ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ಎರಡನೇ ತಿರುಮೊಳಿ – ನಾಮಂ ಆಯಿರಂ

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ

ನಾಚ್ಚಿಯಾರ್ ತಿರುಮೊಳಿ

<< ಮೊದಲನೇ ತಿರುಮೊಳಿ – ತೈಯೊರು ತಿಂಗಳ್

ಈ ರೀತಿ ಅನ್ಯ ದೇವತೆಯಾದ ಮನ್ಮಥನ ಪಾದಗಳಿಗೆ ಅವರು (ಆಂಡಾಳ್ ಮತ್ತು ಇತರ ಗೋಪಾಲಕ ಹುಡುಗಿಯರು) ಬೀಳುವಂತೆ ಬಿಟ್ಟಿದ್ದಕ್ಕಾಗಿ ಎಂಪೆರುಮಾನ್ ದುಃಖಿತನಾದನು. ಅವನು  ಶ್ರೀ ಕೃಷ್ಣನಾಗಿ ತಿರುವಾಯ್ಪ್ಪಾಡಿ  (ಶ್ರೀ ಗೋಕುಲಂ) ದಲ್ಲಿದ್ದಾಗ, ಹಿಂಡು ಜನರು (ಗೋಪಾಲರು) ಇಂದ್ರನಿಗೆ ಔತಣವನ್ನು ಅರ್ಪಿಸಿದರು. ತಾನು  ಅಲ್ಲಿದ್ದಾಗ ಅನ್ಯ  ದೇವರಿಗೆ ಔತಣವನ್ನು ಅರ್ಪಿಸುತ್ತಿರುವುದನ್ನು ಕಂಡು ಅವನು ಅವರನ್ನು  ಗೋವರ್ಧನ ಬೆಟ್ಟಕ್ಕೆ ಔತಣವನ್ನು ಅರ್ಪಿಸುವಂತೆ ಮಾಡಿದನು ಮತ್ತು ಔತಣವನ್ನು ಸ್ವತಃ ತಾನೇ ಸೇವಿಸಿದನು. ಅದೇ ರೀತಿಯಲ್ಲಿ, ಅವನನ್ನು ಮಾತ್ರ ನಂಬಿದ್ದ ಆಂಡಾಳ್ ಮತ್ತು ಅವಳ ಸ್ನೇಹಿತರು, ಅವನು ಇರುವಾಗ ಅನ್ಯ ದೇವತೆಗೆ ಮೊರೆ ಹೋಗಿದ್ದರು. ಅವನಿಂದಾಗಿಯೇ ಅವರು ಬೇರೆ ದೇವತೆಯ ಮೊರೆ ಹೋದರು ಎಂದು ಗ್ರಹಿಸಿದ ಅವನು ಇನ್ನು ಮುಂದೆ ಅವರನ್ನು ಕಾಯುವಂತೆ ಮಾಡಬಾರದು ಎಂದು ನಿರ್ಧರಿಸಿ ಅವರ ಸ್ಥಳಕ್ಕೆ ಹೋದನು. ಆದರೆ ಅವನ ಮೇಲೆ ಕೋಪಗೊಂಡಿದ್ದ ಅವರು ಅವನನ್ನು ನಿರ್ಲಕ್ಷಿಸಿ ಮರಳಿನ ಕೋಟೆಗಳನ್ನು ಕಟ್ಟುವುದರಲ್ಲಿ ತೊಡಗಿದ್ದರು. ಇದನ್ನು ನೋಡಿದ ಅವನು ಅವರ ಮರಳಿನ ಕೋಟೆಗಳನ್ನು ನಾಶಮಾಡಲು ಬಯಸಿದನು  ಮತ್ತು ಅವರು ಅವನನ್ನು ತಡೆಯಲು ಬಯಸಿದರು. ಇದು ಪ್ರೀತಿಯ ಜಗಳ ಮತ್ತು ಒಕ್ಕೂಟಕ್ಕೆ ಮತ್ತೆ ಬೇರ್ಪಡಲು ಕಾರಣವಾಯಿತು.

ಮೊದಲನೇ ಪಾಸುರಂ. ಇದು ಪಂಗುನಿ (ತಮಿಳ್) ಮಾಸವಾದ್ದರಿಂದ, ಮನ್ಮಥನು ಭೇಟಿ ನೀಡುವ ಸಮಯ, ನಾವು ಮರಳಿನ ಮನೆಗಳನ್ನು ನಿರ್ಮಿಸುತ್ತಿದ್ದೇವೆ. ಇವುಗಳನ್ನು ನಾಶಮಾಡುವುದು ನಿನ್ನ ಕಡೆಯಿಂದ ಸರಿಯಲ್ಲ.

