ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ
<< ಹನ್ನೆರಡನೇ ತಿರುಮೊಳಿ – ಮಟ್ರಿರುಂದೀರ್
ಅವಳ ಸ್ಥಿತಿಯನ್ನು ನೋಡಿದವರಿಗೆ ದುಃಖವಾಯಿತು ಮತ್ತು ಅವಳನ್ನು ಎಲ್ಲಿಗೂ ಕರೆದೊಯ್ಯುವ ಶಕ್ತಿ ಇರಲಿಲ್ಲ. ಅವರು ಭಾರಿ ಪ್ರಯತ್ನಗಳನ್ನು ಮಾಡಿದರೂ, ಅವಳನ್ನು ಕರುಣೆಯಿಂದ ಹಾಸಿಗೆಯಲ್ಲಿ ಮಾತ್ರ ಸಾಗಿಸಬೇಕಾಗುತ್ತದೆ. ಈ ಸ್ಥಿತಿಯಲ್ಲಿ, ಅವಳು ಅವರಿಗೆ “ನೀವು ನನ್ನ ಸ್ಥಿತಿಯನ್ನು ಸರಿಪಡಿಸಲು ಬಯಸಿದರೆ, ಎಂಪೆರುಮಾನ್‌ಗೆ ಸಂಪರ್ಕವಿರುವ ಯಾವುದೇ ವಸ್ತುವನ್ನು ತಂದು ಅದನ್ನು ನನ್ನ ಮೇಲೆ ನಿಧಾನವಾಗಿ ಉಜ್ಜುವ ಮೂಲಕ ನನ್ನ ಜೀವ ಉಳಿಸಲು ಪ್ರಯತ್ನಿಸಿ” ಎಂದು ಹೇಳುತ್ತಾಳೆ.
ಅವರು ಅವಳನ್ನು”ಎಂಪೆರುಮಾನ್‌ನೊಂದಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ನೀನು ನಿಜವಾಗಿಯೂ ಬಳಲುತ್ತಿದ್ದೀಯಾ? ನೀನು ಈ ರೀತಿ ಬಳಲಬಹುದೇ?” ಎಂದು ಕೇಳುತ್ತಾರೆ. ಎಂಪೆರುಮಾನ್‌ಗೆ ಶರಣಾದ ನೀನು ಆ ಕುಲದ (ಶರಣಾಗತರ) ಶ್ರೇಷ್ಠತೆಯನ್ನು ನೋಡಬಾರದೇ? ನೀನು ಹೀಗೆ ಮಾಡಿದರೆ, ಅವನಿಗೆ ಮೇಲೆ ಉಂಟಾಗುವ ಆಪಾದನೆಯ ಬಗ್ಗೆ ನೀನು ಯೋಚಿಸಬಾರದು? ಆಕೆ ಹೀಗೆ ಪ್ರತಿಕ್ರಿಯಿಸುತ್ತಾಳೆ: “ನಮ್ಮ ಕುಲಕ್ಕೆ ಆಪಾದನೆ ಬರಬಾರದು ಎಂಬ ಕಾರಣಕ್ಕೆ ನೀವು ಹೇಳುತ್ತಿರುವ ಮಾತುಗಳು ನನ್ನ ಇಂದಿನ ಸ್ಥಿತಿಗೆ ತಕ್ಕುದಲ್ಲ. ನಿಮಗೆ ನನ್ನನ್ನು ರಕ್ಷಿಸುವ ಯೋಚನೆಯಿದ್ದರೆ ಅವನಿಂದ ಯಾವುದಾದರೂ ವಸ್ತುವನ್ನು ಪಡೆದು ಅದನ್ನು ನನ್ನ ಮೇಲೆ ಮೃದುವಾಗಿ ಉಜ್ಜಿ”.
ಮೊದಲನೇ ಪಾಸುರಂ. ಅವನ ದೈವೀಕ ಸೊಂಟದ ಮೇಲೆ ಧರಿಸಿರುವ ಹಳದಿ ಬಣ್ಣದ ಉಡುಪನ್ನು ತಂದು ಅವಳ ಸಂಕಟವನ್ನು ನಿವಾರಿಸುವಂತೆ ಅವಳಿಗೆ ಗಾಳಿ ಬೀಸಲು ಅವಳು ಅವರಿಗೆ ಹೇಳುತ್ತಾಳೆ.
