಿಗೆ ಮಾತನಾಡುವುದು ಅಥವಾ ವಿಚಾರಿಸುವುದು ಎಂಪೆರುಮಾನ್ ಅವನೊಂದಿಗೆ ಮಾತನಾಡುವ ಅಥವಾ ವಿಚಾರಿಸುವಂತೆಯೇ ಇರುವುದರಿಂದ, ಆಂಡಾಳ್ ದೈವೀಕ ಶಂಖದೊಂದಿಗೆ ವಿಚಾರಿಸುತ್ತಿದ್ದಾಳೆ.

ಮೊದಲನೇ ಪಾಸುರಂ. ಶಂಖವು ಎಂಪೆರುಮಾನ್‌ನ ಬಾಯಿಯ ಮಕರಂದವನ್ನು ನಿರಂತರವಾಗಿ ಅನುಭವಿಸುತ್ತಿರುವುದರಿಂದ, ಅವನು ಆ ರುಚಿಯನ್ನು ತಿಳಿದಿದ್ದನು ಎಂದು ಅವಳು ದೈವೀಕ ಶಂಖಕ್ಕೆ ಹೇಳುತ್ತಾಳೆ. ಅವನು ಅದನ್ನು ತನಗೆ ಬಹಿರಂಗಪಡಿಸುತ್ತಾನೆಯೇ ಎಂದು ಅವಳು ಶಂಖವನ್ನು ಕೇಳುತ್ತಾಳೆ.

ಕರ್ಪೂರಮ್ ನಾರುಮೋ ಕಮಲಪ್ಪೂ ನಾರುಮೋ

ತಿರುಪ್ಪವಳಂ ಶೆವ್ವಾಯ್ತಾನ್ ತಿತ್ತಿತ್ತಿರುಕ್ಕುಮೋ 

ಮರುಪ್ಪೊಶಿತ್ತ ಮಾಧವನ್ ತನ್ ವಾಯ್ ಶುವೈಯುಂ ನಾಟ್ರಮುಮ್

ವಿರುಪ್ಪುಟ್ಟ್ರುಕೇಟ್ಕಿಂಡ್ರೇನ್ ಶೊಲ್ಲಾಳಿ ವೆಣ್ ಶಂಗೇ

ಓಹ್ ಗಾಢವಾದ ಶ್ವೇತವರ್ಣದ  ಶ್ರೀ ಪಾಂಚಜನ್ಯಆಳ್ವಾನ್! ಕಂಸನ ರಾಜ ಆನೆಯಾದ ಕುವಲಯಪೀಡಂನ ದಂತವನ್ನು ಕಿತ್ತುಕೊಂಡ ಕಣ್ಣಪಿರಾನನ (ಶ್ರೀ ಕೃಷ್ಣ) ದೈವೀಕ ತುಟಿಗಳ ರುಚಿ ಮತ್ತು ವಾಸನೆಯ ಬಗ್ಗೆ ನಾನು ನಿಮ್ಮನ್ನು ಆಸೆಯಿಂದ ಕೇಳುತ್ತೇನೆ. ಕೆಂಪು ಬಣ್ಣದ ಆ ಎಂಪೆರುಮಾನನ ದಿವ್ಯ ತುಟಿಗಳು ಔಷಧೀಯ ಕರ್ಪೂರದ ವಾಸನೆಯನ್ನು ಹೊಂದಿರುತ್ತದೆಯೇ? ಅಥವಾ ಅವರಿಗೆ ಕಮಲದ ಹೂವಿನ ವಾಸನೆ ಇರುತ್ತದೆಯೇ? ಅವರು ಸಿಹಿ ರುಚಿಯನ್ನು ಹೊಂದಿರುತ್ತಾರೆಯೇ? ನೀನು ನನಗೆ ಹೇಳಬೇಕು.

ಎರಡನೇ ಪಾಸುರಂ. ಶತ್ರುಗಳನ್ನು ನಾಶಮಾಡುವಂತೆಯೇ ಅನುಯಾಯಿಗಳನ್ನೂ ಬೆಳೆಸಬೇಕು. ಅವನು (ಶಂಖ) ಹುಟ್ಟಿ ಬೆಳೆದದ್ದು ಇತರರಿಗಾಗಿ ಮಾತ್ರ, ಅವನ ಚಟುವಟಿಕೆಗಳೂ ಕೂಡ ಹಾಗೆ ಇರಬೇಕು ಎಂದು ಅವಳು ದೈವೀಕ ಶಂಖಕ್ಕೆ ಹೇಳುತ್ತಾಳೆ.