ನಾಮಂ ಆಯಿರಂ ಏತ್ತ ನಿನ್ರ ನಾರಾಯಣಾ! ನರನೇ! ಉನ್ನೈ

ಮಾಮಿ ತನ್ ಮಗನಾಗ ಪೆಟ್ರಾಲ್ ಎಮಕ್ಕು ವಾದೈ ತವಿರುಮೇ

ಕಾಮನ್ ಪೋದರು ಕಾಲಮ್ ಎನ್ರು ಪಂಗುನಿ ನಾಳ್ ಕಡೈ ಪಾರಿತ್ತೋಮ್

ತೀಮೈ ಶೆಯ್ಯುಮ್ ಶಿರೀದರಾ! ಎಂಗಳ್ ಶಿಟ್ರಿಲ್ ವಂದು ಶಿದೈಯೇಲೇ

ಶ್ಲೋಕದ ಮೊದಲ ಸಾಲಿಗೆ ಎರಡು ವ್ಯಾಖ್ಯಾನಗಳಿವೆ – 1) ಶ್ರೀಮನ್ ನಾರಾಯಣನ ಸಾವಿರ ನಾಮಗಳನ್ನು ಅವನು ಋಷಿಗಳಾಗಿ ಅವತರಿಸಲಾಗಿ, ನಾರಾಯಣ (ಪರಮ ಅಸ್ತಿತ್ವ) ಮತ್ತು ನರ (ಮಾನವ) ರೂಪಗಳಾಗಿ ಅವತರಿಸಿದಾಗಿನಿಂದ, ಆಕಾಶದ ದೇವತೆಗಳು ಸ್ತುತಿಸುತ್ತಿವೆ; 2) ನಿತ್ಯಸೂರಿಗಳು ಶ್ರೀಮನ್ ನಾರಾಯಣನ ಸಾವಿರ ನಾಮಗಳನ್ನು ಸ್ತುತಿಸುತ್ತಿದ್ದಾರೆ, ಏಕೆಂದರೆ ಅವನು  ಶ್ರೀವೈಕುಂಠದಲ್ಲಿ ನಾರಾಯಣನಾಗಿ, ಶ್ರೀರಾಮನಾಗಿ, ನರನಾಗಿ (ಮಾನವ ಜೀವಿ) ಅವತರಿಸಿದ್ದಾನೆ. ಓ ಅಂತಹ ಎಂಪೆರುಮಾನ್! ಯಶೋದಾ ದೇವಿಯು ನಿನ್ನನ್ನು ತನ್ನ ಮಗನೆಂದು ಪರಿಗಣಿಸಿದ ಮಾತ್ರಕ್ಕೆ, ನಾವು ನಮ್ಮ ಕಷ್ಟಗಳಿಂದ ಮುಕ್ತರಾಗುತ್ತೇವೆಯೇ? ಇದು ಪಂಗುನಿ ಮಾಸವಾದ್ದರಿಂದ ಮನ್ಮಥನ ದರ್ಶನವಾದಾಗ ಅವನು ಬರುವ ದಾರಿಯನ್ನು ಅಲಂಕರಿಸಿದೆವು. ಓಹ್, ಕಿಡಿಗೇಡಿತನ ಮಾಡುವವನೇ! ಮತ್ತು ಶ್ರೀ ಮಹಾಲಕ್ಷ್ಮಿಯ ಪತಿಯೇ! ನಮ್ಮ ಪುಟ್ಟ ಮರಳಿನ ಮನೆಗಳನ್ನು ಹಾಳುಮಾಡಲು ನಮ್ಮ ಸ್ಥಳಕ್ಕೆ ಬರಬೇಡ.

ಎರಡನೇ ಪಾಸುರಂ. ದನಗಾಹಿ ಯುವತಿಯರು  (ಆಂಡಾಳ್ ಮತ್ತು ಅವಳ ಸ್ನೇಹಿತರು) ಎಂಪೆರುಮಾನ್‌ಗೆ “ನಾವು ಬಹಳ ಶ್ರಮದಿಂದ ನಿರ್ಮಿಸಿದ ಮರಳಿನ ಮನೆಗಳನ್ನು ಹಾಳು ಮಾಡಬೇಡ” ಎಂದು ಹೇಳುತ್ತಾರೆ.