ಕಣ್ಣನ್ ಎನ್ನುಮ್ ಕರುಂ ದೈವಂ ಕಾಟ್ಚಿ ಪಳಗಿ ಕಿಡಪ್ಪೇನೈ
ಪುಣ್ಣಿಲ್ ಪುಳ್ಳಿಪ್ಪೆಯ್ದಾರ್ ಪೋಲ ಪುರಂ ನಿನ್ರು ಅಳಗು ಪೇಶಾದೇ
ಪೆಣ್ಣಿನ್ ವರುತ್ತಮ್ ಅರಿಯಾದ ಪೆರುಮಾನ್ ಅರೈಯಿಲ್ ಪೀತಗ
ವಣ್ಣ ಆಡೈ ಕೊಂಡು ಎನ್ನೈ ವಾಟ್ಟಂ ತಣಿಯ ವೀಶೀರೇ
ಓ ತಾಯಂದಿರೇ! ನಾನು ಕಪ್ಪಾದ, ಆದರೆ ಪ್ರತಿಷ್ಠಿತ ದೇವರಾಗಿರುವ ಕಣ್ಣನ ಸನ್ನಿಧಿಯಲ್ಲಿದ್ದೇನೆ. ನನ್ನಿಂದ ದೂರ ನಿಂತು ಗಾಯಕ್ಕೆ ಉಪ್ಪು ಹಾಕುವಂತೆ ನನಗೆ ಕಿರಿಕಿರಿಯುಂಟುಮಾಡುವ ಬದಲು, ಈ ಹುಡುಗಿಯ ದುಃಖವನ್ನು ತಿಳಿಯದ ಕಣ್ಣನ ದಿವ್ಯ ಸೊಂಟದಿಂದ ದಿವ್ಯವಾದ ಹಳದಿ ಬಣ್ಣದ ವಸ್ತ್ರವನ್ನು ತಂದು ಈ ಪ್ರತ್ಯೇಕತೆಯ ನೋವು ಕಣ್ಮರೆಯಾಗುವಂತೆ ನನಗೆ ಗಾಳಿ ಬೀಸಿರಿ.
ಎರಡನೇ ಪಾಸುರಂ. ಅವನು ತೊಟ್ಟಿದ್ದ ದೈವೀಕ ತುಳಸೀ ಮಾಲೆಯನ್ನು ತೆಗೆದು ತನ್ನ ತಲೆಗೂದಲಿನ ಮೇಲೆ ಮುಡಿಸಲು ಅವಳು ಅವರಿಗೆ ಹೇಳುತ್ತಾಳೆ.
ಪಾಲ್ ಆಲಿಲೆಯಿಲ್ ತುಯಿಲ್ ಕೊಂಡ ಪರಮನ್ ವಲೈಪಟ್ಟಿರುಂದೇನೈ
ವೇಲಾಲ್ ತುನ್ನಮ್ ಪೆಯ್ದಾರ್ ಪೋಲ್ ವೇನ್ಡಿಟ್ರೆಲ್ಲಾಮ್ ಪೇಶಾದೇ
ಕೋಲಾಲ್ ನಿರೈ ಮೇಯ್ತಾಯನಾಯ್ ಕುಡನ್ದೈ ಕಿಡಂದ ಕುಡಮಾಡಿ
ನೀಲಾರ್ ತಣ್ಣಮ್ ತುಳಾಯ್ ಕೊಂಡು ಎನ್ ನೆರಿ ಮೆನ್ ಕುಳಲ್ ಮೇಲ್ ಶೂಟ್ಟೀರೇ
ಕೋಮಲ ಆಲದೆಲೆಯ ಮೇಲೆ ಕರುಣೆಯಿಂದ ಮಲಗಿರುವ ಅವನ ಪರಮ ಶಕ್ತಿಯ ಜಾಲದಲ್ಲಿ ಶುಶ್ರೂಷೆಯ ಹಂತದಲ್ಲಿರುವ ಶಿಶುವಾಗಿ ನಾನು ಸಿಕ್ಕಿಬಿದ್ದಿದ್ದೇನೆ. ನೀವು ಹೇಳಲು ಬಯಸುವ ಯಾವುದೇ ವಿಷಯದ ಬಗ್ಗೆ ನನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿ, ಅವು ನನಗೆ ಈಟಿಯಂತೆ ಚುಚ್ಚುವ ಮಾತುಗಳಂತೆ ಇರುತ್ತವೆ. ಬದಲಾಗಿ, ತಿರುಕ್ಕುಡನ್ದೈನಲ್ಲಿ (ದೈವೀಕ ವಾಸಸ್ಥಾನ) ಮಲಗಿರುವ ಮತ್ತು ಅವನ ಸಹಾಯಕ್ಕಿರುವ ಕೋಲಿನಿಂದ ಹಸುಗಳನ್ನು ಮೇಯಿಸುವ ಕಣ್ಣನಿಂದ, ಹಸಿಯಾದ ತಣ್ಣಗಿನ ತುಳಸಿ ಮಾಲೆಯನ್ನು ತಂದು ನನ್ನ ಮೃದುವಾದ ಕವಚದ ಮೇಲೆ ತೊಡಿಸಿರಿ.