ಕಡಲಿಲ್ ಪಿರಂದು ಕರುತಾದು ಪಂಚಜನನ್

ಉಡಲಿಲ್ ವಳರ್ನ್ದು ಪೋಯ್ ಊಳಿಯಾನ್ ಕೈ ತಲತ್ತು

ಇಡರಿಲ್ ಕುಡಿಯೇರಿ ತೀಯ ಆಶುರರ್

ನಡಲೈ ಪ್ಪಡ ಮುಳುನ್ಗುಮ್ ತೋಟ್ರತ್ತಾಯ್ ನರ್ಶನ್ಗೇ

ಓ ಸುಂದರ ಶ್ರೀ ಪಾಂಚಜನ್ಯಆಳ್ವಾನ್! ನೀನು ಆಳ ಸಮುದ್ರದಲ್ಲಿ ರಾಕ್ಷಸ ಪಂಚಾಸನನ ದೇಹದಲ್ಲಿ ಹುಟ್ಟಿ ಅಲ್ಲಿಯೇ ಬೆಳೆದೆ. ಅದನ್ನು ಪರಿಗಣಿಸದೆ, ನೀನು ಎಂಪೆರುಮಾನ್ ಅವರ ಶಾಶ್ವತವಾಗಿರುವ ದಿವ್ಯ ಹಸ್ತದ ಅತ್ಯಂತ ಶ್ರೇಷ್ಠವಾದ ಸ್ಥಳವನ್ನು ಪ್ರವೇಶಿಸಿದ್ದೀಯ. ರಾಕ್ಷಸರು ಸಂಕಟಪಡುವಂತೆ  ಗಟ್ಟಿಯಾಗಿ ಊದುವ ಹಿರಿಮೆ ನಿನ್ನದು. ಆದುದರಿಂದ ನೀನು ನನಗೆ ಈ ಉಪಕಾರವನ್ನು ಮಾಡಬೇಕು.

ಮೂರನೇ ಪಾಸುರಂ. ಅವಳು ಶಂಗತ್ತಾಳ್ವಾನ್ ನ ಸೌಂದರ್ಯವನ್ನು ಆನಂದಿಸುತ್ತಾಳೆ.

ತಡವರೈಯಿನ್ ಮೀದೇ ಶರರ್ಕಾಲ ಶಂದಿರನ್

ಇಡೈಯುವಾವಿಲ್ ವಂದು ಎಳುಂದಾಲೇ ಪೋಲ್

ನೀಯುಮ್ ವಡ ಮಧುರೈಯಾರ್ ಮನ್ನನ್ ವಾಶುದೇವನ್ ಕೈಯಿಲ್

ಕುಡಿಯೇರಿ ವೀಟ್ರಿರುಂದಾಯ್ ಕೋಲ ಪ್ಪೆರುಂ ಶಂಗೇ

ಓ ಸುಂದರ, ಬೃಹತ್ ಪಾಂಚಜನ್ಯಆಳ್ವಾನ್! ಹುಣ್ಣಿಮೆಯಂದು ಶರತ್ಕಾಲದ ಸಮಯದಲ್ಲಿ, ಏರುತ್ತಿರುವ ಪರ್ವತದಿಂದ ಚಂದ್ರನು ಉದಯಿಸುವಂತೆ, ನೀನು ಉತ್ತರ ಮಥುರಾ ರಾಜನಾದ ವಾಸುದೇವ ಎಂಪೆರುಮಾನ್ ಅವರ ದಿವ್ಯ ಹಸ್ತದಲ್ಲಿ ನೆಲೆಸಿ, ನಿನ್ನ ಎಲ್ಲಾ ಶ್ರೇಷ್ಠತೆಯನ್ನು ಬಹಿರಂಗಪಡಿಸುತ್ತೀಯೆ.

ನಾಲ್ಕನೆಯ ಪಾಸುರಂ.  ಗೌಪ್ಯ ವಿಷಯಗಳ ಬಗ್ಗೆ ಮಾತನಾಡಲು ಸಮರ್ಥನಾದ ಅವನಿಗೆ ತನ್ನ ಬಗ್ಗೆ ಎಂಪೆರುಮಾನನ ಬಗ್ಗೆ ಮಾತನಾಡಲು ಹೇಳುತ್ತಾಳೆ.