ಇನ್ರು ಮುಟ್ರುಮ್ ಮುದುಗು ನೋವ ಇರಂದು ಇಳೈತ್ತ ಇಚ್ಚಿಟ್ರಿಲೈ

ನನ್ರುಮ್ ಕಣ್ಉರ ನೋಕ್ಕಿ ನಾಂಗೊಳುಂ ಆರ್ವಂ ತನ್ನೈ ತ್ತಣಿ ಕಿಡಾಯ್

ಅನ್ರು ಬಾಲಕನಾಗಿ ಆಲ್ ಇಲೈ ಮೇಲ್ ತುಯಿನ್ರ ಎಮ್ ಆದಿಯಾಯ್

ಎನ್ರುಮ್  ಉನ್ ತನಕ್ಕು ಎಂಗಳ್ ಮೇಲ್ ಇರಕ್ಕಮ್ ಎಳಾದದು ಎಮ್ ಪಾವಮೇ

ನಾವು ಒಂದೇ ಜಾಗದಲ್ಲಿ, ಕದಲದೆ, ಬೆನ್ನು ನೋಯಿಸುವಷ್ಟು ಶ್ರಮದಿಂದ, ಕಟ್ಟಿಕೊಂಡ ಪುಟ್ಟ ಮನೆಯನ್ನು ಸವಿಯುವ ನಮ್ಮ ಆಸೆಯನ್ನು ಈಡೇರಿಸು. ಪ್ರಳಯದ ಸಮಯದಲ್ಲಿ ಕೋಮಲವಾದ ಆಲದ ಎಲೆಯ ಮೇಲೆ ಶಿಶುವಾಗಿ ಮಲಗಿದವನೇ ಮತ್ತು ನಮ್ಮ ಕಾರಣಕರ್ತನಾದವನೇ! ನಿನ್ನಲ್ಲಿ ಸದಾ ನಮ್ಮ ಬಗ್ಗೆ ವಾತ್ಸಲ್ಯ ಇಲ್ಲದಿರುವುದಕ್ಕೆ ನಮ್ಮ ಪಾಪಗಳೇ ಕಾರಣ.

ಮೂರನೇ ಪಾಸುರಂ. ಅವರು ತಮ್ಮ ಪುಟ್ಟ ಮನೆಗಳನ್ನು ನಾಶಮಾಡುವುದನ್ನು ನಿಲ್ಲಿಸಲು ಮತ್ತು ಅವನ ನೋಟದ ಮೂಲಕ ಅವರನ್ನು ಹಿಂಸಿಸುವುದನ್ನು ನಿಲ್ಲಿಸಲು ಹೇಳುತ್ತಾರೆ.

ಕುಂಡು ನೀರುರೈ ಕೋಳರೀ! ಮದ ಯಾನೈ ಕೋಳ್ ವಿಡುತ್ತಾಯ್ ಉನ್ನೈ

ಕಂಡು ಮಾಲ್ ಉರುವೋಂಗಳೈ ಕಡೈ ಕಣ್ಗಳಾಲಿಟ್ಟು ವಾದಿಯೇಲ್

ವಂಡಲ್ ನುಣ್ ಮಣಲ್  ತೆಳ್ಳಿ ಯಾಮ್ ವಳೈ ಕೈಗಳಾಲ್ ಶಿರಮಪಟ್ಟೋಮ್

ತೆಣ್ತಿರೈ ಕಡಲ್ ಪಳ್ಳಿಯಾಯ್ ಎಂಗಳ್ ಶಿಟ್ರಿಲ್ ವಂದು ಶಿದೈಯೇಲೇ

ಪ್ರಳಯದ ಆಳವಾದ ಸಾಗರದಲ್ಲಿ ಪ್ರಬಲ ಸಿಂಹದಂತೆ ಮಲಗಿರುವವನೇ! ಓಹ್, ಗಜೇಂದ್ರಾಳ್ವಾನ್ (ಆನೆ) ಗೆ  ಉಂಟಾದ ದುಃಖವನ್ನು ನಿವಾರಿಸಿದವನೇ! ನಿನ್ನನ್ನು ನೋಡಿದ ಮೇಲೆ ನಿನ್ನನ್ನು ಬಯಸಿದ ನಮ್ಮನ್ನು ನಿನ್ನ ನೋಟದಿಂದ ಹಿಂಸಿಸಬೇಡ. ನಾವು ಬಳೆಗಳನ್ನು ಧರಿಸಿ ನಮ್ಮ ಕೈಗಳಿಂದ ಜರಡಿ ಹಿಡಿದ ಮೆಕ್ಕಲು ಮಣ್ಣಿನಿಂದ ಸಾಕಷ್ಟು ಶ್ರಮದಿಂದ ಈ ಪುಟ್ಟ ಮನೆಗಳನ್ನು ನಿರ್ಮಿಸಿದ್ದೇವೆ. ಓಹ್, ಕ್ಷೀರಸಾಗರವನ್ನು ಅದರ ಸ್ಪಷ್ಟ ಅಲೆಗಳೊಂದಿಗೆ ದೈವೀಕ ಹಾಸಿಗೆಯಂತೆ ಹೊಂದಿರುವವನೇ! ಇಲ್ಲಿಗೆ ಬಂದು ನಮ್ಮ ಪುಟ್ಟ ಮರಳಿನ ಮನೆಗಳನ್ನು ಹಾಳು ಮಾಡಬೇಡ.