ಮೂರನೇ ಪಾಸುರಂ. ಅವನ ಎದೆಯ ಮೇಲಿರುವ ವನಮಾಲೈ (ದೈವೀಕ ಮಾಲೆ) ಯನ್ನು ತಂದು ನನ್ನ ಎದೆಯ ಮೇಲೆ ಹೊರಳಾಡಿಸಿ; ಅವನ ನೋಟದ ಬಾಣದಿಂದ ಸುಟ್ಟಗುಳ್ಳೆಯಂತಾಗಿರುವ ನನ್ನ ಎದೆಯು ತಂಪಾಗುತ್ತದೆ.
ಕಂಜೈ ಕಾಯ್ನ್ದ ಕರುವಿಲ್ಲಿ ಕಡೈಕಣ್ ಎನ್ನುಮ್ ಶಿರೈ ಕೋಲಾಲ್
ನೆಂಜು ಊಡುರುವ ವೇವುಂಡು ನಿಲೈಯುಮ್ ತಳರ್ನ್ದು ನೈವೇನೈ
ಅಂಜೇಲ್ ಎನ್ನಾನ್ ಅವನ್ ಒರುವನ್ ಅವನ್ ಮಾರ್ವಣಿನ್ದ ವನಮಾಲೈ
ವಂಜಿಯಾದೇ ತರುಮಾಗಿಲ್ ಮಾರ್ವಿಲ್ ಕೊಣರ್ನ್ದು ಪುರಟ್ಟೀರೇ
ಕಂಸನನ್ನು ಸಂಹರಿಸಿದ ಮತ್ತು ದೊಡ್ಡ ಬಿಲ್ಲಿನಂತಿರುವ ಹುಬ್ಬುಗಳನ್ನು ಹೊಂದಿರುವ ಕಣ್ಣನ ಕಡೆಗಣ್ಣಿನ ಬಾಣದಂತಹ ನೋಟದಿಂದ ಚುಚ್ಚಲ್ಪಟ್ಟ ನಾನು ಅಸ್ತವ್ಯಸ್ತಗೊಂಡಿದ್ದೇನೆ. ನಮ್ಮೆಲ್ಲರಿಗಿಂತ ಬಹಳ ವಿಶಿಷ್ಟವಾದ ಆ ಎಂಪೆರುಮಾನ್ ನನಗೆ “ಭಯಪಡಬೇಡ” ಎಂದು ಹೇಳುತ್ತಿಲ್ಲ. ಆ ಎಂಪೆರುಮಾನ್ ತನ್ನ ವನಮಾಲೈಯನ್ನು ವಂಚಿಸದೇ ದಯೆಯಿಂದ ಕೊಟ್ಟರೆ, ಅದನ್ನು ತಂದು ನನ್ನ ಎದೆಯ ಮೇಲೆ ಹೊರಳಾಡಿಸಿ.
ನಾಲ್ಕನೆಯ ಪಾಸುರಂ. ಶ್ರೀ ಮಹಾಲಕ್ಷ್ಮಿಯ ಪತಿಯಾದ ಎಂಪೆರುಮಾನ್ ನ ದೈವೀಕ ತುಟಿಗಳಿಂದ ಒಸರುವ ಅಮೃತದಂತಹ ದೈವೀಕ ಮಕರಂದವನ್ನು ಬಾಯೊಳು ಹಾಕಿ ಅವಳ ಆಯಾಸವನ್ನು ಹೋಗಲಾಡಿಸಲು ಅವಳು ಅವರಿಗೆ ಹೇಳುತ್ತಾಳೆ.