ಶಂದಿರ  ಮಂಡಲಂ ಪೋಲ್ ದಾಮೋದರನ್ ಕೈಯಿಲ್

ಅಂದರಂ ಒನ್ರಿನ್ರಿ ಏರಿ ಅವನ್ ಶೆವಿಯಿಲ್

ಮಂದಿರಂ ಕೊಳ್ವಾಯೇ  ಪೋಲುಂ ವಲಂಪುರಿಯೇ!

ಇಂದಿರನುಂ ಉನ್ನೋಡು ಶೆಲ್ವತ್ತಕ್ಕು ಏಲಾನೇ

ಓ ಬಲಕ್ಕೆ ಬಾಗಿರುವ  ಶಂಖವೇ ! ನೀನು ಚಂದ್ರನ ನಕ್ಷತ್ರಪುಂಜದಂತೆ ದಾಮೋದರ ಎಂಪೆರುಮಾನನ ದಿವ್ಯ ಹಸ್ತದ ಮೇಲೆ ಶಾಶ್ವತವಾಗಿ ನೆಲೆಸಿದ್ದೀಯ , ರಹಸ್ಯ ವಿಷಯಗಳನ್ನು ಮಾತನಾಡುವಂತೆ ತೋರುತ್ತಿದ್ದೀಯ. ಐಶ್ವರ್ಯವಂತನಾದ ಇಂದ್ರನು ಕೂಡ ದಾಸ್ಯವೆಂಬ ನಿಜವಾದ ಸಂಪತ್ತಿನಲ್ಲಿ ನಿನಗೆ ಸರಿಸಾಟಿಯಾಗುವುದಿಲ್ಲ.

ಐದನೇ ಪಾಸುರಂ. ಅವರು ಎಂಪೆರುಮಾನ್‌ನ ಬಾಯಿಯ ಮಕರಂದವನ್ನು ನಿರಂತರವಾಗಿ ಸೇವಿಸುವುದರಿಂದ ಇತರ ಶಂಖಗಳು ಅವನಿಗೆ ಸಮಾನವಾಗುವುದಿಲ್ಲ ಎಂದು ಅವಳು ದೈವೀಕ ಶಂಖಕ್ಕೆ ಹೇಳುತ್ತಾಳೆ.

ಉನ್ನೋಡು ಉಡನೇ ಒರು ಕಡಲಿಲ್ ವಾಳ್ವಾರೈ

ಇನ್ನಾರ್ ಇನೈಯಾರ್ ಎನ್ರು ಎಣ್ಣುವಾರ್ ಇಲ್ಲೈ ಕಾಣ್

ಮನ್ನಾಗಿ ನಿನ್ರ ಮದುಶೂದನ್ ವಾಯ್ ಅಮುದಮ್

ಪನ್ನಾಳುಂ ಉಣ್ಗಿನ್ರಾಯ್  ಪಾಂಚಶನ್ನಿಯಮೇ!

ಓ ಪಾಂಚಜನ್ಯಆಳ್ವಾನ್! ಅದೇ ಸಾಗರದಲ್ಲಿ ನಿನ್ನೊಂದಿಗೆ ವಾಸಿಸುವ ಇತರ ಶಂಖಗಳನ್ನು ಯಾರೂ ಗೌರವಿಸುವುದಿಲ್ಲ. ಎಂಪೆರುಮಾನನ  ಬಾಯಿಯ ಅಮೃತವನ್ನು ಬಹಳ ಸಮಯದಿಂದ ಕುಡಿಯುತ್ತಿರುವವನು ನೀನು ಮಾತ್ರ. ಆದ್ದರಿಂದ ನೀನು ಮಾತ್ರ ಅದೃಷ್ಟವಂತನು.

ಆರನೇ ಪಾಸುರಂ. ಎಂಪೆರುಮಾನ್‌ನ ಬಾಯಿಯ ನೀರಿನಲ್ಲಿ ಸ್ನಾನ ಮಾಡುವ ಅದೃಷ್ಟವಂತ ಶಂಖ ಎಂದು ಅವಳು ಅವನನ್ನು ಹೊಗಳುತ್ತಾಳೆ.