ನಾಲ್ಕನೆಯ ಪಾಸುರಂ. ಮಾಂತ್ರಿಕ ಸ್ತೋತ್ರದಂತೆ ವರ್ತಿಸುವ ಅವನ ಮುಖದಿಂದ ಅವರನ್ನು ದಿಗ್ಭ್ರಮೆಗೊಳಿಸುವ ಮೂಲಕ ತಮ್ಮ ಮರಳಿನ ಮನೆಗಳನ್ನು ನಾಶಪಡಿಸಬೇಡಿ ಎಂದು ಅವರು ಅವನಿಗೆ ಹೇಳುತ್ತಾರೆ.

ಪೈಯ್ಯು ಮಾ ಮುಗಿಲ್ ಪೋಲ್ ವಣ್ಣಾ! ಉನ್ ತನ್  ಪೇಚ್ಚುಮ್ ಶೆಯ್ಗೈಯುಮ್ ಎಂಗಳೈ

ಮೈಯಲ್ ಏಟ್ರಿ ಮಯಕ್ಕ ಉನ್ ಮುಗಮ್ ಮಾಯಮ್ ಮಂತಿರಮ್ ತಾನ್ ಕೊಲೋ?

ನೊಯ್ಯರ್ ಪಿಳ್ಳೈಗಳ್ ಎನ್ಬದರ್ಕು ಉನ್ನೈ ನೋವ ನಾಂಗಳ್ ಉರೈಕ್ಕಿಲೋಮ್

ಶೆಯ್ಯ ತಾಮರೈ ಕಣ್ಣಿನಾಯ್ ಎಂಗಳ್ ಶಿಟ್ರಿಲ್ ವಂದು ಶಿದೈಯೇಲೇ

ಮಳೆಯನ್ನು ಸುರಿಸುತ್ತಿರುವ ಕಾರ್ಮೋಡದ ದಿವ್ಯ ಮೈಬಣ್ಣವುಳ್ಳವನೇ!  ನಿನ್ನ ದೈವೀಕ ಮುಖವು ನಿನ್ನ ಕೀಳು ಮಾತುಗಳು ಮತ್ತು ಚಟುವಟಿಕೆಗಳ ಮೂಲಕ ನಮ್ಮನ್ನು ದಿಗ್ಭ್ರಮೆಗೊಳಿಸುವ ಮತ್ತು ಕಂಗೆಡಿಸುವ ಮಾಂತ್ರಿಕ ಪುಡಿಯಂತಿದೆಯೇ? ಓಹ್, ಕೆಂಪು ಕಮಲದಂತಹ ದಿವ್ಯ ಕಣ್ಣುಗಳನ್ನು ಉಳ್ಳವನೇ! “ಇವರು ಕೀಳು ಚಿಕ್ಕ ಹುಡುಗಿಯರು” ಎಂದು ನೀವು ಹೇಳುತ್ತೀರಿ ಎನ್ನುವ ಭಯದಿಂದ ನಾವು ನಿನ್ನ ಬಗ್ಗೆ ಏನನ್ನೂ ಹೇಳುತ್ತಿಲ್ಲ ಮತ್ತು ನಿನ್ನನ್ನು ದುಃಖಿಸುವಂತೆ ಮಾಡುತ್ತಿಲ್ಲ. ಬಂದು ನಮ್ಮ ಪುಟ್ಟ ಮರಳಿನ ಮನೆಗಳನ್ನು ಹಾಳು ಮಾಡಬೇಡಿ.