ಆರೇ ಉಲಗತ್ತಾಟ್ರುವಾರ್ ಆಯರ್ಪಾಡಿ ಕವರ್ನ್ದುಣ್ಣುಮ್
ಕಾರೇರುಳಕ್ಕ ಉಳಕ್ಕುಂಡು ತಳರ್ದುಮ್ ಮುರಿಂದುಂ ಕಿಡಪ್ಪೇನೈ
ಆರಾವಮುದಂ ಅನೈಯಾನ್ ತನ್ ಅಮುದಂ ವಾಯಿಲ್ ಊರಿಯ
ನೀರ್ ದಾನ್ ಕೊಣರ್ನ್ದು ಪುಲರಾಮೇ ಪರುಕ್ಕಿ ಇಳೈಪ್ಪೈ ನೀಕ್ಕೀರೇ
ಕಣ್ಣನು ಒಂದು ಕಪ್ಪು ಗೂಳಿಯಂತಿದ್ದು, ಅವನು ತಿರುವಾಯ್ಪ್ಪಾಡಿಯನ್ನು (ಶ್ರೀ ಗೋಕುಲಂ) ಸಂಪೂರ್ಣ ವಶಪಡಿಸಿಕೊಂಡು ಯಥೇಚ್ಛವಾಗಿ ಅನುಭವಿಸುವನು. ಅವನಿಂದ ಹಿಂಸಿಸಲ್ಪಟ್ಟ, ನನ್ನನ್ನು ದೌರ್ಬಲ್ಯ ಮತ್ತು ವೇದನೆಗೆ ಒಳಪಡಿಸಲಾಗಿರುವ ನನ್ನನ್ನು ಸಾಂತ್ವನ ಮಾಡಲು ಈ ಜಗತ್ತಿನಲ್ಲಿ ಯಾರಿದ್ದಾರೆ? (ತಾಯಂದಿರು “ನಾವೆಲ್ಲರೂ ಇಲ್ಲಿದ್ದೇವೆ; ನಿನಗೇನು ಬೇಕು? ಎಂದಾಗ”). ಅವನ ದಿವ್ಯವಾದ ಬಾಯಿಯಿಂದ ಅಮೃತದಂತಿರುವ ರಸವನ್ನು ನನಗೆ ತಂದುಕೊಡಿ; ಅದು ಎಷ್ಟು ಕುಡಿದರೂ ಬಾಯಾರುವುದಿಲ್ಲ ಮತ್ತು ನನ್ನ ದೇಹವು ಒಣಗದಂತೆ ಮತ್ತು ಆಯಾಸವಾಗದಂತೆ ಕುಡಿಯುವಂತೆ ಮಾಡಿ.
ಐದನೇ ಪಾಸುರಂ. ಅವಳು ಅವರಿಗೆ ಹೇಳುತ್ತಾಳೆ: “ನಾನು ಅವನ ತುಟಿಗಳಿಂದ, ನನಗೆ ಉದ್ದೇಶಿಸಿರುವ ದಿವ್ಯವಾದ ಅಧರಾಮೃತವನ್ನು ಪಡೆಯದಿದ್ದರೆ, ಅವನು ಕೊಳಲನ್ನು ನುಡಿಸುವಾಗ ಒರಸುವ ಅವನ ಆ ಮಕರಂದದ ಹನಿಗಳನ್ನು ತೆಗೆದುಕೊಂಡು ನನ್ನ ಮುಖದ ಮೇಲೆ ಹಚ್ಚಿ”.