ಪೋಯ್ ತೀರ್ಥಂ ಆಡಾದೇ ನಿನ್ರ ಪುಣರ್ ಮರುದಮ್

ಶಾಯ್ತೀರ್ತಾನ್ ಕೈತಲತ್ತೇ ಏರಿ ಕುಡಿ ಕೊಂಡು

ಶೇಯ್ ತೀರ್ಥಮಾಯ್ ನಿನ್ರ ಶೆಂಗಣ್ಮಾಲ್ ತನ್ನುಡೈಯ

ವಾಯ್ ತೀರ್ಥಂ ಪಾಯ್ನ್ದು ಆಡವಲ್ಲಾಯ್ ವಲಂಪುರಿಯೇ

ಬಲಭಾಗದಲ್ಲಿ ಸುರುಳಿಯಾಗಿರುವ ಓ ಶಂಖವೇ! ಗಂಗಾ ಮೊದಲಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡಲು (ನಿನ್ನನ್ನು ಶುದ್ಧೀಕರಿಸಲು) ನೀನು ದೂರದವರೆಗೆ ನಡೆಯುವ ತೊಂದರೆಯನ್ನು ತೆಗೆದುಕೊಳ್ಳಬೇಕಾಗಿಲ್ಲ. ಬದಲಾಗಿ, ನಾರದ ಮುನಿಯ ಶಾಪದಿಂದ ಮರಗಳಾಗಿ ನಿಂತಿದ್ದ ಎರಡು ಮರಗಳನ್ನು (ಇಬ್ಬರು ರಾಕ್ಷಸರಿಂದ ಆವಾಹಿಸಿರುವ) ಕಿತ್ತುಹಾಕಿದ ಕಣ್ಣನ ದಿವ್ಯ ಹಸ್ತಕ್ಕೆ ನೀನು ಹತ್ತಿದ್ದೀಯ. ಕೆಂಪಾದ ಕಣ್ಣುಗಳನ್ನು ಹೊಂದಿರುವ (ಭಕ್ತರ ಮೇಲಿನ ಪ್ರೀತಿಯನ್ನು ಪ್ರತಿಬಿಂಬಿಸುವ) ಸರ್ವೇಶ್ವರನ ಬಾಯಿಯೊಳಗಿನ ನೀರಿನಲ್ಲಿ ಚೆನ್ನಾಗಿ ನೆಲೆಸುವ ಭಾಗ್ಯವನ್ನು ನೀನು ಪಡೆದಿದ್ದೀಯೆ ಮತ್ತು ನೀನು ಅಲ್ಲಿ ಶಾಶ್ವತವಾಗಿ ಸ್ನಾನ ಮಾಡುತ್ತೀಯೆ.

ಏಳನೇ ಪಾಸುರಂ. ಎಂಪೆರುಮಾನ್‌ನ ದಿವ್ಯ ಹಸ್ತದ ಮೇಲಿರುವ ಶ್ರೀ ಪಾಂಚಜನ್ಯಂ ಅವರ ಅದೃಷ್ಟವನ್ನು ಅವಳು ಕೊಂಡಾಡುತ್ತಾಳೆ.

ಶೆಂಗಮಲ ನಾಳ್ ಮಲರ್ ಮೇಲ್ ತೇನ್ ನುಗರುಮ್ ಅನ್ನಮ್ ಪೋಲ್

ಶೇಂಗಣ್ ಕರುಮೇನಿ ವಾಸುದೇವನುಡೈಯ

ಅಂಗೈ ತಲಮ್ ಏರಿ ಅನ್ನವಶಂ ಶೆಯ್ಯುಮ್

ಶಂಗು ಅರೈಯಾ ಉನ್ ಶೆಲ್ವಮ್ ಶಾಲ ಅಳಗಿಯದೇ

ಹೊಸದಾಗಿ ಅರಳಿದ ಕಮಲದ ಹೂವಿನಿಂದ ಜೇನನ್ನು ನೆಲೆಸಿ ಕುಡಿಯುವ ಹಂಸದಂತೆ, ಕೆಂಪು ಕಣ್ಣುಗಳು ಮತ್ತು ಕಪ್ಪು ರೂಪವನ್ನು ಹೊಂದಿರುವ ಮತ್ತು ಅಲ್ಲಿ ಒರಗಿರುವ ಕಣ್ಣನ್ ಎಂಪೆರುಮಾನ್‌ನ ಸುಂದರವಾದ ದಿವ್ಯ ಹಸ್ತವನ್ನು ನೀನು ಏರಿದ್ದೀಯೆ. ಶಂಖಗಳಲ್ಲಿ ನಾಯಕನಾದ ಪಾಂಚಜನ್ಯನೇ! ನಿನ್ನ ದಾಸ್ಯ ಸಂಪತ್ತು ನಿಖರವಾಗಿ ದೊಡ್ಡದು.