ಐದನೇ ಪಾಸುರಂ. ಅವನು ಏನು ಮಾಡಿದರೂ ತಾವು ಕೋಪಗೊಳ್ಳುವುದಿಲ್ಲ ಎಂದು ಅವನು ನೋಡುತ್ತಿಲ್ಲವೇ ಎಂದು ಅವರು ಅವನನ್ನು ಕೇಳುತ್ತಾರೆ.

ವೆಳ್ಳೈ ನುಣ್ ಮಣಲ್  ಕೊಂಡು ಶಿಟ್ರಿಲ್ ವಿಚಿತ್ತಿರಪಡ ವೀದಿ ವಾಯ್

ತೆಳ್ಳಿ ನಾನ್ಗಳ್  ಇಳೈತ್ತ ಕೋಲಮ್ ಅಳಿತ್ತಿ ಆಗಿಲುಮ್ ಉನ್ ತನ್ ಮೇಲ್

ಉಳ್ಳಂ ಓಡಿ ಉರುಗಳ್ ಇಲ್ಲಾಲ್ ಉರೋಡಮ್ ಒನ್ರುಮಿಲೋಮ್  ಕಂಡಾಯ್

ಕಳ್ಳ ಮಾಧವಾ! ಕೇಶವಾ!  ಉನ್ಮುಗತ್ತನ ಕಣ್ಗಳ್ ಅಲ್ಲವೇ

ಮೋಸಗೊಳಿಸುವ ಚಟುವಟಿಕೆಗಳನ್ನು ಹೊಂದಿರುವ ಮಾಧವ! ಓ ಕೇಶವ! ನಾವು ಬೀದಿಯಲ್ಲಿ ಉತ್ತಮವಾದ, ಬಿಳಿ ಮರಳಿನಿಂದ ಜರಡಿ ಹಿಡಿದು , ಸುಂದರವಾದ, ಎಲ್ಲರೂ ಆಶ್ಚರ್ಯಚಕಿತರಾಗುವಂತಹ ಸಣ್ಣ ಮನೆಗಳನ್ನು ನಿರ್ಮಿಸಿದ್ದೇವೆ. ನೀನು ಅವನ್ನು ನಾಶಪಡಿಸಿದರೆ, ನಮ್ಮ ಹೃದಯಗಳು ಒಡೆದು ಕರಗುತ್ತವೆ, ಆದರೆ ನಾವು ನಿನ್ನ  ಮೇಲೆ ಸ್ವಲ್ಪವೂ ಕೋಪಗೊಳ್ಳುವುದಿಲ್ಲ. ನಿನ್ನ ದಿವ್ಯ ಮುಖದ ಮೇಲೆ ಕಣ್ಣಿಲ್ಲವೇ? ಆ ಕಣ್ಣುಗಳಿಂದ ನೀನೇ ನೋಡಬಹುದು.

ಆರನೇ ಪಾಸುರಂ. ಪುಟ್ಟ ಮರಳಿನ ಮನೆಗಳನ್ನು ಹಾಳು ಮಾಡುತ್ತೇನೆ ಎಂದಾಗ ಮತ್ತೇನೋ ಯೋಚಿಸುತ್ತಿದ್ದೀಯ . ನಮಗೆ ಇದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳುತ್ತಾರೆ.