ಅಳಿಲುಮ್ ತೊಳಿಲುಮ್ ಉರುಕಾಟ್ಟಾನ್ ಅಂಜೇಲ್ ಎನ್ನಾನವನ್ ಒರುವನ್
ತಳುವಿ ಮುಳುಶಿ ಪುಗುಂದು ಎನ್ನೈ ಶುತ್ತಿ ಶುಲನ್ರು ಪೋಗಾನ್ ಆಲ್
ತಳೈಯಿನ್ ಪೊಳಿಲ್ವಾಯ್ ನಿರೈ ಪಿನ್ನೇ ನೆಡುಮಾಲ್ ಊದಿ ವರುಗಿನ್ರ
ಕುಳಲಿನ್ ತುಳ್ಳೈವಾಯ್ ನೀರ್ ಕೊಂಡು ಕುಳಿರ ಮುಗತ್ತು ತಡವೀರೇ
ಮಹಾನ್ ವ್ಯಕ್ತಿಯಾಗಿರುವ ಕಣ್ಣನು, ಯಾರು ಕೂಗಿದರೂ ಅಥವಾ ಅವನನ್ನು ಪೂಜಿಸಿದರೂ ತನ್ನ ದಿವ್ಯ ಸ್ವರೂಪವನ್ನು ವ್ಯಕ್ತಪಡಿಸುವುದಿಲ್ಲ ಮತ್ತು ಅವನು “ಭಯಪಡಬೇಡ” ಎಂದು ಹೇಳುವುದಿಲ್ಲ. ಅವನು ಇಲ್ಲಿಗೆ ಬಂದಿದ್ದಾನೆ, ಮುಂದೆ ಮತ್ತು ಹಿಂದೆ ನನ್ನನ್ನು ಸುತ್ತುವರೆದು, ನನ್ನನ್ನು ಬಿಗಿಯಾಗಿ ತಬ್ಬಿಕೊಂಡಿದ್ದಾನೆ. ನವಿಲು ಗರಿಗಳಿಂದ ಮಾಡಿದ ಕೊಡೆಗಳಂತಿರುವ ತೋಟಗಳಲ್ಲಿ ಹಸುಗಳ ಹಿಂದೆ ನಿಂತು ಕಣ್ಣನು ನುಡಿಸುವಾಗ ಕೊಳಲಿನ ರಂಧ್ರಗಳಿಂದ ಸೋರುವ ನೀರಿನ ಹನಿಗಳನ್ನು ತನ್ನಿ. ಆ ನೀರಿನ ಹನಿಗಳನ್ನು ನನ್ನ ಮುಖದ ಮೇಲೆ ತಂಪಾಗಲು ಹಚ್ಚಿ.
ಆರನೇ ಪಾಸುರಂ. ಆ ನಾಚಿಕೆಯಿಲ್ಲದ ಕಣ್ಣನ ದಿವ್ಯ ಪಾದಧೂಳಿಯನ್ನಾದರೂ ತಂದು ನಾನು ನನ್ನ ಜೀವ ಉಳಿಸಿಕೊಳ್ಳಲಾಗುವಂತೆ ನನ್ನ ದೇಹಕ್ಕೆ ಪೂಸಿರಿ.
ನಡೈ ಒನ್ರಿಲ್ಲಾ ಉಲಗತ್ತು ನಂದಗೋಪನ್ ಮಗನ್ ಎನ್ನುಮ್
ಕೊಡಿಯ ಕಡಿಯ ತಿರುಮಾಲಾಲ್ ಕುಳಪುಕ್ಕೂರು ಕೊಳಪ್ಪಟ್ಟು
ಪುಡೈಯುಂ ಪೆಯರಗಿಲ್ಲೇನ್ ನಾನ್ ಪೋಟ್ಕನ್ ಮಿದಿತ್ತ ಅಡಿಪ್ಪಾಟ್ಟಿಲ್
ಪೊಡಿ ತ್ತಾನ್ ಕೊಣರ್ನ್ದು ಪೂಶೀರ್ಗಳ್ ಪೋಗಾ ಉಯಿರ್ ಎನ್ ಉಡಂಬೈಯೇ
ಎಲ್ಲಾ ಗಡಿಗಳನ್ನು ದಾಟಿದ ಈ ಜಗತ್ತಿನಲ್ಲಿ, ಶ್ರೀ ನಂದಗೋಪರ ಮಗ ಎಂದು ಕರೆಯಲ್ಪಡುವ, ಯಾವುದೇ ಕರುಣೆ ಇಲ್ಲದ ಮತ್ತು ಸ್ವಾರ್ಥಿಯಾದ ಶ್ರೀಪತಿಯಿಂದ (ಶ್ರೀ ಮಹಾಲಕ್ಷ್ಮಿಯ ಪತ್ನಿ) ನಾನು ಸಂಪೂರ್ಣವಾಗಿ ಶಕ್ತಿಹೀನಳಾಗಿದ್ದು, ನಾನು ಸ್ವಲ್ಪವೂ ಚಲಿಸಲು ಸಾಧ್ಯವಾಗದಷ್ಟು ಹಿಂಸೆಗೆ ಒಳಗಾಗಿದ್ದೇನೆ. ಆ ನಾಚಿಕೆಯಿಲ್ಲದ ಕಣ್ಣನ ದಿವ್ಯ ಪಾದಗಳು ನಡೆದಾಡಿದ ಮಣ್ಣಿನ ಧೂಳನ್ನು ಒಟ್ಟುಗೂಡಿಸಿ ಮತ್ತು ಜೀವವಿನ್ನೂ ಹೋಗದ ನನ್ನ ದೇಹಕ್ಕೆ ಪೂಸಿರಿ.