ಎಂಟನೆಯ ಪಾಸುರಂ. ಎಲ್ಲ ಹುಡುಗಿಯರಿಗೂ ಶ್ರೀ ಪಾಂಚಜನ್ಯಂ ಮೇಲೆ ಇರುವ ಕೋಪದ ಬಗ್ಗೆ ಅವಳು ಹೇಳುತ್ತಾಳೆ.

ಉಣ್ಬದು ಶೊಲ್ಲಿಲ್ ಉಲಗಂ ಅಳಂದಾನ್ ವಾಯ್ ಅಮುದಮ್

ಕಣ್ ಪಡೈ ಕೊಳ್ಳಿಲ್ ಕಡಲ್ ವಣ್ಣನ್ ಕೈತಲತ್ತೇ

ಪೆಣ್ ಪಡೈಯಾರ್ ಉನ್ ಮೇಲ್ ಪೆರುಮ್ ಪೂಶಲ್ ಶಾಟ್ರುಗಿನ್ರಾರ್

ಪಣ್ ಪಲ ಶೆಯ್ಗಿನ್ರಾಯ್ ಪಾಂಚಶನ್ನಿಯಮೇ 

ಓ ಪಾಂಚಜನ್ಯ! ನೀನು ತಿನ್ನುವುದು ಸಕಲ ಲೋಕಗಳನ್ನು ಅಳೆದ ಎಂಪೆರುಮಾನ್‌ನ ದಿವ್ಯ ಬಾಯಿಯಿಂದ ಬಂದ ಅಮೃತವನ್ನು! ನೀನು ಮಲಗುವ ಸ್ಥಳವು ಸಾಗರದ ಮೈಬಣ್ಣವನ್ನು ಹೊಂದಿರುವ ಎಂಪೆರುಮಾನ್‌ನ ದಿವ್ಯ ಹಸ್ತದಲ್ಲಿದೆ! ನೀನು ಹೀಗಿರುವುದರಿಂದ ಹುಡುಗಿಯರೆಲ್ಲಾ ನಿನ್ನ ಬಗ್ಗೆ ಕೂಗುತ್ತಿದ್ದಾರೆ. ನಮ್ಮನ್ನೆಲ್ಲಾ ಬಿಟ್ಟು ಈ ಅನ್ಯಾಯದ ಕೃತ್ಯದಲ್ಲಿ ತೊಡಗುತ್ತಿದ್ದೀಯೆ. ಇದು ಸರಿಯೇ?

ಒಂಭತ್ತನೇ ಪಾಸುರಂ. ಹಿಂದಿನ ಪಾಸುರಂನಲ್ಲಿರುವಂತೆಯೇ, ಇದರಲ್ಲಿಯೂ ಅವರು ಶ್ರೀ ಪಾಂಚಜನ್ಯಂಗೆ ಹುಡುಗಿಯರು ಹೇಗೆ ಕೋಪಗೊಳ್ಳುತ್ತಾರೆ ಎಂಬುದರ ಕುರಿತು ಮಾತನಾಡುತ್ತಾರೆ.