ಮುಟ್ರಿಲ್ಲಾದ ಪಿಳ್ಳೈಗಳೋಮ್ ಮುಲೈ ಪೋನ್ದಿಲಾದೋಮೇ ನಾಳ್ದೋರುಮ್

ಶಿಟ್ರಿಲ್ ಮೇಲಿಟ್ಟುಕೊಂಡು ನೀ ಶಿರಿದು ಉಂಡು ತಿಣ್ಣೆನ ನಾಮ್ ಅದು

ಕಟ್ರಿಲೋಮ್ ಕಡಲೈ ಅಡೈತ್ತು ಅರಕ್ಕರ್ ಕುಲಂಗಳೈ ಮುಟ್ರವುಮ್

ಶೆಟ್ರು ಇಳಂಗೈಯೈ ಪೂಶಲಾಕ್ಕಿಯ ಶೇವಗಾ ಎಮ್ಮೈ ವಾದಿಯೇಲ್

ಸಾಗರಕ್ಕೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟಿ, ಇಡೀ ರಾಕ್ಷಸ ಕುಲವನ್ನೇ ನಾಶಮಾಡಿ ಲಂಕೆಯನ್ನು ಯುದ್ಧಭೂಮಿಯನ್ನಾಗಿ ಪರಿವರ್ತಿಸಿದ ಓ ಯೋಧನೇ! ನಾವು ಇನ್ನೂ ಪ್ರೌಢರಾಗದ ಎದೆಯನ್ನು ಹೊಂದಿರುವ ಸಣ್ಣ ಹುಡುಗಿಯರು. ನಾವು ಕಟ್ಟಿದ ಪುಟ್ಟ ಮರಳಿನ ಮನೆಗಳನ್ನು ಹಾಳು ಮಾಡುವ ನಿಮ್ಮ ಕೃತ್ಯಗಳಿಗೆ ಒಳಾರ್ಥವಿದೆ. ಆ ಅರ್ಥವನ್ನು ನಾವು ಕಲಿತಿಲ್ಲ. ನಮಗೆ ತೊಂದರೆ ಕೊಡಬೇಡಿ.

ಏಳನೇ ಪಾಸುರಂ. ನಿಮ್ಮ ದೈವಿಕ ಸಂಗಾತಿಗಳ ಹೆಸರಿನಲ್ಲಿ ನಾವು ನಿಮಗೆ ಆದೇಶ ನೀಡುತ್ತಿದ್ದೇವೆ. ನಮ್ಮ ಪುಟ್ಟ ಮರಳಿನ ಮನೆಗಳನ್ನು ಹಾಳು ಮಾಡಬೇಡ.

ಭೇದಂ ನನ್ಗು ಅರಿವಾರ್ಗಳೋಡು ಇವೈ ಪೇಶಿನಾಲ್ ಪೆರಿದುಇನ್ ಶುವೈ

ಯಾದುಂ ಒನ್ರುಮ್ ಅರಿಯಾದ ಪಿಳ್ಳೈಗಳೋಮೇ ನೀ ನಲಿಂದು ಎನ್ ಪಯನ್?

ಓದಂ ಮಾ ಕಡಲ್ ವಣ್ಣಾ ಉನ್ ಮಣವಾಟ್ಟಿಮಾರೊಡು ಶೂಳರುಮ್

ಶೇತು ಬಂಧಂ ತಿರುತ್ತಿನಾಯ್ ಎಂಗಳ್ ಶಿಟ್ರಿಲ್ ವಂದು ಶಿದೆಯೇಲೇ

ವಿವಿಧ ರೀತಿಯಲ್ಲಿ ನೀನು ಮಾತನಾಡುವ ವಿಧಾನಗಳನ್ನು ತಿಳಿದುಕೊಂಡ  ಪರಿಣಿತರ ಜೊತೆ ಈ ಮಾತುಗಳನ್ನು ಹೇಳಿದರೆ ಅದು ನಿಮಗೆ ಸಿಹಿಯಾಗಿರುತ್ತದೆ. ನಮ್ಮಂಥ ಅಜ್ಞಾನಿ ಹೆಣ್ಣುಮಕ್ಕಳಿಗೆ ತೊಂದರೆ ಕೊಡುವುದರಿಂದ ನಿನಗೇನು ಪ್ರಯೋಜನ? ಓ ಅಲೆಗಳಿಂದ ಕೂಡಿದ ಸಾಗರದ ಮೈಬಣ್ಣವನ್ನು ಹೊಂದಿರುವವನೇ!  ಓ ಸಾಗರಕ್ಕೆ ಅಡ್ಡಲಾಗಿ ಅಣೆಕಟ್ಟು ಕಟ್ಟಿದವನೇ!  ನಿನ್ನ ದೈವೀಕ ಸಂಗಾತಿಗಳ ಹೆಸರಿನಲ್ಲಿ ನಾವು ನಿಮಗೆ ಆದೇಶ ನೀಡುತ್ತಿದ್ದೇವೆ. ಇಲ್ಲಿಗೆ ಬಂದು ನಮ್ಮ ಪುಟ್ಟ ಮರಳಿನ ಮನೆಗಳನ್ನು ಹಾಳು ಮಾಡಬೇಡಿ.

ಎಂಟನೆಯ ಪಾಸುರಂ. ಒಂದು ಅಸ್ತಿತ್ವವು ಎಷ್ಟೇ ಸಿಹಿಯಾಗಿದ್ದರೂ, ಒಬ್ಬರ ಹೃದಯದಲ್ಲಿ ಕಹಿ ಇದ್ದರೆ, ಅದು ರುಚಿಸುವುದಿಲ್ಲ ಎಂದು ಅವರು ಅರ್ಥಮಾಡಿಕೊಳ್ಳಲು ಹೇಳುತ್ತಾರೆ.