ಏಳನೇ ಪಾಸುರಂ. ಅವನು ತಾನಾಗಿ ತನ್ನ ಬಳಿಗೆ ಬರದಿದ್ದರೂ, ಅವರು ಅವಳನ್ನು ಅವನ ಬಳಿಗೆ ಕರೆದೊಯ್ಯಬಹುದಾದರೆ, ಅದು ಸ್ವೀಕಾರಾರ್ಹ ಮತ್ತು ಅದನ್ನು ಮಾಡಲು ಅವಳು ಅವರಿಗೆ ಹೇಳುತ್ತಾಳೆ.
ವೆಟ್ರಿ ಕರುಳ ಕೊಡಿಯಾನ್ ತನ್ ಮೀಮೀದಾಡಾ ಉಲಗತ್ತು
ವೆಟ್ರ ವೆರಿದೇ ಪೆತ್ತ ತಾಯ್ ವೇಂಬೇ ಆಗ ವಳರ್ತಾಳೇ
ಕುಟ್ರಂ ಅಟ್ರ ಮುಲೈ ತನ್ನೈ ಕುಮರನ್ ಕೋಲ ಪಣೈತೋಳೋಡು
ಅಟ್ರ ಕುಟ್ರಂ ಅವೈ ತೀರ ಅಣೈಯ ಅಮುಕ್ಕಿ ಕಟ್ಟೀರೇ
ಗರುಡನನ್ನು ವಿಜಯ ಪತಾಕೆಯನ್ನಾಗಿ ಹೊಂದಿರುವ ಎಂಪೆರುಮಾನ್‌ನ ಆದೇಶವನ್ನು ಮೀರಲಾಗದ ಈ ಜಗತ್ತಿನಲ್ಲಿ, ತಾಯಿಯಾದ ಯಶೋದಾ ಅವನನ್ನು ಕಹಿ ಬೇವಿನ ಹಣ್ಣಿನಂತೆ ಇತರರಿಗೆ ಯಾವುದೇ ಪ್ರಯೋಜನವಾಗದಂತೆ ಬೆಳೆಸಿದ್ದಾಳೆ. ಕರ್ಪಗ (ಇಷ್ಟವನ್ನು ಪೂರೈಸುವ) ಮರದ ಕೊಂಬೆಗಳಂತಿರುವ ಆ ಯೌವನದ ಎಂಪೆರುಮಾನ್‌ನ ಭುಜಗಳಿಂದ ನನ್ನ ಎದೆಯನ್ನು ಬಹಳ ದೃಢವಾಗಿ ಬಂಧಿಸಿ, ಆತನನ್ನು ಹೊರತುಪಡಿಸಿ ಬೇರೆಯವರನ್ನು ಇಷ್ಟಪಡುವಂತಹ ದೋಷವಿರದ ನನ್ನ ಎದೆಯು ಅವನಿಗೋಸ್ಕರವಾಗಿ ಅಸ್ತಿತ್ವದಲ್ಲಿರುವುದರಿಂದ, ನನ್ನನ್ನು ತೊರೆದ ದೋಷದಿಂದ ವಿಮೋಚನಗೊಳ್ಳುತ್ತವೆ.
ಎಂಟನೆಯ ಪಾಸುರಂ. ನನ್ನನ್ನು ಬಹಿಷ್ಕರಿಸುತ್ತಿರುವ ಆತನನ್ನು ಕಂಡರೆ ನನ್ನ ಈ ನಿಷ್ಪ್ರಯೋಜಕವಾದ ಎದೆಯನ್ನು ಬುಡ ಸಹಿತ ಕಿತ್ತು ಅವನ ಎದೆಯ ಮೇಲೆ ಎಸೆದು ನನ್ನ ದುಃಖವನ್ನು ಹೋಗಲಾಡಿಸಿಕೊಳ್ಳುವೆನು.