ಪದಿನಾರಾಮ್ ಆಯಿರವರ್ ದೇವಿಮಾರ್ ಪಾರ್ತಿರುಪ್ಪ

ಮದು ವಾಯಿಲ್ ಕೊಂಡಾರ್ ಪೋಲ್ ಮಾಧವನ್ ತನ್ ವಾಯ್ ಅಮುದಂ

ಪೊದುವಾಗ ಉಣ್ಬದನೈ ಪುಕ್ಕು ನೀ ಉಂಡಕ್ಕಾಲ್

ಶಿದೈಯಾರೋ ಉನ್ನೋಡು? ಶೆಲ್ವ ಪ್ಪೆರುಮ್ ಶಂಗೇ

ಎಂಪೆರುಮಾನನನ್ನು ನಿರಂತರವಾಗಿ ಆನಂದಿಸುವ ಐಶ್ವರ್ಯವನ್ನು ಹೊಂದಿರುವ ಓ ಪಾಂಚಜನ್ಯಮ್! (ಎಂಪೆರುಮಾನ್‌ನ) ಹದಿನಾರು ಸಾವಿರ ಸಂಗಾತಿಗಳು ಕಣ್ಣನ್ ಎಂಪೆರುಮಾನ್‌ನ ದಿವ್ಯವಾದ ಮಕರಂದವನ್ನು ಸೇವಿಸಲು ಕಾಯುತ್ತಿದ್ದಾರೆ. ಎಂಪೆರುಮಾನ್‌ನ ಬಾಯಿಯ ಮಕರಂದವನ್ನು ಎಲ್ಲಾ ಸಂಗಾತಿಗಳು ಹಂಚಿಕೊಳ್ಳುವ ಜೇನುತುಪ್ಪವನ್ನು ಕುಡಿಯುವಂತೆಯೇ ನೀನು ಮಾತ್ರ ಆಕ್ರಮಣಕಾರಿಯಾಗಿ ಸೇವಿಸಿದರೆ, ಆ ಹೆಂಗಸರು ನಿನ್ನೊಂದಿಗೆ ಯುದ್ಧಕ್ಕೆ ಬರುವುದಿಲ್ಲವೇ?

ಹತ್ತನೇ ಪಾಸುರಂ. ಈ ಹತ್ತು ಪಾಸುರಂಗಳನ್ನು ಕಲಿತವರಿಗೆ ಸಿಗುವ ಫಲವನ್ನು ತಿಳಿಸುತ್ತಾ ಈ ಪಧಿಗವನ್ನು ಅವಳು ಪೂರ್ಣಗೊಳಿಸುತ್ತಾಳೆ.

ಪಾಂಚಜನ್ನಿಯತ್ತೈ ಪರ್ಪನಾಭನೋಡುಮ್

ವಾಯ್ನ್ದ ಪೆರುಮ್ ಶುತ್ತಮ್ ಆಕ್ಕಿಯ ವಣ್ ಪುದುವೈ

ಏಯ್ನ್ದ ಪುಗಳ್ ಭಟ್ಟರ್ ಪಿರಾನ್ ಕೋದೈ ತಮಿಳ್ ಈರೈನ್ದು

ಆಯ್ನ್ದೇತ್ತ ವಲ್ಲಾರ್ ಅವರುಮ್ ಅಣುಕ್ಕರೇ

ಆಂಡಾಳ್, ಈ ಹತ್ತು ಪಾಸುರಂಗಳ ಮೂಲಕ ಎಂಪೆರುಮಾನ್ ಮತ್ತು ಶ್ರೀ ಪಾಂಚಜನ್ಯಂ ನಡುವೆ ಆಳವಾದ ಸಂಬಂಧವನ್ನು ಸೃಷ್ಟಿಸಿದರು. ಅವಳು ಶ್ರೀವಿಲ್ಲಿಪುತ್ತೂರಿನಲ್ಲಿ ಅವತರಿಸಿದಳು. ಅವಳು ಪೆರಿಯಾಳ್ವಾರ್ ಅವರ ಮಗಳು ಮತ್ತು ಸಂಪೂರ್ಣ ಶ್ರೇಷ್ಠತೆಯ ಖ್ಯಾತಿಯನ್ನು ಹೊಂದಿದ್ದಾಳೆ. ಆಂಡಾಳ್ ಕರುಣೆಯಿಂದ ರಚಿಸಿರುವ ಈ ಹತ್ತು ಪಾಸುರಂಗಳನ್ನು ಕಲಿಯುವವರು ಎಂಪೆರುಮಾನ್‌ಗೆ ನಿಕಟ ಸಂಬಂಧವನ್ನು ಹೊಂದುತ್ತಾರೆ.

ಅಡಿಯೇನ್ ಯತಿರಾಜ ರಾಮಾನುಜ ದಾಸನ್ 

ಮೂಲ: https://divyaprabandham.koyil.org/index.php/2020/05/nachchiyar-thirumozhi-7-simple/

ಸಂಗ್ರಹಣಾ ಸ್ಥಾನ https://divyaprabandham.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org