ವಟ್ಟಂ ವಾಯ್ ಶಿರು ತೂದೈಯೋಡು ಶಿರುಶುಳಕಂ ಮಣಲುಮ್ ಕೊಂಡು

ಇತ್ತ ಮಾ ವಿಳೈಯಾಡುವೋನ್ಗಳೈ  ಶಿಟ್ರಿಲ್ ಈಡಳಿತ್ತು ಎನ್ ಪಯನ್?

ತೊಟ್ಟು ಉಡೈತ್ತು ನಲಿಯೇಲ್ ಕಂಡಾಯ್ ಶುಡರ್ ಶಕ್ಕರಂ ಕೈಯ್ಯಿಲ್ ಏನ್ದಿನಾಯ್!

ಕಟ್ಟಿಯುಮ್ ಕೈತ್ತಾಲ್ ಇನ್ನಾಮೈ ಅರಿದಿಯೇ ಕಡಲ್ ವಣ್ಣನೇ!

ತನ್ನ ದಿವ್ಯ ಹಸ್ತದಲ್ಲಿ ತೇಜಸ್ವಿ ದಿವ್ಯ ಚಕ್ರವನ್ನು ಹಿಡಿದಿರುವ ಓ  ಎಂಪೆರುಮಾನ್! ಓ ಸಾಗರದ ರೂಪವುಳ್ಳವನೇ! ದುಂಡಗಿನ ಬಾಯಿ, ತೂರು, ಮರಳು ಇರುವ ಸಣ್ಣ ಮಣ್ಣಿನ ಮಡಕೆಗಳಿಂದ ನಾವು ಕಟ್ಟುವ ಪುಟ್ಟ ಮನೆಗಳನ್ನು ಪದೇ ಪದೇ ಹಾಳು ಮಾಡುವುದರಿಂದ ನಿನಗೇನು ಪ್ರಯೋಜನ? ನಿಮ್ಮ ಕೈಯಿಂದ ಸ್ಪರ್ಶಿಸುವ ಮೂಲಕ ಮತ್ತು ನಿಮ್ಮ ಕಾಲಿನಿಂದ ಒದೆಯುವ ಮೂಲಕ ತೊಂದರೆ ಕೊಡಬೇಡಿ. ಹೃದಯ ಪೀಡಿತವಾಗಿರುವಾಗ, ಕಲ್ಲುಸಕ್ಕರೆ ಕೂಡ ಕಹಿಯಂತೆ ರುಚಿಸುತ್ತದೆ ಎಂದು ನಿನಗೆ ತಿಳಿದಿಲ್ಲವೇ?

ಒಂಭತ್ತನೇ ಪಾಸುರಂ. ಅವರು ಕಣ್ಣನೊಂದಿಗೆ ಹೇಗೆ ಒಂದಾಗಿದ್ದಾರೆಂದು ಪರಸ್ಪರ ಮಾತನಾಡಿಕೊಳ್ಳುತ್ತಾರೆ  ಮತ್ತು ಆ ಅನುಭವವನ್ನು ಆನಂದಿಸುತ್ತಾರೆ.

ಮುಟ್ರತ್ತೂಡು  ಪುಗುಂದು ನಿನ್ ಮುಗಮ್ ಕಾಟ್ಟ ಪುನ್ಮುರವಲ್ ಶೆಯ್ದು

ಶಿಟ್ರಿಲೋಡು ಎಂಗಳ್ ಶಿಂದೆಯುಮ್ ಶಿದೈಕ್ಕ ಕಡವೈಯೋ ಗೋವಿಂದಾ!

ಮುಟ್ರ ಮಣ್ ಇಡಮ್ ತಾವಿ ವಿಣ್ಉರ ನೀನ್ಡು ಅಳಂದು ಕೊಂಡಾಯ್! ಎಮ್ಮೈ

ಪಟ್ರಿ ಮೆಯ್ ಪಿಣಕ್ಕು ಇಟ್ಟಕ್ಕಾಲ್ ಇಂದ ಪಕ್ಕಮ್ ನಿನ್ರವರ್ ಎನ್ ಶೊಲ್ಲಾರ್?