ಉಳ್ಳೇ ಉರುಗಿ ನೈವೇನೈ ಉಳಳೋ ಇಲಳೋ ಎನ್ನಾದ
ಕೋಳ್ಳೈ ಕೊಳ್ಳಿ ಕುರುಮ್ಬನೈ ಗೋವರ್ಧನನೈ ಕಂಡಕ್ಕಾಲ್
ಕೊಳ್ಳುಮ್ ಪಯನ್ ಒನ್ರಿಲ್ಲಾದ ಕೊಂಗೈ ತನ್ನೈ ಕಿಳಂಗೋಡುಮ್
ಅಳಿ ಪರಿತ್ತಿಟ್ಟವನ್ ಮಾರ್ವಿಲ್ ಎರಿಂದು ಎನ್ ಅಳಲೈ ತೀರ್ವೆನೇ
ಮನಸು ಕರಗಿ ಘಾಸಿಗೊಂಡು ಇರುವ ನನ್ನ ಬಗ್ಗೆ “ಅವಳು ಬದುಕಿದ್ದಾಳೋ ಸತ್ತಿದ್ದಾಳೋ?” ಎಂದು ಅವನು ಕೇಳುತ್ತಿಲ್ಲ. ಅವನು ನನ್ನ ಆಸ್ತಿಯನ್ನೆಲ್ಲಾ ಕೊಳ್ಳೆಹೊಡೆದಿದ್ದಾನೆ. ನನಗೆ ದುಷ್ಟನಾಗಿರುವ ಆ ಕಣ್ಣನನ್ನು ಕಂಡರೆ ಈ ಅನುಪಯುಕ್ತವಾದ ಎದೆಯನ್ನು ಕಿತ್ತು ಅವನ ಎದೆಗೆ ಎಸೆದು ನನ್ನ ದುಃಖವನ್ನು ನಿವಾರಿಸಿಕೊಳ್ಳುವೆನು.
ಒಂಭತ್ತನೇ ಪಾಸುರಂ. ಅಕ್ಕ ಪಕ್ಕದವರು ಅವಳಿಗೆ ಅವಳ ಅಂತರ್ಯಾಮಿ (ಅವಳೊಳಗೆ ವಾಸಿಸುವ ಮತ್ತು ಅವಳನ್ನು ನಿಯಂತ್ರಿಸುವ) ಎಂಪೆರುಮಾನ್ ಅನ್ನು ಆನಂದಿಸಲು ಹೇಳಿದಾಗ, ಅವಳು “ನಾನು ಅವನನ್ನು ಈ ರೂಪದಲ್ಲಿ ಆನಂದಿಸಬೇಕು; ನಾನು ಅವನನ್ನು ಬೇರೆ ರೀತಿಯಲ್ಲಿ ಮತ್ತು ಬೇರೆ ವಿಧಾನದಲ್ಲಿ ಆನಂದಿಸಲು ಬಯಸುವುದಿಲ್ಲ.
ಕೊಮ್ಮೈ ಮುಲೈಗಳ್ ಇಡರ್ ತೀರ ಗೋವಿಂದರ್ಕು ಓರ್ ಕುಟ್ರೇವಲ್
ಇಮ್ಮೈ ಪಿರವಿ ಶೇಯ್ಯಾದೇ ಇನಿ ಪೋಯ್ ಶೆಯ್ಯುಮ್ ತವಂದಾನ್ ಎನ್
ಶೆಮ್ಮೈ ಉಡೈಯ ತಿರು ಮಾರ್ವಿಲ್ ಶೇರ್ತಾನೇಲುಮ್ ಒರು ಜ್ಞಾನ್ರು
ಮೆಯ್ಮೈ ಶೊಲ್ಲಿ ಮುಗಮ್ ನೋಕ್ಕಿ ವಿಡೈತಾನ್ ತರುಮೇಲ್ ಮಿಗನನ್ರೇ
ಚೆನ್ನಾಗಿ ಬೆಳೆದ, ದೃಡವಾದ ಈ ನನ್ನ ಎದೆಯೊಂದಿಗೆ ಕಣ್ಣನಿಗಾಗಿ ಈ ಜನ್ಮದಲ್ಲಿಯೇ ಸೇವೆಯಲ್ಲಿ ತೊಡಗುವ ಬದಲು, ಬೇರೆಡೆಗೆ ಹೋಗಿ ತಪಸ್ಸು ಮಾಡುವುದರ ಉದ್ದೇಶವೇನು? ತನ್ನ ಅನುಯಾಯಿಗಳನ್ನು ಅಪ್ಪಿಕೊಳ್ಳಲು ಮಾತ್ರ ಇರುವ ತನ್ನ ವಾತ್ಸಲ್ಯ, ದಿವ್ಯ ಎದೆಯಿಂದ ನನ್ನನ್ನು ಅಪ್ಪಿಕೊಂಡರೆ ಒಳ್ಳೆಯದು. ಅವನು ಒಂದು ದಿನ ನನ್ನನ್ನು ನೋಡಿ “ನೀನು ನನಗೆ ಅಗತ್ಯವಿಲ್ಲ” ಎಂದು ಸತ್ಯವಾಗಿ ಹೇಳಿದರೆ ಅದು ಇನ್ನೂ ಉತ್ತಮವಾಗಿರುತ್ತದೆ.