ಓ ಗೋವಿಂದಾ! ಓಹ್, ಒಂದು ಪಾದದಿಂದ ಇಡೀ ಭೂಮಿಯನ್ನು ಅಳೆಯುವವನು ಮತ್ತು ಇನ್ನೊಂದು ಪಾದವನ್ನು ಆಕಾಶದ ಕಡೆಗೆ ಚಾಚಿ ಮೇಲಿನ ಪ್ರದೇಶಗಳಲ್ಲಿ ಎಲ್ಲಾ ಲೋಕಗಳನ್ನು ಅಳೆಯುವವನು! ನೀನು ನಮ್ಮ ಅಂಗಳಕ್ಕೆ ಬಂದು, ನಿನ್ನ ದಿವ್ಯ ಮುಖವನ್ನು ನಗುವಿನೊಂದಿಗೆ ತೋರಿಸಿ ಮತ್ತು ನಮ್ಮ ಹೃದಯಗಳನ್ನು ಮತ್ತು ಸಣ್ಣ ಮನೆಗಳನ್ನು ನಾಶಮಾಡುತ್ತೀರಾ? ಅದಕ್ಕೂ ಮೀರಿ ಹತ್ತಿರ ಬಂದು ಅಪ್ಪಿಕೊಂಡರೆ ಇಲ್ಲಿನ ಜನ ಏನು ಹೇಳುತ್ತಾರೆ?

ಹತ್ತನೇ ಪಾಸುರಂ. ಈ ಹತ್ತು ಪಾಸುರಂಗಳನ್ನು ಅವುಗಳ ಅರ್ಥವನ್ನು ತಿಳಿದುಕೊಂಡು ಪಠಿಸುವವರಿಗೆ ಸೇರಿಕೊಳ್ಳುವ ಫಲವನ್ನು ತಿಳಿಸಿ,  ಪಧಿಗವನ್ನು ಪೂರ್ಣಗೊಳಿಸುತ್ತಾಳೆ.

ಶೀದೈ ವಾಯ್ ಅಮುದಮ್ ಉಂಡಾಯ್ ಎಂಗಳ್ ಶಿಟ್ರಿಲ್ ನೀ ಶಿದೆಯೇಲ್ ಎನ್ರು

ವೀದಿವಾಯ್ ವಿಳೈಯಾಡುಮ್ ಆಯರ್ ಶಿರುಮಿಯರ್ ಮಳಲೈ ಶೊಲ್ಲೈ

ವೇದವಾಯ್ ತೊಳಿಲಾರ್ಗಳ್ ವಾಳ್ ವಿಲ್ಲಿಪುತ್ತೂರ್ ಮನ್ ವಿಟ್ಟುಶಿತ್ತನ್ ತನ್

ಕೋದೈವಾಯ್ ತಮಿಳ್ ವಲ್ಲವರ್ ಕುರೈವು ಇನ್ರಿ ವೈಕುಂದಂ ಶೇರ್ವರೇ

ಓ ಸೀತಾ ದೇವಿಯ ಅಧರಾಮೃತವನ್ನು ಸೇವಿಸಿದವನೇ! ಚಿಕ್ಕ ದನ ಕಾಯುವ ಹುಡುಗಿಯರು ಬೀದಿಯಲ್ಲಿ ಆಟವಾಡುತ್ತಾ ಎಂಪೆರುಮಾನನಿಗೆ “ನಮ್ಮ ಪುಟ್ಟ ಮನೆಗಳನ್ನು ಹಾಳು ಮಾಡಬೇಡಿ” ಎಂದು ಹೇಳಿದರು. ಈ ಮಾತುಗಳನ್ನು ಮೈಗೂಡಿಸಿಕೊಂಡವರು, ವೇದಾಧ್ಯಯನವನ್ನು ನಡೆಸುವ ಮಹನೀಯರು ವಾಸಿಸುವ ಶ್ರೀವಿಲ್ಲಿಪುತ್ತೂರಿನ ನಾಯಕರಾದ ಪೆರಿಯಾಳ್ವಾರ್ ಅವರ ಪುತ್ರಿ ಆಂಡಾಳ್ ಅವರು ರಚಿಸಿದ ಹತ್ತು ಪಾಸುರಂಗಳನ್ನು ಪಠಿಸುವವರು ಯಾವುದೇ ಕೊರತೆಯಿಲ್ಲದೆ ಶ್ರೀವೈಕುಂಠವನ್ನು ತಲುಪುತ್ತಾರೆ.

ಅಡಿಯೇನ್ ಯತಿರಾಜ ರಾಮಾನುಜ ದಾಸನ್ 

ಮೂಲ: http://divyaprabandham.koyil.org/index.php/2020/05/nachchiyar-thirumozhi-2-simple/

ಸಂಗ್ರಹಣಾ ಸ್ಥಾನ http://divyaprabandham.koyil.org

ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org