ಹತ್ತನೇ ಪಾಸುರಂ. ಈ ದಶಕವನ್ನು ಕಲಿತವರು ತನ್ನಂತಲ್ಲದೇ ಸುಖವನ್ನು ಮಾತ್ರ ಅನುಭವಿಸುತ್ತಾರೆ ಎಂದು ಹೇಳಿ ಪಧಿಗವನ್ನು ಪೂರ್ಣಗೊಳಿಸುತ್ತಾಳೆ.
ಅಲ್ಲಲ್ ವಿಳೈತ್ತ ಪೆರುಮಾನೈ ಆಯರ್ ಪಾಡಿಕ್ಕು ಅಣಿ ವಿಳಕ್ಕೈ
ವಿಲ್ಲಿಪುದುವೈ ನಗರ್ ನಂಬಿ ವಿಟ್ಟುಶಿತ್ತನ್ ವಿಯನ್ ಕೋದೈ
ವಿಲ್ಲೈ ತೊಲೈತ್ತ ಪುರುವತ್ತಾಳ್ ವೇಟ್ಕೈ ಉಟ್ರು ಮಿಗ ವಿರುಮ್ಬುಂ
ಶೊಲ್ಲೈ ತುದಿಕ್ಕವಲ್ಲಾರ್ಗಳ್ ತುನ್ಬಂ ಕಡಲುಳ್ ತುವಳಾರೇ ಆಂಡಾಳ್ ವಿಸ್ಮಯದ ಬಾಗಿದ ಬಿಲ್ಲಿನಂತಹ ಕಣ್ಣಿನ ಹುಬ್ಬುಗಳನ್ನು ಹೊಂದಿದ್ದು (ಅದರ ಸೌಂದರ್ಯ ಮತ್ತು ಬಾಗಿದ ನೋಟದಲ್ಲಿ), ಅದ್ಭುತ ಗುಣಗಳನ್ನು ಹೊಂದಿದ್ದಾಳೆ ಮತ್ತು ಅವಳು ಶ್ರೀವಿಲ್ಲಿಪುತ್ತೂರಿನ ನಾಯಕರಾದ ಪೆರಿಯಾಳ್ವಾರ್ ಅವರ ದೈವೀಕ ಮಗಳು. ಶ್ರೀಗೋಕುಲದಲ್ಲಿ ಅನೇಕ ಕಿಡಿಗೇಡಿತನಗಳನ್ನು ಮಾಡಿ ಪ್ರಸಿದ್ಧಿ ಪಡೆದಿರುವ ಮತ್ತು ಶ್ರೀಗೋಕುಲದ ಮಂಗಳಕರವಾದ ದೀಪದಂತಿರುವ ಕಣ್ಣನ ಮೇಲೆ ಅಪರಿಮಿತ ಪ್ರೀತಿಯಿಂದ ಕರುಣಾಮಯವಾಗಿ ಅವಳು ಸಂಕಲ್ಪಿಸಿದ ಈ ಪಾಸುರಂಗಳನ್ನು ಹಾಡುವ ಸಾಮರ್ಥ್ಯವುಳ್ಳವರು ಈ ಸಂಸಾರ ಸಾಗರದಲ್ಲಿ ದುಃಖಿತರಾಗಿರುವುದಿಲ್ಲ.
ಅಡಿಯೇನ್ ಯತಿರಾಜ ರಾಮಾನುಜ ದಾಸನ್
ಮೂಲ: https://divyaprabandham.koyil.org/index.php/2020/05/nachchiyar-thirumozhi-13-simple/
ಸಂಗ್ರಹಣಾ ಸ್ಥಾನ https://divyaprabandham.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org